ಬೆಂಗಳೂರು: ಡಿಸಿಎಂ ಡಿಕೆಶಿಗೆ ಟಾಂಗ್ ನೀಡಿದ ಜಾರಕಿಹೊಳಿ, ಕೆಲವೇ ಜನರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ಬಹಳಷ್ಟು ಜನ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದುಡಿದಿದ್ದಾರೆ. ರಾಜ್ಯದ ಜನ ಮತ ಹಾಕಿದ್ದರಿಂದ ನಾವು ಶಾಸಕರು, ಮಂತ್ರಿ ಆಗಿದ್ದೇವೆ. ನಮಗೆ ಇತಿ ಮಿತಿ ಇರಬೇಕು. ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವುದು ತಪ್ಪು. ಪಕ್ಷ ಅಧಿಕಾರಕ್ಕೆ ಬರಲು ಎಲ್ಲರ ಸಹಕಾರವಿದೆ. ಅದರ ಶ್ರೇಯಸ್ಸನ್ನು ಕೆಲವೇ ಜನರು ತೆಗೆದುಕೊಳ್ಳುವುದನ್ನು ನಾನು ಒಪ್ಪುವುದಿಲ್ಲ. ಸ್ವಾಭಾವಿಕವಾಗಿ ಎಲ್ಲರೂ ಹಕ್ಕು ಮಂಡಿಸುತ್ತಾರೆ. ಎಲ್ಲರಿಗೂ ಅಧಿಕಾರ ಸಿಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದರಲ್ಲಿ ತಪ್ಪಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
11:00 PM (IST) Nov 24
ಬೆಂಗಳೂರಿನ ಪೂರ್ವ ಹೈಲ್ಯಾಂಡ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಮಯ ಭಾಷೆ ಕನ್ನಡವಾಗಲಿ" ಶೀರ್ಷಿಕೆಯಡಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ವಿಶೇಷತೆಯೆಂದರೆ, ಸಾವಿರಕ್ಕೂ ಹೆಚ್ಚು ಕನ್ನಡೇತರ ನಿವಾಸಿಗಳು ಒಟ್ಟಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದು.
10:28 PM (IST) Nov 24
ತಡ ರಾತ್ರಿ ಕೆಸಿ ವೇಣುಗೋಪಾಲ್ ಭೇಟಿಗೆ ಮುಂದಾದ ಡಿಕೆಶಿ, ಕುತೂಹಲ ಮೂಡಿಸಿದ ಕ್ಷಿಪ್ರ ನಡೆ , ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಕೆಸಿ ವೇಣುಗೋಪಾಲ್ ಭೇಟಿಯಾಗಿ ಅಧಿಕಾರ ಹಸ್ತಾಂತರ ಕುರಿತು ಮಾತುಕತೆ ನಡೆಸಲ ಮುಂದಾಗಿದ್ದಾರೆ.
09:12 PM (IST) Nov 24
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಅವಿರೋಧ ಆಯ್ಕೆ , ಮಾಜಿ ಕ್ರಿಕೇಟರ್ ವೆಂಕಟೇಶ್ ಪ್ರಸಾದ್ ಬಣ ಹಾಗೂ ಬ್ರಿಜೇಶ್ ಬಣದ ನಡುವೆ ತೀವ್ರ ಪೈಪೋಟಿ ಎರ್ಪಟ್ಟಿತ್ತು. ಆದರೆ ಭಾರಿ ಟ್ವಿಸ್ಟ್ ಮೂಲಕ ಎಲ್ಲವೂ ಬದಲಾಗಿದೆ.
08:42 PM (IST) Nov 24
ಪೋಷಕರಿಲ್ಲದ ವೇಳೆ ಮನೆಗೆ ತೆರಳಿ ವಿದ್ಯಾರ್ಥಿನಿ ಮೇಲೆ ಲೈ0ಗಿಕ ದೌರ್ಜನ್ಯ, ದೈಹಿಕ ಶಿಕ್ಷಕ ಅರೆಸ್ಟ್, ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ, ಆಮಿಷ ಒಡ್ಡಿ, ಜೀವ ಬೆದರಿಕೆ ಹಾಕಿ ತನ್ನ ಕಾರ್ಯ ಸಾಧಿಸುತ್ತಿದ್ದ.
06:39 PM (IST) Nov 24
ಧರ್ಮಸ್ಥಳ ಬುರುಡೆ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನಿಗೆ ಜಾಮೀನು ಮಂಜೂರು , ಮಂಗಳೂರಿನ ಜಿಲ್ಲಾ ನ್ಯಾಯಾಲಯ ಈ ಆದೇಶ ನೀಡಿದೆ. ಆಗಸ್ಟ್ 23ರಿಂದ ಬಂಧನದಲ್ಲಿದ್ದ ಚಿನ್ನಯ್ಯ ಬೇಲ್ ನೀಡಲಾಗಿದೆ.
06:39 PM (IST) Nov 24
06:18 PM (IST) Nov 24
05:37 PM (IST) Nov 24
05:15 PM (IST) Nov 24
ಬಿಗ್ಬಾಸ್ನಿಂದ ಹೊರಬಂದ ಡಾಗ್ ಸತೀಶ್, ಸ್ಪರ್ಧಿ ಸ್ಪಂದನಾ ತನ್ನ ದುಬಾರಿ ಶರ್ಟ್ ಹಾಳು ಮಾಡಿದ್ದಾರೆ ಮತ್ತು ತನ್ನ ಚಡ್ಡಿಗಳು ಕಳೆದುಹೋಗಿವೆ ಎಂದು ಆರೋಪಿಸಿದ್ದರು. ಈ ವಿಷಯವನ್ನು ನಿರೂಪಕ ಸುದೀಪ್ ಅವರು ವಾರದ ಕಂತಿನಲ್ಲಿ , ಮನೆಯ ಸದಸ್ಯರನ್ನು ಪ್ರಶ್ನಿಸಿದಾಗ ತಮಾಷೆಯ ಸನ್ನಿವೇಶ ಸೃಷ್ಟಿಯಾಯಿತು.
04:03 PM (IST) Nov 24
ಅರುಣಾಚಲ ಚೀನಾ ಭಾಗ, ಪಾಸ್‌ಪೋರ್ಟ್ ಅಮಾನ್ಯ ಎಂದು ಭಾರತೀಯಳಿಗೆ ಪ್ರಯಾಣ ನಿರಾಕರಿಸಿದ ಚೀನಾ , ಗಡಿಯಲ್ಲಿ ಕಿರಿಕ್ ಮಾಡುವ ಜೊತೆಗೆ ಇದೀಗ ಚೀನಾ ಭಾರತೀಯರಿಗೆ ಕಿರುಕುಳ ನೀಡಲು ಆರಂಭಿಸಿದೆ.
03:23 PM (IST) Nov 24
Canara Bank Free computer education training: ಕೆನರಾ ಬ್ಯಾಂಕ್ ಸಂಸ್ಥೆಯು ಬೆಂಗಳೂರಿನಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿಯನ್ನು ಆಯೋಜಿಸಿದೆ.
03:07 PM (IST) Nov 24
02:59 PM (IST) Nov 24
ಯಕ್ಷಗಾನ ಕಲಾವಿದರ ಸಲಿಂಗಕಾಮದ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಉಡುಪಿಯ ಪೇಜಾವರ ಶ್ರೀಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಕ್ಷಗಾನ ಕಲಾವಿದರು ಮಹಾನ್ ಕಲಾತಪಸ್ವಿಗಳು ಮತ್ತು ಸಮಾಜ ಅವರನ್ನು ಗೌರವಿಸುತ್ತದೆ ಎಂದರು.
02:39 PM (IST) Nov 24
ಎರಡೂವರೆ ವರ್ಷಗಳ ಬಳಿಕ ಸಿಎಂ ಸ್ಥಾನ ಬಿಟ್ಟುಕೊಡುವ ಒಪ್ಪಂದದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರಕ್ಕಾಗಿ ಜಟಾಪಟಿ ನಡೆಯುತ್ತಿದೆ. ಈ ರಾಜಕೀಯ ಬಿಕ್ಕಟ್ಟಿನ ನಡುವೆಯೇ, ಡಿ.ಕೆ.ಶಿವಕುಮಾರ್ ಭವಿಷ್ಯದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಆಡಿದ್ದ ಮಾತು ವೈರಲ್ ಆಗುತ್ತಿವೆ.
02:30 PM (IST) Nov 24
Karnataka CM: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು 2028ಕ್ಕೆ ತಾವೇ ಮುಖ್ಯಮಂತ್ರಿಯಾಗಬೇಕೆಂಬ ಆಕಾಂಕ್ಷೆಯನ್ನು ಬೆಳಗಾವಿಯಲ್ಲಿ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ ತಮ್ಮ ಹಿರಿತನವನ್ನು ಉಲ್ಲೇಖಿಸಿ, ವಿಜಯೇಂದ್ರ ನಾಯಕತ್ವವನ್ನು ಒಪ್ಪುವುದಿಲ್ಲ ಎಂದಿದ್ದರೂ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದರು.
01:47 PM (IST) Nov 24
ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಸಿದ್ದರಾಮಯ್ಯ 'ನಾನೇ ಐದು ವರ್ಷ ಮುಖ್ಯಮಂತ್ರಿ' ಎಂದು ಹೇಳಿಕೊಳ್ಳುವ ಸ್ಥಿತಿಯನ್ನು ಲೇವಡಿ ಮಾಡಿದ್ದಾರೆ. ಅವರಲ್ಲಿ 'ರೆಬಿಲಿಯನ್' ಮತ್ತು 'ಕಾಂಪ್ರಮೈಸ್' ಎಂಬ ಹೋರಾಟ ನಡೆಯುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ಅವರ ಅಧಿಕಾರದ ಭವಿಷ್ಯ ಗೊತ್ತಾಗಲಿದೆ ಎಂದರು.
01:18 PM (IST) Nov 24
01:18 PM (IST) Nov 24
BBM Student Devi Shree Murdered: ಬೆಂಗಳೂರಿನ ತಮ್ಮೇನಹಳ್ಳಿಯಲ್ಲಿ ಆಂಧ್ರ ಮೂಲದ ಬಿಬಿಎಂ ವಿದ್ಯಾರ್ಥಿನಿ ದೇವಿಶ್ರೀಯನ್ನು ಆಕೆಯ ಸ್ನೇಹಿತ ಪ್ರೇಮ್ ವರ್ಧನ್ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
12:57 PM (IST) Nov 24
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ವಾಲ್ಮೀಕಿ ಸಮಾಜವನ್ನು ಎಸ್‌ಟಿ ವರ್ಗಕ್ಕೆ ಸೇರಿಸಲಾಗುವುದಿಲ್ಲ ಎಂದು ಹೇಳಿಕೆ ನೀಡಿದ ಹುಕ್ಕೇರಿ ತಹಶೀಲ್ದಾರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೌನ ವಹಿಸಿರುವ ಸತೀಶ್ ಜಾರಕಿಹೊಳಿ ಕಾರ್ಯವೈಖರಿಯನ್ನು ಪ್ರಶ್ನಿಸಿ, ತಹಶೀಲ್ದಾರ್ ಬಂಧನಕ್ಕೆ ಆಗ್ರಹಿಸಿದ್ದಾರೆ.
12:50 PM (IST) Nov 24
ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ಮೂರು ದಿನಗಳಿಂದ ಕಾಣೆಯಾಗಿದ್ದ ಮಧು ಎಂಬ ವ್ಯಕ್ತಿ ಬೈಕ್ ಸಮೇತ ಶವವಾಗಿ ಪತ್ತೆಯಾಗಿದ್ದಾರೆ. ಬೈಕ್ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದೆಂದು ಶಂಕಿಸಲಾಗಿದ್ದು, ಅಪಾಯಕಾರಿ ತಿರುವಿನ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಗ್ರಾಮಸ್ಥರು ಆಕ್ರೋಶ.
12:28 PM (IST) Nov 24
12:23 PM (IST) Nov 24
11:53 AM (IST) Nov 24
11:36 AM (IST) Nov 24
ಪ್ರಧಾನಮಂತ್ರಿ ಕಚೇರಿಯ ಉನ್ನತ ಅಧಿಕಾರಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದತ್ತು ಪುತ್ರ ಎಂದು ನಂಬಿಸಿ, ವೈದ್ಯರೊಬ್ಬರಿಗೆ 2.7 ಕೋಟಿ ರೂ ವಂಚಿಸಿದ ಸುಜಯೇಂದ್ರ ಎಂಬ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ದೇವನಹಳ್ಳಿ ಬಳಿ ಆಯುರ್ವೇದ ಆಸ್ಪತ್ರೆ ತೆರೆಯುವ ಆಮಿಷವೊಡ್ಡಿ ಈತ ಹಣ ಪಡೆದಿದ್ದ.
10:55 AM (IST) Nov 24
10:39 AM (IST) Nov 24
10:34 AM (IST) Nov 24
ಮದುವೆ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಮತ್ತು ಜಾತಿ ನಿಂದನೆ ಆರೋಪದ ಮೇಲೆ ಬಂಧಿತನಾಗಿದ್ದ ಯುವಕನಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ನ್ಯಾಯಾಂಗ ಬಂಧನದ ಅವಧಿ ಮುಗಿದ ನಂತರ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸದ ಕಾರಣ, ಆತನ ಬಂಧನ ಕಾನೂನುಬಾಹಿರವೆಂದು ಪರಿಗಣಿಸಿ ಈ ಆದೇಶ ನೀಡಿದೆ.
10:15 AM (IST) Nov 24
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಶಾಸಕರಿಗೆ 50 ಕೋಟಿ ರು., ಫ್ಲ್ಯಾಟ್ ಹಾಗೂ ಕಾರಿನ ಆಮಿಷ, ಈ ಕುರಿತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.
09:54 AM (IST) Nov 24
ರಾಯಚೂರಿನ ಮರಾಟ ಗ್ರಾಮದಲ್ಲಿ ರಸ್ತೆ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ಅವರು ಕೆಆರ್ಐಡಿಎಲ್ ಅಧಿಕಾರಿಯನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು. 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೂ ಕೆಲಸ ಆರಂಭಿಸದ ಅಧಿಕಾರಿಗೆ ವಾರ್ನ್ ಕೊಟ್ಟ ಸಚಿವರು
09:35 AM (IST) Nov 24
09:09 AM (IST) Nov 24
ಈ ವಾರದ ಬಿಗ್‌ಬಾಸ್ ನಾಮಿನೇಷನ್ ಪ್ರಕ್ರಿಯೆಯು ಸ್ಪರ್ಧಿಗಳ ಬಟ್ಟೆ ತೊಳೆಯುವ ವಿಶೇಷತೆಯೊಂದಿಗೆ ನಡೆದಿದೆ. ಧ್ರುವಂತ್ ಅವರು ಅಶ್ವಿನಿ ಮತ್ತು ಜಾನ್ವಿಯನ್ನು 'ಡಮ್ಮಿ ಕ್ಯಾಂಡಿಡೇಟ್' ಎಂದು ಆರೋಪಿಸಿದ್ದು, ಇದು ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
08:46 AM (IST) Nov 24
ಕೊಡಗಿನ ವಿರಾಜಪೇಟೆಯಲ್ಲಿ ನಡೆದ 'ಮೆಮೋರಿಯಲ್ ಫುಟ್ಬಾಲ್ ಕಪ್' ಪಂದ್ಯಾವಳಿಯಲ್ಲಿ, ಸುಂಟಿಕೊಪ್ಪ ವಿರುದ್ಧ ಸೋತ ಕಡಂಗ ತಂಡದವರು ಸಂಭ್ರಮಾಚರಣೆ ಮಾಡುತ್ತಿದ್ದವರ ಮೇಲೆ ಡ್ರಮ್ ಎಸೆದಿದ್ದು, ಇದು ಮಾರಾಮಾರಿಗೆ ಕಾರಣವಾಯಿತು. ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
08:18 AM (IST) Nov 24
07:55 AM (IST) Nov 24
"ಹುಲ್ಲಿಗೆಮ್ಮ ದೇವಿ ಹೇಳಿದ್ದಾಳೆ, ಡಿ.ಕೆ. ಶಿವಕುಮಾರ್, ನೀವು ಚಿಂತೆ ಮಾಡಬೇಡಿ. ಮುಖ್ಯಮಂತ್ರಿ ಆಗುತ್ತಾರೆ. ಅಲ್ಲದೇ, ಎರಡು ತಿಂಗಳ ಒಳಗಾಗಿ ಡಿ.ಕೆ. ಶಿವಕುಮಾರ ಅವರು ಸಿಎಂ ಆಗುತ್ತಾರೆ. ಅವರು ಮುಂದಿನ ಎರಡೂವರೆ ವರ್ಷಗಳ ಕಾಲ ರಾಜ್ಯವನ್ನು ಆಳುತ್ತಾರೆ " ಎಂದು ಭೈಲಮ್ಮ ಬಾಳಮಣ್ಣವರ ನುಡಿದಿದ್ದಾರೆ.
07:53 AM (IST) Nov 24
ಬಿಗ್‌ಬಾಸ್ ಮನೆಯಿಂದ ರಿಷಾ ಗೌಡ ಎಲಿಮಿನೇಟ್ ಆಗಿದ್ದು, ಈ ಗಂಭೀರ ಸಂದರ್ಭದಲ್ಲಿ ಗಿಲ್ಲಿ ನಟ ತಮಾಷೆ ಮಾಡಿ ಕಾವ್ಯಾ ಅವರ ಬೇಸರಕ್ಕೆ ಕಾರಣರಾಗಿದ್ದಾರೆ. ಅನಿರೀಕ್ಷಿತವಾಗಿ ರಿಷಾ ಅವರನ್ನು ಮುಖ್ಯ ದ್ವಾರದ ಬದಲು ಕನ್ಫೆಷನ್ ರೂಮ್ ಮೂಲಕ ಹೊರಗೆ ಕಳುಹಿಸಲಾಯಿತು.
07:32 AM (IST) Nov 24
Parrot astrology for Karnataka CM :ಮಂಡ್ಯದಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುமார் ಮುಂದಿನ ಮುಖ್ಯಮಂತ್ರಿಯಾಗುತ್ತಾರೆಯೇ ಎಂದು ತಿಳಿಯಲು ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರದ ಮೊರೆ ಹೋಗಿದ್ದಾರೆ. ಪಂಜರದಿಂದ ಹೊರಬಂದ ಗಿಳಿಯು 'ಚೊಂಬು' ಮತ್ತು 'ಚೆಂಡು ಹೂವು' ಕಾರ್ಡ್ ತೋರಿಸಿದೆ.
07:05 AM (IST) Nov 24
ಬಿಜೆಪಿ ಎಂದಿಗೂ ಎಚ್.ಡಿ.ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಮಂಡ್ಯದಲ್ಲಿ ಹೇಳಿದ್ದಾರೆ. ಇದೇ ವೇಳೆ, ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿ, ಹೈಕಮಾಂಡ್ ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.