ಹೊಂಡಾದ CB350 ಬೈಕ್‌ನ ಮೂರು ಡಿಸೈನ್‌ಗಳು ಬೈಕ್ ಪ್ರಿಯರನ್ನ ಹೆಚ್ಚು ಆಕರ್ಷಿತ್ತಿವೆ. ಜೊತೆಗೆ ಬೈಕ್ ಮೇಲೆ ಕ್ರೇಜ್ ಇರೋರು ಕೂಡ ಹೆಚ್ಚು ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.

H'ness CB350, CB350, ಮತ್ತು CB350RS! ಜನಪ್ರಿಯ ಹೊಂಡಾದ ಟ್ರೆಂಡಿಂಗ್‌ನಲ್ಲಿ ಇರುವ ಬೈಕ್‌ಗಳು. ಇವು ನೋಡಲು ಒಂದೇ ರೀತಿ ಕಾಣಿಸಬಹುದು ಆದರೆ ವಿನ್ಯಾಸ, ಮೈಲಜ್, ಫೀಚರ್ಸ್‌, ಸ್ಟೈಲ್ ತುಂಬಾನೇ ಭಿನ್ನವಾಗಿದೆ. ನೀವು ಏನಾದರೂ ಬೈಕ್ ಖರೀದಿಸಲು ಯೋಚಿಸುತ್ತಿದ್ದರೆ.. ಈ ಮೂರು ಬೈಕ್‌ಗಳಲ್ಲಿ ನಿಮಗೆ ಯಾವುದು ಬೆಸ್ಟ್ ಅನ್ನೋ ಮಾಹಿತಿ ಈ ಸ್ಟೋರಿಯಲ್ಲಿ ಸಿಗಲಿದೆ.

H'ness CB350

  • ಹೆಚ್ಚು ಕ್ಲಾಸಿಕ್ ಮತ್ತು ರೆಟ್ರೊ-ಲುಕಿಂಗ್ ಹೊಂದಿದೆ
  • ಹಳೆಯ ಶಾಲಾ ರೋಡ್‌ಸ್ಟರ್ ಬೈಕ್‌ಗಳಿಂದ ಇನ್‌ಸ್ಫೈರಿಂಗ್
  • ದುಂಡಗಿನ ಹೆಡ್‌ಲ್ಯಾಂಪ್, ಕ್ರೋಮ್ ಅಂಶಗಳು
  • ಹಳೆ ಮಾದರಿಯ ಬೈಕ್ ಡಿಸೈನ್, ಕ್ಲಾಸಿಕ್ ಆಗಿದೆ
  • ಆರಾಮಾದಾಯ ಪ್ರಯಾಣಕ್ಕೆ ಈ ಬೈಕ್ ಅನುಕೂಲ

ಇನ್ನು ಇದು ಯಾರಿಗೆಲ್ಲ ಅನುಕೂಲ ಅಂತಾ ನೋಡೋದಾದ್ರೆ.. ನಗರದಲ್ಲಿರೋ ನಿವಾಸಿಗಳಿಗೆ ಹೆಚ್ಚು ಅನುಕೂಲ. ವೀಕೆಂಡ್‌ನಲ್ಲಿ ಸುತ್ತಾಡೋಕೆ ಹೋಗ್ತೀವಿ ಅನ್ನೋರಿಗೆ ಇದು ಹೇಳಿ ಮಾಡಿಸಿದ ಬೈಕ್. ಆರಾಮದಾಯಕ ಪ್ರಯಾಣ ನಿಮ್ಮದಾಗಿರಲಿದೆ.

CB350

  • ಕ್ಲಾಸಿಕ್ ಮತ್ತು ಮಾಡರ್ನ್‌ ನಡುವೆ ಬ್ಯಾಲೆನ್ಸಿಂಗ್ ಆಗಿದೆ
  • ಹೊಂಡಾದ ಕ್ಲಾಸಿಕ್ ರೋಡ್‌ಸ್ಟರ್ ಪರಿಕಲ್ಪನೆ ಇದರಲ್ಲಿದೆ
  • ರೆಟ್ರೊ ವಿನ್ಯಾಸ ಮತ್ತು ಹೆಚ್ಚು ಪ್ರೀಮಿಯಂ ಬೈಕ್
  • ವಿನ್ಯಾಸವು ತುಂಬಾ ರೆಟ್ರೊ ಲುಕ್ ಬಯಸೋರಿಗೆ ಬೆಸ್ಟ್

CB350RS ಯಾರಿಗೆ?

  • ಅತ್ಯಂತ ವಿಶಿಷ್ಟವಾಗಿ ವಿನ್ಯಾಸ
  • ಸ್ಕ್ರ್ಯಾಂಬ್ಲರ್-ಪ್ರೇರಿತ ಶೈಲಿ
  • ಕಪ್ಪು-ಬಣ್ಣದ ಅಂಶಗಳು
  • ವಿಭಿನ್ನ ಸೀಟ್ ವಿನ್ಯಾಸ
  • ಸ್ಪೋರ್ಟಿಯರ್ ಬಾಡಿವರ್ಕ್

CB350RS ಇದು ಉಳಿದ ಎರಡು ಮಾಡೆಲ್‌ಗಿಂತ ತುಂಬಾನೇ ಭಿನ್ನ. ನೀವು ರೆಟ್ರೊ ಬೈಕ್‌ಗಳನ್ನು ಆನಂದಿಸುತ್ತಿದ್ದರೆ.. ಸ್ವಲ್ಪ ಹೆಚ್ಚು ಸ್ಪೋರ್ಟಿ ಮತ್ತು ಕ್ಯಾಶುಯಲ್ ವಿನ್ಯಾಸ ಬಯಸಿದರೆ CB350RS ಉತ್ತಮ ಆಯ್ಕೆ ಆಗಿದೆ.

ಮೂರು ಬೈಕ್‌ಗಳನ್ನ ಹೋಲಿಸಿ ನೋಡೋದಾದರೆ.. 348cc ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಒಂದೇ ಆಗಿದೆ. ಆದರೆ ಅವುಗಳ ಶಕ್ತಿ, ಟಾರ್ಕ್, ವೈಶಿಷ್ಟ್ಯಗಳು ಮತ್ತು ಟ್ಯೂನಿಂಗ್ ಬದಲಾಗಬಹುದು. ಹೋಂಡಾ ಎಂಜಿನ್ ಆಧರಿಸಿ ಬೈಕ್‌ಗಳನ್ನು ಡಿಸೈನ್ ಮಾಡಿಲ್ಲ. ಒಂದೇ ವಿಭಾಗದಲ್ಲಿ ವಿಭಿನ್ನ ಶೈಲಿಗಳನ್ನು ನೀಡುವ ಮೂಲಕ ಕಂಪನಿಯು ಗ್ರಾಹಕರ ಆದ್ಯತೆಗಳನ್ನು ಪೂರೈಸಲು ಪ್ರಯತ್ನಿಸಿದೆ.

ಸದ್ಯ ಹೊಂಡಾದ ಈ ಜನಪ್ರಿಯ ಸಿಬಿ350 ಸರಣಿಯ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿವೆ. ಈ ಸರಣಿಯಲ್ಲಿ ಸಿಬಿ350, ಸಿಬಿ350ಆರ್‌ಎಸ್ ಹಾಗೂ ಸಿಬಿ350ಸಿ ಎಂಬ ಮೂರು ಪ್ರಮುಖ ಮಾದರಿಗಳು ಗ್ರಾಹಕರಿಗೆ ಲಭ್ಯವಿವೆ. ಇವುಗಳ ಬೆಲೆಯ ವಿಚಾರಕ್ಕೆ ಬಂದರೆ.. ಸಿಬಿ350 ಸ್ಟ್ಯಾಂಡರ್ಡ್ ಮಾದರಿಯ ಆರಂಭಿಕ ಬೆಲೆಯು 1.95 ಲಕ್ಷ ರೂಪಾಯಿಗಳಿಂದ ಶುರುವಾಗುತ್ತದೆ. ಈ ಸರಣಿಯ ಅತ್ಯುನ್ನತ ಮಾದರಿಯಾದ ಸಿಬಿ350ಸಿ ಸ್ಪೆಷಲ್ ಎಡಿಷನ್ ಬೈಕ್‌ನ ಬೆಲೆ 2.05 ಲಕ್ಷ ರೂಪಾಯಿವರೆಗೆ ಇರುತ್ತದೆ. ಪ್ರೀಮಿಯಂ ಲುಕ್, ಬಲಿಷ್ಠ ಕಾರ್ಯಕ್ಷಮತೆ ಮತ್ತು ಕ್ಲಾಸಿಕ್ ವಿನ್ಯಾಸವನ್ನು ಬಯಸುವ ಯುವ ರೈಡರ್‌ಗಳಿಗೆ ಈ ಬೆಲೆಯ ಶ್ರೇಣಿಯಲ್ಲಿ ಈ ಬೈಕ್‌ಗಳು ಅತ್ಯುತ್ತಮ ಹಾಗೂ ಮೌಲ್ಯಯುತ ಆಯ್ಕೆಯಾಗಿ ಹೊರಹೊಮ್ಮಿವೆ.