MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • Kothalavadi Payment Controversy: ಬಡವರು ಇಂಡಸ್ಟ್ರಿಗೆ ಬರೋದು ತಪ್ಪಾ? ನನ್​ ಲೈಫೇ ಹಾಳು ಮಾಡ್​ಬಿಟ್ರಿ: ಗಳಗಳನೆ ಅತ್ತ ನಟಿ ಸ್ವರ್ಣ

Kothalavadi Payment Controversy: ಬಡವರು ಇಂಡಸ್ಟ್ರಿಗೆ ಬರೋದು ತಪ್ಪಾ? ನನ್​ ಲೈಫೇ ಹಾಳು ಮಾಡ್​ಬಿಟ್ರಿ: ಗಳಗಳನೆ ಅತ್ತ ನಟಿ ಸ್ವರ್ಣ

 ಪುಷ್ಪಾ ಅರುಣ್​ ಕುಮಾರ್​ ನಿರ್ಮಾಣದ 'ಕೊತ್ತಲವಾಡಿ' ಚಿತ್ರದ ಸಂಭಾವನೆ ವಿವಾದ ತಾರಕಕ್ಕೇರಿದೆ. ನಟ ಮಹೇಶ್ ಗುರು ಬಳಿಕ, ಇದೀಗ ನಟಿ ಸ್ವರ್ಣ ತಮಗೆ ಪೇಮೆಂಟ್ ನೀಡಿಲ್ಲ ಮತ್ತು ತಮ್ಮ ಭವಿಷ್ಯವನ್ನೇ ಹಾಳುಮಾಡಿದ್ದಾರೆ ಎಂದು ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದಾರೆ. ವಿಡಿಯೋ ವೈರಲ್​  ಆಗಿದೆ. 

2 Min read
Suchethana D
Published : Sep 22 2025, 11:40 AM IST
Share this Photo Gallery
  • FB
  • TW
  • Linkdin
  • Whatsapp
17
ಮುಗಿಯದ ಕೊತ್ತಲವಾಡಿ ಸಮಸ್ಯೆ
Image Credit : Asianet News

ಮುಗಿಯದ ಕೊತ್ತಲವಾಡಿ ಸಮಸ್ಯೆ

 ಪುಷ್ಪ ಅರುಣ್​ ಕುಮಾರ್​ ನಿರ್ಮಾಣದ ಕೊತ್ತಲವಾಡಿ (Kothalavadi) ಯಾಕೋ ಬರೀ ವಿವಾದದಲ್ಲಿಯೇ ಮುಳುಗಿ ಬಿಟ್ಟಿದೆ. ಈ ಚಿತ್ರದ ನಟ-ನಟಿಯರಿಗೆ ಪೇಮೆಂಟ್ ಆಗಿಲ್ಲ ಎಂದು ಭಾರಿ ಗಲಾಟೆ ನಡೆಯುತ್ತಿರುವ ನಡುವೆಯೇ ಇದೀಗ ನಟಿ ಸ್ವರ್ಣ ಮತ್ತೊಂದು ವಿಡಿಯೋ ಮಾಡಿ ಕಣ್ಣೀರಿಟ್ಟಿದ್ದಾರೆ. ಬಡವರು ಇಂಡಸ್ಟ್ರಿಗೆ ಬರೋದು ತಪ್ಪಾ? ಲೈಫೇ ಹಾಳು ಮಾಡ್​ಬಿಟ್ರು ಎಂದು ನಟಿ ಗಳಗಳನೆ ಅತ್ತಿದ್ದಾರೆ.

27
ಸಂಭಾವನೆ ವಿಷ್ಯದಲ್ಲಿ ಗಲಾಟೆ
Image Credit : Asianet News

ಸಂಭಾವನೆ ವಿಷ್ಯದಲ್ಲಿ ಗಲಾಟೆ

ನಟ ಮಹೇಶ್‌ ಗುರು ಅವರು ‘ಕೊತ್ತಲವಾಡಿ’ ಸಿನಿಮಾದಲ್ಲಿ ನಟಿಸಿದ್ದರು. ‘ಕೊತ್ತಲವಾಡಿ’ ಸಿನಿಮಾದಲ್ಲಿ ಸಂಭಾವನೆ‌ ಕೊಟ್ಟಿಲ್ಲ ಎಂದು ನಟ ಮಹೇಶ್‌ ಗುರು ಅವರು ವಿಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಇದಾದ ಬೆನ್ನಲ್ಲೇ ನಿರ್ದೇಶಕನ‌ ಬಳಿ ಸಹ ನಟಿ ಸ್ವರ್ಣ ತಾಯಿ ಗೋಳಾಡಿರುವ ಆಡಿಯೋ ಕೂಡ ವೈರಲ್‌ ಆಗಿತ್ತು. ಮಗಳ ಸಂಭಾವನೆ ಕೊಡಿ ಎಂದು ನಿರ್ದೇಶಕನ ಬಳಿ ನಟಿ ಸ್ವರ್ಣ ಅಮ್ಮ ಗೋಗರೆದಿರುವ ಆಡಿಯೋಗ ವೈರಲ್‌ ಆಗಿತ್ತು.

Related Articles

Related image1
ಸಿದ್ದರಾಮಯ್ಯ- ಡಿಕೆಶಿಗೆ ಹೋಗಿ ಕಂಪ್ಲೇಂಟ್​ ಕೊಡ್ತೇನೆ! 'ಕೊತ್ತಲವಾಡಿ' ಕುರಿತು ಯಶ್​ ಅಮ್ಮ ಪ್ರತಿಕ್ರಿಯೆ...
Related image2
ಒಬ್ಬಟ್ಟು- ರೊಟ್ಟಿ ಒಂದೇ ಎನ್ನೋದ್ಯಾಕೆ? ಸಮಾಜಕ್ಕೆ ನಾನು... Su From Soಗೆ ಯಶ್​ ಅಮ್ಮನ ಪ್ರತಿಕ್ರಿಯೆ ಏನು?
37
ನಟಿ ಸ್ವರ್ಣ ವಿಡಿಯೋ
Image Credit : Youtube

ನಟಿ ಸ್ವರ್ಣ ವಿಡಿಯೋ

ಆದರೆ ಇದೀಗ ಖುದ್ದು ನಟಿ ಸ್ವರ್ಣ ವಿಡಿಯೋ ಮಾಡಿ ಅತ್ತಿದ್ದಾರೆ. ಶ್ರೀರಾಜ್​ ಅವರು ಮಾತನಾಡುವಾಗ ಇವರಿಗೆಲ್ಲ ಪಬ್ಲಿಸಿಟಿ ಬೇಕು, ಅದಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದರು. ನಾನು ಹಣ ಕೊಟ್ಟಿದ್ದಕ್ಕೆ ಪುಷ್ಪ ಅವರಿಗೂ ಮಾಹಿತಿ ಕೊಟ್ಟಿದ್ದೇವೆ. ನಾವು ಇದರ ವಿರುದ್ದ ಪೊಲೀಸ್ ಕಂಪ್ಲೇಂಟ್ ಕೊಡುತ್ತೇವೆ ಎಂದು ಕೂಡ ಹೇಳಿದ್ದರು.

47
ಲೈಫೇ ಹಾಳು ಮಾಡಿದ್ರು ಎಂದ ನಟಿ
Image Credit : instagram

ಲೈಫೇ ಹಾಳು ಮಾಡಿದ್ರು ಎಂದ ನಟಿ

ಅದೆಲ್ಲಾ ಸುಳ್ಳು, ನನ್ನ ಲೈಫೇ ಹಾಳು ಮಾಡಿದ್ರು ಎಂದಿದ್ದಾರೆ ಸ್ವರ್ಣಾ. ಕೊತ್ತಲವಾಡಿ ಚಿತ್ರಕ್ಕೆ ಪೇಮೆಂಟ್‌ ಸಮಸ್ಯೆ ಇರೋ ಬಗ್ಗೆ ನಾನು ಹೋಗಿ ಕಂಪ್ಲೇಂಟ್‌ ಕೊಟ್ಟಿದ್ದಲ್ಲ. ಉಳಿದಿದ್ದ ಪೇಮೆಂಟ್‌ ಕೊಡುವುದಿಲ್ಲ ಅಂತ ಹೇಳಿ ಯಾವಾಗ ಅವರು ಗಲಾಟೆ ಮಾಡಿದ್ದರೋ, ಸಹವಾಸ ಬೇಡ ಎಂದು ಸುಮ್ಮನಾಗಿದ್ದೆ. ನನ್ನ ಲೈಫೇ ಹಾಳುಮಾಡಿಬಿಟ್ಟರು ಇವರು. ನನಗೂ ಫ್ಯೂಚರ್‌ ಇದೆ, ಮುಂದಿನ ಪ್ರಾಜೆಕ್ಟ್‌ಗಳಿಗೆ ಪ್ರಾಬ್ಲಂ ಆಗಬಹುದು ಅಂತ ನಾನು ಸುಮ್ಮನಾಗಿದ್ದೆ. ಆದರೆ ಈಗ ಅವರು ಪ್ರಚಾರಗೋಸ್ಕರ ಹೀಗೆ ಮಾಡ್ತಿದ್ದಾರೆ ಎಂದು ಹೇಳಿರೋದು ನೋಡಿದ್ರೆ ತುಂಬಾ ನೋವಾಗತ್ತೆ ಎಂದಿದ್ದಾರೆ.

57
 ನಿಯತ್ತಾಗಿ ದುಡಿದ್ದಕ್ಕೆ ಈ ಫಲ
Image Credit : instagram

ನಿಯತ್ತಾಗಿ ದುಡಿದ್ದಕ್ಕೆ ಈ ಫಲ

ನಾವು ಅಷ್ಟು ನಿಯತ್ತಾಗಿ ದುಡಿದು, ಮೋಸ ಹೋಗಿ, ಮನೆಯಲ್ಲಿ ಸುಮ್ಮನೆ ಕುಳಿತುಕೊಂಡಿದ್ದರು ಕೂಡ ನೀವು ಈ ತರಹ ಎಲ್ಲಾ ಮಾಡೋದು ಸರಿ ನಾ? ನೀವು ಮಾಡುವ ಒಂದು ಕೆಲಸದಿಂದ ನನ್ನ ಫ್ಯೂಚರ್‌ಗೆ ತುಂಬಾ ಹೊಡೆತ ಬೀಳುತ್ತೆ ಸರ್‌. ಇದನ್ನು ಪ್ಲೀಸ್​ ಅರ್ಥ ಮಾಡ್ಕೊಳ್ಳಿ ಎಂದಿದ್ದಾರೆ ನಟಿ. ಇದನ್ನೇ ನಂಬಿಕೊಂಡು ಇರುವವಳು ನಾನು, ಆದರೆ ನೀವು ಈ ರೀತಿಯಾಗಿ ಹೇಳಿಕೆಗಳನ್ನ ಕೊಡುತ್ತಿರುವುದರಿಂದ ನಮಗೆ ಕೆಟ್ಟ ಹೆಸರು ಬರುತ್ತಿದೆ. ವಿಡಿಯೋ ಮಾಡಿದಾಗ ನನಗೆ ನ್ಯಾಯ ಸಿಗಬಹುದು ಎನ್ನುವ ನಂಬಿಕೆ ಇತ್ತು. ಆದರೆ ಈಗ ನನ್ನ ವಿರುದ್ಧವೇ ಮಾತನಾಡುತ್ತಿರುವುದು ನೋವಾಗ್ತಿದೆ ಎಂದಿದ್ದಾರೆ.

67
ನ್ಯಾಯ ಕೊಡಿಸುವವರು ಯಾರೂ ಇಲ್ವಾ?
Image Credit : Asianet News

ನ್ಯಾಯ ಕೊಡಿಸುವವರು ಯಾರೂ ಇಲ್ವಾ?

ನಮಗೆ ನ್ಯಾಯ ಕೊಡಿಸುವವರು ಯಾರೂ ಇಲ್ವಾ? ಸುಳ್ಳು ಹೇಳಿ ನಮಗೆ ಏನಾಗಬೇಕಿದೆ? ಅಥವಾ ಅವರು ಕೊಡುವ ದುಡ್ಡಿನಿಂದ ನಾನು ಜೀವನಪರ್ಯಂತ ಚೆನ್ನಾಗಿ ಜೀವನ ಮಾಡೋಕಾಗುತ್ತಾ? ಹೀಗೆ ಮಾಡಿದ್ರೆ ನನಗೆ ಮುಂದಿನ ಪ್ರಾಜೆಕ್ಟ್‌ಗಳಿಗೆ ತುಂಬಾ ಹೊಡೆತ ಬೀಳುತ್ತೆ. ಸ್ಪಷ್ಟೀಕರಣ ಕೊಡಬೇಕಿತ್ತು. ಅದಕ್ಕಾಗಿ ವಿಡಿಯೊ ಮಾಡಿದ್ದೇನೆ ಅಷ್ಟೇ. ಇಷ್ಟಾದರೂ ಅವರು ಏನನ್ನೂ ಕೇಳಿಲ್ಲ. ಅವರ ಉದ್ದೇಶವೇನು? ನಮ್ಮ ಹೆಸರು ಹಾಳು ಮಾಡುವುದಾ? ಬಡವರು ಇಂಡಸ್ಟ್ರೀಗೆ ಬರೋದು ತಪ್ಪಾ? ಎಂದು ಕಣ್ಣೀರು ಹಾಕಿದ್ದಾರೆ ನಟಿ. ಅವರು ಮಾಡಿರುವ ಮೋಸದಿಂದ ನನ್ನ ಜೀವನ ಹಾಳಾಯ್ತು ಎಂದು ಕೂಡ ಹೇಳಿದ್ದಾರೆ.

77
ಹಿಂದೆ ಸ್ವರ್ಣ ಅಮ್ಮನ ಆಡಿಯೋ
Image Credit : Asianet News

ಹಿಂದೆ ಸ್ವರ್ಣ ಅಮ್ಮನ ಆಡಿಯೋ

ಈ ಹಿಂದೆ ಸ್ವರ್ಣ ಅಮ್ಮನ ಆಡಿಯೋ ವೈರಲ್​ ಆಗಿತ್ತು. ಅದರಲ್ಲಿ ಅವರು, “ನಿಮಗೆ ಕೆಲಸ ಮಾಡಿದಕ್ಕೆ ಪೇಮೆಂಟ್ ಕೋಡೊದಕ್ಕೆ ಆಗಲ್ವಾ? ನನ್ನ ‌ಮಗಳು ನಿಮ್ಮನ್ನು ನಂಬಿಕೊಂಡು ಮೂರು ತಿಂಗಳು ಕೆಲಸ ಮಾಡಿದ್ದಾಳೆ. ನನ್ನ ಮಗಳಿಗೆ ಅಪ್ಪ ಇಲ್ಲ, ನಾನೇ ಅವಳನ್ನು ನೋಡಿಕೊಳ್ಳಬೇಕು. ನನಗೆ ಗಂಡ ಇಲ್ಲ, ನಾನು ಅವಳನ್ನು ನಂಬಿ‌ ಕೊಂಡಿದ್ದೀನಿ. ಬಡವರ ಮಕ್ಕಳ ಹಣ ಕೊಡದೆ ಉದ್ಧಾರ ಆಗ್ತೀರಾ? ನನ್ನ ಮಗಳು ಬೆಳಗ್ಗೆಯಿಂದ ಸ್ನಾನ ಮಾಡಿ ಏನು ತಿನ್ನದೆ ಮಲಗಿದ್ದಾಳೆ. ನಾನು ಸಂಘಗಳಿಗೆ ಹಣ ಕಟ್ಟಬೇಕು, ಮಗಳು ಬೆಂಗಳೂರಿನಿಂದ ಬರುತ್ತಾಳೆ ಅಂತ ಹೇಳಿಕೊಂಡು ಇದ್ದೆ. ಈಗ ನನ್ನ ಮಗಳು ಹಣ ಕೊಟ್ಟಿಲ್ಲ ಅಂದರೆ ನಾನು ಭಿಕ್ಷೆ ಬೇಡಬೇಕಾ?” ಎಂದು ನಟಿ ಸ್ವರ್ಣ ತಾಯಿ ಗೋಗರೆದಿದ್ದರು.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸ್ಯಾಂಡಲ್‌ವುಡ್
ಯಶ್
ಮನರಂಜನಾ ಸುದ್ದಿ
ನಟಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved