ಮೊದಲು ನಾವು ನಂಬಬೇಕು, ಬಳಿಕ ಜನರನ್ನೂ ನಂಬಿಸಬೇಕು: ದೀಪಿಕಾ ಪಡುಕೋಣೆ ಹೇಳಿಕೆ ವೈರಲ್
ಕೆಲವೊಬ್ಬರು ವಿಪರೀತ ಹಣ ಸುರಿದು ಸಿನಿಮಾ ಮಾಡುತ್ತಾರೆ. ಸಿನಿಮಾಕ್ಕೆ ಅಷ್ಟೇ ಸಾಕು ಅಂದುಕೊಳ್ಳುತ್ತಾರೆ. ಆದರೆ ಅದು ಸತ್ಯವಲ್ಲ. ಸಿನಿಮಾ ಮೊದಲು ನಾವು ನಂಬುವಂತಿರಬೇಕು. ಇದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮನದಾಳದ ಮಾತು.

ಸತ್ಯಕ್ಕೆ ಎಷ್ಟು ಹತ್ತಿರವಾಗಿದೆ
ನಾನೀಗ ನಟಿಯಾಗಿ ಮಾಗಿದ್ದೇನೆ. ಈ ಹಂತದಲ್ಲಿ ಸಿನಿಮಾ 100 ಕೋಟಿಯದ್ದಾ, 500- 600 ಕೋಟಿ ರು. ಬಜೆಟ್‌ನದ್ದಾ ಅನ್ನೋದು ಮುಖ್ಯವಾಗೋದಿಲ್ಲ. ಬದಲಿಗೆ ಈ ಸಿನಿಮಾ ಸತ್ಯಕ್ಕೆ ಎಷ್ಟು ಹತ್ತಿರವಾಗಿದೆ ಅನ್ನುವುದು ಮುಖ್ಯವಾಗುತ್ತದೆ.
ಪರೋಕ್ಷವಾಗಿ ಟಾಂಗ್
ಫೇಕ್ ಸಿನಿಮಾಗಳು ಎಷ್ಟು ಅದ್ದೂರಿಯಾಗಿದ್ದರೂ ಕುತೂಹಲ ಮೂಡಿಸುವುದಿಲ್ಲ. ಇದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮನದಾಳದ ಮಾತು. ಈ ಮೂಲಕ ದೊಡ್ಡ ಬಜೆಟ್‌ನ ಸಿನಿಮಾಗಳಿಗೆ ದೀಪಿಕಾ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಅದು ಸತ್ಯವಲ್ಲ
‘ಕೆಲವೊಬ್ಬರು ವಿಪರೀತ ಹಣ ಸುರಿದು ಸಿನಿಮಾ ಮಾಡುತ್ತಾರೆ. ಸಿನಿಮಾಕ್ಕೆ ಅಷ್ಟೇ ಸಾಕು ಅಂದುಕೊಳ್ಳುತ್ತಾರೆ. ಆದರೆ ಅದು ಸತ್ಯವಲ್ಲ. ಸಿನಿಮಾ ಮೊದಲು ನಾವು ನಂಬುವಂತಿರಬೇಕು. ನಂತರ ಜನರನ್ನು ನಂಬಿಸುವ ಪ್ರಯತ್ನ ಮಾಡಬೇಕು’ ಎಂದೂ ಹೇಳಿದ್ದಾರೆ.
ಅಲ್ಲು ಅರ್ಜುನ್ ಜೊತೆ AA22xA6
ದೀಪಿಕಾ ಪಡುಕೋಣೆ ಸಿದ್ಧಾರ್ಥ್ ಆನಂದ್ ಅವರ 'ಕಿಂಗ್' ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ, ಇದರಲ್ಲಿ ಶಾರುಖ್ ಖಾನ್, ಸುಹಾನಾ ಖಾನ್ ಮತ್ತು ಅಭಿಷೇಕ್ ಬಚ್ಚನ್ ಸಹ ನಟಿಸಿದ್ದಾರೆ. ಅವರು ಅಲ್ಲು ಅರ್ಜುನ್ ಜೊತೆಗೆ ಅಟ್ಲೀ ಅವರ ಮುಂಬರುವ ಪ್ರಾಜೆಕ್ಟ್ 'AA22xA6' ನಲ್ಲೂ ಕಾಣಿಸಿಕೊಳ್ಳಲಿದ್ದಾರೆ.
ಪ್ರಭಾವಿ ವ್ಯಕ್ತಿ
ಇನ್ನು ದೀಪಿಕಾ ಪಡುಕೋಣೆ, ತೆರೆಯ ಮೇಲೆ ತಮ್ಮ ನಟನೆಯಿಂದ ಮಾತ್ರವಲ್ಲ, ತೆರೆಯ ಹಿಂದೆ ತಮ್ಮ ಮೌಲ್ಯಯುತ ನಿಲುವುಗಳಿಂದಲೂ ಗಮನ ಸೆಳೆಯುತ್ತಾರೆ. ಅವರು ಕೇವಲ ಸ್ಟಾರ್ ಆಗಿ ಉಳಿಯದೆ, ಬದಲಾವಣೆಗೆ ನಾಂದಿ ಹಾಡುವ ಪ್ರಭಾವಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ವಿಷಯ!

