- Home
- Entertainment
- TV Talk
- BBK 12: ವಿನಾಶಕಾಲೇ ವಿಪರೀತ ಬುದ್ಧಿ; ಟಾಯ್ಲೆಟ್‌ಗೆ ಟೂತ್‌ಬ್ರಶ್ ತಗೊಂಡೋಗಿ ಏನ್ ಮಾಡಿದ್ರು ಅಶ್ವಿನಿ ಗೌಡ?
BBK 12: ವಿನಾಶಕಾಲೇ ವಿಪರೀತ ಬುದ್ಧಿ; ಟಾಯ್ಲೆಟ್‌ಗೆ ಟೂತ್‌ಬ್ರಶ್ ತಗೊಂಡೋಗಿ ಏನ್ ಮಾಡಿದ್ರು ಅಶ್ವಿನಿ ಗೌಡ?
Bigg Boss Ashwini Gowda: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮ್ಯೂಟೆಂಟ್ ರಘು ಅವರು ಟಾಸ್ಕ್ ಗೆದ್ದು ಕ್ಯಾಪ್ಟನ್ ಆದರು. ಅಶ್ವಿನಿ ಗೌಡ ಅವರು ಕಳಪೆ ಪಟ್ಟ ಪಡೆದು ಜೈಲಿಗೆ ಹೋಗಿದ್ದಾರೆ. ಈಗ ಈ ಸಿಟ್ಟಿನಲ್ಲಿ ಅಶ್ವಿನಿ ಗೌಡ ಅವರು ಒಂದು ಕೆಲಸ ಮಾಡಿದ್ರಾ ಎಂಬ ಪ್ರಶ್ನೆ ಎದುರಾಗಿದೆ.

ರಘು ನೀಡಿದ ಕಾರಣ ಏನು?
“ನಾನು ಕಷ್ಟಪಟ್ಟು ಟಾಸ್ಕ್ ಆಡಿದೆ, ಒಂದು ಅವಕಾಶ ಸಿಕ್ಕಾಗ ನಾನು ಅದನ್ನು ತಗೊಂಡು ಕ್ಯಾಪ್ಟನ್‌ಶಿಪ್ ಆಟ ಆಡಿದೆ. ಅದನ್ನು ಸ್ವಾರ್ಥಿ ಅಂತ ಕರೆದರು. ಅಶ್ವಿನಿ ಗೌಡ ಅವರೇ ಅವರ ಜವಾಬ್ದಾರಿಯನ್ನು ತಗೊಳ್ಳಲಿಲ್ಲ” ಎಂದು ರಘು ಅವರು ಕಾರಣ ನೀಡಿ ಅಶ್ವಿನಿ ಗೌಡ ಅವರನ್ನು ಜೈಲಿಗೆ ಕಳಿಸಿದ್ದಾರೆ.
ಸೇಬು ಹಣ್ಣು ತಿಂದ್ರು
ಜೈಲಿಗೆ ಹೋಗುವ ಮುನ್ನ ಅಶ್ವಿನಿ ಗೌಡ ಅವರು ಸೇಬು ಹಣ್ಣು ತಿಂದರು, ಕಜ್ಜಾಯವನ್ನು ಕೂಡ ತಿಂದರು. ಕಳಪೆ ತಗೊಂಡವರು ರಾಗಿ ಗಂಜಿ ಬಿಟ್ಟು ಏನೂ ತಿನ್ನೋ ಹಾಗಿಲ್ಲ. ಅವರು ಕಟ್ ಮಾಡಿದ ತರಕಾರಿಗಳಿಂದಲೇ ಮನೆಯ ಅಡುಗೆ ರೆಡಿ ಆಗಬೇಕು. ಇಲ್ಲದಿದ್ದರೆ ಉಳಿದ ಸ್ಪರ್ಧಿಗಳಿಗೆ ಊಟ ಸಿಗೋದಿಲ್ಲ.
ಸಿಟ್ಟಿನಲ್ಲಿರೋ ಅಶ್ವಿನಿ ಗೌಡ
ತನ್ನನ್ನು ಜೈಲಿಗೆ ಹಾಕಿರೋದು ಅಶ್ವಿನಿ ಗೌಡ ಅವರಿಗೆ ಸಿಟ್ಟು ತರಿಸಿದೆ. ಹೀಗಾಗಿ ಅವರು ಪದೇ ಪದೇ ಟಾಯ್ಲೆಟ್‌ಗೆ ಹೋಗಬೇಕು, ಡೋರ್ ಒಪನ್ ಮಾಡಿ ಅಂತ ಹೇಳುತ್ತಲೇ ಇದ್ದರು. ಟಾಯ್ಲೆಟ್‌ಗೆ ಹೋದರೂ ಕೂಡ ಅವರು ತುಂಬ ಹೊತ್ತು ಅಲ್ಲೇ ಇರುತ್ತಿದ್ದರು, ಜೈಲಿಗೆ ಹೋಗಿರಲೇ ಇಲ್ಲ.
ತರಕಾರಿ ಕಟ್ ಮಾಡಲ್ಲ
ತರಕಾರಿ ಕಟ್ ಮಾಡಿಲ್ಲ ಅಂದರೆ ಅಡುಗೆ ಆಗೋದಿಲ್ಲ, ತರಕಾರಿ ಕಟ್ ಮಾಡಬೇಡಿ, ಟಾಯ್ಲೆಟ್‌ಗೆ ಹೋಗೋಕೆ ಬಾಗಿಲು ತೆಗೆದಿಲ್ಲ ಅಂದರೆ ಕಿಂಡಿಯಿಂದ ಹೊರಗಡೆ ಬನ್ನಿ ಅಂತ ಕಾಕ್ರೋಚ್ ಸುಧಿ ಅವರೇ ಅಶ್ವಿನಿ ಗೌಡಗೆ ಸಲಹೆ ಕೊಟ್ಟಿದ್ದರು.
ಟೂತ್‌ಬ್ರಶ್ ತಗೊಂಡು ಹೋದ್ರು
ಅಶ್ವಿನಿ ಗೌಡ ಅವರು ಟಾಯ್ಲೆಟ್ ಹೋಗುವಾಗ ಒಂದಿಷ್ಟು ಟೂತ್‌ಬ್ರಶ್ ತಗೊಂಡು ಟಾಯ್ಲೆಟ್ ಒಳಗಡೆ ಹೋಗಿದ್ದಾರೆ, ಅಲ್ಲಿ ಅವರು ಏನು ಮಾಡಿದರು ಎನ್ನೋದು ಗೊತ್ತಿಲ್ಲ. ಆ ಟೂತ್‌ಬ್ರಶ್ ಅಶ್ವಿನಿ ಅವರದ್ದೇನಾ? ಅಥವಾ ಬೇರೆಯವರದ್ದು ಸೇರಿದೆಯಾ ಎಂಬ ಪ್ರಶ್ನೆಯೂ ಇದೆ. ಆ ಟೂತ್‌ಬ್ರಶ್ ತಗೊಂಡು ಏನು ಮಾಡಿದರು ಎಂಬ ಪ್ರಶ್ನೆ ಎದ್ದು ಕಾಣುತ್ತಿದೆ. ಆಬಳಿಕ ಆ ಟೂತ್‌ಬ್ರಶ್ ತಗೊಂಡು ಒಳಗಡೆ ಇಟ್ಟರಾ? ಇಲ್ಲವಾ ಎನ್ನೋ ಪ್ರಶ್ನೆ ಕೂಡ ಇದೆ.
ಶ್ರಾವಣಿ ಸುಬ್ರಹ್ಮಣ್ಯ ಥರ ಮಾಡಿದ್ರಾ?
ಶ್ರಾವಣಿ ಸುಬ್ರಹ್ಮಣ್ಯ ಸಿನಿಮಾದಲ್ಲಿ ಶ್ರಾವಣಿ, ಸುಬ್ಬ ಟೂತ್‌ಬ್ರಶ್ ತಗೊಂಡು ಟಾಯ್ಲೆಟ್ ಕ್ಲೀನ್ ಮಾಡ್ತಾರೆ, ಇದು ರಿವೆಂಜ್‌ಗೋಸ್ಕರ ಮಾಡೋದು. ಅಶ್ವಿನಿ ಗೌಡ ಅವರೇ ಈ ಥರ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ.
ವಿನಾಶಕಾಲೇ ವಿಪರೀತ ಬುದ್ಧಿ
ಈ ವಿಶ್ಯುವಲ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ವಿನಾಶಕಾಲೇ ವಿಪರೀತ ಬುದ್ಧಿ ಎಂದು ಕೆಲವರು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿನಾಶಕಾಲೇ ವಿಪರೀತ ಬುದ್ಧಿ ಎಂದು ಹೇಳುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಶ್ವಿನಿ ಗೌಡ ಅವರ ವಿರುದ್ಧ ಭಾರೀ ಚರ್ಚೆ ಆಗುತ್ತಲೇ ಇದೆ.