- Home
- Entertainment
- TV Talk
- Andhra King Taluka movie: ತೆಲುಗಿನಲ್ಲಿ ಸ್ಟಾರ್ ಹೀರೋ ಆದ ಉಪೇಂದ್ರ; ಕನ್ನಡ ನೆಲದಲ್ಲಿ ಟ್ರೇಲರ್ ರಿಲೀಸ್
Andhra King Taluka movie: ತೆಲುಗಿನಲ್ಲಿ ಸ್ಟಾರ್ ಹೀರೋ ಆದ ಉಪೇಂದ್ರ; ಕನ್ನಡ ನೆಲದಲ್ಲಿ ಟ್ರೇಲರ್ ರಿಲೀಸ್
Actor Upendra Movies: ಕನ್ನಡ ನಟ ಉಪೇಂದ್ರ ನಟಿಸಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲೂಕ’ ಟ್ರೈಲರ್ ಕನ್ನಡ ನೆಲದಲ್ಲಿ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸಿನಿಮಾದಲ್ಲಿ ತೆಲುಗು ನಟ ರಾಮ್ ಪೋತಿನೇನಿ, ಉಪೇಂದ್ರ, ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ.

ಉಪೇಂದ್ರ ಹೇಳಿದ್ದೇನು?
ಉಪೇಂದ್ರ ಅವರು ಮಾತನಾಡಿ, “ಎಲ್ಲ ಸಿನಿಮಾವನ್ನು ಮಾಡೋದಿಕ್ಕೆ ಒಂದೊಂದು ಕಾರಣ ಇರುತ್ತದೆ. ಸಬ್ಜೆಕ್ಟ್, ಮೆಸೇಜ್, ಸ್ಕ್ರೀನ್ ಪ್ಲೇ, ನಮಗೆ ಸಿಗುವ ಸ್ಕೋಪ್ ಇದೆಲ್ಲವೂ ಕಾರಣ ಆಗಿರುತ್ತದೆ. ಆದರೆ ಈ ಸಿನಿಮಾವನ್ನು ನಾನು ಅಭಿಮಾನಿಗಳಿಗೋಸ್ಕರ ಮಾಡಿದ್ದೇನೆ. ಈ ಸಿನಿಮಾವನ್ನು ನೋಡಿ ಅಭಿಮಾನಿಗಳು ಎಂಜಾಯ್ ಮಾಡುತ್ತಾರೆ. ನಾನು ಸಿನಿಮಾ ನೋಡಿ ಮಾತನಾಡುತ್ತೇನೆ” ಎಂದರು.
ರಾಮ್ ಪೋತಿನೇನಿ ಏನಂತಾರೆ?
ರಾಮ್ ಪೋತಿನೇನಿ ಮಾತನಾಡಿ, “ಆಂಧ್ರ ಕಿಂಗ್ ತಾಲೂಕು ಸಿನಿಮಾದಲ್ಲಿ ನಾನು ಖುಷಿಯಿಂದ ನಟಿಸಿದ್ದೇನೆ. ಅಭಿಮಾನಿ ಹಾಗೂ ನಟ ನಡುವಿನ ಪ್ರೀತಿ ಜೊತೆಗೆ, ಈ ಸಿನಿಮಾದಲ್ಲಿ ಎಮೋಷನ್ ಇದೆ. ಅದು ನಿಮ್ಮನ್ನು ಟಚ್ ಮಾಡುತ್ತದೆ ಎಂದು ಭಾವಿಸಿದ್ದೀನಿ. ಉಪ್ಪಿ ಸರ್ ಜೊತೆ ನಟಿಸಿರುವುದು ಖುಷಿ ಇದೆ. ಇದೇ ತಿಂಗಳ 27ರಂದು ನಮ್ಮ ಸಿನಿಮಾ ಬಿಡುಗಡೆಯಾಗುತ್ತಿದೆ. ತಪ್ಪದೇ ನಮ್ಮ ಸಿನಿಮಾ ನೋಡಿ” ಎಂದರು.
ನಿರ್ದೇಶಕ ಮಹೇಶ್ ಬಾಬು ಮಾತೇನು?
ನಿರ್ದೇಶಕ ಮಹೇಶ್ ಬಾಬು ಮಾತನಾಡಿ, ಆಂಧ್ರ ಕಿಂಗ್ ತಾಲೂಕು ಸಿನಿಮಾ ನಟರಿಗಿಂತ ಜಾಸ್ತಿ, ಅಭಿಮಾನಿಗಳಿಗೆ ಕನೆಕ್ಟ್ ಆಗುವ ಸಿನಿಮಾ. ಇದು ಅಭಿಮಾನಿ ಹಾಗೂ ಸ್ಟಾರ್ ನಡುವಿನ ಸಿನಿಮಾ ಎನ್ನುವುದಕ್ಕಿಂತ ಎಲ್ಲರಿಗೂ ಕನೆಕ್ಟ್ ಆಗುವ ಸಿನಿಮಾ. ನನಗೆ ಅವಕಾಶ ಕೊಟ್ಟ ಇಡೀ ಚಿತ್ರತಂಡಕ್ಕೆ ಧನ್ಯವಾದ. ನಿರ್ದೇಶಕನಾಗಿ ನನಗೆ ಇದು ಎರಡನೇ ಸಿನಿಮಾ” ಎಂದರು.
ಸ್ಟಾರ್ ಹೀರೋ ಆದ ಉಪೇಂದ್ರ
ಸಿನಿಮಾನಲ್ಲಿ ಉಪೇಂದ್ರ ಸ್ಟಾರ್ ಹೀರೋ ಆಗಿ ನಟಿಸಿದ್ದಾರೆ. ಅವರ ಅಪ್ಪಟ ಅಭಿಮಾನಿಯ ಪಾತ್ರದಲ್ಲಿ ರಾಮ್ ಪೋತಿನೇನಿ ನಟಿಸಿದ್ದಾರೆ. ಇದು ಅಭಿಮಾನಿ, ಸ್ಟಾರ್ ಹೀರೋ ನಡೆಯುವ ಕಥೆ ಇದಾಗಿದೆ.
ಸಿನಿಮಾ ರಿಲೀಸ್ ಯಾವಾಗ?
ಈ ಸಿನಿಮಾವನ್ನು ಮಹೇಶ್ ಬಾಬು ಪಿ ಅವರು ಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ರಾಹುಲ್ ರಾಮಕೃಷ್ಣ, ಮುರಳಿ ಶರ್ಮಾ, ರಾಜೀವ್ ಕನಕಾಲ, ರಾವ್ ರಮೇಶ್ ತಾರಾಬಳಗದಲ್ಲಿದ್ದಾರೆ. ಸಿನಿಮಾಕ್ಕೆ ವಿವೇಕ್, ಮೆರ್ವೀನ್ ಸಂಗೀತ ನೀಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಅಡಿಯಲ್ಲಿ ನವೀನ್ ಯೆರ್ನೇನಿ, ವೈ. ರವಿಶಂಕರ್ ನಿರ್ಮಿಸಿದ್ದಾರೆ. ಇದೇ ತಿಂಗಳ 27ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗವನ್ನು ಅನ್ವೇಷಿಸಿ. ಚಲನಚಿತ್ರ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿಗಳಲ್ಲಿ ನಾಟಕ ಮತ್ತು ಮನರಂಜನಾ ಜಗತ್ತಿನಲ್ಲಿ ಟ್ರೆಂಡ್‌ಸ್ಪಾಟಿಂಗ್‌ನೊಂದಿಗೆ ನವೀಕೃತವಾಗಿರಿ. ತೆರೆಮರೆಯ ಕಥೆಗಳು, OTT ಬಿಡುಗಡೆಗಳು ಮತ್ತು ರೆಡ್ ಕಾರ್ಪೆಟ್ ಕ್ಷಣಗಳನ್ನು ಅನ್ವೇಷಿಸಿ. ಗ್ಲಿಟ್ಜ್, ಗ್ಲಾಮರ್ ಮತ್ತು ಮನರಂಜನೆಗೆ ಇದು ನಿಮ್ಮ ಒಂದು-ನಿಲುಗಡೆ ತಾಣವಾಗಿದೆ.

