ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಅವರ ಸ್ಥಾನ ತುಂಬುವ ಶಕ್ತಿ ಸಚಿವ ಸತೀಶ್ ಜಾರಕಿಹೊಳಿ ಅವರಿಗಿದೆ ಎಂದು ಸಿಎಂ ಪುತ್ರರೂ ಆಗಿರುವ ಎಂಎಲ್‌ಸಿ ಡಾ। ಯತೀಂದ್ರ ಹೇಳಿಕೆ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಕಾಂಗ್ರೆಸ್‌ನಲ್ಲಿ ಪರ- ವಿರೋಧ ಹೇಳಿಕೆಗಳು ಮುಂದುವರಿದಿವೆ. ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಹೇಳಿಕೆ ಬಗ್ಗೆ ಯತೀಂದ್ರ ಬಳಿಯೇ ನೀನು ಏನಂಥ ಹೇಳಿದ್ದೀಯಾ ಎಂದು ಕೇಳಿದ್ದೇನೆ. ನಾನು ಸೈದ್ಧಾಂತಿಕವಾಗಿ ಮಾತ್ರ ಮಾತನಾಡಿದ್ದೇನೆ. ಇಂತಹವರೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಲ್ಲ ಎಂದಿದ್ದಾರೆ ಎಂದು ಹೇಳಿದರು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಾಯಕತ್ವ ವಿಚಾರವಾಗಿ ನೀಡಲಾಗುತ್ತಿರುವ ಹೇಳಿಕೆ ಕುರಿತು ಯಾರ ಬಳಿ (ಹೈಕಮಾಂಡ್) ಮಾತನಾಡಬೇಕೋ ಅವರ ಬಳಿಯೇ ಮಾತನಾಡುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಯತೀಂದ್ರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವುದಂತು ನಿಜ.

10:00 PM (IST) Oct 25
Bigg Boss Kannada 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಎಂದು ಬಂದಾಗ ಮನರಂಜನೆಯನ್ನು ನೀಡುತ್ತ, ಸ್ಪರ್ಧಿಗಳ ಕಾಲೆಳೆಯುತ್ತ, ತಪ್ಪಿದ್ದಲ್ಲಿ ತಪ್ಪು ಎಂದು ಹೇಳುತ್ತ ಗಿಲ್ಲಿ ನಟ ಅವರು ಅನೇಕರ ಫೇವರಿಟ್ ಆಗಿದ್ದಾರೆ. ಇವರ ಶಿಕ್ಷಣ, ಗಿಲ್ಲಿ ಎಂದು ಹೆಸರು ಬಂದಿದ್ದು ಮುಂತಾದ ವಿಚಾರಗಳಿವು.
09:52 PM (IST) Oct 25
ಬೆಂಗಳೂರಿನ ತಿಲಕ್‌ನಗರದಲ್ಲಿ ನಿಂತಿದ್ದ ಆಟೋ ರಿಕ್ಷಾದೊಳಗೆ ನಾಲ್ಕು ಮಕ್ಕಳ ತಾಯಿ ಸಲ್ಮಾ ಎಂಬುವವರ ಶವ ಪತ್ತೆಯಾಗಿದೆ. ಪ್ರೇಮ ಸಂಬಂಧದ ಹಿನ್ನೆಲೆಯಲ್ಲಿ ಆಕೆಯ ಪ್ರಿಯಕರ ಸುಬ್ರಮಣಿ ಕೊಲೆ ಮಾಡಿ ಶವವನ್ನು ಆಟೋದಲ್ಲಿಟ್ಟು ಪರಾರಿಯಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
09:39 PM (IST) Oct 25
Karna Serial Episode: ಪ್ರತಿ ಬಾರಿಯೂ ಕರ್ಣ ಏನೇ ಸಹಾಯ ಮಾಡಿದರೂ ಕೂಡ, ಯಾರೋ ಮಾಡಿದ ತಪ್ಪನ್ನು ಕರ್ಣನೇ ಮಾಡಿದ್ದಾನೆ ಎಂದುಕೊಂಡು ನಿತ್ಯಾ ಬೈಯ್ಯುತ್ತಿದ್ದಳು. ಮದುವೆಯಾಗುವ ಹುಡುಗ ತೇಜಸ್ ಮದುವೆ ಮನೆಯಿಂದ ಕಾಣೆಯಾದ, ಅಜ್ಜಿ ಪ್ರಾಣ ಕಳೆದುಕೊಳ್ಳುತ್ತಿದ್ದಳು. ಇದಕ್ಕೆಲ್ಲ ಕರ್ಣ ಮದ್ದು ಕೊಟ್ಟಿದ್ದಾನೆ.
09:22 PM (IST) Oct 25
ಸಿಎಂ ಬದಲಾವಣೆ ಚರ್ಚೆಯು ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕುವ ತಂತ್ರ ಎಂದು ಬಿಜೆಪಿ ನಾಯಕ ಪಿ. ರಾಜೀವ್ ಆರೋಪಿಸಿದ್ದಾರೆ. ರೈತರ ಆತ್ಮಹತ್ಯೆ, ನೆರೆ ಪರಿಹಾರ ನೀಡದಿರುವುದು. ಹೆಚ್ಚುತ್ತಿರುವ ಅಪರಾಧ ಸಮಸ್ಯೆ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಈ ನಾಟಕವಾಡುತ್ತಿದೆ ಎಂದು ಟೀಕಿಸಿದ್ದಾರೆ.
09:18 PM (IST) Oct 25
08:59 PM (IST) Oct 25
08:54 PM (IST) Oct 25
Bengaluru Youth Dies Mysteriously in Chikkamagaluru Homestay Before Friend Engagement ಗೆಳತಿಯ ನಿಶ್ಚಿತಾರ್ಥಕ್ಕೆಂದು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದಿದ್ದ 27 ವರ್ಷದ ಯುವತಿ, ಮೂಡಿಗೆರೆ ತಾಲೂಕಿನ ಹೋಮ್‌ಸ್ಟೇ ಬಾತ್‌ರೂಮ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
07:47 PM (IST) Oct 25
ಬೆಂಗಳೂರಿನ ಮಾದನಾಯಕನಹಳ್ಳಿ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋದ ಟ್ರಕ್ ಡಿಕ್ಕಿ ಹೊಡೆದು ಬ್ಯಾಂಕ್ ಉದ್ಯೋಗಿ ಪ್ರಿಯಾಂಕಾ ಕುಮಾರಿ ಪೂನಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಣ್ಣನೊಂದಿಗೆ ಮೆಟ್ರೋ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
06:30 PM (IST) Oct 25
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ, ಜೈಲಿನೊಳಗೆ ಸ್ಮಾರ್ಟ್‌ಫೋನ್ ಮತ್ತು ಇಯರ್‌ಫೋನ್‌ಗಳನ್ನು ಕೊಂಡೊಯ್ಯಲು ಯತ್ನಿಸಿದ ಸಿಬ್ಬಂದಿ ಅಮರ್ ಪ್ರಾಂಜೆಯನ್ನು ಬಂಧಿಸಲಾಗಿದೆ. ಈ ಘಟನೆಯು ಜೈಲಿನ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
05:32 PM (IST) Oct 25
ಬಿಗ್ಬಾಸ್ 12ರಲ್ಲಿ ರಕ್ಷಿತಾ ಶೆಟ್ಟಿಗೆ 'ಸೆಡೆ' ಎಂದು ನಿಂದಿಸಿದ್ದ ಕಾಕ್ರೋಚ್ ಸುಧಿಗೆ ಹಾಗೂ ಸೈಲೆಂಟ್ ಇದ್ದ ಅಶ್ವಿನಿ ಗೌಡ ಅವರಿಗೆ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ತರಗತಿ ತೆಗೆದುಕೊಂಡಿದ್ದಾರೆ. ಮಾತಿನ ಭರದಲ್ಲಿ ತಪ್ಪಾಯಿತು ಎಂದು ಸುಧಿ ಕ್ಷಮೆ ಕೇಳಿದರೂ, ಸುದೀಪ್ ಹೇಳಿದ್ದೇನು?
05:16 PM (IST) Oct 25
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಲಾಲ್ ಪ್ರಮಾಣೀಕೃತ ಪದಾರ್ಥಗಳು ಮತ್ತು ಸಂಸ್ಥೆಗಳನ್ನು ನಿಷೇಧಿಸುವಂತೆ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಹಲಾಲ್‌ನಿಂದ ಬರುವ ಹಣವನ್ನು ಉಗ್ರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ.
04:47 PM (IST) Oct 25
'ಮಿಸೆಸ್ ಇಂಡಿಯಾ ಬ್ಯೂಟಿಫುಲ್ ಸ್ಮೈಲ್' ವಿಜೇತೆ, ನಟಿ ಆಶಾ ಜೋಯಿಸ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. 61 ವರ್ಷದ ಮಹಿಳೆಯೊಬ್ಬರ ಖಾಸಗಿ ಡೇಟಾ ಕದ್ದು, 2 ಕೋಟಿ ರೂಪಾಯಿಗಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಾಗಿದೆ.
04:42 PM (IST) Oct 25
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್' ರಾಜಕೀಯಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಬಹಿರಂಗ ಚರ್ಚೆಗೆ ಸವಾಲು ಹಾಕಿದ್ದಾರೆ. ರಾಜಕೀಯ ದಲ್ಲಿ ಚರ್ಚೆವಾದ ವಿವಾದ ಇವೆಲ್ಲಾ ಇರಬೇಕು ಎಂದಿದ್ದಾರೆ.
04:31 PM (IST) Oct 25
Weight Loss Drink: ಕೆಲವರು ಡಯೆಟ್ ಮಾಡುತ್ತಾರೆ, ವರ್ಕೌಟ್ ಮಾಡುತ್ತಾರೆ, ಆದರೂ ಸಣ್ಣ ಆಗೋದಿಲ್ಲ ಎಂದು ಆರೋಪ ಮಾಡುತ್ತಾರೆ. ಇದಕ್ಕೆ ಕಾರಣ ಏನು ಎಂದು ಕೆಲವರಿಗೆ ಸಂದೇಹ ಇರಬಹುದು. 14kg ತೂಕ ಇಳಿಸಿಕೊಂಡ ವ್ಯಕ್ತಿಯೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.
04:17 PM (IST) Oct 25
Bigg Boss Kannada Season 12: ಬಿಗ್ ಬಾಸ್ ಮನೆಯಲ್ಲಿ ಇಷ್ಟುದಿನ ವೀಕ್ ಡೇಸ್‌ನಲ್ಲಿ ಜಗಳ ಆಡುತ್ತಿದ್ದರು. ಈಗ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಮುಂದೆ ಕಿತ್ತಾಡಿದ್ದಾರೆ. ಜಾಹ್ನವಿ ಬಳಸಿದ ಅದೊಂದು ಪದಕ್ಕೆ ಇಷ್ಟೆಲ್ಲ ಜಗಳ ನಡೆದಿದೆ.
03:46 PM (IST) Oct 25
ಹೃದಯಂ ಎಂಬ ಸಿನಿಮಾದಲ್ಲಿ ನಟಿಸಿ, ಭರ್ಜರಿ ಹಿಟ್ ಪಡೆದುಕೊಂಡಿದ್ದ ನಟ ಪ್ರಣವ್ ಮೋಹನ್‌ಲಾಲ್ ಈಗ ಇನ್ನೊಂದು ಸಿನಿಮಾದಲ್ಲಿ ನಟಿಸಿದ್ದಾರೆ. Dies Irae ಎಂ ಚಿತ್ರದಲ್ಲಿ ನಟಿಸಿದ್ದು ಟ್ರೇಲರ್ ರಿಲೀಸ್ ಆಗಿದೆ.
03:34 PM (IST) Oct 25
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಬಾಂಧವ್ಯ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳು ತಮ್ಮ ಕಲ್ಪನೆಯಲ್ಲಿ ಇವರಿಬ್ಬರ ಸ್ಟೈಲಿಶ್ ಎಐ ಫೋಟೋಗಳನ್ನು ರಚಿಸಿ ವೈರಲ್ ಮಾಡಿದ್ದಾರೆ. ಕಾವ್ಯಾ ಮಾತಿನಂತೆ ಗಿಲ್ಲಿ ತಮ್ಮ ಗಡ್ಡದ ಶೈಲಿಯನ್ನು ಬದಲಾಯಿಸಲು ಮುಂದಾಗಿರುವುದೂ ನಡೆದಿದೆ.
03:20 PM (IST) Oct 25
ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದಲ್ಲಿ ಸಚಿವ ಸಂಪುಟ ಪುನರ್‌ರಚನೆ ಖಚಿತ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ನಾಯಕತ್ವ ಬದಲಾವಣೆಯ ನಿರ್ಧಾರ ಹೈಕಮಾಂಡ್‌ಗೆ ಸೇರಿದ್ದು, ಎರಡಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಹೈಕಮಾಂಡ್ ಸೂಚಿಸಿದರೆ ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದಿದ್ದಾರೆ.
03:01 PM (IST) Oct 25
13 ವರ್ಷಗಳ ಕಾಲ ಟಿಸಿಎಸ್‌ನಲ್ಲಿ ಸೇವೆ ಸಲ್ಲಿಸಿದ್ದ ಟೆಕ್ಕಿಯೊಬ್ಬರನ್ನು ಕೇವಲ 30 ನಿಮಿಷಗಳಲ್ಲಿ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ ಎಂದು ಐಟಿ ಉದ್ಯೋಗಿಗಳ ವೇದಿಕೆ (FITE) ಆರೋಪಿಸಿದೆ.
02:42 PM (IST) Oct 25
Weight Loss Food: ಮನೆಯಲ್ಲಿದ್ದ ಆಹಾರ ತಿಂದು, ಡಯೆಟ್ ಮಾಡಿ, ವಾಕಿಂಗ್ ಮಾಡಿ ಸಣ್ಣಗಾಗಿದ್ದು ಹೇಗೆ ಎಂದು ಶ್ರೀಶೈಲ ಮುಗದಂ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ, ಹಾಗಾದರೆ ಏನದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
02:28 PM (IST) Oct 25
ಯಾದಗಿರಿಯ ಗುರುಮಠಕಲ್‌ನಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಹಸೀಲ್ದಾರ್ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಾರೆ ಎಂದು ಆರೆಸ್ಸೆಸ್ ಮುಖಂಡರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮತ್ತೆ ಅರ್ಜಿ ಸಲ್ಲಿಸಿ ಮುಂದಿನ ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದ್ದಾರೆ.
02:00 PM (IST) Oct 25
Karnataka police new guidelines: ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು, ಸಾರ್ವಜನಿಕರು ಇಲಾಖೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸಲು ಪೊಲೀಸರ ನಡವಳಿಕೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಪೊಲೀಸರ ಹೊಸ ಮಾರ್ಗಸೂಚಿಗಳಲ್ಲಿ ಏನೇನು ಇವೆ ಎಂಬುದು ಇಲ್ಲಿ ತಿಳಿಯಿರಿ.
01:47 PM (IST) Oct 25
Actor Darshan Thoogudeepa: ಕಿರುತೆರೆ ನಟಿಯೋರ್ವರು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ನಿರ್ದೇಶಕ, ನಿರ್ಮಾಪಕ ಹೇಮಂತ ರಿಚ್ಚಿ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು. ದೂರಿನ ಆಧಾರದ ಮೇಲೆ ಜೈಲಿಗೆ ಹೋಗಿದ್ದ ಅವರು ದರ್ಶನ್ ಪರಿಸ್ಥಿತಿ ಹೇಗಿದೆ ಎಂದು ವಿವರಣೆ ಮಾಡಿದ್ದಾರೆ.
01:40 PM (IST) Oct 25
ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಚಿನ್ನ ನಾಪತ್ತೆ ಪ್ರಕರಣದ ತನಿಖೆಯು ಬಳ್ಳಾರಿಗೆ ತಲುಪಿದ್ದು, ಕೇರಳದ SIT ಸ್ಥಳೀಯ ಬಳ್ಳಾರಿ ಜ್ಯುವೆಲರಿ ಮಾಲೀಕರ ಮನೆ ಮೇಲೆ ದಾಳಿ ನಡೆಸಿದೆ. 2019ರಲ್ಲಿ ನಾಪತ್ತೆಯಾಗಿದ್ದ ಸುಮಾರು ನಾಲ್ಕೂವರೆ ಕೆಜಿ ಚಿನ್ನದ ಪ್ರಕರಣ ಇದಾಗಿದೆ
01:38 PM (IST) Oct 25
ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕಿನ ಹೊನಗುಂಟಾ ಚಂದ್ರಲಾಂಬ ದೇವಾಲಯದಲ್ಲಿ ದುಷ್ಕರ್ಮಿಗಳು ದೇವಿಯ ಚಿನ್ನದ ತಾಳಿ ಮತ್ತು ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ. ಕಳ್ಳರ ಈ ಕೃತ್ಯವು ದೇವಾಲಯದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಶಹಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
01:11 PM (IST) Oct 25
ವಿಧಾನಸಭಾ ಸಭಾಪತಿ ಬಸವರಾಜ ಹೊರಟ್ಟಿ ಅವರು, ಡಿಸೆಂಬರ್ 8ಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಉತ್ತರ ಕರ್ನಾಟಕದ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ಗಂಭೀರವಾಗಿಲ್ಲ ರಾಜಕೀಯ ನಾಯಕರ ವೈಯಕ್ತಿಕ ನಿಂದನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
01:08 PM (IST) Oct 25
Bigg Boss Ashwini Gowda: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮ್ಯೂಟೆಂಟ್ ರಘು ಅವರು ಟಾಸ್ಕ್ ಗೆದ್ದು ಕ್ಯಾಪ್ಟನ್ ಆದರು. ಅಶ್ವಿನಿ ಗೌಡ ಅವರು ಕಳಪೆ ಪಟ್ಟ ಪಡೆದು ಜೈಲಿಗೆ ಹೋಗಿದ್ದಾರೆ. ಈಗ ಈ ಸಿಟ್ಟಿನಲ್ಲಿ ಅಶ್ವಿನಿ ಗೌಡ ಅವರು ಒಂದು ಕೆಲಸ ಮಾಡಿದ್ರಾ ಎಂಬ ಪ್ರಶ್ನೆ ಎದುರಾಗಿದೆ.
12:58 PM (IST) Oct 25
ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ದುರ್ಗಾಳ ಜೀವಕ್ಕೆ ಮಾಯಾ ಕುತ್ತು ತಂದಿದ್ದಾಳೆ. ಈ ನಡುವೆ, ಮಹಾನಟಿ ಖ್ಯಾತಿಯ ತನಿಷ್ಕಾ, ನಾಯಕನನ್ನು ಮದುವೆಯಾಗುವ ಪ್ರಸ್ತಾಪದೊಂದಿಗೆ ಪ್ರೋಮೋದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
12:38 PM (IST) Oct 25
Male nurse: ಸ್ವತಃ ನರ್ಸೇ ಆಸ್ಪತ್ರೆಗೆ ಭೇಟಿ ನೀಡಿದ ಪುರುಷ ವ್ಯಕ್ತಿಗೆ ಲೈಂ*ಗಿಕ ಕಿರುಕುಳ ನೀಡಿದ ಘಟನೆ ಸಿಂಗಾಪುರದಲ್ಲಿ ನಡೆದಿದ್ದುಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನರ್ಸ್‌ಗೆ ಈಗ ಜೈಲು ಶಿಕ್ಷೆಯಾಗಿದೆ. ಭಾರತೀಯ ಮೂಲದ 39 ವರ್ಷದ ಇಲಿಪಿ ಸಿವ ನಾಗು ಶಿಕ್ಷೆಗೊಳಗಾದ ವ್ಯಕ್ತಿ
12:33 PM (IST) Oct 25
ಸಚಿವ ಕೃಷ್ಣ ಬೈರೇಗೌಡರು, ಎರಡೂವರೆ ವರ್ಷಗಳ ನಂತರ ಸಂಪುಟ ಪುನರ್ರಚನೆ ಖಚಿತವಾಗಿದ್ದು, ಹೊರಗಿರುವ ಅರ್ಹ ಶಾಸಕರಿಗೆ ಅವಕಾಶ ನೀಡುವುದು ಇದರ ಉದ್ದೇಶ ಎಂದು ಹೇಳಿದ್ದಾರೆ. ಹೈಕಮಾಂಡ್ ಸೂಚಿಸಿದರೆ ತಾನು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧವಿದ್ದು, ಸಂಪುಟ ಪುನರ್ರಚನೆಗೂ ನಾಯಕತ್ವ ಬದಲಾವಣೆಗೂ ಸಂಬಂಧವಿಲ್ಲ ಎಂದರು
12:08 PM (IST) Oct 25
ನಟಿ ಮಲೈಕಾ ಅರೋರಾ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಮಲೈಕಾ ಅರೋರ ಅವರು ತಮ್ಮ ಡ್ಯಾನ್ಸ್, ಫಿಟ್‌ನೆಸ್‌ಗೆ ಹೆಸರುವಾಸಿಯಾಗಿದ್ದಾರೆ. ಅವರಿಂದು 50ನೇ ಜನ್ಮದಿನ ಆಚರಿಸುತ್ತಿರುವಾಗಿ ಮಲೈಕಾ ತಂಗಿ ಅಮೃತಾ ಅವರೇ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಹೇಳಿದ್ದಾರೆ.
12:03 PM (IST) Oct 25
Top up loan at low interest: ಟಾಪ್-ಅಪ್ ಹೋಮ್ ಲೋನ್ ಅಂದ್ರೆ ನಿಮ್ಮ ಈಗಿನ ಹೋಮ್ ಲೋನ್ ಮೇಲೆ ಹೆಚ್ಚುವರಿ ಹಣ ಪಡೆಯುವ ಒಂದು ಸೌಲಭ್ಯ. ಇದು ಪರ್ಸನಲ್ ಲೋನ್‌ಗಿಂತ ಕಡಿಮೆ ಬಡ್ಡಿದರದಲ್ಲಿ ಸಿಗೋದ್ರಿಂದ, ಮನೆ ರಿಪೇರಿ, ಮಕ್ಕಳ ಶಿಕ್ಷಣದಂತಹ ಹಲವು ಅಗತ್ಯಗಳಿಗೆ ಇದು ಉತ್ತಮ ಪರಿಹಾರವಾಗಿದೆ.
11:45 AM (IST) Oct 25
Prayagraj Journalist Brutally Murdered: ಉಪ್ರ ಪ್ರಯಾಗ್‌ರಾಜ್‌ನಲ್ಲಿ ಪತ್ರಕರ್ತ ಪಪ್ಪು ಸಿಂಗ್ ಅಲಿಯಾಸ್ ಲಕ್ಷ್ಮಿ ನಾರಾಯಣ್ ಸಿಂಗ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪ್ರಯಾಗ್‌ರಾಜ್‌ನ ಹೋಟೆಲ್ ಮುಂದೆ ಅವರ ಮೇಲೆ ಹಲ್ಲೆ ನಡೆದಿದೆ. ಈ ಘಟನೆಗೆ ಸಂಬಂಧ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
11:32 AM (IST) Oct 25
ಸಾಕಷ್ಟು ಕಡೆ ಸಂದರ್ಶನ ಕೊಟ್ಟಿರುವ ನಟಿ ರಶ್ಮಿಕಾ ಮಂದಣ್ಣ ಅವರು ಹೇಳಿರುವ ಮಾತೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. ಈ ಸಂದರ್ಶನದ ಕ್ಲಿಪ್ಪಿಂಗ್ ಸ್ವಲ್ಪ ಹಳೆಯದು. ಆ ವೇಳೆ ಛಾವಾ ಚಿತ್ರವು ಬಿಡುಗಡೆ ಆಗಿರಲಿಲ್ಲ. ಪುಷ್ಪಾ 2 ಚಿತ್ರವು ಸೂಪರ್ ಹಿಟ್ ಆಗಿತ್ತು. ಆಗ ಎನು ಹೇಳಿದ್ರು ರಶ್ಮಿಕಾ? ಸ್ಟೋರಿ ನೋಡಿ..
11:22 AM (IST) Oct 25
ಯತೀಂದ್ರ ಮಾತಿಗೆ ರಾಜಣ್ಣ ದನಿ; 'ಅವರೆಲ್ಲ ಮೇಧಾವಿಗಳಿದ್ದಾರೆ ನೋಟಿಸ್ ಕೊಡಲಿ ನೋಡೋಣ ಎಂದಿದ್ದು ಯಾರಿಗೆ?. ಸಿದ್ದರಾಮಯ್ಯನವರ ಸೈದ್ಧಾಂತಿಕ ಉತ್ತರಾಧಿಕಾರಿಯಾಗಲು ಸತೀಶ್ ಜಾರಕಿಹೊಳಿ ಸಮರ್ಥರು ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಸಮರ್ಥಿಸಿಕೊಂಡಿದ್ದಾರೆ.
11:00 AM (IST) Oct 25
devanahalli court seal theft: ದೇವನಹಳ್ಳಿ ಸಿವಿಲ್ ನ್ಯಾಯಾಲಯದಲ್ಲಿ, ಶಿರಸ್ತೇದಾರರು ಶೌಚಾಲಯಕ್ಕೆ ತೆರಳಿದ್ದಾಗ ಎರಡು ಪ್ರಮುಖ ಮೊಹರುಗಳನ್ನು ಕಳ್ಳತನ ಮಾಡಲಾಗಿದೆ. ಈ ಘಟನೆಯು ನ್ಯಾಯಾಲಯದ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
10:31 AM (IST) Oct 25
Drunk Chamarajanagar Police Officer Vandalizes Home in Rage: ಚಾಮರಾಜನಗರದಲ್ಲಿ ಮೀಸಲು ಪಡೆಯ ಸಬ್ ಇನ್ಸ್‌ಪೆಕ್ಟರ್ (RSI) ಒಬ್ಬರು ಕುಡಿದ ಮತ್ತಿನಲ್ಲಿ ಬೇರೆಯವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಮನೆಯ ಬಾಗಿಲು, ಕಿಟಕಿ ಒಡೆದು ಹಾಕಿ, ಮಹಿಳೆ, ಮಕ್ಕಳಲ್ಲಿ ಭಯ ಹುಟ್ಟಿಸಿದ ಅಧಿಕಾರಿ ಬಂಧನ
09:59 AM (IST) Oct 25
Bigg Boss Kannada Season 12: ಮೊನ್ನೆ ಮೊನ್ನೆ ಕಾವ್ಯ ಶೈವ ಹೇಳಿದರು ಎಂದು ಗಿಲ್ಲಿ ನಟ ಅವರು ಶೇವ್ ಮಾಡಿಕೊಂಡಿದ್ದರು. ಆದರೂ ಕೂಡ ಅವರು ಕೆಂಪೇಗೌಡ ಸ್ಟೈಲ್‌ನಲ್ಲಿ ಮೀಸೆ, ಗಡ್ಡ ಬಿಟ್ಟಿದ್ದರು. ಆದರೆ ಈಗ ಅವರಿಗೆ ಎಲ್ಲರೂ ಸೇರಿಕೊಂಡು ಮೋಸ ಮಾಡಿದ್ದಾರೆ. ಸದ್ಯ ವಾಹಿನಿಯು ಪ್ರೋಮೋ ರಿಲೀಸ್ ಮಾಡಿದೆ.
09:30 AM (IST) Oct 25
Paris museum robbery: ಪ್ಯಾರಿಸ್‌ನ ಪ್ರಸಿದ್ಧ ಲೌವ್ರೆ ಮ್ಯೂಸಿಯಂನಲ್ಲಿ, ನಿರ್ಮಾಣ ಕಾರ್ಮಿಕರಂತೆ ವೇಷ ಧರಿಸಿದ ಕಳ್ಳರು ಕೇವಲ 7 ನಿಮಿಷಗಳಲ್ಲಿ $102 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ 8 ಐತಿಹಾಸಿಕ ಆಭರಣಗಳನ್ನು ಕದ್ದಿದ್ದಾರೆ. ಕಳ್ಳತನದ ನಂತರ ಅವರು ಎಸ್ಕೇಪ್ ಆದ ವೀಡಿಯೋ ವೈರಲ್ ಆಗಿದೆ.
09:26 AM (IST) Oct 25
Bengaluru temple demolition attempt: ಬೆಂಗಳೂರಿನ ಹಲಸೂರು ಮೆಟ್ರೋ ನಿಲ್ದಾಣದ ಬಳಿಯ ಮೌನಾನಂದ ಗುರುಸ್ವಾಮಿಗಳ ಮಠವನ್ನು, ಆಸ್ತಿ ತಮ್ಮದೆಂದು ಹೇಳಿಕೊಂಡು ಅಪರಿಚಿತರ ಗುಂಪೊಂದು ಒಡೆಯಲು ಯತ್ನಿಸಿದೆ. ಭಕ್ತರ ವಿರೋಧ ಮತ್ತು ಪೊಲೀಸರ ಮಧ್ಯಪ್ರವೇಶದಿಂದ ಕಾಲ್ಕಿತ್ತ ಅಪರಿಚಿತರು.