LIVE NOW
Published : Jan 26, 2026, 07:41 AM ISTUpdated : Jan 26, 2026, 10:57 PM IST

State News Live: ಜೆಡಿಎಸ್ ನವರಿಗೆ ಒಳ್ಳೆಯಕಾಲ ಎಂದೂ ಬರಲ್ಲ, ಅವರಿಗೆ ಇದು ಸರ್ವೈವಲ್ ಕಾಲ - ಸಚಿವ ಬೋಸರಾಜು ವ್ಯಂಗ್ಯ

ಸಾರಾಂಶ

ಬೆಂಗಳೂರು (ಜ.26): ಸುವರ್ಣನ್ಯೂಸ್‌-ಕನ್ನಡಪ್ರಭ ಅಸಮಾನ್ಯ ಕನ್ನಡಿಗ 'ಪುಸ್ತಕ ಮನೆ' ಅಂಕೇಗೌಡ ಸೇರಿ ರಾಜ್ಯದ 9 ಮಂದಿಗೆ ಪದ್ಮ ಪ್ರಶಸ್ತಿ ಘೋಷಣೆಯಾಗಿದೆ. ನವದೆಹಲಿ: ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಭಾನುವಾರ ಘೋಷಿಸಿದ್ದು, ಕರ್ನಾಟಕದ 9 ಸಾಧಕರು ಭಾಜನರಾಗಿದ್ದಾರೆ. ಶತಾವಧಾನಿ ಗಣೇಶ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. ಉಳಿದಂತೆ ಅಂಕೇಗೌಡ, ಅರ್ಮಿದಾ ಫರ್ನಾಂಡೀಸ್, ಪ್ರಭಾಕರ ಕೋರೆ, ಸುಶೀಲಮ್ಮ, ಶಶಿ ಶೇಖರ ವೆಂಪಾಟಿ, ಶುಭಾ ವೆಂಕಟೇಶ ಅಯ್ಯಂಗಾರ್, ಸುರೇಶ ಹನಗವಾಡಿ ಹಾಗೂ ಟಿ.ಟಿ.ಜಗನ್ನಾಥ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. ದೇಶದ ಒಟ್ಟು 131 ಸಾಧಕರಿಗೆ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

10:57 PM (IST) Jan 26

ಜೆಡಿಎಸ್ ನವರಿಗೆ ಒಳ್ಳೆಯಕಾಲ ಎಂದೂ ಬರಲ್ಲ, ಅವರಿಗೆ ಇದು ಸರ್ವೈವಲ್ ಕಾಲ - ಸಚಿವ ಬೋಸರಾಜು ವ್ಯಂಗ್ಯ

ಕೊಡಗಿನಲ್ಲಿ ಮಾತನಾಡಿದ ಸಚಿವ ಎನ್.ಎಸ್. ಬೋಸರಾಜು, ಜೆಡಿಎಸ್‌ನವರಿಗೆ ಎಂದಿಗೂ ಒಳ್ಳೆಯ ಕಾಲ ಬರುವುದಿಲ್ಲ ಮತ್ತು ಅವರ ನಾಟಕ ಎಲ್ಲರಿಗೂ ತಿಳಿದಿದೆ ಎಂದು ಟೀಕಿಸಿದರು. ಅಲ್ಲದೆ, ರಾಷ್ಟ್ರಗೀತೆಗೆ ಅಗೌರವ ತೋರಿದ ರಾಜ್ಯಪಾಲರು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

Read Full Story

10:29 PM (IST) Jan 26

ಧರ್ಮಸ್ಥಳ ಪಾರ್ಕ್‌ಲ್ಲಿ ಬಿರಿಯಾನಿ ಕಬಾಬ್ ತಿಂದಿದ್ದೇನೆ, ಡಾಗ್ ಸತೀಶ್ ಹೇಳಿಕೆ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ

ಧರ್ಮಸ್ಥಳ ಪಾರ್ಕ್‌ಲ್ಲಿ ಬಿರಿಯಾನಿ ಕಬಾಬ್ ತಿಂದಿದ್ದೇನೆ, ದೇವ್ರ ದಿಂಡ್ರೂ ನಾನು ನಂಬಲ್ಲ ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ ಡಾಗ್ ಸತೀಶ್ ಹೇಳಿದ್ದಾರೆ. ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ ಎಂಬ ಆಕ್ರೋಶಗಳು ವ್ಯಕ್ತವಾಗಿದೆ.

 

Read Full Story

09:21 PM (IST) Jan 26

ಚಿನ್ನದ ದರ ಗಗನಮುಖಿ; ಭೀಮಾತೀರದಲ್ಲಿ ಗನ್ ತೋರಿಸಿ ಚಿನ್ನದಂಗಡಿ ಲೂಟಿ, ಬೆಚ್ಚಿ ಬೀಳಿಸಿದ ಸಿಸಿಟಿವಿ ದೃಶ್ಯ!

ವಿಜಯಪುರ ಜಿಲ್ಲೆಯ ಹಲಸಂಗಿ ಗ್ರಾಮದಲ್ಲಿ, ಮುಸುಕುಧಾರಿ ದರೋಡೆಕೋರರು ನಡುಹಗಲೇ ಚಿನ್ನದಂಗಡಿಗೆ ನುಗ್ಗಿ ಗನ್ ಪಾಯಿಂಟ್‌ನಲ್ಲಿ ದರೋಡೆ ನಡೆಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿ, ವಿಡಿಯೋ ಮಾಡುತ್ತಿದ್ದ ಯುವಕನ ಕಾಲಿಗೆ ಗುಂಡಿಕ್ಕಿ, 205 ಗ್ರಾಂ ಚಿನ್ನ ಹಾಗೂ 1 ಕೆ.ಜಿ ಬೆಳ್ಳಿ ದೋಚಿ ಪರಾರಿಯಾಗಿದ್ದಾರೆ. 

Read Full Story

08:58 PM (IST) Jan 26

ಬಂಗಾರದ ನಿಧಿ ಕೊಟ್ಟ ಲಕ್ಕುಂಡಿ ರಿತ್ತಿ ಕುಟುಂಬಕ್ಕೆ ಕೊಟ್ರಲ್ಲಾ ಚಿಪ್ಪು; 11 ತಿಂಗಳ ಗುತ್ತಿಗೆ ನೌಕರಿ ಕೊಟ್ಟ ಸರ್ಕಾರ!

ಲಕ್ಕುಂಡಿಯಲ್ಲಿ ಮನೆ ಅಡಿಪಾಯ ತೆಗೆಯುವಾಗ ಸಿಕ್ಕ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಸರ್ಕಾರ ಬಹುಮಾನ ಘೋಷಿಸಿದೆ. ಆದರೆ, ನಿವೇಶನ, ಧನಸಹಾಯದ ಜೊತೆಗೆ ಕೇವಲ ಗುತ್ತಿಗೆ ಆಧಾರಿತ ನೌಕರಿ ನೀಡಿರುವುದು ಕುಟುಂಬಕ್ಕೆ ತೀವ್ರ ನಿರಾಸೆ ಮೂಡಿಸಿದೆ.
Read Full Story

08:19 PM (IST) Jan 26

ಗೋಕರ್ಣ ಕಡಲ ತೀರದಲ್ಲಿ ದುರಂತ - ಸಮುದ್ರದ ಸುಳಿಗೆ ಸಿಲುಕಿ ಕೊಪ್ಪಳದ ವೈದ್ಯಕೀಯ ವಿದ್ಯಾರ್ಥಿನಿ ಸಾವು

ಗಣರಾಜ್ಯೋತ್ಸವದ ರಜೆ ಹಿನ್ನೆಲೆಯಲ್ಲಿ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ಕೊಪ್ಪಳದ ಕೆಎಂಸಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ತಂಡ ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಕೇರಳ ಮೂಲದ ವಿದ್ಯಾರ್ಥಿನಿ ಕಲ್ಯಾಣಿ (22) ನೀರಿನ ಸುಳಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.

Read Full Story

07:38 PM (IST) Jan 26

ಅಜ್ಜಿಗೆ ಕಾರು ಗುದ್ದಿ ರಾಜಕೀಯ ದರ್ಪ ತೋರಿದ ಕಾಂಗ್ರೆಸ್ ಮುಖಂಡ; ಜನರೇ ನಾಲ್ಕು ಇಕ್ಕೋವಷ್ಟರಲ್ಲಿ ಪೊಲೀಸರು ಬಂದ್ರು!

ಕೋಲಾರದಲ್ಲಿ ಕಾಂಗ್ರೆಸ್ ಮುಖಂಡ ಮುನಿರಾಜು ಅವರ ಕಾರು ವೃದ್ಧೆಯೊಬ್ಬರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಳಿಸಿದೆ. ಅಪಘಾತದ ನಂತರ, ಸಹಾಯ ಮಾಡುವ ಬದಲು ಮುಖಂಡ ಮತ್ತು ಅವರ ಬೆಂಬಲಿಗರು ಸಾರ್ವಜನಿಕರ ಮೇಲೆ ದರ್ಪ ತೋರಿದ್ದು, ಇದರಿಂದ ಕುಪಿತಗೊಂಡ ಜನರು ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ.

Read Full Story

07:24 PM (IST) Jan 26

ಕನಕಪುರದಲ್ಲಿ ಕನಕೋತ್ಸವ - ಡಿಕೆ ಬ್ರದರ್ಸ್ ಜಂಟಿ ಸುದ್ದಿಗೋಷ್ಠಿ, ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೋಕ್, ಕೇಂದ್ರ ಸಚಿವರಿಗೆ ಡಿಕೆಶಿ ಸವಾಲು

ಕನಕಪುರದಲ್ಲಿ 7ನೇ ಆವೃತ್ತಿಯ ಕನಕೋತ್ಸವಕ್ಕೆ ಡಿಕೆ ಬ್ರದರ್ಸ್ ಚಾಲನೆ ನೀಡಿದ್ದು, ಕಲೆ, ಸಂಸ್ಕೃತಿ ಹಾಗೂ ಕ್ರೀಡೆಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ, ದೆಹಲಿ ಸ್ತಬ್ಧಚಿತ್ರ ನಿರಾಕರಣೆ ಮತ್ತು ಮನರೇಗಾ ಹೆಸರು ಬದಲಾವಣೆ ವಿರುದ್ಧ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಸವಾಲು ಹಾಕಿದರು

Read Full Story

07:19 PM (IST) Jan 26

ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಬೆದರಿಕೆ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಕೇರಳದಲ್ಲಿ ಬಂಧನ!

ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಪ್ರಾಣ ಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಚಿಕ್ಕಬಳ್ಳಾಪುರ ಪೊಲೀಸರು ಕೇರಳ ಗಡಿಯಲ್ಲಿ ಬಂಧಿಸಿದ್ದಾರೆ. ಬ್ಯಾನರ್ ತೆರವುಗೊಳಿಸಿದ್ದಕ್ಕೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದ ಈ ಪ್ರಕರಣದಲ್ಲಿ 12 ದಿನ ಬಳಿಕ ಬಂಧನವಾಗಿದೆ.

Read Full Story

07:12 PM (IST) Jan 26

ನನಗೆ Amruthadhaare ಗೌತಮ್​ನಂಥ ಗಂಡ ಬೇಕು; ಪಟ್ಟು ಹಿಡಿದ ಯುವತಿ - ನಟಿ ಛಾಯಾ ಸಿಂಗ್​ ಹೇಳಿದ್ದೇನು?

ಜೀ ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆಯ ಗೌತಮ್ ಪಾತ್ರವು ಆದರ್ಶ ಪತಿಯಾಗಿ ಮಹಿಳಾ ವೀಕ್ಷಕರ ಮನಗೆದ್ದಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ, ಯುವತಿಯೊಬ್ಬಳು ಗೌತಮ್‌ನಂಥ ಪತಿ ಬೇಕು ಎಂದಾಗ, ನಟಿ ಛಾಯಾ ಸಿಂಗ್ ನೀಡಿದ ಬುದ್ಧಿವಂತಿಕೆಯ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
Read Full Story

07:10 PM (IST) Jan 26

ಸಿನಿಮಾದಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ 'ಆ ಮಂತ್ರ'ದ ಸಂದೇಶ ಸಾರಿದ ನಟ ಶಾರುಖ್ ಖಾನ್

'ಕಿಂಗ್' ಸಿನಿಮಾದಲ್ಲಿ ಬರೀ ಶಾರುಖ್-ಸುಹಾನಾ ಮಾತ್ರವಲ್ಲದೆ, ಅಭಿಷೇಕ್ ಬಚ್ಚನ್, ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ, ಅನಿಲ್ ಕಪೂರ್, ಸಂಜಯ್ ದತ್ ಮತ್ತು ಅರ್ಷದ್ ವಾರ್ಸಿ ಕಾಣಿಸಿಕೊಳ್ಳಲಿದ್ದಾರೆ. ದೇಶಭಕ್ತಿಯ ಸಂದೇಶದ ಜೊತೆಗೆ ಸಿನಿರಂಗದಲ್ಲಿ ಮತ್ತೊಂದು ದೊಡ್ಡ ಸಂಚಲನ ಮೂಡಿಸಲು ಸಿದ್ಧರಾಗಿದ್ದಾರೆ.

Read Full Story

06:49 PM (IST) Jan 26

'ಹೂವಿನ ಬಾಣದಂತೆ' ಯುವತಿ ಸ್ಯಾಂಡಲ್​ವುಡ್​ಗೆ ಎಂಟ್ರಿ- ಅದೃಷ್ಟ ಅಂದ್ರ ಇದಪ್ಪಾ! ಯಾವ ಸಿನಿಮಾ, ಯಾರ ಜೊತೆ?

ಅಪಶ್ರುತಿಯಲ್ಲಿ ಹಾಡಿ ವೈರಲ್ ಆದ ಮೈಸೂರಿನ ನಿತ್ಯಶ್ರೀ, ಇದೀಗ ಟ್ರೋಲ್‌ಗಳ ನಡುವೆಯೂ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಜೀ ಕನ್ನಡದ 'ಕಾಮಿಡಿ ಕಿಲಾಡಿಗಳು' ಶೋನಲ್ಲಿ ಅವಕಾಶ ಪಡೆದ ನಂತರ ಟೀಕೆ ಹೆಚ್ಚಾಗಿದ್ದರೂ ಈಗ ಬೆಳ್ಳಿಪರದೆಯ ಮೇಲೆ ಮಿಂಚುವ ಅವಕಾಶ ಪಡೆದುಕೊಂಡಿದ್ದಾರೆ. 

Read Full Story

06:43 PM (IST) Jan 26

ವಿಜಯಪುರ - ಗಣರಾಜ್ಯೋತ್ಸ ವ ದಿನದಂದೇ ಚಿನ್ನದಂಗಡಿ ಲೂಟಿ, ಸಿನಿಮೀಯ ಶೈಲಿಯಲ್ಲಿ ಕಂಟ್ರಿ ಪಿಸ್ತೂಲ್ ತೋರಿಸಿ ದರೋಡೆ!

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಗಣರಾಜ್ಯೋತ್ಸವದಂದೇ, ಬುಲೆಟ್ ಬೈಕ್‌ನಲ್ಲಿ ಬಂದ ಇಬ್ಬರು ದರೋಡೆಕೋರರು ಚಿನ್ನದ ಅಂಗಡಿಗೆ ನುಗ್ಗಿ ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದಾರೆ. ಈ ವೇಳೆ ಅಡ್ಡಬಂದ ಯುವಕನೊಬ್ಬನ ಕಾಲಿಗೆ ಗುಂಡು ಹಾರಿಸಿ, ಚಿನ್ನಾಭರಣಗಳೊಂದಿಗೆ ಮಹಾರಾಷ್ಟ್ರದತ್ತ ಪರಾರಿ.

Read Full Story

06:15 PM (IST) Jan 26

ರೆಸ್ಟೋರೆಂಟ್‌ಗಳ ಜೊತೆ ಡೀಲ್‌ - ಬಂಬಲ್ ಟಿಂಡರ್‌ ಅಲ್ಲಿ ಸಿಕ್ಕ ಹುಡುಗಿರ ಕರ್ಕೊಂಡು ಹೋಟೆಲ್‌ಗೆ ಹೋದ್ರೆ ಗೋವಿಂದ

ದೇಶದ ಪ್ರಮುಖ ಮಹಾನಗರಗಳಲ್ಲಿ ಡೇಟಿಂಗ್ ಆಪ್‌ ಹೆಸರಿನಲ್ಲಿ ಹೊಸದೊಂದು ಸ್ಕ್ಯಾಮ್ ಶುರುವಾಗಿದೆ. ರೆಸ್ಟೋರೆಂಟ್ ಡೇಟಿಂಗ್ ಹೆಸರಿನಲ್ಲಿ ಈ ಡೇಟಿಂಗ್ ಆಪ್‌ನಲ್ಲಿ ಪರಿಚಿತರಾದ ಹೆಣ್ಣು ಮಕ್ಕಳನ್ನು ನಂಬಿ ಬರುವ ಹುಡುಗರು ತಮಗೆ ತಿಳಿಯದಂತೆ ಮೋಸದ ಜಾಲವೊಂದಕ್ಕೆ ಬಿದ್ದು ಜೇಬು ಖಾಲಿ ಮಾಡಿಕೊಳ್ಳುತ್ತಾರೆ.

Read Full Story

06:11 PM (IST) Jan 26

Amruthadhaare ಗೌತಮ್​ ಸರ್​ ಲವ್​ನಲ್ಲಿ ಬಿದ್ದ ವಠಾರದ ಬ್ಯೂಟಿ ಕ್ವೀನ್​ ಸುಷ್ಮಾ ಇವ್ರೇ ನೋಡಿ!

'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್‌ನನ್ನು ಪ್ರೀತಿಸುವ ಸುಷ್ಮಾ, ಆತನಿಂದಲೇ ಬದುಕಿನ ಪಾಠ ಕಲಿಯುತ್ತಾಳೆ. ಆದರೆ, ಭೂಮಿಕಾಳ ಕೈಯಿಂದ ಬರೆಸಿದ್ದ ಪ್ರೇಮಪತ್ರವು ಅನಿರೀಕ್ಷಿತವಾಗಿ ಗೌತಮ್ ಮತ್ತು ಭೂಮಿಕಾಳನ್ನು ಒಂದು ಮಾಡುತ್ತದೆ.  ಸುಷ್ಮಾ ಪಾತ್ರ ನಿರ್ವಹಿಸಿದ ನಟಿ ಸಹನಾ ಗೌಡ ಕುರಿತ ಮಾಹಿತಿ.

Read Full Story

05:46 PM (IST) Jan 26

Bigg Boss ಕೊಟ್ರೂ ಗಿಲ್ಲಿಯ ಕೈಸೇರಿಲ್ಲ ಕಾರು! 50 ಲಕ್ಷ ಹಣ ​ ಏನಾಯ್ತು? ಇಲ್ಲಿದೆ ಇಂಟರೆಸ್ಟಿಂಗ್​ ವಿಷ್ಯ

ದಾಖಲೆ ಮತಗಳಿಂದ ಬಿಗ್​ಬಾಸ್​ ಗೆದ್ದ ಗಿಲ್ಲಿ ನಟನಿಗೆ ಇನ್ನೂ ಬಹುಮಾನದ ಕಾರು ಮತ್ತು 50 ಲಕ್ಷ ರೂಪಾಯಿ ನಗದು ಸಿಕ್ಕಿಲ್ಲ.  ಈ ಹಿಂದೆ ಕಾರ್ತಿಕ್ ಮಹೇಶ್ ಅವರು ಈ  ಬಗ್ಗೆ ಮಾತನಾಡಿದ್ದರು. ಗಿಲ್ಲಿಗೆ ಇವೆಲ್ಲಾ ಸಿಗಲು ಇನ್ನೆಷ್ಟು ದಿನ ಬೇಕು? 

Read Full Story

05:36 PM (IST) Jan 26

ಬೆಂಗಳೂರು ರೌಡಿಶೀಟರ್ ಶಬ್ಬೀರ್ ಹತ್ಯೆ - ಹವಾ ಮೆಂಟೇನ್, ಹಫ್ತಾ ವಸೂಲಿ ವಿಚಾರಕ್ಕೆ ಹೊಡೆದು ಹಾಕಿದ 11 ಜನರ ಗ್ಯಾಂಗ್!

ಬೆಂಗಳೂರಿನ ಬಂಡೆಪಾಳ್ಯದಲ್ಲಿ ನಡೆದ ರೌಡಿಶೀಟರ್ ಶಬ್ಬೀರ್ ಕೊಲೆ ಪ್ರಕರಣವು ಹಫ್ತಾ ವಸೂಲಿ ಮತ್ತು ಜಾಗದ ವಿವಾದದಿಂದ ನಡೆದಿದೆ. ಈ ವ್ಯವಸ್ಥಿತ ಕೃತ್ಯದಲ್ಲಿ ಭಾಗಿಯಾಗಿದ್ದ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಕಠಿಣ ಕೋಕಾ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.

Read Full Story

05:30 PM (IST) Jan 26

ಆಪರೇಷನ್ ಪರಾಕ್ರಮ್ ಯೋಧನಿಗೆ ಅವಮಾನ ಪ್ರಕರಣ - ಕೊನೆಗೂ ಕ್ಷಮೆ ಕೇಳಿದ ಸಾಸ್ತಾನ ಟೋಲ್ ಗೇಟ್‌ ಸಿಬ್ಬಂದಿ

ಗಣರಾಜ್ಯೋತ್ಸವದಂದು ಉಡುಪಿಯ ಸಾಸ್ತಾನ ಟೋಲ್‌ನಲ್ಲಿ ವೀಲ್ ಚೇರ್ ಅವಲಂಬಿತ ನಿವೃತ್ತ ಯೋಧನಿಗೆ ಸಿಬ್ಬಂದಿ ಅವಮಾನಿಸಿದ್ದಾರೆ. ಟೋಲ್ ವಿನಾಯಿತಿ ದಾಖಲೆಗಳಿದ್ದರೂ ಕಿರಿಕ್ ಮಾಡಿದ ಘಟನೆಯ ವಿಡಿಯೋ ವೈರಲ್ ಆದ ಬಳಿಕ, ಟೋಲ್ ಸಿಬ್ಬಂದಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
Read Full Story

05:02 PM (IST) Jan 26

Money Earning Ideas - AI ಬಳಸಿ ಸುಲಭವಾಗಿ ಸಂಪಾದನೆ ಮಾಡಲು ಟಾಪ್ 5 ಮಾರ್ಗಗಳು

Easy Ways to Make Money: ದುಡ್ಡೇ ದೊಡ್ಡಪ್ಪ ಎನ್ನೋದು ಎಲ್ಲ ಕಾಲಕ್ಕೂ ಸಲ್ಲುವ ಮಾತು. ಈ ಕಾಲದಲ್ಲಿ ಹಾರ್ಡ್ ವರ್ಕ್ ಅಲ್ಲ, ಸ್ಮಾರ್ಟ್ ವರ್ಕ್ ಮಾಡಿದ್ರೆನೇ ಹೆಚ್ಚು ಹಣ ಗಳಿಸಬಹುದು. ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು AI ಅನ್ನು ಮಾಹಿತಿ ಸಂಗ್ರಹಕ್ಕೆ ಮಾತ್ರವಲ್ಲದೆ ಹಣ ಗಳಿಸಲೂ ಬಳಸಬಹುದು.  

Read Full Story

04:59 PM (IST) Jan 26

ಪೌರಾಯುಕ್ತೆಗೆ ದಮ್ಕಿ ಹಾಕಿದ್ದ ಕೈ ಮುಖಂಡ ಎಸ್ಕೇಪ್ - ಖಾಕಿ ಜೊತೆ ಕಣ್ಣಾಮುಚ್ಚಾಲೆ; ಸಿಸಿಟಿವಿ ಕೈಕೊಟ್ಟಿದ್ದೇ ವರ!

ಮಂಗಳೂರು ಪೌರಾಯುಕ್ತೆಗೆ ಬೆದರಿಕೆ ಹಾಕಿದ ಆರೋಪದ ಮೇಲೆ ತಲೆಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಮಂಗಳೂರು ರೈಲ್ವೇ ನಿಲ್ದಾಣದ ಬಳಿ ತನ್ನ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ. ನಿಲ್ದಾಣದೊಳಗಿನ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸದ ಕಾರಣ, ಆತ ಎಲ್ಲಿಗೆ ಹೋದನೆಂಬುದು ನಿಗೂಢವಾಗಿದೆ.

Read Full Story

04:58 PM (IST) Jan 26

ಸಿಎಂ ಕುರ್ಚಿಯಲ್ಲಿ 'ಟಗರು' ಕೂತಿದೆ - ಹೆಚ್.ಡಿ. ಕುಮಾರಸ್ವಾಮಿ ಹಗಲುಗನಸು ಕಾಣಬೇಡಿ; ಸಚಿವ ಜಮೀರ್ ಟಾಂಗ್

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ 2028ರ ಸಿಎಂ ಕನಸನ್ನು ಸಚಿವ ಜಮೀರ್ ಅಹ್ಮದ್ ಖಾನ್ 'ಹಗಲುಗನಸು' ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಜೊತೆಗಿನ ಮೈತ್ರಿಯಿಂದ ಜೆಡಿಎಸ್ ತನ್ನ ಶಕ್ತಿ ಕಳೆದುಕೊಂಡಿದೆ ಹಾಗೂ 2028ರವರೆಗೂ ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯ ಅವರೇ ಇರುತ್ತಾರೆ ಎಂದರು.

Read Full Story

04:47 PM (IST) Jan 26

ತಮ್ಮ ತಾಳಕ್ಕೆ ತಕ್ಕಂತೆ ಗಂಡನನ್ನು ಕುಣಿಸಿದ Vaishnavi Gowda - ನಟಿಯ ಹೊಟ್ಟೆ ಮೇಲೆ ನೆಟ್ಟಿಗರ ಕಣ್ಣು!

'ಅಗ್ನಿಸಾಕ್ಷಿ' ಖ್ಯಾತಿಯ ನಟಿ ವೈಷ್ಣವಿ ಗೌಡ, ಪತಿ ಅನುಕೂಲ್‌ ಮಿಶ್ರಾ ಜೊತೆಗಿನ ದಾಂಪತ್ಯ ಜೀವನವನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗೆ ಪತಿಯೊಂದಿಗೆ ಡ್ಯಾನ್ಸ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ.
Read Full Story

04:45 PM (IST) Jan 26

ಅಂದು ಗಿಲ್ಲಿ ನಟ ಮಾಡಿದ ಕಲಸಕ್ಕೆ 'ನೀ ಯಾವ ಸೀಮೆ ನಟಿʼ ಅಂತ ಡೈರೆಕ್ಟರ್‌ ಬೈದ್ರು - ಡಾ ರಾಜ್‌ ಮೊಮ್ಮಗಳು ಧನ್ಯಾ

Bigg Boss Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ವಿಜೇತ ಗಿಲ್ಲಿ ನಟ ಅವರ ಕ್ರೇಜ್‌ ಬೇರೆಯದೇ ಮಟ್ಟದಲ್ಲಿದೆ. ಹೀಗಿರುವಾಗ ಡಾ ರಾಜ್‌ಕುಮಾರ್‌ ಮೊಮ್ಮಗಳು, ರಾಮ್‌ ಕುಮಾರ್‌ ಮಗಳು ಧನ್ಯಾ ಅವರು ಗಿಲ್ಲಿಯಿಂದ ಬೈಸಿಕೊಂಡ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

 

Read Full Story

04:34 PM (IST) Jan 26

ತಡರಾತ್ರಿ ಐಸ್‌ಕ್ರೀಮ್ ಪಾರ್ಲರ್ ಕಿರಿಕ್ - 'ರಾತ್ರಿಯಾದ್ರೆ ಪೊಲೀಸರೇಕೆ ಹೀಗೆ ವರ್ತಿಸುತ್ತಾರೆ..?'; ಅಸಲಿಗೆ ಅಲ್ಲಿ ನಡೆದಿದ್ದೇನು?

ಬೆಂಗಳೂರಿನ ಆರ್.ಟಿ. ನಗರದಲ್ಲಿ ತಡರಾತ್ರಿ ಐಸ್‌ಕ್ರೀಮ್ ಪಾರ್ಲರ್ ತೆರೆದಿದ್ದ ವಿಚಾರವಾಗಿ ಪೊಲೀಸರು ಮತ್ತು ಮ್ಯಾನೇಜರ್ ನಡುವೆ ವಾಗ್ವಾದ ನಡೆದಿದೆ. ರಾಜಕಾರಣಿಗಳ ಹೆಸರು ಹೇಳಿ ಅವಾಜ್ ಹಾಕಿದ ಮ್ಯಾನೇಜರ್‌ನನ್ನು ಠಾಣೆಗೆ ಕರೆದೊಯ್ದ ಪೊಲೀಸರು, ನಂತರ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.
Read Full Story

03:46 PM (IST) Jan 26

ತಾಯಿಗೆ ಮಾಂಗಲ್ಯ ಸರ, ಅನಾಥಾಶ್ರಮಕ್ಕೆ ದಾನ, ಯಶ್‌ ಮಾತನಾಡಿದ್ದು; ಗಿಲ್ಲಿ ನಟನ ಕುರಿತ ಸುದ್ದಿಗಳ ಸತ್ಯ ಬಯಲು!

Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್‌ 12 ಮನೆಯಿಂದ ಹೊರಬಂದ ಮೇಲೆ ಎಲ್ಲ ಸ್ಪರ್ಧಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುವುದು ಸಹಜ. ಆದರೆ 'ಗಿಲ್ಲಿ' ಕ್ರೇಜ್‌ ಬೇರೆ ಲೆವೆಲ್‌ ಆಗಿರೋದಿಕ್ಕೆ, ಅವರ ಬಗ್ಗೆ ಒಂದಿಲ್ಲೊಂದು ಪೋಸ್ಟ್‌ಗಳು ಕಾಣಸಿಗುತ್ತಿವೆ.

 

Read Full Story

03:40 PM (IST) Jan 26

ವರದಕ್ಷಿಣೆ ಭೂತಕ್ಕೆ ಬಲಿಯಾದ ವಿವಾಹಿತೆ; ಮದುವೆಯಾದ ಎರಡೇ ವರ್ಷಕ್ಕೆ ಮಸಣ ಸೇರಿದ ಮಗಳು ಕೀರ್ತಿ!

ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನವವಿವಾಹಿತೆ ಕೀರ್ತಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಪತಿ ಗುರುಪ್ರಸಾದ್ ಮತ್ತು ಆತನ ಕುಟುಂಬದವರು ಮನೆ ಕಟ್ಟಲು ಹೆಚ್ಚುವರಿ ಹಣಕ್ಕಾಗಿ ಪೀಡಿಸುತ್ತಿದ್ದರು ಎಂದು ಮೃತಳ ಪೋಷಕರು ಆರೋಪಿಸಿದ್ದು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Read Full Story

03:13 PM (IST) Jan 26

ಯಪ್ಪೋ.. ಇವ್ರೆಂಥಾ ಡೇಂಜರ್ ಅಜ್ಜಿಯರು! Lakshmi Nivasa Serial ವಿಲನ್‌ ಇವ್ರ ಕಣ್ಣು ಮುಂದೆ ಬಂದ್ರೆ ಅಧೋಗತಿ!

Lakshmi Nivasa Serial Episode: ಧಾರಾವಾಹಿಗಳನ್ನು ನೋಡುವ ವರ್ಗವೇ ಬೇರೆ ಇದೆ. ಇತ್ತೀಚೆಗೆ ಲಕ್ಷ್ಮೀ ನಿವಾಸ ಧಾರಾವಾಹಿ ನೋಡಿದ ಇಬ್ಬರು ಅಜ್ಜಿಯಂದಿರು ವಿಲನ್‌ ಪಾತ್ರಧಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದನ್ನು ನೀವು ವಿಡಿಯೋ ನೋಡಿ ಆನಂದಿಸಬೇಕು. 

Read Full Story

02:43 PM (IST) Jan 26

ಫಲಪುಷ್ಪ ಪ್ರದರ್ಶನ ಟಿಕೆಟ್‌ನಿಂದಲೇ ಈ ವರ್ಷ 2.50 ಕೋಟಿ ಆದಾಯ?

ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾದ 'ತೇಜಸ್ವಿ ವಿಸ್ಮಯ' ಫಲಪುಷ್ಪ ಪ್ರದರ್ಶನವು ಐತಿಹಾಸಿಕ ಟಿಕೆಟ್ ಸಂಗ್ರಹದತ್ತ ಸಾಗುತ್ತಿದೆ. ಈ ಬಾರಿಯ ಪ್ರದರ್ಶನವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು 2.50 ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸುವ ನಿರೀಕ್ಷೆಯಲ್ಲಿದೆ.

 

Read Full Story

02:30 PM (IST) Jan 26

ಬೆಂಗಳೂರಲ್ಲಿ ಮನೆ ಕಟ್ಟಿಸಿ, ಮದುವೆಯ ಸಿದ್ಧತೆಯಲ್ಲಿದ್ದ ಪ್ರಶಾಂತ್, ಕ್ರಿಕೆಟ್ ಕಿರಿಕ್‌ನಲ್ಲಿ ಮಸಣ ಸೇರಿದ!

ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯದ ನಂತರ ನಡೆದ ಸಣ್ಣ ಜಗಳವೊಂದು ಯುವಕನ ಕೊಲೆಯಲ್ಲಿ ಅಂತ್ಯಗೊಂಡಿದೆ. ಸಿಗರೇಟ್ ಲೈಟರ್ ವಿಚಾರಕ್ಕೆ ಶುರುವಾದ ಗಲಾಟೆಯಲ್ಲಿ, ಆರೋಪಿಯು ಕಾರಿಗೆ ನೇತಾಡುತ್ತಿದ್ದ ಯುವಕನನ್ನು ಮರಕ್ಕೆ ಗುದ್ದಿ ಸಾಯಿಸಿದ್ದಾನೆ.

Read Full Story

02:19 PM (IST) Jan 26

Brahmagantu Serial; ಇದು ಕನಸಲ್ಲ, ಸತ್ಯ; ದೀಪಾ-ಚಿರಾಗ್‌ ಬಾಳಲ್ಲಿ ಅನುರಾಗ; ಪ್ರೇಕ್ಷಕರಿಗೆ ಬೇಸರ!

Brahmagantu Serial Episode: ಬ್ರಹ್ಮಗಂಟು ಧಾರಾವಾಹಿಯಲ್ಲಿ ರೂಪಾಳನ್ನು ಪ್ರೀತಿಸಿದ್ದ ಚಿರಾಗ್‌, ಅವಳನ್ನೇ ಮದುವೆ ಆಗಬೇಕು ಎಂದುಕೊಂಡಿದ್ದನು. ಆದರೆ ರೂಪಾ ಮದುವೆ ಮಂಟಪ ಬಿಟ್ಟು ಓಡಿದ್ದಕ್ಕೆ, ದೀಪಾಳನ್ನು ಅವನು ಮದುವೆ ಆಗುವ ಹಾಗೆ ಆಯ್ತು.

 

Read Full Story

02:19 PM (IST) Jan 26

ಪಶ್ಚಿಮ ಘಟ್ಟದ 7 ಜಿಲ್ಲೆಗಳ ಜನರ ಎದೆ ನಡುಗಿಸಿದ ಸತ್ಯ - ಧಾರವಾಡ ಐಐಟಿಯ ಸಂಶೋಧನಾ ವರದಿ

ಧಾರವಾಡ ಐಐಟಿ ಪ್ರಾಧ್ಯಾಪಕರ ಅಧ್ಯಯನದ ಪ್ರಕಾರ, ಪಶ್ಚಿಮ ಘಟ್ಟಗಳಲ್ಲಿ ಕಳೆದ ಎರಡು ದಶಕಗಳಲ್ಲಿ 1200ಕ್ಕೂ ಹೆಚ್ಚು ಭೂಕುಸಿತಗಳಾಗಿದ್ದು, ಭವಿಷ್ಯದಲ್ಲಿ ಶೇ. 60.7ರಷ್ಟು ಭೂಕುಸಿತದ ಅಪಾಯವಿದೆ. 

Read Full Story

01:51 PM (IST) Jan 26

ಒಂದೇ ಗ್ರಾಮದ 7 ಕೆರೆಗಳಿಗೆ ನೀರು ತುಂಬಿಸುವ 140 ಕೋಟಿಯ ಯೋಜನೆಗೆ ಸಿಕ್ತು ಚಾಲನೆ - ಅಂತರ್ಜಲಕ್ಕೆ 25 ಕೋಟಿ

ಒಂದೇ ಗ್ರಾಮದಲ್ಲಿ ₹140 ಕೋಟಿ ವೆಚ್ಚದ ಕೆರೆ ತುಂಬುವ ಯೋಜನೆಗೆ ಭೇಟಿ ನೀಡಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಅಂತರ್ಜಲ ಮಟ್ಟ ಹೆಚ್ಚಿಸಲು ಬೋರ್ವೆಲ್‌ಗಳಿಗೆ ನೀರು ತುಂಬಿಸುವ ಹೊಸ ಯೋಜನೆಗೆ ₹25 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದರು

Read Full Story

01:26 PM (IST) Jan 26

₹400 ಕೋಟಿ ದರೋಡೆಗೆ ಚೋರ್ಲಾ ಘಾಟ್ ಆಯ್ಕೆ ಮಾಡಿಕೊಂಡಿದ್ಯಾಕೆ? 15-20 ಕಿಮೀ ನಡುವೆಯೇ ದಾಳಿ?

ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ದರೋಡೆ ನಡೆದಿದೆ ಎಂದು ಬಂಧಿತರು ತಿಳಿಸಿದ್ದಾರೆ. ಕರ್ನಾಟಕ-ಗೋವಾ-ಮಹಾರಾಷ್ಟ್ರ ಗಡಿಯಲ್ಲಿರುವ ಈ ದಟ್ಟ ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದಿರುವುದು ಪೊಲೀಸರ ತನಿಖೆಗೆ ದೊಡ್ಡ ಸವಾಲಾಗಿದೆ. ಸದ್ಯ, ಈ ಪ್ರಕರಣದ ತನಿಖೆ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ.
Read Full Story

01:01 PM (IST) Jan 26

ಪದ್ಮ ಪ್ರಶಸ್ತಿ ಘನತೆ ಹೆಚ್ಚಿಸಿದ ಶತಾವಧಾನಿ ಡಾ.ಆರ್ ಗಣೇಶ್‌ ಅವರಿಗೆ ನೀಡಿದ ಗೌರವ!

ಶತಾವಧಾನಿ ಡಾ. ಆರ್ ಗಣೇಶರು ಸ್ವಯಮಾಚಾರ್ಯ ಮಾರ್ಗದಲ್ಲಿ ಹತ್ತಾರು ಶಾಸ್ತ್ರ-ಕಲೆಗಳನ್ನು ಕರಗತ ಮಾಡಿಕೊಂಡ 'ಸಂಸ್ಕೃತಿಯ ಪ್ರಹರಿ'. ಕನ್ನಡದಲ್ಲಿ ಅವಧಾನಕಲೆಯನ್ನು ಪುನರುಜ್ಜೀವನಗೊಳಿಸಿದ ಇವರು, 1200ಕ್ಕೂ ಹೆಚ್ಚು ಅವಧಾನಗಳು  ಮೂಲಕ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.

Read Full Story

12:49 PM (IST) Jan 26

ಸರ್ಕಾರಿ ಶಾಲೆ ಜಾಗದಲ್ಲಿ ಶಾದಿ ಮಹಲ್ ನಿರ್ಮಾಣ ಆರೋಪ - ಸ್ಪಷ್ಟೀಕರಣಕ್ಕೆ ಬಿಜೆಪಿ ಒತ್ತಾಯ

ಸರಕಾರಿ ಪಬ್ಲಿಕ್ ಶಾಲೆಗೆ ಸೇರಿದ ಜಾಗದಲ್ಲಿ ಶಾದಿ ಮಹಲ್ ನಿರ್ಮಾಣವಾಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಶಾಲೆಯ ಜಾಗದಲ್ಲಿ ನಡೆಯುತ್ತಿರುವ ಈ ನಿರ್ಮಾಣವನ್ನು ತಕ್ಷಣವೇ ನಿಲ್ಲಿಸಿ, ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಸ್ಪಷ್ಟೀಕರಣ ನೀಡಬೇಕೆಂದು ಒತ್ತಾಯಿಸಿದ್ದಾರೆ.

Read Full Story

12:48 PM (IST) Jan 26

ಉದಯ್‌ಪುರದಲ್ಲಿ ನಡೆಯುವ ರಶ್ಮಿಕಾ ಮದುವೆಗೆ ಬೆಂಗಳೂರಿಂದ ಹೋಗ್ತಿದೆ ಈ ವಸ್ತು

ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ಫೆ.26ರಂದು ಉದಯ್‌ಪುರದಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದೀಗ ಮದುವೆಗೆ ಬೆಂಗಳೂರಿನಿಂದಲೇ ಹೂವಿನ ಸಪ್ಲೈ ಆಗುತ್ತಿರುವ ವಿಚಾರ ಬಹಿರಂಗಗೊಂಡಿದೆ.

Read Full Story

12:38 PM (IST) Jan 26

ಬೆಂಗಳೂರು ಟೆಕ್ಕಿ ಶರ್ಮಿಳಾ ಹತ್ಯೆ ಕೇಸಲ್ಲಿ ಟ್ವಿಸ್ಟ್; ಫಸ್ಟ್ ರ‍್ಯಾಂಕ್‌ ಕೊಲೆಗಾರನ ಉದ್ದೇಶವೇ ಬೇರೆಯಾಗಿತ್ತು!

ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಟೆಕ್ಕಿ ಶರ್ಮಿಳಾ ಅವರ ಸಾವು ಅಗ್ನಿ ಅವಘಡದಿಂದ ಸಂಭವಿಸಿದೆ ಎಂದು ಭಾವಿಸಲಾಗಿತ್ತು. ಆದರೆ, ಪೊಲೀಸ್ ತನಿಖೆಯಿಂದ ಇದು ಅತ್ಯಾ*ಚಾರ ಯತ್ನದ ನಂತರ ನಡೆದ ಬರ್ಬರ ಕೊಲೆ ಎಂಬುದು ಬಯಲಾಗಿದ್ದು, ನೆರೆಮನೆಯ 18 ವರ್ಷದ ಯುವಕನೇ ಈ ಕೃತ್ಯ ಎಸಗಿದ್ದಾನೆ.

Read Full Story

12:36 PM (IST) Jan 26

Amruthadhaare Serial - 18 ವರ್ಷಗಳ ಹಿಂದೆ ರಾಧಿಕಾ ಪಂಡಿತ್‌ಗೆ ಹೇಳಿದ್ದನ್ನು‌ ಮತ್ತೆ ರಿಪೀಟ್‌ ಮಾಡಿದ ಗೌತಮ್!

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಸುಷ್ಮಾ ಎನ್ನುವ ಹುಡುಗಿ ಗೌತಮ್‌ನನ್ನು ಲವ್‌ ಮಾಡುತ್ತಿದ್ದಾಳೆ. ಗೌತಮ್-ಭೂಮಿಕಾ ಗಂಡ-ಹೆಂಡತಿ, ಇವರಿಗೆ ಆಕಾಶ್‌ ಎಂಬ ಮಗನಿದ್ದಾನೆ, ಕುಟುಂಬವಿದೆ ಎನ್ನೋದು ಈಗ ಸುಷ್ಮಾಗೆ ಗೊತ್ತಿದೆ. ಇವಳಿಗೆ ಗೌತಮ್‌ ಬುದ್ಧಿ ಹೇಳಿದ್ದಾನೆ.

 

Read Full Story

12:24 PM (IST) Jan 26

BSNL ನೆಟ್‌ವರ್ಕ್‌ ಸಮಸ್ಯೆ - ಮಂಗಳೂರಿನ ವ್ಯಕ್ತಿಗೆ ಪರಿಹಾರ ನೀಡಲು ನ್ಯಾಯಾಲಯ ಆದೇಶ

ದೋಷಯುಕ್ತ 4ಜಿ ನೆಟ್‌ವರ್ಕ್‌ ಸೇವೆಗಾಗಿ ಬಿಎಸ್‌ಎನ್‌ಎಲ್‌ ವಿರುದ್ಧ ದೂರು ದಾಖಲಿಸಿದ್ದರು. ದಕ್ಷಿಣ ಕನ್ನಡ ಗ್ರಾಹಕ ನ್ಯಾಯಾಲಯವು ಗ್ರಾಹಕರ ಪರ ತೀರ್ಪು ನೀಡಿ, ಸೇವಾ ನ್ಯೂನತೆಗಾಗಿ ದಂಡ, ರೀಚಾರ್ಜ್ ಮೊತ್ತದ ಮರುಪಾವತಿ ಹಾಗೂ ನಿರಂತರ ಸೇವೆ ಒದಗಿಸಲು ಬಿಎಸ್‌ಎನ್‌ಎಲ್‌ಗೆ ಆದೇಶಿಸಿದೆ.

Read Full Story

11:52 AM (IST) Jan 26

ಲಕ್ಕುಂಡಿ ನಿಧಿ - ಜ.26ರಂದು ಸರ್ಕಾರದಿಂದ ರಿತ್ತಿ ಕುಟುಂಬಕ್ಕೆ ಬಂಪರ್ ಕೊಡುಗೆ; ಪ್ರಾಮಾಣಿಕತೆಗೆ ಸಿಕ್ಕ ರಾಜಯೋಗ!

ಗದಗದ ಲಕ್ಕುಂಡಿಯಲ್ಲಿ ಮನೆ ಅಡಿಪಾಯ ತೆಗೆಯುವಾಗ ಸಿಕ್ಕ ಬಂಗಾರದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ರಿತ್ತಿ ಕುಟುಂಬದ ಪ್ರಾಮಾಣಿಕತೆಯನ್ನು ಸರ್ಕಾರ ಗೌರವಿಸಿದೆ. ಗಣರಾಜ್ಯೋತ್ಸವದಂದು, ಈ ಕುಟುಂಬಕ್ಕೆ ಮನೆ ನಿವೇಶನ, ₹5 ಲಕ್ಷ ನಗದು ಹಾಗೂ ಕುಟುಂಬದ ಸದಸ್ಯೆಗೆ ಗುತ್ತಿಗೆ ಆಧಾರದ ನೌಕರಿ ನೀಡಿದೆ.

Read Full Story

11:35 AM (IST) Jan 26

ಉಡುಪಿ - ವ್ಹೀಲ್‌ಚೇರ್‌ನಲ್ಲಿದ್ದ ಅಪರೇಷನ್ ಪರಾಕ್ರಮ್‌ನ ಗಾಯಾಳು ಯೋಧನಿಗೆ ಟೋಲ್ ವಿನಾಯಿತಿ ಇದ್ದರೂ ಟೋಲ್ ಕಟ್ಟುವಂತೆ ಪೀಡನೆ

ದೇಶ ಸೇವೆ ವೇಳೆ ಅಂಗವೈಖಲ್ಯಕ್ಕೆ  ಒಳಗಾದ ಯೋಧ ಶ್ಯಾಮರಾಜ್ ಅವರಿಗೆ ಉಡುಪಿಯ ಸಾಸ್ತಾನ ಟೋಲ್‌ನಲ್ಲಿ ವಿನಾಯಿತಿ ಇದ್ದರೂ ಶುಲ್ಕಕ್ಕಾಗಿ ಪೀಡಿಸಿ ಅವಮಾನಿಸಲಾಗಿದೆ. ಈ ಘಟನೆಯ ಕುರಿತು ಯೋಧರು ಹಂಚಿಕೊಂಡ ನೋವಿನ ವೀಡಿಯೋ ವೈರಲ್ ಆಗಿದ್ದು, ಟೋಲ್ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Read Full Story

More Trending News