devanahalli court seal theft: ದೇವನಹಳ್ಳಿ ಸಿವಿಲ್ ನ್ಯಾಯಾಲಯದಲ್ಲಿ, ಶಿರಸ್ತೇದಾರರು ಶೌಚಾಲಯಕ್ಕೆ ತೆರಳಿದ್ದಾಗ ಎರಡು ಪ್ರಮುಖ ಮೊಹರುಗಳನ್ನು ಕಳ್ಳತನ ಮಾಡಲಾಗಿದೆ. ಈ ಘಟನೆಯು ನ್ಯಾಯಾಲಯದ ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ದೇವನಹಳ್ಳಿ (ಅ.2) : ಇತ್ತೀಚೆಗೆ ಪಟ್ಟಣದಲ್ಲಿರುವ ಸಿವಿಲ್ ನ್ಯಾಯಾಲಯದ ಕೆಲಸದ ವೇಳೆ ಅಪರಿಚಿತ ವ್ಯಕ್ತಿಗಳು ಕಚೇರಿಗೆ ನುಗ್ಗಿ ದೈನಂದಿನ ಪತ್ರ ವ್ಯವಹಾರಗಳಿಗೆ ಉಪಯೋಗಿಸುವ ಎರಡು ಪ್ರಮುಖ ಮೊಹರು (ಸೀಲ್) ಕಳ್ಳತನ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಶಿರಸ್ತೇದಾರ ಶೌಚಾಲಯಕ್ಕೆ ತೆರಳಿದ್ದ ವೇಳೆ ಕಳ್ಳತನ:

ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದ ಹಿರಿಯ ಶಿರಸ್ತೇದಾರ್ ಸುದರ್ಶನ್ ದೂರು ದಾಖಲಿಸಿದ್ದಾರೆ. ದಿನಾಂಕ ಅಕ್ಟೋಬರ್ 17ರ ಸಂಜೆ 4:30ರಿಂದ 4:40ರ ನಡುವೆ ಈ ಘಟನೆ ಸಂಭವಿಸಿದೆ. ಶಿರಸ್ತೆದಾರರು ಶೌಚಾಲಯಕ್ಕೆ ತೆರಳಿದ್ದ ವೇಳೆ ಬೆಂಚಿನ ಡ್ರಾಯರ್‌ನಲ್ಲಿ ಇಟ್ಟಿದ್ದ ಸೀಲ್ ಅನ್ನು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನ್ಯಾಯಾಲಯದೊಳ್ಳಗೂ ಕಳ್ಳರ ಕಾಟ

ಈ ಘಟನೆಯು ನ್ಯಾಯಾಲಯದ ದಾಖಲೆಗಳ ಭದ್ರತೆಗೆ ಗಂಭೀರ ಪ್ರಶ್ನೆ ಎಬ್ಬಿಸಿದೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಿದ್ದಾರೆ. 'ಇದು ಯೋಜಿತ ಕೃತ್ಯವಾಗಿರಬಹುದು. ಮೊಹರುಗಳನ್ನು ದುರುಪಯೋಗಪಡಿಸಿಕೊಂಡು ನಕಲಿ ದಾಖಲೆ, ಆದೇಶ ರಚಿಸುವ ಇನ್ನಿತರ ವಂಚನೆ ನಡೆಸುವ ಸಾಧ್ಯತೆ ಇದೆ. ನ್ಯಾಯಾಲಯದ ಭದ್ರತಾ ವ್ಯವಸ್ಥೆಯಲ್ಲಿ ದೊಡ್ಡ ದೊಡ್ಡ ಲೋಪ ಕಂಡುಬಂದಿದೆ.