ಮಾಲೇಗಾಂವ್ ಸ್ಫೋಟವನ್ನು ಹಿಂದೂಗಳ ಮೇಲೆ ಮಾತ್ರವಲ್ಲ ಆರ್‌ಎಸ್ಎಸ್ ಮುಖ್ಯಸ್ಥರ ಅರೆಸ್ಟ್ ಮಾಡಲು ಬಹುದೊಡ್ಡ ಷಡ್ಯಂತ್ರ ನಡೆದಿತ್ತು ಅನ್ನೋದನ್ನು ಸ್ಫೋಟದ ಪ್ರಕರಣದ ತನಿಖಾ ಅಫೀಸರ್ ಬಹಿರಂಗಪಡಿಸಿದ್ದಾರೆ.

ಮುಂಬೈ (ಆ.01) ಮಾಲೇಗಾಂವ್ ಸ್ಫೋಟ ಪ್ರಕರಣವನ್ನು ಹಿಂದೂ ಭಯೋತ್ಪಾದನೆ ಎಂದು ಬಿಂಬಿಸಲು ನಡೆಸಿದ ಪ್ರಯತ್ನಕ್ಕೆ ಕೋರ್ಟ್ ಛೀಮಾರಿ ಹಾಕಿದೆ. 2008ರ ಪ್ರಕರಣದಲ್ಲಿ ಬಂಧಿಸಿದ್ದ 7 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಈ ಮೂಲಕ ಹಿಂದೂ ಭಯೋತ್ಪಾದನೆ ಎಂದು ಪಟ್ಟ ಕಟ್ಟಲು ಹೊರಟಿದ್ದ ಹಲವರಿಗೆ ಕೋರ್ಟ್ ತಕ್ಕ ಉತ್ತರ ನೀಡಿತ್ತು. ಇದರ ಬೆನ್ನಲ್ಲೇ ಮಾಲೇಗಾಂವ್ ಪ್ರಕರಣದ ತನಿಖೆ ನಡೆಸುತ್ತಿದ್ದ ಆ್ಯಂಟಿ ಟೆರರಿಸ್ಟ್ ಸ್ಕಾಡ್ (ಎಟಿಸ್) ನಿವೃತ್ತ ಅಧಿಕಾರಿ ಮೆಹಬೂಬ್ ಮುಜಾವರ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್, ಲೆ.ಕರ್ನಲ್ ಪೋರೋಹಿತ್ ಸೇರಿ 7 ಮಂದಿಯನ್ನು ಆರೋಪಿಗಳು ಎಂದು ಬಿಂಬಿಸಿ ಪ್ರಕರಣದಲ್ಲಿ ಸಿಲುಕಿಸಿದ್ದು ಮಾತ್ರವಲ್ಲ, ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅರೆಸ್ಟ್ ಮಾಡಲು ಹಿರಿಯ ಅಧಿಕಾರಿಗಳು ಸೂಚಸಿದ್ದರು ಎಂದು ನಿವೃತ್ತ ಅಧಿಕಾರಿ ಮೆಹಬೂಬ್ ಮುಜಾವರ್ ಹೇಳಿದ್ದಾರೆ.

ಆರ್‌ಎಸ್ಎಸ್ ತಲೆಗೆ ಕಟ್ಟಿ ಸಂಘಟನೆ ಮುಗಿಸಲು ಷಡ್ಯಂತ್ರ

ಮಾಲೇಗಾಂವ್ ಸ್ಫೋಟದ ಪ್ರಕರಣದಲ್ಲಿ ಮೆಹಬೂಬ್ ಮುನಾವರ್ ಮಹಾರಾಷ್ಟ್ರ ಎಟಿಎಸ್ ಅಧಿಕಾರಿಯಾಗಿ ತನಿಖೆ ನಡೆಸಿದ್ದರು. ಈ ವೇಳೆ ಹಿರಿಯ ಅಧಿಕಾರಿ ಪರಮ್ ಬೀರ್ ಸಿಂಗ್ ಸೇರಿದಂತೆ ಕೆಲವರು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅರೆಸ್ಟ್ ಮಾಡಲು ಸೂಚಿಸಿದ್ದರು. ಮಾಲೇಗಾಂವ್ ಸ್ಫೋಟದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರ ಬಂಧಿಸಿ, ಇಡೀ ಪ್ರಕರಣವನ್ನು ಹಿಂದೂ ಹಾಗೂ ಆರ್‌ಎಸ್ಎಸ್ ಸಂಘಟನೆ ಮೇಲೆ ಹೊರಿಸಲು ಷಡ್ಯಂತ್ರ ನಡೆದಿತ್ತು ಎಂದು ಮೆಹಬೂಬ್ ಮುನಾವರ್ ಹೇಳಿದ್ದಾರೆ.

ಮೋಹನ್ ಭಾಗವತ್ ಮೇಲೆ ಸುಳ್ಳು ಕೇಸ್ ದಾಖಲು

ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮೇಲೆ ಮಾಲೇಗಾಂವ್ ಪ್ರಕರಣದಲ್ಲಿ ಸುಳ್ಳು ಕೇಸ್ ದಾಖಲಾಗಿತ್ತು. ಕೇಸ್ ದಾಖಳಿಸಿದ ಬೆನ್ನಲ್ಲೇ ಭಾಗವತ್ ಬಂಧಿಸಲು ಸೂಚನೆಯೂ ಬಂದಿತ್ತು ಎಂದು ನಿವೃತ್ತ ಎಟಿಎಸ್ ಅಧಿಕಾರಿ ಮಹೆಬೂಬ್ ಮುನಾವರ್ ಹೇಳಿದ್ದಾರೆ. ಕೋರ್ಟ್ ತೀರ್ಪು ಬೆನ್ನಲ್ಲೇ ಇದೀಗ ಮಾಲೇಗಾಂವ್ ಸ್ಫೋಟದ ಮತ್ತಷ್ಟು ಷಡ್ಯಂತ್ರಗಳು ಬಯಲಾಗುತ್ತಿದೆ. 2009ರಲ್ಲಿ ಮೋಹನ್ ಭಾಗವತ್ ಆರ್‌ಎಸ್ಎಸ್ ಮುಖ್ಯಸ್ಥರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಅರೆಸ್ಟ್‌ಗೆ ಎಲ್ಲಾ ಸಿದ್ಧತೆಗಳು ನಡೆದಿತ್ತು. ಈ ಪ್ರಕರಣದಲ್ಲಿ ಆರ್‌ಎಸ್ಎಸ್ ಹಾಗೂ ಮೋಹನ್ ಭಾಗವತ್ ಸಿಲುಕಿಸಲು ಪ್ರಯತ್ನಗಳು ನಡೆದಿತ್ತು ಎಂದು ಮೆಹಬೂಬ್ ಮುನಾವರ್ ಹೇಳಿದ್ದಾರೆ. ಹಿಂದೂ ನಾಯಕರು, ಹಿಂದೂಗಳ ಮೇಲೆ ಮಾಲೇಗಾಂವ್ ಸ್ಫೋಟ ಪ್ರಕರಣವನ್ನು ಕಟ್ಟಲು ಎಲ್ಲಾ ಪ್ರಯತ್ನ ನಡೆದಿತ್ತು. ಇದರಂತೆ 7 ಹಿಂದೂ ನಾಯಕರು, ಹಿಂದೂ ಪರ ಒಲವಿದ್ದವರನ್ನು ಬಂಧಿಸಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿತ್ತು. ಆರ್‌ಎಸ್ಎಸ್ ಮುಗಿಸಲು ಮುಖ್ಯಸ್ಥರನ್ನು ಬಂಧಿಸಲು ಸೂಚಿಸಲಾಗಿತ್ತು. ಆದರೆ ಕಾನೂನು ವಿರುದ್ಧ ನಡೆದುಕೊಳ್ಳಲು ನಾನು ಒಪ್ಪಲಿಲ್ಲ. ಹೀಗಾಗಿ ನನ್ನ ವಿರುದ್ದ ಪ್ರಕರಣ ದಾಖಲಿಸಿದ್ದರು. ಬಳಿಕ ಕೋರ್ಟ್ ನನ್ನ ಮೇಲಿನ ಪ್ರಕರಣ ರದ್ದುಗೊಳಿಸಿತ್ತು ಎಂದು ಮುನಾವರ್ ಹೇಳಿದ್ದಾರೆ.

2008ರ ಮಾಲೇಗಾಂವ್ ಸ್ಫೋಟದ 7 ಆರೋಪಿಗಳು ಖುಲಾಸೆ

2008ರಲ್ಲಿ ಮಾಲೇಗಾಂವ್‌ನ ಮಾರುಕಟ್ಟೆಯಲ್ಲಿ ಸ್ಕೂಟರ್ ಒಳಗಿಟ್ಟದ್ದ ಬಾಂಬ್ ಸ್ಫೋಟಗೊಂಡಿತ್ತು. ಮಾಲೇಗಾಂವ್ ಮುಸ್ಲಿಮ್ ಜನಸಂಖ್ಯೆ ಹೆಚ್ಚಿದ್ದ ಪ್ರದೇಶ. ಸೆಪ್ಟೆಂಬರ್ 29, 2008ರಲ್ಲಿ ಈ ಬಾಂಬ್ ಸ್ಫೋಟಗೊಂಡಿತ್ತು. ಬಿಜೆಪಿ ನಾಯಕ ಸಾಧ್ವಿ ಪ್ರಜ್ಞಾ ಸಿಂಗ್, ಲೆ.ಕರ್ನಲ್ ಪುರೋಹಿತ್ ಸೇರಿದಂತೆ 7 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಕೋರ್ಟ್ ಆರೋಪಿಗಳ ಖುಲಾಸೆಗೊಲಿಸಿತ್ತು.

ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಬಿಜೆಪಿ

2008ರಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್‌ಗಾಗಿ ಹಿಂದೂ ಭಯೋತ್ಪಾದನೆ ಎಂದು ಆರಂಭಿಸಿತ್ತು. ಇದಕ್ಕಾಗಿ ಮಾಲೇಗಾಂವ್ ಸ್ಫೋಟ ಪ್ರಕರಣ ಹಿಂದೂಗಳ ತಲೆ ಕಟ್ಟಲಾಯಿತು. ಕಾಂಗ್ರೆಸ್ ಇಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಅನ್ನೋದು ಇದೀಗ ಕೋರ್ಟ್ ತೀರ್ಪಿನಿಂದ ಸಾಬೀತಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಆರೋಪಿಸಿದ್ದಾರೆ. ಇಸ್ಲಾಮಿಕ್ ಭಯೋತ್ಪಾದನೆ ಎದರು ಹಿಂದೂ ಭಯೋತ್ಪಾದನೆ ಹೆಸರು ಕಾಯಿನ್ ಮಾಡಿ ಕಾಂಗ್ರೆಸ್ ನಕಲಿ ಆಟವಾಡಿದೆ ಎಂದು ಫಡ್ನವಿಸ್ ಆರೋಪಿಸಿದ್ದಾರೆ.