- Home
- Entertainment
- TV Talk
- ಕಾವ್ಯಾ ಶೈವ ಸಿಕ್ಮೇಲೆ ಗಿಲ್ಲಿ ನಟ ಸಕತ್ ಸ್ಟೈಲಿಷ್! Bigg Boss ಜೋಡಿಯ ಫೋಟೋ ನೋಡಿ ಫ್ಯಾನ್ಸ್ ಫುಲ್ ಖುಷ್
ಕಾವ್ಯಾ ಶೈವ ಸಿಕ್ಮೇಲೆ ಗಿಲ್ಲಿ ನಟ ಸಕತ್ ಸ್ಟೈಲಿಷ್! Bigg Boss ಜೋಡಿಯ ಫೋಟೋ ನೋಡಿ ಫ್ಯಾನ್ಸ್ ಫುಲ್ ಖುಷ್
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಬಾಂಧವ್ಯ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳು ತಮ್ಮ ಕಲ್ಪನೆಯಲ್ಲಿ ಇವರಿಬ್ಬರ ಸ್ಟೈಲಿಶ್ ಎಐ ಫೋಟೋಗಳನ್ನು ರಚಿಸಿ ವೈರಲ್ ಮಾಡಿದ್ದಾರೆ. ಕಾವ್ಯಾ ಮಾತಿನಂತೆ ಗಿಲ್ಲಿ ತಮ್ಮ ಗಡ್ಡದ ಶೈಲಿಯನ್ನು ಬದಲಾಯಿಸಲು ಮುಂದಾಗಿರುವುದೂ ನಡೆದಿದೆ.

ಕಾವ್ಯಾ-ಗಿಲ್ಲಿ ಬಾಂಡಿಂಗ್
ಬಿಗ್ ಬಾಸ್ (Bigg Boss 12) ನಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಬಾಂಡಿಂಗ್ ಸಕತ್ ಫೇಮಸ್ ಆಗಿದೆ. ಇವರಿಬ್ಬರ ಜೋಡಿಯನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ ಕೂಡ. ಟಾಸ್ಕ್‌ನ ಹೊರತಾಗಿ ಇಬ್ಬರೂ ಕಾಮಿಡಿ ಮಾಡುವುದು, ಮಾತನಾಡುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಯಾರಾದರೂ ಕಾವ್ಯ ಅಥವಾ ಗಿಲ್ಲಿಯ ಬಗ್ಗೆ ಮಾತನಾಡಿದರೆ, ಅವರೊಂದಿಗೆ ಜಗಳ ಮಾಡಿದಾಗಲೂ ಒಬ್ಬರಿಗೊಬ್ಬರು ವಹಿಸಿಕೊಂಡು ಮಾತನಾಡುವುದಕ್ಕೆ ಬರುತ್ತಾರೆ.
ಎಐ ಫೋಟೋಗಳು
ಇಂತಿಪ್ಪ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಒಟ್ಟಿಗೇ ಜೋಡಿಯಾಗಿರುವ ಫೋಟೋಗಳು ಸಕತ್ ವೈರಲ್ ಆಗ್ತಿವೆ. ಕಾವ್ಯಾ ಸಿಕ್ಮೇಲೆ ಗಿಲ್ಲಿ ಫುಲ್ ಸ್ಟೈಲಿಷ್ ಆಗಿ ಹೋಗಿದ್ದಾರೆ ಎಂದು ಅಭಿಮಾನಿಗಳು ಹೇಳ್ತಿದ್ದಾರೆ. ಅಂದಹಾಗೆ ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಇದು ಕೃತಕ ಬುದ್ಧಿಮತ್ತೆ (AI) ಫೋಟೋಗಳು.
ಫ್ಯಾನ್ಸ್ ರೆಕ್ಕೆ ಪುಕ್ಕ
ಅಭಿಮಾನಿಗಳು ತಮ್ಮ ಕಲ್ಪನೆಗೆ ರೆಕ್ಕೆ ಪುಕ್ಕ ಹಚ್ಚಿ ಗಿಲ್ಲಿ ಮತ್ತು ಕಾವ್ಯಾರನ್ನು ಎಐ ಮೂಲಕ ಈ ರೀತಿಯಾಗಿ ಚಿತ್ರಿಸಿದ್ದಾರೆ. ಇದರಲ್ಲಿ ಇಬ್ಬರೂ ಸಕತ್ ಸ್ಮಾರ್ಟ್ ಆಗಿ ಕಾಣಿಸುತ್ತಿದ್ದಾರೆ.
ಕ್ಲೀನ್ ಶೇವ್
ಇದಾಗಲೇ, ಬಿಗ್ ಬಾಸ್ನಲ್ಲಿ ಕಾವ್ಯಾ, ಗಿಲ್ಲಿ ನಟನಿಗೆ ನೀನು ಕ್ಲೀನ್ ಶೇವ್ ಮಾಡಿಸಿಕೋ ಚೆನ್ನಾಗಿ ಕಾಣಿಸ್ತೀಯ ಎಂದು ಹೇಳುತ್ತಾರೆ. ಇದಕ್ಕೆ ಹೋಗೇ ಮೂದೇವಿ ಎಂದಿದ್ದ ಗಿಲ್ಲಿ ಇದೀಗ ಕಾವ್ಯಾಳ ಮಾತನ್ನು ನಿಜ ಮಾಡಲು ಮುಂದಾಗಿದ್ದನ್ನು ನೋಡಬಹುದಾಗಿದೆ.
ಗಡ್ಡಕ್ಕೆ ಶೇಪ್
ಇದಕ್ಕೆ ಮತ್ತೊಬ್ಬ ಹಾಸ್ಯ ಕಲಾವಿದ ಚಂದ್ರ ಪ್ರಭ ಅವರು ತಮ್ಮ ಟ್ರಿಮ್ಮರ್ ತೆಗೆದುಕೊಂಡು ಗಿಲ್ಲಿಗೆ ಕ್ಲೀನ್ ಶೇವ್ ಮಾಡುವ ಬದಲು ಗಡ್ಡಕ್ಕೆ ಒಂದು ಶೇಪ್ ಕೊಡುತ್ತಾರೆ. ಇದು ಸುದೀಪ್ ಅವರು ಕೆಂಪೇಗೌಡ ಸಿನಿಮಾದಲ್ಲಿ ಬಿಟ್ಟಿರುವ ಗಡ್ಡದ ರೀತಿಯಲ್ಲಿ ಗಡ್ಡವನ್ನು ಬಿಡುತ್ತಾರೆ. ಇದರ ನಡುವೆಯೇ ಈಗ ಈ ಫೋಟೋಗಳು ವೈರಲ್ ಆಗಿವೆ.