MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • UT Khader: ಪ್ರವಾಸೋದ್ಯಮ ರಾಯಭಾರಿಯಾಗಿ ರಿಷಬ್ ಶೆಟ್ಟಿ ನೇಮಕಕ್ಕೆ ಕರಾವಳಿ ಕಾಂಗ್ರೆಸ್ಸಿಗರ ವಿರೋಧ; ಸಚಿವ ಖಾದರ್ ಖಡಕ್ ತಿರುಗೇಟು!

UT Khader: ಪ್ರವಾಸೋದ್ಯಮ ರಾಯಭಾರಿಯಾಗಿ ರಿಷಬ್ ಶೆಟ್ಟಿ ನೇಮಕಕ್ಕೆ ಕರಾವಳಿ ಕಾಂಗ್ರೆಸ್ಸಿಗರ ವಿರೋಧ; ಸಚಿವ ಖಾದರ್ ಖಡಕ್ ತಿರುಗೇಟು!

ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರನ್ನು ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಿಸುವ ಸರ್ಕಾರದ ತೀರ್ಮಾನಕ್ಕೆ ಕರಾವಳಿ ಕಾಂಗ್ರೆಸ್‌ನಲ್ಲಿ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ. ಖಾದರ್, ಬಿಡದಿ ಟೌನ್‌ಶಿಪ್ ವಿವಾದ ಮತ್ತು ಮುಸ್ಲಿಂ ಸಚಿವ ಸ್ಥಾನದ ಬೇಡಿಕೆ ಕುರಿತು ಏನು ಹೇಳಿದ್ರು? 

2 Min read
Author : Ravi Janekal
Published : Jun 23 2026, 10:54 AM IST
Share this Photo Gallery
  • FB
  • TW
  • Linkdin
  • Whatsapp
15
ಪ್ರವಾಸೋದ್ಯಮ ರಾಯಭಾರಿ ನೇಮಕ, ರಿಷಬ್‌ ಶೆಟ್ಟಿ ಆಯ್ಕೆಗೆ ಕರಾವಳಿ ಕಾಂಗ್ರೆಸ್ ವಿರೋಧ!
Image Credit : Asianet News

ಪ್ರವಾಸೋದ್ಯಮ ರಾಯಭಾರಿ ನೇಮಕ, ರಿಷಬ್‌ ಶೆಟ್ಟಿ ಆಯ್ಕೆಗೆ ಕರಾವಳಿ ಕಾಂಗ್ರೆಸ್ ವಿರೋಧ!

ಕರಾವಳಿ ಹಾಗೂ ಮಲೆನಾಡು ಪ್ರವಾಸೋದ್ಯಮದ ರಾಯಭಾರಿಯಾಗಿ ಕಾಂತಾರಾ ಖ್ಯಾತಿಯ ನಟ, ರಿಷಬ್ ಶೆಟ್ಟಿ(Rishab shetty) ಅವರನ್ನು ನೇಮಕ ಮಾಡುವ ಸರ್ಕಾರದ ತೀರ್ಮಾನದ ಕುರಿತು ಇದೀಗ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ.

ರಿಷಬ್ ರಾಯಭಾರಿಯಾಗಿ ಆಯ್ಕೆ ಮಾಡಿರುವ ವಿಚಾರವಾಗಿ ಕರಾವಳಿ ಕಾಂಗ್ರೆಸ್ಸಿಗರು ಸಾಮಾಜಿ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ ಈ ವಿಚಾರವಾಗಿ ಆರೋಗ್ಯ ಸಚಿವ ಯುಟಿ ಖಾದರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬರೆಯೋರಿಗೆಲ್ಲ ಉತ್ತರ ಕೊಡೋಕೆ ಆಗುತ್ತಾ? ಕರಾವಳಿ ಪ್ರವಾಸೋದ್ಯಮ ರಾಯಭಾರಿ ಯಾರು ಆಗಬೇಕು ಅನ್ನೋದು ಸಿಎಂ ನೋಡಿಕೊಳ್ಳುತ್ತಾರೆ. ಬೆಂಗಳೂರಿನ ಹೊರಗೆ ಸಂಪುಟ ಸಭೆ ನಡೆದ್ರೆ ಅದು ಮಂಗಳೂರಿನಲ್ಲಿ ಆಗ್ತದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲದಕ್ಕೂ ವಿರೋಧ ಆಗ್ತದೆ ಅದಕ್ಕೆ ಉತ್ತರ ಕೊಡೋಕೆ ಆಗೋಲ್ಲ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಕರಾವಳಿ ಪ್ರವಾಸೋದ್ಯಮ ನೇಮಕ ರಾಯಭಾರಿ ಸಿಎಂ ತೀರ್ಮಾನ
Image Credit : Asianet News

ಕರಾವಳಿ ಪ್ರವಾಸೋದ್ಯಮ ನೇಮಕ ರಾಯಭಾರಿ ಸಿಎಂ ತೀರ್ಮಾನ

ಕರಾವಳಿ ಪ್ರವಾಸೋದ್ಯಮ ರಾಯಭಾರಿ(Coastal Tourism Ambassador) ಯಾರು ಆಗಬೇಕು ಅನ್ನೋದು ಸಿಎಂ ನೋಡಿಕೊಳ್ಳುತ್ತಾರೆ. ಬೆಂಗಳೂರಿನ ಹೊರಗೆ ಸಂಪುಟ ಸಭೆ ನಡೆದ್ರೆ ಅದು ಮಂಗಳೂರಿನಲ್ಲಿ ಆಗ್ತದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲದಕ್ಕೂ ವಿರೋಧ ಆಗ್ತದೆ ಅದಕ್ಕೆ ಉತ್ತರ ಕೊಡೋಕೆ ಆಗೋಲ್ಲ ಎಂದರು.

Related Articles

Related image1
ಕರಾವಳಿ ಟೂರಿಸಂಗೆ ರಿಷಬ್ ಶೆಟ್ಟಿ ರಾಯಭಾರಿ? ಡಿವೈನ್ ಸ್ಟಾರ್ ಬೆನ್ನುತಟ್ಟಿದ ಡಿಕೆಶಿ, ಫೋಟೋ ವೈರಲ್!
Related image2
ಆರೋಗ್ಯ ಸಚಿವ ಯುಟಿ ಖಾದರ್ ಮಹತ್ವದ ನಿರ್ಧಾರ; ಬಿಪಿಎಲ್ ಮಾತ್ರವಲ್ಲ, ಎಪಿಎಲ್ ಕುಟುಂಬಗಳಿಗೂ ಗುಡ್‌ನ್ಯೂಸ್!
35
ಬಿಡದಿ ಟೌನ್‌ಶಿಪ್ ನೋಟಿಫಿಕೇಷನ್ ಮೊದಲು ಕೊಟ್ಟವರು ಯಾರು?
Image Credit : HD Kumaraswamy FB

ಬಿಡದಿ ಟೌನ್‌ಶಿಪ್ ನೋಟಿಫಿಕೇಷನ್ ಮೊದಲು ಕೊಟ್ಟವರು ಯಾರು?

ಇನ್ನು ಬಿಡದಿ ಟೌನ್‌ಶಿಪ್(Bidadi township) ವಿಚಾರದಲ್ಲಿ ಸಿಎಂ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಡುವಿನ ವಾಕ್ಸರ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಅದೆಲ್ಲ ಮಾರ್ಗ ಮಧ್ಯೆ ಚರ್ಚೆ ಮಾಡೋಕೆ ಆಗುತ್ತಾ? ರಾಜ್ಯದ ಜನರ ಬಗ್ಗೆ ಚರ್ಚೆ ಮಾಡೋಕೆ ಅಂತಾನೆ ವಿಧಾನಸೌಧ ಇದೆ. ಅಲ್ಲಿ ಚರ್ಚೆ ಆಗಬೇಕು. ಮೊದಲು ಈ ಬಿಡದಿ ಟೌನ್‌ಶಿಪ್ ನೋಟಿಫಿಕೇಶನ್ ಮಾಡಿದ್ದು ಯಾರು ಅನ್ನೋದು ಜನರಿಗೆ ತಿಳಿಸಲಿ. ಅದು ಮಾಡಿದ್ದೇ ಇವರು(ಕುಮಾರಸ್ವಾಮಿ), ಆ ಸತ್ಯ ಜನರಿಗೆ ಗೊತ್ತಾಗಲಿ ಎಂದರು.

45
ಕಾಂಗ್ರೆಸ್ ಪಕ್ಷ ಯಾವತ್ತೂ ರೈತರ ಪರ
Image Credit : Asianet News

ಕಾಂಗ್ರೆಸ್ ಪಕ್ಷ ಯಾವತ್ತೂ ರೈತರ ಪರ

ಕಾಂಗ್ರೆಸ್ ಪಕ್ಷ ಯಾವತ್ತೂ ರೈತರ ಪರವಾಗಿದೆ. ಈ ದೇಶದ ರೈತರು ವಿಶ್ವಕ್ಕೆ ಮಾದರಿ. ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿದ್ದು ನೆಹರೂ ಅವರ 'ಹಸಿರು ಕ್ರಾಂತಿ' ಯೋಜನೆ. ಈ ದೇಶದ ರೈತರೊಂದಿಗೆ ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಇದೆ, ಮುಂದೆಯೂ ರೈತರ ಬಗ್ಗೆಯೇ ಆಲೋಚನೆ ಮಾಡುತ್ತೆ. ರೈತರಿಗೆ ತೊಂದರೆ ಆಗುವ ಯಾವ ಯೋಜನೆಯೂ ಸರ್ಕಾರ ಮಾಡಲ್ಲ ಅಂತಾ ಸಿಎಂ ಕೂಡ ಹೇಳಿದ್ದಾರೆ. ಬಿಡದಿ ಟೌನ್‌ಶಿಪ್ ರೈತರಿಗೆ, ಅವರ ಕುಟುಂಬಕ್ಕೆ ಈ ಯೋಜನೆ ಸಹಾಯವಾಗಲಿದೆ. ಆದರೆ ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ಬಿಟ್ಟು ಹೊರಗೆ ಬನ್ನಿ ಎಂದು ತಿರುಗೇಟು ನೀಡಿದರು.

55
ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಎಲ್ಲವನ್ನೂ ಕೊಟ್ಟಿದೆ
Image Credit : Asianet News

ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಎಲ್ಲವನ್ನೂ ಕೊಟ್ಟಿದೆ

ಇನ್ನು ಮುಸ್ಲಿಮರಿಗೆ ಸಚಿವ ಸ್ಥಾನ ನೀಡಲು ಮಂಗಳೂರಿನಲ್ಲಿ ಮುಸ್ಲಿಂ ನಾಯಕರ ಸುದ್ಧಿಗೋಷ್ಠಿ ನಡೆಸಿದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಸಮಾನ ಮನಸ್ಕ ಮುಸ್ಲಿಂ ಮುಖಂಡರ ವಿರುದ್ಧವೇ ಸಚಿವರು ಗರಂ ಆದರು. ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್‌ಗಾಗಿ ಕೆಲಸ ಮಾಡಿದವರು ಪಕ್ಷದ ಬಗ್ಗೆ ಮಾತನಾಡೋದು ಬೇಡ. ಪಕ್ಷಕ್ಕೆ ವೋಟು ಹಾಕಿದವರು, ಪಕ್ಷಕ್ಕೆ ದುಡಿಯುವವರು ಮಾತ್ರ ಪಕ್ಷದ ಬಗ್ಗೆ ಮಾತನಾಡಲಿ. ಬೇರೆ ಬೇರೆ ಹೆಸರು ಇಟ್ಕೊಂಡು, ಸಮಾನ ಮನಸ್ಕರು ಅಂತಾ ಹೇಳಿಕೊಂಡು ಬರೋದು ಬೇಡ. ಕಾಂಗ್ರೆಸ್‌ಗೆ ಇವರು ಬುದ್ಧಿವಾದ ಹೇಳುವ ಅವಶ್ಯಕತೆ ಇಲ್ಲ. ಇವರ ಬುದ್ಧಿವಾದ ಪಕ್ಷ ತಗೊಳ್ಳಲ್ಲ. ಪಕ್ಷವನ್ನು ವಿರೋಧಿಸುವವರೆ ಇವತ್ತು ಕೂತು ಪಕ್ಷಕ್ಕೆ ನಿರ್ದೇಶನ ಕೋಡೋ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು. 

ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಅಪಾರ ಕೊಡುಗೆ ನೀಡಿದೆ. ಕೇವಲ ಸಚಿವ ಸ್ಥಾನ ಮಾತ್ರವಲ್ಲದೇ ಎಲ್ಲವನ್ನೂ ಅಲ್ಪಸಂಖ್ಯಾತರಿಗೆ ಕೊಟ್ಟಿದೆ. ಜಮೀರ್ ಅಹ್ಮದ್, ನಾವು ಹಾಗೂ ಎಲ್ಲ ಮುಸ್ಲಿಮರು ಒಟ್ಟಿಗೆ ಇದ್ದರೆ ಪಕ್ಷದ ಅಧ್ಯಕ್ಷರು, ಸಿಎಂ ಎಲ್ಲರೂ ಸೇರಿ ಅಲ್ಪಸಂಖ್ಯಾತರಿಗೆ ಅವಕಾಶ ಕೊಡ್ತಾರೆ. ಆದರೆ ರಾಜಕೀಯವಾಗಿ ಇದನ್ನು ಇನ್ನಷ್ಟು ಬಿಗಡಾಯಿಸಲು ಯತ್ನಿಸುವವರು, ಮತ ಹಾಕದವರ ಮಾತು ಕಾಂಗ್ರೆಸ್ ಪಕ್ಷ ಗಣನೆಗೆ ತೆಗೆದುಕೊಳ್ಳಲ್ಲ ಎಂದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಮಂಗಳೂರು
ರಾಜಕೀಯ ಸುದ್ದಿ
ಯು.ಟಿ. ಖಾದರ್
ಕಾಂಗ್ರೆಸ್

Latest Videos
Recommended Stories
Recommended image1
ಕೈ ಸಮಾವೇಶದಿಂದ ಹಲವು ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಮಿಸ್ ಮತ್ತೊಂದು ರಾಜಕೀಯ ವಾಕ್ಸಮರಕ್ಕೆ ಕಾರಣವಾಯ್ತು!
Recommended image2
HDK vs DKS: 'ವಿಧಾನಸೌಧಕ್ಕೆ ಅಲ್ಲ, ಬಿಡದಿಗೆ ಬನ್ನಿ': ಸಿಎಂ ಡಿಕೆಶಿಗೆ ಎಚ್‌ಡಿಕೆ ತಿರುಗೇಟು
Recommended image3
Bidadi Township Row: ಮುಖಾಮುಖಿ ಚರ್ಚೆಗೆ ಬನ್ನಿ: ಎಚ್‌ಡಿಕೆಗೆ ಸಿಎಂ ಡಿಕೆಶಿ ಪಂಥಾಹ್ವಾನ!
Related Stories
Recommended image1
ಕರಾವಳಿ ಟೂರಿಸಂಗೆ ರಿಷಬ್ ಶೆಟ್ಟಿ ರಾಯಭಾರಿ? ಡಿವೈನ್ ಸ್ಟಾರ್ ಬೆನ್ನುತಟ್ಟಿದ ಡಿಕೆಶಿ, ಫೋಟೋ ವೈರಲ್!
Recommended image2
ಆರೋಗ್ಯ ಸಚಿವ ಯುಟಿ ಖಾದರ್ ಮಹತ್ವದ ನಿರ್ಧಾರ; ಬಿಪಿಎಲ್ ಮಾತ್ರವಲ್ಲ, ಎಪಿಎಲ್ ಕುಟುಂಬಗಳಿಗೂ ಗುಡ್‌ನ್ಯೂಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved