ಕೊಪ್ಪಳ ನಗರದ ಕೆಆರ್‌ಐಡಿಎಲ್(ಕರ್ನಾಟಕ ಗ್ರಾಮೀಣ ಮೂಲಸೌ ಕಠ್ಯ ಅಭಿವೃದ್ಧಿನಿಗಮ) ನಲ್ಲಿ ಕೆಲ ವರ್ಷ ಹೊರ ಗುತ್ತಿಗೆ ಕಚೇರಿ ಸಹಾಯಕನಾಗಿದ್ದವನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಆತನ ಬಳಿ ಇದ್ದ ಬರೋಬ್ಬರಿ ಆಸ್ತಿ ನೋಡಿ ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದ ಕಳಕಪ್ಪನಿಡಗುಂದಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, 24 ಮನೆ, 50 ನಿವೇಶನ, 40 ಎಕರೆ ಜಮೀನು, ಬಂಗಾರ, ಬೆಳ್ಳಿ ಸೇರಿದಂತೆ 100 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ದಾಖಲೆ ಪತ್ತೆಯಾಗಿದೆ.

11:10 PM (IST) Aug 01
ಜಾಂಡೀಸ್‌ನಿಂದ ಬಳಲುತ್ತಿರುವ ನಟ ಸಂತೋಷ್ ಬಾಲರಾಜ್ ಅವರ ಆರೋಗ್ಯ ತೀರಾ ಗಂಭೀರವಾಗಿದ್ದು, ಕೋಮಾಕ್ಕೆ ಜಾರಿದ್ದಾರೆ. ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರಿಯಾ 2, ಕೆಂಪ, ಗಣಪ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
10:02 PM (IST) Aug 01
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ, ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರ್ಕಾರವು ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಲಿದೆ. ಈ ಸಭೆಯಲ್ಲಿ ವಿವಿಧ ಬಸ್ ಮಾಲೀಕರ ಸಂಘಗಳ ಪ್ರತಿನಿಧಿಗಳಿಗೆ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಿದೆ.
09:59 PM (IST) Aug 01
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಆರ್ಥಿಕ ಅಭಿವೃದ್ಧಿಯನ್ನು ವ್ಯವಸ್ಥಿತಗೊಳಿಸುವ ಸಂಬಂಧ ಜಂಟಿ ಹೊಣೆಗಾರಿಕೆ ಗುಂಪುಗಳ ರಚನೆಗೆ ಸರ್ಕಾರ ಉದ್ದೇಶಿಸಿದ್ದು, ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
09:10 PM (IST) Aug 01
ಜೀ ಕನ್ನಡದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಚಂದ್ರಶೇಖರ್ ಸಿದ್ಧಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಯಲ್ಲಾಪುರದ ಕಟ್ಟಿಗೆ ಗ್ರಾಮದ ಸಮೀಪದ ಅರಣ್ಯದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎನ್ನಲಾಗಿದೆ.
09:06 PM (IST) Aug 01
08:50 PM (IST) Aug 01
ಹಾವೇರಿಯಲ್ಲಿ ಮದುವೆಯಾದ ಯುವತಿಗೆ ಮೆಸೇಜ್ ಕಳುಹಿಸಿದ್ದಕ್ಕೆ ಕಾಂಗ್ರೆಸ್ ಮುಖಂಡನನ್ನು ಬರ್ತಡೇ ದಿನದಂದೇ ಕೊಲೆ ಮಾಡಲಾಗಿದೆ. ಮನೋಜ್ ಪ್ರಕಾಶ್ ಉಡಗಣಿ ಎಂಬ ಕಾಂಗ್ರೆಸ್ ಕಾರ್ಯದರ್ಶಿಯನ್ನು ಕಂಠಪೂರ್ತಿ ಮದ್ಯ ಕುಡಿಸಿ ವರದಾ ನದಿಗೆ ತಳ್ಳಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಮೃತನ ಕುಟುಂಬಸ್ಥರ ಆಕ್ರೋಶ.
08:33 PM (IST) Aug 01
08:15 PM (IST) Aug 01
ಜಾಗತಿಕ ಪ್ರತಿಷ್ಠಿತ ಕಂಪನಿಗಳ ಮುಖ್ಯಸ್ಥರಾಗಿರುವ ಭಾರತೀಯರ ಸಾಲಿಗೆ ಮತ್ತೊಬ್ಬ ಸಾಧಕ ಸೇರಿಕೊಂಡಿದ್ದಾರೆ. ಏರ್ ನ್ಯೂಜಿಲೆಂಡ್ ಏರ್‌ಲೈನ್ಸ್ ಸಂಸ್ಥೆಯ ಸಿಇಒ ಆಗಿ ಭಾರತೀಯ ಮೂಲದ ನಿಖಿಲ್ ರವಿಶಂಕರ್ ನೇಮಕಗೊಂಡಿದ್ದಾರೆ.
08:11 PM (IST) Aug 01
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಒಂದು ಪ್ರಕರಣದಲ್ಲಿ ತೀರ್ಪು ಬಂದಿದ್ದು, ಇನ್ನೂ ಮೂರು ಪ್ರಕರಣಗಳು ಬಾಕಿ ಇವೆ. ಡಿಕೆಶಿ, ಅಶ್ವಥ್ ನಾರಾಯಣ್, ಸುಮಲತಾ ಅಂಬರೀಶ್ ಮತ್ತು ರೂಪಾ ಹಾಸನ್ ಪ್ರತಿಕ್ರಿಯಿಸಿದ್ದಾರೆ.
07:45 PM (IST) Aug 01
ಚಳ್ಳಕೆರೆಯಲ್ಲಿ ರಂಗನಾಥ್ ಎಂಬುವವರಿಗೆ ರಸ್ತೆಯಲ್ಲಿ ₹50,000 ಹಣದ ಬ್ಯಾಗ್ ಸಿಕ್ಕಿದೆ. ಬ್ಯಾಗ್ ಅನ್ನು ಮನೆಗೆ ತೆಗೆದುಕೊಂಡು ಹೋಗದೆ, ನೇರವಾಗಿ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ನಂತರ ಹಣ ಕಳೆದುಕೊಂಡ ಗೋವರ್ಧನ್ ಎಂಬುವವರಿಗೆ ಪೊಲೀಸರು ಹಣವನ್ನು ಹಿಂದಿರುಗಿಸಿದ್ದಾರೆ.
07:26 PM (IST) Aug 01
7ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಪ್ರಕಟವಾಗಿದೆ. ಶಾರುಖ್ ಖಾನ್ ಹಾಗೂ ವಿಕ್ರಾಂಸ್ ಮಾಸ್ಸೆಗೆ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಒಲಿದು ಬಂದಿದ್ದರೆ, ಅತ್ಯುತ್ತಮ ನಟಿ ಪ್ರಶಸ್ತಿ ರಾಣಿ ಮುಖರ್ಜಿ ಪಾಲಾಗಿದೆ. ಯಾವ ಸಿನಿಮಾಗಳಿಗೆ ಸಿಕ್ಕಿದೆ ಪ್ರಶಸ್ತಿ ಇಲ್ಲಿದೆ ಲಿಸ್ಟ್.
07:24 PM (IST) Aug 01
ನೇತ್ರಾವತಿ ನದಿ ತೀರದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪದ ತನಿಖೆಗೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡವು ಧರ್ಮಸ್ಥಳ ಗ್ರಾಮ ಪಂಚಾಯತಿಯಿಂದ ದಾಖಲೆಗಳನ್ನು ಸಂಗ್ರಹಿಸಿದೆ. ಜುಲೈ 31 ರಂದು 6 ನೇ ಸ್ಥಳದಲ್ಲಿ ಕಳೇಬರ ಪತ್ತೆಯಾಗಿದ್ದು, 7 ಮತ್ತು 8 ನೇ ಸ್ಥಳಗಳಲ್ಲಿ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ.
07:22 PM (IST) Aug 01
Onam Special Train Bookings: ಬೆಂಗಳೂರು ಮತ್ತು ತಿರುವನಂತಪುರಂ ನಡುವೆ ವಿಶೇಷ ರೈಲುಗಳನ್ನು ಘೋಷಿಸಲಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ವಾರದ ಮತ್ತು ಬುಧವಾರದಂದು ಸಂಚರಿಸಲಿರುವ ಈ ರೈಲುಗಳು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
07:17 PM (IST) Aug 01
07:03 PM (IST) Aug 01
ಕೇರಳ ನರ್ಸ್ ನಿಮಿಷ ಪ್ರಿಯಾಗೆ ಯೆಮೆನ್ ಕೋರ್ಟ್ ನೀಡಿದ್ದ ಗಲ್ಲು ಶಿಕ್ಷೆ ಹಲವರ ಸಂಧಾನದಿಂದ ರದ್ದಾಗಿದೆ ಅನ್ನೋ ಸುದ್ದಿ, ವಿಡಿಯೋ ಹರಿದಾಡಿತ್ತು. ಆದರೆ ಈ ಪ್ರಕರಣ ಕುರಿತು ಇದೀಗ ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.
06:41 PM (IST) Aug 01
ಕೇಂದ್ರ ಸರ್ಕಾರ ರಾಜ್ಯಕ್ಕೆ ಅಗತ್ಯವಾದ ರಸಗೊಬ್ಬರ ಸರಬರಾಜು ಮಾಡದೆ ಅನ್ಯಾಯ ಎಸಗಿದೆ. ಈ ಸಂದರ್ಭದಲ್ಲಿ ಕಾಳಸಂತೆಕೋರರು ತಲೆ ಎತ್ತದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
06:27 PM (IST) Aug 01
ಟಿಸಿಎಸ್ 12,000 ಉದ್ಯೋಗಿಗಳನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU) ರಾಜ್ಯ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿದೆ. ಕೈಗಾರಿಕಾ ವಿವಾದ ಕಾಯ್ದೆ ಉಲ್ಲಂಘನೆ ಮತ್ತು ನೌಕರರನ್ನು ರಾಜೀನಾಮೆ ನೀಡಲು ಬಲವಂತಪಡಿಸಿದ ಆರೋಪ ಕೇಳಿಬಂದಿದೆ.
06:26 PM (IST) Aug 01
ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಕೇವಲ 199 ರೂ.ಗೆ ಯುವಕ-ಯುವತಿಯರಿಗೆ 'ಬ್ಲೈಂಡ್ ಡೇಟ್' ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದರ ಬುಕಿಂಗ್ ಕೂಡ ಆರಂಭವಾಗಿದೆ. ಇದಕ್ಕೆ ಸ್ಥಳೀಯ ಜನರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ತೋಟಗಾರಿಕಾ ಇಲಾಖೆ ಯಾವುದೇ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
06:12 PM (IST) Aug 01
05:35 PM (IST) Aug 01
ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ): ತಿಮ್ಮಪ್ಪನ ಗುಡಿಯ ಹತ್ತಿರ ರೀಲ್ಸ್ ಮಾಡಿದ್ರೆ ಖಂಡಿತಾ ಶಿಕ್ಷೆ ಅನುಭವಿಸಬೇಕಾಗುತ್ತೆ ಅಂತ ಟಿಟಿಡಿ ಎಚ್ಚರಿಕೆ ಕೊಟ್ಟಿದೆ. ಭಕ್ತರ ಭಾವನೆಗಳಿಗೆ ಗೌರವ ಕೊಡಿ ಅಂತ ಮನವಿ ಮಾಡಿದೆ.
05:07 PM (IST) Aug 01
05:05 PM (IST) Aug 01
ವಿದ್ಯಾರ್ಥಿಗಳು, ವೃತ್ತಿಪರರು ಸೇರಿದಂತೆ ಎಲ್ಲರೂ ಚಾಟ್‌ಜಿಪಿಟಿ ಎಐ ಬಳಕೆ ಮಾಡುತ್ತಿದ್ದಾರೆ. ಆದರೆ ಇದು ಎಷ್ಟು ಸುರಕ್ಷಿತ ಅನ್ನೋ ಆತಂಕ ಪದೇ ಪದೇ ಚರ್ಚೆಯಾಗುತ್ತಿದೆ. ಈ ಆತಂಕಗಳ ಬೆನ್ನಲ್ಲೇ ಚಾಟ್‌ಜಿಪಿಟಿಯ ಚಾಟ್, ಬಳಕೆದಾರನ ಹೆೆಸರು, ಸ್ಥಳ ಸೇರಿದಂತೆ ಹಲವು ಮಾಹಿತಿ ಗೂಗಲ್ ಸರ್ಚ್‌ನಲ್ಲಿ ಬಯಲಾಗಿದೆ.
05:05 PM (IST) Aug 01
ಸಚಿನ್ ಅವರು ಇದೀಗ ಹೊಸ ಬಾಲಿವುಡ್ ಸಿನಿಮಾ ಆರಂಭಿಸಿದ್ದಾರೆ. ಈ ಚಿತ್ರದ ಹೀರೋ ಟೈಗರ್ ಶ್ರಾಫ್. ಇದೊಂದು ಭಾವನಾತ್ಮಕ ಕತೆಯುಳ್ಳ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಎನ್ನಲಾಗಿದೆ.
04:51 PM (IST) Aug 01
ಕಿಚ್ಚ ಸುದೀಪ್ ಅವರ 47ನೇ ಚಿತ್ರ K47 ಬಗ್ಗೆ ದಿನೇ ದಿನೇ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಸದ್ಯ ಚಿತ್ರಕ್ಕೆ ನಿಶ್ಚಿಕಾ ನಾಯ್ಡು ಎಂಟ್ರಿಕೊಟ್ಟಿದ್ದಾರೆ ಎನ್ನಲಾಗಿದೆ.
04:50 PM (IST) Aug 01
04:35 PM (IST) Aug 01
ಮಾಲೇಗಾಂವ್ ಸ್ಫೋಟವನ್ನು ಹಿಂದೂಗಳ ಮೇಲೆ ಮಾತ್ರವಲ್ಲ ಆರ್‌ಎಸ್ಎಸ್ ಮುಖ್ಯಸ್ಥರ ಅರೆಸ್ಟ್ ಮಾಡಲು ಬಹುದೊಡ್ಡ ಷಡ್ಯಂತ್ರ ನಡೆದಿತ್ತು ಅನ್ನೋದನ್ನು ಸ್ಫೋಟದ ಪ್ರಕರಣದ ತನಿಖಾ ಅಫೀಸರ್ ಬಹಿರಂಗಪಡಿಸಿದ್ದಾರೆ.
04:11 PM (IST) Aug 01
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ರೀಲ್ಸ್ ಹಾಕೋದನ್ನೇ ಕಾಯ್ತಿರೋ ನೆಟ್ಟಿಗರು ಈ ಬಾರಿ ಭರ್ಜರಿ ಕಮೆಂಟ್ ಮಾಡಿದ್ದಾರೆ. ಕಮೆಂಟ್ ಓದುವ ಸಲುವಾಗಿಯೇ ಬರೋ ಹಾಗಿದೆ ನೋಡಿ....
04:02 PM (IST) Aug 01
03:53 PM (IST) Aug 01
ಜಗದೀಪ್ ಧನ್ಕರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಿಸಿದೆ. ನಾಮ ಪತ್ರ ಸಲ್ಲಿಸಲು ಅರ್ಹತೆ ಏನಿರಬೇಕು?
03:52 PM (IST) Aug 01
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅತ್ಯಾಚಾ*ರ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲಾಗಿದೆ. ನಟಿ ರಮ್ಯಾ 'ಎಲ್ಲಾ ಮಹಿಳೆಯರಿಗೂ ನ್ಯಾಯ ಸಿಕ್ಕಿದೆ' ಎಂದು ಪ್ರತಿಕ್ರಿಯಿಸಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ನಾಳೆ ಪ್ರಕಟಿಸಲಾಗುವುದು.
03:08 PM (IST) Aug 01
ಐಸಿಐಸಿಐ ಬ್ಯಾಂಕ್ UPI ಪಾವತಿಗಳಿಗೆ ಶುಲ್ಕ ವಿಧಿಸಲು ಮುಂದಾಗಿದೆ. ಆಗಸ್ಟ್ 1, 2025 ರಿಂದ ಈ ಹೊಸ ನಿಯಮ ಜಾರಿಗೆ ಬಂದಿದೆ. ಎಷ್ಟು ಚಾರ್ಜ್ ಮಾಡಲಾಗುತ್ತದೆ?
02:45 PM (IST) Aug 01
ಭಾರತೀಯರು ಸದ್ಯ ನಿವೃತ್ತಿ ಜೀವನ ನಡೆಸಲು ಎಷ್ಟು ದುಡ್ಡಿರಬೇಕು? ಕೆಲಸದಿಂದ ನಿವೃತ್ತಿಯಾಗುವ ವೇಳೆ ಎಷ್ಟು ಮೊತ್ತ ಉಳಿತಾಯ ಅಥವಾ ಹೂಡಿಕೆ ಮಾಡಿದ ಮೊತ್ತ ಕೈಯಲ್ಲಿರಬೇಕು ಅನ್ನೋ ಅಧ್ಯಯನ ವರದಿ ಬಹಿರಂಗವಾಗಿದೆ.
02:32 PM (IST) Aug 01
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆದ ಉತ್ಖನನದಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ಗ್ರಾಮಸ್ಥರಾದ ಶಂಕರ್ ಕುಲಾಲ್, ಯಾವುದೇ ಅತ್ಯಾ*ಚಾರ ಅಥವಾ ಕೊಲೆ ನಡೆದಿಲ್ಲ ಎಂದು ಹೇಳಿದ್ದಾರೆ. ಹಿಂದೆ ಸ್ಮಶಾನವಿಲ್ಲದ ಕಾರಣ ಶವಗಳನ್ನು ಹೂಳುತ್ತಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.
01:36 PM (IST) Aug 01
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವೀಡಿಯೋ ಮತ್ತು ಅತ್ಯಾ8ಚಾರ ಪ್ರಕರಣದ ತೀರ್ಪು ಇಂದು ಹೊರಬಿದ್ದಿದೆ. 14 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಪ್ರಜ್ವಲ್ ರೇವಣ್ಣ ಅವರ ಭವಿಷ್ಯ ಈ ತೀರ್ಪಿನಿಂದ ನಿರ್ಧಾರವಾಗಲಿದೆ.
01:30 PM (IST) Aug 01
ಮಧ್ಯರಾತ್ರಿ ಯುವಕರ ಗುಂಪು ಸ್ಕೂಟರ್ ಮೇಲೆ ಮಸ್ತಿ ಮಾಡಿದೆ. ತ್ರಿಬಲ್ ರೈಡ್ ಕೇಳಿರುತ್ತೀರಿ. ಆದರೆ ಒಂಂದು ಸ್ಕೂಟರ್ ಮೇಲೆ 7 ಮಂದಿ ರೈಡ್ ನೋಡಿದ್ದೀರಾ. ಈ ಯುವಕರ ಈ ಸಾಹಸ ಮಾಡಿ ಇದೀಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಇದೀಗ ಇವರ ಪೋಷಕರು ಪೊಲೀರ ಬಳಿ ಅಂಗಲಾಚುತ್ತಿದ್ದಾರೆ.
12:49 PM (IST) Aug 01
ಧರ್ಮಸ್ಥಳ ಪ್ರಕರಣ ಸಂಬಂಧ ಸುಳ್ಳು ಸುದ್ದಿ ಹರಡಿದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಗೃಹ ಸಚಿವ ನೇತತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಹಲವು ನಿರ್ಣಯ ಕೈಗೊಳ್ಳಲಾಗಿದೆ.
12:25 PM (IST) Aug 01
11:25 AM (IST) Aug 01
ಕಾರ್ಮಿಕರ ಕೆಲಸದ ಅವಧಿಯನ್ನು ದಿನದಲ್ಲಿ 9 ರಿಂದ 10 ಗಂಟೆಗಳಿಗೆ ಹೆಚ್ಚಿಸುವ ಕೇಂದ್ರ ಸರ್ಕಾರದ ‘ಫ್ಲೆಕ್ಸಿ ಅವರ್’ ಪ್ರಸ್ತಾವನೆ ಅಳವಡಿಕೆಗೆ ರಾಜ್ಯದ ಯಾವುದೇ ಕೈಗಾರಿಕೆ, ಉದ್ಯಮಗಳು ತಮ್ಮ ಕಾರ್ಮಿಕರು ಮತ್ತು ಕಾರ್ಮಿಕ ಸಂಘಟನೆಯ ಸಮ್ಮತಿಯೊಂದಿಗೆ ಮುಂದೆ ಬಂದರೆ ಅನುಮತಿ ನೀಡುತ್ತೇವೆ- ಸಂತೋಷ್ ಲಾಡ್
11:05 AM (IST) Aug 01
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಶಿಲ್ಪಾ ಮಂಟಗಣಿ ಎಂಬ ಗೃಹಿಣಿ 100 ರೊಟ್ಟಿಯಿಂದ ಶುರು ಮಾಡಿದ ವ್ಯಾಪಾರ ಈಗ ಜವಾರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಆಗಿ ಬೆಳೆದು ನಿಂತಿದೆ.
10:12 AM (IST) Aug 01
ಸ್ವಪಕ್ಷೀಯ ಶಾಸಕರ ಅಸಮಾಧಾನ ತಣಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸುತ್ತಿರುವ ಸರಣಿ ಸಭೆ ಸತತ ಮೂರನೇ ದಿನವೂ ಮುಂದುವರೆಯಿತು.