- Home
- Entertainment
- TV Talk
- Bigg Bossಗೂ ಮುನ್ನ ಎಲ್ರಿಗೂ ನಲ್ಲಿಮೂಳೆ ತಿನಿಸಿದ್ದ ನಟರಾಜ್, 'ಗಿಲ್ಲಿ ನಟ' ಆಗಿದ್ದೇಗೆ? ಅನೇಕರಿಗೆ ಗೊತ್ತಿಲ್ಲದ ಕಥೆ
Bigg Bossಗೂ ಮುನ್ನ ಎಲ್ರಿಗೂ ನಲ್ಲಿಮೂಳೆ ತಿನಿಸಿದ್ದ ನಟರಾಜ್, 'ಗಿಲ್ಲಿ ನಟ' ಆಗಿದ್ದೇಗೆ? ಅನೇಕರಿಗೆ ಗೊತ್ತಿಲ್ಲದ ಕಥೆ
Bigg Boss Kannada 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಎಂದು ಬಂದಾಗ ಮನರಂಜನೆಯನ್ನು ನೀಡುತ್ತ, ಸ್ಪರ್ಧಿಗಳ ಕಾಲೆಳೆಯುತ್ತ, ತಪ್ಪಿದ್ದಲ್ಲಿ ತಪ್ಪು ಎಂದು ಹೇಳುತ್ತ ಗಿಲ್ಲಿ ನಟ ಅವರು ಅನೇಕರ ಫೇವರಿಟ್ ಆಗಿದ್ದಾರೆ. ಇವರ ಶಿಕ್ಷಣ, ಗಿಲ್ಲಿ ಎಂದು ಹೆಸರು ಬಂದಿದ್ದು ಮುಂತಾದ ವಿಚಾರಗಳಿವು.

ಗಿಲ್ಲಿ ನಟ ಎಲ್ಲಿಯವರು?
ಇಷ್ಟು ದೊಡ್ಡ ಮಟ್ಟದಲ್ಲಿ ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ನೀಡುತ್ತಿರುವವರ ನಿಜವಾದ ಹೆಸರು ನಟರಾಜ್. ಮಂಡ್ಯ ಮೂಲದವರು. ಸಾಕಷ್ಟು ಜನರು ಗಿಲ್ಲಿ ನಟ ಫಿನಾಲೆ ಸ್ಪರ್ಧಿ, ಟ್ರೋಫಿ ಗೆಲ್ತೀನಿ ಎಂದು ಹೇಳಿದ್ದರು.
ಗಿಲ್ಲಿ ನಟ ಹೆಸರು ಬಂದಿದ್ದು ಹೇಗೆ?
ನಟರಾಜ್ ಅವರು ಮಂಡ್ಯದಲ್ಲಿ ಗಿಲ್ಲಿ ಆಡುತ್ತಿದ್ದರು. ಹೀಗಾಗಿ ಗಿಲ್ಲಿ ಎಂದು ಕರೆಯುತ್ತಿದ್ದರಂತೆ. ಇದೀಗ ಕರ್ನಾಟಕದ ಮನೆ ಮನೆ ಮಾತಾಗಿದೆ.
ಶಿಕ್ಷಣ ಏನು?
ಗಿಲ್ಲಿ ನಟ ಅವರು ಹತ್ತನೇ ತರಗತಿ ಓದಿದ ಬಳಿಕ ಐಟಿಐ ಓದಿದ್ದರು. ಆಮೇಲೆ ಅವರು ಓದಲಿಲ್ಲ.
ನಲ್ಲಿಮೂಳೆ ವಿಡಿಯೋ ನೆನಪಿದ್ಯಾ?
ನಲ್ಲಿಮೂಳೆ ಸೇರಿದಂತೆ ಕೆಲ ವೆಬ್ ಸಿರೀಸ್‌ಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೆ ಒಂದೊಂದು ಕಾನ್ಸೆಪ್ಟ್ ಇಟ್ಟುಕೊಂಡು ಸ್ಕಿಟ್ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ರು
ಕಾಮಿಡಿ ಕಿಲಾಡಿಗಳು, ಭರ್ಜರಿ ಬ್ಯಾಚುಲರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಗಿಲ್ಲಿ ನಟ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಇವರ ಪ್ರಾಪರ್ಟಿ ಕಾಮಿಡಿ ಭಾರೀ ಸೌಂಡ್ ಮಾಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

