- Home
- Entertainment
- TV Talk
- Naa Ninna Bidalaareಗೆ ನಟಿ ತನಿಷ್ಕಾ ಎಂಟ್ರಿ! ಶರತ್ಗೆ ಹೊಡೀತು ಲಾಟರಿ- ಇದೇನಿದು ಟ್ವಿಸ್ಟ್?
Naa Ninna Bidalaareಗೆ ನಟಿ ತನಿಷ್ಕಾ ಎಂಟ್ರಿ! ಶರತ್ಗೆ ಹೊಡೀತು ಲಾಟರಿ- ಇದೇನಿದು ಟ್ವಿಸ್ಟ್?
ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ದುರ್ಗಾಳ ಜೀವಕ್ಕೆ ಮಾಯಾ ಕುತ್ತು ತಂದಿದ್ದಾಳೆ. ಈ ನಡುವೆ, ಮಹಾನಟಿ ಖ್ಯಾತಿಯ ತನಿಷ್ಕಾ, ನಾಯಕನನ್ನು ಮದುವೆಯಾಗುವ ಪ್ರಸ್ತಾಪದೊಂದಿಗೆ ಪ್ರೋಮೋದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ನಾ ನಿನ್ನ ಬಿಡಲಾರೆ ಸೀರಿಯಲ್
ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ಗೆ ಈಗ ಟ್ವಿಸ್ಟ್ ಸಿಕ್ಕಿದೆ. ಹಿತಾಳ ಪ್ರಾಣ ಕಾಪಾಡಲು ದುರ್ಗಾ ತನ್ನ ಜೀವವನ್ನೇ ಅಪಾಯಕ್ಕೆ ತಳ್ಳಿದ್ದರೆ, ದುರ್ಗಾಳ ಜೀವ ತೆಗೆಯಲು ಮಾಯಾ ಕಾಯುತ್ತಿದ್ದಾಳೆ. ಹಾಸಿಗೆಯಲ್ಲಿ ಮಲಗಿದ್ದ ದುರ್ಗಾಳ ಗ್ಲುಕೋಸ್ ಪೈಪ್ಗೆ ವಿಷವನ್ನು ಬೆರೆಸಿದ್ದಾಳೆ. ಮುಂದೇನು ಎನ್ನುವ ಕಾತರ ಇದೆ.
ತನಿಷ್ಕಾ ಎಂಟ್ರಿ
ಒಂದೆಡೆ ದುರ್ಗಾ, ಇನ್ನೊಂದೆಡೆ ಮಾಯಾ... ಇವರ ನಡುವೆಯೇ ಈಗ ನಟಿ ತನಿಷ್ಕಾ ಎಂಟ್ರಿ ಆಗಿದೆ. ನಾನು ನಿಮ್ಮನ್ನು ಮದುವೆಯಾಗಲು ಬಯಸುತ್ತಿರುವೆ, ಹಿತಾಳ ಅಮ್ಮನಾಗುತ್ತೇನೆ ಎಂದು ತನಿಷ್ಕಾ ಎಂಟ್ರಿ ಕೊಟ್ಟಿದ್ದಾರೆ!
ಪ್ರೊಮೋ ರಿಲೀಸ್
ಇದರ ಪ್ರೊಮೋ ರಿಲೀಸ್ ಮಾಡಲಾಗಿದೆ. ಅಂದಹಾಗೆ ನಟಿ ತನಿಷ್ಕಾ ಮಹಾನಟಿಯಲ್ಲಿ ಬಿಜಿಯಾಗಿದ್ದಾರೆ. ಇದರ ಸೆಮಿ ಫೈನಲ್ ನಡೆಯುತ್ತಿದೆ. ಇದರ ಸೆಮಿ ಫೈನಲ್ ರೌಂಡ್ನಲ್ಲಿ ನಾ ನಿನ್ನ ಬಿಡಲಾರೆ ಸೀರಿಯಲ್ ನಟರ ಜೊತೆ ಒಂದು ಝಲಕ್ ಹಂಚಿಕೊಂಡಿದ್ದಾರೆ ತನಿಷ್ಕಾ. ಇದೇನು ರಿಯಲ್ ಸೀರಿಯಲ್ ಅಲ್ಲ. ನಾನು ನಿಮ್ಮ ಪತ್ನಿ ಆಗುವೆ ಎಂದು ಶರತ್ಗೆ ಹೇಳಿದಾಗ, ಶರತ್ ಗೆಟ್ ಔಟ್ ಎಂದಿದ್ದಾನೆ.
ಮಹಾನಟಿಯಲ್ಲಿ ಪರ್ಫಾಮೆನ್ಸ್
ಇನ್ನೋರ್ವ ನಟಿಯ ಎಂಟ್ರಿ ಕಾರಣ, ಶರತ್ಗೆ ಲಾಟರಿ ಹೊಡೆದಿದೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಅಂದಹಾಗೆ ತನಿಷ್ಕಾ ಮಹಾನಟಿಯ ಈ ಬಾರಿಯ ಸೀಸನ್ನಲ್ಲಿ ಧಮಾಕಾ ಪರ್ಫಾಮೆನ್ಸ್ ಕೊಡುತ್ತಿದ್ದು, ಸೆಮಿ ಫೈನಲ್ವರೆಗೆ ಬಂದಿದ್ದಾರೆ. ಇತ್ತೀಚೆಗೆ ಮಳೆಯಲ್ಲಿ ಡಾನ್ಸ್ ಮಾಡಲು ಹೋಗಿ ಕಾಲುಜಾರಿ ಬಿದ್ದರೂ ಪರ್ಫಾಮೆನ್ಸ್ ಬಿಡದ ಕಾರಣ ಸಕತ್ ಸುದ್ದಿಯಾಗಿದ್ದರು.
ಮಳೆಯಲ್ಲಿ ಡಾನ್ಸ್
ತನಿಷ್ಕಾ ಹಾಗೂ ಸ್ನೇಹಿತ್ ಮಳೆಯಲ್ಲಿ ಡಾನ್ಸ್ ಮಾಡುವ ವೇಳೆ ಸಾಕಷ್ಟು ಕಸರತ್ತು ಮಾಡಿದ್ದರು. ಆದ ಒಂದು ಬಾರಿ ತನಿಷ್ಕಾ ಜಾರಿ ಬಿದ್ರೆ ಇನ್ನೊಮ್ಮೆ ಸ್ನೇಹಿತ್ ಎಡವಿದ್ದಾರೆ. ಇದರ ವಿಡಿಯೋ ಪೋಸ್ಟ್ ಮಾಡಿದ್ದರು ಸ್ನೇಹಿತ್. ಮಳೆ ಸಾಂಗ್ ಶೂಟಿಂಗ್ ನಡೆಯುತ್ತಿದೆ. ಅದುತೆರೆ ಮೇಲೆ ಕಾಣುವಷ್ಟು ರೋಮ್ಯಾಂಟಿಕ್ ಅಲ್ಲ. ಜಾರಿ ಬೀಳೋದು, ಚಳಿ, ನಡುಕ ಎಲ್ಲ ಇಲ್ಲಿರುತ್ತೆ. ಆದ್ರೆ ನಾವು ನಟರು ನಮ್ಮ ಕೆಲಸವನ್ನು ಪ್ರೀತಿಸುವ ಕಾರಣಕ್ಕಾಗಿ ಅದನ್ನು ನೀಡಲು ಪ್ರಯತ್ನಿಸುತ್ತೇವೆ ಅಂತ ಶೀರ್ಷಿಕೆ ಹಾಕಿದ್ದರು.
ಫ್ಯಾನ್ಸ್ ಶಾಕ್
ತನಿಷ್ಕಾ ಮತ್ತು ಸ್ನೇಹಿತ್ ಅವರ ಶೂಟಿಂಗ್ ಕಷ್ಟ ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. ಆದರೆ ಸ್ನೇಹಿತ್ ಅವರು, ನಟಿ ತನಿಷ್ಕಾ ಹೆಸರು ಹೇಳಿಲ್ಲ ಎಂದು ಕೆಲವರು ಬೇಸರ ಕೂಡ ವ್ಯಕ್ತಪಡಿಸಿದ್ದು ಇದೆ. ಇಲ್ಲಿ ಸ್ನೇಹಿತ್ ಗಿಂತ ತನಿಷ್ಕಾ ಶ್ರಮ ಹೆಚ್ಚಿದೆ. ಆದ್ರೆ ಅದನ್ನು ಸ್ನೇಹಿತ್ ಎಲ್ಲೂ ಹೇಳಿಕೊಂಡಿಲ್ಲ ಅಂತ ಕಮೆಂಟ್ ಮಾಡಲಾಗಿತ್ತು.
ಭೇಷ್ ಎನ್ನಿಸಿಕೊಂಡ ನಟಿ
ಅದೇನೇ ಇದ್ದರೂ ಇದೀಗ ನಟಿ ತನಿಷ್ಕಾ ಯಾವ ಹೀರೋಯಿನ್ಗೂ ಕಡಿಮೆ ಇಲ್ಲದಂತೆ ನಾ ನಿನ್ನ ಬಿಡಲಾರೆ ಸೀರಿಯಲ್ ಶರತ್ ಮತ್ತು ಹಿತಾ ಜೊತೆ ಆ್ಯಕ್ಟ್ ಮಾಡಿ ಎಲ್ಲರಿಂದರೂ ಭೇಷ್ ಎನ್ನಿಸಿಕೊಂಡಿದ್ದಾರೆ.