ವಿದ್ಯಾರ್ಥಿಗಳು, ವೃತ್ತಿಪರರು ಸೇರಿದಂತೆ ಎಲ್ಲರೂ ಚಾಟ್‌ಜಿಪಿಟಿ ಎಐ ಬಳಕೆ ಮಾಡುತ್ತಿದ್ದಾರೆ. ಆದರೆ ಇದು ಎಷ್ಟು ಸುರಕ್ಷಿತ ಅನ್ನೋ ಆತಂಕ ಪದೇ ಪದೇ ಚರ್ಚೆಯಾಗುತ್ತಿದೆ. ಈ ಆತಂಕಗಳ ಬೆನ್ನಲ್ಲೇ ಚಾಟ್‌ಜಿಪಿಟಿಯ ಚಾಟ್, ಬಳಕೆದಾರನ ಹೆೆಸರು, ಸ್ಥಳ ಸೇರಿದಂತೆ ಹಲವು ಮಾಹಿತಿ ಗೂಗಲ್ ಸರ್ಚ್‌ನಲ್ಲಿ ಬಯಲಾಗಿದೆ.
ಎಲ್ಲಾ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇನ್ನು ವಿದ್ಯಾರ್ಥಿಗಳಿಂದ ಹಿಡಿದು ಎಲ್ಲರೂ ಎಐ ನೆರವು ಪಡೆದುಕೊಳ್ಳುತ್ತಿದ್ದಾರೆ. ತಮ್ಮ ದೈನಂದಿನ ಕೆಲ ಕಾರ್ಯಗಳಲ್ಲೂ ಎಐ ನೆರವು ಅನಿವಾರ್ಯ ಎಂದಾಗಿದೆ. ಆದರೆ ಎಐ ಬಳಕೆಯಿಂದ ಬಳೆಕಾದರ ಗೌಪ್ಯತೆ, ರಹಸ್ಯ ಮಾಹಿತಿಗಳು ಸುರಕ್ಷತೆ ಕುರಿತು ಹಲವು ಚರ್ಚೆಗಳು ನಡೆದಿದೆ. ಇದರ ನಡುವೆ ಚಾಟ್‌ಜಿಪಿಟಿಯಲ್ಲಿ ಬಳಕೆದಾರ ಮಾಡಿದ ಚಾಟ್, ಬಳಕೆದಾರನ ಹೆಸರು, ಆತನ ಸ್ಥಳ ಎಲ್ಲವೂ ಗೂಗಲ್ ಸರ್ಚ್‌ನಲ್ಲಿ ಬಹಿರಂಗವಾಗಿದೆ.
ಚಾಟ್‌ಜಿಪಿಟಿ ಫೀಚರ್‌ನಿಂದ ಎಲ್ಲಾ ಬಯಲು
ಬಳಕೆದಾರ ಚಾಟ್‌ಜಿಪಿಟಿ ಮೂಲಕ ಮಾಡಿದ ಚಾಟ್, ಆತನ ಹೆಸರು, ಲೊಕೇಶನ್ ಸೇರಿದಂತೆ ಹಲವು ಮಾಹಿತಿಗಳು ಗೂಗಲ್ ಸರ್ಚ್‌ನಲ್ಲಿ ಯಾರಿಗೂ ಬೇಕಾದರೂ ಲಭ್ಯವಾಗಿದೆ. ಗೂಗಲ್ ಸರ್ಚ್ ಮಾಡಿದರೆ ಈ ಎಲ್ಲಾ ಮಾಹಿತಿ ಲಭ್ಯವಿದೆ. ಇದಕ್ಕೆ ಕಾರಣ ಚಾಟ್‌ಜಿಪಿಟಿಯ ಒಂದು ಫೀಚರ್. ಚಾಟ್‌ಜಿಪಿಟಿಯ ಶೇರ್ ಫೀಚರ್ ಈ ಮಾಹಿತಿಗಳನ್ನು ಗೂಗಲ್ ಸರ್ಚ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ.
ಏನಿದು ಚಾಟ್‌ಜಿಪಿಟಿ ಶೇರ್ ಫೀಚರ್
ಚಾಟ್‌ಜಿಪಿಟಿ ಶೇರ್ ಫೀಚರ್ ತಂದಿದೆ. ಈ ಫೀಚರ್ ಮೂಲಕ ಬಳಕೆದಾರ ಚಾಟ್‌ಜಿಪಿಟಿ ಪಡೆದ ಉತ್ತರ, ಎಲ್ಲಾ ಮಾಹಿತಿಗಳನ್ನು ಗೆಳೆಯರು ಅಥವಾ ಸಹೋದ್ಯೋಗಿಗಳ ಜೊತೆ ಹಂಚಲು ಶೇರ್ ಫೀಚರ್ ನೀಡಲಾಗಿದೆ. ಉದಾಹರಣೆ ಯಾವುದೇ ಮಾಹಿತಿಯನ್ನು ಚಾಟ್‌ಜಿಪಿಟಿ ಮೂಲಕ ಪಡೆದರೆ ಅದರ ಲಿಂಕ್ ಶೇರ್ ಮಾಡಲು ಚಾಟ್‌ಜಿಪಿಟಿ ಅವಕಾಶ ನೀಡಿತ್ತು. ಈ ಫೀಚರ್ ಮೂಲಕ ಹಲವರು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಮಾಹಿತಿ ಹಂಚಿಕೊಳ್ಳುವಾಗ ಲಿಂಕ್ ಆಗಿ ಶೇರ್ ಆಗಲಿದೆ. ಇದು ಗೂಗಲ್ ಸರ್ಚ್‌ನಲ್ಲಿ ಲಭ್ಯವಿದೆ.
ಶೇರ್ ಫೀಚರ್ ತೆಗೆದು ಹಾಕಿದ ಚಾಟ್‌ಜಿಪಿಟಿ
ಗೂಗಲ್ ಸರ್ಚ್‌ನಲ್ಲಿ ಬಳಕೆದಾರನ ವೈಯುಕ್ತಿಕ ಮಾಹಿತಿಗಳು ಬಹಿರಂಗವಾದ ಬೆನ್ನಲ್ಲೇ ಬಳಕೆದಾರರು ಆಕ್ರೋಶ, ಅಸಮಾಧಾನ ಹೊರಹಾಕಿದ್ದರು. ಹೀಗಾಗಿ ಚಾಟ್‌ಜಿಪಿಟಿ ಈ ಶೇರ್ ಫೀಚರ್ ತೆಗೆದು ಹಾಕಿದೆ. ಸದ್ಯ ಚಾಟ್‌ಜಿಪಿಟಿಯಲ್ಲಿ ಶೇರ್ ಫೀಚರ್ ಲಭ್ಯವಿಲ್ಲ. ಇಷ್ಟೇ ಅಲ್ಲ ಈಗಾಗಲೇ ಗೂಗಲ್ ಸರ್ಚ್‌ನಲ್ಲಿ ಕಾಣಿಸಿಕೊಂಡ ಚಾಟ್‌ಜಿಪಿಟಿ ಲಿಂಕ್ಸ್ ತೆಗೆದು ಹಾಕುವ ಪ್ರಯತ್ನಗಳು ನಡೆಯುತ್ತಿದೆ.
