ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಕಲ್ಯಾಣ್ ಬೈನಸ್ಲಾ ಅವರನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ. ಗುರುಗ್ರಾಮದಲ್ಲಿ ಮಹಿಳೆಯೊಬ್ಬರಿಗೆ ಕಾರು ಗುದ್ದಿಸಿ ಪರಾರಿಯಾಗಿದ್ದ ಆರೋಪ ಅವರ ಮೇಲಿದ್ದು, ಕೊಲೆ ಯತ್ನ ಪ್ರಕರಣವೂ ದಾಖಲಾಗಿದೆ. ಆದರೆ, ಇದು ಉದ್ದೇಶಪೂರ್ವಕವಲ್ಲ ಎಂದು ಕಲ್ಯಾಣ್ ವಾದಿಸಿದ್ದಾರೆ.

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಪ್ಲೇಯರ್ ಕಲ್ಯಾಣ್ ಬೈನಸ್ಲಾ ಅವರನ್ನು ಬಂಧಿಸಲಾಗಿದೆ. ರಾಜಸ್ಥಾನದ ದೌಸಾದಲ್ಲಿ ಗುರುಗ್ರಾಮ ಪೊಲೀಸರು ಅರೆಸ್ಟ್ ಮಾಡಿ ತನಿಖೆಗೆ ಒಳಪಡಿಸಿದ್ದಾರೆ. ಹಿಟ್‌ ಅಂಡ್ ರನ್ ಕೇಸ್‌ಗೆ ಸಂಬಂಧಿಸಿದಂತೆ ಕಲ್ಯಾಣ್ ವಿರುದ್ಧ ಕೊಲೆ ಯತ್ನ ಪ್ರಕರಣವೂ ದಾಖಲಾಗಿದೆ. ಗುರುಗ್ರಾಮನ ಗಾಲ್ಫ್ ಕೋರ್ಸ್‌ ರಸ್ತೆಯಲ್ಲಿ ಮಹಿಳೆಯೊಬ್ಬರಿಗೆ ಗುದ್ದಿ ಓಡಿದ ಪ್ರಕರಣದಲ್ಲಿ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ.

ಕಲ್ಯಾಣ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನ ಬಯೋದಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಮತ್ತು ಇಂಡಿಯನ್ ರಗ್ಬಿ ಟೀಂ ಎಂದು ಬರೆದುಕೊಂಡಿದ್ದಾರೆ. ಸದ್ಯ ಬಂಧಿಸಿರುವ ಪೊಲೀಸ್ ಅಧಿಕಾರಿಗಳು ಆತನನ್ನು ಗುರುಗ್ರಾಮಕ್ಕೆ ಹೆಚ್ಚಿನ ವಿಚಾರಣೆಗಾಗಿ ಕರೆದುಕೊಂಡು ಬರುತ್ತಿದ್ದಾರೆ.

ಯಾರು ಈ ಕಲ್ಯಾಣ್ ಬೈನ್ಸ್ಲಾ?

ಕಲ್ಯಾಣ್ ಜಿಮ್ ಒಂದರ ಮಾಲೀಕರು ಹೌದು. ಅವರ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಕೆಲವು ಫೋಟೋ ಹಾಗೂ ವಿಡಿಯೋಗಳು ಜಿಮ್ ತರಬೇತಿ ನೀಡುತ್ತಿರೋದಕ್ಕೆ ಸಂಬಂಧಿಸಿದ್ದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಅವರು, ಅಪಾರ ಅನುಯಾಯಿಗಳನ್ನ ಹೊಂದಿದ್ದಾರೆ. ಇನ್ನು ಅವರ ಪ್ರೊಫೈಲ್ ಫೋಟೋದಲ್ಲಿ ತೋಳುಗಳನ್ನ ಬಗ್ಗಿಸಿ ಪೋಸ್ ನೀಡಿದ್ದಾರೆ. ಅಮೆಚೂರು ಒಲಿಂಪಿಯಾ ಇಂಡಿಯಾ ಬಾಡಿ ಬಿಲ್ಡಿಂಗ್ ಪಂದ್ಯಾವಳಿಯನ್ನು ಗೆದ್ದಿರೋದಾಗಿ ಹೇಳಿಕೊಂಡಿದ್ದಾರೆ. ಇನ್ನು ಪ್ರಕರಣ ಬೆನ್ನಲ್ಲೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳನ್ನ ನಿಷ್ಕ್ರಿಯಗೊಳಿಸಿದ್ದಾರೆ.

ಸಿಯಾ ಎಂಬ ಮಹಿಳೆಯು Aprilia RS 457 ಬೈಕ್‌ನಲ್ಲಿ ಹೋಗ್ತಿದ್ದಾಗ ಕಾರು ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮಹಿಳೆ ನೆಲಕ್ಕೆ ಬಿದ್ದಿದ್ದಾಳೆ. ಅಷ್ಟೇ ಅಲ್ಲದೇ ಹಲವು ಮೀಟರ್‍‌ ಒವರೆಗೆ ತಳ್ಳಿಕೊಂಡು ಹೋಗಿದ್ದಾಳೆ. ಅವಳಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನು ಆಕೆಯ ಬೈಕ್‌ಗೆ ತೀವ್ರ ಹಾನಿಯಾಗಿದೆ. ಘಟನೆ ಬೆನ್ನಲ್ಲೇ ಅಪಘಾತ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಆಕೆ, ಈ ಘಟನೆ ಬಗ್ಗೆ ಏನು ಹೇಳೋದು ಅಂತಾ ಗೊತ್ತಿಲ್ಲ. ಅಪಘಾತ ಬಳಿಕ ನನಗೆ ಕೈ ತೋರಿಸಿ ಕಿರುಕುಳ ನೀಡಿದ್ದಾರೆ. ಗುರುಗ್ರಾಮದ ರಸ್ತೆಗಳು ಓಡಾಡುವಾಗ ಸುರಕ್ಷತೆಯ ಬಗ್ಗೆ ಗಾಬರಿ ಆಗುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನೋವು ತೋಡಿಕೊಂಡಿದ್ದಳು.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಕಲ್ಯಾಣ್.. ಕುಟುಂಬದವರ ಜೊತೆ ಕಾರಿನಲ್ಲಿ ಹೋಗುವಾಗ ಘಟನೆ ನಡೆದಿದೆ. ಅವರು ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆಗೆ ಗುದ್ದಿರೋದಾಗಿ ತಿಳಿಸಿದ್ದಾರೆ. ಜೊತೆಗೆ ತಾವು ಉದ್ದೇಶಪೂರ್ವಕವಾಗಿ ಅಪಘಾತ ಮಾಡಿಲ್ಲ ಎಂದು ವಾದಿಸಿದ್ದಾರೆ. ಅಪಘಾತದ ಸಂದರ್ಭದಲ್ಲಿ ಬೈಕ್ ರೈಡಿಂಗ್ ನಡೆಯುತ್ತಿತ್ತು. ನೂರಾರು ಬೈಕ್‌ಗಳು ಹೋಗೋದನ್ನ ಗಮನಿಸಿ ಕಾರು ಚಲಾಯಿಸುತ್ತಿದ್ದೆ. ಆದರೆ ಈ ಮಹಿಳೆ ಆರಂಭದಲ್ಲಿ ಇರೋದು ನನ್ನ ಗಮನಕ್ಕೆ ಬಂದಿರಲಿಲ್ಲ. ನಾನು ಕಿರುಕುಳ ನೀಡಿರೋದೆಲ್ಲ ಸುಳ್ಳು. ಅಲ್ಲಿ ಯಾಕೆ ಕಾರನ್ನು ನಿಲ್ಲಿಸಿಲ್ಲ ಅಂದರೆ ಅವರು ತುಂಬಾ ಜನರು ಇದ್ದರು. ನನ್ನ ಮೇಲೆ ದಾಳಿ ಮಾಡುವ ಸಾಧ್ಯತೆ ಇತ್ತು. ಹಾಗಾಗಿ ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದೆ ಎಂದಿದ್ದಾರೆ.