MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Nagamale Darshan: ಎರಡು ಚಿರತೆಗಳು ಸೆರೆ ಸಿಕ್ಕರೂ ನಾಗಮಲೆ ದರ್ಶನಕ್ಕೆ ಯಾಕೆ ಅವಕಾಶ ಸಿಗುತ್ತಿಲ್ಲ?

Nagamale Darshan: ಎರಡು ಚಿರತೆಗಳು ಸೆರೆ ಸಿಕ್ಕರೂ ನಾಗಮಲೆ ದರ್ಶನಕ್ಕೆ ಯಾಕೆ ಅವಕಾಶ ಸಿಗುತ್ತಿಲ್ಲ?

Nagamale Darshan: ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ದರ್ಶನಕ್ಕೆ ಚಿರತೆ ದಾಳಿಯ ಬಳಿಕ ವಿಧಿಸಲಾದ ನಿರ್ಬಂಧ ಇನ್ನೂ ತೆರವಾಗಿಲ್ಲ. ಎರಡು ಚಿರತೆಗಳು ಸೆರೆ ಸಿಕ್ಕಿದ್ದರೂ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನೆಲೆ ಭಕ್ತರು ಪ್ರಶ್ನೆ ಎತ್ತಿದ್ದಾರೆ.

2 Min read
Author : Govindaraj S
Published : Jun 23 2026, 05:39 PM IST
Share this Photo Gallery
  • FB
  • TW
  • Linkdin
  • Whatsapp
14
ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
Image Credit : Asianet News

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಜೂ.23): ಅದು ಕಾಡೊಳಗಿನ ಪ್ರದೇಶ, ನಿತ್ಯ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದವರು ನಾಗಮಲೆಗೂ ಹೋಗೋದು ಕೂಡ ಪ್ರತೀತಿ. ಬೆಂಗಳೂರು ಮೂಲದ ಬಾಲಕನನ್ನು ಪೋಷಕರ ಕಣ್ಣೇದುರೆ ಚಿರತೆ ಎಳೆದೊಯ್ದು ಕೊಂದು ಹಾಕಿತು. ಈ ಪ್ರಕರಣದ ಬೆನ್ನಲ್ಲೇ ಅರಣ್ಯ ಇಲಾಖೆ ನಾಗಮಲೆ ಚಾರಣಕ್ಕೆ ಬ್ರೇಕ್ ಹಾಕಿದೆ. ಇನ್ನೂ ಅವಕಾಶ ಕೊಡದ ಹಿನ್ನಲೆ ನಾಗಮಲೆ ದರ್ಶನ ಭಾಗ್ಯ ಯಾವಾಗ ಎಂದು ಭಕ್ತರು ಪ್ರಶ್ನೆ ಮಾಡ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಭಕ್ತರ ರೂಢಿ
Image Credit : Asianet News

ಭಕ್ತರ ರೂಢಿ

ಅದು ಕೋಟ್ಯಾಂತರ ಭಕ್ತರ ಆರಾಧ್ಯ ದೈವನ ಸನ್ನಿಧಿ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರು ನಾಗಮಲೆಗೆ ಹೋಗಿ ಪೂಜೆ ಮಾಡಿ ಬರೋದು ಪ್ರತೀತಿ. ಬಹಳ ಕಾಲದಿಂದಲೂ ಈ ಪದ್ದತಿಯನ್ನು ಭಕ್ತರು ರೂಢಿಸಿಕೊಂಡು ಬಂದಿದ್ದಾರೆ. ಆದ್ರೆ ಕಳೆದ ತಿಂಗಳು ಮಾದಪ್ಪನ ಬೆಟ್ಟದಿಂದ ನಾಗಮಲೆಗೆ ದರ್ಶನಕ್ಕೆ ಹೋಗ್ತಿದ್ದ ಬೆಂಗಳೂರು ಮೂಲದ ಪೋಷಕರ ಕಣ್ಣೇದುರೆ ಚಿರತೆ ಬಾಲಕನನ್ನು ಎಳೆದೊಯ್ದು ಕೊಂದು ಹಾಕಿತ್ತು. ತದಾನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ನಾಗಮಲೆ ಹೋಗಲೂ ತಾತ್ಕಾಲಿಕ ಬ್ರೇಕ್ ಹಾಕಿದರು. ಈ ಘಟನೆ ನಡೆದು ಒಂದು ತಿಂಗಳು ಕಳೆದು ಹೋಗಿದೆ.

Related Articles

Related image1
ಚಾಮರಾಜನಗರ: ಸಲೂನ್‌ಗೆ ಬಂದ ಮಂಗಕ್ಕೆ ಹೇರ್‌ ಕಟ್ ಮಾಡಿಸಿದ ಕ್ಷೌರಿಕ!
Related image2
ಚಾಮರಾಜನಗರ ಆಕ್ಸಿಜನ್ ದುರಂತ: ಸಂತ್ರಸ್ತರ ಕುಟುಂಬಕ್ಕೆ ಕೊನೆಗೂ ಸಿಕ್ತು ಸರ್ಕಾರಿ ನೌಕರಿ; ಅರ್ಹರ ಪಟ್ಟಿ ಇಲ್ಲಿದೆ ನೋಡಿ
34
ಸ್ಥಳೀಯರಿಂದ ಆತಂಕ
Image Credit : Asianet News

ಸ್ಥಳೀಯರಿಂದ ಆತಂಕ

ಅಲ್ಲದೇ ಮಹದೇಶ್ವರ ಬೆಟ್ಟದ ನಾಗಮಲೆ ಹಾಗೂ ಬಾಲಕನನ್ನು ಕೊಂದ ಸ್ಥಳದಲ್ಲೇ ಎರಡು ಚಿರತೆ ಕೂಡ ಸೆರೆಸಿಕ್ಕಿವೆ. ಆದರೂ ಕೂಡ ಮಾದಪ್ಪನ ಭಕ್ತರಿಗೆ ನಾಗಮಲೆಗೆ ದರ್ಶನಕ್ಕೆ ಹೋಗಲು ಅವಕಾಶ ಕೊಡ್ತಿಲ್ಲ. ಬಂದವರು ಬರಿಗೈಯಲ್ಲಿ ವಾಪಾಸ್ ಆಗುವ ಪರಿಸ್ಥಿತಿಯಿದೆ. ಇನ್ನೂ ನಾಗಮಲೆಗೆ ಪ್ರವೇಶಾವಕಾಶ ಕಲ್ಪಿಸುವ ಬಗ್ಗೆ ಅರಣ್ಯ ಇಲಾಖೆ ಚಂತನೆ ನಡೆಸ್ತಿದೆ. ಈ ಮಧ್ಯೆ ಎರಡು ಚಿರತೆ ಸಿಕ್ಕ ಬಳಿಕವೂ ಇದು ಅರಣ್ಯ ಪ್ರದೇಶವಾದ ಹಿನ್ನಲೆ ಹುಲಿ, ಚಿರತೆ ಸಂಚಾರವಿದೆ. ಮತ್ತೇ ಪ್ರವೇಶಾವಕಾಶ ಕೊಟ್ಟರೆ ಭಕ್ತರಿಗೆ ತೊಂದರೆಯಾಗುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

44
ಶೀಘ್ರವೇ ಸಭೆ?
Image Credit : Asianet News

ಶೀಘ್ರವೇ ಸಭೆ?

ಆದ್ರೆ ಅರಣ್ಯಾಧಿಕಾರಿಗಳು ಕಾವೇರಿ ವನ್ಯಧಾಮ ಹಾಗೂ ಮಲೆ ಮಹದೇಶ್ವರ ವನ್ಯಧಾಮ ಇಬ್ಬರು ಸೇರಿ ನಾಗಮಲೆಗೆ ಪ್ರವೇಶ ಕೊಡುವ ಬಗ್ಗೆ ಹಾಗೂ ಯಾವೆಲ್ಲಾ ಮಾರ್ಗದರ್ಶಿ ಗಳನ್ನು ರೂಪಿಸಬೇಕು ಅನ್ನೋ ಬಗ್ಗೆ ಶೀಘ್ರವೇ ಸಭೆ ನಡೆಸಿ ಅವಕಾಶ ಕೊಡಲಾಗುತ್ತದೆ ಅನ್ನೋ ಉತ್ತರ ಕೊಡ್ತಿದ್ದಾರೆ. ಒಟ್ನಲ್ಲಿ ದೇವರ ದರ್ಶನಕ್ಕೆ ಹೋಗ್ತಿದ್ದ ಬಾಲಕನನ್ನು ಚಿರತೆ ಪೋಷಕರ ಕಣ್ಣೆದುರೇ ಕೊಂದು ಹಾಕಿದ ಬಳಿಕ ಈ ಅರಣ್ಯ ಪ್ರದೇಶದಲ್ಲಿ ಭಯದಿಂದಲೇ ಓಡಾಡಬೇಕಾದ ಪರಿಸ್ಥಿತಿ ಸ್ಥಳೀಯರಿಗೆ ಎದುರಾಗಿದೆ. ನಾಗಮಲೆಗೆ ಹೋಗುವ ಭಕ್ತರು ಬಂದು ವಾಪಾಸ್ ಆಗ್ತಿದ್ದು, ಯಾವ ಗೈಡ್ ಲೈನ್ಸ್ ರೂಪಿಸಿ ನಾಗಮಲೆಗೆ ಅವಕಾಶ ಕೊಡ್ತಾರೆ ಅನ್ನೋದ್ನ ಕಾದುನೋಡಬೇಕಾಗಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಚಿರತೆ
ಕರ್ನಾಟಕ ಸುದ್ದಿ
ಚಾಮರಾಜನಗರ
ಸುದ್ದಿ

Latest Videos
Recommended Stories
Recommended image1
Mangaluru: ಕಾಣೆಯಾದ ಚಿನ್ನು 3 ವಾರದ ಬಳಿಕ ಪತ್ತೆ, ಮನೆ ಮಗು ಹುಡುಕಿ ಕೊಟ್ಟವನಿಗೆ ಮಾಲೀಕನಿಂದ 50ಸಾವಿರ ನಗದು ಬಹುಮಾನ
Recommended image2
Bidadi Township: ಬೈರಮಂಗಲ ಸರ್ಕಲ್‌ಗೆ ಬನ್ನಿ, ರೈತರ ಮುಂದೆ ಚರ್ಚೆ ಮಾಡೋಣ: ಡಿಕೆಶಿಗೆ ನಿಖಿಲ್ ಬಹಿರಂಗ ಸವಾಲ್
Recommended image3
Bengaluru: ಅಂಜನಾನಗರದಲ್ಲಿ ಅನುಮಾನಾಸ್ಪದ ಸಾವು: 3 ತಿಂಗಳ ಗರ್ಭಿಣಿ ವಿವಾಹಿತೆ ಮೃತದೇಹ ಪತ್ತೆ
Related Stories
Recommended image1
ಚಾಮರಾಜನಗರ: ಸಲೂನ್‌ಗೆ ಬಂದ ಮಂಗಕ್ಕೆ ಹೇರ್‌ ಕಟ್ ಮಾಡಿಸಿದ ಕ್ಷೌರಿಕ!
Recommended image2
ಚಾಮರಾಜನಗರ ಆಕ್ಸಿಜನ್ ದುರಂತ: ಸಂತ್ರಸ್ತರ ಕುಟುಂಬಕ್ಕೆ ಕೊನೆಗೂ ಸಿಕ್ತು ಸರ್ಕಾರಿ ನೌಕರಿ; ಅರ್ಹರ ಪಟ್ಟಿ ಇಲ್ಲಿದೆ ನೋಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved