LIVE NOW
Published : Aug 26, 2026, 05:25 AM ISTUpdated : Aug 26, 2026, 10:25 PM IST

Karnataka News Live: ಕಸ್ತೂರಿ ರಂಗನ್ ವರದಿ; ಪಶ್ಚಿಮ ಘಟ್ಟಗಳ ಬಗ್ಗೆ ಚರ್ಚಿಸಲು ಒಂದು ದಿನದ ವಿಶೇಷ ಅಧಿವೇಶನ - ಸಿಎಂ ಡಿಕೆಶಿ

ಸಾರಾಂಶ

ಬೆಂಗಳೂರು: ರಾಜ್ಯದಲ್ಲಿನ ಮಳೆ ಕೊರತೆಯನ್ನು ಸಾಧ್ಯವಾದಷ್ಟು ನೀಗಿಸುವ ಪ್ರಯತ್ನದ ಭಾಗವಾಗಿ ಮುಂದಿನ ಎರಡು- ಮೂರು ದಿನಗಳಲ್ಲಿ ನಾಲ್ಕೂ ಕಂದಾಯ ವಿಭಾಗಗಳ ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಮೋಡ ಬಿತ್ತನೆ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋಡ ಬಿತ್ತನೆ ಸಂಬಂಧ ಮೇಲ್ವಿಚಾರಣಾ ಸಮಿತಿ, ತಾಂತ್ರಿಕ ಸಮಿತಿ ಹಾಗೂ ಕಾರ್ಯಾಚರಣೆ ಮತ್ತು ಮೌಲ್ಯಮಾಪನ ಸಮಿತಿ ಎಂಬ ಮೂರು ಸಮಿತಿಗಳನ್ನು ರಚಿಸಲಾಗಿದೆ. ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮೇಲ್ವಿಚಾರಣಾ ಸಮಿತಿಯ ಉಸ್ತುವಾರಿ ವಹಿಸಲಿದ್ದಾರೆ. ​ಅಂದಾಜು 27 ಕೋಟಿ ರು. ವೆಚ್ಚದಲ್ಲಿ 60 ದಿನಗಳ ಕಾಲ (ಸುಮಾರು 200 ಗಂಟೆ) ಮೋಡ ಬಿತ್ತನೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಾಚರಣೆ ಇರಲಿದೆ. ​ನಾಲ್ಕು ಕಂದಾಯ ವಿಭಾಗಗಳಲ್ಲಿ ಜಲ ಸಂಪನ್ಮೂಲ ಇಲಾಖೆಯ ಮೂಲಕವೇ ಮೋಡ ಬಿತ್ತನೆ ಮಾಡುತ್ತೇವೆ.

10:25 PM (IST) Aug 26

ಕಸ್ತೂರಿ ರಂಗನ್ ವರದಿ; ಪಶ್ಚಿಮ ಘಟ್ಟಗಳ ಬಗ್ಗೆ ಚರ್ಚಿಸಲು ಒಂದು ದಿನದ ವಿಶೇಷ ಅಧಿವೇಶನ - ಸಿಎಂ ಡಿಕೆಶಿ

ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಕೇಂದ್ರದ ಕರಡು ಅಧಿಸೂಚನೆಗೆ ಕರ್ನಾಟಕ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಪಕ್ಷಾತೀತವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Read Full Story

08:18 PM (IST) Aug 26

ಈ ವಿಚಾರಕ್ಕೆ ‘ಅಶ್ವಿನಿ ನಕ್ಷತ್ರ’ ಬೇಡವೆಂದಿದ್ದ ಜೆಕೆ - ಅದೇ ಧಾರಾವಾಹಿ ಬದಲಿಸಿತು ಅವರ ಬದುಕು!

Kannada Seriel Actor Karthik Jayaram ‘ಜೆಕೆ’ ಎಂದೇ ಖ್ಯಾತರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ನಟನಾ ಪಯಣದ ಆರಂಭದ ದಿನಗಳ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿರುವ ಅವರು, ‘ಅಶ್ವಿನಿ ನಕ್ಷತ್ರ’ದ ನಾಯಕನ ಪಾತ್ರವನ್ನು ಆರಂಭದಲ್ಲಿ ಒಪ್ಪಿಕೊಳ್ಳಲು ತಮಗೆ ಆಸಕ್ತಿಯೇ ಇರಲಿಲ್ಲ.

Read Full Story

08:15 PM (IST) Aug 26

Captain Abhimanyu - ಇದು ವಿದಾಯವಲ್ಲ, ಒಂದು ಯುಗದ ಅಂತ್ಯಕ್ಕೆ ಸಂದ ಗೌರವ; ಕೂಬಿಂಗ್ ಸ್ಪೆಷಲಿಸ್ಟ್‌ ಕ್ಯಾಪ್ಟನ್‌ ಅಭಿಮನ್ಯುವಿಗೆ ಭಾವುಕ ಬೀಳ್ಕೊಡುಗೆ!

ಮೈಸೂರು ದಸರಾ ಜಂಬೂ ಸವಾರಿಯಲ್ಲಿ 6 ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅಭಿಮನ್ಯುವಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನಿಯಮಗಳಂತೆ ಗೌರವಯುತ ವಿದಾಯ ನೀಡಲಾಗಿದೆ. ಕೂಬಿಂಗ್ ಸ್ಪೆಷಲಿಸ್ಟ್ ಎಂದೇ ಖ್ಯಾತನಾಗಿದ್ದ ಈ ಗಜವೀರನಿಗೆ ಗಜಪಯಣದ ವೇಳೆ ಇಡೀ ನಾಡು ಭಾವುಕ ಬೀಳ್ಕೊಡುಗೆ ಸಲ್ಲಿಸಿತು.
Read Full Story

08:11 PM (IST) Aug 26

ತೆಂಗಿನ ಮರದಲ್ಲಿ ಬಿಟ್ಟ ಕಂದು ಬಣ್ಣದ ಹೀರೇಕಾಯಿ? ರಾಮನಗರದ ರೈತನ ತೋಟದಲ್ಲಿ ವಿಸ್ಮಯ! ಏನಿದು

ಕರ್ನಾಟಕದಲ್ಲಿ ಬರಗಾಲದಿಂದ ತೆಂಗಿನಕಾಯಿ ಬೆಲೆ ಗಗನಕ್ಕೇರಿದೆ. ಇದರ ನಡುವೆ, ರಾಮನಗರದ ಲಿಂಗೇಗೌಡದೊಡ್ಡಿಯ ರೈತ ಶಿವಣ್ಣ ಅವರ ತೋಟದಲ್ಲಿ ಹೀರೇಕಾಯಿಯಂತೆ ಉದ್ದವಾದ ವಿಚಿತ್ರ ತೆಂಗಿನಕಾಯಿ ಬೆಳೆದು ಅಚ್ಚರಿ ಮೂಡಿಸಿದೆ.

Read Full Story

07:48 PM (IST) Aug 26

'ಕಂಡೋರ ಮೆಚ್ಚಿಸೋಕೆ ಹೋಗ್ಬೇಡಿ' ಟಾಕ್ಸಿಕ್‌ ಬಗ್ಗೆ ನೆಗೆಟಿವ್‌ Review ಮಾಡುವವರ ಜನ್ಮ ಜಾಲಾಡಿದ All OK

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾಗೆ ಬರುತ್ತಿರುವ ನೆಗೆಟಿವ್ ವಿಮರ್ಶೆಗಳ ಬಗ್ಗೆ ಸಂಗೀತ ನಿರ್ದೇಶಕ ಆಲ್ ಓಕೆ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
Read Full Story

07:35 PM (IST) Aug 26

ಹಾವುಗಳ ಲೋಕದ ಈ ರಹಸ್ಯ ಗೊತ್ತಾದ್ರೆ ‘ಸೇಡು’ ಕಥೆಗಳೇ ಬದಲಾಗುತ್ತವೆ - ಇಲ್ಲಿದೆ ನಿಮಗೆ ಗೊತ್ತಿರದ ಸತ್ಯ

Snakes ತಮ್ಮ ಜೀವಕ್ಕೆ ಅಪಾಯ ಎದುರಾಗಿದೆ ಎಂದು ಭಾವಿಸಿದಾಗ ಸಾಮಾನ್ಯವಾಗಿ ಆತ್ಮರಕ್ಷಣೆಗಾಗಿ ದಾಳಿ ಮಾಡುತ್ತವೆ. ಹಾವುಗಳು ಸೇಡು ತೀರಿಸಿಕೊಳ್ಳುತ್ತವೆ, ತಮ್ಮನ್ನು ಕೊಂದ ವ್ಯಕ್ತಿಯನ್ನು ಹುಡುಕಿಕೊಂಡು ಬರುತ್ತವೆ ಎಂಬ ನಂಬಿಕೆಗಳು ಜನರಲ್ಲಿ ಇದ್ದರೂ, ಇದಕ್ಕೆ ವೈಜ್ಞಾನಿಕ ಆಧಾರವಿಲ್ಲ.

Read Full Story

07:25 PM (IST) Aug 26

ನಾನು ಲಾಯಕ್ಕಿಲ್ಲ ಮಮ್ಮಿ, ಸಾಯೋಕೂ ಭಯವಾಗ್ತಿದೆ.. IIT ದೆಹಲಿ ವಿದ್ಯಾರ್ಥಿ ಕೇಸ್‌ಗೆ ರೋಚಕ ಟ್ವಿಸ್ಟ್.. ಸಾವಿಗೂ ಮುನ್ನ ಹೇಳಿದ್ದೇನು?

ಐಐಟಿ ದೆಹಲಿಯ ವಿದ್ಯಾರ್ಥಿ ರಿಷಿಕೇಶ್ ಕುಮಾರ್ ಆತ್ಮ*ತ್ಯೆಗೂ ಮುನ್ನ ತನ್ನ ವೈಫಲ್ಯದ ಬಗ್ಗೆ ತಾಯಿಯ ಮುಂದೆ ಅತ್ತು ನೋವು ತೋಡಿಕೊಂಡಿದ್ದ ಆಘಾತಕಾರಿ ವಿಷಯ ಹೊರಬಂದಿದೆ. ಕಾಲೇಜು ಆಡಳಿತ ಮಂಡಳಿಯು ಹಾಸ್ಟೆಲ್ ನೀಡದೆ ಮತ್ತು ವೈದ್ಯಕೀಯ ವರದಿಗಳನ್ನು ಒಪ್ಪದೆ ಆತನಿಗೆ ಮಾನಸಿಕ ಕಿರುಕುಳ ನೀಡಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

Read Full Story

07:05 PM (IST) Aug 26

Success Story - ಬದುಕು ಬದಲಿಸಿದ ಒಂದು ಮೆಸೇಜ್ ಒಂದು ಮೆಸೇಜ್ ಬದಲಿಸಿತು ಬದುಕು; 17ರ ಹುಡುಗ 22ಕ್ಕೆ ಗಳಿಸಿದ್ದು 1 ಕೋಟಿ ರೂ.!

17 ವರ್ಷದ ಜೆಇಇ ಆಕಾಂಕ್ಷಿ ಆದಿತ್ಯ ಬನ್ಸಾಲ್, ಉದ್ಯಮಿ ರಾಜ್ ಶಮಾನಿಗೆ ಕಳುಹಿಸಿದ ಒಂದು ತಡರಾತ್ರಿಯ ಮೆಸೇಜ್‌ನಿಂದ ತನ್ನ ವೃತ್ತಿಜೀವನವನ್ನೇ ಬದಲಾಯಿಸಿಕೊಂಡನು. ಯಾವುದೇ ಪದವಿ ಅಥವಾ ಅನುಭವವಿಲ್ಲದಿದ್ದರೂ, ಈ ಅವಕಾಶದಿಂದಾಗಿ 45ಕ್ಕೂ ಹೆಚ್ಚು ಸಂಸ್ಥಾಪಕರೊಂದಿಗೆ ಕೆಲಸ ಮಾಡಿ, 22ನೇ ವಯಸ್ಸಿಗೆ 1 ಕೋಟಿ ರೂಪಾಯಿ ಸಂಪಾದಿಸುವಲ್ಲಿ ಯಶಸ್ವಿಯಾದನು.
Read Full Story

06:46 PM (IST) Aug 26

ಬೆಂಗಳೂರಲ್ಲಿ 1 ಕೋಟಿ ರೂ ಚಿನ್ನಾಭರಣ ಲೂಟಿ.. ನೇಪಾಳ ಗಡಿಯಲ್ಲಿ ಆರೋಪಿಗಳು ಲಾಕ್ ಆಗಿದ್ದು ಹೇಗೆ?

ನಂಬಿಕಸ್ಥ ಮನೆಯಾಳೇ ಕಳ್ಳತನಕ್ಕೆ ಇಳಿದ ಕೇಸ್ ಇದಾಗಿದೆ. ಹೊಟ್ಟೆ ತುಂಬಿಸಿಕೊಳ್ಳಲು ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ ಕಿಡಿಗೇಡಿಗಳ ಗ್ಯಾಂಗ್ ಬರೋಬ್ಬರಿ ಒಂದು ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ ಆಗಿತ್ತು. ಇದೀಗ ಆ ಗ್ಯಾಂಗ್ ಅರೆಸ್ಟ್ ಆಗಿದೆ.

Read Full Story

06:12 PM (IST) Aug 26

Toxic - ರಾಕಿ ಭಾಯ್‌ನ ಈ ಲುಕ್‌ ಹಿಂದಿರುವವರು ಇವರೆ! ‘ಕೆಜಿಎಫ್’ನಿಂದ ‘ಟಾಕ್ಸಿಕ್’ವರೆಗೆ ಇವರದ್ದೇ ಕೈಚಳಕ!

'ಕೆಜಿಎಫ್' ರಾಕಿ ಬಾಯ್ ಮತ್ತು 'ಟಾಕ್ಸಿಕ್' ಸಿನಿಮಾದಲ್ಲಿ ನಟ ಯಶ್ ಅವರ ಟ್ರೆಂಡ್ ಸೆಟ್ಟರ್ ಕೇಶವಿನ್ಯಾಸದ ಹಿಂದಿರುವ ಮಾಂತ್ರಿಕ ಕೈಗಳು ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಅವರದ್ದು. ಯಶ್ ಅವರ ಪಾತ್ರಗಳಿಗೆ ಐಕಾನಿಕ್ ನೋಟ ನೀಡುವುದರ ಜೊತೆಗೆ, ಅಲೆಕ್ಸ್ ತಮ್ಮ ಸಲೂನ್ ಉದ್ಯಮದ ಮೂಲಕ 150ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ ಯಶಸ್ವಿ ಉದ್ಯಮಿಯೂ ಹೌದು.

Read Full Story

05:53 PM (IST) Aug 26

ಒಂದೇ ಒಂದು ಮೆಸೇಜ್‌ ನಟಿ ರುಕ್ಮಿಣಿ ವಸಂತ್ ಜೀವನವನ್ನೇ ಬದಲಿಸಿತು - ಇಂದು ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್!

Toxic Actress Rukmini Vasanth ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ನಡುವೆ ರುಕ್ಮಿಣಿ ವಸಂತ್ ತಮ್ಮ ಸಿನಿ ಜರ್ನಿಯ ಆರಂಭದ ದಿನಗಳಲ್ಲಿನ ಕುತೂಹಲಕಾರಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.

Read Full Story

05:14 PM (IST) Aug 26

VB-G RAM G - ಹೊಟ್ಟೆಗೆ ಹಿಟ್ಟಿಲ್ಲ, ಕೈಗೆ ಕೆಲಸವಿಲ್ಲ; ಹೊಸ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಕಣ್ಣೀರಲ್ಲಿ ಕೈತೊಳೆಯುತ್ತಿರುವ ಬಡ ಕೂಲಿ ಕಾರ್ಮಿಕರು!

ಜುಲೈ 1 ರಿಂದ ಜಾರಿಗೆ ಬಂದ 'ವಿಕ್ಸಿತ್ ಭಾರತ್ ಉದ್ಯೋಗ ಮಿಷನ್-ಗ್ರಾಮೀಣ' ಯೋಜನೆಯು, ಹಿಂದಿನ ಉದ್ಯೋಗ ಖಾತರಿ ಯೋಜನೆಯ ಸ್ಥಾನವನ್ನು ತುಂಬುವಲ್ಲಿ ವಿಫಲವಾಗಿದೆ. ಆಡಳಿತಾತ್ಮಕ ಗೊಂದಲ, ಅನುದಾನದ ಕೊರತೆ ಮತ್ತು ತಾಂತ್ರಿಕ ದೋಷಗಳಿಂದಾಗಿ ಗ್ರಾಮೀಣ ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ವಲಸೆಯ ಭೀತಿ ಎದುರಿಸುತ್ತಿದ್ದಾರೆ.
Read Full Story

05:03 PM (IST) Aug 26

‘ಅರೇಂಜ್ ಮ್ಯಾರೇಜ್, ಆದರೆ ಲವ್ ಆಯ್ತು’ - ಪಾವನಾ ಜೊತೆಗಿನ ಮದುವೆ ಬಗ್ಗೆ ನಟ ಚಿಕ್ಕಣ್ಣ ಹೇಳಿದ್ದೇನು?

Kannada Comedy Actor Chikkanna ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೇ ತಿಂಗಳ 29 ಮತ್ತು 30ರಂದು ಮದುವೆ ನಡೆಯಲಿದೆ ಎಂದು ಅವರು ಘೋಷಿಸಿದ್ದಾರೆ. ಚಿಕ್ಕಣ್ಣ-ಪಾವನಾ ಮದುವೆಯ ಸಂಪೂರ್ಣ ವಿವರಗಳು ಮತ್ತು ನಟ ಹೇಳಿದ ಕುತೂಹಲಕಾರಿ ಮಾತುಗಳು ಇಲ್ಲಿವೆ.

Read Full Story

04:44 PM (IST) Aug 26

ಖ್ಯಾತ ನಿರ್ದೇಶಕ ಇನ್ನಿಲ್ಲ, ಸ್ಟಂಟ್ ಹಾಕಿದ್ರೂ ಹೃದಯಾಘಾತ ಆಗಿದ್ದು ಏಕೆ? ಆ ಗುಟ್ಟು ಇಲ್ಲಿದೆ ನೋಡಿ!

ಕುಕು ಕೊಹ್ಲಿ ಕೇವಲ ನಿರ್ದೇಶಕರಾಗಿರಲಿಲ್ಲ, ಅವರು ಪ್ರೇಕ್ಷಕರ ನಾಡಿಮಿಡಿತ ಬಲ್ಲವರಾಗಿದ್ದರು. 'ಕೊಹ್ರಾಮ್', 'ಜುಲ್ಮಿ', 'ಯೇ ದಿಲ್ ಆಶಿಕಾನಾ' ನಂತಹ ಚಿತ್ರಗಳು ಇಂದಿಗೂ ಟಿವಿಯಲ್ಲಿ ಪ್ರಸಾರವಾದರೆ ಪ್ರೇಕ್ಷಕರು ಮುಗಿಬಿದ್ದು ನೋಡುತ್ತಾರೆ. ಅಜಯ್ ದೇವಗನ್ ಎಂಬ ಸೂಪರ್ ಸ್ಟಾರ್ ಕೊಟ್ಟ ಈ 'ಗುರು'ವಿನ ನೆನಪು ಚಿತ್ರರಂಗದಲ್ಲಿ ಸದಾ ಅಮರ.

Read Full Story

04:39 PM (IST) Aug 26

ದರ್ಶನ್‌ಗೆ ಮದುವೆಯ ಆಹ್ವಾನ ಪತ್ರಿಕೆ ನೀಡದೇ ಇರೋದಕ್ಕೆ ಕಾರಣ ತಿಳಿಸಿದ ನಟ ಚಿಕ್ಕಣ್ಣ!

ಹಾಸ್ಯನಟ ಚಿಕ್ಕಣ್ಣ, ಉದ್ಯಮಿ ಪಾವನಾ ಗೌಡ ಅವರನ್ನು ಮೈಸೂರಿನಲ್ಲಿ ವಿವಾಹವಾಗಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ತಾನು ಸಾಕ್ಷಿಯಾಗಿರುವುದರಿಂದ ದರ್ಶನ್‌ ಅವರನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಚಿಕ್ಕಣ್ಣ ಸ್ಪಷ್ಟಪಡಿಸಿದ್ದಾರೆ.

Read Full Story

04:33 PM (IST) Aug 26

Cricket - ವೈಭವ್, ಜೈಸ್ವಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ - ಬಿಸಿಸಿಐ, ಐಸಿಸಿಗೆ ದಿಗ್ಗಜ ಕ್ರಿಕೆಟಿಗನ ಕರೆ!

ಭಾರತ-ಶ್ರೀಲಂಕಾ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಅಸಿತಾ ಫೆರ್ನಾಂಡೊ ನಡುವೆ ನಡೆದ ಜಗಳ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಗೆ ಐಸಿಸಿ ವಿಧಿಸಿದ ಸಣ್ಣ ದಂಡದ ಬಗ್ಗೆ ಮಾಜಿ ಕ್ರಿಕೆಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಯುವ ಆಟಗಾರರಲ್ಲಿ ಶಿಸ್ತು ಮೂಡಿಸಲು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Read Full Story

04:13 PM (IST) Aug 26

Mysuru Dasara - ಗಜಪಯಣಕ್ಕೆ ಚಾಲನೆ, ಕಾಡಿನಿಂದ ನಾಡಿಗೆ 9 ಆನೆಗಳು; ಕ್ಯಾಪ್ಟನ್ ಅಭಿಮನ್ಯುಗೆ ರಾಜಮರ್ಯಾದೆ ವಿದಾಯ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮೊದಲ ಹಂತದ 9 ಆನೆಗಳ ಗಜಪಡೆ ಆಗಮಿಸಿದೆ. 6 ಬಾರಿ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯುಗೆ 60 ವರ್ಷ ತುಂಬಿದ್ದರಿಂದ ಗೌರವಯುತ ವಿದಾಯ ನೀಡಲಾಗಿದ್ದು, ಈ ಬಾರಿ ದಸರಾ ಕಂಬಳ ಆಯೋಜನೆಯೂ ಖಚಿತವಾಗಿದೆ.
Read Full Story

04:13 PM (IST) Aug 26

‘ಪ್ರೀತಿ ಅಪರೂಪ, ಅದನ್ನು ಕಳೆದುಕೊಳ್ಳಬೇಡಿ’ - ಹಾಗಾದ್ರೆ ಸಿಟಿ ಲೈಟ್ಸ್‌ ಈ ಹಾಡಿನ ವಿಶೇಷತೆ ಏನು?

City Lights ಚಿತ್ರದ 4ನೇ ಹಾಡು ಬಿಡುಗಡೆಯಾಗಿದೆ. ವಿನಯ್ ರಾಜ್‌ಕುಮಾರ್ ಈ ಹಾಡನ್ನು ಮೊದಲು ತಮ್ಮ ತಾಯಿಗೆ ಕೇಳಿಸಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾದರೆ ‘ಸಿಟಿ ಲೈಟ್ಸ್‌’ನ ಈ ಪ್ರೇಮಗೀತೆಯಲ್ಲಿ ಅಂಥದ್ದೇನು ವಿಶೇಷ? ಸಿನಿಮಾ ಹಾಗೂ ಹಾಡಿನ ಸಂಪೂರ್ಣ ಕಥೆ ಇಲ್ಲಿದೆ.

Read Full Story

04:11 PM (IST) Aug 26

ಕರ್ನಾಟಕದಲ್ಲಿ ಬಿಪಿ, ಶುಗರ್‌, ಬೊಜ್ಜು ಮಹಾಮಾರಿ - 10 ವರ್ಷಗಳಲ್ಲಿ ಬಿಪಿ ಭಾದಿತರು ಶೇ. 27 ರಷ್ಟು ಏರಿಕೆ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ಕಳೆದ ದಶಕದಲ್ಲಿ ಕರ್ನಾಟಕದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜಿನಂತಹ ಸಾಂಕ್ರಾಮಿಕವಲ್ಲದ ರೋಗಗಳು ಆತಂಕಕಾರಿಯಾಗಿ ಹೆಚ್ಚಾಗಿವೆ.

Read Full Story

04:05 PM (IST) Aug 26

Koppal - ಇತಿಮಿತಿಯಲ್ಲಿ ಯೋಚಿಸಿ ಹೆಜ್ಜೆ ಇಡಿ; ಸಚಿವ ಶಿವರಾಜ್ ತಂಗಡಗಿಗೆ ಸ್ವಪಕ್ಷದ ಹಿರಿಯ ನಾಯಕನ ಖಡಕ್ ಎಚ್ಚರಿಕೆ!

ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಸ್ವಪಕ್ಷದ ಸಚಿವ ಶಿವರಾಜ್ ತಂಗಡಗಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಇದೇ ವೇಳೆ, ಶಾಸಕ ಜನಾರ್ದನ ರೆಡ್ಡಿ ಅವರನ್ನು 'ಸುಳ್ಳಿನ ಗುಡ್ಡ' ಎಂದು ಕರೆದು, 35 ವರ್ಷಗಳ ಹಿಂದಿನ ಫೈನಾನ್ಸ್ ಕಂಪನಿ ವಂಚನೆ ಪ್ರಕರಣವನ್ನು ನೆನಪಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Read Full Story

02:58 PM (IST) Aug 26

ಮೊದಲ ದಿನವೇ ಹಲವು ದಾಖಲೆ ಪುಡಿಪುಡಿ.. 'ಗ್ಲೋಬಲ್ ಹಿಸ್ಟರಿ' ಸೃಷ್ಟಿಸಿದ ರಾಕಿಂಗ್ ಸ್ಟಾರ್ ಯಶ್! ಮುಂದೇನು?

ಇದು ಒಬ್ಬ ಕನ್ನಡದ ನಟನ ಗ್ಲೋಬಲ್ ರೆಕಾರ್ಡ್ ಆಗಿದೆ. ಯಶ್ ಅಭಿನಯದ ಟಾಕ್ಸಿಕ್, ಕನ್ನಡದ ಜೊತೆಗೆ ಇಂಗ್ಲೀಷ್‌ನಲ್ಲಿಯೂ ಏಕ ಕಾಲದಲ್ಲಿ ನಿರ್ಮಾಣ ಆಗಿರೋ ಸಿನಿಮಾ. ಈ ಚಿತ್ರವು ಇನ್ನುಳಿದ ಭಾಷೆಗೆ ಡಬ್ಬಿಂಗ್ ಆಗಿದೆ. ಯಶ್ ಇಂಗ್ಲೀಷ್ ಭಾಷೆಯಲ್ಲೂ ಅಭಿನಯಿಸಿದ್ದಾರೆ. ಹೀಗಾಗಿ, ಈ ಮೂಲಕ ಹಾಲಿವುಡ್‌ಗೂ ಯಶ್ ಎಂಟ್ರಿ ಕೊಟ್ಟಂತಾಗಿದೆ.

Read Full Story

02:34 PM (IST) Aug 26

ತಂದೆಯ ಸಾವಿನ ನೋವಿನಲ್ಲಿ ಬದುಕಿನ ಅರ್ಥ ಹುಡುಕಿದ ಮಗ - ದುಬೈ ರಿಯಲ್ ಎಸ್ಟೇಟ್ ಬಿಟ್ಟು ಬೆಟ್ಟದ ಮಡಿಲಲ್ಲಿ...

ತಂದೆಯನ್ನು ಕ್ಯಾನ್ಸರ್‌ನಿಂದ ಕಳೆದುಕೊಂಡ ಬಳಿಕ ದುಬೈನಲ್ಲಿ ರಿಯಲ್ ಎಸ್ಟೇಟ್ ವೃತ್ತಿಯಲ್ಲಿದ್ದ ಇಶಾನ್ ಗ್ರೋವರ್ ತಮ್ಮ ಜೀವನದ ವೇಗವನ್ನೇ ಪ್ರಶ್ನಿಸಲು ಆರಂಭಿಸಿದರು. ಕೊನೆಗೆ ನಗರ ಜೀವನಕ್ಕೆ ವಿದಾಯ ಹೇಳಿ ಉತ್ತರಾಖಂಡದ ಕಾಸರ್ ದೇವಿಗೆ ತೆರಳಿದರು. ಅಲ್ಲಿ ‘ಥೋಡಾ ಸ್ಲೋ’ ಅಂಗಡಿ ಆರಂಭಿಸಿ, ನಿಧಾನ ಮತ್ತು ನೆಮ್ಮದಿಯ ಬದುಕಿನ ತತ್ವವನ್ನು ಅನುಸರಿಸುತ್ತಿದ್ದಾರೆ.

Read Full Story

02:11 PM (IST) Aug 26

Mandya - ಗರ್ಲ್‌ಫ್ರೆಂಡ್‌ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಕೈದಿ; ಕರ್ತವ್ಯ ಲೋಪ ಹಿನ್ನಲೆ ಪೊಲೀಸ್ ಪೇದೆ ಸಸ್ಪೆಂಡ್

ಬೆನ್ನು ನೋವಿನ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಮಹಮದ್ ಹುಸೇನ್, ತನ್ನ ಗೆಳತಿಯೊಂದಿಗೆ ವಿಶೇಷ ಕೊಠಡಿಯಲ್ಲಿ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದಿದ್ದಾನೆ. ನ್ಯಾಯಾಧೀಶರ ದಿಢೀರ್ ಭೇಟಿಯಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.
Read Full Story

12:38 PM (IST) Aug 26

ರವಿತೇಜ ಸ್ವತಃ ಥಿಯೇಟರ್‌ನಲ್ಲೂ 'ಇರುಮುಡಿ'ಗಿಂತ 'ಟಾಕ್ಸಿಕ್'ಗೆ ಹೆಚ್ಚು ಶೋ, ತೆಲುಗು ರಾಜ್ಯದಲ್ಲಿ ಯಶ್ ಅಬ್ಬರ!

ರವಿತೇಜ ನಟನೆಯ 'ಇರುಮುಡಿ' ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದ್ದರೂ, ಯಶ್ ಅಭಿನಯದ 'ಟಾಕ್ಸಿಕ್' ಬಿಡುಗಡೆಯಿಂದಾಗಿ ತೆಲುಗು ರಾಜ್ಯಗಳಲ್ಲಿ ಅದರ ಪ್ರದರ್ಶನಗಳು ಕಡಿಮೆಯಾಗಿವೆ. 'ಟಾಕ್ಸಿಕ್' ಚಿತ್ರದ ಭಾರಿ ಹೈಪ್‌ನಿಂದಾಗಿ, ರವಿತೇಜ ಅವರ ಸ್ವಂತ ಚಿತ್ರಮಂದಿರದಲ್ಲಿಯೂ ಕನ್ನಡ ಚಿತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
Read Full Story

12:01 PM (IST) Aug 26

ಕಲಬುರಗಿ ಡಿಸಿಗೆ ನಿಂದನೆ ಕೇಸ್; ಈ ಒಂದು ನಿರ್ಧಾರಕ್ಕೆ ಬಂಧನದಿಂದ ರವಿಕುಮಾರ್ ಜಸ್ಟ್‌ ಪಾರು!

ಕಲಬುರಗಿ ಜಿಲ್ಲಾಧಿಕಾರಿಗೆ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಎಂಎಲ್‌ಸಿ ಎನ್. ರವಿಕುಮಾರ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ವಿಚಾರಣೆಗೆ ಗೈರಾದ ಕಾರಣ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು

Read Full Story

11:39 AM (IST) Aug 26

Toxic Review - ಟಾಕ್ಸಿಕ್ ವಿಮರ್ಶೆ- ರಾಯನ ಆರ್ಭಟ-ಟಿಕೆಟ್ ಆಟ.. ಯಶ್ ದರ್ಬಾರ್! 'ಪ್ರತಿಯೊಂದು ಆಯ್ಕೆಗೂ ತಕ್ಕ ಬೆಲೆ ತೆರಲೇಬೇಕು'.. ಏನದು ಸೀಕ್ರೆಟ್!?

'ಟಾಕ್ಸಿಕ್' ಕೇವಲ ಯಶ್ ಅಭಿಮಾನಿಗಳಿಗಷ್ಟೇ ಅಲ್ಲ, ಸಿನಿಮಾವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಹಬ್ಬ. ಕನ್ನಡ ಚಿತ್ರರಂಗದ ಹೆಮ್ಮೆಯಾಗಿ ಮೂಡಿಬಂದಿರುವ ಈ ಸಿನಿಮಾ 'ಪ್ಯಾನ್ ವರ್ಲ್ಡ್' ಎಂಬ ಬಿರುದಿಗೆ ಸಂಪೂರ್ಣ ಅರ್ಹವಾಗಿದೆ. ಸಿನಿಮಾ ನೋಡಿದ ಪ್ರತಿಯೊಬ್ಬ ವಯಸ್ಕರನ್ನೂ ಕೂಡ ಇದು ಯಾವುದೋ ಒಂದು ರೀತಿಯಲ್ಲಿ ಇದು ಕಾಡಬಹುದು.

Read Full Story

11:30 AM (IST) Aug 26

B Nagendra Resignation - ಬಿ ನಾಗೇಂದ್ರ ರಾಜೀನಾಮೆಗೆ ವೇದಿಕೆ ಸಿದ್ಧ ಮಾಡ್ತಾ ಕಾಂಗ್ರೆಸ್? ಸಂವಿಧಾನಿಕ ಬಿಕ್ಕಟ್ಟು ತಪ್ಪಿಸಲು ಸಚಿವ ತಲೆದಂಡ?

ವಾಲ್ಮೀಕಿ ನಿಗಮ ಹಗರಣ ಪ್ರಕರಣದಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿದ್ದು, ಸಿಬಿಐ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರು ಸರ್ಕಾರದ ಅಭಿಪ್ರಾಯ ಕೇಳಿರುವುದರಿಂದ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿದೆ. ಹೀಗಾಗಿ ನಾಗೇಂದ್ರ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Read Full Story

11:00 AM (IST) Aug 26

ಸೊರಬ ಮತದಾರರ ಪಟ್ಟಿ - 16,209 ಹೆಸರುಗಳು ಕಣ್ಮರೆ! 4081 ಮತದಾರರಿಗೆ ನೋಟಿಸ್

ಸೊರಬ ತಾಲೂಕಿನಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಂತರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಸುಮಾರು 16,209 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪಟ್ಟಿಯಲ್ಲಿ ಹೆಸರು ಇಲ್ಲದವರು, ತಿದ್ದುಪಡಿ ಬಯಸುವವರು ಹಾಗೂ ಹೊಸ ಮತದಾರರು ನಿಗದಿತ ನಮೂನೆಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
Read Full Story

10:58 AM (IST) Aug 26

ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಪಡಸಾಲೆಯ ಚರ್ಚೆ ರಿವೀಲ್ ಬೆನ್ನಲ್ಲೇ ಸಿಕ್ತು ಸ್ಪಷ್ಟನೆ!

ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಕುರಿತು ತೀವ್ರ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ಒತ್ತಡ ಮತ್ತು ಇ.ಡಿ ತನಿಖೆಯ ನಡುವೆ, ನಾಗೇಂದ್ರ ಅವರು ಸ್ವತಃ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿವೆ. ಆದರೆ, ಈ ವರದಿಗಳ ಬಗ್ಗೆ ಸಚಿವರು ನೀಡಿದ ಸ್ಪಷ್ಟನೆ ಏನು ತಿಳಿಯಿರಿ.

Read Full Story

10:36 AM (IST) Aug 26

Vijayapura - ಬೆಳ್ಳಂಬೆಳಗ್ಗೆ ಭೂತನಾಳ ಕೆರೆಯಲ್ಲಿ ತೇಲಿ ಬಂತು ಹೆಣಗಳ ರಾಶಿ; ಮಕ್ಕಳು ಸೇರಿ 6 ಮೃತದೇಹಗಳು ಪತ್ತೆ

ವಿಜಯಪುರ ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ ತಾಯಿ ಮತ್ತು ಐವರು ಮಕ್ಕಳೂ ಸೇರಿದಂತೆ ಒಟ್ಟು ಆರು ಶವಗಳು ಪತ್ತೆಯಾಗಿವೆ. ಈ ಹಿಂದೆ ನಾಪತ್ತೆ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.

Read Full Story

10:33 AM (IST) Aug 26

KSRTC ಬಸ್‌ಗಳಿಗೆ ಬಂತು ಹೈಟೆಕ್ ಕಣ್ಗಾವಲು ವ್ಯವಸ್ಥೆ! ಕ್ಷಣಕ್ಷಣಕ್ಕೂ ಸಿಗಲಿದೆ ಮಾಹಿತಿ, ಏನಿದು VLTD ಸಿಸ್ಟಂ?

ಕೆಎಸ್ಸಾರ್ಟಿಸಿ ತನ್ನ ಎಲ್ಲಾ ಬಸ್‌ಗಳಿಗೆ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ (ವಿಎಲ್‌ಟಿಡಿ) ಅಳವಡಿಸಲು ಮುಂದಾಗಿದೆ. ಈ ಬಸ್‌ಗಳ ಸಂಚಾರದ ಮೇಲೆ ನಿಗಾ ಇಡಲು ಮತ್ತು ಕ್ಷಣ ಕ್ಷಣದ ಮಾಹಿತಿ ಪಡೆಯಲು ಪ್ರತ್ಯೇಕ ಕಮಾಂಡ್‌ ಸೆಂಟರ್‌ ಅನ್ನು ಸಹ ನಿರ್ಮಿಸಲಾಗುತ್ತಿದೆ.
Read Full Story

09:49 AM (IST) Aug 26

DK Shivakumar - ಸಂಪುಟಕ್ಕೆ ಮೈನರಿ ಸರ್ಜರಿ - ನಾಳೆ ಸಿಎಂ ಮತ್ತೆ ದೆಹಲಿಗೆ, 1 ಮಹಿಳೆ, 2 ಸಚಿವ ಸ್ಥಾನ ಬದಲು?

ಸಚಿವ ಸಂಪುಟದಲ್ಲಿನ ಸಣ್ಣ ಬದಲಾವಣೆಗಳು ಮತ್ತು ನಿಗಮ-ಮಂಡಳಿ ಅಧ್ಯಕ್ಷರ ನೇಮಕದ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಲಿದ್ದಾರೆ. ಈ ಭೇಟಿಯಲ್ಲಿ, ಖಾಲಿ ಇರುವ ಒಂದು ಮಹಿಳಾ ಕೋಟಾದ ಸ್ಥಾನವನ್ನು ಭರ್ತಿ ಮಾಡುವ ಬಗ್ಗೆ ವರಿಷ್ಠರೊಂದಿಗೆ ಚರ್ಚೆ..

Read Full Story

09:25 AM (IST) Aug 26

'ಆರೆಸ್ಸೆಸ್‌ ವಿರುದ್ಧ ಒಂದೂ ಕೇಸಿಲ್ಲ..' ಎಂದ ಗೃಹ ಸಚಿವ; ಈಗಲಾದ್ರೂ 'ವಿಷ ಕಕ್ಕು'ವುದು ಬಿಡ್ತೀರಾ?' ಪರಂ, ಖರ್ಗೆ ವಿರುದ್ಧ ಸುನೀಲ್ ಗರಂ!

ರಾಜ್ಯದಲ್ಲಿ RSS ವಿರುದ್ಧ ಯಾವುದೇ ಗಲಭೆ ಪ್ರಕರಣ ದಾಖಲಾಗಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ವಿಧಾನಪರಿಷತ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ಸಂಘದ ಪಥ ಸಂಚಲನ ಅಥವಾ ಶಾಖೆ ವೇಳೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದರು.

Read Full Story

09:16 AM (IST) Aug 26

ಭತ್ತದ ಕಣಜ ಗಂಗಾವತಿಯಲ್ಲಿ ತೆಲಂಗಾಣದ ‘ಅನ್ನಭಾಗ್ಯ’ ಅಕ್ಕಿ ಪತ್ತೆ! ರೈಸ್ ಮಿಲ್‌ನಲ್ಲಿ ಭಾರಿ ಗೋಲ್‌ಮಾಲ್!

ಭತ್ತದ ಕಣಜ ಗಂಗಾವತಿಯ ರೈಸ್ ಮಿಲ್‌ಗಳಲ್ಲಿ ನೆರೆಯ ತೆಲಂಗಾಣದ ಪಡಿತರ ಅಕ್ಕಿ ಅಕ್ರಮವಾಗಿ ಪತ್ತೆಯಾಗಿದೆ. ಈ ಅಕ್ಕಿಯನ್ನು ಪಾಲಿಶ್ ಮಾಡಿ, ಹೊಸ ಬ್ರ್ಯಾಂಡ್ ಹೆಸರಿನಲ್ಲಿ ದುಬಾರಿ ಬೆಲೆಗೆ ಮರು-ಮಾರಾಟ ಮಾಡುವ ಅಂತರರಾಜ್ಯ ಜಾಲದ ಶಂಕೆ ವ್ಯಕ್ತವಾಗಿದ್ದು, ಆಹಾರ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Read Full Story

08:55 AM (IST) Aug 26

FSSAI new guidelines - ಫುಡ್ ಬ್ಯುಸಿನೆಸ್‌ಗೆ ಲೈಸೆನ್ಸ್ ಕಡ್ಡಾಯ, 15 ದಿನದಲ್ಲಿ ಎಲ್ಲವೂ ಸರಿ ಮಾಡ್ಕೊಳ್ಳಿ!

ರಾಜ್ಯಾದ್ಯಂತ ಆಹಾರ ಉದ್ದಿಮೆಗಳಲ್ಲಿನ ಲೋಪದೋಷಗಳ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತಾ ಇಲಾಖೆಯು 12 ಅಂಶಗಳ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ನಿಯಮಗಳನ್ನು ಪಾಲಿಸಲು 15 ದಿನಗಳ ಗಡುವು ನೀಡಲಾಗಿದ್ದು, ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
Read Full Story

08:36 AM (IST) Aug 26

ಭಾರತದ ಬಿಗಿ ಹಿಡಿತದಲ್ಲಿ ಕೊಲಂಬೊ ಟೆಸ್ಟ್‌; ಫಾಲೋ ಆನ್ ಭೀತಿಯಲ್ಲಿ ಆತಿಥೇಯ ಶ್ರೀಲಂಕಾ

ಭಾರತದ 503 ರನ್‌ಗಳಿಗೆ ಉತ್ತರವಾಗಿ, 2ನೇ ಟೆಸ್ಟ್‌ನ 3ನೇ ದಿನದಂತ್ಯಕ್ಕೆ ಶ್ರೀಲಂಕಾ 8 ವಿಕೆಟ್‌ಗೆ 265 ರನ್ ಗಳಿಸಿದೆ. ಪಸಿಂದು ಸೂರ್ಯಬಂಡಾರ (80) ಹಾಗೂ ಸೋನಲ್‌ ದಿನುಶಾ (85*) ಅವರ ಅರ್ಧಶತಕಗಳ ನೆರವಿನಿಂದ ಲಂಕಾ ಫಾಲೋ ಆನ್‌ ತಪ್ಪಿಸಿಕೊಳ್ಳಲು ಹೋರಾಡುತ್ತಿದೆ.
Read Full Story

08:30 AM (IST) Aug 26

12 ತಾಸಿನಲ್ಲಿ 28 ಎಕರೆ ಹೊಲದ ಕುಂಟೆ ಹೊಡೆದ ಮಾರಲಭಾವಿ ಗ್ರಾಮದ ಜೋಡೆತ್ತು

ಮಾರಲಭಾವಿ ಗ್ರಾಮದ ಶಿವಶರಣಪ್ಪಗೌಡ ಮಾಲಿ ಪಾಟೀಲ್ ಅವರ ಜೋಡೆತ್ತುಗಳು ಕೇವಲ 12 ಗಂಟೆಗಳಲ್ಲಿ 28 ಎಕರೆ ತೊಗರಿ ಬೆಳೆಯಲ್ಲಿ ಕುಂಟೆ ಹೊಡೆಯುವ ಮೂಲಕ ಟ್ರಾಕ್ಟರ್‌ಗಳನ್ನೂ ಮೀರಿಸುವ ಸಾಧನೆ ಮಾಡಿವೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ರೈತನನ್ನು ಅಭಿನಂದಿಸಿ, ಎತ್ತುಗಳ ಮೆರವಣಿಗೆ ಮಾಡಿದ್ದಾರೆ.

Read Full Story

07:42 AM (IST) Aug 26

KPSC Exam Scam - ಇ.ಡಿ. ತನಿಖೆ, ಐಎಎಸ್ ಅಧಿಕಾರಿ ಬಳಿಕ ಮನೆ ಖಾಲಿ ಮಾಡಿಕೊಂಡು ಈಗ ಮತ್ತೊಬ್ಬ ಸದಸ್ಯೆ ಎಸ್ಕೇಪ್!

ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದ ಬೆನ್ನಲ್ಲೇ, ಕೆಪಿಎಸ್ಸಿ ಸದಸ್ಯೆ ಶಾಂತಾ ಹೊಸಮನಿ ತಮ್ಮ ಬೆಂಗಳೂರಿನ ಮನೆ ಖಾಲಿ ಮಾಡಿ ನಾಪತ್ತೆ. ಇ.ಡಿ. ದಾಳಿಯ ನಂತರ ಐಎಎಸ್‌ ಅಧಿಕಾರಿ ಜ್ಞಾನೇಶ್‌ ಕುಮಾರ್‌ ಕೂಡ ನಾಪತ್ತೆಯಾಗಿದ್ದಾರೆ.

Read Full Story

07:20 AM (IST) Aug 26

BJP Padayatra Route Map - ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು; ಸೆ.1 ರಿಂದ ಬೃಹತ್ ಪಾದಯಾತ್ರೆ ಆರಂಭ! ಎಲ್ಲಿಂದ ಎಲ್ಲಿವರೆಗೆ?

ವಾಲ್ಮೀಕಿ ನಿಗಮ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಸೆ.1 ರಿಂದ 10 ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿದೆ. ರಾಯಚೂರಿನ ಗುರುಗುಂಟಾದಿಂದ ಬಳ್ಳಾರಿಯವರೆಗೆ ಸಾಗಲಿರುವ ಈ ಯಾತ್ರೆಯು, ಕಾಂಗ್ರೆಸ್ ಸರ್ಕಾರದ ವಿವಿಧ ವೈಫಲ್ಯಗಳನ್ನು ಜನರ ಮುಂದಿಡುವ ಗುರಿ ಹೊಂದಿದೆ.
Read Full Story

06:54 AM (IST) Aug 26

ಬೆಳಗಾವಿ - ಪಟಾಕಿಯ ಸದ್ದಿಗೆ ಹೆದರಿ ಕಾಲುವೆಗೆ ಬಿದ್ದು 80 ಕುರಿಗಳ ಸಾವು! ಘಟನೆ ನಡೆದಿದ್ದು ಹೇಗೆ?

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆದ ಶ್ರೀ ಕುರಿ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವದ ವೇಳೆ ಪಟಾಕಿ ಸದ್ದಿಗೆ ಬೆದರಿದ ಸುಮಾರು 80 ಕುರಿಗಳು ಸಮೀಪದ ಕಾಲುವೆಗೆ ಹಾರಿ ದಾರುಣವಾಗಿ ಸಾವನ್ನಪ್ಪಿವೆ. ಈ ದುರ್ಘಟನೆಯಿಂದ ಕುರಿಗಾಹಿಗಳಿಗೆ ಸುಮಾರು ₹20 ಲಕ್ಷ ಮೌಲ್ಯದ ನಷ್ಟ ಉಂಟಾಗಿದೆ.
Read Full Story

More Trending News