Weight Loss Drink: ಕೆಲವರು ಡಯೆಟ್ ಮಾಡುತ್ತಾರೆ, ವರ್ಕೌಟ್ ಮಾಡುತ್ತಾರೆ, ಆದರೂ ಸಣ್ಣ ಆಗೋದಿಲ್ಲ ಎಂದು ಆರೋಪ ಮಾಡುತ್ತಾರೆ. ಇದಕ್ಕೆ ಕಾರಣ ಏನು ಎಂದು ಕೆಲವರಿಗೆ ಸಂದೇಹ ಇರಬಹುದು. 14kg ತೂಕ ಇಳಿಸಿಕೊಂಡ ವ್ಯಕ್ತಿಯೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.
ನೀರು ಹೇಗೆ ನಮ್ಮ ಬೊಜ್ಜನ್ನು ಕರಗಿಸುತ್ತದೆ ಎಂದು ಕೆಲವರಿಗೆ ಸಂದೇಹ ಇರಬಹುದು. ಇದಕ್ಕೆ ಕನ್ನಡಿಗ ಶ್ರೀಶೈಲ ಮುಗದಂ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಉತ್ತರ ನೀಡಿದ್ದಾರೆ.
ನೀರು, ಜೀವಜಲ ಆ ಜಗತ್ತಿನ ಅತ್ಯದ್ಭುತ ಸೃಷ್ಟಿ. ಬಹುಷಃ ಈ ಜಗತ್ತಿನಲ್ಲಿ ನೀರು ಸೃಷ್ಟಿ ಆಗಿರಲಿಲ್ಲ ಅಂದರೆ ಯಾವ ಜೀವಿಯೂ ಜೀವತಳಿಯುತ್ತಿರಲಿಲ್ಲ. ಈ ಭೂಮಿಯ ಮೇಲೆ ಶೇ71 ರಷ್ಟು ನೀರು ಇದೆಯೆಂದರೆ ಭೂಲೋಕಕ್ಕೆ ನೀರು ಎಷ್ಟು ಅವಶ್ಯಕ ಎಂದು ಗೊತ್ತಾಗುತ್ತದೆ. ನಮ್ಮ ದೇಹದಲ್ಲಿ ಕೂಡ ಶೇ 60ಕ್ಕಿಂತ ಹೆಚ್ಚು ನೀರಿನ ಅಂಶವಿದೆ.
ನಮ್ಮ ಆರೋಗ್ಯಯುತ ಶರೀರಕ್ಕೆ ನೀರಿನಷ್ಟು ಪ್ರಮುಖ ಪಾತ್ರ ವಹಿಸುವ ಮತ್ತೊಂದು ವಸ್ತು ಇಲ್ಲ. ನಿಮ್ಮ ಶರೀರದ ಪೋಷಣೆ ಮತ್ತು ತ್ಯಾಜ್ಯ ಹೊರಹಾಕಲು ನೀರು ಬೇಕೇಬೇಕು.
ಆರೋಗ್ಯಯುತ ತೂಕವನ್ನು ಇಳಿಸಲು ನೀರನ್ನು ಹೇಗೆಲ್ಲಾ ಬಳಸಬೇಕು ಎಂಬುದನ್ನು ನಾನು ಕಂಡುಕೊಂಡು ಅದರ ಪ್ರಯೋಜನ ಪಡೆದದ್ದರಿಂದ ಅದರ ಕೆಲವು ಅಂಶಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
* ಬೆಳಿಗ್ಗೆ ಎದ್ದು ತಕ್ಷಣ ಉಗುರು ಬೆಚ್ಚಗಿನ ನೀರನ್ನು ಸಾಧ್ಯವಾದಷ್ಟು ಕುಡಿರಿ. Atleast ಒಂದು ಲೋಟ. ಅರ್ಧ ಲೀಟರನಷ್ಟು ಆದರೆ ತುಂಬಾ ಒಳ್ಳೆಯದು. ಇದು ನಮ್ಮ ಶರೀರದಲ್ಲಿ ಇರುವ ಕಲ್ಮಶಗಳನ್ನು ಹೊರ ಹಾಕಲು ತುಂಬಾ ಪ್ರಯೋಜನಕಾರಿ. ಇದರ ಮತ್ತೊಂದು ಪ್ರಯೋಜನ ಎಂದರೆ ನಿಮ್ಮ ಮೇಲೆ ವಿಸರ್ಜನೆ ತುಂಬಾ ಸಲೀಸಾಗಿ, ಕ್ಲೀಯರಾಗಿ ಆಗಲು ತುಂಬಾ ಸಹಕಾರಿ.
* ನೀವು ಬೆಳಿಗ್ಗೆ ವಾಕಿಂಗ್, ಜಿಮ್, ವ್ಯಾಯಾಮ, ಶಾರೀರಿಕ ಕೆಲಸ ಮಾಡುವವರಾಗಿದ್ದರೆ ರಾತ್ರಿ ಒಂದು ಗ್ಲಾಸ್ ನೀರಿನಲ್ಲಿ ಒಂದೆರಡು ಚಮಚ ಚೀಯಾ (Chia) ಬೀಜಗಳನ್ನು ನೆನೆಸಿ ಇಟ್ಟು, ಅದನ್ನು ವ್ಯಾಯಾಮಕ್ಕೆ ಹೋಗುವ ಮೊದಲು ಕುಡಿದು ಹೋದರೆ ತುಂಬಾ ಒಳ್ಳೆಯದು. ನಿಮ್ಮ ಶರೀರವನ್ನು ನಿರ್ಜಲೀಕರಣವಾಗದಂತೆ ತಡೆಯುವುದಲ್ಲದೆ ಜೀರ್ಣಾಂಗ ವ್ಯವಸ್ಥೆಗೆ ಕೂಡ ಒಳ್ಳೆಯದು.
* ಊಟವಾದ ತಕ್ಷಣ ನೀರು ಕುಡಿಯಬೇಡಿ. ಊಟಕ್ಕಿಂತ ಮುಂಚೆ ಅರ್ಧ ಗಂಟೆ ಮೊದಲು ಊಟವಾದ ಅರ್ಧ ಗಂಟೆ ಬಿಟ್ಟು ನೀರು ಕುಡಿದರೆ ಒಳ್ಳೆಯದು. ಇದು ನಮ್ಮ ಲೀವರ್ ಸುಸ್ಥಿತಿಯಲ್ಲಿ ಇಡಲು ತುಂಬಾ ಸಹಕಾರಿ.
* ನಮ್ಮ ದೇಹಕ್ಕೆ ದಿನಕ್ಕೆ 4-5 ಲೀಟರ್ ನೀರು ತುಂಬಾ ಉಪಕಾರಿ. ನೀವು ಯಾವುದೇ ಡಾಕ್ಟರ್ ಹತ್ತಿರ ಹೋಗಿ ಅವರು ಹೇಳುವ ಮೊದಲ ಸಲಹೆ ಜಾಸ್ತಿ ನೀರು ಕುಡಿಯಿರಿ ಅಂತ. ಶರೀರದಲ್ಲಿರುವ ತ್ಯಾಜ್ಯವನ್ನು ಹೊರ ಹಾಕಲು ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಯಾವತ್ತೂ ನಿಮ್ಮ ಹತ್ತಿರ ಒಂದು ನೀರಿನ ಬಾಟಲ್ ಇಟ್ಟುಕೊಂಡೇ ಇರಬೇಕು.
* ಉಟ ತಿಂಡಿ ಸಮಯವನ್ನು ಬಿಟ್ಟು ಉಳಿದ ವೇಳೆ ನೀರು ಕುಡಿಯುವ ಸಮಯದಲ್ಲಿ ಸಾಧ್ಯವಾದರೆ ನೀರಿನಲ್ಲಿ ಬಾಟಲಿಯಲ್ಲಿ ಸಬ್ಜಾ ಬೀಜಗಳನ್ನು ಹಾಕಿ ಇಟ್ಟು ಆವಾಗ ಆವಾಗ ಕುಡಿಯುವುದರಿಂದ ಸಮಯವಲ್ಲದ ಸಮಯಕ್ಕೆ ಹಸಿವೆಯಾಗುವುದನ್ನು ತಡೆಯುವುದಲ್ಲದೇ ಶರೀರ ನೀರನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿ.
* ನೀವು ಬಿಸಿ ನೀರಲ್ಲಿ ಸ್ನಾನ ಮಾಡುವವರು ಆಗಿದ್ದರೆ ಜಳಕವಾದ ತಕ್ಷಣ ಆದಷ್ಟು ನೀರು ಕುಡಿಯಿರಿ.
* ರಾತ್ರಿ ಮಲಗುವ ಮುಂಚೆ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿದು ಮಲಗಿ, ಇದು ಜೀರ್ಣ ಕ್ರಿಯೆ ಸುಗಮಗೊಳಿಸುತ್ತದೆ, ತ್ಯಾಜ್ಯ ಹೊರ ಹಾಕುವುದರೊಂದಿಗೆ ಬೆಳಗಿನ ವಿಸರ್ಜನೆಗೆ ಸಹಕಾರಿ.
* ಮೆಂತೆ ಬೀಜ, ಕೊತ್ತಂಬರಿ ಬೀಜ, ಜೀರಿಗೆ, ಅಜಿವಾನ, ಸೊಂಪು, ಇವುಗಳಲ್ಲಿ ಯಾವುದಾದರೂ ಒಂದನ್ನು ಆವಾಗಾವಾಗ ರಾತ್ರಿ ನೆನಸಿ ಬೆಳಿಗ್ಗೆ ಕುದಿಸಿ ಕುಡಿಯುವುದು ತುಂಬಾ ಉಪಕಾರಿ. ಆವಾಗಾವಾಗ ಅಂದರೆ ದಿನಾಲೂ ಬೇಡ. ಒಮ್ಮೊಮ್ಮೆ ಕುಡಿಯುವಾಗ ಒಂದೊಂದನ್ನು ಬಳಸಿ.
* ಸಾಧ್ಯವಾದರೆ ವಾರದಲ್ಲಿ ಒಂದು ದಿನ ನಿಂಬೆ ರಸದ ನೀರು ಒಂದು ದಿನ Apple cider vinegar ಬೆರೆಸಿದ ನೀರನ್ನು ಕುಡಿಯಿರಿ.
ನಿಮಗೆ ಯಾವಾಗ್ಯಾವಾಗ ಸಮಯ ಸಿಗುತ್ತದೆಯೋ, ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ. ಆಗ ನಿಮ್ಮ ಶರೀರವನ್ನು ಗಮನಿಸಿ. ಬದಲಾವಣೆ ನಿಮ್ಮ ಮುಂದೆ ಇರುತ್ತದೆ.
