ಬೆಂಗಳೂರಿನ ಸಂಪಿಗೆಹಳ್ಳಿ ಬಳಿ ತಾಯಿಯೊಬ್ಬಳು ತನ್ನ ಮಗಳನ್ನು ದೇವಸ್ಥಾನಕ್ಕೆ ಕರೆದೊಯ್ದು ಮಚ್ಚಿನಿಂದ ಹಲ್ಲೆ ಮಾಡಿದ್ದಾಳೆ. ಅಮಾವಾಸ್ಯೆಯ ದಿನದಂದು ನಡೆದ ಈ ಘಟನೆಯು, ಅನಾರೋಗ್ಯದಿಂದ ಬಳಲುತ್ತಿದ್ದ ಮಗಳನ್ನು ನರಬಲಿ ನೀಡುವ ಯತ್ನವಿರಬಹುದು ಎಂಬ ಬಲವಾದ ಶಂಕೆ ಮೂಡಿಸಿದೆ.

ಬೆಂಗಳೂರು: ಗಂಡನನ್ನ ಬಿಟ್ಟು ತವರು ಮನೆಗೆ ಬಂದಿದಕ್ಕೆ ತಾಯಿಯಿಂದಲೇ ಮಗಳು ಹಲ್ಲೆಗೊಳಗಾದ ಘಟನೆಗೆ ಈಗ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ತಾಯಿ ತನ್ನ ಮಗಳನ್ನು ನರಬಲಿ ಕೊಡಲು ಪ್ಲಾನ್ ಮಾಡಿದ್ದಳು ಎಂಬ ಅನುಮಾನ ಮೂಡಿದೆ. ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಅಗ್ರಹಾರ ಲೇಔಟ್ ಹರಿಹರೇಶ್ವರ ದೇವಸ್ಥಾನದ ಬಳಿ ಘಟನೆ ಈ ಘಟನೆ ನಡೆದಿದ್ದು, ಇವತ್ತು ಬೆಳಗ್ಗೆ ತಾಯಿ ಸರೋಜಮ್ಮ ತನ್ನ ಮಗಳು ರಮ್ಯ(22)ಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಬಂದು ಮಚ್ಚಿನಿಂದ ಮಗಳ ಕುತ್ತಿಗೆಗೆ ಕಡಿದಿದ್ದಾಳೆ.

ದೇವಸ್ಥಾನಕ್ಕೆ ಅಂತಾ ಕರೆತಂದು ಮಗಳ ಕೊಲೆಗೆ ಯತ್ನ ನಡೆಸಿದ್ದು, ತಲೆಬಾಗಿ ನಮಸ್ಕರಿಸುವಾಗ ಮಗಳ ಕುತ್ತಿಯನ್ನು ಕತ್ತರಿಸಿಸಲು ತಾಯಿ ಪ್ರಯತ್ನಿಸಿದ್ದಾಳೆ. ಮಗಳು ರಮ್ಯಾ ಆನೇಕಲ್ ನಲ್ಲಿ ವಾಸವಾಗಿದ್ದಳು. ಇಬ್ಬರು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ರು. ರಮ್ಯಾಗೆ ಕೂಡ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಗಂಡ ಸೋಮಶೇಖರ್ ಜೊತೆಗೆ ರಮ್ಯಾ ತಾಯಿ ಮನೆಗೆ ಬಂದಿದ್ದಳು. ಮೂರು ದಿನಗಳ ಹಿಂದೆ ತವರು ಮನೆಗೆ ಬಂದಿದ್ರು. ಬೆಳಗಿನ ಜಾವ 3.45 ಗಂಟೆಗೆ ಪೂಜೆಗೆ ಅಂತಾ ಮನೆಯಿಂದ ಸ್ವಲ್ಪ ದೂರ ಇರುವ ದೇವಸ್ಥಾನಕ್ಕೆ ರಮ್ಯಾಳನ್ನು ತಾಯಿ ಸುಜಾತ ಕರೆ ತಂದಿದ್ದಳು.

ತಲೆಬಾಗಿ ನಮಸ್ಕರಿಸ್ತಿದ್ದ ವೇಳೆ ಮಚ್ಚಿನಿಂದ ಹಲ್ಲೆ

ದೇವರಿಗೆ ಪೂಜೆ ಮಾಡುವಾಗ ರಮ್ಯಾ ತಲೆಬಾಗಿ ನಮಸ್ಕರಿಸ್ತಿದ್ದ ವೇಳೆ ಮಚ್ಚಿನಿಂದ ಮಗಳ ಕುತ್ತಿಗೆಗೆ ಮಚ್ಚಿನಿಂದ ಕಡಿದಿದ್ದಾಳೆ. ಘಟನೆ ನಂತರ ಸ್ಥಳದಿಂದ ಎಸ್ಕೇಪ್ ಆಗಿದ್ದಾಳೆ. ಇಷ್ಟೆಲ್ಲ ಘಟನೆ ವೇಳೆ ರಮ್ಯಾಳ ಗಂಡ ಸೋಮಶೇಖರ್ ಮನೆಯಲ್ಲಿದ್ದ. ಹೀಗಾಗಿ ಈ ಪ್ರಕರಣವೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಮಗಳ ನರಬಲಿಗೆ ಮುಂದಾದ್ಲಾ ತಾಯಿ!

ಮಗಳನ್ನ ನರಬಲಿ ಕೊಡೊದಕ್ಕೆ ಮುಂದಾಗಿದ್ಲಾ ತಾಯಿ..? ಯಾಕೆಂದರೆ ಇವತ್ತು ಅಮವಾಸೆ ಹಿನ್ನೆಲೆ ದೇವಸ್ಥಾನಕ್ಕೆ ಸುಜಾತಾ ಮಗಳನ್ನು ಕರೆ ತಂದಿದ್ದಳು. ಬೆಳಗಿನ‌ ಜಾವ ಪೂಜೆಗೆ ಎಂದು ಕರೆ ತಂದಿದ್ದು, ದೇವಸ್ಥಾನದ ಅಕ್ಕ ಪಕ್ಕದ ಮನೆಯವ್ರು ಪೂಜೆ ನೋಡಿದಾಗ ಬೈದು ಕಳಿಸಿದ್ದಳು. ಪೂಜೆ ವಸ್ತುಗಳು, ಮಚ್ಚು ಸಮೇತ ದೇವಸ್ಥಾನಕ್ಕೆ ಬಂದಿದ್ರು ಮಗಳು ತಲೆಬಾಗಿ ನಮಸ್ಕರಿಸುವ ವೇಳೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಬಳಿಕ ತಲೆಮರೆಸಿಕೊಂಡಿದ್ದಾಳೆ. ರಕ್ತದ ಮಡುವಿನಲ್ಲಿದ್ದ ರಮ್ಯಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಘಟನೆ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಮತ್ತೊಂದು ತಂಡ ಎಸ್ಕೇಪ್ ಆಗಿರುವ ಸುಜಾತಗಾಗಿ ಹುಡುಕಾಟ ನಡೆಸುತ್ತಿದೆ.

ಸಮ್ಮತಿಯಿಂದಲೇ ಬಲಿಯಾಗಲು ಮುಂದಾಗಿದ್ರಾ ತಾಯಿ ಮಗಳು?

ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಮತ್ತೊಂದು ಸ್ಫೋಟಕ ವಿಚಾರ ಪತ್ತೆಯಾಗಿದೆ. ಕಳೆದ ಒಂದು ತಿಂಗಳಿನಿಂದ ದೇವಸ್ಥಾನಕ್ಕೆ ಬಂದು ಬೆಳಗಿನಜಾವ ನಾಲ್ಕುಗಂಟೆಗೆ ಸುಜಾತ ಪೂಜೆ ಶುರು ಮಾಡುತ್ತಿದ್ದಳು. ಕಳೆದ ಎರಡು ಮೂರು ದಿನಗಳ ಹಿಂದಷ್ಟೇ ಮಗಳು ರಮ್ಯಾಳನ್ನ ಮನೆಗೆ ಕರೆಸಿಕೊಂಡಿದ್ದಳು. ಇಬ್ಬರೂ ಕೂಡ ಮೂರ್ನಾಲ್ಕು ದಿನಗಳಿಂದ ಪೂಜೆಗೆ ಬರ್ತಿದ್ರು. ಅದ್ರಂತೆ ಇಂದು ಬೆಳಗಿನ ಜಾವ ಕೂಡ ಇಬ್ಬರೂ ಪೂಜೆಗೆ ಬಂದಿದ್ರು. ಸಿಸಿಟಿವಿಯಲ್ಲಿ ಮಗಳೇ ಮಚ್ಚುಗಳನ್ನ ಹಿಡಿದುಕೊಂಡು ಬಂದಿದ್ದು ಪತ್ತೆಯಾಗಿದೆ. ಈ ವೇಳೆ ಇಬ್ಬರೂ ಕೂಡ ಒಬ್ಬರಿಗೊಬ್ಬರು ಹಲ್ಲೆ ಮಾಡಿಕೊಂಡಿರುವ ಶಂಕೆ ಇದೆ. ನಮಸ್ಕರಿಸುವ ವೇಳೆ ರಮ್ಯಾ ಕುತ್ತಿಗೆಗೆ ಮಚ್ಚು ಬೀಸಿರುವ ಸುಜಾತ, ನಂತರ ರಮ್ಯಾ ಕೂಡ ಸುಜಾತ ಮೇಲೆ ಹಲ್ಲೆ ಮಾಡಿರುವ ಮಾಹಿತಿ ಇದೆ. ಹಲ್ಲೆ ಪರಿಣಾಮ ಸುಜಾತ ಹಣೆಗೆ ಗಾಯವಾಗಿದೆ. ಸುಜಾತ‌‌ ಗಾಯವಾಗಿ ರಕ್ತ ಸುರಿಸಿಕೊಂಡೇ ದೇವಸ್ಥಾನದಿಂದ ಕಾಲ್ಕಿತ್ತಿದ್ದಳು. ಸುಸ್ತಾಗಿ ನೇರವಾಗಿ ಮನೆಗೆ ಹೋಗಿದ್ದ ಸುಜಾತ. ಈ ಬಗ್ಗೆ ಮಾಹಿತಿ ಪಡೆದು ಸುಜಾತಳನ್ನ ವಶಪಡೆದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸ್ರಿಗೆ ಸಾಕಷ್ಟು ಅನುಮಾನ‌‌ ಮೂಡಿದೆ. ಇಬ್ಬರೂ ಒಬ್ಬರಿಗೊಬ್ಬರು ಬಲಿ ಕೊಟ್ಟುಕೊಳ್ಳಲು ಮುಂದಾಗಿದ್ರಾ ಅನ್ನೋ ಅನುಮಾನ ಕೂಡ ಇದೆ. ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಸಂಪಿಗೇಹಳ್ಳಿ ಪೊಲೀಸರು.