ಬೆಂಗಳೂರಿನ 7.11 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಹೊಸ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಕೃತ್ಯಕ್ಕೂ ಮುನ್ನ ಖದೀಮರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೂರು ತಂಡಗಳಲ್ಲಿ ಬಂದು, ಪೊಲೀಸರನ್ನು ಯಾಮಾರಿಸಿ ದರೋಡೆಕೋರರು ಪರಾರಿಯಾಗಿದ್ದು, ಪ್ರಕರಣದ ತನಿಖೆಗೆ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಬೆಂಗಳೂರು ದಿ ಗ್ರೇಟ್ ರಾಬರಿ ಪ್ರಕರಣದಲ್ಲಿ ಪೊಲೀಸ್ ತನಿಖೆ ವೇಳೆ ಮತ್ತೆರಡು ಸಿಸಿಟಿವಿ ಲಭ್ಯವಾಗಿದ್ದು, ರಾಬರ್ಸ್ ಎಟಿಎಂ ರಾಬರಿಗೆ ಮುನ್ನ ನಗರದಲ್ಲಿ ಸ್ಥಳ ಪರಿಶೀಲನೆ ಮಾಡಿರೋದು ಪತ್ತೆಯಾಗಿದೆ. ಕೃತ್ಯದ ಹಿಂದಿನ ದಿನ ಸ್ಥಳ ಪರಿಶೀಲನೆ ಮಾಡಿರೋದು ಪತ್ತೆಯಾಗಿದ್ದು, ಅಂದರೆ 18 ನೇ ತಾರೀಕು ಬಾರ್ ಹಾಗೂ ಡೈರಿ ಸರ್ಕಲ್ ಫ್ಲೈ ಓವರ್ ಬಳಿ ರಾಬರ್ಸ್ ಕಂಡಿರುವುದು ಬೆಳಕಿಗೆ ಬಂದಿದೆ. ಬಾರ್ ನಲ್ಲಿ ಎಣ್ಣೆ ಖರೀದಿ ಮಾಡಿರೋ ಸಿಸಿಟಿವಿ ಲಭ್ಯವಾಗಿದ್ದು, ದಕ್ಷಿಣ ವಿಭಾಗದ ಪೊಲೀಸರ ಸಿಸಿಟಿವಿ ತಪಾಸಣೆ ವೇಳೆ ಪತ್ತೆಯಾಗಿದೆ. 18 ನೇ ತಾರೀಖು ಬಾರ್ ಹಾಗೂ ಡೈರಿ ಸರ್ಕಲ್ ಫ್ಲೈ ಓವರ್ ಬಳಿ ಆರೋಪಿಗಳು ಓಡಾಟ ನಡೆಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ ಪೊಲೀಸ್ ಟೀಂ

ಇನ್ನು ಹಾಡಹಗಲೇ 7 ಕೋಟಿ 11 ಲಕ್ಷ ರೂ ರಾಬರಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ ಪೊಲೀಸ್ ಟೀಂ ಅಲ್ಲೂ ತನಿಖೆ ನಡೆಸಿತು. ಜೈಲಿನಿಂದ ರಾಬರಿಗೆ ಸಂಚು ರೂಪಿಸಿರುವ ಅನುಮಾನದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಜೈಲಿನಲ್ಲಿ ಪರಿಶೀಲನೆ ನಡೆಸಲಾಯ್ತು. ರಾಬರಿ ನಡೆದ ದಿನ ನವೆಂಬರ್ 19ರ ರಾತ್ರಿ ತೆರಳಿ ಪೊಲೀಸರು ಮಾಹಿತಿ ಪಡೆದರು. ರಾಬರಿ ಗ್ಯಾಂಗ್ ಹಾಗು ಒಳಗಿರುವ ಯಾರಿಗಾದರೂ ಲಿಂಕ್ ಇದೆಯೆ ಎಂದು ಪರಿಶೀಲನೆ ನಡೆಸಿದರು.

ನಿರ್ಲಕ್ಷ್ಯ ಮಾಡಿದ್ರಾ ಪೊಲೀಸ್ರು

ಕ್ಯಾಶ್ ಇದ್ದ ವಾಹನ ಮಾತ್ರ ಫೋಕಸ್ ಮಾಡಿ ನಿರ್ಲಕ್ಷ್ಯ ಮಾಡಿದ್ರಾ ಪೊಲೀಸ್ರು‌‌? ಅಂದುಕೊಂಡಂತೆ ಪೊಲೀಸರನ್ನ ಯಾಮಾರಿಸಿತಾ ರಾಬರಿ ಟೀಂ. ಕ್ವಿಕ್ ಆಗಿ ಕ್ರಮ‌ ಕೈಗೊಂಡಿದ್ರೆ ರಾಬರಿ ಗ್ಯಾಂಗ್ ನ ಪೊಲೀಸರು ತಕ್ಷಣ ಬೇಧಿಸಬಹುದಿತ್ತು. ಮೂರು ವಾಹನ, ಸಿಬ್ಬಂದಿ ಲಾಕ್, ಕ್ಯಾಶ್ ಇರೋ ಗಾಡಿ ಎಸ್ಕೇಪ್, ಒಂದು ಗಂಟೆ ಪೊಲೀಸರು ನಿರ್ಲಕ್ಷ್ಯ ಮಾಡಿದ್ರು. ಸರಿಯಾಗಿ ಮಧ್ಯಾಹ್ನ 12:36ರ ಸುಮಾರಿಗೆ ಗ್ಯಾಂಗ್ 7 ಕೋಟಿ 11 ಲಕ್ಷ ನಗದು ರಾಬರಿ ಮಾಡಿ ಇನೋವಾ ಕಾರಿನಲ್ಲಿ ಎಸ್ಕೇಪ್ ಆಗಿತ್ತು. ವಿಚಾರ ಹೊರಗಡೆ ಹೋಗಬಾರದು ಅಂತಾ ಪ್ಲಾನ್ ಮಾಡಿ ಸಿಬ್ಬಂದಿಯನ್ನ ಹಿಡಿದಿಟ್ಟುಕೊಂಡಿತ್ತು. ಒಟ್ಟು ಮೂರು ಟೀಂ‌ ಆಗಿ ರಾಬರ್ಸ್ ಬಂದಿದ್ದರು ಎನ್ನಲಾಗುತ್ತಿದೆ. ಪೊಲೀಸರನ್ನು ಯಾಮಾರಿಸೋಕೆ ರಾಬರ್ಸ್ ಪ್ರೀ ಪ್ಲಾನ್ ಮಾಡಿಕೊಂಡಿತ್ತು. ಇನೋವಾ ಕಾರು ಹೊರವಲಯಕ್ಕೆ ಹೋಗೋವರೆಗೂ ಮತ್ತೊಂದು ರಾಬರ್ಸ್ ತಂಡದ ವಶದಲ್ಲಿ CMS ಸಿಬ್ಬಂದಿ ಇದ್ದರು. ಸಿಟಿ ದಾಟಿದ ವಿಚಾರವನ್ನು 1 ಗಂಟೆ ಸುಮಾರಿಗೆ ಇನ್ನೆರಡು ಟೀಂಗೆ ತಿಳಿಸಿತ್ತು ಇನೋವಾ ಕಾರಿನ ಟೀಂ. ಅಲ್ಲಿಯವರೆಗೂ ಸಿಬ್ಬಂದಿ ಮೊಬೈಲ್ ಅನ್ನು ಗ್ಯಾಂಗ್ ಕಸಿದಿಟ್ಟುಕೊಂಡಿತ್ತು.ಇನೋವಾ ಸಿಟಿ ದಾಟಿದ ವಿಚಾರ ಗೊತ್ತಾದ ಕೂಡಲೇ CMS ಸಿಬ್ಬಂದಿಯನ್ನ ಕೆಳಗಿಳಿಸಿ ಉಳಿದ ಎರಡು ಟೀಂ ಕೂಡ ಎಸ್ಕೇಪ್ ಆಗಿತ್ತು.

ರಾಬರ್ಸ್ ಈಸಿಯಾಗಿ ಎಸ್ಕೇಪ್ ಆಗಿದ್ದೇಗೆ?

ಇದಾದ ನಂತರ 1:16ಕ್ಕೆ ಡಿಸಿಪಿ ಕಚೇರಿಗೆ CMS ಸಿಬ್ಬಂದಿ ಕರೆ ಮಾಡಿದ್ದರು. ಕೂಡಲೇ ಅಲರ್ಟ್ ಆಗಿ ಮಾಹಿತಿ ಕಲೆ ಹಾಕಬೇಕಿದ್ದ ಪೊಲೀಸರ ಟೀಂ ರಾಬರಿ ಬಗ್ಗೆ ಕನ್ಫರ್ಮ್ ಮಾಡಿಕೊಳ್ಳೋದ್ರಲ್ಲೆ ಸುಮಾರು 1 ಗಂಟೆ ಸಮಯ ವ್ಯರ್ಥ ಮಾಡಿತು. 1:16ಕ್ಕೆ ದೂರು ಬಂದಿದ್ರೂ 2:20 ವೈರ್ಲೆಸ್ ಮೂಲಕ ಮೆಸೇಜ್. ಅಷ್ಟೊತ್ತಿಗಾಗಲೇ ಇನೋವಾ ಕಾರು ಭಟ್ಟರಹಳ್ಳಿ ದಾಟಿತ್ತು. 2:20ರ ನಂತರ ಇನೋವಾ ಕಾರನ್ನೇ ಫೋಕಸ್ ಮಾಡಿ ಹುಡುಕಾಟ ಆರಂಭ ಆಯ್ತು. ಇತ್ತ ಜೆನ್, ವ್ಯಾಗನಾರ್ ನಲ್ಲಿದ್ದ ಎರಡು ಟೀಂ ಈಸಿಯಾಗಿ ಎಸ್ಕೇಪ್ ಆಯ್ತು. ಪ್ಲಾನ್ ನಂತೆ ತಮ್ಮ ಬೆನ್ನು ಬೀಳುವುದಿಲ್ಲ ಅಂತಾ ಈಸಿಯಾಗಿ ಎಸ್ಕೇಪ್ ಆದ್ರು. ಜೆನ್, ವ್ಯಾಗನಾರ್ ಫಾಲೋ ಮಾಡಿದ್ರೆ ಖದೀಮರನ್ನು ಹಿಡಿಬಹುದಿತ್ತು. ಇನೋವಾ ಕಾರ್ ಮೂಮೆಂಟ್ ಗೂ ಈ ಎರಡು ಕಾರು ಮೂಮೆಂಟ್ ಗೂ 40 ನಿಮಿಷದ ವ್ಯತ್ಯಾಸ ಇತ್ತು. ಒಟ್ನಲ್ಲಿ ನೀಟಾಗಿ ಪೊಲೀಸ್ರನ್ನ ಯಾಮಾರಿಸಿ ರಾಬರಿ ಟೀಂ ಎಸ್ಕೇಪ್ ಆಗಿದೆ. ಸದ್ಯ ರಾಬರ್ಸ್ ಗಾಗಿ ತೀವ್ರ ಪೊಲೀಸರು ಹುಡುಕಾಟ ಮುಂದುವರೆದಿದೆ.

ಪೊಲೀಸರ ತಲೆ ಕೆಡಿಸಿದ ಕೇಸ್

ಮೂರು ಟೀಂ, ಏಳರಿಂದ ಎಂಟು ಜನ, ಏಳು ಕೋಟಿ 11 ಲಕ್ಷ ರೂ ರಾಬರಿ ಸದ್ಯ ರಾಜ್ಯದ ಪೊಲೀಸರ ತಲೆ ಕೆಡಿಸಿರುವ ಪ್ರಕರಣ. 1 ಕೇಸ್, 4 ಜನ ಜಂಟಿ ಆಯುಕ್ತರು, 18 ಜನ ಡಿಸಿಪಿಗಳು ಹಗಲು ರಾತ್ರಿ ರಾಬರ್ಸ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬೆಂಗಳೂರು ಪೊಲೀಸ್ರ ತಲೆ ಕೆಡಿಸಿರುವ ದ ಗ್ರೇಟ್ ರಾಬರಿ ಕೇಸ್ ಅನ್ನು L&O, CCB, ಟ್ರಾಫಿಕ್ ಪೊಲೀಸರು ಜೊತೆಗೆ ನಾಲ್ಕು ಜನ ಜಂಟಿ ಪೊಲೀಸ್ ಆಯುಕ್ತರು ಕೂಡ ಇಡೀ ಕೇಸ್ ಮಾನಿಟರ್ ಮಾಡುತ್ತಿದ್ದಾರೆ. ಬಹುತೇಕ ಬೆಂಗಳೂರು ಸಿಟಿ ಪೊಲೀಸರೇ ತಂಡದಲ್ಲಿದ್ದಾರೆ. ಈವರೆಗೆ ನೂರಕ್ಕೂ ಹೆಚ್ಚು ಸಿಸಿಟಿವಿ ಫುಟೇಜ್ ಪರಿಶೀಲನೆ ನಡೆದಿದೆ. ಟ್ರಾಫಿಕ್ ಪೊಲೀಸರಿಂದ ಸಿಸಿಟಿವಿ ಪರಿಶೀಲನೆಗೆ ಸಹಕಾರ ದೊರೆತಿದೆ. ಸಿಸಿಟಿವಿ ಮೂಮೆಂಟ್ ಆಧರಿಸಿ ಮತ್ತಿತರ ಟೀಂಗಳಿಂದ ರಾಬರಿ ಗ್ಯಾಂಗ್ ಪತ್ತೆಗೆ ಶತಪ್ರಯತ್ನ ಮಾಡಲಾಗುತ್ತಿದೆ.