Published : Sep 15, 2026, 07:01 AM ISTUpdated : Sep 15, 2026, 11:10 PM IST

Karnataka News Live: ಸಿದ್ದರಾಮಯ್ಯರ ನೂತನ ಮನೆ ಗೃಹಪ್ರವೇಶ ಮಾಡಿಸಿದ್ದು ಪ್ರಸಿದ್ಧ ವಿಧ್ವಾಂಸರು; ಇಲ್ಲಿದೆ Exclusive Photos

ಸಾರಾಂಶ

ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ಆಡಳಿತ ಸರ್ಕಾರಕ್ಕೆ 100 ದಿನದ ಸಾಧನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಸಂಬಂಧ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದ ಶಾಸಕರನ್ನೂ ಕರೆದಿದ್ದೇವೆ. ನಮ್ಮ ಪಕ್ಷದ ಅಧ್ಯಕ್ಷರಿಗೂ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿದೆ. ಪ್ರೋಟೋಕಾಲ್ ನಿಂದಾಗಿ ವೇದಿಕೆ ಮೇಲೆ ಕರೆದಿಲ್ಲ. ಆಹ್ವಾನ ನೀಡಿಲ್ಲ ಅಂತ ಯಾರು ಹೇಳಿದ್ದು ಎಂದು ಪ್ರಶ್ನೆ ಮಾಡಿದರು. ಪಕ್ಷದಲ್ಲಿ ಜೊತೆಗೆ ನಾವು ಕೆಲಸ ಮಾಡಿಕೊಂಡು ಹೋಗ್ತಿದ್ದೇವೆ. ಇದರಲ್ಲಿ ನೀವು ರಾಜಕೀಯ ಮಾಡ್ತಿದ್ದೀರಿ ಎಂದು ಸಿಎಂ ಹೇಳಿದರು.

ಶಿಷ್ಟಾಚಾರಕ್ಕಾದರೂ ಒಂದು ಸಣ್ಣ ಫೋಟೋ ಕೂಡ ಹಾಕಿಲ್ಲ. ವಿಧಾನಪರಿಷತ್ ಸದಸ್ಯನಾಗಿದ್ದೇನೆ, ಆದರೂ ಆಹ್ವಾನ ಕೊಟ್ಟಿಲ್ಲ ಎಂದು ಎಐಸಿಸಿ ನಾಯಕರ ಬಳಿ ಬಿಕೆ ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

11:10 PM (IST) Sep 15

ಸಿದ್ದರಾಮಯ್ಯರ ನೂತನ ಮನೆ ಗೃಹಪ್ರವೇಶ ಮಾಡಿಸಿದ್ದು ಪ್ರಸಿದ್ಧ ವಿಧ್ವಾಂಸರು; ಇಲ್ಲಿದೆ Exclusive Photos

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ನೂನತ ಮನೆ ಗೃಹಪ್ರವೇಶ ವಿಚಾರ ಭಾರೀ ಸುದ್ದಿ ಆಗ್ತಿದೆ. ಗಣೇಶ ಹಬ್ಬದ ದಿನ ಮಾಜಿ ಸಿಎಂ ತಮ್ಮ ಕನಸಿನ ಮನೆ ಪ್ರವೇಶ ಮಾಡಿದ್ದಾರೆ. ಹೊಸ ಅಪ್‌ಡೇಟ್ಸ್ ಏನಂದರೆ ಗೃಹಪ್ರವೇಶದ ಪೂಜಾ ಕೈಂಕರ್ಯ ನಡೆಸಿದ್ದು ಪ್ರಸಿದ್ಧ ವಿಧ್ವಾಂಸರು! ಕಾರ್ಯಕ್ರಮದ Exclusive Photos ಇಲ್ಲಿದೆ.

Read Full Story

10:31 PM (IST) Sep 15

UPI - ವ್ಯಾಪಾರಿಗಳ ಗಮನಕ್ಕೆ; ಯುಪಿಐ ಪಾವತಿ ಮೇಲೆ ಎಂ‌ಡಿ‌ಆರ್ ಕಡಿತವಾಗದಂತೆ ತಡೆಯಲು ಈ 5 ಟಿಪ್ಸ್ ಬಳಸಿ!

₹2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲಿನ ಎಂ‌ಡಿಆರ್ ಶುಲ್ಕವು ವ್ಯಾಪಾರಿಗಳಿಗೆ ಚಿಂತೆಯಾಗಿದೆ. ವೈಯಕ್ತಿಕ ಕ್ಯೂಆರ್, ಯುಪಿಐ ಲೈಟ್, ಮತ್ತು ಬಿಲ್ ವಿಭಜನೆಯಂತಹ ತಂತ್ರಗಳ ಮೂಲಕ ವೆಚ್ಚವನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಈ ಸ್ಟೋರಿ ವಿವರಿಸುತ್ತದೆ.

Read Full Story

10:19 PM (IST) Sep 15

Vakra Maha Yoga - ಶುಕ್ರ-ಬುಧ ಗ್ರಹ ಮ್ಯಾಜಿಕ್, ಈ 4 ರಾಶಿಗಳಿಗೆ ನಿರೀಕ್ಷೆಯೇ ಮಾಡಿರದ ಯಶಸ್ಸು

Vakra Maha Yoga: ರಾಶಿ ಭವಿಷ್ಯದ ಮೂಲಕ ನೀವು ಬದುಕಿನ ಪ್ರಮುಖ ನಿರ್ಧಾರಗಳನ್ನ ತೆಗೆದುಕೊಳ್ಳುವವರಾಗಿದ್ದರೆ ಶೀಘ್ರದಲ್ಲೇ ಗುಡ್‌ನ್ಯೂಸ್ ಪಡೀತಿರಿ. ಅಕ್ಟೋಬರ್ 2026 ನಲ್ಲಿ ಶುಕ್ರ-ಬುಧ ಗ್ರಹಗಳು ತುಲಾ ರಾಶಿಯಲ್ಲಿ ವಕ್ರ ಸ್ಥಿತಿ ತಲುಪಲಿವೆ. ಹೀಗಾಗಿ ಈ ನಾಲ್ಕು ರಾಶಿಗಳಿಗೆ ಶ್ರೇಯಸು ಸಿಗಲಿದೆ.

Read Full Story

10:10 PM (IST) Sep 15

ವೈಟ್‌ಫೀಲ್ಡ್‌ನಲ್ಲಿ ತಲೆಎತ್ತಲಿದೆ ಮುಂಬೈನ ಜಿಯೋ ವರ್ಲ್ಡ್‌ಗಿಂತ ಬೃಹತ್ ಕನ್ವೆನ್ಶನ್‌ ಸೆಂಟರ್‌ - 48.35 ಎಕರೆ ಕೆಟಿಪಿಒ ಜಾಗ ಬಳಕೆ

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಕೆಟಿಪಿಒದ 48.35 ಎಕರೆ ಜಾಗವನ್ನು ಜಾಗತಿಕ ಮಟ್ಟದ ಸಮಾವೇಶ ಕೇಂದ್ರವನ್ನಾಗಿ ಪರಿವರ್ತಿಸಲು ಕರ್ನಾಟಕ ಸರ್ಕಾರ ಬೃಹತ್ ಯೋಜನೆ ರೂಪಿಸಿದೆ. ಈ ಯೋಜನೆಯು ಆಧುನಿಕ ಪ್ರದರ್ಶನ ಹಾಲ್‌ಗಳು, ಸಮಾವೇಶ ಸೌಲಭ್ಯಗಳನ್ನು ಒಳಗೊಂಡಿರಲಿದೆ.

Read Full Story

09:59 PM (IST) Sep 15

UPI - ಯಾರಿಗೆ ಯುಪಿಐ ಫ್ರೀ, ಯಾರಿಗೆ ಶುಲ್ಕದ ಹೊರೆ?; ಗೊಂದಲಕ್ಕೆ ಇಲ್ಲಿದೆ ಪಕ್ಕಾ ಉತ್ತರ!

ಎನ್‌ಪಿಸಿಐನ ಹೊಸ ನಿಯಮದಂತೆ, ಯುಪಿಐ ಪಾವತಿ ಸಾಮಾನ್ಯ ಗ್ರಾಹಕರಿಗೆ ಸಂಪೂರ್ಣ ಉಚಿತವಾಗಿದೆ. ₹2,000 ಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಎಂಡಿಆರ್ ಶುಲ್ಕ ಅನ್ವಯವಾಗಲಿದ್ದು, ಸಣ್ಣ ವ್ಯಾಪಾರಿಗಳು ಮತ್ತು ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
Read Full Story

09:48 PM (IST) Sep 15

ಪಣತ್ತೂರು ಸಿಡಿಪಿ ರಸ್ತೆಗೆ ಸಿಕ್ತು ಅನುಮತಿ - ಎರಡು ಭಾಗವಾಗಲಿದೆ 40 ವರ್ಷಗಳ ಹಳೆಯ 150 ಎಕರೆ ದಟ್ಟ ಅರಣ್ಯ!

ಪಣತ್ತೂರಿನಲ್ಲಿ 150 ಅಡಿ ಸಿಡಿಪಿ ರಸ್ತೆ ನಿರ್ಮಾಣಕ್ಕಾಗಿ ದಶಕಗಳಿಂದ ಬೆಳೆದ ನಗರ ಅರಣ್ಯವನ್ನು ವಿಭಜಿಸಲು ನಿರ್ಧರಿಸಲಾಗಿದೆ. ಈ ರಾಜಿ ಸೂತ್ರದಿಂದಾಗಿ ರಸ್ತೆ ಮತ್ತು ಟ್ರೀ ಪಾರ್ಕ್ ಎರಡೂ ಲಭ್ಯವಾಗಲಿದ್ದು, 150 ಎಕರೆ ವಿಸ್ತೀರ್ಣದ ಅರಣ್ಯವು ಎರಡು ಭಾಗಗಳಾಗಿ ವಿಭಜನೆಗೊಳ್ಳಲಿದೆ.

Read Full Story

09:39 PM (IST) Sep 15

ಶಾಸಕ ಉಮೇಶ್ ಮೇಟಿ ಸೊಸೆಗೆ ಅಕ್ರಮವಾಗಿ 75 ಸಾವಿರ ಸಂಬಳ? ಪುತ್ರಿಯನ್ನೇ ವಜಾ ಮಾಡಿದ ತಂದೆ

ಬಾಗಲಕೋಟೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜಕುಮಾರ ಯರಗಲ್ ಅವರ ಪುತ್ರಿ ಡಾ. ಅಂಕಿತಾ, ಎಂಡಿ ವ್ಯಾಸಂಗ ಮಾಡುತ್ತಲೇ 'ನಮ್ಮ ಕ್ಲಿನಿಕ್' ವೈದ್ಯಾಧಿಕಾರಿಯಾಗಿ ಸರ್ಕಾರಿ ವೇತನ ಪಡೆಯುತ್ತಿದ್ದ ಆರೋಪಕ್ಕೆ ಗುರಿಯಾಗಿದ್ದರು. ಈ ಅಕ್ರಮ ಮತ್ತು ಅನಧಿಕೃತ ಗೈರುಹಾಜರಿ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ, ಸ್ವತಃ ಅವರ ತಂದೆಯೇ ಮಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.
Read Full Story

09:31 PM (IST) Sep 15

ರಾಜ್ಯದ ಇಂಜಿನಿಯರ್‍‌ಗಳಿಗೆ ಸರ್ಕಾರದಿಂದ ಎರಡು ಭರ್ಜರಿ ಗುಡ್‌ನ್ಯೂಸ್

ಕರ್ನಾಟಕ ಸರ್ಕಾರ ರಾಜ್ಯದ ಇಂಜಿನಿಯರ್‍‌ಗಳಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಸೆಪ್ಟೆಂಬರ್ 15 ರಂದು ಇನ್ಮುಂದೆ ಇಂಜಿನಿಯರ್ ದಿನವನ್ನಾಗಿ ಆಚರಿಸುವುದರ ಜೊತೆಗೆ ಮತ್ತೊಂದು ಸಿಹಿಸುದ್ದಿಯನ್ನ ಕೊಟ್ಟಿದೆ.

Read Full Story

08:29 PM (IST) Sep 15

ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ಭಾಷೆ ಸ್ಥಾನಮಾನ, ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ

ಕರಾವಳಿಯ ದಶಕಗಳ ಕನಸಾದ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಕರ್ನಾಟಕ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ತಜ್ಞರ ಸಮಿತಿ ವರದಿ ಹಾಗೂ ಆಂಧ್ರಪ್ರದೇಶದ ಮಾದರಿ ಅಧ್ಯಯನದ ನಂತರ, ಕಾನೂನು ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳುವುದಾಗಿ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ.

Read Full Story

08:26 PM (IST) Sep 15

Water Crisis - ಅನ್ನವಿದೆ, ಬೇಯಿಸಲು ನೀರಿಲ್ಲ! ಖಾಲಿ ಬಿಂದಿಗೆ ಹಿಡಿದು ರಸ್ತೆಗಿಳಿದ ಶಾಲಾ ಮಕ್ಕಳು!

ಬಿಸಿಯೂಟ ತಯಾರಿಸಲು ನೀರಿಲ್ಲದ ಕಾರಣ ಸೆಂಟ್ ಆಂಥೋನಿ ಶಾಲೆಯ ವಿದ್ಯಾರ್ಥಿಗಳು ಖಾಲಿ ಬಿಂದಿಗೆ ಹಿಡಿದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

Read Full Story

07:56 PM (IST) Sep 15

ಬೆಂಗಳೂರಿನಲ್ಲಿ ಸಡನ್ ಸುರಿದ ವಿಪರೀತ ಮಳೆ, ನೀರು ನಿಂತು ಅವಾಂತರ, ಕರ್ನಾಟಕದ 8 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ!

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಹವಾಮಾನ ಇಲಾಖೆ 'ಎಲ್ಲೋ ಅಲರ್ಟ್' ಘೋಷಿಸಿದೆ. ರಾಜಧಾನಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹಲವೆಡೆ ಸಂಚಾರ ದಟ್ಟಣೆ, ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿ, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದಂತಹ ಸಮಸ್ಯೆಗಳು ಉಂಟಾಗಿವೆ.
Read Full Story

07:10 PM (IST) Sep 15

ಸೆ.14ರಂದು ಆಗಸದಲ್ಲಿ ಕಾಣಿಸಿದ ಚಂದ್ರ-ಶುಕ್ರ ಗ್ರಹದ ಅಪರೂಪದ ಮಿಲನ, ಚೌತಿ ದಿನ ಆಕಾಶ ನೋಡಲು ಹೆದರಿದ ಜನ!

ಗಣೇಶ ಚೌತಿಯ ದಿನ ಚಂದ್ರನನ್ನು ನೋಡಿದರೆ ಅಪವಾದ ಬರುತ್ತದೆ ಎಂಬ ಪೌರಾಣಿಕ ನಂಬಿಕೆಯಿದೆ. ಆದರೆ, 2026ರ ಸೆಪ್ಟೆಂಬರ್ 14ರ ಚೌತಿಯಂದೇ, ಚಂದ್ರನು ಶುಕ್ರ ಗ್ರಹವನ್ನು ಸಂಪೂರ್ಣವಾಗಿ ಮರೆಮಾಚಿದ 'ಚಂದ್ರನ ಗುಪ್ತ ಕ್ರಿಯೆ' ಎಂಬ ಅಪರೂಪದ ಖಗೋಳ ಘಟನೆ ಸಂಭವಿಸಿತು. ಈ ಲೇಖನವು ಈ ವೈಜ್ಞಾನಿಕ ವಿಸ್ಮಯ ಮತ್ತು ಪೌರಾಣಿಕ ನಂಬಿಕೆಯ ನಡುವಿನ ಕುತೂಹಲಕಾರಿ ಸಂಗತಿಗಳನ್ನು ವಿವರಿಸುತ್ತದೆ.
Read Full Story

06:31 PM (IST) Sep 15

Politics - ಸ್ವಚ್ಛ ಭಾರತ್, ರಾಮಮಂದಿರ ಆದ್ಮೇಲೆ ನೆಕ್ಸ್ಟ್ ಏನು? 'ಕೈ' ಪಡೆಯ ನಿದ್ದೆಗೆಡಿಸಿದ ಆ 'ಬ್ರಹ್ಮಾಸ್ತ್ರ' ಯಾವುದು?

Politics: ಬಿಜೆಪಿಯು ರಾಮಮಂದಿರ, 370ನೇ ವಿಧಿ ರದ್ದತಿಯಂತಹ ಸಾಧನೆಗಳ ಮೂಲಕ ತನ್ನ ಮತಬ್ಯಾಂಕ್ ಗಟ್ಟಿಗೊಳಿಸಿದ್ದು, ಮುಂದಿನ ಬ್ರಹ್ಮಾಸ್ತ್ರಕ್ಕೆ ಸಜ್ಜಾಗಿದೆ. ಇದಕ್ಕೆ ಪ್ರತಿಯಾಗಿ, ಯುವಕರ ಆಕ್ರೋಶವನ್ನು ಮತಗಳಾಗಿ ಪರಿವರ್ತಿಸಲು ಕಾಂಗ್ರೆಸ್ ಏನು ಮಾಡಲಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story

06:01 PM (IST) Sep 15

ಗಣೇಶ ಚತುರ್ಥಿ ದಿನವೇ ಗುಡ್‌ನ್ಯೂಸ್‌ ಘೋಷಿಸಿದ ರಂಗನಾಯಕಿ ಸೀರಿಯಲ್‌ ನಟಿ ಪ್ರೇರಣಾ

ಕನ್ನಡದ ಜನಪ್ರಿಯ ನಟಿ ಪ್ರೇರಣಾ ಕಂಬಮ್‌ ಮತ್ತು ಪತಿ ಶ್ರೀಪಾದ್ ದೇಶಪಾಂಡೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗಣೇಶ ಚತುರ್ಥಿಯ ಶುಭ ದಿನದಂದು ಪ್ರೇರಣಾ ತಮ್ಮ 'ಬೇಬಿ ಬಂಪ್' ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಈ ಸಿಹಿ ಸುದ್ದಿಯನ್ನು ಖಚಿತಪಡಿಸಿದ್ದಾರೆ.
Read Full Story

05:58 PM (IST) Sep 15

ಧಾರವಾಡದಲ್ಲಿ ವಿಚ್ಛೇದನ ವಿಚಾರಣೆ ಮುಗಿಸಿ ಹಿಂತಿರುಗುತ್ತಿದ್ದ ಪತಿಯ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ!

ಧಾರವಾಡದಲ್ಲಿ ವಿಚ್ಛೇದನ ಪ್ರಕರಣದ ವಿಚಾರಣೆ ಮುಗಿಸಿ ಮನೆಗೆ ತೆರಳುತ್ತಿದ್ದ ಪತಿ ಶಶಿಧರ್ ಶಿರಾಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಪತ್ನಿಯ ಕಡೆಯವರೇ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಶಶಿಧರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Read Full Story

05:49 PM (IST) Sep 15

Cricket - ಧರ್ಮಕ್ಕಿಂತ ಭಕ್ತಿಯೇ ದೊಡ್ಡದು! - ಬೆದರಿಕೆ ನಡುವೆಯೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಬಾಂಗ್ಲಾ ಕ್ರಿಕೆಟಿಗ, ಪೋಟೋ ವೈರಲ್‌!

ಬಾಂಗ್ಲಾದೇಶದಲ್ಲಿನ ಕೋಮು ಉದ್ವಿಗ್ನತೆ ಮತ್ತು ಬೆದರಿಕೆಗಳ ನಡುವೆಯೂ, ಕ್ರಿಕೆಟಿಗ ತಮ್ಮ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದಾರೆ. ಧಾರ್ಮಿಕ ನಂಬಿಕೆ ಧೈರ್ಯದಿಂದ ಪ್ರದರ್ಶಿಸಿದ ಅವರು ಧರ್ಮಕ್ಕಿಂತ ಭಕ್ತಿ ದೊಡ್ಡದು ಎಂದು ಸಾರಿದ್ದಾರೆ

Read Full Story

04:51 PM (IST) Sep 15

ಅಂಕೋಲಾದ ಅಜ್ಜಿ ಅಂಗಡಿಗೆ ಪ್ರತೀದಿನ ಬಂದು ಐಸ್‌ಕ್ರೀಂ ತಿನ್ನುವ ಹಸು, ಹಣದ ಬದಲು ಪಪ್ಪಿ ಕೊಟ್ಟು ಮುದ್ದಿಸುವ ದನ!

ಉತ್ತರ ಕನ್ನಡದ ಅಂಕೋಲಾದಲ್ಲಿ, ಶಾರದಾ ಶೆಣೈ ಎಂಬ ಅಜ್ಜಿಯ ಅಂಗಡಿಗೆ ಪ್ರತಿದಿನ ಹಸುವೊಂದು ಭೇಟಿ ನೀಡುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಐಸ್‌ಕ್ರೀಂ ಹಾಗೂ ಬಿಸ್ಕತ್ ತಿಂದು, ಅಜ್ಜಿಗೆ ಪ್ರೀತಿಯಿಂದ ಮುತ್ತಿಟ್ಟು ಹೋಗುವ ಈ ಹಸುವಿನ ಕಥೆ ಮಾನವ-ಪ್ರಾಣಿ ಬಾಂಧವ್ಯಕ್ಕೆ ಉತ್ತಮ ಉದಾಹರಣೆಯಾಗಿದೆ.
Read Full Story

04:46 PM (IST) Sep 15

Shivamogga - ಅರ್ಧಕ್ಕೆ ನಿಂತ ವಂದೇ ಮಾತರಂ, ಭುಗಿಲೆದ್ದ ವಿವಾದ!

ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯಿಂದ ಅಸಮಾಧಾನಗೊಂಡ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಕಾರ್ಯಕ್ರಮದಿಂದ ಹೊರನಡೆದಿದ್ದು, ಇದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
Read Full Story

04:45 PM (IST) Sep 15

BCCIನಲ್ಲಿ ಕ್ರಿಕೆಟ್ ದಿಗ್ಗಜರ ಕ್ರಾಂತಿ? ಸಚಿನ್ ಸೇರಿ 6 ಪ್ರಮುಖರ ಹೆಸರು ಬಿಸಿಸಿಐಗೆ ಕಳುಹಿಸಿದ ಗವಾಸ್ಕರ್!

ಭಾರತೀಯ ಕ್ರಿಕೆಟ್‌ನ ‘ಲಿಟಲ್ ಮಾಸ್ಟರ್’ ಸುನಿಲ್ ಗವಾಸ್ಕರ್, ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯ (CAC) ಸೀಮಿತ ಪಾತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಸೇರಿದಂತೆ ಏಳು ಕ್ರಿಕೆಟ್ ದಿಗ್ಗಜರನ್ನು ಒಳಗೊಂಡ ವಿಸ್ತೃತ ಸಮಿತಿಯನ್ನು ರಚಿಸಿ, ಅವರ ಅನುಭವವನ್ನು ಭಾರತೀಯ ಕ್ರಿಕೆಟ್‌ನ ಒಳಿತಿಗಾಗಿ ಬಳಸಿಕೊಳ್ಳಬೇಕೆಂದು ಅವರು ಬಿಸಿಸಿಐಗೆ ಮಹತ್ವದ ಸಲಹೆ ನೀಡಿದ್ದಾರೆ.

Read Full Story

04:42 PM (IST) Sep 15

ಅಪಘಾತ ಮಾಡಿ ಮಹಿಳೆ ಜೊತೆ ಕೆಟ್ಟ ವರ್ತನೆ, ಹಿಟ್ ಅಂಡ್ ರನ್ ಕೇಸ್‌ನಲ್ಲಿ ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ ಅರೆಸ್ಟ್

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಕಲ್ಯಾಣ್ ಬೈನಸ್ಲಾ ಅವರನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ. ಗುರುಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಕಾರು ಗುದ್ದಿಸಿ ಪರಾರಿಯಾಗಿದ್ದ ಆರೋಪ ಅವರ ಮೇಲಿದ್ದು, ಕೊಲೆ ಯತ್ನ ಪ್ರಕರಣವೂ ದಾಖಲಾಗಿದೆ. ಆದರೆ, ಇದು ಉದ್ದೇಶಪೂರ್ವಕವಲ್ಲ ಎಂದು ಕಲ್ಯಾಣ್ ವಾದಿಸಿದ್ದಾರೆ.
Read Full Story

04:21 PM (IST) Sep 15

Priyak Kharge - ಪ್ರಜ್ವಲ್‌ ರೇವಣ್ಣ ಸೆಲ್‌ ಮೇಲೆ ದಾಳಿ; ಪ್ರಿಯಾಂಕ್‌ ಖರ್ಗೆ ಮಾತಲ್ಲಿ ಬಯಲಾಯ್ತು ‘ಅಸಲಿ’ ಸೀಕ್ರೆಟ್‌!

ಪರಪ್ಪನ ಅಗ್ರಹಾರ ಜೈಲಿನ ಮೇಲಿನ ದಾಳಿ ಕೇವಲ ಪ್ರಜ್ವಲ್ ರೇವಣ್ಣ ಸೆಲ್‌ಗೆ ಸೀಮಿತವಾಗಿಲ್ಲ, ಇದೊಂದು ರಾಜ್ಯಾದ್ಯಂತ ನಡೆದ ಪ್ರಕ್ರಿಯೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ

Read Full Story

04:11 PM (IST) Sep 15

'ಅಲಂಕೃತ ಜೈಲಿನಲ್ಲಿ ಇದ್ದಂತೆ' ಬೆಂಗಳೂರಿನಂಥ ನಗರದಲ್ಲಿ ಮಕ್ಕಳ ಸಾಕುವ ಕಷ್ಟ ಬರೆದುಕೊಂಡ ಸ್ಟಾರ್ಟ್‌ಅಪ್‌ ಉದ್ಯಮಿ

ಸ್ಟಾರ್ಟ್‌ಅಪ್ ಸಹ-ಸಂಸ್ಥಾಪಕ ಆದಿತ್ಯ ಕುಲಕರ್ಣಿ ಅವರ ವೈರಲ್ ಪೋಸ್ಟ್, ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಕ್ಕಳನ್ನು ಸಾಕುವುದು ಹೇಗೆ 'ಅಲಂಕೃತ ಜೈಲು' ವಾಸದಂತಾಗಿದೆ ಎಂಬುದನ್ನು ವಿವರಿಸುತ್ತದೆ.

Read Full Story

03:50 PM (IST) Sep 15

'ನನಗೆ ಮುಸ್ಲಿಮರೇ ಮೊದಲು', ವಿವಾದಕ್ಕೆ ಕಾರಣವಾಯ್ತು ತುಳು ಹಾಸ್ಯನಟ ಅರವಿಂದ್ ಬೋಳಾರ್ ಹೇಳಿಕೆ

ತುಳು ಹಾಸ್ಯ ಕಲಾವಿದ ಅರವಿಂದ ಬೋಳಾರ್ ಅವರ ಭಾಷಣದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವಿವಾದ ಸೃಷ್ಟಿಸಿದೆ. 'ನನ್ನ ಹಾಸ್ಯಕ್ಕೆ ಮುಸ್ಲಿಮರೇ ಮೊದಲು' ಎಂಬ ಅವರ ಹೇಳಿಕೆಗೆ ತುಳುನಾಡಿನಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದು, ಕಲಾವಿದರೊಬ್ಬರ ಈ ಮಾತು ಸೌಹಾರ್ದತೆಗೆ ಧಕ್ಕೆ ತರುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.
Read Full Story

01:03 PM (IST) Sep 15

HD Kumaraswamy - ಅಮೆರಿಕದಿಂದ ವಾಪಸಾದ ಬೆನ್ನಲ್ಲೇ ಡಿಕೆಶಿ, ಪ್ರಿಯಾಂಕ್ ವಿರುದ್ಧ ಮುಗಿಬಿದ್ದ ಹೆಚ್‌ಡಿಕೆ, ಸ್ಫೋಟಕ ಹೇಳಿಕೆ!

ಅಮೆರಿಕ ಪ್ರವಾಸದಿಂದ ಮರಳಿರುವ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ಹೊಸ ಸಮರ ಸಾರಿದ್ದಾರೆ. ಕೆಪಿಎಸ್‌ಸಿ ಹಗರಣ, ನೈಸ್ ವಿಚಾರ ಸೇರಿದಂತೆ ಹಲವು ವಿಷಯಗಳ ದಾಖಲೆ ಬಿಡುಗಡೆ ಮಾಡುವುದಾಗಿ ಎಚ್ಚರಿಸಿದ್ದು, ಪ್ರಜ್ವಲ್ ರೇವಣ್ಣ ಕೇಸ್ ವಿಚಾರವಾಗಿಯೂ ಗಂಭೀರ ಆರೋಪ ಮಾಡಿದ್ದಾರೆ.

Read Full Story

12:23 PM (IST) Sep 15

Belagavi - ಗಣೇಶ ಮೂರ್ತಿ ಹೊತ್ತು ನಡೆದ ಜಿಲ್ಲಾಧಿಕಾರಿ; ಮೊಹಮ್ಮದ್ ರೋಷನ್‌ರಿಂದ ಸೌಹಾರ್ದ ಸಂದೇಶ

ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್‌ ಅವರು ತಮ್ಮ ಮನೆ ಮತ್ತು ಕಚೇರಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಪರಿಸರ ಸ್ನೇಹಿ ಗಣೇಶನ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಅವರು ಭಾವೈಕ್ಯತೆ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಿದರು.
Read Full Story

12:16 PM (IST) Sep 15

ಉದ್ಘಾಟನೆಗೂ ಮುನ್ನವೇ ಮಂಗಳೂರು ಕೋಟೇಕಾರ್ ಇಂದಿರಾ ಕ್ಯಾಂಟೀನ್ ಜಾಗ ಖಾಲಿ ಮಾಡುವ ಭೀತಿ!

ಮಂಗಳೂರಿನ ಕೋಟೇಕಾರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆಗಾಗಿ 2 ವರ್ಷಗಳಿಂದ ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್ ಕಟ್ಟಡವನ್ನು ತೆರವುಗೊಳಿಸುವ ಸಾಧ್ಯತೆಯಿದೆ. ಸರ್ವಿಸ್ ರಸ್ತೆ ನಿರ್ಮಾಣದ ಅಗತ್ಯತೆ ಮತ್ತು ಸ್ಥಳೀಯರ ಒತ್ತಾಯದ ಹಿನ್ನೆಲೆಯಲ್ಲಿ, ಪಟ್ಟಣ ಪಂಚಾಯತ್ ಪರ್ಯಾಯ ಜಾಗದ ಹುಡುಕಾಟದಲ್ಲಿದೆ. ಈ ಕ್ಯಾಂಟೀನ್ ಅನ್ನು ಆಸ್ಪತ್ರೆಗಳ ಬಳಿ ನಿರ್ಮಿಸಿದ್ದರೆ ಹೆಚ್ಚು ಪ್ರಯೋಜನವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Read Full Story

11:40 AM (IST) Sep 15

ಮೈಸೂರು ದಸರಾ - 2ನೇ ಹಂತದ ಆನೆಗಳ ಆಗಮನ, ತೂಕದಲ್ಲಿ ಶ್ರೀಕಂಠನನ್ನೇ ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಸುಗ್ರೀವ!

ಮೈಸೂರು ದಸರಾ ಮಹೋತ್ಸವಕ್ಕಾಗಿ ಎರಡನೇ ಹಂತದ ಆನೆಗಳು ಆಗಮಿಸಿದ್ದು, ತೂಕ ಪರೀಕ್ಷೆಯಲ್ಲಿ 'ಸುಗ್ರೀವ' ಆನೆಯು 5,850 ಕೆಜಿ ತೂಕದೊಂದಿಗೆ ಅತಿ ಹೆಚ್ಚು ತೂಕದ ಆನೆಯಾಗಿ ಹೊರಹೊಮ್ಮಿದೆ. ಇದರೊಂದಿಗೆ, ರಾಜವಂಶಸ್ಥರ ಖಾಸಗಿ ದರ್ಬಾರ್‌ಗಾಗಿ 'ಶ್ರೀಕಂಠ' ಪಟ್ಟದ ಆನೆಯಾಗಿ ಮತ್ತು 'ಏಕಲವ್ಯ' ನಿಶಾನೆ ಆನೆಯಾಗಿ ಆಯ್ಕೆಯಾಗಿವೆ.
Read Full Story

11:21 AM (IST) Sep 15

4 ವರ್ಷದ ಪ್ರೀತಿ ಅಂತ್ಯ? ಸನ್ನಿ ಲಿಯೋನ್ ಮುಂದೆ ಬ್ರೇಕಪ್ ಹೇಳಿದ ಸೌಂದರ್ಯಾ ಶೆಟ್ಟಿ

ಬಿಗ್‌ಬಾಸ್ ಕನ್ನಡದ ಸ್ಪರ್ಧಿ ಸೌಂದರ್ಯಾ ಶೆಟ್ಟಿ, ಈ ಹಿಂದೆ ಸ್ಪ್ಲಿಟ್ಸ್ ವಿಲ್ಲಾ ಶೋನಲ್ಲಿ ನಿರೂಪಕಿ ಸನ್ನಿ ಲಿಯೋನ್ ಮುಂದೆ ತಮ್ಮ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದರು. ನಾಲ್ಕು ವರ್ಷಗಳ ಸಂಬಂಧ ಹಾಳಾಗಿದ್ದೇಕೆ ಎಂಬುದನ್ನು ಖುಷಿಯಾಗಿ ಸೌಂದರ್ಯಾ ಹೇಳಿಕೊಂಡಿದ್ದರು.

Read Full Story

10:50 AM (IST) Sep 15

ಕಾವೇರಿ-2.0 ತಾಂತ್ರಿಕ ದೋಷ ನೆಪ ಹೇಳಿ ಆಸ್ತಿ ಹಕ್ಕು ಕಸಿಯುವಂತಿಲ್ಲ, ಮ್ಯಾನುವಲ್ ನೋಂದಾವಣೆಗೆ - ಹೈಕೋರ್ಟ್ ಖಡಕ್ ಸೂಚನೆ

ಕಾವೇರಿ-2.0 ತಂತ್ರಾಂಶದ ತಾಂತ್ರಿಕ ದೋಷದಿಂದಾಗಿ ಶಾಶ್ವತ ಗುತ್ತಿಗೆ ಜಾಗದಲ್ಲಿನ ಫ್ಲಾಟ್‌ಗಳ ನೋಂದಣಿಗೆ ಉಂಟಾಗಿದ್ದ ಅಡಚಣೆಯನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿದೆ. ಎರಡು ತಿಂಗಳೊಳಗೆ ತಂತ್ರಾಂಶ ಸರಿಪಡಿಸುವಂತೆ ಅಥವಾ ಮ್ಯಾನುವಲ್ ಆಗಿ ನೋಂದಣಿ ಮಾಡುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ತಂತ್ರಾಂಶದ ಮಿತಿಗಳು ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
Read Full Story

10:38 AM (IST) Sep 15

ಬೆಂಗಳೂರಲ್ಲಿ ಕನಕರಾಜು&ಗ್ಯಾಂಗ್ ಅಟ್ಟಹಾಸ - 'ಎಗ್‌ರೈಸ್ ಖಾಲಿ' ಎಂದಿದ್ದಕ್ಕೆ ಅಂಗಡಿ ಮಾಲೀಕನಿಗೆ ಏನು ಮಾಡಿದ್ರು ನೋಡಿ!

ಬೆಂಗಳೂರಿನ ಬನ್ನೇರುಘಟ್ಟ ಸಮೀಪ ಎಗ್‌ರೈಸ್ ಖಾಲಿಯಾಗಿದೆ ಎಂದಿದ್ದಕ್ಕೆ ಪುಂಡರ ಗ್ಯಾಂಗ್ ಪಕ್ಕದಲ್ಲಿದ್ದ ಅಮಾಯಕ ಪೈಂಟರ್ ಮೇಲೆ ತಲ್ವಾರ್‌ನಿಂದ ಹಲ್ಲೆ. ಈ ಘೋರ ಕೃತ್ಯದಲ್ಲಿ ಮಂಜುನಾಥ್ ಎಂಬುವವರ ಕೈ ಛಿದ್ರಗೊಂಡಿದ್ದು, ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರೌಡಿಗಳ ಅಟ್ಟಹಾಸಕ್ಕೆ ಇದು ಮತ್ತೊಂದು ಸಾಕ್ಷಿ.

Read Full Story

09:58 AM (IST) Sep 15

Belagavi - ಹಬ್ಬದ ಸಂಭ್ರಮವನ್ನೇ ಕಸಿದ ಫ್ರಿಡ್ಜ್ ಸ್ಫೋಟ; ಒಂದೇ ಕುಟುಂಬದ ನಾಲ್ವರು ಸಾವು, ಇಬ್ಬರ ಸ್ಥಿತಿ ಗಂಭೀರ

ಗಣೇಶ ಚತುರ್ಥಿ ಹಬ್ಬದ ದಿನವೇ ಬೆಳಗಾವಿಯಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಒಂದೇ ಕುಟುಂಬದ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ಮತ್ತೊಂದು ದುರಂತದಲ್ಲಿ, ಮಂಡ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸಾವನ್ನಪ್ಪಿದ್ದು, ಹಬ್ಬದ ಸಂಭ್ರಮದ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿದೆ.

Read Full Story

09:52 AM (IST) Sep 15

ಸಿದ್ದರಾಮಯ್ಯ ಮನೆ ಗೃಹಪ್ರವೇಶ; ಗೋಪೂಜೆ, ಲಕ್ಷ್ಮೀದೇವಿ ಫೋಟೋ ಜೊತೆ ಬಂಗ್ಲೆಗೆ ಎಂಟ್ರಿ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೈಸೂರಿನ ನೂತನ ನಿವಾಸದ ಗೃಹಪ್ರವೇಶವು ಗಣೇಶ ಚತುರ್ಥಿಯ ಶುಭ ದಿನದಂದು ನೆರವೇರಿದೆ. ಸುಮಾರು 12 ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಈ ಮನೆಗೆ, ಕುಟುಂಬಸ್ಥರ ಸಮ್ಮುಖದಲ್ಲಿ ಗೋ ಪೂಜೆ, ಗಣಪತಿ ಹೋಮದಂತಹ ಶಾಸ್ತ್ರೋಕ್ತ ವಿಧಿಗಳೊಂದಿಗೆ ಪ್ರವೇಶಿಸಲಾಯಿತು.
Read Full Story

09:15 AM (IST) Sep 15

'ವಿಜಯಪುರದಲ್ಲಿ 1 ಲಕ್ಷ 20 ಸಾವಿರ ಜನ ಪಾಕಿಸ್ತಾನಿಗಳು'; ಯತ್ನಾಳ್ ಭಾಷಣದಲ್ಲಿ ಶಾಕಿಂಗ್ ಹೇಳಿಕೆ!

ಚಿಕ್ಕೋಡಿಯ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರದ ಮುಸ್ಲಿಂ ಸಮುದಾಯವನ್ನು ಪಾಕಿಸ್ತಾನಿಗಳಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದೂಗಳಲ್ಲಿ ಜಾಗೃತಿ ಮೂಡಿರುವುದರಿಂದಲೇ ತಾನು ಚುನಾವಣೆಯಲ್ಲಿ ಗೆಲ್ಲುತ್ತಿದ್ದೇನೆ ಎಂದಿದ್ದಾರೆ.

Read Full Story

09:06 AM (IST) Sep 15

ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಬಳೆ ಸದ್ದು; ಅಂದು ವಿನಯ್ ಗೌಡ, ಇಂದು ಕಿರಣ್ ಶಾಸ್ತ್ರಿ!

ಬಿಗ್‌ಬಾಸ್ ಕನ್ನಡದ ಹೊಸ ಸೀಸನ್‌ನಲ್ಲಿ, ಟಾಸ್ಕ್ ವಿಚಾರವಾಗಿ ಕಿರಣ್ ಶಾಸ್ತ್ರಿ ಅವರು ಗಗನ್ ಅವರಿಗೆ 'ಬಳೆ ಹಾಕೊಳ್ಳಿ' ಎಂದು ಹೇಳಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ. ಗಗನ್ ಅವರು ಕಿರಣ್ ಮಾತಿಗೆ ಖಾರವಾಗಿಯೇ ಪ್ರತ್ಯುತ್ತರ ನೀಡಿದ್ದಾರೆ.

Read Full Story

09:06 AM (IST) Sep 15

ಇಲಿಗಳು ಸಿಕ್ಕಿದ್ದನ್ನೆಲ್ಲಾ ಯಾಕೆ ಕಚ್ಚಿ ಹಾಳು ಮಾಡುತ್ತವೆ? ಅದರಲ್ಲೂ ತಿನ್ನದಿದ್ರೂ ವೈರ್‌ಗಳನ್ನೇ ಹೆಚ್ಚು ಕಚ್ಚೋದೇಕೆ? ಅಸಲಿ ಕಾರಣ ಇಲ್ಲಿದೆ ನೋಡಿ!

ಮನೆಯಲ್ಲಿ ಇಲಿಗಳು ಇದ್ರೆ ಸಾಕು, ಸಿಕ್ಕಿದ್ದನ್ನೆಲ್ಲಾ ಕಚ್ಚಿ ಹಾಳು ಮಾಡುತ್ತವೆ. ಆದರೆ ಅವು ಯಾಕೆ ಹೀಗೆ ಮಾಡುತ್ತವೆ ಗೊತ್ತಾ? ಇದರ ಹಿಂದೆ ಒಂದು ಕುತೂಹಲಕಾರಿ ಕಾರಣವಿದೆ. ಇಲಿಗಳ ಈ ಕಚ್ಚುವ ಅಭ್ಯಾಸದ ಹಿಂದಿನ ರಹಸ್ಯವೇನು ಎಂದು ತಿಳಿಯೋಣ ಬನ್ನಿ.

Read Full Story

08:33 AM (IST) Sep 15

ಮಂಡ್ಯ - ಗಣಪತಿ ಹಬ್ಬದ ಸಂಭ್ರಮದ ನಡುವೆ ಮದ್ದೂರಲ್ಲಿ ಘೋರ ದುರಂತ! ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು!

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಬಳಿ ಹಾಲಿನ ಟ್ಯಾಂಕರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಗಣಪತಿ ಹಬ್ಬಕ್ಕಾಗಿ ಬೆಂಗಳೂರಿನಿಂದ ಬಂದಿದ್ದ ಒಂದೇ ಕುಟುಂಬದ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Read Full Story

08:13 AM (IST) Sep 15

ನಿಂತಲ್ಲೇ ನಿಂತ ತಾಳಗುಪ್ಪ ಎಕ್ಸ್‌ಪ್ರೆಸ್‌ - ಬೆಂಗಳೂರಿಗೆ ಬರುತ್ತಿರೋ ಪ್ರಯಾಣಿಕರು ಹೈರಾಟು

ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲು (20652) ಆನೆಯೊಂದು ಮರವನ್ನು ಉರುಳಿಸಿದ್ದರಿಂದ ಆನಂದಪುರ ನಿಲ್ದಾಣದಲ್ಲಿ ನಿಂತಿದೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ರೈಲು ಸಂಚಾರದಲ್ಲಿ ಹಲವು ಗಂಟೆಗಳ ವಿಳಂಬ ಉಂಟಾಗಿದೆ.
Read Full Story

More Trending News