Published : Sep 22, 2025, 06:33 AM ISTUpdated : Sep 22, 2025, 10:13 PM IST

karnataka news live: ಯೂಟ್ಯೂಬರ್ ಮುಕಳೆಪ್ಪ ಮತ್ತೊಂದು ಸಂಕಷ್ಟ, ಸುಳ್ಳು ದಾಖಲೆ ನೀಡಿ ಮದುವೆ ಆರೋಪ

ಸಾರಾಂಶ

ಮೈಸೂರು: ರಾಜ್ಯ ಸರ್ಕಾರದಿಂದ ಆಚರಿಸಲ್ಪಡುವ ನಾಡಹಬ್ಬವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಇಂದಿನಿಂದ ಆರಂಭವಾಗಲಿದೆ. ಬೆಳಗ್ಗೆ 10.10 ರಿಂದ 10.40ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಬುಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್‌ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ದಸರಾ ಹಿನ್ನೆಲೆಯಲ್ಲಿ ಇಡೀ ಸಾಂಸ್ಕೃತಿಕ ನಗರಿ ಬಣ್ಣ ಬಣ್ಣದ ವಿದ್ಯುತ್‌ ದೀಪಾಲಂಕಾರಗಳಿಂದ ಜಗಮಗಿಸುತ್ತಿದೆ. ಸಾಮಾನ್ಯವಾಗಿ ಹತ್ತು ದಿನ ನಡೆಯುವ ದಸರಾ, ಈ ಬಾರಿ ಹನ್ನೊಂದು ದಿನಗಳು ನಡೆಯುತ್ತಿರುವುದು ವಿಶೇಷ. ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯಗೆ ಸಿಎಂ ಆಗಿ ಇದು 8ನೇ ದಸರಾ. ಉಸ್ತುವಾರಿ ಸಚಿವರಾಗಿ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಇದು 5ನೇ ದಸರಾ. ದಸರಾ ಆಚರಣೆಗಾಗಿ ಸಿಎಂ 40 ಕೋಟಿ ರು.ಅನುದಾನ ನೀಡಿದ್ದಾರೆ.

 

10:13 PM (IST) Sep 22

ಯೂಟ್ಯೂಬರ್ ಮುಕಳೆಪ್ಪ ಮತ್ತೊಂದು ಸಂಕಷ್ಟ, ಸುಳ್ಳು ದಾಖಲೆ ನೀಡಿ ಮದುವೆ ಆರೋಪ

ಯೂಟ್ಯೂಬರ್ ಮುಕಳೆಪ್ಪ ಮತ್ತೊಂದು ಸಂಕಷ್ಟ, ಸುಳ್ಳು ದಾಖಲೆ ನೀಡಿ ಮದುವೆ ಆರೋಪ, ಸಬ್ ರಿಜಿಸ್ಟರ್ ಕಚೇರಿಗೆ ಹಿಂದೂಪರ ಸಂಘಟನೆಗಳು ಮುತ್ತಿಗೆ ಹಾಕಿದೆ. ಯುವತಿ ತಾಯಿ ಗಂಭೀರ ಆರೋಪ ಮಾಡಿದ್ದಾರೆ.

Read Full Story

09:39 PM (IST) Sep 22

ಮುಕುಳೆಪ್ಪನದು ನಿಯಮ ಬಾಹಿರ ವಿವಾಹ ನೋಂದಣಿ, ಠಾಣೆ ಮೆಟ್ಟಲೇರಿದ ಪತ್ನಿ!

ಯೂಟ್ಯೂಬರ್  ಮುಕುಳೆಪ್ಪ ಅವರ ವಿವಾಹ ವಿವಾದವು ಹೊಸ ತಿರುವು ಪಡೆದಿದೆ. ನಿಯಮಬಾಹಿರ ವಿವಾಹ ನೋಂದಣಿ ಆರೋಪದ ಮೇಲೆ ಮುಂಡಗೋಡ ಸಬ್ ರಿಜಿಸ್ಟರ್ ಕಚೇರಿಗೆ ಮುತ್ತಿಗೆ ಹಾಕಲಾಗಿದ್ದು, ಇದೀಗ ಪತ್ನಿ ಗಾಯತ್ರಿ ಠಾಣೆಗೆ ಹಾಜರಾಗಿ ತಾನು ಸ್ವಇಚ್ಛೆಯಿಂದ ಮದುವೆಯಾಗಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ.

Read Full Story

09:22 PM (IST) Sep 22

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕದೋಷ, ರೈಲು ಇಲ್ಲದೆ ಪ್ರಯಾಣಿಕರ ಪರದಾಟ

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕದೋಷ, ರೈಲು ಇಲ್ಲದೆ ಪ್ರಯಾಣಿಕರ ಪರದಾಟ, ಸಂಜೆ 7 ಗಂಟೆಯಿಂದ ಸಮಸ್ಯೆ ಎದುರಾಗಿದೆ. ಬಿಎಂಆರ್‌ಸಿಎಲ್ ಸಮಸ್ಯೆ ಖಚಿತಪಡಿಸಿದ್ದು, ಪ್ರಯಾಣಿಕರಲ್ಲಿ ವಿಶೇಷ ಮನವಿಯೊಂದನ್ನು ಮಾಡಿದೆ.

Read Full Story

07:59 PM (IST) Sep 22

ಅಹಮದಾಬಾದ್ ಏರ್ ಇಂಡಿಯಾ ದುರಂತ, ಪೈಲೆಟ್‌ಗಳ ದೋಷವೆಂಬ ವರದಿಯನ್ನು ಖಂಡಿಸಿದ ಸುಪ್ರೀಂ, ಸ್ವತಂತ್ರ ತನಿಖೆಗೆ ನೋಟಿಸ್

ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದ ತನಿಖೆ ಕುರಿತು ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಮತ್ತು ಡಿಜಿಸಿಎಗೆ ನೋಟಿಸ್ ಜಾರಿ ಮಾಡಿದೆ. ಪೈಲಟ್‌ಗಳ ದೋಷವೇ ಕಾರಣ ಎಂದು ಹೇಳಿದ್ದ AAIBಯ ಪ್ರಾಥಮಿಕ ವರದಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ನ್ಯಾಯಾಲಯ,  ನ್ಯಾಯಯುತ ತನಿಖೆಯ ಅಗತ್ಯವನ್ನು ಒತ್ತಿಹೇಳಿದೆ.

Read Full Story

07:49 PM (IST) Sep 22

ದಿಢೀರ್​ ಲೈವ್​ನಲ್ಲಿ ಕಾಣಿಸಿಕೊಂಡ Drishtibottu ನಾಯಕಿ ಅರ್ಪಿತಾ ಕೊಟ್ರು ಬಿಗ್​ ಸರ್​ಪ್ರೈಸ್​! ಏನದು ನೋಡಿ....

ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ನಾಯಕಿ ದೃಷ್ಟಿಯ ನಿಜಬಣ್ಣ ಬಯಲಾಗಿದ್ದು, ಸೀರಿಯಲ್ ಅಂತ್ಯದ ವದಂತಿಗಳಿವೆ. ಈ ನಡುವೆ, ನಟಿ ಅರ್ಪಿತಾ ಮೋಹಿತೆ ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಕಾಣಿಸಿಕೊಂಡು ಕೆಲವೊಂದು ವಿಷಯದ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು? 

Read Full Story

07:15 PM (IST) Sep 22

ಫೋನ್ ಡಿಸ್‌ಕನೆಕ್ಟ್ ಮಾಡ್ತೇನೆ, ಸಂಸದೆ ಸುಧಾಮೂರ್ತಿಗೆ ಸೈಬರ್ ವಂಚಕನ ಬೆದರಿಕೆ

ಫೋನ್ ಡಿಸ್‌ಕನೆಕ್ಟ್ ಮಾಡ್ತೇನೆ, ಸಂಸದೆ ಸುಧಾಮೂರ್ತಿಗೆ ಸೈಬರ್ ವಂಚಕನ ಬೆದರಿಕೆ, ಘಟನೆ ನಡೆದಿದೆ. ನಿಮ್ಮ ಫೋನ್ ನಂಬರ್ ಮೂಲಕ ಇತರರಿಗೆ ವಿಡಿಯೋಗಳು ಕಳುಹಿಸುತ್ತೇನೆ. ತಕ್ಷಣವೇ ನಿಮ್ಮ ಫೋನ್ ಡಿಸ್ಕನೆಕ್ಟ್ ಮಾಡುತ್ತೇವೆ ಎಂದು ಬೆದೆರಿಕೆ ಹಾಕಲಾಗಿದೆ

Read Full Story

06:45 PM (IST) Sep 22

ಕರ್ನಾಟಕದ ಭವಿಷ್ಯಕ್ಕೆ 1000 ಕೋಟಿ ವೆಚ್ಚದಲ್ಲಿ LEAP ಕಾರ್ಯಕ್ರಮ ಘೋಷಣೆ, ಏನಿದು ಮತ್ತೊಂದು ಯೋಜನೆ?

ಕರ್ನಾಟಕ ಸರ್ಕಾರವು 1,000 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (LEAP) ಅನ್ನು ಅನಾವರಣಗೊಳಿಸಿದೆ. ಈ ಯೋಜನೆಯು ಬೆಂಗಳೂರಿನ ಹೊರಗಿನ ನಗರಗಳಲ್ಲಿ ನವೋದ್ಯಮ ಪರಿಸರವನ್ನು ಉತ್ತೇಜಿಸಿ, ಐದು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.
Read Full Story

06:43 PM (IST) Sep 22

ಬಿಗ್‌ ಬಾಸ್ ಆಯೋಜನೆ ವೆಚ್ಚಕ್ಕೆ ಹೋಲಿಸಿದರೆ, ಟ್ರೋಫಿ ವಿಜೇತರು ಪಡೆವ ₹50 ಲಕ್ಷ ತೃಣಕ್ಕೆ ಸಮಾನ!

ಬಿಗ್ ಬಾಸ್ ಕಾರ್ಯಕ್ರಮದ ಒಂದು ಸೀಸನ್‌ಗೆ ಕೋಟಿಗಟ್ಟಲೆ ವೆಚ್ಚವಾಗುತ್ತದೆ. ಮನೆ ನಿರ್ಮಾಣಕ್ಕೆ ₹3-3.5 ಕೋಟಿ, ನಿರೂಪಕರ ಸಂಭಾವನೆಗೆ ₹1-5 ಕೋಟಿ ಖರ್ಚಾದರೆ, ವಿಜೇತರಿಗೆ ನೀಡುವ ₹50 ಲಕ್ಷ ಬಹುಮಾನವು ಈ ಒಟ್ಟು ವೆಚ್ಚಕ್ಕೆ ಹೋಲಿಸಿದರೆ ಅತ್ಯಲ್ಪ. ತೆರಿಗೆ ಕಡಿತದ ನಂತರ ವಿಜೇತರ ಕೈ ಸೇರುವುದು ಕಡಿಮೆ ಮೊತ್ತ.

Read Full Story

06:40 PM (IST) Sep 22

ನೂರೊಂದು ನೆನಪು ಎದೆಯಾಳದಿಂದ... ಹಾಡಿಗೆ 'ಅಣ್ಣಯ್ಯ' ಶಿವು ದನಿಯಾದ್ರೆ ಹೀಗಿರತ್ತೆ ನೋಡಿ...

'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟ ವಿಕಾಶ್ ಉತ್ತಯ್ಯ, ವಿಷ್ಣುವರ್ಧನ್ ಅವರ 'ನೂರೊಂದು ನೆನಪು' ಹಾಡಿಗೆ ಲಿಪ್‌ಸಿಂಕ್ ಮಾಡಿ ಗಮನ ಸೆಳೆದಿದ್ದಾರೆ. ಮೂಲತಃ ಕೊಡಗಿನವರಾದ ಇವರು, ವಕೀಲ ವೃತ್ತಿ ಬಿಟ್ಟು ನಟನೆಗೆ ಬಂದಿದ್ದು, 'ಅಪಾಯವಿದೆ ಎಚ್ಚರಿಕೆ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Read Full Story

06:31 PM (IST) Sep 22

ಬೆಂಗಳೂರು ಆರ್.ಟಿ.ನಗರದ ಆಂಟಿ ಜೊತೆಗೆ ವಾಕಿಂಗ್ ಬಂದ 28 ಗೋಲ್ಡನ್ ರಿಟ್ರೀವರ್ ಶ್ವಾನಗಳು!

ಬೆಂಗಳೂರಿನ ಆರ್‌ಟಿ ನಗರದಲ್ಲಿ ಮಹಿಳೆಯೊಬ್ಬರು 28 ಗೋಲ್ಡನ್ ರಿಟ್ರೀವರ್‌ಗಳೊಂದಿಗೆ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಶ್ವಾನಪ್ರೇಮಿ ಮಹಿಳೆಯನ್ನು ಸಂಗೀತ ಮಲ್ಹೋತ್ರಾ ಎಂದು ಗುರುತಿಸಲಾಗಿದ್ದು, ಅವರ ಪ್ರಾಣಿ ಪ್ರೀತಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
Read Full Story

06:00 PM (IST) Sep 22

ಯಾವಾಗ್ಲೂ ಮೊಬೈಲ್‌ನಲ್ಲಿ ಬ್ಯೂಸಿ ಆಗಿರ್ತಿದ್ದ ಬೆಳಗಾವಿ ನರ್ಸಿಂಗ್ ವಿದ್ಯಾರ್ಥಿನಿ ದಿಢೀರ್ ಸಾವು!

ಬೆಳಗಾವಿಯ ಸದಾಶಿವ ನಗರದ ಸರ್ಕಾರಿ ವಸತಿ ನಿಲಯದಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಸಮಿತ್ರಾ ಗೋಕಾಕ್ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ವಿದ್ಯಾರ್ಥಿನಿ ನಿರಂತರವಾಗಿ ಫೋನ್‌ನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.

Read Full Story

05:25 PM (IST) Sep 22

ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗೆ ಸರ್​ಪ್ರೈಸ್​ ಕೊಟ್ಟ Karna! ಅಮ್ಮಂದಿರು ಫುಲ್​ ಖುಷ್​​

ಜೀ ಕನ್ನಡದ ಜನಪ್ರಿಯ 'ಕರ್ಣ' ಧಾರಾವಾಹಿ ತಂಡವು ನಟ ಕಿರಣ್ ರಾಜ್ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಕಿಟ್ ವಿತರಿಸಿದೆ. ಈ ಧಾರಾವಾಹಿಯಲ್ಲಿ ವೈದ್ಯನ ಪಾತ್ರಕ್ಕಾಗಿ ಕಿರಣ್ ರಾಜ್ ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿ, ಪ್ರಸವದ ಕುರಿತು ಅಧ್ಯಯನ ನಡೆಸಿದ್ದರು.

 

Read Full Story

05:03 PM (IST) Sep 22

ದೆಹಲಿಯಲ್ಲಿ ರಾಜ್ಯ ಕೈ ನಾಯಕರ ದರ್ಬಾರ್ - ನವೆಂಬರ್‌ನಲ್ಲಿ ಮಹತ್ವದ ಬದಲಾವಣೆ ಸುಳಿವು ಕೊಟ್ಟ ಮುಖ್ಯಸಚೇತಕ ಸಲೀಂ ಅಹಮದ್

ವಿಧಾನಪರಿಷತ್ ಮುಖ್ಯಸಚೇತಕ ಸಲೀಂ ಅಹಮದ್   ನವೆಂಬರ್‌ನಲ್ಲಿ ಸಂಪುಟ ಪುನರ್ ರಚನೆಯಾಗುವ ಸುಳಿವು ನೀಡಿದ್ದು, ಶೇ.50ರಷ್ಟು ಸಚಿವರು ಬದಲಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಇದೇ ವೇಳೆ, ದೆಹಲಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಮಿತ್ ಶಾ ಭೇಟಿಯ ವದಂತಿಯನ್ನು ತಳ್ಳಿಹಾಕಿದ್ದಾರೆ.

Read Full Story

05:02 PM (IST) Sep 22

ಮುಕಳೆಪ್ಪ ಮದುವೆಯಾದ ಮ್ಯಾಲ ಬಂಗಾರದ ಸರ ಕೊಡಿಸ್ಯಾನ.., ಗಾಯತ್ರಿ ಜಾಲಿಹಾಳ ವಿಡಿಯೋ ರಿಲೀಸ್!

ಉತ್ತರ ಕರ್ನಾಟಕದ ಯೂಟ್ಯೂಬರ್ ಮುಕಳೆಪ್ಪ ಅವರ ವೈವಾಹಿಕ ವಿವಾದದಲ್ಲಿ ಹೊಸ ತಿರುವು ಉಂಟಾಗಿದೆ. ಪತ್ನಿ ಗಾಯತ್ರಿ, ತಮ್ಮ ತಾಯಿಯ ಆರೋಪಗಳಿಗೆ ಪ್ರತಿಯಾಗಿ ಆಡಿಯೋ ಬಿಡುಗಡೆ ಮಾಡಿದ್ದು, ತನ್ನ ಗಂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಮತ್ತು ಯಾರ ಮಾತನ್ನೂ ಕೇಳಬೇಡಿ ಎಂದು ತಾಯಿಗೆ ಸ್ಪಷ್ಟಪಡಿಸಿದ್ದಾರೆ.
Read Full Story

04:45 PM (IST) Sep 22

ಹೆಂಡತಿ ಮೇಲೆ 3ನೇ ಅಕ್ರಮ ಸಂಬಂಧದ ಶಂಕೆ, ಮಗಳೆದುರೇ 11 ಬಾರಿ ಚಾಕು ಇರಿದು ಕೊಂದ 2ನೇ ಗಂಡ!

Husband Kills Wife in Front of Daughter ಬೆಂಗಳೂರಿನ ಸುಂಕದಕಟ್ಟೆಯಲ್ಲಿ, ಪತ್ನಿಯ ಮೂರನೇ ಅಕ್ರಮ ಸಂಬಂಧದ ಮೇಲೆ ಶಂಕೆಗೊಂಡ ಎರಡನೇ ಪತಿ, ಆಕೆಯ ಮಗಳ ಮುಂದೆಯೇ 11 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. 

Read Full Story

04:04 PM (IST) Sep 22

ಅಮ್ಮನ ಸ್ಮರಣಾರ್ಥ ಮಠಕ್ಕೆ ಕಾರು ಕಾಣಿಕೆ ನೀಡಿದ ನಟ ವಿನೋದ್ ರಾಜ್!

ನಟ ವಿನೋದ್ ರಾಜ್ ಅವರು ತಮ್ಮ ತಾಯಿ, ಖ್ಯಾತ ನಟಿ ಡಾ. ಎಂ. ಲೀಲಾವತಿ ಅವರ ಸ್ಮರಣಾರ್ಥವಾಗಿ ಬಾಗಲಕೋಟೆಯ ಬನಹಟ್ಟಿಯ ಮಹಾಂತ ಮಂದಾರ ಮಠಕ್ಕೆ ಕಾರೊಂದನ್ನು ದಾನ ಮಾಡಿದ್ದಾರೆ. ಇದನ್ನು ಮಕ್ಕಳಿಗೆ ದಾಸೋಹಕ್ಕೆ ಬಳಸುವುದಕ್ಕೆ ಮನವಿ ಮಾಡಿದ್ದಾರೆ.

Read Full Story

03:51 PM (IST) Sep 22

ಅಂಬರೀಶ್, ಶಿವಣ್ಣ, ವಿಷ್ಣು.. ಸ್ಟಾರ್‌ ನಟರ ಸಿನಿಮಾ ಹಿಟ್ ಆಗಲು ಮೋಹನ್‌ಲಾಲ್ ಸಿನಿಮಾಗಳೇ ಮೂಲವೇ ಕಾರಣ!

Dadasaheb Phalke Winner Mohanlals 5 Classic Films Remade Successfully in Kannada ಮಲಯಾಳಂ ನಟ ಮೋಹನ್‌ಲಾಲ್‌ ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಅವರ ಅನೇಕ ಕ್ಲಾಸಿಕ್ ಚಿತ್ರಗಳು ಕನ್ನಡದಲ್ಲಿ ರಿಮೇಕ್ ಆಗಿ ಭಾರಿ ಯಶಸ್ಸು ಕಂಡಿವೆ.

 

Read Full Story

03:18 PM (IST) Sep 22

ಬಿಹಾರ ಪ್ರವಾಸ ಹೊರಟ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ - ಕಾಂಗ್ರೆಸ್‌ನ ಹೊಸ ರಣತಂತ್ರ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಹಾರ ಪ್ರವಾಸ ಕೈಗೊಂಡಿದ್ದಾರೆ. ಪಾಟ್ನಾದಲ್ಲಿ ನಡೆಯಲಿರುವ ಕಾಂಗ್ರೆಸ್ ವರ್ಕಿಂಗ್ ಕಮಿಟಿ  ಸಭೆಯಲ್ಲಿ ಇಬ್ಬರೂ ನಾಯಕರು ಭಾಗವಹಿಸಲಿದ್ದು, ಈ ಪ್ರವಾಸವು ರಾಷ್ಟ್ರೀಯ ರಾಜಕೀಯದಲ್ಲಿ ಕರ್ನಾಟಕದ ನಾಯಕರ ಪಾತ್ರ   ಸೂಚಿಸುತ್ತಿದೆ.

Read Full Story

03:00 PM (IST) Sep 22

ಮುದ್ದಾದ ಹುಡುಗಿ ಕೈಹಿಡಿಯಲಿರುವ ಬಿಗ್‌ಬಾಸ್ ವಿನ್ನರ್‌!

Suraj Chavan Marriage: ಬಿಗ್‌ಬಾಸ್ ಮರಾಠಿ ಸೀಸನ್ 5ರ ವಿನ್ನರ್‌ ಸೂರಜ್ ಚವಾಣ್ ಅವರ ಮದುವೆ ವಿಚಾರವು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿದೆ. ಅವರ ಬಿಗ್‌ಬಾಸ್ ಸೋದರಿ ಅಂಕಿತಾ ವಾಲಾವಾಲ್ಕರ್ ಅವರ ಪೋಸ್ಟ್ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.

Read Full Story

02:43 PM (IST) Sep 22

ಕಾಂತಾರ ಚಾಪ್ಟರ್ 1 ಟ್ರೇಲರ್; ಈ ಕುತೂಹಲ ತಿಳಿದರೆ ಟಿಕೆಟ್ ಬುಕಿಂಗ್ ದಾಖಲೆ ಬರೆಯೋದು ಗ್ಯಾರಂಟಿ!

ಕಾಂತಾರ: ಚಾಪ್ಟರ್ 1 ಟ್ರೇಲರ್, ದಂತಕಥೆಯ ಮೂಲ ಅನಾವರಣಗೊಳಿಸುತ್ತದೆ. ಕಾಡಿನ ನಾಯಕ ಮತ್ತು ರಾಣಿಯ ಪ್ರೀತಿಯಿಂದ ರಾಜನ ವಿರುದ್ಧ ಯುದ್ಧ ಪ್ರಾರಂಭ. ಕಾಂತಾರ ಚಾಪ್ಟರ್ 1 ಟ್ರೇಲರ್ ನೋಡಿದವರಿಗೆ ಈಗಲೇ ಟಿಕೆಟ್ ಬುಕಿಂಗ್ ಮಾಡಬೇಕು ಎನ್ನುವಷ್ಟು ಕುತೂಹಲ ಸೃಷ್ಟಿಸಿದೆ.

Read Full Story

02:33 PM (IST) Sep 22

ಬೆಳ್ಳಂಬೆಳಗ್ಗೆ ಬೆಂಗಳೂರನ್ನು ಬೆಚ್ಚಿಬೀಳಿಸಿದ 1.5 ಕೋಟಿ ದರೋಡೆ! ಅಡುಗೆ ಮನೆಯಲ್ಲಿದ್ದ ಹಣ ಕಳ್ಳರಿಗೆ ತಿಳಿದಿದ್ದು ಹೇಗೆ?

ಬೆಂಗಳೂರಿನ ಯಲಹಂಕದಲ್ಲಿ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ನುಗ್ಗಿದ ನಾಲ್ವರು ಖದೀಮರು 1.5 ಕೋಟಿ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ಜಮೀನು ಖರೀದಿಗೆ ಇಟ್ಟಿದ್ದ ಹಣವನ್ನು ಕಳೆದುಕೊಂಡಿದ್ದು, ಈ ಸಂಬಂಧ ಯಲಹಂಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

02:21 PM (IST) Sep 22

ಆಕಾಶದಿಂದ ಧರೆಗಿಳಿದ ದಿಶಾಳ ನಶೆಯಲ್ಲಿ ಹಜ್​ಬೆಂಡು! ಇತ್ತ ಸಂಜನಾಳಿಗೆ ಅತ್ತೆ ಮನೆಯಿಂದ ಗೇಟ್​ಪಾಸ್​

ಬ್ರಹ್ಮಗಂಟು ಧಾರಾವಾಹಿಯು ಯಾರೂ ಊಹಿಸದ ರೋಚಕ ತಿರುವು ಪಡೆದುಕೊಂಡಿದೆ. ದೀಪಾ ಈಗ ಮಾಡೆಲ್ ದಿಶಾ ಆಗಿ ಬದಲಾಗಿದ್ದು, ಅವಳೇ ತನ್ನ ಪತ್ನಿ ಎಂದು ತಿಳಿಯದ ಚಿರು ಅವಳತ್ತ ಆಕರ್ಷಿತನಾಗಿದ್ದಾನೆ. మరోవైపు, ಸಂಜನಾಳ ಕುತಂತ್ರ ಬಯಲಾಗಿ ಆಕೆಯನ್ನು ಮನೆಯಿಂದ ಹೊರಹಾಕಲಾಗಿದೆ.
Read Full Story

01:03 PM (IST) Sep 22

ವಿಶ್ವದಾದ್ಯಂತ ಭಾರಿ ನಿರೀಕ್ಷೆ ಮೂಡಿಸಿರುವ 'ಕಾಂತಾರ ಅಧ್ಯಾಯ 1' ಟ್ರೇಲರ್ ಬಿಡುಗಡೆ!

ಬಹುನಿರೀಕ್ಷಿತ 'ಕಾಂತಾರ ಅಧ್ಯಾಯ 1' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದು ಏಳು ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ರುಕ್ಮಿಣಿ ವಸಂತ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ. 

Read Full Story

12:47 PM (IST) Sep 22

ಟಿಪ್ಪು ಸುಲ್ತಾನ್ ಕೂಡ ದಸರಾ ಆಚರಿಸಿದ್ದರು, ಇತಿಹಾಸ ತಿರುಚಬೇಡಿ - ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಸ್ಲಿಂ ಮಹಿಳೆ ಬಾನು ಮುಷ್ತಾಕ್ ಅವರು ಉದ್ಘಾಟನೆ ಮಾಡಿರುವುದನ್ನು ಬಲವಾಗಿ ಸಮರ್ಥಿಸಿಕೊಂಡರು. ಬಾನು ಮುಷ್ತಾಕ್ ಅವರ ಸಾಧನೆ ಮತ್ತು ಕನ್ನಡಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

Read Full Story

12:40 PM (IST) Sep 22

ಬೆಂಗಳೂರು-ವಾರಣಾಸಿ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಭದ್ರತಾ ವೈಫಲ್ಯ, ಹೈಜಾಕ್‌ಗೆ ಯತ್ನ?

Hijack Attempt on Bengaluru-Varanasi Air India ಬೆಂಗಳೂರಿನಿಂದ ವಾರಣಾಸಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ, ಪ್ರಯಾಣಿಕನೊಬ್ಬ ಕಾಕ್‌ಪಿಟ್ ಬಾಗಿಲು ತೆರೆಯಲು ಯತ್ನಿಸಿ ಭದ್ರತಾ ಆತಂಕ ಸೃಷ್ಟಿಸಿದ್ದಾನೆ. ಹೈಜಾಕ್ ಭಯದಿಂದ ಕ್ಯಾಪ್ಟನ್ ಬಾಗಿಲು ತೆರೆಯಲು ನಿರಾಕರಿಸಿದ್ದಾನೆ.

Read Full Story

12:22 PM (IST) Sep 22

ಕುಳಿತುಕೊಳ್ಳಲು ಆಗದವರು ಯಾಕೆ ಬರುತ್ತೀರಿ? - ದಸರಾ ಕಾರ್ಯಕ್ರಮದಲ್ಲಿ ರೇಗಿದ ಸಿಎಂ ಸಿದ್ದರಾಮಯ್ಯ

ದಸರಾ ಕಾರ್ಯಕ್ರಮದಿಂದ ಎದ್ದು ಹೋಗುತ್ತಿದ್ದ ಜನರ ಮೇಲೆ ಸಿಎಂ ಸಿದ್ದರಾಮಯ್ಯ ಸಿಟ್ಟು ಪ್ರದರ್ಶಿಸಿದ್ದು, ಮನೆಯಲ್ಲಿ ಇರಬೇಕಿತ್ತು. ಯಾಕೆ ಬರ್ತಿರಾ ಇಲ್ಲಿಗೆ.‌ ಸ್ವಲ್ಪ ಹೊತ್ತು ಕುಳಿತುಕೊಳ್ಳಲು ಆಗಲ್ವಾ ಎಂದು ರೇಗಿದ್ದಾರೆ.

Read Full Story

12:00 PM (IST) Sep 22

ಧರ್ಮಸ್ಥಳ ಬುರುಡೆ ಕೇಸ್; ಚಿನ್ನಯ್ಯನಿಗೆ ಹಣ ಕಳಿಸಿದವರಿಗೆಲ್ಲಾ ಎಸ್‌ಐಟಿ ನೋಟೀಸ್!

ಶ್ರೀ ಕ್ಷೇತ್ರ ಧರ್ಮಸ್ಥಳದ ಬುರುಡೆ ಪ್ರಕರಣದಲ್ಲಿ, ಎಸ್ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಪ್ರಮುಖ ಆರೋಪಿ ಚಿನ್ನಯ್ಯನ ಬ್ಯಾಂಕ್ ಖಾತೆಗೆ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ₹3 ಲಕ್ಷ ಹಣ ವರ್ಗಾಯಿಸಿದ ಹಲವರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಹಣದ ಮೂಲವನ್ನು ಪತ್ತೆಹಚ್ಚಲು ವಿಚಾರಣೆಗೆ ಕರೆಯಲಾಗಿದೆ.

Read Full Story

11:50 AM (IST) Sep 22

ದೇವರಾಜ ಅರಸು ರೀತಿ ಸಿದ್ದರಾಮಯ್ಯ ದೀರ್ಘ ರಾಜಕಾರಣ ಮಾಡಲಿ - ಶಾಸಕ ಜಿ.ಟಿ. ದೇವೇಗೌಡ

25 ವರ್ಷ ನಾನು ಸಿದ್ದರಾಮಯ್ಯ ಜೊತೆ ಇದ್ದೆ. 40 ವರ್ಷವಾದರೂ ಸಿದ್ದರಾಮಯ್ಯ ಜೊತೆ ಮಹದೇವಪ್ಪ, ವೆಂಕಟೇಶ್ ಇದ್ದಾರೆ. ಮನುಷ್ಯನಲ್ಲಿನ ರಾಕ್ಷಸಿ ಗುಣವನ್ನು ಚಾಮುಂಡಿ ತಾಯಿ ನಾಶ ಮಾಡಲಿ ಎಂದು ದಸರಾ ಉದ್ಘಾಟನೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.

Read Full Story

11:40 AM (IST) Sep 22

Kothalavadi - ಬಡವರು ಇಂಡಸ್ಟ್ರಿಗೆ ಬರೋದು ತಪ್ಪಾ? ನನ್​ ಲೈಫೇ ಹಾಳು ಮಾಡ್​ಬಿಟ್ರಿ - ಗಳಗಳನೆ ಅತ್ತ ನಟಿ ಸ್ವರ್ಣ

ನಟ ಯಶ್ ಅವರ ತಾಯಿ ನಿರ್ಮಾಣದ 'ಕೊತ್ತಲವಾಡಿ' ಚಿತ್ರದ ಸಂಭಾವನೆ ವಿವಾದ ತಾರಕಕ್ಕೇರಿದೆ. ನಟ ಮಹೇಶ್ ಗುರು ಬಳಿಕ, ಇದೀಗ ನಟಿ ಸ್ವರ್ಣ ತಮಗೆ ಪೇಮೆಂಟ್ ನೀಡಿಲ್ಲ ಮತ್ತು ತಮ್ಮ ಭವಿಷ್ಯವನ್ನೇ ಹಾಳುಮಾಡಿದ್ದಾರೆ ಎಂದು ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದಾರೆ. ವಿಡಿಯೋ ವೈರಲ್​  ಆಗಿದೆ. 

Read Full Story

11:30 AM (IST) Sep 22

ಜಿಎಸ್‌ಟಿ ಇಳಿಕೆ ಮೂಲಕ ರಾಜ್ಯಕ್ಕೆ ನಷ್ಟ ಮಾಡಿಸಿ ಕೇಂದ್ರ ಲಾಭ ಮಾಡಿಕೊಳ್ಳುತ್ತಿದೆ - ಕೃಷ್ಣಬೈರೇಗೌಡ

Minister Krishna Byre Gowda on GST Cut ದೇಶಾದ್ಯಂತ ಜಿಎಸ್‌ಟಿ ದರ ಇಳಿಕೆಯಾಗಿದ್ದು, ಇದು ನಾಗರಿಕರಿಗೆ ಲಾಭದಾಯಕವಾಗಿದೆ. ಆದರೆ, ಈ ಕ್ರಮದಿಂದ ಕರ್ನಾಟಕಕ್ಕೆ ವಾರ್ಷಿಕ ₹15 ಸಾವಿರ ಕೋಟಿ ಆದಾಯ ನಷ್ಟವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ. 

Read Full Story

11:29 AM (IST) Sep 22

ಗಣೇಶ ಮೂರ್ತಿಗೆ ಅವಮಾನ - ಕಿಡಿಗೇಡಿಗಳ ಕೃತ್ಯ ಇಡೀ ಹಿಂದೂ ಸಮಾಜಕ್ಕಾದ ಅವಮಾನ - ಸಿ.ಟಿ.ರವಿ

ಚಪ್ಪಲಿ ಹಾರ ಹಾಕಿರುವ ಪ್ರಕರಣ ಬರೀ ಗಣಪತಿಗೆ ಆಗಿರುವ ಅವಮಾನವಲ್ಲ, ಇಡೀ ಹಿಂದೂ ಸಮಾಜಕ್ಕೆ ಆಗಿರುವ ಅನ್ಯಾಯವಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ಸರಿಯಾದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಸಿ.ಟಿ.ರವಿ ಹೇಳಿದರು.

Read Full Story

11:25 AM (IST) Sep 22

ದಸರಾ ಜ್ಯೋತಿ ಬೆಳಗಿದ ಬಾನು ಮುಷ್ತಾಕ್ ತೆರೆದಿಟ್ಟ ಹಿಂದೂಗಳ ಬಾಂಧವ್ಯದ 'ಬಾಗಿನ'ದ ಕಥನ!

ವಿಶ್ವವಿಖ್ಯಾತ ಮೈಸೂರು ದಸರಾವನ್ನು ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಉದ್ಘಾಟಿಸಿದರು. ಈ ವೇಳೆ ಸೌಹಾರ್ದತೆ, ಮಾನವೀಯ ಮೌಲ್ಯಗಳ ಕುರಿತು ಮಾತನಾಡಿದ ಅವರು, ಹಿಂದೂ-ಮುಸ್ಲಿಂ ಬಾಂಧವ್ಯವನ್ನು ಸಾರುವ ತಮ್ಮ 'ಬಾಗಿನ' ಎಂಬ ಕವನವನ್ನು ವಾಚಿಸಿದರು.
Read Full Story

10:58 AM (IST) Sep 22

ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಪರ್ಯಾಯ ರಜೆಗೆ ಚಿಂತನೆ - ಮಧು ಬಂಗಾರಪ್ಪ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಕಡಿತವಾಗುವ ದಸರಾ ರಜೆ ದಿನಗಳನ್ನು ಪರ್ಯಾಯ ರೀತಿಯಲ್ಲಿ ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

Read Full Story

10:51 AM (IST) Sep 22

ಚಿಕ್ಕಬಳ್ಳಾಪುರ ಸಂಸದ ಕೆ. ಸುಧಾಕರ್‌ ಪತ್ನಿ ಡಿಜಿಟಲ್‌ ಅರೆಸ್ಟ್‌, ಲಕ್ಷ ಲಕ್ಷ ಹಣ ಕಳೆದುಕೊಂಡು ಕಂಗಾಲು!

MP K Sudhakar's Wife Preethi Sudhakar Loses ₹14 Lakhs in Digital Arrest Scam ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್‌ ಅವರ ಪತ್ನಿ ಡಾ. ಪ್ರೀತಿ ಸುಧಾಕರ್ ಅವರು 'ಡಿಜಿಟಲ್ ಅರೆಸ್ಟ್' ಎಂಬ ಹೊಸ ಮಾದರಿಯ ಸೈಬರ್ ವಂಚನೆಗೆ ಒಳಗಾಗಿದ್ದಾರೆ. 

Read Full Story

10:51 AM (IST) Sep 22

ಬಿಸಿಸಿಐ ಅಧ್ಯಕ್ಷರಾಗಿ ಮಿಥುನ್ ಆಯ್ಕೆ ಖಚಿತ! ಅಷ್ಟಕ್ಕೂ ಯಾರು ಈ ಮಿಥುನ್ ಮನ್ಹಾಸ್?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಮಿಥುನ್ ಮನ್ಹಾಸ್ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ರೋಜರ್ ಬಿನ್ನಿ ಅವರ ರಾಜೀನಾಮೆ ನಂತರ, ಈ ಅಚ್ಚರಿಯ ನಿರ್ಧಾರ ಕೈಗೊಳ್ಳಲಾಗಿದೆ.

Read Full Story

10:46 AM (IST) Sep 22

ಟ್ರಂಪ್‌ ವೀಸಾ ಪ್ರಹಾರ - ಸ್ವಾವಲಂಬಿ ಭಾರತಕ್ಕೆ ತೆರೆದ ಅವಕಾಶ, ಆತ್ಮನಿರ್ಭರವಾಗಲು ಇದು ಸಕಾಲ

ಅಮೆರಿಕ ಅಧ್ಯಕ್ಷ ಟ್ರಂಪ್‌ ಘೋಷಿಸಿದ ವೀಸಾ ಶುಲ್ಕ ಹೆಚ್ಚಳ ಭಾರತೀಯರಲ್ಲಿ ಕಳವಳ ಉಂಟುಮಾಡಿದೆ. ಭಾರತದಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಿವೆ. ಭಾರತ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿದೆ. ಹಾಗಾಗಿ ಭಾರತ ಆತಂಕಪಡುವ ಅಗತ್ಯವಿಲ್ಲವೆಂಬುದು ಸ್ಪಷ್ಟ.

Read Full Story

10:18 AM (IST) Sep 22

ನಂದಿ ಧ್ವಜ ಪೂಜೆ ಮಾಡುವ ಮೂಲಕ ತುಮಕೂರು ದಸರಾ ಉದ್ಘಾಟಿಸಿದ ಗೃಹ ಸಚಿವ ಪರಮೇಶ್ವರ್

ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆ ಸಾರುವ ತುಮಕೂರು ದಸರಾ ಹಬ್ಬವನ್ನು ನಂದಿ ಧ್ವಜ ಪೂಜೆ ಮಾಡುವ ಮೂಲಕ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರು. ಹಾಗೂ ಧಾರ್ಮಿಕ ಮಂಟಪದ ಉದ್ಘಾಟನೆಯನ್ನು ಮಾಡಿದರು.

Read Full Story

09:58 AM (IST) Sep 22

ವರದಿಗಾರರ ಡೈರಿ - ಒಂದೇ ಮತದಿಂದ ತಾನೇ ವಾಜಪೇಯಿ ಅಧಿಕಾರ ಹೋಗಿದ್ದು..!

ವಾಜಪೇಯಿ ಸರ್ಕಾರ ಬೀಳಿಸಿದ್ದು ಯಾರು? ಪ್ರೇಕ್ಷಕನೊಬ್ಬ, ಹೌದು ಸಾರ್‌... ಹೊಂದಾಣಿಕೆ ರಾಜಕಾರಣ ಭಾಳ ಆಗೈತಿ. 1998ರಲ್ಲೂ ವಾಜಪೇಯಿ ಅವರ ಅಧಿಕಾರ ಹೋಗಿದ್ದೂ ಒಂದೇ ಮತದಿಂದ, ಇದೇ ಹೊಂದಾಣಿಕೆ ರಾಜಕಾರಣದಿಂದ ಅಲ್ವಾ ಸರ್‌... ಎಂದು ಜೋರಾಗಿ ಕೂಗಿದಾಗ ಸಭೆಯಲ್ಲಿ ನಗೆಬುಗ್ಗೆ.

Read Full Story

09:54 AM (IST) Sep 22

ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ - ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚನೆ

ಹವಾಮಾನ ಇಲಾಖೆಯು ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಈಶಾನ್ಯ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ವ್ಯಾಪಕ ಮಳೆಯಾಗಲಿದ್ದು, ಭೂಕುಸಿತ ಮತ್ತು ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

Read Full Story

09:40 AM (IST) Sep 22

ಹೊಸ ಆಸ್ಪತ್ರೆ ತೆರೆಯಲು ಏಕಗವಾಕ್ಷಿ ಪದ್ಧತಿ - ಸಚಿವ ಶರಣ ಪ್ರಕಾಶ್ ಪಾಟೀಲ್

ರಾಜ್ಯದಲ್ಲಿ ಆಸ್ಪತ್ರೆ ತೆರೆಯಲು ಈಗಿರುವ ಕ್ಲಿಷ್ಟಕರ ನೀತಿಯನ್ನು ತೊಡೆದುಹಾಕಲು ತಮ್ಮ ಸರ್ಕಾರ ಏಕಗವಾಕ್ಷಿ ಪದ್ಧತಿ ತರುವ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದರು.

Read Full Story

More Trending News