MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • State
  • ಧರ್ಮಸ್ಥಳ ಸಮಾಧಿ ಪ್ರಕರಣ: ಅಸ್ಥಿಪಂಜರದ ಫಾರೆನ್ಸಿಕ್ ಪರೀಕ್ಷೆ ಹೇಗೆ ನಡೆಯುತ್ತೆ?

ಧರ್ಮಸ್ಥಳ ಸಮಾಧಿ ಪ್ರಕರಣ: ಅಸ್ಥಿಪಂಜರದ ಫಾರೆನ್ಸಿಕ್ ಪರೀಕ್ಷೆ ಹೇಗೆ ನಡೆಯುತ್ತೆ?

ಧರ್ಮಸ್ಥಳದಲ್ಲಿ ಪತ್ತೆಯಾದ ಅಸ್ಥಿಪಂಜರದ ಭಾಗಗಳ ತಾಂತ್ರಿಕ ವಿಶ್ಲೇಷಣೆ ಫಾರೆನ್ಸಿಕ್ ತಜ್ಞರಿಗೆ ಸವಾಲೊಡ್ಡಿದೆ. ಮಣಿಪಾಲ ಕೆಎಂಸಿಯಲ್ಲಿ ಈ ಪರೀಕ್ಷೆ ನಡೆಯಲಿದ್ದು, ಲಿಂಗ, ವಯಸ್ಸು, ಹತ್ಯೆಯ ವಿಧಾನ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆಯಲು ತಜ್ಞರು ಯತ್ನಿಸಲಿದ್ದಾರೆ.

2 Min read
Gowthami K
Published : Aug 01 2025, 12:25 PM IST| Updated : Aug 01 2025, 12:34 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಬೆಳ್ತಂಗಡಿ: ಧರ್ಮಸ್ಥಳದ ಸ್ಪಾಟ್ ನಂ. 6ರ ಬಳಿ ಪತ್ತೆಯಾದ ಅಸ್ಥಿಪಂಜರದ ಭಾಗಗಳು ಈಗ ತನಿಖೆಗೆ ಪ್ರಮುಖ ತಿರುವು ತಂದಿವೆ. ಈ ಅಸ್ಥಿಪಂಜರದ ತಾಂತ್ರಿಕ ವಿಶ್ಲೇಷಣೆ ನಡೆಸುವುದು ಫಾರೆನ್ಸಿಕ್ ಶಾಸ್ತ್ರಜ್ಞರಿಗೂ ಸವಾಲಾಗಿದ್ದು, ಮಣಿಪಾಲ ಕೆಎಂಸಿಯ ನಿಪುಣ ವೈದ್ಯರ ಸಹಕಾರದೊಂದಿಗೆ ಎಫ್ಎಸ್ಎಲ್ (FSL) ತಂಡ ಈ ಪರೀಕ್ಷೆ ನಡೆಸಲಿದೆ. ಪಾಯಿಂಟ್ ನಂ. 6ರಲ್ಲಿ ಎಸ್ಐಟಿ (SIT) ತಂಡ ಶೋಧಿಸಿದ ಶವದ ಅಸ್ಥಿಪಂಜರವನ್ನು ಉಡುಪಿಯ ಮಣಿಪಾಲದಲ್ಲಿರುವ ಕೆಎಂಸಿ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲಾಗಿದೆ. ಈ ಕಾಲೇಜಿನಲ್ಲಿ ಫಾರೆನ್ಸಿಕ್ ವಿಶ್ಲೇಷಣೆ (Forensic Examination) ನಡೆಯುವ ಸಾಧ್ಯತೆ ಇದೆ. ಈ ಹಿಂದೆ ಶಿರೂರು ಸ್ವಾಮೀಜಿಯ ಪ್ರಕರಣದಲ್ಲಿ ಸಹ ಇದೇ ಸಂಸ್ಥೆಯ ತಜ್ಞರಿಂದ ಫಾರೆನ್ಸಿಕ್ ಪರೀಕ್ಷೆ ನಡೆದಿತ್ತು. ಅದೇ ಹಿನ್ನೆಲೆಯಲ್ಲಿ ಅಲ್ಲಿನ ತಜ್ಞರಿಂದಲೇ ಫೊರೆನ್ಸಿಕ್ ಎಕ್ಸಾಮಿನ್ ಸಾಧ್ಯತೆ ಇದೆ.

26
Image Credit : Asianet News

ಅಸ್ಥಿಪಂಜರದ ಫಾರೆನ್ಸಿಕ್ ಪರೀಕ್ಷೆ ಹೇಗೆ ನಡೆಯುತ್ತದೆ?

ಎಲ್ಲಾ ಎಲುಬುಗಳ ಪ್ರಾಥಮಿಕ ದೃಶ್ಯ ಪರಿಶೀಲನೆ (Visual Examination) ಮೂಲಕ ಆರಂಭವಾಗುತ್ತದೆ. ಮೊದಲು, ಈ ಅಸ್ಥಿಪಂಜರ ಮಾನವನದ್ದೇನಾ ಅಥವಾ ಪ್ರಾಣಿಯದ್ದೇನಾ ಎಂಬುದನ್ನು ಸ್ಪಷ್ಟಪಡಿಸಲಾಗುತ್ತದೆ. ಇದರಲ್ಲಿ ಎಲುಬಿನ ಬಣ್ಣ, ಗಟ್ಟಿತನ, ವಕ್ರತೆ ಇತ್ಯಾದಿಗಳನ್ನು ಆಧರಿಸಲಾಗುತ್ತದೆ.

ಪೆಟ್ಟು, ಬಿರುಕುಗಳ ಪರಿಶೀಲನೆ

ಎಫ್ಎಸ್ಎಲ್ ತಂಡವು ಎಲುಬಿನಲ್ಲಿ ಹಗುರ ಅಥವಾ ಗಂಭೀರ ಪೆಟ್ಟುಗಳು ಇದ್ದವೆಯಾ, ಬಿರುಕುಗಳ ಲಕ್ಷಣಗಳಿವೆಯಾ ಎಂಬುದನ್ನು ಪರಿಶೀಲಿಸುತ್ತಾರೆ. ಇದರ ಮೂಲಕ ಶವದ ಮೃತ್ಯುವಿನ ಶೈಲಿ, ಹತ್ಯೆ ಆಗಿದೆಯೇ ಅಥವಾ ನೈಸರ್ಗಿಕ ಸಾವೇ ಎಂಬುದು ಅಂದಾಜು ಮಾಡಲಾಗುತ್ತದೆ.

Related Articles

Related image1
ಧರ್ಮಸ್ಥಳ ಸಮಾಧಿ ರಹಸ್ಯ: 12 ಮೂಳೆ ಸಿಕ್ಕ ಜಾಗದಲ್ಲಿ ಶೀಟ್‌ ಹಾಕಿ ಭದ್ರತೆ, ಆ.1ರ ಬೆಳಗ್ಗೆಯಿಂದಲೇ ಶೋಧ
Related image2
ಧರ್ಮಸ್ಥಳ ಸಮಾಧಿ ಪ್ರಕರಣ, ಸತ್ತ ವ್ಯಕ್ತಿಯ ತಂದೆಯನ್ನು ಸಂಪರ್ಕಿಸಿದ ಎಸ್ ಐ ಟಿ
36
Image Credit : Asianet News

ಲಿಂಗ, ವಯಸ್ಸು ಮತ್ತು ಎತ್ತರದ ಅಂದಾಜು

ಅಸ್ಥಿಪಂಜರದ ಆಯಾಮಗಳ ಆಧಾರವಾಗಿ ಶವದ ಲಿಂಗ, ವಯಸ್ಸು, ಎತ್ತರ ಹಾಗೂ ಕೆಲವೊಮ್ಮೆ ವಂಶೀಯ ಗುಣಲಕ್ಷಣಗಳು (Ethnic Estimation) ಅಂದಾಜು ಮಾಡಬಹುದು. ವಿಶೇಷವಾಗಿ Pelvis (ಶ್ರೋಣಿಭಾಗ), Skull (ಮಸ್ತಿಷ್ಕದ ಮೂಳೆ) ಮತ್ತು Femur (ಜಠರ ಮೂಳೆ) ಇವು ಪ್ರಮುಖ ಮಾಹಿತಿಯನ್ನು ನೀಡಬಲ್ಲವು.

ಹತ್ಯೆಯ ವಿಧಾನ ಪತ್ತೆಹಚ್ಚುವುದು

ಮೂಳೆಗಳಲ್ಲಿ ಗಂಭೀರ ಪೆಟ್ಟುಗಳಿರುವ ಸ್ಥಿತಿಯಲ್ಲಿ, ಏಟು ಯಾವ ರೀತಿಯ ಆಯುಧದಿಂದ ಆಗಿರಬಹುದು ಎಂಬುದರ ಕುರಿತು ವಿಶ್ಲೇಷಣೆ ಮಾಡಲಾಗುತ್ತದೆ. ಈ ಮೂಲಕ ಚಾಕು, ತೀವ್ರವಾದ ಆಯುಧ ಅಥವಾ ಗನ್ ಶಾಟ್ ಬಳಕೆಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗಬಹುದು.

46
Image Credit : Asianet News

ಡಿಎನ್‌ಎ ಪರೀಕ್ಷೆ

ಶವದ ಗುರುತನ್ನು ಪತ್ತೆಹಚ್ಚಲು, ಎಲುಬಿನ ಒಳಗಿನ Bone Marrow ಅಥವಾ Dense Bone ನಿಂದ DNA ಸಂಗ್ರಹಿಸಿ ವಿಶ್ಲೇಷಿಸಲಾಗುತ್ತದೆ. ಇದು ಮೂಲ ಗುರುತು ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ.

ಶವದ ಅವಧಿ ಅಂದಾಜು

ಶವ ಎಷ್ಟು ವರ್ಷಗಳ ಹಿಂದೆ ಹೂತುಹಾಕಲಾಗಿದೆಯೆಂಬ ಶಂಕೆಯಿದ್ದರೆ, Radiocarbon Dating ಅಥವಾ Bone Degradation Analysis ಮೂಲಕ ಸಾವಿನ ಅವಧಿ ಅಂದಾಜಿಸಲಾಗುತ್ತದೆ. ಶವಕ್ಕೆ ವಿಷ ನೀಡಲಾಗಿದೆ ಎಂಬ ಶಂಕೆ ಇದ್ದರೆ, ಅಸ್ಥಿಯಲ್ಲಿ ಉಳಿದಿರುವ ಅಣುಚಿಹ್ನೆಗಳ (Toxic Element Traces) ಆಧಾರದ ಮೇಲೆ ವಿಷದ ಬಗ್ಗೆ ತಿಳಿದುಕೊಳ್ಳಲಾಗುತ್ತದೆ.

56
Image Credit : Asianet News

ಎಫ್ಎಸ್ಎಲ್ ವರದಿ ಸಲ್ಲಿಕೆಯ ಅವಧಿಗಳು

  • ಪ್ರಾಥಮಿಕ ದೃಶ್ಯ ವರದಿ (Initial Visual Report): 2 ರಿಂದ 5 ದಿನಗಳಲ್ಲಿ ಎಸ್‌ಐಟಿ ತಂಡಕ್ಕೆ ಲಭ್ಯವಾಗಬಹುದು.
  • ಅಂತರಕಾಲೀನ ಡಿಎನ್‌ಎ ವರದಿ (Interim DNA Summary): ಸುಮಾರು 15 ದಿನಗಳಲ್ಲಿ ನಿರೀಕ್ಷಿಸಲಾಗುತ್ತದೆ.
  • ಅಂತಿಮ ಎಫ್ಎಸ್ಎಲ್ ವರದಿ (Final FSL Report): 45 ರಿಂದ 60 ದಿನಗಳ ಒಳಗೆ ನಿರೀಕ್ಷೆ.
66
Image Credit : Asianet News

ಪತ್ತೆಯಾದ ಅಸ್ಥಿಪಂಜರದ ವಿವರ

ಪಾಯಿಂಟ್ ನಂ. 6ರಲ್ಲಿ ಎಸ್ಐಟಿ ತಂಡ 7 ಅಡಿ ಆಳದ ಗುಂಡಿ ತೋಡಿ ಪರಿಶೋಧನೆ ನಡೆಸಿತು. 3 ಅಡಿ ಆಳದವರೆಗೂ ಗುಂಡಿ ತೋಡಿದ ನಂತರ ದೂರುದಾರನು ಕಾರ್ಯ ನಿಲ್ಲಿಸಿ ಮುಂದಿನ ಪಾಯಿಂಟ್ ಕಡೆ ಸಾಗಬೇಕೆಂದು ಸೂಚನೆ ನೀಡಿದರೂ, ಮಿನಿ ಜೆಸಿಬಿ ಮೂಲಕ 7 ಅಡಿ ಆಳದವರೆಗೆ ಮುಂದುವರಿಸಲಾಯಿತು.

ಈ ವೇಳೆ ಅಸ್ಥಿಪಂಜರದ  ಭಾಗಗಳು  ಯಾವುವು?

  • 5 ಹಲ್ಲುಗಳು
  • ದವಡೆಯ (Jaw) ಮೂಳೆ
  • ಎರಡು ತೊಡೆ ಭಾಗದ (Thigh) ಮೂಳೆಗಳು
  • ಬುರುಡೆಯ ಎರಡು ತುಂಡುಗಳು
  • ಹಾಗೂ ಇನ್ನಿತರ ಎಲುಬುಗಳು ಸೇರಿವೆ.

ಪರಿಶೋಧನೆಯ ನಂತರ ಪಾಯಿಂಟ್ ನಂ. 6ರ ಗುಂಡಿಯನ್ನು ಎಸ್ಐಟಿ ತಂಡ ಮುಚ್ಚಿದೆ. ಇಂದಿನಿಂದ ಮತ್ತಷ್ಟು ಪಾಯಿಂಟ್‌ಗಳಲ್ಲಿ ಪರಿಶೋಧನೆ ಮುಂದುವರೆಯಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಧರ್ಮಸ್ಥಳ
ಸೌಜನ್ಯ ಪ್ರಕರಣ
ಎಸ್.ಐ.ಟಿ.
ಮಂಗಳೂರು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved