Amruthadhaareಯಲ್ಲಿ ಆಪರೇಷನ್ ಅಪ್ಪ-ಅಮ್ಮ! ರೋಚಕ ಸಂಚಿಕೆಯಲ್ಲಿ ಊಹಿಸದ ಮಹಾ ತಿರುವು
ಅಮೃತಧಾರೆ ಧಾರಾವಾಹಿಯಲ್ಲಿ, ಗೌತಮ್ ತನ್ನ ಅಪ್ಪ ಎಂದು ತಿಳಿದ ನಂತರ ಮಿಂಚು ಮತ್ತು ಆಕಾಶ್ 'ಆಪರೇಷನ್ ಅಪ್ಪ-ಅಮ್ಮ' ಶುರುಮಾಡಿದ್ದಾರೆ. ಇಬ್ಬರೂ ಸೇರಿ ಮಾಡಿದ ಪ್ಲ್ಯಾನ್‌ನಿಂದಾಗಿ ಗೌತಮ್ ಮತ್ತು ಭೂಮಿಕಾ ಮತ್ತೆ ಒಂದಾಗಿದ್ದು, ಇಡೀ ಕುಟುಂಬ ಸಂತಸದಲ್ಲಿದೆ.

ಈಡೇರಿತು ಆಸೆ
ಅಮೃತಧಾರೆಯಲ್ಲಿ (Amruthadhaare) ಈಗ ಭಾರಿ ಟ್ವಿಸ್ಟ್ ಬಂದಿದೆ. ವೀಕ್ಷಕರ ಆಸೆ ಈಡೇರಿದೆ. ಗೌತಮ್ ಮತ್ತು ಭೂಮಿಕಾ ಒಂದಾಗಿದ್ದಾರೆ. ಕೊನೆಗೂ ಭೂಮಿಕಾಗೆ ಗೌತಮ್ನ ಬಿಟ್ಟು ಇರಲು ಆಗುವುದಿಲ್ಲ ಎನ್ನುವ ಸತ್ಯ ಗೊತ್ತಾಗಿದೆ.
ಅಪ್ಪನ ಪ್ರೀತಿ
ಅದಕ್ಕಿಂತಲೂ ಮುಖ್ಯವಾಗಿ, ತನ್ನ ಅಪ್ಪ ಆಕಾಶ್ನನ್ನು ಹೆಚ್ಚು ಪ್ರೀತಿ ಮಾಡ್ತಾನೆ ಎಂದು ಮಿಂಚು ಕೋಪ ಮಾಡಿಕೊಂಡಿದ್ದಳು. ಗೌತಮ್ ಮತ್ತು ಆಕಾಶ್ ಫೋಟೋ ನೋಡಿ ಆಕೆಗೆ ಹೊಟ್ಟೆಕಿಚ್ಚು ಆಗಿ, ಆಕಾಶ್ನನ್ನು ದ್ವೇಷಿಸುತ್ತಿದ್ದಳು.
ಮಿಂಚುಗೆ ಸತ್ಯ
ಇದೀಗ, ಆಕಾಶ್ ಎಲ್ಲಾ ಸತ್ಯವನ್ನು ಮಿಂಚುಗೆ ಹೇಳಿದ್ದಾನೆ. ಗೌತಮ್ನೇ ತನ್ನ ಅಪ್ಪ ಎನ್ನುವ ಸತ್ಯ ತನಗೆ ಹೇಗೆ ತಿಳಿಯಿರು ಎನ್ನುವ ಬಗ್ಗೆ ಮಿಂಚುಗೆ ಹೇಳಿದಾಗ, ಇಬ್ಬರೂ ಸೇರಿ ಗೌತಮ್ ಮತ್ತು ಭೂಮಿಕಾನನ್ನು ಒಂದು ಮಾಡಲು ಪ್ಲ್ಯಾನ್ ರೂಪಿಸಿದ್ದಾರೆ.
ಭರ್ಜರಿ ಪ್ಲ್ಯಾನ್
ಅದೇ ರೀತಿ, ಆಕಾಶ್ ಮತ್ತು ಮಿಂಚು ಆಪರೇಷನ್ ಅಪ್ಪ-ಅಮ್ಮ ಶುರುವಿಟ್ಟುಕೊಂಡಿದ್ದಾರೆ. ಹೇಗಾದರೂ ಮಾಡಿ ಇಬ್ಬರನ್ನು ಜೊತೆಗೂಡಿಸಲು ಭರ್ಜರಿ ಪ್ಲ್ಯಾನ್ ಹಾಗಿದ್ದಾರೆ.
ಒಟ್ಟಿಗೇ ಊಟ
ಅದೇ ರೀತಿ, ಎಲ್ಲರೂ ಒಟ್ಟಿಗೇ ಸೇರಿ ಊಟ ಮಾಡೋಣ ಎಂದು ಗೌತಮ್ನನ್ನು ಕರೆದಿದ್ದಾನೆ ಆಕಾಶ್. ಆಕಾಶ್ನಲ್ಲಿ ಆಗಿರೋ ಬದಲಾವಣೆ ನೋಡಿ ಗೌತಮ್ಗೆ ಆಶ್ಚರ್ಯ ಆಗಿದೆ. ಆದರೆ ಮಿಂಚು ಕೂಡ ಈ ಬಗ್ಗೆ ಬಾಯಿ ಬಿಟ್ಟಿಲ್ಲ.
ಕೈತುತ್ತು
ಒಟ್ಟಿನಲ್ಲಿ ಊಟದ ಡಬ್ಬದಲ್ಲಿರೋ ಚಮಚವನ್ನು ಕೆಳಕ್ಕೆ ಬೀಳಿಸಿ ಗೌತಮ್ನ ಕೈತುತ್ತಿನಿಂದಲೇ ಇಬ್ಬರೂ ಊಟ ಮಾಡಿಸಿಕೊಂಡಿದ್ದಾರೆ. ಇದನ್ನು ನೋಡಿದ ಭೂಮಿಕಾಗೆ ಆನಂದ ತಡೆಯಲು ಆಗಲಿಲ್ಲ.
ಆಪರೇಷನ್ ಸಕ್ಸಸ್
ಕೊನೆಗೆ ಅವಳೂ ಅಲ್ಲಿಗೆ ಬಂದಿದ್ದಾಳೆ. ಅವಳು ಮಿಂಚುಗೆ ಊಟ ಮಾಡಿಸಿದ್ರೆ, ಆಕಾಶ್ಗೆ ಗೌತಮ್ ಊಟ ಮಾಡಿಸಿದ್ದಾನೆ. ಅಲ್ಲಿಗೆ ಆಪರೇಷನ್ ಅಪ್ಪ-ಅಮ್ಮ ಬಹುತೇಕ ಯಶಸ್ವಿಯಾಗಿದೆ. ಹಾಗಿದ್ದರೆ ಶೀಘ್ರದಲ್ಲಿ ಸೀರಿಯಲ್ ಮುಗಿಯತ್ತಾ ಎನ್ನುವ ಸಂದೇಹವೂ ವೀಕ್ಷಕರನ್ನು ಕಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

