ಬೆಂಗಳೂರಿನಲ್ಲಿ ಹಾಡಹಗಲೇ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ನಡೆದಿದೆ. ಜಯನಗರದಿಂದ ಹೊರಟ CMS ವಾಹನವನ್ನು ಡೈರಿ ಸರ್ಕಲ್ ಫ್ಲೈಓವರ್ ಮೇಲೆ ಅಡ್ಡಗಟ್ಟಿ, ದುಷ್ಕರ್ಮಿಗಳು ಹಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನಾಲ್ವರು ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು.

ಬೆಂಗಳೂರು: ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿದ 7 ಕೋಟಿ 11 ಲಕ್ಷ ದರೋಡೆ ಬಹಳ ಪ್ಲಾನ್ ಮಾಡಿ ಮಾಡಿರುವುದು ಸ್ಪಷ್ಟವಾಗುತ್ತಿದೆ. ಎಲ್ಲೂ ಸಿಸಿಸಿಟಿಯಲ್ಲಿ ಸೆರೆಯಾಗದಂತೆ ಸ್ಪಷ್ಟವಾಗಿ ಸ್ಥಳಗಳನ್ನು ನೋಡಿ ಜಯನಗರದಿಂದ ಕಾರಿನಲ್ಲಿ ಹಣ ತುಂಬಿದ್ದ CMS ವಾಹನವನ್ನು ಫಾಲೋ ಮಾಡಿಕೊಂಡು ಹೋಗಿ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ಹಣ ದರೋಡೆ ಮಾಡಿ ಮತ್ತೊಂದು ವಾಹನಕ್ಕೆ ಶಿಪ್ಟ್ ಮಾಡಲಾಗಿದೆ. ಇಬ್ಬಿಬ್ಬರು ಗನ್ ಮ್ಯಾನ್ ಗಳು ಇದ್ದರು. ಎರಡು ಗನ್‌ಗಳನ್ನು ಚಾಲಕನನ್ನು , ಗನ್ ಮ್ಯಾನ್‌ಳನ್ನು ಸೇರಿ 4 ಮಂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

CMS ವಾಹನದ ಅಧಿಕಾರಿ ಹೇಳಿಕೆ

CMS ಸೀನಿಯರ್ ಸೆಕ್ಯುರಿಟಿ ಕನ್ಸಲ್ಟೆಂಟ್ ಹಾಗೂ ಅಡ್ವೈಸರ್ ನಟರಾಜ್ ಹೇಳಿಕೆಯಂತೆ, 12:21 ಕ್ಕೆ ಜೆಪಿ ನಗರದ HDFC ಬ್ಯಾಂಕ್ ನಿಂದ ಹಣ ತಗೊಂಡಿದ್ದಾರೆ. ಸುಮಾರು 7 ಕೋಟಿ 11 ಲಕ್ಷ ಹಣ ತಗೊಂಡಿದ್ದಾರೆ. ಗೋವಿಂದರಾಜಪುರಂ ಬ್ರಾಂಚ್ ಗೆ ಹಣ ಹೋಗ್ತಾ ಇತ್ತು. ಇಬ್ಬರು ಗನ್ ಮ್ಯಾನ್, ಒರ್ವ ಡ್ರೈವರ್ ಹಾಗೂ ಒರ್ವ ಹ್ಯಾಂಡ್ಲರ್ ಇದ್ದರು. 1 ಗಂಟೆ ವೇಳೆಗೆ ಬ್ರಾಂಚ್ ಮ್ಯಾನೇಜರ್ ಗೆ ಕರೆ ಮಾಡಿದ್ದಾರೆ. ಬಳಿಕ ಡಿಜಿ ಕಂಟ್ರೋಲ್ ರೂಂಗೆ, ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಹುಡುಕಾಟ ಮಾಡಿದ್ದಾರೆ. ಯಾಕೆ ತಡ ಆಯ್ತು ಅಂದ್ರೆ ರಾಬರ್ಸ್ ಮೊಬೈಲ್‌ ಕಸಿದುಕೊಂಡಿದ್ರು. ಹಣ ರಾಬರಿ ಮಾಡೋವರೆಗೂ ಮೊಬೈಲ್ ಕೊಟ್ಟಿಲ್ಲ. ಹೀಗಾಗಿ ಅವರು ಬ್ರಾಂಚ್ ಮ್ಯಾನೇಜರ್ ಗೂ ಮಾಹಿತಿ ನೀಡಲು‌ ಆಗಿಲ್ಲ. ನಮಗೂ ಕೆಲ ಅನುಮಾನಗಳು ಇದಾವೆ. ಅವರೆಲ್ಲ 7-8 ವರ್ಷಗಳಿಂದ ಕೆಲಸ ಮಾಡುತ್ತಿರುವವರು. ಪೊಲೀಸರು ಈಗ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡ್ತಾ ಇದ್ದಾರೆ ಎಂದು ಮಾಹಿತಿ ನೀಡಿದರು.

ಕೆಲವೇ ನಿಮಿಷಗಳಲ್ಲಿ ರಾಬರಿ:

7 ನಿಮಿಷದಲ್ಲಿ 7 ಕೋಟಿ ರಾಬರಿ ನಡೆದಿರುವುದು ಇಡೀ ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿದೆ. ಮನೆಯೊಂದರ ಸಿಸಿಟಿವಿಯಲ್ಲಿ ಎಟಿಎಂ ವಾಹನದ ದೃಶ್ಯ ಸೆರೆಯಾಗಿದೆ. 12.30.01 ನಿಮಿಷಕ್ಕೆ ಅಶೋಕ್ ಪಿಲ್ಲರ್ ಪಾಸಾದ ಸಿಎಂಸಿ ಎಟಿಎಂ ವಾಹನ ಅದರ ಬೆನ್ನಲ್ಲೇ ಓವರ್ ಟೇಕ್ ಮಾಡಿ ಬಂದ ಇನೋವಾ ಕಾರ್. ಮುಂದೆ ಬಂದು ಇನೋವಾ ಕಾರ್ ಎಟಿಎಂ ವಾಹನವನ್ನು ಅಡ್ಡ ಹಾಕಿದೆ. ಇನೋವಾದಿಂದ ಇಳಿದ ರಾಬರ್ಸ್ ಎಟಿಎಂ ವಾಹನದ ಸಿಬ್ಬಂದಿಗೆ ಬೆದರಿಸಿದ್ದಾರೆ. ಬಳಿಕ ಎಟಿಎಂ ವಾಹನ ಸಿಬ್ಬಂದಿ ಇನೋವಾದಲ್ಲಿ ಕುರಿಸಿಕೊಂಡು ಪರಾರಿಯಾಗಿದ್ದಾರೆ. ಸಿಸಿಟಿವಿ ಇಲ್ಲದ ಕಡೆಯೇ ಕೃತ್ಯ ಎಸಗಿರೋ ರಾಬರ್ಸ್ . ಬಳಿಕ ಡೈರಿ ಸರ್ಕಲ್ ಬಳಿ ಮತ್ತೊಂದು ವಾಹನಕ್ಕೆ ಹಣ ರವಾನೆ ಮಾಡಿದ್ದಾರೆ.

ಕರ್ನಾಟಕದ ಗಡಿಯಲ್ಲಿ ಹೈ ಅಲರ್ಟ್

ಇನ್ನು ಹಾಡಹಗಲೇ 7 ಕೋಟಿ ರಾಬರಿ ಮಾಡಿದ ಆರೋಪಿಗಳು ಸಿಟಿಯಿಂದ ಬೇರೆಲ್ಲೂ ಹೋಗದಂತೆ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಹೀಗಾಗಿ ಅತ್ತಿಬೆಲೆ ಗಡಿಯಲ್ಲಿ ಸೆಕ್ಯೂರಿಟಿ ಟೈಟ್ ಮಾಡಿದ್ದಾರೆ. ಅತ್ತಿಬೆಲೆ ಟೋಲ್ ಅಥವಾ ಹೊಸಕೋಟೆ ಟೋಲ್ ನಿಂದ ರಾಜ್ಯದಿಂದ ಹೊರಹೋಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹೈ ಅಲರ್ಟ್ ಆಗಿದ್ದಾರೆ. ಏಕೆಂದರೆ ಕೆ ಆರ್ ಪುರದ ಕಡೆಯಿಂದ ಹೊಸಕೋಟೆ ಕಡೆಗೆ ಕಾರು ಹೋಗುತ್ತಿದ್ದ ಬಗ್ಗೆ ಮಾಹಿತಿ ಇದ್ದು, ಅಲ್ಲಿಂದ ಅತ್ತಿಬೆಲೆ ಮೂಲಕ ತಮಿಳುನಾಡಿಗೆ ಹೋಗುವ ಸಾಧ್ಯತೆ ಇದೆ. ಇದರಿಂದಾಗಿ ಟೋಲ್ ಹಾಗು ಚೆಕ್ ಪೋಸ್ಟ್ ಗಳಲ್ಲಿ ಫುಲ್ ಅಲರ್ಟ್ ಆಗಿರುವ ಪೋಲೀಸರು ಇನೋವಾ ಕಾರ್ ರನ್ನು ಟ್ರೇಸ್ ಮಾಡುತ್ತಿದ್ದಾರೆ.