LIVE NOW
Published : Jun 23, 2026, 06:50 AM ISTUpdated : Jun 23, 2026, 10:52 PM IST

Karnataka News Live: RSS - ಇಷ್ಟು ವರ್ಷ ಸಂಘದ ನೋಂದಣಿ ಏಕೆ ಪ್ರಶ್ನಿಸಲಿಲ್ಲ - ಪ್ರಿಯಾಂಕ್ ಖರ್ಗೆ ವಿರುದ್ಧ ಈಶ್ವರಪ್ಪ ವಾಗ್ದಾಳಿ

ಸಾರಾಂಶ

ಬೆಂಗಳೂರು: ನಾಗರಬಾವಿಯ ಬಾಡಿಗೆ ಮನೆಯಲ್ಲಿ ಬಿಡದಿ ಟೌನ್‌ಶಿಪ್‌ ದಂಧೆ ಮಾಡುತ್ತಿದ್ದಾರೆ. ಕೆಲವು ಪುಢಾರಿಗಳು, ಟೌನ್‌ಶಿಪ್ ಕಿಂಗ್‌ಪಿನ್ ಚೇಲಾಗಳು ಸೇರಿಕೊಂಡು ಆ ಮನೆಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಸೋಮವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸೌಧ ಅಥವಾ ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಡೆದರೆ ಎಲ್ಲರಿಗೂ ಸುಲಭವಾಗಿ ಗೊತ್ತಾಗುತ್ತದೆ. ಕುಮಾರಸ್ವಾಮಿಗೆ ಮಾಹಿತಿ ಹೋಗುತ್ತದೆ ಎಂಬ ಉದ್ದೇಶದಿಂದ ಬಾಡಿಗೆ ಮನೆಯಲ್ಲಿ ರಹಸ್ಯವಾಗಿ ಬಿಡದಿ ಟೌನ್‌ಶಿಪ್‌ ದಂಧೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಏನಪ್ಪಾ ಹರಿದಾ ಎನ್ನುವ ವ್ಯಕ್ತಿ ಈಗ ಹರಿಯುತ್ತಿರುವುದು ಏನು? ನಿಮ್ಮ ಪಾಪದ ಕೂಡ ತುಂಬಿದೆ. ಎಲ್ಲವನ್ನೂ ಜನರು ನೋಡುತ್ತಿದ್ದಾರೆ. ನಿಮಗೆ ಶಾಸ್ತಿಯಾಗುವ ಕಾಲ ಸನಿಹದಲ್ಲಿದೆ ಎಂದು ಗುಡುಗಿದರು.

10:52 PM (IST) Jun 23

RSS - ಇಷ್ಟು ವರ್ಷ ಸಂಘದ ನೋಂದಣಿ ಏಕೆ ಪ್ರಶ್ನಿಸಲಿಲ್ಲ - ಪ್ರಿಯಾಂಕ್ ಖರ್ಗೆ ವಿರುದ್ಧ ಈಶ್ವರಪ್ಪ ವಾಗ್ದಾಳಿ

RSS Registration Controversy: ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿತವಾದ ಆರ್‌ಎಸ್‌ಎಸ್‌ ಸಂಘದ ನೋಂದಣಿ ಬಗ್ಗೆ ಈಗ ಪ್ರಶ್ನಿಸುತ್ತಿರುವವರು ಇಷ್ಟು ವರ್ಷ ಏಕೆ ಸುಮ್ಮನಿದ್ದರು ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನೆ ಮಾಡಿದರು.

Read Full Story

09:31 PM (IST) Jun 23

Graveyard Dating - ಸ್ಮಶಾನದಲ್ಲಿ ಡೇಟಿಂಗ್! ಯುವಜನರ ಈ ಹೊಸ ಹುಚ್ಚಾಟದ ಅಸಲಿ ಕಥೆ ಏನು?

Graveyard Dating: ಕಾಫಿ ಶಾಪ್, ಪಾರ್ಕ್‌ಗಳೆಲ್ಲಾ ಹಳೆಯದಾಯ್ತು. ಈಗಿನ ಹೊಸ ಟ್ರೆಂಡ್ ಗ್ರೇವ್‌ಯಾರ್ಡ್ ಡೇಟಿಂಗ್. ಯುವ ಜೋಡಿಗಳು ಸ್ಮಶಾನಗಳಲ್ಲಿ ಯಾಕೆ ಡೇಟಿಂಗ್ ಮಾಡ್ತಿದ್ದಾರೆ? ಇದರ ಹಿಂದಿನ ಅಸಲಿ ಕಾರಣಗಳೇನು? ಈ ಕುತೂಹಲಕಾರಿ ವಿವರ ಇಲ್ಲಿದೆ.

Read Full Story

07:33 PM (IST) Jun 23

ಈ ಪ್ರಕಾಶ್​ ರಾಜ್​ ಅರೆಸ್ಟ್​ ಆದ್ರೆ, ಆ ಪ್ರಕಾಶ್​ ರಾಜ್​ ಓಡಿ ಬರ್ತಾರೆ; ನಾಲ್ಕು ಮಂದಿ ತಬ್ಬಿಕೊಳ್ತಾರೆ - ಸೂಲಿಬೆಲೆ ವ್ಯಂಗ್ಯ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್‌ಗಳನ್ನು ಹೊಂದಿರುವ ಆರೋಪದ ಮೇಲೆ ಬೆಂಗಳೂರು ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಎದುರಿಸುತ್ತಿದ್ದಾರೆ.  ಈ ಕುರಿತು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವ್ಯಂಗ್ಯವಾಡಿದ್ದಾರೆ.

Read Full Story

07:22 PM (IST) Jun 23

Cross Voting - ಧರ್ಮಸ್ಥಳ ಆಣೆ ಬೇಡ, ಬ್ರೇನ್ ಮ್ಯಾಪಿಂಗ್ ಮಾಡಿಸಿ - ವಿಜಯೇಂದ್ರ-ಅಶೋಕ್ ವಿರುದ್ಧ ಎಂ.ಲಕ್ಷ್ಮಣ್ ಕಿಡಿ

Cross Voting: ಪರಿಷತ್ ಚುನಾವಣೆಯ ಕ್ರಾಸ್ ವೋಟಿಂಗ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ನೇರ ಹೊಣೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.

Read Full Story

06:56 PM (IST) Jun 23

Bidadi Township - ವಿಧಾನಸೌಧಕ್ಕೆ ಬನ್ನಿ, ದಾಖಲೆ ತೋರಿಸುತ್ತೇವೆ - ಎಚ್‌ಡಿಕೆಗೆ ಎಂ.ಲಕ್ಷ್ಮಣ್ ಸವಾಲ್

Bidadi Township ಯೋಜನೆ ವಿಚಾರವಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2006ರಲ್ಲಿ ಯೋಜನೆ ಆರಂಭಿಸಿದ್ದು ನೀವೇ ಎಂದು ಪ್ರಶ್ನಿಸಿದರು.

Read Full Story

06:50 PM (IST) Jun 23

Shocking Event - ಈ ಖ್ಯಾತ ಗಾಯಕಿಗೆ ಇದ್ದಕ್ಕಿದ್ದಂತೆ ಏನಾಯ್ತು? ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಲು ಮತ್ತೊಬ್ಬರ ಸಹಾಯ ಪಡೆದು ಬಂದಿದ್ಯಾಕೆ?

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ವರ್ಣರಂಜಿತ ವೇದಿಕೆಯಲ್ಲಿ ಭಾರತದ ಈ ಪ್ರಖ್ಯಾತ ಹಿನ್ನೆಲೆ ಗಾಯಕಿಗೆ ರಾಷ್ಟ್ರಪತಿ  ದ್ರೌಪದಿ ಮುರ್ಮು ಅವರು ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮಭೂಷಣ' ಪ್ರಶಸ್ತಿ ನೀಡಿ ಗೌರವಿಸಿದರು. ಯಾರು ಈ ಗಾಯಕಿ? ಸ್ಟೋರಿ ನೋಡಿ..

Read Full Story

06:45 PM (IST) Jun 23

Gangavathi - ಮನೆಯ ಕಸ ಬೇರ್ಪಡಿಸಿ ಎಂದ ಸಿಬ್ಬಂದಿ ಮೇಲೆ ಹಲ್ಲೆ - ಆರೋಪಿಯ ಮನೆ ಮುಂದೆ ಕಸ ಸುರಿದು ಪ್ರತಿಭಟನೆ

Gangavathi ಕಿಲ್ಲಾ ಏರಿಯಾದಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಹಾಕುವಂತೆ ಸೂಚಿಸಿದ ನಗರಸಭೆ ಸಿಬ್ಬಂದಿ ಅಬ್ದುಲ್ ನಬಿಸಾಬ್ ಮೇಲೆ ಹಲ್ಲೆ ನಡೆದಿದೆ. ಘಟನೆಯನ್ನು ಖಂಡಿಸಿ ನಗರಸಭೆ ಸಿಬ್ಬಂದಿಗಳು ಆರೋಪಿಯ ಮನೆ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದ್ದಾರೆ.

Read Full Story

06:07 PM (IST) Jun 23

ಚಿಕ್ಕ ಹುಡುಗ ಬೇಡಿಕೊಂಡರೂ ರೂಲ್ಸ್ ನೆಪದಲ್ಲಿ ನಿರ್ಜನ ಪ್ರದೇಶದಲ್ಲಿ ಇಳಿಸಿದ ಬಸ್! ಕಂಡಕ್ಟರ್ ಅಮಾನತಿಗೆ ಶಾಸಕ ಅಶೋಕ್ ರೈ ಆದೇಶ

ತಪ್ಪು ಬಸ್ ಹತ್ತಿದ ಆರನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಕೆಎಸ್‌ಆರ್‌ಟಿಸಿ ನಿರ್ವಾಹಕನು ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ಬಾಲಕನ ವಿನಂತಿಯನ್ನು ತಿರಸ್ಕರಿಸಿ, ಆತನನ್ನು ದೂರದ ಅಪರಿಚಿತ ಸ್ಥಳದಲ್ಲಿ ಇಳಿಸಿ ಹೋಗಿದ್ದಾನೆ. ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ನಿರ್ವಾಹಕನನ್ನು ತಕ್ಷಣವೇ ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ.
Read Full Story

05:39 PM (IST) Jun 23

Nagamale Darshan - ಎರಡು ಚಿರತೆಗಳು ಸೆರೆ ಸಿಕ್ಕರೂ ನಾಗಮಲೆ ದರ್ಶನಕ್ಕೆ ಯಾಕೆ ಅವಕಾಶ ಸಿಗುತ್ತಿಲ್ಲ?

Nagamale Darshan: ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ದರ್ಶನಕ್ಕೆ ಚಿರತೆ ದಾಳಿಯ ಬಳಿಕ ವಿಧಿಸಲಾದ ನಿರ್ಬಂಧ ಇನ್ನೂ ತೆರವಾಗಿಲ್ಲ. ಎರಡು ಚಿರತೆಗಳು ಸೆರೆ ಸಿಕ್ಕಿದ್ದರೂ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನೆಲೆ ಭಕ್ತರು ಪ್ರಶ್ನೆ ಎತ್ತಿದ್ದಾರೆ.

Read Full Story

05:23 PM (IST) Jun 23

Mangaluru - ಕಾಣೆಯಾದ ಚಿನ್ನು 3 ವಾರದ ಬಳಿಕ ಪತ್ತೆ, ಮನೆ ಮಗು ಹುಡುಕಿ ಕೊಟ್ಟವನಿಗೆ ಮಾಲೀಕನಿಂದ 50ಸಾವಿರ ನಗದು ಬಹುಮಾನ

ಪುತ್ತೂರಿನ ಶ್ವಾನ ಪ್ರೇಮಿ ಗಣೇಶ್ ಕೇರಾ ಅವರ ಕಾಣೆಯಾಗಿದ್ದ 'ಚಿನ್ನು' ಎಂಬ ಸಾಕುನಾಯಿ ಮೂರು ವಾರಗಳ ನಂತರ ಪತ್ತೆಯಾಗಿದೆ. ನಾಯಿಯನ್ನು ಹುಡುಕಿಕೊಟ್ಟವರಿಗೆ ₹50,000 ಬಹುಮಾನ ಘೋಷಿಸಿದ್ದ ಗಣೇಶ್, ಅದನ್ನು ಪತ್ತೆಹಚ್ಚಿದ ಸ್ಥಳೀಯ ನಿವಾಸಿ ಪುರಂದರ ಅವರಿಗೆ ವಾಗ್ದಾನದಂತೆ ನಗದು ಬಹುಮಾನವನ್ನು ಹಸ್ತಾಂತರಿಸಿದ್ದಾರೆ.
Read Full Story

04:55 PM (IST) Jun 23

Bidadi Township - ಬೈರಮಂಗಲ ಸರ್ಕಲ್‌ಗೆ ಬನ್ನಿ, ರೈತರ ಮುಂದೆ ಚರ್ಚೆ ಮಾಡೋಣ - ಡಿಕೆಶಿಗೆ ನಿಖಿಲ್ ಬಹಿರಂಗ ಸವಾಲ್

Bidadi Township ಯೋಜನೆ ವಿಚಾರವಾಗಿ ಡಿ.ಕೆ.ಶಿವಕುಮಾರ್‌ಗೆ ನಿಖಿಲ್ ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. ರೈತರ ಸಮ್ಮುಖದಲ್ಲೇ ಚರ್ಚೆ ನಡೆಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Read Full Story

04:36 PM (IST) Jun 23

Bengaluru - ಅಂಜನಾನಗರದಲ್ಲಿ ಅನುಮಾನಾಸ್ಪದ ಸಾವು - 3 ತಿಂಗಳ ಗರ್ಭಿಣಿ ವಿವಾಹಿತೆ ಮೃತದೇಹ ಪತ್ತೆ

Bengaluru ಅಂಜನಾನಗರದಲ್ಲಿ ಮೂರು ತಿಂಗಳ ಗರ್ಭಿಣಿಯಾಗಿದ್ದ ವಿವಾಹಿತೆ ತನುಜಾ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

04:33 PM (IST) Jun 23

ಮಂಗಳೂರಿಂದ ಹೊರಡುವ ಕೊಂಕಣ ರೈಲ್ವೆ ಮಾರ್ಗದಲ್ಲಿ ಹಲವು ಟ್ರೈನ್ ಸಂಚಾರ ಭಾಗಶಃ ರದ್ದು, ಮರು ವೇಳಾಪಟ್ಟಿ ಪ್ರಕಟ!

ಕೊಂಕಣ ರೈಲ್ವೆ ಮಾರ್ಗದಲ್ಲಿ ಹಳಿ ನಿರ್ವಹಣಾ ಕಾಮಗಾರಿಯಿಂದಾಗಿ ಜೂನ್ 23 ರಿಂದ 28ರವರೆಗೆ ಹಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸಮಯವನ್ನು ಮರುನಿಗದಿಪಡಿಸಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುನ್ನ ವೇಳಾಪಟ್ಟಿಯನ್ನು ಪರಿಶೀಲಿಸಲು ಸೂಚಿಸಲಾಗಿದೆ.
Read Full Story

02:34 PM (IST) Jun 23

ರಾಜ್ಯಕ್ಕೆ ನೈರುತ್ಯ ಮಾರುತಗಳ ಅಬ್ಬರ, ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್; ನಿಮ್ಮ ಜಿಲ್ಲೆಯ ಮಳೆ ವಿವರ ಇಲ್ಲಿದೆ..

ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ರೆಡ್/ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ.
Read Full Story

02:32 PM (IST) Jun 23

ಜುಲೈನಲ್ಲಿ ಮಾರುಕಟ್ಟೆಗೆ ಬರಲಿದೆ ಹೊಸ Maruti Brezza ಫೇಸ್‌ಲಿಫ್ಟ್; ಮೊದಲ ಬಾರಿಗೆ ಡಬಲ್‌ ಎಂಜಿನ್‌ ಆಯ್ಕೆ

ಮಾರುತಿ ಸುಜುಕಿ ತನ್ನ ಜನಪ್ರಿಯ ಬ್ರೆಜ್ಜಾ ಎಸ್‌ಯುವಿಯನ್ನು ಜುಲೈ ಅಂತ್ಯದಲ್ಲಿ ಹೊಸ ರೂಪದಲ್ಲಿ ಬಿಡುಗಡೆ ಮಾಡಲಿದೆ. ಈ ಹೊಸ ಆವೃತ್ತಿಯು ಮೊದಲ ಬಾರಿಗೆ 1.0-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಆಯ್ಕೆ ಮತ್ತು ಬೂಟ್ ಸ್ಪೇಸ್ ಉಳಿಸುವ ಅಂಡರ್-ಬಾಡಿ ಸಿಎನ್‌ಜಿ ಕಿಟ್‌ನಂತಹ ಪ್ರಮುಖ ಬದಲಾವಣೆಗಳೊಂದಿಗೆ ಬರಲಿದೆ.
Read Full Story

02:09 PM (IST) Jun 23

Renukaswamy Darshan Case - ದರ್ಶನ್ ಕೇಸ್‌ನಲ್ಲಿ ಬಿಗ್‌ ಅಪ್ಡೇಟ್, ಸುಪ್ರೀಂ ಕೋರ್ಟ್ ನಲ್ಲಿ ಹೀಗಂತ ಅರ್ಜಿ ಹಾಕೇಬಿಟ್ರು!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ತಮ್ಮ ಕಾನೂನು ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಈ ಹಿಂದೆ ಸುಪ್ರೀಂ ಕೋರ್ಟ್ ವಿಧಿಸಿದ್ದ ಕಠಿಣ ಷರತ್ತುಗಳನ್ನು ಸಡಿಲಿಸುವಂತೆ ಕೋರಿ, ಅವರು ಮತ್ತೆ ಸುಪ್ರೀಂ ಕೋರ್ಟ್‌ಗೆ ವಿಶೇಷ ಮಾರ್ಪಾಡು ಅರ್ಜಿ ಸಲ್ಲಿಸಿದ್ದಾರೆ.
Read Full Story

01:20 PM (IST) Jun 23

ನಟ ದರ್ಶನ್ ಪರ ವಕಾಲತ್ತಿಂದ ಅಧಿಕೃತವಾಗಿ ಹಿಂದೆ ಸರಿದ ವಕೀಲ ಸುನೀಲ್, ಕೋರ್ಟ್‌ಗೆ ಮೆಮೋ ಸಲ್ಲಿಕೆ! ಮತ್ತೊಬ್ಬನ ಎಂಟ್ರಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರ ವಾದಿಸುತ್ತಿದ್ದ ವಕೀಲ ಸುನಿಲ್ ಕುಮಾರ್ ಅವರು ಅಧಿಕೃತವಾಗಿ ಹಿಂದೆ ಸರಿದಿದ್ದಾರೆ. ಅವರ ಸ್ಥಾನಕ್ಕೆ ಇದೀಗ ಹಿರಿಯ ವಕೀಲ ಹಶ್ಮತ್ ಪಾಷಾ ಪ್ರವೇಶಿಸಿದ್ದು, ಈ ಬದಲಾವಣೆಯು ಪ್ರಕರಣದಲ್ಲಿ ಹೊಸ ಸಂಚಲನ ಮೂಡಿಸಿದೆ.
Read Full Story

01:06 PM (IST) Jun 23

ಹುಬ್ಬಳ್ಳಿ Chennamma Circle ಫ್ಲೈಓವರ್ ಇಡೀ ಕಾಮಗಾರಿಯೇ ಕಳಪೆ - ಎಂಜಿನಿಯರ್‌ ತಂಡದಿಂದ ದೂರು

ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಫ್ಲೈಓವರ್ ಕಾಮಗಾರಿಯಲ್ಲಿ ಗಂಭೀರ ತಾಂತ್ರಿಕ ಲೋಪಗಳನ್ನು 'ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್' ತಜ್ಞರು ಪತ್ತೆಹಚ್ಚಿದ್ದಾರೆ.

Read Full Story

01:02 PM (IST) Jun 23

ಗದಗ ಬೈಪಾಸ್ ಎಫೆಕ್ಟ್? ನಾವು ಹೋಗಬೇಕಲ್ವಾ ? ನಾವೇನು ಮಾಡೋದು? ರೈಲು ಪ್ರಯಾಣಿಕರ ಆಕ್ರೋಶ

ಮೈಸೂರು-ಪಂಢರಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲನ್ನು ಗದಗ ಬೈಪಾಸ್ ಮೂಲಕ ಸಂಚರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ನಿರ್ಧಾರದಿಂದ ಪಂಢರಪುರಕ್ಕೆ ಹೋಗುವ ಭಕ್ತರು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

12:28 PM (IST) Jun 23

Chandan Flirt Plan - ಮತ್ತೊಮ್ಮೆ 'ಫ್ಲರ್ಟ್' ಮಾಡಲು ಪ್ಲಾನ್ ಮಾಡಿರೋ ಹ್ಯಾಂಡ್‌ಸಮ್ ಹುಡುಗ ಚಂದನ್ ಕುಮಾರ್!

'ಸ್ಪುರದ್ರೂಪಿ' ನಟ ಚಂದನ್ ಕುಮಾರ್ ನಟನಾಗಿ ಮಾತ್ರವಲ್ಲದೆ ಒಬ್ಬ ಸಮರ್ಥ ನಿರ್ದೇಶಕನಾಗಿಯೂ ಅಬ್ಬರಿಸಲು ಸಜ್ಜಾಗಿದ್ದಾರೆ. ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿದ್ದ ಚಿತ್ರ ‘ಫ್ಲರ್ಟ್’ (Flirt) ಚಿತ್ರ ಪ್ರೇಕ್ಷಕರು , ವಿಮರ್ಶಕರಿಂದ ಉತ್ತಮ ಮೆಚ್ಚುಗೆ  ಪಡೆದಿತ್ತು. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ!

Read Full Story

12:23 PM (IST) Jun 23

ಬಳ್ಳಾರಿ RDPR ಎಇಇ ತಿಪ್ಪೇಸ್ವಾಮಿಗೆ ಲೋಕಾಯುಕ್ತ ಶಾಕ್! ನಗದು, ಚಿನ್ನಾಭರಣ, ಕೋಟ್ಯಂತರ ಮೌಲ್ಯದ ಸೈಟ್‌ಗಳು ಪತ್ತೆ!

ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಪ್ಪೇಸ್ವಾಮಿ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ನಡೆದ ಈ ಕಾರ್ಯಾಚರಣೆಯಲ್ಲಿ ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ಆಸ್ತಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
Read Full Story

12:18 PM (IST) Jun 23

ಅಮ್ಮ, ಅಜ್ಜಿ ಇಬ್ಬರನ್ನೂ ಕಳೆದುಕೊಂಡೆ, ನನ್ನ ಹೃದಯದಲ್ಲಿ ಅವರೆಂದೂ ಇರುತ್ತಾರೆ - ವಿಜಯ್‌ ರಾಘವೇಂದ್ರ ಪುತ್ರನ ಭಾವುಕ ಪೋಸ್ಟ್‌

ನಟ ವಿಜಯ್ ರಾಘವೇಂದ್ರ ಅವರ ಪುತ್ರ ಶೌರ್ಯ, ಇತ್ತೀಚೆಗೆ ನಿಧನರಾದ ಅಜ್ಜಿ ಜಯಮ್ಮ ಹಾಗೂ ಹಿಂದೆ ನಿಧನರಾದ ತಾಯಿ ಸ್ಪಂದನಾ ಅವರನ್ನು ನೆನೆದು ಇನ್ಸ್‌ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. 'ನನ್ನ ಹೃದಯದಿಂದ ಎಂದೂ ಹೋಗೋದಿಲ್ಲ' ಎಂದು ಬರೆದುಕೊಂಡಿದ್ದಾರೆ.

Read Full Story

11:50 AM (IST) Jun 23

ಪ್ರಯಾಣಿಕರ ಮೊದಲ ಆಯ್ಕೆ ಇದೇ! ದಕ್ಷಿಣ ರೈಲ್ವೆ ಆದಾಯ ಗಳಿಕೆಯಲ್ಲೂ ತಿರುವನಂತಪುರಂ-ಮಂಗಳೂರು ವಂದೇ ಭಾರತ್ ನಂ.1

:2025 ರ ಆಗಸ್ಟ್ ನಿಂದ ಅಕ್ಟೋಬರ್ ಅವಧಿಯಲ್ಲ 73.35 ಲಕ್ಷ ರೂ. ಆದಾಯ ಗಳಿಸಿರುವ 20632 ತಿರುವನಂತಪುರಂ-ಮಂಗಳೂರು ವಂದೇ ಭಾರತ್ (ವಿಬಿ) ಎಕ್ಸ್‌ಪ್ರೆಸ್ ದಕ್ಷಿಣ ರೈಲ್ವೆ ನಡೆಸುತ್ತಿರುವ ವಂದೇ ಭಾರತ್ ಸೇವೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಪ್ರಯಾಣಿಕರು ಹೆಚ್ಚಳ ಮತ್ತು ಆದಾಯ ಗಳಿಕೆಯಲ್ಲೂ ಮುಂದಿದೆ.

Read Full Story

11:42 AM (IST) Jun 23

NEET ವಿದ್ಯಾರ್ಥಿಗಳ ವಿಳಂಬಕ್ಕೆ ಟ್ರಾಫಿಕ್ ಕಾರಣ ಆರೋಪಕ್ಕೆ ಸಂಚಾರಿ ಪೊಲೀಸರ ಸ್ಪಷ್ಟನೆ

ನೀಟ್ ಪರೀಕ್ಷೆಗೆ ತಡವಾಗಿ ಬೆಂಗಳೂರು ಟ್ರಾಫಿಕ್ ಕಾರಣ ಎಂದು ರಾಜಕೀಯ ನಾಯಕರು ಆರೋಪಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಸಂಚಾರಿ ಪೊಲೀಸರು, ವಿದ್ಯಾರ್ಥಿಗಳು ಮನೆಯಿಂದ ತಡವಾಗಿ ಹೊರಟಿದ್ದು ಮತ್ತು ತಪ್ಪು ಮಾರ್ಗವನ್ನು ಆಯ್ಕೆ ಮಾಡಿದ್ದೇ ವಿಳಂಬಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

11:21 AM (IST) Jun 23

ಗೃಹಲಕ್ಷ್ಮಿಯರೇ ಮತ್ತೊಮ್ಮೆ ಅರ್ಜಿ ಹಾಕಲು ರೆಡಿಯಾಗಿ! ಇನ್ನೆರಡು ದಿನದಲ್ಲಿ ಪ್ರಕ್ರಿಯೆ ಆರಂಭ, ಈ ದಾಖಲೆಗಳು ರೆಡಿ ಇರಲಿ

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಮರು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಈ ಬಾರಿ ಅಂಗನವಾಡಿ ಕಾರ್ಯಕರ್ತೆಯರು ಮನೆ ಬಾಗಿಲಿಗೆ ಬಂದು ಅರ್ಜಿ ಸಲ್ಲಿಸಲು ಸಹಾಯ ಮಾಡಲಿದ್ದು, ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಈ ಲೇಖನದಲ್ಲಿ ಹೊಸ ನಿಯಮಗಳು, ಬೇಕಾದ ದಾಖಲೆಗಳು ಮತ್ತು ಯಾರು ಅನರ್ಹರು ಎಂಬ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
Read Full Story

10:54 AM (IST) Jun 23

ಪ್ರವಾಸೋದ್ಯಮ ರಾಯಭಾರಿಯಾಗಿ ರಿಷಬ್ ಶೆಟ್ಟಿ ನೇಮಕಕ್ಕೆ ಕರಾವಳಿ ಕಾಂಗ್ರೆಸ್ಸಿಗರ ವಿರೋಧ; ಸಚಿವ ಖಾದರ್ ಖಡಕ್ ತಿರುಗೇಟು!

ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರನ್ನು ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಿಸುವ ಸರ್ಕಾರದ ತೀರ್ಮಾನಕ್ಕೆ ಕರಾವಳಿ ಕಾಂಗ್ರೆಸ್‌ನಲ್ಲಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ. ಖಾದರ್, ಬಿಡದಿ ಟೌನ್‌ಶಿಪ್ ವಿವಾದ ಮತ್ತು ಮುಸ್ಲಿಂ ಸಚಿವ ಸ್ಥಾನದ ಬೇಡಿಕೆ ಕುರಿತು ಏನು ಹೇಳಿದ್ರು?

 

Read Full Story

10:54 AM (IST) Jun 23

ಕೊಡಗು ನ್ಯಾಯಾಲಯಕ್ಕೆ ಸಹನಾಳ ಈ ಮೇಲ್ ಬಾಂಬ್ ಬೆದರಿಕೆ - ಐಸಿಸ್ ದಾಳಿ ಎಚ್ಚರಿಕೆ, ಉದಯನಿಧಿ ಸ್ಟಾಲಿನ್ ಹೆಸರು ಉಲ್ಲೇಖ!

ಮಡಿಕೇರಿ ಜಿಲ್ಲಾ ಪ್ರಧಾನ ನ್ಯಾಯಾಲಯಕ್ಕೆ 'ಸಹನಾ' ಎಂಬ ಹೆಸರಿನಿಂದ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಐಸಿಸ್ ಉಗ್ರರು ಸೈನೈಡ್ ಬಾಂಬ್ ಬಳಸಿ ದಾಳಿ ನಡೆಸುವುದಾಗಿ ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ದಳ ಮತ್ತು ಶ್ವಾನ ದಳ ಸ್ಥಳದಲ್ಲಿ ತೀವ್ರ ತಪಾಸಣೆ ನಡೆಸುತ್ತಿವೆ. ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಸಿಬ್ಬಂದಿಯನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.
Read Full Story

10:43 AM (IST) Jun 23

Bengaluru - 5 ತಿಂಗಳ ಹಿಂದೆ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯಲ್ಲಿಯೇ ಫ್ಲೈಒವರ್?

5 ತಿಂಗಳ ಹಿಂದೆ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ವೈಟ್ ಟಾಪಿಂಗ್ ರಸ್ತೆಯನ್ನು ಅಗೆದು ಫ್ಲೈಓವರ್ ನಿರ್ಮಿಸಲು ಟೆಂಡರ್ ಕರೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು, ತೆರಿಗೆ ಹಣ ಪೋಲಾಗುತ್ತಿರುವ ಬಗ್ಗೆ ಚರ್ಚೆ ಶುರುವಾಗಿದೆ.

Read Full Story

10:01 AM (IST) Jun 23

ಚಿಕ್ಕಮಗಳೂರು - ಆಶ್ರಮ ಶಾಲೆಯ ಸಿಬ್ಬಂದಿ ನಿರ್ಲಕ್ಷ್ಯ, ತಡರಾತ್ರಿ ಗಲಾಟೆಗೆ ಹೆದರಿ ಓಡಿಹೋದ 4 ಪುಟ್ಟ ಮಕ್ಕಳು!

ಚಿಕ್ಕಮಗಳೂರು ತಾಲೂಕಿನ ವಾಲ್ಮೀಕಿ ಆಶ್ರಮ ವಸತಿ ಶಾಲೆಯಲ್ಲಿ, ಹಾಸ್ಟೆಲ್ ಗಲಾಟೆಯಿಂದ ಭಯಭೀತರಾದ ನಾಲ್ವರು ಮಕ್ಕಳು ತಡರಾತ್ರಿ ಪಲಾಯನ ಮಾಡಲು ಯತ್ನಿಸಿದ್ದಾರೆ. ಸುಮಾರು 2 ಕಿ.ಮೀ ನಡೆದ ಮಕ್ಕಳನ್ನು ಸ್ಥಳೀಯರು ರಕ್ಷಿಸಿ ಮರಳಿ ಶಾಲೆಗೆ ಒಪ್ಪಿಸಿದ್ದು, ಈ ಘಟನೆಯು ಶಾಲಾ ಸಿಬ್ಬಂದಿಯ ಘೋರ ನಿರ್ಲಕ್ಷ್ಯವನ್ನು ಬಯಲು ಮಾಡಿದೆ.
Read Full Story

09:52 AM (IST) Jun 23

ಸರ್ಕಾರದ ಕಿಕ್ ಏರಿಸಿದ ಮದ್ಯಪ್ರಿಯರು; ಹೊಸ ಅಬಕಾರಿ ನೀತಿಯಿಂದ ಸರ್ಕಾರದ ಬೊಕ್ಕಸಕ್ಕೆ ಹರಿದು ಬಂತು ಕೋಟಿ ಕೋಟಿ ಆದಾಯ

ರಾಜ್ಯದ ಹೊಸ ಅಬಕಾರಿ ನೀತಿಯು ಸರ್ಕಾರದ ಬೊಕ್ಕಸಕ್ಕೆ ಭಾರಿ ಲಾಭ ತಂದುಕೊಟ್ಟಿದೆ. ಬಿಯರ್ ದರ ಇಳಿಕೆಯಿಂದಾಗಿ ಅದರ ಮಾರಾಟ ಗಣನೀಯವಾಗಿ ಏರಿಕೆಯಾಗಿದ್ದರೆ, ಐಎಂಎಲ್ ದರ ಹೆಚ್ಚಳದ ನಡುವೆಯೂ ಅದರ ವಹಿವಾಟು ಕುಗ್ಗಿಲ್ಲ.

Read Full Story

09:14 AM (IST) Jun 23

ಇಂದಿನಿಂದ 3 ದಿನ ರಾಜ್ಯದಲ್ಲಿ ಉತ್ತಮ ಮಳೆಯ ಮುನ್ಸೂಚನೆ; ಎರಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಮುಂಗಾರು ದುರ್ಬಲವಾಗಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ. ಈ ನಡುವೆ, ಹವಾಮಾನ ಇಲಾಖೆಯು ಮೂರು ದಿನಗಳ ಕಾಲ ಬಹುತೇಕ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಮತ್ತು ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಿದೆ.
Read Full Story

08:51 AM (IST) Jun 23

ಕುಮಟಾದಲ್ಲಿ ಅಮಾನವೀಯ ಕೃತ್ಯ - ಊಟ ಕೇಳಿದ್ದಕ್ಕೆ ಭಿಕ್ಷುಕ ದಂಪತಿಗಳ ಮೇಲೆ ಹೋಟೆಲ್ ಮಾಲೀಕ ಹಲ್ಲೆ! 'ದುಡ್ಡು ಕೊಡ್ತಿವಪ್ಪ' ಬಿಡದೆ ಥಳಿಸಿದ ಪಾಪಿ!

ಹಸಿವು ಆಗಿದೆ ಊಟ ಕೊಡಪ್ಪ ಎಂದ ವೃದ್ಧ ಭಿಕ್ಷುಕ ದಂಪತಿಗಳ ಮೇಲೆ ಕುಮಟಾದ ಗೋವರ್ಧನ್ ಹೋಟೆಲ್ ಮಾಲೀಕನೋರ್ವ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸದ್ಯ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ದಂಪತಿಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

Read Full Story

08:50 AM (IST) Jun 23

ವರ್ಷಧಾರೆ ಕೊರತೆಗೆ ಸೊರಗಿದ ಲಿಂಗನಮಕ್ಕಿ ಜಲಾಶಯ; ಶರಾವತಿ ಜಲಾನಯನದಲ್ಲಿ ಮಳೆ ಅಭಾವ

ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯಿಂದಾಗಿ, ರಾಜ್ಯದ ಪ್ರಮುಖ ವಿದ್ಯುತ್ ಮೂಲವಾದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಆತಂಕಕಾರಿಯಾಗಿ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಒಳಹರಿವು ತೀವ್ರವಾಗಿ ಕಡಿಮೆಯಾಗಿದ್ದು, ಇದು ವಿದ್ಯುತ್ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರಿದೆ. ಮಳೆ ಬಾರದೆ ಹೋದರೆ ರಾಜ್ಯವು ಗಂಭೀರ ವಿದ್ಯುತ್ ಸಂಕಷ್ಟವನ್ನು ಎದುರಿಸುವ ಸಾಧ್ಯತೆಯಿದೆ.
Read Full Story

08:20 AM (IST) Jun 23

ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕದಂತೆ ಮನವಿ; ರೈತ ಸಂಘದ ಆತಂಕ ಏನು?

ಮುಂಬರಲಿರುವ ಭಾರತ-ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದವು ದೇಶದ ಕೃಷಿ ವಲಯಕ್ಕೆ ಮಾರಕವಾಗಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆತಂಕ ವ್ಯಕ್ತಪಡಿಸಿದೆ. ಆಮದು ಸುಂಕ ಕಡಿತ ಮತ್ತು ಕನಿಷ್ಠ ಬೆಂಬಲ ಬೆಲೆ ಯೋಜನೆಗೆ ಧಕ್ಕೆಯಾಗುವ ಸಾಧ್ಯತೆಯಿಂದಾಗಿ, ಈ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ರೈತ ಮುಖಂಡರು ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.
Read Full Story

08:11 AM (IST) Jun 23

17 ಲಕ್ಷಕ್ಕೆ ಕೋಟ್ಯಂತರ ಮೌಲ್ಯದ 5 ಎಕರೆ ಕೃಷಿಭೂಮಿ ಕಬಳಿಕೆ? ದೂರು ದಾಖಲಿಸಿದ ನೊಂದ ರೈತ

17 ಲಕ್ಷ ಸಾಲ ಪಡೆದ ರೈತನಿಗೆ ವಂಚಿಸಿ ಕೋಟ್ಯಂತರ ಮೌಲ್ಯದ 5 ಎಕರೆ ಜಮೀನನ್ನು ಬಡ್ಡಿ ದಂಧೆಕೋರರು ಕಬಳಿಸಿದ್ದಾರೆ. ಅಡಮಾನ ಪತ್ರದ ಬದಲು ಖರೀದಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಈ ಮೋಸ ಎಸಗಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

Read Full Story

07:56 AM (IST) Jun 23

ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ; 1600 ಕಾನ್ಸ್‌ಟಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೊನೆ ದಿನಾಂಕ, ಅರ್ಹತೆ, ವಯೋಮಿತಿ ಎಷ್ಟಿರಬೇಕು?

ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ಇಲಾಖೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಹಯೋಗದೊಂದಿಗೆ 2026ನೇ ಸಾಲಿನ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್‌/ಡಿಎಆರ್‌) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

 

Read Full Story

07:53 AM (IST) Jun 23

Hubballi To Dharwad - ದಣಿದ ಚಿಗರಿಗಳಿಗೆ ಪ್ರತ್ಯೇಕ ಬಿಆರ್‌ಟಿಎಸ್‌ ಕಾರಿಡಾರ್‌ ಏಕೆ?

ಹುಬ್ಬಳ್ಳಿ-ಧಾರವಾಡದ ಬಿಆರ್‌ಟಿಎಸ್‌ ಪ್ರತ್ಯೇಕ ಕಾರಿಡಾರ್‌ನಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದ್ದು, ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಹದಗೆಟ್ಟಿರುವ ಚಿಗರಿ ಬಸ್‌ಗಳು ಮತ್ತು ಕೆಲವು ಭಾಗಗಳಲ್ಲಿ ಈಗಾಗಲೇ ಮಿಶ್ರಪಥದಲ್ಲಿ ಸಂಚರಿಸುತ್ತಿರುವುದರಿಂದ, ಕಾರಿಡಾರ್ ರದ್ದುಪಡಿಸಿ ಸಂಚಾರ ದಟ್ಟಣೆ ನಿವಾರಿಸಬೇಕೆಂಬುದು ಸಾರ್ವಜನಿಕರ ಪ್ರಬಲ ಒತ್ತಾಯವಾಗಿದೆ.
Read Full Story

07:27 AM (IST) Jun 23

ಕೈಕೊಟ್ಟ ಮಳೆ - 11 ಎಕ್ರೆ ಗೋವಿನಜೋಳದ ಬೆಳೆ ಟ್ರ‍್ಯಾಕ್ಟರ್‌ನಿಂದ ನಾಶ ಮಾಡಿದ ಹಾವೇರಿ ರೈತ

ರೈತರೊಬ್ಬರು, ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಹತಾಶರಾಗಿ, ತಾವು ಬೆಳೆದಿದ್ದ 11 ಎಕರೆ ಗೋವಿನಜೋಳದ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ್ದಾರೆ. ಸುಮಾರು 2 ಲಕ್ಷ ರೂಪಾಯಿ ನಷ್ಟ ಅನುಭವಿಸಿರುವ ಅವರು, ಸರ್ಕಾರದ ನೆರವಿಗಾಗಿ ಒತ್ತಾಯಿಸುತ್ತಿದ್ದಾರೆ.

Read Full Story

07:12 AM (IST) Jun 23

ಹೊನ್ನಾಳಿ-ದಾವಣಗೆರೆಗೆ ಬಸವಾಪಟ್ಟಣ ಮೂಲಕ ಹೊಸ ಬಸ್ ಆರಂಭ; ಮಾರ್ಗ, ಸಮಯ ಈ ರೀತಿಯಾಗಿದೆ

ಶಾಸಕ ಡಿ.ಜಿ. ಶಾಂತನಗೌಡಅವರು ಹೊನ್ನಾಳಿಯಿಂದ ದಾವಣಗೆರೆಗೆ ಬಸವಾಪಟ್ಟಣ ಮಾರ್ಗವಾಗಿ ನೂತನ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿದರು. ಈ ಹೊಸ ಸೇವೆಯು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಹೊನ್ನಾಳಿಯ ಜನತೆಗೆ ಅನುಕೂಲವಾಗಲಿದ್ದು, ಇದರ ಸದುಪಯೋಗ ಪಡೆಯುವಂತೆ ಜನತೆಗೆ ಕರೆ ನೀಡಿದರು.

Read Full Story

More Trending News