- Home
- Entertainment
- TV Talk
- BBK 12: ಹೆಣ್ಣಿನ ಮೇಲೆ ಕೈ ಹಾಕಿದ್ರೆ ಕೋಪ ಬರತ್ತೆ, ಗಂಡಿನ ಮೀಸೆ ಮುಟ್ಟಿದ್ರೆ ಓಕೆನಾ? ರೊಚ್ಚಿಗೆದ್ದ ವೀಕ್ಷಕರು
BBK 12: ಹೆಣ್ಣಿನ ಮೇಲೆ ಕೈ ಹಾಕಿದ್ರೆ ಕೋಪ ಬರತ್ತೆ, ಗಂಡಿನ ಮೀಸೆ ಮುಟ್ಟಿದ್ರೆ ಓಕೆನಾ? ರೊಚ್ಚಿಗೆದ್ದ ವೀಕ್ಷಕರು
Bigg Boss Kannada Season 12: ಮೊನ್ನೆ ಮೊನ್ನೆ ಕಾವ್ಯ ಶೈವ ಹೇಳಿದರು ಎಂದು ಗಿಲ್ಲಿ ನಟ ಅವರು ಶೇವ್ ಮಾಡಿಕೊಂಡಿದ್ದರು. ಆದರೂ ಕೂಡ ಅವರು ಕೆಂಪೇಗೌಡ ಸ್ಟೈಲ್‌ನಲ್ಲಿ ಮೀಸೆ, ಗಡ್ಡ ಬಿಟ್ಟಿದ್ದರು. ಆದರೆ ಈಗ ಅವರಿಗೆ ಎಲ್ಲರೂ ಸೇರಿಕೊಂಡು ಮೋಸ ಮಾಡಿದ್ದಾರೆ. ಸದ್ಯ ವಾಹಿನಿಯು ಪ್ರೋಮೋ ರಿಲೀಸ್ ಮಾಡಿದೆ.

ಚೈನ್ ಬೇಕಂತೆ
ಚೈನ್ ಕೊಡು ಎಂದು ರಘು ಹೇಳುತ್ತಲೇ ಇದ್ದರು. ಆದರೆ ಗಿಲ್ಲಿ ನಟ ಮಾತ್ರ ಕೊಟ್ಟಿರಲಿಲ್ಲ. “ಹುಡುಕ್ತೀನಿ” ಎಂದಲೇ ಗಿಲ್ಲಿ ನಟ ಕಾರಣ ಕೊಡುತ್ತಿದ್ದರು. ಈಗ ಅವರಿಗೆ ಶಿಕ್ಷೆ ಸಿಕ್ಕಿದೆ.
ಬಾತ್‌ರೂಮ್ ಏರಿಯಾಕ್ಕೆ ಬಂದ್ರು
ಗಿಲ್ಲಿ ನಟ ಅವರನ್ನು ಹುಡುಗರೆಲ್ಲರೂ ಸೇರಿಕೊಂಡು ಬಾತ್‌ರೂಮ್ ಏರಿಯಾಕ್ಕೆ ಕರೆದುಕೊಂಡು ಬಂದಿದ್ದಾರೆ. ಗಿಲ್ಲಿ ನಟ ಬೇಡ ಎಂದರೂ ಕೂಡ ಅವರು ಕೇಳದೆ, ಶೇವ್ ಮಾಡಿದ್ದಾರೆ. ಆ ಬಳಿಕ ಅರ್ಧ ಮೀಸೆಯನ್ನು ಹಾಗೆ ಬಿಟ್ಟಿದ್ದಾರೆ.
ಕ್ಲೀನ್ ಶೇವ್ ಮಾಡಬೇಕು
ಗಿಲ್ಲಿ ನಟ ಕ್ಲೀನ್ ಶೇವ್ ಮಾಡಬೇಕು ಎನ್ನೋದು ಕಾವ್ಯ ಶೈವ ಆಸೆಯಾಗಿತ್ತು. ಈಗ ಗಿಲ್ಲಿ ನಟರಿಗೆ ಕ್ಲೀನ್ ಶೇವ್ ಆದ ಹಾಗೆ ಆಗಿದೆ. ಈಗ ಗಿಲ್ಲಿ ನಟ ಸೈಲೆಂಟ್ ಆಗಿ ಮಿರರ್ ಮುಂದೆ ನಿಂತಿದ್ದಾರೆ.
ವೀಕ್ಷಕರಿಗೆ ಸಿಟ್ಟು
ಈ ಪ್ರೋಮೋ ನೋಡಿ ವೀಕ್ಷಕರು, “ಒಂದು ಹೆಣ್ಣಿನ ಮೇಲೆ ಕೈ ಹಾಕಿದ್ರೆ ಎಷ್ಟು ಕೋಪ ಬರುತ್ತದೆ, ಒಂದು ಗಂಡಸಿನ ಮೀಸೆ ಮೇಲೆ ಕೈ ಹಾಕಿದ್ರೆ ಕೋಪ ಬರೋದಿಲ್ವಾ? ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಮೊನ್ನೆ ಪ್ಯಾಂಟ್ ಹರಿದರು, ಈಗ ನಾಲ್ಕೈದು ಜನರು ಸೇರ್ಕೊಂಡು ಮೀಸೆ ತೆಗೆಯೋದು ಏನಿದು ಮನುಷ್ಯತ್ವವೇ? ನಾಲ್ಕೈದು ಜನ ಹಿಡ್ಕೊಂಡು ಕಿಡ್ನಿಯನ್ನು ತೆಗೆದು ಮಾರ್ತಿರೇನೋ ನೀವು” ಎಂದು ಕಾಮೆಂಟ್ ಮಾಡಿದ್ದಾರೆ.
ವೀಕ್ಷಕರು ಹೇಳಿದ್ದೇನು?
ಗಿಲ್ಲಿಯ ಗಡ್ಡ ಮೀಸೆ ತೆಗೆದರು, ಪಾಪ ಆ ಹುಡುಗ ಸೀರಿಯಸ್ ಆಗಲ್ಲ ,ಕೋಪ, ದುರಹಂಕಾರ ಕೂಡ ತೋರಿಸಲ್ಲ. ರಘು ಅವ್ರೆ ನೀವು ಗಿಲ್ಲಿ ಮೀಸೆಗೆ ಕೈ ಹಾಕಬಾರದಿತ್ತು, ಪಾಪ. ನಿಮ್ಮ ಮೀಸೆ ಗಡ್ಡಕ್ಕೆ ಕೈ ಹಾಕಿಕಿದ್ರೆ ನಿಮಗೆ ಬೇಜಾರು ಆಗತ್ತೋ ಇಲ್ಲವೋ? ನೀವು ಮಾಡಿದ್ದು ತಪ್ಪು. ಇದು ತಪ್ಪು ಅಲ್ವಾ ಬಿಗ್ ಬಾಸ್? ಇದಕ್ಕೆ ಏನು ಹೇಳಲ್ವಾ? ಮೊನ್ನೆ ಪ್ಯಾಂಟ್ ಹರಿದು ಹಾಕಿದ್ರು. ಇದೆ ಕಥೆ ಬೇರೆಯವರಿಗೆ ಆಗಿದ್ರೆ ಸುಮ್ನೆ ಇರುತಿದ್ರ ಹೇಳಿ ಎಂದು ಹೇಳಿದ್ದಾರೆ.