Published : Nov 19, 2025, 07:01 AM ISTUpdated : Nov 19, 2025, 10:40 PM IST

Karnataka Latest News Live: ನರೇಂದ್ರ ಮೋದಿ ಕಾಲಿಗೆ ಬಿದ್ದು ನಮಸ್ಕರಿಸಿದ ಐಶ್ವರ್ಯಾ ರೈ, ಪ್ರೀತಿ ಹಾಗೂ ಧರ್ಮದ ಬಗ್ಗೆ ಮಾತು..

ಸಾರಾಂಶ

ಚಿತ್ರದುರ್ಗ: ಅಪ್ರಾಪ್ತ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾಶರಣರು ಎದುರಿಸುತ್ತಿರುವ ಫೋಕ್ಸೋ ಪ್ರಕರಣದ ವಾದ ಎರಡೂ ಕಡೆ ಮುಕ್ತಾಯವಾಗಿದ್ದು, ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ನ.26 ರಂದು ತೀರ್ಪು ನೀಡಲು ದಿನಾಂಕ ಕಾಯ್ದಿರಿಸಿದೆ. ಶ್ರೀಗಳ ಪರ ಖ್ಯಾತ ವಕೀಲ ಸಿ.ವಿ.ನಾಗೇಶ್‌, ಪ್ರಾಸಿಕ್ಯೂಷನ್‌ ಪರ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜಗದೀಶ್‌ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ಸಿ.ಜಿ.ಹಡಪದ ತೀರ್ಪು ಪ್ರಕಟಕ್ಕೆ ನ.26ರ ದಿನಾಂಕವನ್ನು ನಿಗದಿಪಡಿಸಿದ್ದಾರೆ.

aishwarya rai touch pm modi feet

10:40 PM (IST) Nov 19

ನರೇಂದ್ರ ಮೋದಿ ಕಾಲಿಗೆ ಬಿದ್ದು ನಮಸ್ಕರಿಸಿದ ಐಶ್ವರ್ಯಾ ರೈ, ಪ್ರೀತಿ ಹಾಗೂ ಧರ್ಮದ ಬಗ್ಗೆ ಮಾತು..

ಪುಟ್ಟಪರ್ತಿಯಲ್ಲಿ ನಡೆದ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವದಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್ ಭಾಗವಹಿಸಿದ್ದರು. ಪ್ರಧಾನಿ ಮೋದಿಯವರ ಕಾಲಿಗೆ ನಮಸ್ಕರಿಸಿದ ನಂತರ, ಅವರು ಮಾನವೀಯತೆ ಮತ್ತು ಪ್ರೀತಿಯೇ ನಿಜವಾದ ಧರ್ಮ ಎಂದು ಸಾರುವ ಭಾಷಣ ಮಾಡಿದರು.

Read Full Story

10:38 PM (IST) Nov 19

Lakshmi Nivasa- ವಿಶ್ವ ಹಾಕಿದ ಹೊಗೆ - ಉಸಿರುಗಟ್ಟುವ ಪ್ರೀತಿಯ ಬಲೆಗೆ ಮತ್ತೆ ಸಿಕ್ತಾಳಾ ಚಿನ್ನುಮರಿ?

ಚಿನ್ನುಮರಿಯನ್ನು ಪಡೆಯಲು ಪಣತೊಟ್ಟ ಜಯಂತ್, ವೇಷ ಮರೆಸಿಕೊಂಡು ಜಾಹ್ನವಿ ಮತ್ತು ವಿಶ್ವ ಇರುವ ಸಿನಿಮಾ ಹಾಲ್‌ಗೆ ಬರುತ್ತಾನೆ. ಜಯಂತ್‌ನಿಂದ ಜಾಹ್ನವಿಯನ್ನು ತಪ್ಪಿಸಲು ವಿಶ್ವ ಹೊಗೆಯ ಪ್ಲ್ಯಾನ್ ಮಾಡಿದರೂ, ಕೊನೆಗೆ ಜಯಂತ್ ಆಕೆಯನ್ನು ಹಿಡಿದಂತೆ ತೋರಿಸಲಾಗಿದೆ. ಇದು ಕನಸೋ ನನಸೋ ಎಂಬುದು ಮುಂದೆ ತಿಳಿಯಲಿದೆ.

Read Full Story

09:57 PM (IST) Nov 19

ಒಮ್ಮೆ ವಿಷಕಾರಿ ಸಂಬಂಧದಲ್ಲಿ ಸಿಲುಕಿದ್ದೆ.. ಮಾಜಿ ಪ್ರೇಮಿ ಬಗ್ಗೆ ರಶ್ಮಿಕಾ ಮಂದಣ್ಣ ಹೀಗಾ ಹೇಳೋದು!

ತಾನು ಒಮ್ಮೆ ವಿಷಕಾರಿ ಸಂಬಂಧದಲ್ಲಿ ಸಿಲುಕಿದ್ದೆ, ಅಲ್ಲಿ ನನಗೆ ಬೇರೆ ಆಯ್ಕೆ ಇರಲಿಲ್ಲ ಎಂದು ರಶ್ಮಿಕಾ ಮಂದಣ್ಣ ಬಹಿರಂಗಪಡಿಸಿದ್ದಾರೆ. ಆದರೆ ಅದರಿಂದ ಹೊರಬಂದು ಈಗ ಉತ್ತಮ ಪ್ರೀತಿಯ ಸಂಬಂಧದಲ್ಲಿದ್ದಾರೆ. ಅವರ ಈಗಿನ ಸಂಗಾತಿ ತುಂಬಾ ಸಪೋರ್ಟಿವ್ ಆಗಿದ್ದಾರೆ.

Read Full Story

09:54 PM (IST) Nov 19

ಅಂದು ರೌಡಿ ಅಣ್ಣ-ತಂಗಿ; ಇಂದು Amruthadhaare ಮುದ್ದಾದ ಜೋಡಿ! ಗೌತಮ್​-ಭೂಮಿಕಾ ರೋಚಕ ವಿಡಿಯೋ

'ಅಮೃತಧಾರೆ' ಧಾರಾವಾಹಿಯ ಗೌತಮ್ ಮತ್ತು ಭೂಮಿಕಾ ಜೋಡಿ ವೀಕ್ಷಕರ ಮನಗೆದ್ದಿದೆ. ಆದರೆ, ರಾಜೇಶ್ ನಟರಂಗ ಮತ್ತು ಛಾಯಾ ಸಿಂಗ್ ಅವರು 20 ವರ್ಷಗಳ ಹಿಂದೆ 'ರೌಡಿ ಅಳಿಯ' ಚಿತ್ರದಲ್ಲಿ ರೌಡಿ ಅಣ್ಣ-ತಂಗಿಯಾಗಿ ಒಟ್ಟಿಗೆ ನಟಿಸಿದ್ದರು ಎಂಬುದು ಈಗ ವೈರಲ್ ಆಗಿದೆ.  

Read Full Story

09:36 PM (IST) Nov 19

ಸಚಿವ ಸಂಪುಟ ವಿಸ್ತರಣೆ ಕುರಿತು ನನಗೆ ಏನೂ ಗೊತ್ತಿಲ್ಲ - ಸಚಿವ ರಾಮಲಿಂಗಾರೆಡ್ಡಿ

ಸಚಿವ ಸಂಪುಟ ವಿಸ್ತರಣೆ ಕುರಿತು ನನಗೆ ಏನೂ ಗೊತ್ತಿಲ್ಲ. ನಾನು ಸಹ ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ನೋಡಿದ್ದೇನೆ. ನವೆಂಬರ್‌ನಲ್ಲಿ ಕ್ರಾಂತಿಯೂ ಇಲ್ಲ ಏನೂ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Read Full Story

09:26 PM (IST) Nov 19

Amruthadhaareಯಲ್ಲಿ ಆಪರೇಷನ್​ ಅಪ್ಪ-ಅಮ್ಮ! ರೋಚಕ ಸಂಚಿಕೆಯಲ್ಲಿ ಊಹಿಸದ ಮಹಾ ತಿರುವು

ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ತನ್ನ ಅಪ್ಪ ಎಂದು ತಿಳಿದ ನಂತರ ಮಿಂಚು ಮತ್ತು ಆಕಾಶ್ 'ಆಪರೇಷನ್ ಅಪ್ಪ-ಅಮ್ಮ' ಶುರುಮಾಡಿದ್ದಾರೆ. ಇಬ್ಬರೂ ಸೇರಿ ಮಾಡಿದ ಪ್ಲ್ಯಾನ್‌ನಿಂದಾಗಿ ಗೌತಮ್ ಮತ್ತು ಭೂಮಿಕಾ ಮತ್ತೆ ಒಂದಾಗಿದ್ದು, ಇಡೀ ಕುಟುಂಬ ಸಂತಸದಲ್ಲಿದೆ.  

Read Full Story

09:10 PM (IST) Nov 19

ರಾತ್ರಿ ಹೊತ್ತು ತಡವಾಗಿ ಊಟ ಮಾಡಿದ್ರೆ ಏನಾಗುತ್ತೆ ಗೊತ್ತಾ? ಆರೋಗ್ಯ ತಜ್ಞರು ಹೇಳೋದೇನು?

ಆರೋಗ್ಯವಾಗಿರಲು ಆಹಾರ ಸೇವಿಸುವುದು ಎಷ್ಟು ಮುಖ್ಯವೋ, ಸರಿಯಾದ ಸಮಯಕ್ಕೆ ತಿನ್ನುವುದು ಕೂಡ ಅಷ್ಟೇ ಮುಖ್ಯ. ನಮ್ಮಲ್ಲಿ ಹಲವರು ನಾನಾ ಕಾರಣಗಳಿಂದ ರಾತ್ರಿ ತಡವಾಗಿ ಊಟ ಮಾಡುತ್ತಾರೆ. ಆದರೆ ರಾತ್ರಿ ತಡವಾಗಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ? ಅದರಿಂದ ದೇಹದಲ್ಲಿ ಯಾವೆಲ್ಲಾ ಬದಲಾವಣೆಗಳಾಗುತ್ತವೆ ಗೊತ್ತಾ?

Read Full Story

09:04 PM (IST) Nov 19

Karna ಸೀರಿಯಲ್‌ನಲ್ಲಿ ಮುಂದೇನಾಗುತ್ತದೆ ಎಂಬ ಗುಟ್ಟು ರಟ್ಟು ಮಾಡಿ ವೀಕ್ಷಕರಿಗೆ ಶಾಕ್​ ಕೊಟ್ಟ Annayya ಪಾರು!

ಕರ್ಣ ಮತ್ತು ಅಣ್ಣಯ್ಯ ಸೀರಿಯಲ್‌ ಮಹಾಸಂಗಮದಲ್ಲಿ, ವೈದ್ಯೆಯಾದ ಪಾರುಗೆ ಆಕಸ್ಮಿಕವಾಗಿ ನಿತ್ಯಾ ಗರ್ಭಿಣಿ ಎಂಬ ಸತ್ಯ ತಿಳಿದಿದೆ. ಈ ವಿಷಯವನ್ನು ನಿಧಿಗೆ ತಿಳಿಸುವಂತೆ ಕರ್ಣನಿಗೆ ಅವನ ತಾತ ಸಲಹೆ ನೀಡಿದ್ದು, ಈಗ ಕರ್ಣ ಅಥವಾ ಪಾರು ಈ ಸತ್ಯವನ್ನು ನಿಧಿಗೆ ತಿಳಿಸುತ್ತಾರಾ ಎಂಬ ಕುತೂಹಲ ಮೂಡಿದೆ.
Read Full Story

08:54 PM (IST) Nov 19

ಪ್ರತ್ಯೇಕ ಕೇಡರ್‌ ಸೃಷ್ಟಿಸಿ ಹದಿನೈದು ವನ್ಯಜೀವಿ ವೈದ್ಯರ ನೇಮಕ - ಸಚಿವ ಈಶ್ವರ್‌ ಖಂಡ್ರೆ

ಮೃಗಾಲಯ ಮತ್ತು ಆನೆ ಶಿಬಿರಗಳಲ್ಲಿ ವನ್ಯಜೀವಿ ವೈದ್ಯರ ಕೊರತೆ ನೀಗಿಸಲು, ಪ್ರತ್ಯೇಕ ಕೇಡರ್‌ ಸೃಷ್ಟಿಸಿ 15 ವನ್ಯಜೀವಿ ವೈದ್ಯರ ನೇಮಕ ಮಾಡಿಕೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

Read Full Story

08:49 PM (IST) Nov 19

ಕೇಂದ್ರದಿಂದ ಬಂಪರ್ ಸೊಸೈಟಿಗಳ ಪಡಿತರ ಕಮಿಷನ್‌ ಪರಿಷ್ಕರಣೆ - ಗೋಧಿ, ಜೋಳ, ರಾಗಿ ಕಮಿಷನ್‌ ಸಮಾಂತರ

ಕೇಂದ್ರವು ಪಡಿತರ ಧಾನ್ಯಗಳಾದ ರಾಗಿ, ಜೋಳ, ಮತ್ತು ಮೆಕ್ಕೆಜೋಳದ ಕಮಿಷನ್ ಅನ್ನು ಪ್ರತಿ ಕ್ವಿಂಟಲ್‌ಗೆ ₹27ಕ್ಕೆ ಹೆಚ್ಚಿಸಿ, ಸೊಸೈಟಿಗಳ ಬಲವರ್ಧನೆಗೆ ಕ್ರಮ ಕೈಗೊಂಡಿದೆ. ಪ್ರಧಾನಿ ಮೋದಿಯವರ ಈ ನಿರ್ಧಾರವು ರೈತರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ  ಶ್ರೀ ಅನ್ನ ಯೋಜನೆಗೆ ಮತ್ತಷ್ಟು ಉತ್ತೇಜನ ನೀಡಲಿದೆ.

Read Full Story

08:24 PM (IST) Nov 19

ಸುಮಾ ಕನಕಾಲ ನಿವೃತ್ತಿ ಯಾವಾಗ ಗೊತ್ತಾ? ಸ್ಪಷ್ಟನೆ ಜೊತೆ ಕೌಂಟರ್ ಕೊಟ್ಟ ಸ್ಟಾರ್ ಆ್ಯಂಕರ್!

ಸುಮಾರು 30 ವರ್ಷಗಳಿಂದ ತೆಲುಗು ಪ್ರೇಕ್ಷಕರನ್ನು ತನ್ನ ಆ್ಯಂಕರಿಂಗ್‌ನಿಂದ ರಂಜಿಸುತ್ತಿದ್ದಾರೆ ಸುಮಾ ಕನಕಾಲ. ನಿರೂಪಣೆ ಕ್ಷೇತ್ರದಲ್ಲಿ ಇಷ್ಟು ದಿನ ಉಳಿದುಕೊಂಡ ಸ್ಟಾರ್ ಬೇರೊಬ್ಬರಿಲ್ಲ. ಹಾಗಾದರೆ ಸುಮಾ ಕನಕಾಲ ನಿವೃತ್ತಿ ಯಾವಾಗ?

Read Full Story

08:22 PM (IST) Nov 19

ಬಂಧನ ಭೀತಿಯಲ್ಲಿ ಕಾಮಿಡಿ ಕಿಲಾಡಿಗಳು ನಯನಾ, ಆಗಿದ್ದೇನು?

Comedy Kiladigalu Nayana: ಜೀ ಕನ್ನಡದಲ್ಲಿ ಪ್ರಸಾರವಾಗಿದ್ದ ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಪಡೆದಿದ್ದ ನಯನಾ ಬಂಧನ ಭೀತಿ ಎದುರಿಸಿದ್ದಾರೆ. ಅವರ ವಿರುದ್ಧ ಅಟ್ರಾಸಿಟಿ ಕೇಸ್‌ ದಾಖಲಾಗಿದೆ.

 

Read Full Story

07:52 PM (IST) Nov 19

ಕಸದ ಯಂತ್ರ ಬಾಡಿಗೆ ನೆಪದಲ್ಲಿ ಗೋಲ್‌ ಮಾಲ್‌ - ನಿಖಿಲ್‌ ಕುಮಾರಸ್ವಾಮಿ ಆರೋಪ

ಸಂಪುಟ ಸಭೆಯಲ್ಲಿ 46 ಕಸ ಗುಡಿಸುವ ಯಂತ್ರಗಳನ್ನು 7 ವರ್ಷದವರೆಗೆ ಬಾಡಿಗೆ ಆಧಾರದ ಮೇಲೆ ಪಡೆಯಲು ಒಪ್ಪಿಗೆ ನೀಡುವ ಮುಖಾಂತರ ಕಮಿಷನ್‌ ಗೋಲ್‌ ಮಾಲ್‌ಗೆ ಅವಕಾಶ ನೀಡಿದೆ ಎಂದು ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Read Full Story

07:50 PM (IST) Nov 19

ನರಕಾಸುರ ಮೋದಿಯನ್ನು ಕೊಂದರೆ ಮಾತ್ರವೇ ತಮಿಳುನಾಡು ಉದ್ದಾರ ಆಗಲಿದೆ ಎಂದ ಡಿಎಂಕೆ ನಾಯಕ

ಡಿಎಂಕೆ ನಾಯಕ ಜೆ. ಜಯಬಾಲನ್, ಪ್ರಧಾನಿ ನರೇಂದ್ರ ಮೋದಿಯನ್ನು "ಮುಗಿಸಿದರೆ" ಮಾತ್ರ ತಮಿಳುನಾಡು ಉದ್ದಾರವಾಗಲಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ದ್ವೇಷ ಭಾಷಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಾಯಕನ ಬಂಧನಕ್ಕೆ ಒತ್ತಾಯಿಸಿದೆ.
Read Full Story

07:49 PM (IST) Nov 19

ಬೆಳಗಾವಿ ಮೃಗಾಲಯದಲ್ಲಿ ಕೃಷ್ಣಮೃಗಗಳ ಸರಣಿ ಸಾವಿನ ರಹಸ್ಯ ಬಯಲು, ಕೊನೆಗೂ ವರದಿಯಲ್ಲಿ ಸಿಕ್ತು ಉತ್ತರ

ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ 31 ಕೃಷ್ಣ ಮೃಗಗಳ ಸಾವಿಗೆ 'ಹಿಮೋರಿಜಿಕ್ ಸೆಪ್ಟಿಸೀಮಿಯಾ' ಎಂಬ ಬ್ಯಾಕ್ಟೀರಿಯಾ ಸೋಂಕು ಕಾರಣವೆಂದು ಮರಣೋತ್ತರ ಪರೀಕ್ಷಾ ವರದಿ ದೃಢಪಡಿಸಿದೆ. ಗಳಲೆ ರೋಗದಿಂದಾಗಿ ಈ ಸಾವು ಸಂಭವಿಸಿದ್ದು, ಉಳಿದ ಪ್ರಾಣಿಗಳ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ.

Read Full Story

07:27 PM (IST) Nov 19

ಯಾವುದೇ ಸಂದರ್ಭ ಚುನಾವಣೆ ಎದುರಿಸಲು ಬಿಜೆಪಿ ಸಿದ್ಧ - ಬಿ.ವೈ.ವಿಜಯೇಂದ್ರ

ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆ ನಡೆದರೂ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಪಕ್ಷದೊಳಗಿನ ಕೆಲ ಗೊಂದಲಗಳು ತಿಳಿದಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

Read Full Story

06:56 PM (IST) Nov 19

ರೆಡಿಯಾಗಿ.. ಡಿಸೆಂಬರ್ 5ರಿಂದ 'ಲಾಕ್‌ಡೌನ್'.. ಅಧಿಕೃತ ಘೋಷಣೆ ಬಂದಿದೆ - ಏನಿದು ಹೊಸ ಸುದ್ದಿ!

ಲಾಕ್‌ಡೌನ್: ಡಿಸೆಂಬರ್ 5 ರಿಂದ ಲಾಕ್‌ಡೌನ್ ಬರಲಿದೆ ಎಂದು ಇಂದು ಬೆಳಗ್ಗೆ ಪ್ರಕಟಣೆ ಹೊರಬಿದ್ದಿದೆ. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಅಪ್‌ಡೇಟ್ ಅನ್ನು ಈ ಲೇಖನದಲ್ಲಿ ವಿವರವಾಗಿ ನೋಡೋಣ.

Read Full Story

06:54 PM (IST) Nov 19

ಕಳ್ಳರಿಗೆ ಪೊಲೀಸರ ಭಯವಿಲ್ಲ, ಎಟಿಎಂ ದರೋಡೆ ಕೇಸ್‌ಗಳಲ್ಲಿ ಬಿಹಾರವನ್ನು ಮೀರಿಸಿದ ಕರ್ನಾಟಕ!

ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂಪಾಯಿಗಳ ಬೃಹತ್ ದರೋಡೆಯು ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಆತಂಕ ಮೂಡಿಸಿದೆ. ಈ ಘಟನೆಯಲ್ಲದೆ, ಬೀದರ್, ಮಂಗಳೂರು, ಕಲಬುರಗಿ, ಮತ್ತು ವಿಜಯಪುರ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ದರೋಡೆಗಳು ಇಲ್ಲಿವೆ.

Read Full Story

06:51 PM (IST) Nov 19

ಬೆಂಗಳೂರು ಬೆಚ್ಚಿಬೀಳಿಸಿದ 7 ನಿಮಿಷದಲ್ಲಿ 7 ಕೋಟಿ ರಾಬರಿ, ಮನೆಯೊಂದರ ಸಿಸಿಟಿವಿಯಲ್ಲಿ ಮಾತ್ರವೇ ಸೆರೆಯಾಯ್ತ!

ಬೆಂಗಳೂರಿನಲ್ಲಿ ಹಾಡಹಗಲೇ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ನಡೆದಿದೆ. ಜಯನಗರದಿಂದ ಹೊರಟ CMS ವಾಹನವನ್ನು ಡೈರಿ ಸರ್ಕಲ್ ಫ್ಲೈಓವರ್ ಮೇಲೆ ಅಡ್ಡಗಟ್ಟಿ, ದುಷ್ಕರ್ಮಿಗಳು ಹಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನಾಲ್ವರು ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು.

Read Full Story

06:29 PM (IST) Nov 19

ಅಭಿಮಾನಿ ಮೇಲೆ ಬಾಲಯ್ಯ ಗರಂ.. ಅವನು ನನಗೆ ಕಾಣಿಸಬಾರದು ಅಂತ ಬೋಯಪಾಟಿಗೆ ವಾರ್ನಿಂಗ್!

ಬಾಲಕೃಷ್ಣ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ವೈಜಾಗ್ ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬರ ಮೇಲೆ ಗರಂ ಆಗಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗೆ, ನೀನು ಇಂದು ನನಗೆ ಕಾಣಿಸಿಕೊಳ್ಳಬಾರದು ಎಂದು ಗದರಿದ್ದಾರೆ.

Read Full Story

06:02 PM (IST) Nov 19

ಕಳ್ಳರನ್ನು ನಾವು ಹಿಡಿಯುತ್ತೇವೆ, ಈವಾಗಷ್ಟೇ ಪ್ರಕರಣದ ಲೀಡ್‌ ಸಿಕ್ಕಿದೆ - ಗೃಹ ಸಚಿವ ಪರಮೇಶ್ವರ್‌

ಬೆಂಗಳೂರಿನಲ್ಲಿ ಹಾಡಹಗಲೇ ವಾಹನ ತಪಾಸಣೆ ನೆಪದಲ್ಲಿ 7 ಕೋಟಿ ರೂಪಾಯಿಗೂ ಅಧಿಕ ಹಣವನ್ನು ದರೋಡೆ ಮಾಡಲಾಗಿದೆ. ಈ ಗಂಭೀರ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಗೃಹ ಸಚಿವ ಜಿ. ಪರಮೇಶ್ವರ್, ದರೋಡೆಕೋರರ ಬಗ್ಗೆ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Read Full Story

05:59 PM (IST) Nov 19

ಆ ವಿಷಯಕ್ಕೆ ಸಿಲ್ಕ್ ಸ್ಮಿತಾ ಕೆನ್ನೆಗೆ ಬಾರಿಸಿದ ಚಿರಂಜೀವಿ - ನೋವು ತಾಳಲಾರದೆ ನಟಿ ಮಾಡಿದ್ದೇನು?

ಚಿತ್ರರಂಗದಲ್ಲಿ ಹೀರೋಯಿನ್‌ಗಳಿಗಿಂತ ಹೆಚ್ಚು ಹೆಸರು ಮಾಡಿದ ನಟಿ ಸಿಲ್ಕ್ ಸ್ಮಿತಾ. ವಿಶೇಷ ಹಾಡುಗಳಿಂದ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದರು. ಆದರೆ ಮೆಗಾಸ್ಟಾರ್ ಚಿರಂಜೀವಿ ಒಮ್ಮೆ ಸಿಲ್ಕ್ ಸ್ಮಿತಾ ಕೆನ್ನೆಗೆ ಬಾರಿಸಿದ್ದು ನಿಮಗೆ ಗೊತ್ತಾ?

Read Full Story

05:43 PM (IST) Nov 19

ಕೇವಲ 14ನೇ ವಯಸ್ಸಿನಲ್ಲಿ ಕ್ರೀಡಾ ಪಾಡ್‌ಕಾಸ್ಟ್‌ ಹೀರೋ ಆದ ಬೆಂಗಳೂರಿನ ಮನನ್‌ ಪೆರಿವಾಲ್‌

ಬೆಂಗಳೂರಿನ ಮಲ್ಲಯ್ಯ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಓದುತ್ತಿರುವ ಮನನ್‌ ಪೆರಿವಾಲ್‌ ಎಂಬ ಈ ವಿದ್ಯಾರ್ಥಿ ‘ಮೈಕ್‌ ಆ್ಯಂಡ್‌ ಮ್ಯಾಜಿಕ್‌ ವಿತ್ ಮನನ್’ ಎಂಬ ಪಾಡ್‌ಕಾಸ್ಟ್‌ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.

Read Full Story

05:40 PM (IST) Nov 19

ನಾಯಿ ದಾಳಿ ಮಾಡಿದರೆ ಇನ್ನು ಮುಂದೆ ಸಿಗಲಿದೆ ಸರ್ಕಾರದಿಂದಲೇ ಪರಿಹಾರ!

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿ ಪ್ರಕರಣಗಳ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಸಂತ್ರಸ್ತರಿಗೆ ಪರಿಹಾರ ನೀಡಲು ನಿರ್ಧರಿಸಿದೆ. ನಾಯಿ ಕಡಿತದಿಂದ ಗಾಯಗೊಂಡವರಿಗೆ ₹5,000 ಹಾಗೂ ದಾಳಿಯಿಂದ ಮೃತಪಟ್ಟರೆ ಅಥವಾ ರೇಬಿಸ್‌ಗೆ ತುತ್ತಾದರೆ ₹5 ಲಕ್ಷ ಪರಿಹಾರವನ್ನು ಸರ್ಕಾರ ಘೋಷಿಸಿದೆ. 

Read Full Story

05:13 PM (IST) Nov 19

ಬೆಂಗಳೂರು ಬೆಚ್ಚಿಬೀಳಿಸಿದ 7 ಕೋಟಿ ಹಗಲು ದರೋಡೆ, 6 ಶಂಕಿತರ ಫೋಟೋ ಬಿಡುಗಡೆಗೊಳಿಸಿದ ಪೊಲೀಸ್!

ಬೆಂಗಳೂರಿನಲ್ಲಿ ಹಾಡಹಗಲೇ ನಡೆದ 7.11 ಕೋಟಿ ರೂ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಎಂಎಸ್ ಸಿಬ್ಬಂದಿ ಹಾಗೂ ಚಾಲಕನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪಕ್ಕಾ ಪ್ಲಾನ್ ಮಾಡಿ, ನಕಲಿ ನಂಬರ್ ಪ್ಲೇಟ್ ಬಳಸಿ ಕೃತ್ಯ ಎಸಗಲಾಗಿದ್ದು, ಪೊಲೀಸರು ಶಂಕಿತರ ಫೋಟೋ ಬಿಡುಗಡೆ ಮಾಡಿದೆ.

Read Full Story

05:03 PM (IST) Nov 19

ಅಬ್ಬಬ್ಬಾ! 'ವಾರಣಾಸಿ'ಗೆ ಪ್ರಿಯಾಂಕಾ ಚೋಪ್ರಾ ಇಷ್ಟೊಂದು ಚಾರ್ಜ್‌ ಮಾಡಿದ್ರಾ? ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ!

ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ 'ವಾರಣಾಸಿ' ಚಿತ್ರದಲ್ಲಿ ಮಂದಾಕಿನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅವರು ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ನೀವು ಆಶ್ಚರ್ಯಪಡ್ತೀರಾ.

Read Full Story

04:44 PM (IST) Nov 19

ಚೆನ್ನಭೈರಾದೇವಿ ಪಾತ್ರದಲ್ಲಿ ರಮ್ಯಾ - ಹೆಗ್ಗಡೆ ನಿರ್ಮಾಣದ ಚಿತ್ರಕ್ಕೆ ರಾಜೇಂದ್ರಸಿಂಗ್‌ ಬಾಬು ಸೂಚನೆ

ವೀರೇಂದ್ರ ಹೆಗ್ಗಡೆ ನಿರ್ಮಾಣದಲ್ಲಿ ಕಾದಂಬರಿಕಾರ ಗಜಾನನ ಶರ್ಮಾ ಅವರ ಕಾದಂಬರಿ ಆಧರಿತ ‘ಚೆನ್ನಭೈರಾದೇವಿ’ ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವುದಾಗಿ ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಹೇಳಿದ್ದಾರೆ.

Read Full Story

04:24 PM (IST) Nov 19

ಮೊದಲು ನಾವು ನಂಬಬೇಕು, ಬಳಿಕ ಜನರನ್ನೂ ನಂಬಿಸಬೇಕು - ದೀಪಿಕಾ ಪಡುಕೋಣೆ ಹೇಳಿಕೆ ವೈರಲ್

ಕೆಲವೊಬ್ಬರು ವಿಪರೀತ ಹಣ ಸುರಿದು ಸಿನಿಮಾ ಮಾಡುತ್ತಾರೆ. ಸಿನಿಮಾಕ್ಕೆ ಅಷ್ಟೇ ಸಾಕು ಅಂದುಕೊಳ್ಳುತ್ತಾರೆ. ಆದರೆ ಅದು ಸತ್ಯವಲ್ಲ. ಸಿನಿಮಾ ಮೊದಲು ನಾವು ನಂಬುವಂತಿರಬೇಕು. ಇದು ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮನದಾಳದ ಮಾತು.

Read Full Story

03:34 PM (IST) Nov 19

BBK 12 - ಕಾವ್ಯ ಶೈವ ಮನಸ್ಸಿಗೆ ಘಾಸಿ ಮಾಡಿದ ಗಿಲ್ಲಿ ನಟ; ಇದು ಬೇಕು ಅಂತ ಮಾಡ್ತಿರೋ ಕೆಲಸವೇ?

Bigg Boss Kannada Season 12 Updates: ಬಿಗ್‌ ಬಾಸ್‌ ಮನೆಯಲ್ಲಿ ಕಾವ್ಯ ಶೈವ ಹಾಗೂ ಗಿಲ್ಲಿ ನಟ ನಡುವೆ ಆಗಾಗ ಜಗಳ ಆಗುತ್ತಿರುತ್ತದೆ, ಇವರಿಬ್ಬರು ಸ್ನೇಹಿತರು, ಆಗಾಗ ಪರಸ್ಪರ ಕಾಲೆಳೆದುಕೊಂಡು ಮಾತನಾಡುತ್ತಿರುತಾರೆ. ಈಗ ಇವರ ಜಗಳ ಮತ್ತೆ ಶುರುವಾಗಿದೆ.

Read Full Story

03:25 PM (IST) Nov 19

ಹಾಡಹಗಲೇ ಬೆಂಗಳೂರನ್ನು ಬೆಚ್ಚಿಬೀಳಿಸಿದ ಖದೀಮರು, ಚಲಿಸುತ್ತಿದ್ದ ವಾಹನದಿಂದಲೇ ಕೋಟಿ ಕೋಟಿ ದರೋಡೆ!

ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ 7 ಕೋಟಿ ರೂಪಾಯಿ ದರೋಡೆ ನಡೆದಿದೆ. ಸೆಂಟ್ರಲ್ ಗೌರ್ನಮೆಂಟ್ ಟ್ಯಾಕ್ಸ್ ಅಧಿಕಾರಿಗಳೆಂದು ನಂಬಿಸಿ, ಸಿಎಂಎಸ್ ಕಂಪನಿಯ ಎಟಿಎಂ ಕ್ಯಾಶ್ ವ್ಯಾನ್ ಅಡ್ಡಗಟ್ಟಿ ದರೋಡೆಕೋರರು ಹಣದೊಂದಿಗೆ ಪರಾರಿಯಾಗಿದ್ದಾರೆ. ಈ ಘಟನೆಯು ನಗರದಲ್ಲಿ ಭೀತಿ ಸೃಷ್ಟಿಸಿದೆ.

Read Full Story

01:51 PM (IST) Nov 19

ಬೆಂಗಳೂರು - ಬೆಳ್ಳಂಬೆಳಗ್ಗೆ ಮಗಳನ್ನು ದೇಗುಲಕ್ಕೆ ಕರೆದೊಯ್ದು ಕುತ್ತಿಗೆ ಕಡಿದ ತಾಯಿ, ನರಬಲಿ ಶಂಕೆ!

ಬೆಂಗಳೂರಿನ ಸಂಪಿಗೆಹಳ್ಳಿ ಬಳಿ ತಾಯಿಯೊಬ್ಬಳು ತನ್ನ ಮಗಳನ್ನು ದೇವಸ್ಥಾನಕ್ಕೆ ಕರೆದೊಯ್ದು ಮಚ್ಚಿನಿಂದ ಹಲ್ಲೆ ಮಾಡಿದ್ದಾಳೆ. ಅಮಾವಾಸ್ಯೆಯ ದಿನದಂದು ನಡೆದ ಈ ಘಟನೆಯು, ಅನಾರೋಗ್ಯದಿಂದ ಬಳಲುತ್ತಿದ್ದ ಮಗಳನ್ನು ನರಬಲಿ ನೀಡುವ ಯತ್ನವಿರಬಹುದು ಎಂಬ ಬಲವಾದ ಶಂಕೆ ಮೂಡಿಸಿದೆ.
Read Full Story

01:32 PM (IST) Nov 19

ಮೋಸದಿಂದ ಚುನಾವಣೆ ಗೆದ್ದ ಪ್ರಧಾನಿಯನ್ನ ನಾನು ಎಲ್ಲೂ ನೋಡಿಲ್ಲ - ಮೋದಿ ವಿರುದ್ಧ ಸಂತೋಷ್ ಲಾಡ್ ವಾಗ್ದಾಳಿ

ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮೋಸದಿಂದ ಗೆದ್ದಿದೆ ಎಂದು ಸಚಿವ ಸಂತೋಷ ಲಾಡ್ ಆರೋಪಿಸಿದ್ದಾರೆ. ದೇಶದಲ್ಲಿ ಬಾಂಬ್ ಸ್ಫೋಟವಾದರೂ ಪ್ರಧಾನಿ ಮೋದಿ ವಿದೇಶಿ ಪ್ರವಾಸ ಮೊಟಕುಗೊಳಿಸಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಇಂದಿರಾಗಾಂಧಿಯವರನ್ನು ಸ್ಮರಿಸಿದರು. ರಾಜ್ಯ ನಾಯಕತ್ವ ಬದಲಾವಣೆ ಹೈಕಮಾಂಡ್ ನಿರ್ಧಾರ ಎಂದರು.

Read Full Story

01:21 PM (IST) Nov 19

Criminal Movie - ಹಾವೇರಿ-ಹಾನಗಲ್‌ ರಿಯಲ್‌ ಲವ್‌ಸ್ಟೋರಿ ಮೇಲೆ ಕಣ್ಣಿಟ್ಟ ಧ್ರುವ ಸರ್ಜಾ, ರಚಿತಾ ರಾಮ್

ಧ್ರುವ ಸರ್ಜಾ ಹೊಸ ಸಿನಿಮಾದ ಮುಹೂರ್ತ ಶುರುವಾಗಿದೆ. ಬೆಂಗಳೂರಿನ ಬಸವನಗುಡಿಯ ಅನ್ನಪೂರ್ಣ ನವ ಮಂತ್ರಾಲಯ ಮಂದಿರದಲ್ಲಿ ಈ ಸಿನಿಮಾದ ಮುಹೂರ್ತ ನೆರವೇರಿದೆ. ಇದು ಧ್ರುವ ಸರ್ಜಾ ಅವರ ಏಳನೇ ಸಿನಿಮಾ. ಈ ಹಿಂದೆ ಕೂಡ ಧ್ರುವ, ರಚಿತಾ ರಾಮ್ ಸಿನಿಮಾ ಮಾಡಿದ್ರು. ಈಗ ಮತ್ತೆ ಹೀರೋಯಿನ್‌ ಆಗಿದ್ದಾರೆ.

 

Read Full Story

01:14 PM (IST) Nov 19

ಸ್ಕ್ಯಾನಿಂಗ್ ವೇಳೆ ವೈದ್ಯನಿಂದ ಮಹಿಳೆಗೆ ಲೈಂಗಿಕ ಕಿರುಕುಳ, ಇನ್ಪೆಕ್ಟರ್ ಅಮಾನತಿಗೆ ರೊಚ್ಚಿಗೆದ್ದಆನೇಕಲ್ ಜನ!

ಆನೇಕಲ್‌ನ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ರೆಡಿಯಾಲಜಿಸ್ಟ್‌ನಿಂದ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಖಂಡಿಸಿ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಯನ್ನು ರಕ್ಷಿಸಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ.  

Read Full Story

01:08 PM (IST) Nov 19

ಗಿಲ್ಲಿ ನಟನ ಡಬಲ್ ಗೇಮ್ ಮುಖವಾಡ ಕಳಚಿದ ಅಭಿಷೇಕ್? ಯಾರಿಗೂ ಕಾಣದ್ದು ಅಭಿಗೆ ಕಾಣಿಸ್ತಾ?

ಬಿಗ್‌ಬಾಸ್ ಮನೆಯಲ್ಲಿ ನಡೆದ ಟಾಸ್ಕ್‌ನಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಾಯಕರಾಗಿದ್ದರು. ತನ್ನ 'ವಂಶದ ಕುಡಿ' ಎಂದು ಕರೆದಿದ್ದ ರಕ್ಷಿತಾ ಶೆಟ್ಟಿಯನ್ನು ಗಿಲ್ಲಿ ನಟ ತನ್ನ ತಂಡಕ್ಕೆ ಆಯ್ಕೆ ಮಾಡಲಿಲ್ಲ. ಅಂತಿಮವಾಗಿ ರಕ್ಷಿತಾ, ಅಶ್ವಿನಿ ತಂಡದ ಪರ ಆಡಿ ಗೆಲುವಿಗೆ ಕಾರಣರಾದರು.

Read Full Story

01:02 PM (IST) Nov 19

ಕೇರಳ ವಿದ್ಯಾರ್ಥಿಗಳ ಪ್ರವಾಸಿ ಬಸ್ ಅರಕಲಗೂಡು ಬಳಿ ಪಲ್ಟಿ - 15 ವಿದ್ಯಾರ್ಥಿಗಳಿಗೆ ಗಾಯ

Student bus accident in Hassan: ಕೇರಳದಿಂದ ಕರ್ನಾಟಕಕ್ಕೆ ಅಧ್ಯಯನ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಬಸ್ ಹಾಸನದ ಅರಕಲಗೂಡು ಬಳಿ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ 15 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

Read Full Story

12:34 PM (IST) Nov 19

ಎಕ್ಸ್‌ಗರ್ಲ್‌ಫ್ರೆಂಡ್‌ಗೆ ಕಿಸ್ ಮಾಡಲು ಹೋದ ವಿವಾಹಿತ - ಮಾತೇ ಬರದಂತೆ ಮಾಡಿದ ಮಾಜಿ ಗೆಳತಿ

Ex-girlfriend bites tongue: ಉತ್ತರ ಪ್ರದೇಶದ ಕಾನ್ಪುರದಲ್ಲಿ, ವಿವಾಹಿತ ವ್ಯಕ್ತಿಯೊಬ್ಬ ತನ್ನ ಮಾಜಿ ಗೆಳತಿಗೆ ಬಲವಂತವಾಗಿ ಮುತ್ತು ಕೊಡಲು ಯತ್ನಿಸಿದ್ದಾನೆ. ಈ ವೇಳೆ ಆತನ ಲೈಂಗಿಕ ಕಿರುಕುಳದಿಂದ ತನ್ನನ್ನು ರಕ್ಷಿಸಿಕೊಳ್ಳಲು, ಮಹಿಳೆಯು ಆತನ ನಾಲಿಗೆಯನ್ನು ಕಚ್ಚಿ ತುಂಡರಿಸಿದ್ದಾಳೆ. 

Read Full Story

12:31 PM (IST) Nov 19

ಅಥಣಿ - ಕೋರ್ಟ್‌ ಆವರಣದಲ್ಲೇ ಮಹಿಳೆ ಕೊಲೆಗೆ ಯತ್ನ, ಆರೋಪಿ ಬಂಧನ

ಅಥಣಿಯ ನ್ಯಾಯಾಲಯದ ಆವರಣದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬಂದಿದ್ದ ಮಹಿಳೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಲಾಗಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Read Full Story

12:23 PM (IST) Nov 19

Bigg Boss ರಘು ಪತ್ನಿ ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ! ಅವರ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ!

Bigg Boss Kannada Season 12 Raghu: ಬಿಗ್‌ ಬಾಸ್‌ ಮನೆಯಲ್ಲಿ ರಾಘವೇಂದ್ರ ಹೊಂಡದಕೇರಿ ಅಲಿಯಾಸ್‌ ರಘು ಅವರು ಈ ವಾರದ ಕ್ಯಾಪ್ಟನ್‌ ಆಗಿದ್ದಾರೆ. ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟಿರುವ ರಘು ಅವರು ಎರಡನೇ ಬಾರಿಗೆ ಕ್ಯಾಪ್ಟನ್‌ ಆಗಿದ್ದಾರೆ. ಇವರ ಪತ್ನಿ ಗ್ರೀಷ್ಮಾ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ.

Read Full Story

12:22 PM (IST) Nov 19

ಚಿನ್ನಸ್ವಾಮಿ ದುರಂತಕ್ಕೆ ಆರ್‌ಸಿಬಿ ಸೇರಿ ಎರಡು ಸಂಸ್ಥೆಗಳು ನೇರ ಹೊಣೆ - ಸಿಐಡಿ ಚಾರ್ಜ್‌ಶೀಟ್

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ, 2,200 ಪುಟಗಳ ಚಾರ್ಜ್‌ಶೀಟ್ ಸಿದ್ಧಪಡಿಸಿದೆ. ಈ ದುರಂತಕ್ಕೆ ಆರ್‌ಸಿಬಿ, ಕೆಎಸ್‌ಸಿಎ ಮತ್ತು ಡಿಎನ್‌ಎ ಸಂಸ್ಥೆ ನೇರ ಕಾರಣ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

Read Full Story

More Trending News