Male nurse: ಸ್ವತಃ ನರ್ಸೇ ಆಸ್ಪತ್ರೆಗೆ ಭೇಟಿ ನೀಡಿದ ಪುರುಷ ವ್ಯಕ್ತಿಗೆ ಲೈಂ*ಗಿಕ ಕಿರುಕುಳ ನೀಡಿದ ಘಟನೆ ಸಿಂಗಾಪುರದಲ್ಲಿ ನಡೆದಿದ್ದುಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನರ್ಸ್‌ಗೆ ಈಗ ಜೈಲು ಶಿಕ್ಷೆಯಾಗಿದೆ. ಭಾರತೀಯ ಮೂಲದ 39 ವರ್ಷದ ಇಲಿಪಿ ಸಿವ ನಾಗು ಶಿಕ್ಷೆಗೊಳಗಾದ ವ್ಯಕ್ತಿ

ರೋಗಿಯ ಸಂಬಂಧಿಗೆ ಸ್ಟಾಪ್ ನರ್ಸ್‌ನಿಂದ ಲೈಂಗಿಕ ಕಿರುಕುಳ

ಸಿಂಗಾಪುರ: ಡೆಹ್ರಾಡೂನ್‌ನ ಆಸ್ಪತ್ರೆಯೊಂದರಲ್ಲಿ ರೋಗಿಯ ಸಂಬಂಧಿಯೋರ್ವ ನರ್ಸ್‌ಗೆ ಲೈಂ*ಗಿಕ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ ಘಟನೆ ಕೆಲ ದಿನಗಳ ಹಿಂದೆ ನಡೆದಿತ್ತು. ಆದರೆ ಈಗ ಸ್ವತಃ ನರ್ಸೇ ಆಸ್ಪತ್ರೆಗೆ ಭೇಟಿ ನೀಡಿದ ಪುರುಷ ವ್ಯಕ್ತಿಗೆ ಲೈಂ*ಗಿಕ ಕಿರುಕುಳ ನೀಡಿದ ಘಟನೆ ಸಿಂಗಾಪುರದಲ್ಲಿ ನಡೆದಿದ್ದುಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನರ್ಸ್‌ಗೆ ಈಗ ಜೈಲು ಶಿಕ್ಷೆಯಾಗಿದೆ. ಭಾರತೀಯ ಮೂಲದ 39 ವರ್ಷದ ಇಲಿಪಿ ಸಿವ ನಾಗು ಶಿಕ್ಷೆಗೊಳಗಾದ ವ್ಯಕ್ತಿ. ಈತ ಸಿಂಗಾಪುರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಸ್ಟಾಪ್‌ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾಗ ಆಸ್ಪತ್ರೆಗೆ ಬಂದ ವ್ಯಕ್ತಿಗೆ ಲೈಂ*ಗಿಕ ಕಿರುಕುಳ ನೀಡಿದ್ದಾನೆ. ಆತ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡ ನಂತರ ಆತನಿಗೆ ಒಂದು ವರ್ಷ, 2 ತಿಂಗಳು ಜೈಲು ಹಾಗೂ ಎರಡು ಬೆತ್ತದ ಏಟು ನೀಡುವಂತೆ ಆದೇಶಿಸಲಾಗಿದೆ.

ಭಾರತೀಯ ನರ್ಸ್‌ಗೆ ಸಿಂಗಾಪುರದಲ್ಲಿ ಜೈಲು

ಇಲಿಪಿ ಶಿವ ನಾಗು ಸಿಂಗಾಪುರದ ರಾಫೆಲ್ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ. ಈತ ಪುರುಷ ಸಂದರ್ಶಕನ ಮೇಲೆ ಲೈಂ*ಗಿಕ ದೌರ್ಜನ್ಯ ಎಸಗಿದ್ದು ಸಾಬೀತಾದ ನಂತರ ಆತನಿಗೆ ಶಿಕ್ಷೆಯಾಗಿದೆ. ಕಳೆದ ಜೂನ್‌ನಲ್ಲಿ ಈ ಘಟನೆ ನಡೆದಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಆತನನ್ನು ಸೇವೆಯಿಂದ ವಜಾ ಮಾಡಲಾಗಿದೆ. ಈತನಿಂದ ಲೈಂ*ಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತನ ಹೆಸರು, ವಯಸ್ಸನ್ನು ರಹಸ್ಯವಾಗಿ ಇಡಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಡೆಪ್ಯೂಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಯುಜೀನ್ ಫುವಾ ಮಾತನಾಡಿ ಜೂನ್ 18 ರಂದು ಸಂತ್ರಸ್ತ ವ್ಯಕ್ತಿ ನಾರ್ತ್ ಬ್ರಿಡ್ಜ್ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ತನ್ನ ಅಜ್ಜನನ್ನು ಭೇಟಿ ಮಾಡಲು ಬಂದಿದ್ದ ವೇಳೆ ಆಸ್ಪತ್ರೆಯಲ್ಲಿ ಸ್ಟಾಪ್‌ ನರ್ಸ್ ಆಗಿದ್ದ ಇಲಿಪಿ ಶಿವ ನಾಗು ಆ ವ್ಯಕ್ತಿ ಮೇಲೆ ಲೈಂ*ಗಿಕ ದೌರ್ಜನ್ಯ ಎಸಗಿದ್ದಾನೆ. ಸಂತ್ರಸ್ತನನ್ನು ಸೋಂಕು ಬಾರದಂತೆ ತಡೆಯುವ ನೆಪದಲ್ಲಿ ಆತನ ಕೈಗೆ ಸೋಪು ಹಚ್ಚಿ ಲೈಂ*ಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.

ಸಂಜೆ 7.30ರ ಸುಮಾರಿಗೆ ಸಂತ್ರಸ್ತ ರೋಗಿಯ ಶೌಚಾಲಯಕ್ಕೆ ಹೋಗಿದ್ದ. ಆತ ಶೌಚಾಲಯವನ್ನು ಬಳಸುತ್ತಿದ್ದಾಗಲೇ ಆರೋಪಿ ಇಲಿಪಿ ಬಗ್ಗಿ ನೋಡಿದ್ದಾನೆ. ಬಲಿಪಶುವನ್ನು ಸೋಂಕುರಹಿತ ಮಾಡುವ ನೆಪದಲ್ಲಿ, ಎಲಿಪೆ ಅವನ ಕೈಗೆ ಸೋಪು ಹಚ್ಚಿ ಲೈಂ*ಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಡಿಪಿಪಿ ಫುವಾ ಹೇಳಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಆತ ಶಾಕ್‌ಗೆ ಒಳಗಾಗಿದ್ದು, ಸ್ತಬ್ಧನಾಗಿದ್ದ. ನಂತರ ಆತ ತನ್ನ ಅಜ್ಜ ಇದ್ದ ಬೆಡ್ ಪಕ್ಕಕ್ಕೆ ಹಿಂದಿರುಗಿದ್ದ. ಮುಂದೆ ಏನಾಯಿತು ಎಂಬುದನ್ನು ನ್ಯಾಯಾಲಯದ ದಾಖಲೆಗಳು ಬಹಿರಂಗಪಡಿಸಿಲ್ಲ, ಆದರೆ ಪ್ರಕರಣವನ್ನು ಜೂನ್ 21 ರಂದು ವರದಿ ಮಾಡಲಾಗಿದೆ. ಎರಡು ದಿನಗಳ ನಂತರ ಎಲಿಪೆಯನ್ನು ಬಂಧಿಸಲಾಯಿತು. ಈ ಪ್ರಕರಣದ ತೀರ್ಪನ್ನು ಶುಕ್ರವಾರ ನೀಡಿದ ನ್ಯಾಯಾಲಯವೂ ಎಲಿಪೆಗೆ ಒಂದು ವರ್ಷ ಎರಡು ತಿಂಗಳು ಜೈಲು ಶಿಕ್ಷೆ ಮತ್ತು ಎರಡು ಬೆತ್ತದ ಏಟು ನೀಡಲು ಸೂಚಿಸಿದೆ.

ಇದನ್ನೂ ಓದಿ: 13 ವರ್ಷದ ಬಾಲಕಿಗೆ ಕನ್ಯತ್ವ ಪರೀಕ್ಷೆ ವರದಿ ನೀಡುವಂತೆ ಕೇಳಿದ ಮದ್ರಾಸಾ ಶಾಲೆ

ಇದನ್ನೂ ಓದಿ: ಕಟ್ಟಡ ಕೆಲಸಗಾರರ ಸೋಗಿನಲ್ಲಿ ಬಂದು ಕೋಟ್ಯಾಂತರ ಮೌಲ್ಯದ ವಸ್ತು ಕದ್ದು ಎಸ್ಕೇಪ್