Paris museum robbery: ಪ್ಯಾರಿಸ್‌ನ ಪ್ರಸಿದ್ಧ ಲೌವ್ರೆ ಮ್ಯೂಸಿಯಂನಲ್ಲಿ, ನಿರ್ಮಾಣ ಕಾರ್ಮಿಕರಂತೆ ವೇಷ ಧರಿಸಿದ ಕಳ್ಳರು ಕೇವಲ 7 ನಿಮಿಷಗಳಲ್ಲಿ $102 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ 8 ಐತಿಹಾಸಿಕ ಆಭರಣಗಳನ್ನು ಕದ್ದಿದ್ದಾರೆ. ಕಳ್ಳತನದ ನಂತರ ಅವರು ಎಸ್ಕೇಪ್ ಆದ ವೀಡಿಯೋ ವೈರಲ್ ಆಗಿದೆ.
ಸರಕು ಸಾಗಣೆ ಲಿಫ್ಟ್ ಬಳಸಿ ಮಹಾ ದರೋಡೆ
ಪ್ಯಾರೀಸ್: ಸರಕು ಸಾಗಣೆ ಲಿಫ್ಟ್ ಅಥವಾ ಹೈಡ್ರಾಲಿಕ್ ಲಿಫ್ಟ್ ಬಳಸಿ ಕಳ್ಳರು ಎಸ್ಕೇಪ್ ಆಗಿದ್ದು, ಘಟನೆ ನಡೆದ ಒಂದು ವಾರದ ನಂತರ ಕಳ್ಳರು ಈ ಸರಕು ಸಾಗಣೆ ಲಿಫ್ಟ್ ಬಳಸಿ ಎಸ್ಕೇಪ್ ಆಗ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ. ಪ್ಯಾರಿಸ್‌ನಲ್ಲಿ ಜಗತ್ತಿನ ಅತೀ ಹೆಚ್ಚು ಜನರು ಭೇಟಿ ನೀಡುವ ಮ್ಯೂಸಿಯಂಗೆ ನುಗ್ಗಿದ ಕಳ್ಳರು ಅಲ್ಲಿನ 8ಕ್ಕೂ ಹೆಚ್ಚು ಅಮೂಲ್ಯ ವಸ್ತುಗಳನ್ನು ಕದ್ದು ಹೈಡ್ರಾಲಿಕ್ ಏಣಿ ಬಳಸಿ ಎಸ್ಕೇಪ್ ಆಗಿದ್ದರು. ಘಟನೆಯ ವೀಡಿಯೋ ಈಗ ವೈರಲ್ ಆಗಿದ್ದು, ವೀಡಿಯೋದಲ್ಲಿ ದರೋಡೆಕೋರರು ಕಟ್ಟಡ ನಿರ್ಮಾಣ ಕೆಲಸಗಾರರಂತೆ ವೇಷ ಧರಿಸಿ ಕಟ್ಟಡ ನಿರ್ಮಾಣಕ್ಕೆ ಬಳಸುವ ಸರಕು ಸಾಗಣೆ ಏಣಿಯ ಮೂಲಕ ಕೆಳಗ ಬರುವುದನ್ನು ನೋಡಬಹುದು. ಪ್ಯಾರಿಸ್‌ನ ಐತಿಹಾಸಿಕ ಲೌರೆ ಮ್ಯೂಸಿಯಂನಲ್ಲಿ ಈ ಘಟನೆ ನಡೆದಿದೆ. ಪ್ಯಾರಿಸ್‌ನ ಈ ಲೌರೆ ಮ್ಯೂಸಿಯಂ ಕೆಲವು ಮಾಸ್ಟರ್ ಪೀಸ್ ಕಾಲಕೃತಿಗಳು ಎನಿಸಿರುವ ಮೋನಾಲೀಸಾದಂತಹ ಕಲಾಕೃತಿಗಳ ನೆಲೆಯಾಗಿದೆ.
ಮೋನಾಲೀಸಾ ಪ್ರತಿಮೆ ಇದ್ದ ಪ್ಯಾರಿಸ್ ಮ್ಯೂಸಿಯಂನಲ್ಲಿ ಕಳ್ಳತನ
ಕೇವಲ 7 ನಿಮಿಷದಲ್ಲಿ ಈ ಕಳ್ಳತನ ನಡೆದಿದ್ದು, ಕಳ್ಳರು ಗ್ಯಾಲರಿ ಡಿ'ಅಪೊಲೊನ್ ಅಥವಾ ಅಪೊಲೊ ಗ್ಯಾಲರಿಯಿಂದ ಎಂಟು ಅಮೂಲ್ಯ ಆಭರಣಗಳನ್ನು ಕದ್ದಿದ್ದಾರೆ. ಘಟನೆಯ ನಂತರ ಭಾನುವಾರ ಈ ಮ್ಯೂಸಿಯಂ ಅನ್ನು ಭಾನುವಾರ ಮುಚ್ಚಲಾಗಿತ್ತು. ಇಲ್ಲಿಂದ ಕಳ್ಳರು ಕದ್ದ ಆಭರಣಗಳ ಬೆಲೆ $102 ಮಿಲಿಯನ್‌ಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಆದರೆ ಅದು ಅವುಗಳ ಐತಿಹಾಸಿಕ ಮೌಲ್ಯಕ್ಕೆ ಸರಿಸಾಟಿ ಅಲ್ಲ, ಅವುಗಳ ವಿಶಿಷ್ಟತೆಯಿಂದಾಗಿ ಅವುಗಳನ್ನು ಮಾರಾಟ ಮಾಡಲಾಗದವು ಎಂದು ಪರಿಗಣಿಸಲಾಗಿತ್ತು ಎಂದು ವರದಿಯಾಗಿದೆ.
ಇದಕ್ಕೂ ಮೊದಲು ವೈರಲ್ ಆದ ವೀಡಿಯೋದಲ್ಲಿ ಈ ಮ್ಯೂಸಿಯಂಗೆ ಭೇಟಿ ನೀಡುವವರು ಅಲ್ಲಿದ್ದಾಗಲೇ ದರೋಡೆಕೋರರಲ್ಲಿ ಒಬ್ಬ ಗಾಜಿನ ಗ್ಯಾಲರಿ ಪೆಟ್ಟಿಗೆಯನ್ನು ಕತ್ತರಿಸುತ್ತಿರುವುದು ಸೆರೆಯಾಗಿತ್ತು. ಎರಡು ಗಾಜಿನ ಪೆಟ್ಟಿಗೆಗಳ ಹಿಂದೆ ಫ್ರೆಂಚ್ ರಾಜಮನೆತನದ ಒಡೆತನದ 19 ನೇ ಶತಮಾನದ ಆಭರಣಗಳಿದ್ದವು. ಇತ್ತೀಚಿನ ವೈರಲ್ ವೀಡಿಯೋದಲ್ಲಿ ಕಳ್ಳರು ಕದ್ದ ವಸ್ತುಗಳೊಂದಿಗೆ ವಸ್ತುಸಂಗ್ರಹಾಲಯದಿಂದ ತಪ್ಪಿಸಿಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ. ಕದ್ದ ಆಭರಣಗಳಲ್ಲಿ ಕಿರೀಟಗಳು, ಕಂಠಿಹಾರಗಳು, ಕಿವಿಯೋಲೆಗಳು ಮತ್ತು ಬ್ರೂಚ್‌ಗಳು ಸೇರಿವೆ. ಈ ಐತಿಹಾಸಿಕ ವಸ್ತುಗಳಲ್ಲಿ ಸಾವಿರಾರು ವಜ್ರಗಳು ಮತ್ತು ಇತರ ಅಮೂಲ್ಯ ರತ್ನಗಳಿವೆ.
ಒಂದು ಕಾಲದಲ್ಲಿ ಸಾಮ್ರಾಜ್ಞಿ ಯುಜೆನಿಗೆ ಸೇರಿದ್ದ ಕಿರೀಟ ಮತ್ತು ಬ್ರೂಚ್, ಸಾಮ್ರಾಜ್ಞಿ ಮೇರಿ ಲೂಯಿಸ್ ಅವರ ಪಚ್ಚೆ ನೆಕ್ಲೇಸ್ ಮತ್ತು ಕಿವಿಯೋಲೆಗಳು, ರಾಣಿ ಮೇರಿ ಅಮೆಲಿ ಮತ್ತು ರಾಣಿ ಹಾರ್ಟೆನ್ಸ್ ಅವರು ಹೊಂದಿದ್ದ ನೀಲಮಣಿ ಸೆಟ್‌ಗಳಿದ್ದ ಕಿರೀಟ, ನೆಕ್ಲೇಸ್ ಮತ್ತು ಒಂದು ಕಿವಿಯೋಲೆ ಮತ್ತು ರಿಲಿಕ್ವರಿ ಬ್ರೂಚ್ ಎಂದು ಕರೆಯಲ್ಪಡುವ ಬ್ರೂಚ್ ಅನ್ನು ಕಳವು ಮಾಡಲಾಗಿದೆ ಎಂದು ಫ್ರೆಂಚ್ ಸಂಸ್ಕೃತಿ ಸಚಿವಾಲಯ ತಿಳಿಸಿದೆ. ಲೌವ್ರೆ ವಿಶ್ವದಲ್ಲೇ ಅತಿ ಹೆಚ್ಚು ಜನ ಭೇಟಿ ನೀಡುವ ವಸ್ತುಸಂಗ್ರಹಾಲಯವಾಗಿದ್ದು, ದಿನಕ್ಕೆ 30,000 ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಪ್ರಾಚೀನ ವಸ್ತುಗಳು, ಶಿಲ್ಪಗಳು ಮತ್ತು ವರ್ಣಚಿತ್ರಗಳನ್ನು ಒಳಗೊಂಡಂತೆ 33,000 ಕ್ಕೂ ಹೆಚ್ಚು ಕಲಾಕೃತಿಗಳನ್ನು ಹೊಂದಿದೆ. ವೀನಸ್ ಡಿ ಮಿಲೋ ಮತ್ತು ವಿಂಗ್ಡ್ ವಿಕ್ಟರಿ ಆಫ್ ಸಮೋತ್ರೇಸ್ ಜೊತೆಗೆ ವಿಶ್ವದ ಅತ್ಯಂತ ಪ್ರಸಿದ್ಧ ಕಲಾಕೃತಿಯಾದ ಮೋನಾ ಲಿಸಾ ಇಲ್ಲಿ ಪ್ರಮುಖ ಆಕರ್ಷಣೆಯಾಗಿದೆ.
ಕಳ್ಳರು ಬಳಸಿದ ಬಳಿಕ ಸಖತ್ ಫೇಮಸ್ ಆಗ್ತಿದೆ ಜರ್ಮನ್ ನಿರ್ಮಿತ ಹೈಡ್ರಾಲಿಕ್ ಲಿಫ್ಟ್
ಹೌದು ಪ್ಯಾರಿಸ್‌ನಲ್ಲಿ ಅಷ್ಟು ದೊಡ್ಡ ಇತಿಹಾಸ ಪ್ರಸಿದ್ಧ ಲೌವ್ರೇ ಮ್ಯೂಸಿಯಂನಲ್ಲಿ ಕಳ್ಳತನ ಮಾಡಿದ ನಂತರ ಕಳ್ಳರು ಬಳಸಿದ ಈ ಹೈಡ್ರಾಲಿಕ್ ಲಿಫ್ಟ್ ಅಥವಾ ಸರಕು ಸಾಗಣೆ ಲಿಫ್ಟ್ ಬಹಳಷ್ಟು ಫೇಮಸ್ ಆಗ್ತಿದೆ ಎಂದು ವರದಿಯಾಗಿದೆ. ಲೌವ್ರೆಯಲ್ಲಿ ಮಿಂಚಿನ ವೇಗದಲ್ಲಿ ಹಗಲು ಹೊತ್ತಿನಲ್ಲೇ ಕಳ್ಳರು ಕಳ್ಳತನಕ್ಕೆ ಬಳಸಿದ ಜರ್ಮನ್ ನಿರ್ಮಿತ ಸರಕು ಲಿಫ್ಟ್‌ನ ಫೋಟೋಗಳು ವೈರಲ್ ಆಗಿವೆ. ಮತ್ತು ಅದರ ತಯಾರಕರು ಈಗ ಅನಿರೀಕ್ಷಿತ ಪ್ರಚಾರದಿಂದ ಒಳಗೊಳಗೆ ಖುಷಿಪಡುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಲಿಫ್ಟ್ ತಯಾರಿಸಿದ ಬಾಕರ್ ಮಸ್ಚಿನೆನ್‌ವರ್ಕ್ ಜಿಎಂಬಿಹೆಚ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮೂರನೇ ತಲೆಮಾರಿನ ಮಾಲೀಕನಾದ ಅಲೆಕ್ಸಾಂಡರ್ ಬಾಕರ್ ಅವರು ಮತ್ತು ಅವರ ಪತ್ನಿ ಆನ್‌ಲೈನ್‌ನಲ್ಲಿ ಘಟನೆಯ ವೀಡಿಯೋ, ಫೋಟೋಗಳನ್ನು ನೋಡಿದಾಗ ನಮ್ಮ ಲಿಫ್ಟ್ ಅನ್ನು ಈ ದರೋಡೆಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಆಘಾತಕ್ಕೊಳಗಾಗಿದ್ದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ: ಸರ್ಕಾರಿ ಕೆಲಸವಿದ್ದರೂ ಮೂನ್ ಲೈಟಿಂಗ್ ಮಾಡಿದ ಭಾರತೀಯನಿಗೆ ಅಮೆರಿಕಾದಲ್ಲಿ 15 ವರ್ಷ ಜೈಲು