ಇಂದಿನಿಂದ ಪ್ರತಿ ಯುಪಿಐ ವಹಿವಾಟಿಗೆ ಶುಲ್ಕ ವಿಧಿಸುತ್ತಿದೆ ಐಸಿಐಸಿ ಬ್ಯಾಂಕ್
ಐಸಿಐಸಿಐ ಬ್ಯಾಂಕ್ UPI ಪಾವತಿಗಳಿಗೆ ಶುಲ್ಕ ವಿಧಿಸಲು ಮುಂದಾಗಿದೆ. ಆಗಸ್ಟ್ 1, 2025 ರಿಂದ ಈ ಹೊಸ ನಿಯಮ ಜಾರಿಗೆ ಬಂದಿದೆ. ಎಷ್ಟು ಚಾರ್ಜ್ ಮಾಡಲಾಗುತ್ತದೆ?
15

Image Credit : Google
ಐಸಿಐಸಿಐ ಬ್ಯಾಂಕ್ UPI ಪಾವತಿಗಳಿಗೆ ಶುಲ್ಕ
ಯುಪಿಐ ಪಾವತಿ ಇದೀಗ ಹಲವರ ತಲೆನೋವಿಗೆ ಕಾರಣವಾಗೆದ. ಕರ್ನಾಟಕದಲ್ಲಿ ರಾಜ್ಯ ಸರ್ಕಾರ ತೆರಿಗೆ ವಿಧಿಸಿ ಶಾಕ್ ನೀಡಿತ್ತು. ಇದೀಗ ಐಸಿಸಿಐ ಬ್ಯಾಂಕ್ ತೆಗೆದುಕೊಂಡ ನಿರ್ಧಾರ ಗ್ರಾಹಕರಿಗೆ ಆಘಾತ ತಂದಿದೆ. ಐಸಿಐಸಿಐ ಬ್ಯಾಂಕ್ UPI ಪಾವತಿಗಳಿಗೆ ಶುಲ್ಕ ವಿಧಿಸಲು ಮುಂದಾಗಿದೆ. ಆಗಸ್ಟ್ 1, 2025 ರಿಂದ ಈ ಹೊಸ ನಿಯಮ ಜಾರಿಗೆ ಬಂದಿದೆ. ಈ ಹಿಂದೆ ಯೆಸ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳು ಇದೇ ರೀತಿ ಮಾಡಿವೆ.
25
Image Credit : Social Media
ಪ್ರತಿ ವಹಿವಾಟಿಗೆ ಶುಲ್ಕ
ICICI ಬ್ಯಾಂಕ್‌ನಲ್ಲಿ ಎಸ್ಕ್ರೋ ಖಾತೆ ಹೊಂದಿರುವ PAಗಳಿಗೆ ಪ್ರತಿ ವಹಿವಾಟಿಗೆ 0.02% ಶುಲ್ಕ ವಿಧಿಸಲಾಗುತ್ತದೆ, ಗರಿಷ್ಠ ₹6. ಎಸ್ಕ್ರೋ ಖಾತೆ ಇಲ್ಲದ PAಗಳಿಗೆ 0.04% ಶುಲ್ಕ ವಿಧಿಸಲಾಗುತ್ತದೆ, ಗರಿಷ್ಠ ₹10.
35
Image Credit : Getty
ಯಾವ ಬ್ಯಾಂಕ್‌ಗಳಿಂದ ಶುಲ್ಕ
ವ್ಯಾಪಾರಿಗಳ ICICI ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿ ಮಾಡಿದರೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಯೆಸ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳು ಕಳೆದ 8-10 ತಿಂಗಳುಗಳಿಂದ PAಗಳಿಂದ UPI ವಹಿವಾಟುಗಳಿಗೆ ಶುಲ್ಕ ವಿಧಿಸುತ್ತಿವೆ.
45
Image Credit : gemini
NPCI ಬ್ಯಾಂಕ್‌ಗಳಿಂದ ಸ್ವಿಚ್ ಶುಲ್ಕ
ಸರ್ಕಾರ UPIಯ ವ್ಯಾಪಾರಿ ರಿಯಾಯಿತಿ ದರವನ್ನು (MDR) ಶೂನ್ಯದಲ್ಲಿ ಇರಿಸಿದ್ದರೂ, NPCI ಬ್ಯಾಂಕ್‌ಗಳಿಂದ ಸ್ವಿಚ್ ಶುಲ್ಕವನ್ನು ವಿಧಿಸುತ್ತದೆ. ಕೆಲವು ಬ್ಯಾಂಕ್‌ಗಳು ಈ ವೆಚ್ಚವನ್ನು ಪಾವತಿ ಸಂಗ್ರಾಹಕರಿಂದ ಮರುಪಡೆಯುತ್ತಿವೆ.
55
Image Credit : social media
ICICIಯ ಹೊಸ ಶುಲ್ಕದ ಪರಿಣಾಮ
ಪಾವತಿ ಸಂಗ್ರಾಹಕರು ಸಾಮಾನ್ಯವಾಗಿ ವ್ಯಾಪಾರಿಗಳಿಂದ ಪ್ಲಾಟ್‌ಫಾರ್ಮ್ ಶುಲ್ಕಗಳು, ಪಾವತಿ ಸಮನ್ವಯ ಶುಲ್ಕಗಳು ಮುಂತಾದ ಸೇವೆಗಳಿಗೆ ಮುಂಗಡವಾಗಿ ಶುಲ್ಕ ವಿಧಿಸುತ್ತಾರೆ. ಈ ಸಂದರ್ಭದಲ್ಲಿ, ICICIಯ ಹೊಸ ಶುಲ್ಕದ ಪರಿಣಾಮವು ಭವಿಷ್ಯದಲ್ಲಿ ವ್ಯಾಪಾರಿಗಳ ಮೇಲೆ ಬೀಳಬಹುದು. UPI ಗ್ರಾಹಕರಿಗೆ ಉಚಿತವಾಗಿದ್ದರೂ, ಬ್ಯಾಂಕ್‌ಗಳು ಈಗ ಪಾವತಿ ಸಂಗ್ರಾಹಕರಿಂದ ಶುಲ್ಕ ವಿಧಿಸುವ ಮೂಲಕ ತಮ್ಮ ವೆಚ್ಚವನ್ನು ಮರುಪಡೆಯಲು ನೋಡುತ್ತಿವೆ.
Latest Videos