MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • NEET ವಿದ್ಯಾರ್ಥಿಗಳ ವಿಳಂಬಕ್ಕೆ ಟ್ರಾಫಿಕ್ ಕಾರಣ ಆರೋಪಕ್ಕೆ ಸಂಚಾರಿ ಪೊಲೀಸರ ಸ್ಪಷ್ಟನೆ

NEET ವಿದ್ಯಾರ್ಥಿಗಳ ವಿಳಂಬಕ್ಕೆ ಟ್ರಾಫಿಕ್ ಕಾರಣ ಆರೋಪಕ್ಕೆ ಸಂಚಾರಿ ಪೊಲೀಸರ ಸ್ಪಷ್ಟನೆ

ನೀಟ್ ಪರೀಕ್ಷೆಗೆ ತಡವಾಗಿ ಬೆಂಗಳೂರು ಟ್ರಾಫಿಕ್ ಕಾರಣ ಎಂದು ರಾಜಕೀಯ ನಾಯಕರು ಆರೋಪಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಸಂಚಾರಿ ಪೊಲೀಸರು, ವಿದ್ಯಾರ್ಥಿಗಳು ಮನೆಯಿಂದ ತಡವಾಗಿ ಹೊರಟಿದ್ದು ಮತ್ತು ತಪ್ಪು ಮಾರ್ಗವನ್ನು ಆಯ್ಕೆ ಮಾಡಿದ್ದೇ ವಿಳಂಬಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

1 Min read
Author : Mahmad Rafik
Published : Jun 23 2026, 11:42 AM IST
Share this Photo Gallery
  • FB
  • TW
  • Linkdin
  • Whatsapp
15
ನೀಟ್ ಪರೀಕ್ಷೆ ಮತ್ತು ಬೆಂಗಳೂರು ಟ್ರಾಫಿಕ್
Image Credit : Asianet News

ನೀಟ್ ಪರೀಕ್ಷೆ ಮತ್ತು ಬೆಂಗಳೂರು ಟ್ರಾಫಿಕ್

ಭಾನುವಾರ ನಡೆದ ನೀಟ್ ಪರೀಕ್ಷಾ ಕೇಂದ್ರ ತಲುಪಲು ವಿಳಂಬವಾದ ಹಿನ್ನೆಲೆ ಮೂವರು ವಿದ್ಯಾರ್ಥಿಗಳು ವಂಚಿತರಾಗಿದ್ದರು. ಮೂವರು ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿಯಲು ಬೆಂಗಳೂರು ಟ್ರಾಫಿಕ್ ಕಾರಣ ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಆರೋಪಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ರಾಜಕೀಯ ನಾಯಕರ ವಾಕ್ಸಮರ
Image Credit : Asianet News

ರಾಜಕೀಯ ನಾಯಕರ ವಾಕ್ಸಮರ

ಭಾನುವಾರ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ಹಿನ್ನೆಲೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರಿಂದ ಸಹಜವಾಗಿಯೇ ಹೆಬ್ಬಾಳ, ಮೇಕ್ರಿ ಸರ್ಕಲ್, ಗುಟ್ಟಹಳ್ಳಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಟ್ರಾಫಿಕ್‌ನಿಂದಲೇ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದರು.

Related Articles

Related image1
NEET: ನೀಟ್‌ ಬರೆದಿದ್ದ ಕಲಬುರಗಿ ಹುಡ್ಗಿ ಸಾವಿಗೆ ಶರಣು; ಪರೀಕ್ಷೆ ರದ್ದಾದ ಬಳಿಕ ರಾಜ್ಯದಲ್ಲಿ 2ನೇಬಲಿ!
Related image2
ನೀಟ್‌ ವಿದ್ಯಾರ್ಥಿಗಳ ಅನುಕೂಲಕ್ಕೆ ಏರ್‌ಪೋರ್ಟನಲ್ಲೇ 45 ನಿಮಿಷ ಕಾದ ಪ್ರಧಾನಿ ಮೋದಿ
35
ಆಯ್ಕೆ ಮಾಡಿಕೊಂಡ ಮಾರ್ಗ
Image Credit : Asianet News

ಆಯ್ಕೆ ಮಾಡಿಕೊಂಡ ಮಾರ್ಗ

ಇದೀಗ ಈ ಎಲ್ಲಾ ಆರೋಪಗಳಿಗೆ ಬೆಂಗಳೂರು ಸಂಚಾರಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಪರೀಕ್ಷೆಯಿಂದ ಹೊರಗುಳಿಯಲು ಟ್ರಾಫಿಕ್ ಕಾರಣ ಅಲ್ಲ ಎಂದು ಹೇಳಿದ್ದಾರೆ. ಸಿಸಿಟಿವಿ ಪರಿಶೀಲನೆ ವೇಳೆ ಪರೀಕ್ಷೆಗೆ ಹೊರಡುವ ಸಮಯದಲ್ಲಿ ಟ್ರಾಫಿಕ್ ಸಾಮನ್ಯವಾಗಿತ್ತು. ಪೊಲೀಸ್ ಸಿಬ್ಬಂದಿ ಅಗತ್ಯವಿರುವ ಕಡೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮನೆಯಿಂದ ತಡವಾಗಿ ಹೊರಟಿದ್ದು ಮತ್ತು ಪರೀಕ್ಷಾ ಕೇಂದ್ರಕ್ಕೆ ಹೊರಡಲು ಆಯ್ಕೆ ಮಾಡಿಕೊಂಡ ಮಾರ್ಗದಿಂದ ವಿಳಂಬವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

45
ಟ್ರಾಫಿಕ್ ಹೇಗಿತ್ತು?
Image Credit : Asianet News

ಟ್ರಾಫಿಕ್ ಹೇಗಿತ್ತು?

ಸಿಸಿಟಿವಿ ದೃಶ್ಯಗಳ ಪ್ರಕಾರ, ಪರೀಕ್ಷೆಯಿಂದ ವಂಚಿತ ವಿದ್ಯಾರ್ಥಿ, 12:57 PMಕ್ಕೆ ಮನೆಯಿಂದ ಹೊರಟಿದ್ದಾರೆ. 1.30PMಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕಿತ್ತು. ಆದ್ರೆ ವಿದ್ಯಾರ್ಥಿ 1:33 PMಕ್ಕೆ ಪರೀಕ್ಷಾಕೇಂದ್ರ ತಲುಪಿದ್ದಾರೆ. ಆರ್‌ಟಿ ನಗರದಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಶಾರ್ಟ್‌ಕಟ್ ಇದ್ರೂ, ವಿದ್ಯಾರ್ಥಿ ಲಾಂಗ್‌ರೂಟ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

55
ವಿಳಂಬಕ್ಕೆ ಸಂಚಾರ ದಟ್ಟಣೆ ಕಾರಣ ಅಲ್ಲ
Image Credit : Social Media

ವಿಳಂಬಕ್ಕೆ ಸಂಚಾರ ದಟ್ಟಣೆ ಕಾರಣ ಅಲ್ಲ

ಜೂನ್ 21ರಂದು ವಿದ್ಯಾರ್ಥಿಗಳು ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಹೋಗಲು ಸಂಚಾರ ದಟ್ಟಣೆ ಕಾರಣವಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಬೆಂಗಳೂರು ಸಂಚಾರಿ ಪೊಲೀಸರು ನ್ಯಾಯೋಚಿತ, ಪಾರದರ್ಶಕ ಮತ್ತು ಪುರಾವೆ ಆಧಾರಿತ ಮೌಲ್ಯಮಾಪನಗಳಿಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ನೀಟ್
ಬೆಂಗಳೂರು
ಬೆಂಗಳೂರು ಸಂಚಾರ

Latest Videos
Recommended Stories
Recommended image1
ಪ್ರವಾಸೋದ್ಯಮ ರಾಯಭಾರಿಯಾಗಿ ರಿಷಬ್ ಶೆಟ್ಟಿ ನೇಮಕಕ್ಕೆ ಕರಾವಳಿ ಕಾಂಗ್ರೆಸ್ಸಿಗರ ವಿರೋಧ; ಸಚಿವ ಖಾದರ್ ಖಡಕ್ ತಿರುಗೇಟು!
Recommended image2
ಕೊಡಗು ನ್ಯಾಯಾಲಯಕ್ಕೆ ಸಹನಾಳ ಈ ಮೇಲ್ ಬಾಂಬ್ ಬೆದರಿಕೆ: ಐಸಿಸ್ ದಾಳಿ ಎಚ್ಚರಿಕೆ, ಉದಯನಿಧಿ ಸ್ಟಾಲಿನ್ ಹೆಸರು ಉಲ್ಲೇಖ!
Recommended image3
Bengaluru: 5 ತಿಂಗಳ ಹಿಂದೆ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯಲ್ಲಿಯೇ ಫ್ಲೈಓವರ್?
Related Stories
Recommended image1
NEET: ನೀಟ್‌ ಬರೆದಿದ್ದ ಕಲಬುರಗಿ ಹುಡ್ಗಿ ಸಾವಿಗೆ ಶರಣು; ಪರೀಕ್ಷೆ ರದ್ದಾದ ಬಳಿಕ ರಾಜ್ಯದಲ್ಲಿ 2ನೇಬಲಿ!
Recommended image2
ನೀಟ್‌ ವಿದ್ಯಾರ್ಥಿಗಳ ಅನುಕೂಲಕ್ಕೆ ಏರ್‌ಪೋರ್ಟನಲ್ಲೇ 45 ನಿಮಿಷ ಕಾದ ಪ್ರಧಾನಿ ಮೋದಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved