Published : Nov 20, 2025, 07:00 AM ISTUpdated : Nov 20, 2025, 11:43 PM IST

Karnataka News Live: ಒಪ್ಪೋ ಫೈಂಡ್ X9 ಸಿರೀಸ್ ಫೋನ್ ಜೊತೆ ಬಡ್ಸ್ 3 ಪ್ರೋ+ ಲಾಂಚ್, ನ.30ರ ವರೆಗೆ ಡಿಸ್ಕೌಂಟ್ ಆಫರ್

ಸಾರಾಂಶ

 

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆಯ ವರದಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಸಿದ್ಧಪಡಿಸಿದ್ದು, ಗುರುವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಥಮ ವರದಿ ಸಲ್ಲಿಸುವ ಸಾಧ್ಯತೆ ಇದೆ. ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಿ ಎಸ್‌ಐಟಿ ಈ ವರದಿಯನ್ನು ಸಿದ್ಧಪಡಿಸಿದೆ. ಪ್ರಕರಣದ ತನಿಖಾಧಿಕಾರಿ ಎಸ್ಪಿ ಜಿತೇಂದ್ರ ಕುಮಾರ್‌ದಯಾಮ ಕೋರ್ಟ್‌ಗೆ ವರದಿ ಸಲ್ಲಿಸುವ ಸಾಧ್ಯತೆ ಇದೆ. ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 20 ರಂದು ರಾಜ್ಯ ಸರ್ಕಾರ ತನಿಖೆ ನಡೆಸಲು ಎಸ್‌ಐಟಿ ರಚನೆ ಮಾಡಿತ್ತು.

 

11:43 PM (IST) Nov 20

ಒಪ್ಪೋ ಫೈಂಡ್ X9 ಸಿರೀಸ್ ಫೋನ್ ಜೊತೆ ಬಡ್ಸ್ 3 ಪ್ರೋ+ ಲಾಂಚ್, ನ.30ರ ವರೆಗೆ ಡಿಸ್ಕೌಂಟ್ ಆಫರ್

ಒಪ್ಪೋ ಫೈಂಡ್ X9 ಸಿರೀಸ್ ಫೋನ್ ಜೊತೆ ಬಡ್ಸ್ 3 ಪ್ರೋ+ ಲಾಂಚ್, ನ.30ರ ವರೆಗೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ನವೆಂಬರ್ 21ರಿಂದ ಮಾರಾಟ ಆರಂಭಗೊಳ್ಳುತ್ತಿದೆ. ಹೊಸ ಫೋನ್ ವಿಶೇಷತೆ, ಬೆಲೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

11:07 PM (IST) Nov 20

ದೆಹಲಿಯಲ್ಲಿ ಡಿಕೆಶಿ ಬೆಂಬಲಿಗರ ದಾಳದ ಬೆನ್ನಲ್ಲೇ ಜಾರಕಿಹೊಳಿ ಮನೆಯಲ್ಲಿ ದಲಿತ ಶಾಸಕರ ಡಿನ್ನರ ಸಭೆ

ದೆಹಲಿಯಲ್ಲಿ ಡಿಕೆಶಿ ಬೆಂಬಲಿಗರ ದಾಳದ ಬೆನ್ನಲ್ಲೇ ಜಾರಕಿಹೊಳಿ ಮನೆಯಲ್ಲಿ ದಲಿತ ಶಾಸಕರ ಡಿನ್ನರ ಸಭೆ, ಕರ್ನಾಟಕ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿಗೆ ಮುನ್ನಡಿ ವಾತಾವರಣ ಸೃಷ್ಟಿಯಾಗುತ್ತಿದೆ. ದೆಹಲಿಯಲ್ಲಿ ಡಿಕೆಶಿ ತಂಡದ ಕಸರತ್ತು ಆರಂಭಗೊಂಡರೆ, ಇತ್ತ ದಲಿತ ಶಾಸಕರ ಡಿನ್ನರ್ ಸಭೆ ಕುತೂಹಲ ಕೆರಳಿಸಿದೆ.

 

Read Full Story

10:27 PM (IST) Nov 20

Breaking - ಬೆಂಗಳೂರು ದರೋಡೆ ಕೇಸ್‌ನಲ್ಲಿ ಪೊಲೀಸ್‌ ಕೈವಾಡದ ಅನುಮಾನ?

ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿ ದರೋಡೆ ಪ್ರಕರಣವು ರೋಚಕ ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಪೊಲೀಸರ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ದರೋಡೆಕೋರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್‌ ಅಣ್ಣಪ್ಪ ನಾಯಕರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
Read Full Story

10:19 PM (IST) Nov 20

BBK 12 - ಅಶ್ವಿನಿ ಗೌಡ ಜೊತೆಗಿದ್ದೇ ಡಬಲ್‌ ಗೇಮ್‌ ಆಡಿದ ಧ್ರುವಂತ್;‌ ಅಬ್ಬಬ್ಬಾ...!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಎರಡು ಟೀಂ ಮಾಡಲಾಗಿತ್ತು. ಮನೆ ಕೆಲಸ ಮಾಡದ ಅಶ್ವಿನಿ ಗೌಡ, ಗಿಲ್ಲಿ ನಟ ಅವರನ್ನು ಉಸ್ತುವಾರಿಗಳನ್ನಾಗಿ ಮಾಡಲಾಗಿತ್ತು. ಅಶ್ವಿನಿ ಗೌಡ ಅವರ ಟೀಂನಲ್ಲಿ ಧ್ರುವಂತ್‌ ಇದ್ದರು. ತನಗೆ ಆಟ ಆಡಲು ಕೊಟ್ಟಿಲ್ಲ ಎಂದು ಧ್ರುವಂತ್‌ ವಾದ ಮಾಡಿದ್ದರು.

Read Full Story

10:06 PM (IST) Nov 20

ವಿಶ್ವದ 100 ಬೆಸ್ಟ್ ನಗರಗಳ ಪಟ್ಟಿ ಪ್ರಕಟ; ಲಂಡನ್ ನಂ.1, ಬೆಂಗಳೂರಿಗೂ ಇದೆ ಸ್ಥಾನ

ವಿಶ್ವದ 100 ಬೆಸ್ಟ್ ನಗರಗಳ ಪಟ್ಟಿ ಪ್ರಕಟ; ಲಂಡನ್ ನಂ.1, ಬೆಂಗಳೂರಿಗೂ ಇದೆ ಸ್ಥಾನ, ಭಾರತದ 4 ಪ್ರಮುಖ ನಗರಗಳು 100ರ ಒಳಗೆ ಸ್ಥಾನ ಪಡೆದಿದೆ. ಆದರೆ ನಮ್ಮ ಬೆಂಗಳೂರು ಅಗ್ರಸ್ಥಾನದಲ್ಲಿದೆ. 

Read Full Story

09:50 PM (IST) Nov 20

ಶೀಘ್ರದಲ್ಲೇ ಮದುಮಗಳಾಗಲಿದ್ದಾರೆ ಸ್ಮೃತಿ ಮಂದನಾ, ಮುನ್ನಾಭಾಯಿ ಸ್ಟೈಲ್‌ನಲ್ಲಿ ಎಂಗೇಜ್‌ಮೆಂಟ್‌ ಘೋಷಿಸಿದ ಟೀಮ್‌ ಇಂಡಿಯಾ ಬ್ಯಾಟರ್‌!

Smriti Mandhana Confirms Engagement to Palash Muchaal ಟೀಮ್ ಇಂಡಿಯಾ ಆಟಗಾರ್ತಿ ಸ್ಮೃತಿ ಮಂಧಾನ, ಸಂಗೀತ ಸಂಯೋಜಕ ಪಲಾಶ್ ಮುಚಾಲ್ ಅವರೊಂದಿಗಿನ ತಮ್ಮ ನಿಶ್ಚಿತಾರ್ಥವನ್ನು ವಿಶಿಷ್ಟ ಇನ್ಸ್‌ಸ್ಟಾಗ್ರಾಮ್ ರೀಲ್ ಮೂಲಕ ಖಚಿತಪಡಿಸಿದ್ದಾರೆ. 

Read Full Story

09:27 PM (IST) Nov 20

ಸಿಎಂ ಸ್ಥಾನ ಖಾಲಿಯಿಲ್ಲ, ಆದ್ರೆ ಡಿಕೆಶಿ ಮುಖ್ಯಮಂತ್ರಿಯಾಗಬೇಕೆಂಬ ಆಸೆ ನನಗೂ ಇದೆ - ಶಾಸಕ ಬಸವರಾಜ್

ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆಯ ನಡುವೆ, ಸದ್ಯಕ್ಕೆ ಸಿಎಂ ಸ್ಥಾನ ಖಾಲಿಯಿಲ್ಲ ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂಬುದು ತಮ್ಮ ಆಶಯವಾದರೂ, ಈ ಬಗ್ಗೆ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story

09:02 PM (IST) Nov 20

ಪಿಜಿ ವೈದ್ಯಕೀಯ ಪ್ರವೇಶ - ಕೆಇಎಯಿಂದ ಅನಿರೀಕ್ಷಿತ ಕೆಲವೇ ಗಂಟೆಗಳ ಕೊನೆಯ ಅವಕಾಶ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯದ ಪಿಜಿ ವೈದ್ಯಕೀಯ ಪ್ರವೇಶದ ಮೊದಲ ಸುತ್ತಿನ ಆಪ್ಷನ್ ಎಂಟ್ರಿ ಅವಧಿಯನ್ನು ವಿಸ್ತರಿಸಿದೆ. ಅಭ್ಯರ್ಥಿಗಳ ಮನವಿಯ ಮೇರೆಗೆ, ನವೆಂಬರ್ 21ರ ಬೆಳಿಗ್ಗೆ 9 ಗಂಟೆಯವರೆಗೆ ಆಯ್ಕೆಗಳನ್ನು ದಾಖಲಿಸಲು ಹೆಚ್ಚುವರಿ ಸಮಯ ನೀಡಲಾಗಿದೆ. 

Read Full Story

08:59 PM (IST) Nov 20

ರಾಜಕಾರಣದಲ್ಲಿ ಶಾಶ್ವತವಾಗಿ ಇರಬೇಕು ಅಂದ್ರೆ ಕೊಟ್ಟ ಮಾತಿನಂತೆ ನಡೆಯಬೇಕು, ಡಿಕೆ ಸುರೇಶ್‌ ಎಚ್ಚರಿಕೆ ನೀಡಿದ್ದು ಯಾರಿಗೆ?

ಮಾಜಿ ಸಂಸದ ಡಿಕೆ ಸುರೇಶ್‌, ಕಾಂಗ್ರೆಸ್ ಸರ್ಕಾರಕ್ಕೆ 2.5 ವರ್ಷ ತುಂಬಿದ ದಿನದಂದೇ 'ಕೊಟ್ಟ ಮಾತಿನಂತೆ ನಡೆಯಬೇಕು' ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್‌ಗೆ ಸಿಎಂ ಸ್ಥಾನ ಹಸ್ತಾಂತರದ ಚರ್ಚೆಗೆ ಕಿಡಿ ಹೊತ್ತಿಸಿದ್ದಾರೆ. ಸಿದ್ದರಾಮಯ್ಯನವರು ಕೊಟ್ಟ ಮಾತಿಗೆ ತಪ್ಪುವವರಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Read Full Story

08:56 PM (IST) Nov 20

ಬೆಂಗಳೂರಿನ 7 ಕೋಟಿ ರಾಬರಿ ಪ್ರಕರಣದ ಇನ್ನೋವಾ ಕಾರು ಸೀಜ್, ಆದರೆ ವಾಹನ ಖಾಲಿ ಖಾಲಿ

ಬೆಂಗಳೂರಿನ 7 ಕೋಟಿ ರಾಬರಿ ಪ್ರಕರಣದ ಇನ್ನೋವಾ ಕಾರು ಸೀಜ್, ಆದರೆ ವಾಹನ ಖಾಲಿ ಖಾಲಿ , ಕಳ್ಳರ ಜಾಡು ಹಿಡಿದು ಪೊಲೀಸರು ಇನ್ನೋ ಕಾರು ಪತ್ತೆ ಮಾಡಿದರೂ ನಿರಾಸೆ ಎದುರಾಗಿದೆ. ಕಳ್ಳರು ಖಾಲಿ ಆಂಧ್ರದಲ್ಲಿ ಇನ್ನೋವಾ ಕಾರು ಖಾಲಿ ಮಾಡಿ ಪರಾರಿಯಾಗಿದ್ದಾರೆ.

Read Full Story

08:41 PM (IST) Nov 20

ಬೆಂಗಳೂರು ಟೆಕ್ ಸಮ್ಮಿಟ್‌ - ವಿಟಿಯು ತರಗತಿಗಳಲ್ಲಿ ಭಾರತದ ತಂತ್ರಜ್ಞಾನ ಭವಿಷ್ಯದ ರಹಸ್ಯ!

ಟೆಕ್ ಸಮ್ಮಿಟ್‌ನಲ್ಲಿ ಮಾತನಾಡಿದ ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ್, ತಂತ್ರಜ್ಞಾನ ಆಧಾರಿತ ಪಠ್ಯಕ್ರಮ, ಕೃತಕ ಬುದ್ಧಿಮತ್ತೆ ಮತ್ತು ಡಿಸೈನ್ ಥಿಂಕಿಂಗ್ ಲ್ಯಾಬ್‌ಗಳ ಮೂಲಕ ವಿದ್ಯಾರ್ಥಿಗಳನ್ನು ಕೇವಲ ಉದ್ಯೋಗಿಗಳನ್ನಾಗಿ ಅಲ್ಲ, ಬದಲಾಗಿ ಭವಿಷ್ಯದ ನಾಯಕರುರನ್ನಾಗಿ ರೂಪಿಸುತ್ತಿದ್ದೇವೆ ಎಂದು ಹೇಳಿದರು.  

Read Full Story

08:00 PM (IST) Nov 20

ಜೈಲಿಂದಲೇ ಅಭಿಮಾನಿಗಳಿಗೆ ದೊಡ್ಡ ಮೆಸೇಜ್‌ ಕಳಿಸಿದ ದರ್ಶನ್‌, ವಿಜಯಲಕ್ಷ್ಮೀ ಹೇಳಿದ್ರು ಸೀಕ್ರೆಟ್‌

ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌, ತಮ್ಮ ಪತ್ನಿ ವಿಜಯಲಕ್ಷ್ಮಿ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ ಎಂದಿರುವ ಅವರು, ಡಿಸೆಂಬರ್ 12 ರಂದು ಬಿಡುಗಡೆಯಾಗಲಿರುವ ತಮ್ಮ 'ಡೆವಿಲ್' ಚಿತ್ರಕ್ಕೆ ಹೆಚ್ಚು ಪ್ರೀತಿ ನೀಡುವಂತೆ ಕೇಳಿಕೊಂಡಿದ್ದಾರೆ.

Read Full Story

07:19 PM (IST) Nov 20

'ಜನ ಎಲ್ಲಾ ಖಾಲಿ ಆಗೋದ್ರು, ಇನ್ಯಾರಿಗಯ್ಯ ಭಾಷಣ ಮಾಡ್ಲಿ..' ವೇದಿಕೆ ಮೇಲೆಯೇ ಜಿಟಿಡಿಗೆ ಹೇಳಿದ ಸಿದ್ದರಾಮಯ್ಯ

ಚಾಮರಾಜನಗರದಲ್ಲಿ ನಡೆದ ಸಹಕಾರ ಸಪ್ತಾಹದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜನ ಖಾಲಿಯಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್‌ನಲ್ಲಿದ್ದರೆ ದೇವೇಗೌಡರ ಕುಟುಂಬದಿಂದಾಗಿ ತಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.

Read Full Story

07:09 PM (IST) Nov 20

ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಪುರಿ ದೇವಾಲಯ ಭೇಟಿ, ಜಗನ್ನಾಥನ 11 ನಿಗೂಢ ರಹಸ್ಯಗಳಿವು

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದರು. ಈ ದೇವಾಲಯವು ಕೇವಲ ತೀರ್ಥಕ್ಷೇತ್ರವಲ್ಲ,  ಗಾಳಿಗೆ ವಿರುದ್ಧವಾಗಿ ಹಾರುವ ಧ್ವಜ, ನೆರಳಿಲ್ಲದ ಗೋಪುರ, ಮತ್ತು ಎಂದಿಗೂ ವ್ಯರ್ಥವಾಗದ ಮಹಾಪ್ರಸಾದದಂತಹ ವಿಜ್ಞಾನಕ್ಕೂ ಮೀರಿದ ಹಲವಾರು ನಿಗೂಢ ರಹಸ್ಯಗಳನ್ನು ಹೊಂದಿದೆ. 

Read Full Story

06:05 PM (IST) Nov 20

Amruthadhaare - ಜೈದೇವನ​ ಮುಗಿಸಲು ದಿಯಾ ಸ್ಕೆಚ್​- ಅಪ್ಪನ ಬಳಿ ಹೋಗಲು ಭೂಮಿಕಾ ಗ್ರೀನ್​ ಸಿಗ್ನಲ್​!

ಗೌತಮ್ ತನ್ನ ತಂದೆ ಎಂಬ ಸತ್ಯ ತಿಳಿದ ಆಕಾಶ್, ಶಾಲಾ ಪ್ರಾಜೆಕ್ಟ್ ನೆಪದಲ್ಲಿ ಅಪ್ಪ-ಅಮ್ಮನನ್ನು ಒಂದು ಮಾಡಲು ಯತ್ನಿಸುತ್ತಿದ್ದಾನೆ. ಮತ್ತೊಂದೆಡೆ, ಜೈದೇವ್ ಮತ್ತು ಶಕುಂತಲಾ ವಿರುದ್ಧ ಸೇಡು ತೀರಿಸಿಕೊಳ್ಳಲು ದಿಯಾ ಹೊಸ ತಂತ್ರವನ್ನು ರೂಪಿಸುತ್ತಿದ್ದಾಳೆ.
Read Full Story

05:56 PM (IST) Nov 20

ಚಲಿಸುವ ಕಾರ್ ರೂಫ್ ಮೇಲೆ ಯುವಕ ಯುವತಿಯ ರೋಮಾನ್ಸ್ - ಪೊಲೀಸರು ಮಾಡಿದ್ದೇನು ನೋಡಿ

couple stunt in moving car: ದೆಹಲಿಯಲ್ಲಿ, ಚಲಿಸುವ ಕಾರೊಂದರಲ್ಲಿ ಜೋಡಿಯೊಂದು ಅಪಾಯಕಾರಿ ರೋಮ್ಯಾಂಟಿಕ್ ಸ್ಟಂಟ್ ಮಾಡಿದೆ. ಯುವಕ ಕಾರಿನ ಮೇಲೇರಿ ಗೆಳತಿಗೆ ಚುಂಬಿಸಿದ್ದು, ಈ ವೀಡಿಯೋ ವೈರಲ್ ಆಗಿದೆ. 

Read Full Story

05:34 PM (IST) Nov 20

BBK 12 - ಸಾಕ್ಷಿ ಸಮೇತ ಗಿಲ್ಲಿ ನಟನ ತಪ್ಪನ್ನು ಎತ್ತಿ ತೋರಿಸಿದ ಅಶ್ವಿನಿ ಗೌಡ; ಯಾಕೆ ಹೀಗೆ ಮಾಡ್ತಾರೆ?

Bigg Boss Kannada Season 12 Show Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟನ ವಿರುದ್ಧ ಧ್ರುವಂತ್‌ ಒಂದು ಆರೋಪ ಮಾಡಿದ್ದರು. ಈಗ ಈ ಆರೋಪ ಮತ್ತೆ ಸಾಬೀತಾದಂತಿದೆ. ಹೌದು, ಅಶ್ವಿನಿ ಕೂಡ ಅದೇ ಆರೋಪ ಮಾಡಿದ್ದಾರೆ. ಹಾಗಾದರೆ ಏನದು? ನಿಜಕ್ಕೂ ಏನಾಯ್ತು?

Read Full Story

05:20 PM (IST) Nov 20

ಕಾಂಗ್ರೆಸ್‌ನಲ್ಲಿ ಸದ್ದು ಮಾಡಲು ಆರಂಭಿಸಿದ ಡಿಕೆಶಿ ಬಣ, ಬಿಜೆಪಿ ರೆಬಲ್‌ ಟೀಮ್‌ ಕೂಡ ಆಕ್ಟೀವ್‌!

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಕ್ರಿಯರಾಗುತ್ತಿದ್ದಂತೆ, ಪಕ್ಷದಲ್ಲಿ ಬಂಡಾಯದ ಚಟುವಟಿಕೆಗಳು ಗರಿಗೆದರಿವೆ. ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಅತೃಪ್ತ ನಾಯಕರು ಸಭೆ ಸೇರಿ, ವಿಜಯೇಂದ್ರ ಅವರಿಗೆ ಸಹಕಾರ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

Read Full Story

04:40 PM (IST) Nov 20

ಕುನೋ ನ್ಯಾಷನಲ್‌ ಪಾರ್ಕ್‌ನಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ಭಾರತದಲ್ಲೇ ಜನಿಸಿದ ಚೀತಾ ಮುಖಿ!

ಭಾರತದಲ್ಲಿಯೇ ಜನಿಸಿದ ಚೀತಾ ಮುಖಿ, ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ಮರಿಗಳಿಗೆ ಜನ್ಮ ನೀಡುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಮಹತ್ವದ ಸಾಧನೆಯು ಪ್ರಾಜೆಕ್ಟ್ ಚೀತಾ ಯೋಜನೆಗೆ ಹೊಸ ಹುರುಪು ನೀಡಿದ್ದು, ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ. 

Read Full Story

04:22 PM (IST) Nov 20

ಮುಖ್ಯಮಂತ್ರಿ ಬದಲಾವಣೆಗೆ ಡಿಕೆಶಿ ಬಿಗಿಪಟ್ಟು, ಹೈಕಮಾಂಡ್‌ಗೆ ಒತ್ತಡ ತರಲು ದೆಹಲಿಗೆ ಹಾರಿದ ಡಿಕೆ ಬಣ!

ಕರ್ನಾಟಕ ಸಿಎಂ ಸ್ಥಾನ ಬದಲಾವಣೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಬಿಗಿಪಟ್ಟು ಹಿಡಿದಿದ್ದು, ಅವರ ಪರವಾಗಿ ಒಕ್ಕಲಿಗ ಶಾಸಕರ ನಿಯೋಗ ದೆಹಲಿಗೆ ತೆರಳಿದೆ. ಸರ್ಕಾರದ ಎರಡೂವರೆ ವರ್ಷದ ಬೆನ್ನಲ್ಲೇ ಪವರ್ ಶೇರಿಂಗ್ ಸೂತ್ರದಂತೆ ಸಿಎಂ ಬದಲಾವಣೆಗೆ ಹೈಕಮಾಂಡ್ ಮೇಲೆ ಒತ್ತಡ ಹೇರುವುದು ಈ ಯಾತ್ರೆಯ ಉದ್ದೇಶವಾಗಿದೆ.

Read Full Story

03:52 PM (IST) Nov 20

ಬೆಂಗಳೂರು - ರಾಬರಿಗೂ ಮುನ್ನ ಸ್ಥಳ ಪರಿಶೀಲನೆ ಮಾಡಿ ಬಾರ್‌ಗೆ ಬಂದಿದ್ದ ಆರೋಪಿಗಳು ಸಿಸಿಟಿವಿಯಲ್ಲಿ ಸೆರೆಯಾದ್ರು!

ಬೆಂಗಳೂರಿನ 7.11 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಹೊಸ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಕೃತ್ಯಕ್ಕೂ ಮುನ್ನ ಖದೀಮರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೂರು ತಂಡಗಳಲ್ಲಿ ಬಂದು, ಪೊಲೀಸರನ್ನು ಯಾಮಾರಿಸಿ ದರೋಡೆಕೋರರು ಪರಾರಿಯಾಗಿದ್ದು, ಪ್ರಕರಣದ ತನಿಖೆಗೆ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

Read Full Story

03:42 PM (IST) Nov 20

ಸುರಂಗ ರಸ್ತೆಗೆ ಇಂಜಿನಿಯರ್ಸ್‌ ಬಾಡಿ ಬೆಂಬಲ ಸಿಕ್ಕಿದೆ ಎಂದ ಡಿಸಿಎಂ; ರಿಪೋರ್ಟ್‌ ಕೊಟ್ಟಿದ್ದು ಕಾಂಗ್ರೆಸ್‌ ವಕ್ತಾರ - ಆರೋಪ

ಬೆಂಗಳೂರಿನ ಸುರಂಗ ರಸ್ತೆ ಯೋಜನೆಗೆ ಇಂಜಿನಿಯರ್‌ಗಳ ಸಂಸ್ಥೆ ಬೆಂಬಲ ನೀಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದರು. ಆದರೆ, ಈ ವರದಿ ನೀಡಿದ ಸಂಸ್ಥೆಯ ಕಾರ್ಯದರ್ಶಿ ಎಂ.ಲಕ್ಷ್ಮಣ್ ಕಾಂಗ್ರೆಸ್ ವಕ್ತಾರ ಎಂದು ವಕೀಲ ಗಿರೀಶ್‌ ಭಾರದ್ವಾಜ್‌ ಆರೋಪಿಸಿದ್ದಾರೆ.

Read Full Story

03:32 PM (IST) Nov 20

BBK 12 - ರಕ್ಷಿತಾ ಶೆಟ್ಟಿ ನಮ್ಮ ಊರಿನವ್ರು, ಅವ್ರ ವಿಷಯದಲ್ಲಿ ನಾನು ಹೇಳಿದ್ದೇ ಸತ್ಯವಾಯ್ತು - ರೂಪೇಶ್‌ ಶೆಟ್ಟಿ

Bigg Boss Kannada 12: ಬಿಗ್‌ ಬಾಸ್‌ ಮನೆಯಲ್ಲಿ ರಕ್ಷಿತಾ ಶೆಟ್ಟಿ ಅರ್ಧ ಇಂಗ್ಲಿಷ್‌, ಕನ್ನಡ, ತುಳು ಭಾಷೆಯನ್ನು ಮಾತನಾಡುತ್ತಿರೋದು ದೊಡ್ಡ ಚರ್ಚೆ ಆಗಿತ್ತು. ರಕ್ಷಿತಾ ನಾಟಕ ಮಾಡುತ್ತಿದ್ದಾರೆ ಎಂದು ಧ್ರುವಂತ್‌ ಹೇಳಿದ್ದರು. ಈಗ ಈ ಬಗ್ಗೆ ಬಿಗ್‌ ಬಾಸ್‌ ಕನ್ನಡ 9 ರೂಪೇಶ್‌ ಶೆಟ್ಟಿ ಮಾತನಾಡಿದ್ದಾರೆ.

Read Full Story

03:11 PM (IST) Nov 20

BBK 12 - ಮಸ್ಕಾ ಹೊಡಿತಿದ್ದ ಗಿಲ್ಲಿ ನಟ; ಅದೊಂದು ಪ್ರಶ್ನೆಯಿಂದ ಮತ್ತೆ ಮಾತೇ ಆಡದಂತೆ ಮಾಡಿದ ರಕ್ಷಿತಾ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟನ ಬಳಿ ಕೆಲಸ ಮಾಡಿಸೋಕೆ ಎಲ್ಲರೂ ಒದ್ದಾಡುತ್ತಾರೆ. ಕಿಚ್ಚ ಸುದೀಪ್‌ ಅವರು ಹೇಳಿದರೂ ಕೂಡ ಗಿಲ್ಲಿ ನಟ ಕೆಲಸ ಮಾಡುತ್ತಿಲ್ಲ. ಗಿಲ್ಲಿ ನಟನ ಬಳಿ ಮಾತಿನಲ್ಲಿ ಗೆಲ್ಲೋಕೆ ಆಗೋದಿಲ್ಲ. ಹೀಗಿರುವಾಗ ರಕ್ಷಿತಾ ಅವರ ಬಾಯಿ ಮುಚ್ಚಿಸಿದ್ದಾರೆ.

Read Full Story

02:39 PM (IST) Nov 20

ರಾಜ್ಯದ ವಾಹನ ಸವಾರರಿಗೆ ಭರ್ಜರಿ ಆಫರ್, ಮತ್ತೊಮ್ಮೆ ಟ್ರಾಫಿಕ್ ಫೈನ್ 50% ರಿಯಾಯಿತಿ ಘೋಷಣೆ, ಕೆಲವೇ ದಿನ ಆಫರ್!

ಕರ್ನಾಟಕ ಸರ್ಕಾರವು ವಾಹನ ಸವಾರರಿಗೆ ಬಾಕಿ ಇರುವ ಸಂಚಾರ ದಂಡದ ಮೇಲೆ 50% ರಿಯಾಯಿತಿ ಘೋಷಿಸಿದೆ. ಈ ಸೌಲಭ್ಯವು ಸೆಪ್ಟೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಚಾಲಕರು ತಮ್ಮ ಬಾಕಿ ದಂಡವನ್ನು ಅರ್ಧ ಮೊತ್ತಕ್ಕೆ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.
Read Full Story

02:28 PM (IST) Nov 20

BBK 12 - ಗಿಲ್ಲಿ ನಟನಿಗೆ ಸಖತ್‌ ಕಾಂಪಿಟೇಶನ್‌ ಕೊಡ್ತಿರೋ ಅಶ್ವಿನಿ ಗೌಡ; ರಘುಗೆ ತಲೆನೋವು ತಂದಿಟ್ರು!

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರೇ ದೊಡ್ಡ ತಲೆನೋವಾಗಿದ್ದಾರೆ. ಅದರಲ್ಲಿಯೂ ಯಾವಾಗಲೂ ಗಿಲ್ಲಿ ನಟ ಅವರು ರಘು ಮೈಮೇಲೆ ಬಿದ್ದು ಹೊರಳಾಡುತ್ತಿರುತ್ತಾರೆ. ಈಗ ಇವರಿಗೆ ಅಶ್ವಿನಿಯಿಂದ ಇನ್ನೊಂದು ಸಮಸ್ಯೆ ಎದುರಾಗುತ್ತಿದೆ. ಹಾಗಾದರೆ ಏನದು? ಏನಾಯ್ತು?

Read Full Story

02:08 PM (IST) Nov 20

ಜೈಲಲ್ಲಿರೋ ದರ್ಶನ್.. ಫ್ಯಾನ್ಸ್ ಜೊತೆ ವಿಜಯಲಕ್ಷ್ಮೀ ಕನೆಕ್ಷನ್.. 'ಡಿ ಬಾಸ್' ಪತ್ನಿ ಕೊಟ್ಟ ಸೂಚನೆ ಏನು..?

ದರ್ಶನ್ ಅಭಿಮಾನಿಗಳಿಂದಲೇ ಮುಂಬರುವ 'ದಿ ಡೆವಿಲ್' ಪ್ರಮೋಶನ್ ಶುರು ಮಾಡಿದೆ ಚಿತ್ರತಂಡ. ಸಿನಿಮಾ ಬಿಡುಗಡೆಗೆ ಇನ್ನು ತಿಂಗಳು ಕೂಡ ಟೈಂ ಇಲ್ಲ. ಆದ್ದರಿಂದ ಈಗಾಗಲೇ ಸಿನಿಮಾ ಪ್ರಚಾರ ಶುರುವಾಗಿದೆ. ದರ್ಶನ್ ಇಲ್ಲದ ಪ್ರಚಾರಕಾರ್ಯ ಯಾವ ರೀತಿಯಲ್ಲಿ ಗುರಿ ಮುಟ್ಟಲಿದೆ ಎಂಬುದನ್ನು ಕಾದು ನೋಡಬೇಕಿದೆ.

Read Full Story

01:59 PM (IST) Nov 20

BBK 12 - ರಕ್ಷಿತಾಗೆ ಅನ್ಯಾಯ ಮಾಡಿದ್ರಾ ಅಶ್ವಿನಿ ಗೌಡ? ಧನುಷ್ ಅಚ್ಚರಿ ಹೇಳಿಕೆ, ಪುಟ್ಟಿಗೆ ಸಿಗಲಿಲ್ಲ ಮನ್ನಣೆ?

ಕೆಂಪು ತಂಡದ ನಾಯಕಿ ಅಶ್ವಿನಿ ಗೌಡ, ಕ್ಯಾಪ್ಟನ್ಸಿ ಟಾಸ್ಕ್‌ಗೆ ಅಭಿಷೇಕ್ ಅವರನ್ನು ಆಯ್ಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. 'ಹನಿ ಹನಿ ಡ್ರಮ್ ಕಹಾನಿ' ಟಾಸ್ಕ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ರಕ್ಷಿತಾ ಶೆಟ್ಟಿಯನ್ನು ಕಡೆಗಣಿಸಲಾಗಿದೆ ಎಂದು ಧನುಷ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

01:30 PM (IST) Nov 20

'ಇಂಗ್ಲೆಂಡ್​ ಮಹಾರಾಣಿ'ಗೆ Bigg Bossನಲ್ಲಿ ಭಾರೀ ಅವಮಾನ - ಅಶ್ವಿನಿ ಗೌಡ ಅವ್ರನ್ನ ಪ್ಲೀಸ್​ ಬಿಟ್ಟುಬಿಡಿ- ವೀಕ್ಷಕರ ಆಗ್ರಹ

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿ ಅಶ್ವಿನಿ ಗೌಡ ಅವರು ತೊಳೆಯದ ಕಾಫಿ ಕಪ್ ವಿಚಾರವಾಗಿ ರಘು ಜೊತೆ ಜಗಳವಾಡಿದ ನಂತರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ಜಗಳವು ಅಶ್ವಿನಿ ಅವರ ಅಹಂಕಾರಕ್ಕೆ ಧಕ್ಕೆ ತಂದಿದ್ದು, ಅವರ ಈ ಪ್ರತಿಭಟನೆಯು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
Read Full Story

01:20 PM (IST) Nov 20

ಪಿಜಿ ಬಿಟ್ಟು ಹೋಗುವ ವೇಳೆ ಡೆಪಾಸಿಟ್ ಹಣ ವಾಪಸ್ ಕೇಳಿದ್ದಕ್ಕೆ ಯುವತಿ ಮೇಲೆ ಪಿಜಿ ಮಾಲೀಕಳಿಂದ ಹಲ್ಲೆ

PG owner assaults Girl:ನೋಯ್ಡಾದಲ್ಲಿ ಪಿಜಿ ಖಾಲಿ ಮಾಡಿದ ಯುವತಿಯೊಬ್ಬಳು ತನ್ನ ಸೆಕ್ಯೂರಿಟಿ ಡೆಪಾಸಿಟ್ ವಾಪಸ್ ಕೇಳಿದ್ದಕ್ಕೆ ಪಿಜಿ ಮಾಲಕಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಪಿಜಿ ಮಾಲಕಿಯ ವಿರುದ್ಧ ಪ್ರಕರಣ ದಾಖಲಾಗಿದೆ. 

Read Full Story

01:12 PM (IST) Nov 20

ಬೆಂಗಳೂರು ಬಹುಕೋಟಿ ರಾಬರಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ, ತಿರುಪತಿಯಲ್ಲಿ ಇಬ್ಬರು ವಶಕ್ಕೆ!

ಬೆಂಗಳೂರಿನ ಡೈರಿ ಸರ್ಕಲ್ ಬಳಿ ನಡೆದ 7 ಕೋಟಿಗೂ ಅಧಿಕ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ತಿರುಪತಿಯಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದರೋಡೆಗೆ ಬಳಸಿದ್ದ ಇನೋವಾ ಕಾರು ಕೂಡ ಪತ್ತೆಯಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
Read Full Story

12:49 PM (IST) Nov 20

ಬೆಂಗಳೂರು 7 ಕೋಟಿ ರಾಬರಿ ಪ್ರಕರಣ - CMS ಸಿಬ್ಬಂದಿಯೇ ಪೊಲೀಸರಿಗೆ ಪ್ರೈಮ್ ಸಸ್ಪೆಕ್ಟ್ ಯಾಕೆ? ಇಲ್ಲಿದೆ ಹಲವು ಉತ್ತರ!

ಬೆಂಗಳೂರಿನ ಡೈರಿ ಸರ್ಕಲ್ ಬಳಿ ನಡೆದ 7 ಕೋಟಿ ನಗದು ದರೋಡೆ ಪ್ರಕರಣದಲ್ಲಿ, CMS ಸಿಬ್ಬಂದಿಯ ಮೇಲೆಯೇ ಪೊಲೀಸರಿಗೆ ಅನುಮಾನ ಮೂಡಿದೆ. ಕ್ಯಾಶ್ ವಾಹನದ ಆಟೋಮ್ಯಾಟಿಕ್ ಲಾಕಿಂಗ್ ಸಿಸ್ಟಮ್‌ನಲ್ಲಿನ ತಾಂತ್ರಿಕ ದೋಷ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಈ ಅನುಮಾನಕ್ಕೆ ಕಾರಣವಾಗಿದೆ. 

Read Full Story

12:37 PM (IST) Nov 20

Bhagyalakshmi - ಮದ್ವೆಗೆ ಸುಬ್ಬಿ ಮನವೊಲಿಸಿದ ಭಾಗ್ಯ - ಮದುಮಗಳ ಹೆಸ್ರು ಕೇಳ್ತಿದ್ದಂತೆಯೇ ಮೂರ್ಚೆ ಹೋದ ಆದಿ!

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ, ಆದಿ ಮತ್ತು ಭಾಗ್ಯಳ ಮದುವೆಯ ನಿರೀಕ್ಷೆಗಳು ತಲೆಕೆಳಗಾಗಿವೆ. ಭಾಗ್ಯಳೇ ಮನವೊಲಿಸಿ ಆದಿಯ ಮದುವೆಗೆ ಸುರಭಿಯನ್ನು ಒಪ್ಪಿಸಿದ್ದಾಳೆ. ಆದರೆ, ಸುರಭಿಯ ನಿಜವಾದ ಹೆಸರು ಆದಿಯ ಗತಕಾಲವನ್ನು ಕೆದಕಿದ್ದು, ಕಥೆಗೆ ರೋಚಕ ತಿರುವು ನೀಡಿದೆ.
Read Full Story

12:35 PM (IST) Nov 20

Andhra King Taluka movie - ತೆಲುಗಿನಲ್ಲಿ ಸ್ಟಾರ್‌ ಹೀರೋ ಆದ ಉಪೇಂದ್ರ; ಕನ್ನಡ ನೆಲದಲ್ಲಿ ಟ್ರೇಲರ್‌ ರಿಲೀಸ್

Actor Upendra‌ Movies: ಕನ್ನಡ ನಟ ಉಪೇಂದ್ರ ನಟಿಸಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲೂಕ’ ಟ್ರೈಲರ್ ಕನ್ನಡ ನೆಲದಲ್ಲಿ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾದಲ್ಲಿ ತೆಲುಗು ನಟ ರಾಮ್ ಪೋತಿನೇನಿ, ಉಪೇಂದ್ರ, ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ. 

 

Read Full Story

12:29 PM (IST) Nov 20

BBK 12 - ಅಶ್ವಿನಿ, ಗಿಲ್ಲಿ ಬಳಿಕ ಮತ್ತೋರ್ವ ಸ್ಪರ್ಧಿ ವಿರುದ್ಧ ದಾಖಲಾಯ್ತು ದೂರು; ಹಳೇ ಕೇಸ್ ರೀ ಓಪನ್

Bigg Boss Kannada 12:ಬಿಗ್‌ಬಾಸ್ ಮನೆಯ ಸ್ಪರ್ಧಿ ವಿರುದ್ಧ ಇದೀಗ ದೂರು ದಾಖಲಾಗಿದೆ. ಗಿಲ್ಲಿ ನಟ ಅಭಿಮಾನಿಗಳು ಈ ದೂರು ನೀಡಿದ್ದು, ಕಾರ್ಯಕ್ರಮದ ಆಯೋಜಕರು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. 

Read Full Story

12:26 PM (IST) Nov 20

ಬೆಳ್ತಂಗಡಿ ಬಳಿ ಕಾರು ಹೋಂಡಾ ಆಕ್ಟಿವಾ ಮಧ್ಯೆ ಅಪಘಾತ - ಫೈನಲ್ ಇಯರ್‌ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಬಳಿ ಕಾರು ಮತ್ತು ಸ್ಕೂಟಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನನ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

Read Full Story

12:18 PM (IST) Nov 20

ಬಳ್ಳಾರಿ - ಹೋಂ ವರ್ಕ್ ಮಾಡದ್ದಕ್ಕೆ ವಿದ್ಯಾರ್ಥಿ ಮೈ ಮೇಲೆ ಬಾಸುಂಡೆ ಬಾರಿಸಿದ ಶಿಕ್ಷಕಿ

ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದ ರುದ್ರಮ್ಮ ಅಂಗ್ಲ ಮಾಧ್ಯಮ ಶಾಲೆಯಲ್ಲಿ, ಹೋಂ ವರ್ಕ್ ಮಾಡಿಲ್ಲವೆಂಬ ಕಾರಣಕ್ಕೆ 3ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಮನಬಂದಂತೆ ಥಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಯ ಮೈಮೇಲೆ ಬಾಸುಂಡೆ. ಆಕ್ರೋಶಗೊಂಡ ಪೋಷಕರು ಶಿಕ್ಷಕಿ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹ..

Read Full Story

11:57 AM (IST) Nov 20

ಹೆಣ್ಣಿನ ವಿಷ್ಯ, ಗಿಲ್ಲಿ ನಟನ ವಿರುದ್ಧ ದೂರು; ಫಸ್ಟ್ ಹೆಣ್ಣಿನ ಮೈತುಂಬ ಬಟ್ಟೆ ಹಾಕಿ ತೋರಿಸಿ ಎಂದ ವೀಕ್ಷಕರು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರು ರಿಷಾ ಗೌಡ ಅವರ ಬಟ್ಟೆ ಮುಟ್ಟಿದ್ದು ದೊಡ್ಡ ತಪ್ಪಾಯಿತು. ಆದರೆ ನಿಜಕ್ಕೂ ಸಮಾಜದಲ್ಲಿ ಏನಾಗ್ತಿದೆ? ಏನು ನಡೆಯುತ್ತಿದೆ ಎಂಬುದರ ಬಗ್ಗೆ ವೀಕ್ಷಕರೊಬ್ಬರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡಿದ್ದಾರೆ.  

Read Full Story

11:44 AM (IST) Nov 20

ಉಡುಪಿ - ಯಕ್ಷಗಾನ ಮಹಿಷಾಸುರ ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆಯೇ ಹೃದಯಾಘಾತ; ಮಂದಾರ್ತಿ ಮೇಳದ ಈಶ್ವರ ಗೌಡ ನಿಧನ

Yakshagana artist dies on stage: ಯಕ್ಷಗಾನದ ಪ್ರಸಿದ್ಧ ಮಂದಾರ್ತಿ ಮೇಳದ ಹಿರಿಯ ಕಲಾವಿದ ಈಶ್ವರ ಗೌಡ ಅವರು ಮಹಿಷಾಸುರ ಪಾತ್ರದ ಪ್ರದರ್ಶನದ ನಂತರ ಹೃದಯಾಘಾತದಿಂದ ನಿಧನರಾದರು. ಪ್ರದರ್ಶನಕ್ಕೂ ಮುನ್ನ ಅದೇ ಮೇಳದಲ್ಲಿರುವ ತಮ್ಮ ತಂದೆಯ ಆಶೀರ್ವಾದ ಪಡೆದಿದ್ದೇ ಕೊನೆಯಾಯಿತು ಎಂಬುದು ವಿಪರ್ಯಾಸ.

Read Full Story

11:23 AM (IST) Nov 20

BBK 12 - ಅಜ್ಜಿ ಸತ್ತಾಗಲೂ ನಗ್ತಿದ್ದನಂತೆ; ಎಂಥ ಮನುಷ್ಯ? ಗಿಲ್ಲಿ ನಟ ಅಸಲಿಯತ್ತು ಬಿಚ್ಚಿಟ್ಟ ಅಶ್ವಿನಿ ಗೌಡ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟನದ್ದೇ ಸೌಂಡು. ಒಂದಲ್ಲ ಒಂದು ವಿಚಾರಕ್ಕೆ ಗಿಲ್ಲಿ ಹೆಸರು ಕೇಳಿ ಬರುತ್ತಲೇ ಇರುತ್ತದೆ. ಅಶ್ವಿನಿ ಗೌಡ, ಜಾಹ್ನವಿಯಿಂದ ಹಿಡಿದು ಎಲ್ಲರೂ ಇವರ ಹೆಸರೇ ಹೇಳುತ್ತಿದ್ದಾರೆ. ಈಗ ಗಿಲ್ಲಿ ನಟನಿಗೆ ಮಾನವೀಯತೆ ಇಲ್ಲ, ಅಜ್ಜಿ ಸತ್ತರೂ ನಗುತ್ತಿದ್ದರಂತೆ.

Read Full Story

More Trending News