Published : Oct 15, 2025, 07:10 AM ISTUpdated : Oct 15, 2025, 11:59 PM IST

Karnataka News Live: BBK 12 - ಎಂಥ ದೃಷ್ಟಿ ಹಾಕಿದ್ರಪ್ಪಾ.. ಸ್ಪಂದನಾ ಸೋಮಣ್ಣಗೆ ಸಿಕ್ಕ ಅದೃಷ್ಟ ಬೇರೆಯವರ ಪಾಲಾಯ್ತು!

ಸಾರಾಂಶ

ಬೆಂಗಳೂರು: ನಟ ದರ್ಶನ್ ಅವರ ಮನವಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಬಿ. ವರದರಾಜು ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಕಾರಾಗೃಹಕ್ಕೆ ಭೇಟಿ ನೀಡಿದ್ದ ಅವರು ವಿಶೇಷ ಭದ್ರತಾ ವಿಭಾಗದಲ್ಲಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರ ಸೆಲ್‌ಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅವರಿಗೆ ಕಾರಾಗೃಹ ನಿಯಾಮಾವಳಿ ಅನುಸಾರ ಕಲ್ಪಿಸಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ. ಅಲ್ಲದೆ, ದರ್ಶನ್ ಅವರಿಂದ ಕೂಡ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಕಾನೂನು ಸೇವೆಗಳ ಪ್ರಾಧಿಕಾರ ವರದಿ ಸಲ್ಲಿಸುವ ಸಾಧ್ಯತೆಗಳಿವೆ.

bigg boss spandana somanna

11:59 PM (IST) Oct 15

BBK 12 - ಎಂಥ ದೃಷ್ಟಿ ಹಾಕಿದ್ರಪ್ಪಾ.. ಸ್ಪಂದನಾ ಸೋಮಣ್ಣಗೆ ಸಿಕ್ಕ ಅದೃಷ್ಟ ಬೇರೆಯವರ ಪಾಲಾಯ್ತು!

Bigg Boss Kannada Season 12 Show: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಸ್ಪಂದನಾ ಸೋಮಣ್ಣ ಅವರು ಫೈನಲಿಸ್ಟ್‌ ಆಗಿದ್ದರು. ಇದನ್ನು ಆ ಮನೆಯಲ್ಲಿದ್ದ ಕೆಲವರು ವಿರೋಧಿಸಿದ್ದರು. ಈಗ ಅವರಿಗೆ ಸಿಕ್ಕ ಅದೃಷ್ಟ ಈಗ ಬೇರೆಯವರ ಪಾಲಾಗಿದೆ. ಯಾಕೆ ಹೀಗಾಯ್ತು?

 

Read Full Story

11:53 PM (IST) Oct 15

31ರ ಹುಡುಗಿ, 62ರ ಬಾಯ್‌ಫ್ರೆಂಡ್‌, 350 ಡೇಟ್ಸ್.. ಈ ಲವ್ ಸ್ಟೋರಿ ಕೇಳಿದ್ರೆ ಶಾಕ್ ಆಗ್ತೀರಾ!

Unique British couple love story: ವಿಶಿಷ್ಟ ವಯಸ್ಸಿನ ಅಂತರದ ಪ್ರೇಮಕಥೆ: ಬ್ರಿಟನ್ ನಿವಾಸಿ ಗೀಗಿಗೆ 62 ವರ್ಷದ ವ್ಯಕ್ತಿಯ ಮೇಲೆ ಪ್ರೀತಿಯಾಗಿದೆ. ಈ ಪ್ರೀತಿಗೆ ಆಕೆ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಆದರೂ ಅವಳು ಖುಷಿಯಾಗಿದ್ದಾಳೆ. ಕಳೆದ 15 ತಿಂಗಳಿಂದ ಟಿಮ್ ಜೊತೆ ಸಂಬಂಧದಲ್ಲಿದ್ದಾಳೆ.

 

Read Full Story

11:36 PM (IST) Oct 15

Karna Serial - ಕರ್ಣ, ನಿತ್ಯಾ ಮದುವೆ ಆಗೋಯ್ತು! ಮದುವೆಗೂ ಮುನ್ನ ಇಂಥ ಕೆಲಸ ಮಾಡಿದಳಾ ನಿಧಿ ಅಕ್ಕ, ಛೇ..!

Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ವೀಕ್ಷಕರು ಬಯಸಿದಂತೆ ಕರ್ಣ ಹಾಗೂ ನಿಧಿ ಒಂದಾಗುತ್ತಿಲ್ಲ, ಇದರ ಬದಲಿಗೆ ಕರ್ಣ, ನಿತ್ಯಾ ಮದುವೆ ಆಗಿದ್ದಾರೆ. ಮದುವೆ ಆಗುತ್ತಿದ್ದಂತೆ ಅವನಿಗೆ ಇನ್ನೊಂದು ಶಾಕಿಂಗ್ ವಿಷಯ ಸಿಕ್ಕಿದೆ. ಏನದು?

 

Read Full Story

11:22 PM (IST) Oct 15

ಒಬ್ಬ ಪ್ರಧಾನಿ ಜನ್ರಿಗೆ 10 ಸಾವಿರ ಕೊಟ್ಟು ಓಟು ಕೇಳುವ ನಿದರ್ಶನ ಇದೆಯೇನ್ರಿ? ಮೋದಿ ವಿರುದ್ಧ ಲಾಡ್ ವಾಗ್ದಾಳಿ

ರಾಯಚೂರಿನಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸಂತೋಷ್ ಲಾಡ್, ಬಿಹಾರ ಚುನಾವಣೆಯಲ್ಲಿ 10 ಸಾವಿರ ರೂಪಾಯಿ ನೀಡಿ ಮತ ಕೇಳುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದಿದ್ದಾರೆ. ಬಿಹಾರವನ್ನು ಅಭಿವೃದ್ಧಿ ಮಾಡಲು ವಿಫಲರಾದ ಮೋದಿ ಈಗ ಹಣದ ಆಮಿಷವೊಡ್ಡುತ್ತಿದ್ದಾರೆ, ಎಂದು ಟೀಕಿಸಿದರು.

Read Full Story

11:10 PM (IST) Oct 15

Amruthadhaare Serial - ಆ ಪುಟಾಣಿ ಮಾತಿಗೆ ಬೆಚ್ಚಿಬಿದ್ದ ಗೌತಮ್; ಅದೃಷ್ಟದೇವತೆ ಪವಾಡದಿಂದ ದಿಗ್ಭ್ರಮೆ

‌Amruthadhaare Kannada Tv Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೊಮ್ಮೆ ಭೂಮಿಕಾ ಹಾಗೂ ಗೌತಮ್‌ ಭೇಟಿಯಾಗಿದೆ. ಇದನ್ನೇ ಅವನು ಬಯಸುತ್ತಿದ್ದನು. ಈಗ ಆ ಹುಡುಗಿ ಕೂಡ ಅವನಿಗೆ ಶಾಕ್‌ ನೀಡುವ ಮಾತು ಆಡಿದ್ದಾಳೆ. ಹಾಗಾದರೆ ಏನದು? 

Read Full Story

11:04 PM (IST) Oct 15

5 ಕೋಟಿಗೆ ಟಿಕೆಟ್‌ ಮಾರಾಟ, ಕಾಂಗ್ರೆಸ್‌ ರಾಜ್ಯಾಧ್ಯಕ್ಷನ ಎದುರಲ್ಲೇ ಪಾಟ್ನಾ ಏರ್‌ಪೋರ್ಟ್‌ನಲ್ಲಿ ಕಾರ್ಯಕರ್ತರ ಹೊಡೆದಾಟ!

Congress Workers Clash with Leaders at Patna Airport ಬಿಹಾರ ಚುನಾವಣೆಗೆ ಮಹಾಮೈತ್ರಿಕೂಟದೊಳಗಿನ ಸೀಟು ಹಂಚಿಕೆ ವಿವಾದ ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಬುಧವಾರ ದೆಹಲಿಯಿಂದ ಪಾಟ್ನಾಗೆ ಹಿಂತಿರುಗುತ್ತಿದ್ದ ಕಾಂಗ್ರೆಸ್ ನಾಯಕರ ಮೇಲೆ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರೇ ಹಲ್ಲೆ ನಡೆಸಿದ್ದಾರೆ.

 

Read Full Story

10:49 PM (IST) Oct 15

ಸೊಸಿ ಚೆಂದ ಇರೋದು ಬೇಡ್ರಿ ಎಂದ Bigg Boss ಮಲ್ಲಮ್ಮ! ಕಾರಣ ಕೇಳಿ, ನಿಮ್​ ಲೆವೆಲ್ಲೇ ಬೇರೆ ಬಿಡಿ ಎಂದ ಫ್ಯಾನ್ಸ್​

ಬಿಗ್ ಬಾಸ್ ಸ್ಪರ್ಧಿ ಮಲ್ಲಮ್ಮ ತಮ್ಮ ಮುಗ್ಧ ಮಾತುಗಳಿಂದ ಸದ್ದು ಮಾಡುತ್ತಿದ್ದಾರೆ. ಇದೀಗ ತಮ್ಮ ಭಾವಿ ಸೊಸೆ ಹೇಗಿರಬೇಕು ಎಂಬುದರ ಬಗ್ಗೆ ಮಾತನಾಡಿದ್ದು, ಅದನ್ನು ಕೇಳಿ ಅವರ ಅಭಿಮಾನಿಗಳು ಬಿದ್ದೂ ಬಿದ್ದೂ ನಗ್ತಿದ್ದಾರೆ. ನಿಮ್ಮ ಲೆವೆಲ್ಲೇ ಬೇರೆ ಬಿಡಿ ಅಂತಿದ್ದಾರೆ. ಅಷ್ಟಕ್ಕೂ ಮಲ್ಲಮ್ಮ ಹೇಳಿದ್ದೇನು? 

Read Full Story

10:46 PM (IST) Oct 15

ವಿಜಯಪುರ - ಮದ್ಯ ಸೇವಿಸಿದ ಬಳಿಕ ಮೂವರ ನಡುವೆ ಜಗಳ - ಇಬ್ಬರು ಸೇರಿ ಓರ್ವನ ಹತ್ಯೆ!

Sindagi Road murder incident: ವಿಜಯಪುರದ ಸಿಂದಗಿ ರಸ್ತೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಮೂವರು ಯುವಕರ ನಡುವೆ ಜಗಳ ಉಂಟಾಗಿ, ಇಬ್ಬರು ಸೇರಿ ಒಬ್ಬನನ್ನು ಇಟ್ಟಿಗೆಯಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ.  ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Read Full Story

09:50 PM (IST) Oct 15

ಈ ಆತ್ಮ ಪದೇ ಪದೇ ಬೆಡ್‌ರೂಮ್‌ಗೇ ಯಾಕೆ ಬರತ್ತೆ? ಗಂಡ- ಹೆಂಡತಿ ಸಂಸಾರ ಮಾಡೋದಾದ್ರೂ ಹೇಗಪ್ಪಾ? ಫ್ಯಾನ್ಸ್​ ಚಿಂತೆ

ಜೀ ಕನ್ನಡದ 'ನಾ ನಿನ್ನ ಬಿಡಲಾರೆ' ಸೀರಿಯಲ್‌ನಲ್ಲಿ, ಅಂಬಿಕಾ ಆತ್ಮವು ತನ್ನ ತಂಗಿ ದುರ್ಗಾ ಮತ್ತು ಗಂಡ ಶರತ್‌ರನ್ನು ಒಂದು ಮಾಡಲು ಪ್ರಯತ್ನಿಸುತ್ತಿದೆ. ಆದ್ರೆ ಈ ಆತ್ಮ ಗಂಡ-ಹೆಂಡತಿ ಎಲ್ಲಿ ಹೋದ್ರೂ ಹಿಂಬಾಲಿಸತ್ತೆ, ಬೆಡ್​ರೂಮ್​ಗೂ ಹೋಗತ್ತೆ ಎನ್ನೋ ಬೇಸರ ಸೀರಿಯಲ್​ ಫ್ಯಾನ್ಸ್​ಗೆ. 

Read Full Story

09:49 PM (IST) Oct 15

ಬಾಲಿವುಡ್‌ ಸಿನಿಮಾ ರೇಂಜಲ್ಲಿತ್ತು ಕೃತಿಕಾ-ಮಹೇಂದ್ರ ರೆಡ್ಡಿ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌, ಗಂಡನ ಮಸಲತ್ತು ಆಕೆಗೆ ತಿಳಿಯಲೇ ಇಲ್ಲ!

Kashmir Pre Wedding Shoot Surfaces After Mahendra Reddy Arrest ಬೆಂಗಳೂರಿನ ವೈದ್ಯೆ ಕೃತಿಕಾ ರೆಡ್ಡಿ ಅವರದ್ದು ಅಸಹಜ ಸಾವಲ್ಲ, ಬದಲಾಗಿ ಕೊಲೆ ಎಂದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಈ ನಡುವೆ, ಕಾಶ್ಮೀರದಲ್ಲಿ ನಡೆದಿದ್ದ ಈ ಜೋಡಿಯ ಅದ್ದೂರಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ವೈರಲ್ ಆಗಿದೆ.

Read Full Story

09:38 PM (IST) Oct 15

ಚಿತ್ರದುರ್ಗ - ಜಾತಿ ಗಣತಿಗೆ ತೆರಳಿದ್ದ ಶಿಕ್ಷಕರಿಬ್ಬರು ಅಪಘಾತದಲ್ಲಿ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

Teachers injured during survey duty: ರಾಜ್ಯ ಸರ್ಕಾರದ ವಿವಾದಾತ್ಮಕ ಸಾಮಾಜಿಕ ಸಮೀಕ್ಷೆಯು ಶಿಕ್ಷಕರಿಗೆ ಅಪಾಯಕಾರಿಯಾಗಿದ್ದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಗಣತಿ ಕಾರ್ಯ ಮುಗಿಸಿ ಹಿಂದಿರುಗುತ್ತಿದ್ದ ಇಬ್ಬರು ಶಿಕ್ಷಕರು ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Read Full Story

09:35 PM (IST) Oct 15

ಸೀರಿಯಲ್‌ ಬಿಟ್ಟು ಹೋಗ್ತಿರೋ Bhagyalakshmi ಪೂಜಾಗೆ ಆ್ಯಕ್ಸಿಡೆಂಟ್‌ ಆಗೋಯ್ತು! ಇದ್ಯಾವ ನ್ಯಾಯ?

'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಾದ ಪೂಜಾ ಪಾತ್ರಧಾರಿ ಆಶಾ ಅಯ್ಯನಾರ್ ಸೀರಿಯಲ್‌ನಿಂದ ಹೊರನಡೆದಿದ್ದಾರೆ. ಕಥೆಯಲ್ಲಿ ಪೂಜಾಗೆ ಅಪಘಾತವಾಗುವ ಮೂಲಕ ಹೊಸ ಟ್ವಿಸ್ಟ್ ನೀಡಲಾಗಿದ್ದು, ಅನಿವಾರ್ಯ ಕಾರಣಗಳಿಂದ ಧಾರಾವಾಹಿ ತೊರೆಯುತ್ತಿರುವುದಾಗಿ ನಟಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
Read Full Story

09:06 PM (IST) Oct 15

ತಾಲಿಬಾನ್‌ಗೆ ಮಂಡಿಯೂರಿದ ಮುನೀರ್ ಸೈನ್ಯ, ಕದನ ವಿರಾಮಕ್ಕೆ ಪಾಕಿಸ್ತಾನ ಮನವಿ

Pak Afghan temporary ceasefire: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ತೀವ್ರ ಗಡಿ ಘರ್ಷಣೆಗಳ ನಂತರ, ಪಾಕಿಸ್ತಾನದ ಕೋರಿಕೆಯ ಮೇರೆಗೆ 48 ಗಂಟೆಗಳ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಲಾಗಿದೆ. ಈ ನಿರ್ಧಾರವು ಪಾಕಿಸ್ತಾನವು ತಾಲಿಬಾನ್ ನೆಲೆಗಳ ಮೇಲೆ ವಾಯುದಾಳಿ ನಡೆಸಿದ ನಂತರ ಬಂದಿದೆ.

Read Full Story

09:04 PM (IST) Oct 15

ಮಗಳು ಕೃತಿಕಾ ರೆಡ್ಡಿಯನ್ನು ಅಳಿಯ ಕೊಂದಿದ್ದು ಹೇಗೆ? ಪಿನ್‌ ಟು ಪಿನ್‌ ಮಾಹಿತಿ ನೀಡಿದ ಅಪ್ಪ ಮುನಿರೆಡ್ಡಿ

Kritika Reddy Murder Father Munireddy Details How Son-in-Law Killed Her with IV/Cannula ವೈದ್ಯೆ ಕೃತಿಕಾ ರೆಡ್ಡಿ ಅವರ ತಂದೆ ಮುನಿರೆಡ್ಡಿ, ತಮ್ಮ ಅಳಿಯ ಮಹೇಂದ್ರ ರೆಡ್ಡಿ ಇಂಜೆಕ್ಷನ್‌ ನೀಡಿ ಮಗಳನ್ನು ಕೊಂದಿರುವ ಇಂಚಿಂಚು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Read Full Story

08:14 PM (IST) Oct 15

108 ಆಂಬುಲೆನ್ಸ್ ಸೇವೆ ಸರ್ಕಾರದ ನಿಯಂತ್ರಣಕ್ಕೆ - ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಹೇಳಿಕೆ!

Dinesh Gundu Rao on ambulance service: ಖಾಸಗಿ ಏಜೆನ್ಸಿಗಳ ಗೊಂದಲಗಳನ್ನು ನಿವಾರಿಸಲು ಕರ್ನಾಟಕದ 108 ಆಂಬುಲೆನ್ಸ್ ಸೇವೆಯನ್ನು ಎರಡು ತಿಂಗಳೊಳಗೆ ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Read Full Story

07:19 PM (IST) Oct 15

ಆಳಂದ ಮತಗಳ್ಳತನ ಪ್ರಕರಣ - ಕಲ್ಬುರ್ಗಿ ನಗರದ 5 ಕಡೆ SIT ದಾಳಿ, ಹಲವರು ವಶಕ್ಕೆ!

SIT Raids 5 Locations in Kalaburagi Over Aland Vote Theft Case: ಕಲ್ಬುರ್ಗಿ ಜಿಲ್ಲೆ ಆಳಂದ ಕ್ಷೇತ್ರದ ಮತಗಳ್ಳತನ ಪ್ರಕರಣಕ್ಕೆ ಸಂಬಂಧ ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ. ರಾಜ್ಯ ಸರ್ಕಾರದ ಆದೇಶದ ಮೇರೆಗೆ, ಕಲ್ಬುರ್ಗಿ ನಗರದ 5 ಕಡೆ ದಾಳಿ ನಡೆಸಿ, ಹಲವರನ್ನು ವಶಕ್ಕೆ ಪಡೆದಿದೆ.

Read Full Story

07:08 PM (IST) Oct 15

ಗುಡ್ಡದ ಮೇಲೆ ಹಾಕುವ ವಿಂಡ್ ಫ್ಯಾನ್ ರೆಕ್ಕೆ-ಕಂಬ ಕೊಪ್ಪಳದಲ್ಲಿಯೇ ಉತ್ಪಾದನೆ; ₹400 ಕೋಟಿ ಹೂಡಿಕೆ!

ಪವನ ವಿದ್ಯುತ್‌ ಕ್ಷೇತ್ರದ ಪ್ರಮುಖ ಕಂಪನಿ ಐನಾಕ್ಸ್‌ವಿಂಡ್‌, ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ₹400 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಈ ಯೋಜನೆಯಡಿ ದೈತ್ಯಾಕಾರದ ಬ್ಲೇಡ್‌ಗಳು ಮತ್ತು ಗೋಪುರಗಳನ್ನು ಉತ್ಪಾದಿಸಲಾಗುವುದು, ಇದರಿಂದಾಗಿ ನೇರವಾಗಿ 1,000 ಉದ್ಯೋಗಗಳು ಸೃಷ್ಟಿಯಾಗಲಿವೆ.
Read Full Story

06:55 PM (IST) Oct 15

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ಗಿಫ್ಟ್; ಶೇ.2 ತುಟ್ಟಿ ಭತ್ಯೆ ಹೆಚ್ಚಳ! ಜುಲೈನಿಂದ ಪೂರ್ವಾನ್ವಯ!

ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ಸಿಹಿಸುದ್ದಿ ನೀಡಿದೆ. ಪ್ರಸ್ತುತ ಮೂಲ ವೇತನದ ಶೇ. 12.25ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇ. 14.25ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಹೆಚ್ಚಳವು 2025ರ ಜುಲೈ 1 ರಿಂದ ಜಾರಿಗೆ ಬರಲಿದೆ.
Read Full Story

06:41 PM (IST) Oct 15

ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣ, ಮಗಳಿದ್ದ ಮಾರತಹಳ್ಳಿಯ ಮನೆಯನ್ನು ಇಸ್ಕಾನ್‌ಗೆ ದಾನ ಮಾಡಿದ ತಂದೆ!

Doctor Kritika Reddy Murder Father Donates Marathahalli House to ISKCON After FSL Report ಮಗಳ ಸಾವಿನಿಂದ ನೊಂದ ತಂದೆ, ಆಕೆಯ ನೆನಪಿರುವ ಮನೆಯನ್ನು ಇಸ್ಕಾನ್‌ಗೆ ದಾನ ಮಾಡಲು ನಿರ್ಧರಿಸಿದ್ದಾರೆ.

Read Full Story

06:35 PM (IST) Oct 15

ದಲಿತರು ಬೌದ್ಧ ಧರ್ಮಕ್ಕೆ ಹೋದರೆ ಮತಾಂತರ ಅಲ್ಲ - ಹೆಚ್‌ಸಿ ಮಹದೇವಪ್ಪ ಭಾಷಣ

HC Mahadevappa speech on Dalits: ಮೈಸೂರಿನಲ್ಲಿ ನಡೆದ ಬೌದ್ಧ ಸಮಾವೇಶದಲ್ಲಿ ಮಾತನಾಡಿದ ಸಚಿವ ಹೆಚ್.ಸಿ. ಮಹದೇವಪ್ಪ, ದಲಿತರು ಬೌದ್ಧ ಧರ್ಮಕ್ಕೆ ಹೋಗುವುದು ಮತಾಂತರವಲ್ಲ, ಅದು ಸ್ವಾತಂತ್ರ್ಯದ ಸಂಕೇತ ಎಂದರು. ಹೊಲೆಯ, ಮಾದಿಗ ಪದ ಬಳಕೆಯನ್ನು ನಿಲ್ಲಿಸುವಂತೆ ಕರೆ ನೀಡಿದ 

Read Full Story

06:18 PM (IST) Oct 15

ತಿರುಮಲದಲ್ಲಿ ದೀಪಾವಳಿ-ಪುಷ್ಪಯಾಗ ಸಂಭ್ರಮ - ಈ ದಿನ ಟಿಟಿಡಿ ಹಲವು ಆರ್ಜಿತ ಸೇವೆಗಳು ರದ್ದು!

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದೀಪಾವಳಿ ಮತ್ತು ಪುಷ್ಪಯಾಗ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದೆ. ಈ ವಿಶೇಷ ಪೂಜೆಗಳಿಂದಾಗಿ, ಟಿಟಿಡಿ ಹಲವು ಆರ್ಜಿತ ಸೇವೆಗಳನ್ನು ರದ್ದುಗೊಳಿಸಿದ್ದು, ಸರ್ವ ದರ್ಶನಕ್ಕೆ 12-14 ಗಂಟೆಗಳ ಕಾಲ ಕಾಯಬೇಕಾಗಿದೆ.
Read Full Story

05:52 PM (IST) Oct 15

ಕೋಲಾರ - ಶಿಕ್ಷಕಿ ಅಕ್ತರ್ ಬೇಗಂ ನಿಗೂಢ ಸಾವು, ಸಮೀಕ್ಷೆ ಒತ್ತಡಕ್ಕೆ ಸಂಬಂಧವಿಲ್ಲ - ಜಿಲ್ಲಾಧಿಕಾರಿ

Survey work pressure on teachers?: ಕೋಲಾರದಲ್ಲಿ ಸರ್ಕಾರಿ ಶಾಲಾ ಶಿಕ್ಷಕಿ ಅಕ್ತರ್ ಬೇಗಂ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯು ಸಮೀಕ್ಷೆಯ ಒತ್ತಡದಿಂದ ನಡೆದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದು, ಅವರು ಮನೆಯಿಂದ ಸಮೀಕ್ಷೆಯ ಬ್ಯಾಗ್ ತೆಗೆದುಕೊಂಡು ಹೋಗಿರಲಿಲ್ಲ ಎಂದು ತಿಳಿಸಿದ್ದಾರೆ.

Read Full Story

05:18 PM (IST) Oct 15

'ಬಿಜೆಪಿಯವ್ರು ಯಾವಾಗ್ಲೂ ಧಮ್ಮಿದ್ರೆ ಬ್ಯಾನ್ ಮಾಡಿ ಅಂತಾರೆ..' ಆರೆಸ್ಸೆಸ್ ಚಟುವಟಿಕೆ ನಿಷೇಧಕ್ಕೆ ಸಿಎಂ ಪರೋಕ್ಷ ಸುಳಿವು!

CM Siddaramaiah on RSS activities: ಪ್ರಿಯಾಂಕ ಖರ್ಗೆಗೆ ಬಂದ ಬೆದರಿಕೆಗಳಿಗೆ ಜಗ್ಗುವುದಿಲ್ಲ ಎಂದ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಮಾದರಿಯಲ್ಲಿ ಕರ್ನಾಟಕದ ಸರ್ಕಾರಿ ಜಾಗಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿರುವುದಾಗಿ ಸುಳಿವು ನೀಡಿದ್ದಾರೆ.

Read Full Story

05:03 PM (IST) Oct 15

ಬೆಂಗಳೂರು ಗ್ಯಾಸ್ಟ್ರಿಕ್ ಹೆಂಡ್ತಿಗೆ ಹೈಡೋಸ್ ಅನಸ್ತೇಶಿಯಾ ಕೊಟ್ಟ ಡಾಕ್ಟರ್ ಗಂಡ; FSL ವರದಿ ಬಿಚ್ಚಿಟ್ಟ ಪೊಲೀಸರು!

ಬೆಂಗಳೂರಿನ ವೈದ್ಯ ದಂಪತಿಯ 11 ತಿಂಗಳ ದಾಂಪತ್ಯವು ಪತ್ನಿಯ ಸಾವಿನೊಂದಿಗೆ ದುರಂತ ಅಂತ್ಯ. ಆರಂಭದಲ್ಲಿ ಸಹಜ ಸಾವು ಎಂದು ಭಾವಿಸಲಾಗಿದ್ದ ಈ ಪ್ರಕರಣ, ಎಫ್‌ಎಸ್‌ಎಲ್ ವರದಿಯಿಂದ ಕೊಲೆ ಎಂದು ಸಾಬೀತು. ಪತಿಯೇ ಪತ್ನಿಗೆ ಅನಸ್ತೇಶಿಯಾ ಓವರ್‌ಡೋಸ್ ನೀಡಿ ಕೊಲೆ ಮಾಡಿರುವುದು ಬಯಲು.

Read Full Story

05:01 PM (IST) Oct 15

ಕೊನೆಗೂ ಪತಿದೇವನ ಫೋಟೋ ರಿವೀಲ್ ಮಾಡಿದ ಪದ್ಮಾವತಿ..! ಇವರೇ ನೋಡಿ ಭಾವಿ ಪತಿ

Deepthi Manne marriage: 'ಪದ್ಮಾವತಿ' ಧಾರಾವಾಹಿ ಖ್ಯಾತಿಯ ನಟಿ ದೀಪ್ತಿ ಮಾನೆ, ತಮ್ಮ ಭಾವಿ ಪತಿ ರೋಹನ್ ಅವರನ್ನು ಅಭಿಮಾನಿಗಳಿಗೆ ಅಧಿಕೃತವಾಗಿ ಪರಿಚಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ.

Read Full Story

04:48 PM (IST) Oct 15

ಭಾರತದಲ್ಲಿ ಬೌದ್ಧ ಧರ್ಮ ಬೆಳೆಯಲು ಮನುವಾದಿಗಳು ಬಿಡಲಿಲ್ಲ - ಸತೀಶ್ ಜಾರಕಿಹೊಳಿ ಕಿಡಿ

ಡಾ. ಬಿ.ಆರ್. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕಾರದ 70ನೇ ವರ್ಷದ ಸ್ಮರಣಾರ್ಥ ಮೈಸೂರಿನಲ್ಲಿ ಬೌದ್ಧ ಮಹಾ ಸಮ್ಮೇಳನ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಈ ಸಮಾರಂಭದಲ್ಲಿ, ಸಚಿವ ಸತೀಶ್ ಜಾರಕಿಹೊಳಿ ಅವರು ಭಾರತದಲ್ಲಿ ಬೌದ್ಧ ಧರ್ಮದ ಬೆಳವಣಿಗೆಯನ್ನು ಮನುವಾದಿಗಳು ತಡೆದರು ಎಂದು ಆರೋಪಿಸಿದರು.

Read Full Story

04:26 PM (IST) Oct 15

'ಸಂವಿಧಾನ ತಿಳಿಯದ ಅಜ್ಞಾನಿಗಳು..' ಖರ್ಗೆ, ದಿನೇಶ್ ಗುಂಡೂರಾವ್ ವಿರುದ್ಧ ಸಿಟಿ ರವಿ ವಾಗ್ದಾಳಿ

Priyank Kharge letter to CM:ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ ನಿಷೇಧಕ್ಕೆ ಪತ್ರ ಬರೆದಿದ್ದಕ್ಕೆ ಚಿಕ್ಕಮಗಳೂರಲ್ಲಿ  ಸಿ.ಟಿ. ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖರ್ಗೆಗೆ ‘ಸಂವಿಧಾನ ತಿಳಿಯದ ಅಜ್ಞಾನಿ’ ಎಂದರು. ಸಂವಿಧಾನದ ಆರ್ಟಿಕಲ್ 19 ಸಂಘಟನೆ ಕಟ್ಟುವ ಹಕ್ಕನ್ನು ನೀಡಿದೆ ಎಂದರು.

Read Full Story

03:57 PM (IST) Oct 15

ನಟಿ ನಿವೇದಿತಾ ಗೌಡ ಡಿವೋರ್ಸ್ ನಂತರ ಮತ್ತೆ ಮದುವೆ, ಚಂದನ್ ಶೆಟ್ಟಿಯೊಂದಿಗಿನ ಸಂಬಂಧವೂ ರಿವೀಲ್!

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಚಂದನ್ ಶೆಟ್ಟಿ ಜೊತೆಗಿನ ವಿಚ್ಛೇದನದ ನಂತರ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮೌನ ಮುರಿದಿದ್ದಾರೆ. ಮತ್ತೆ ಮದುವೆಯಾಗಲು ಭಯವಿದೆ ಎಂದಿರುವ ಅವರು, ತಾವು ಮಾಡಿದ ತಪ್ಪನ್ನು ಪುನರಾವರ್ತಿಸುವುದಿಲ್ಲ ಎಂದಿದ್ದಾರೆ. ಚಂದನ್ ಜೊತೆಗಿನ ಸಂಬಂಧದ ಬಗ್ಗೆ ತಿಳಿಸಿದ್ದಾರೆ.

Read Full Story

03:06 PM (IST) Oct 15

ಗ್ಯಾಸ್ಟ್ರಿಕ್ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಹೆಂಡತಿಗೆ ಇಂಜೆಕ್ಷನ್ ಕೊಟ್ಟು ಕೊಲೆಗೈದ ಡಾಕ್ಟರ್ ಗಂಡ!

ಬೆಂಗಳೂರಿನಲ್ಲಿ, ವೈದ್ಯ ಪತಿಯೊಬ್ಬ ತನ್ನ ಪತ್ನಿಯ ಆರೋಗ್ಯ ಸಮಸ್ಯೆಗಳಿಂದ ಬೇಸತ್ತು, ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾನೆ. ಸಹಜ ಸಾವು ಎಂದು ಬಿಂಬಿಸಲಾಗಿದ್ದ ಈ ಕೃತ್ಯವು, 6 ತಿಂಗಳ ನಂತರ ಎಫ್‌ಎಸ್‌ಎಲ್ ವರದಿಯಿಂದ ಬಯಲಾಗಿದ್ದು, ಮಾರತ್ ಹಳ್ಳಿ ಪೊಲೀಸರು ಆರೋಪಿ ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.
Read Full Story

02:55 PM (IST) Oct 15

ಖ್ಯಾತ ಕೊಳಲು ವಾದಕಿ ಜೊತೆ ಸಿಂಗರ್ ರಘು ದೀಕ್ಷಿತ್ ಎರಡನೇ ಮದುವೆ

Raghu Dixit flautist Varijashree Venugopal: ಖ್ಯಾತ ಕನ್ನಡ ಗಾಯಕ ಮತ್ತು ಸಂಗೀತ ಸಂಯೋಜಕ ರಘು ದೀಕ್ಷಿತ್, ತಮ್ಮ ಮೊದಲ ಪತ್ನಿ ಮಯೂರಿಯಿಂದ ವಿಚ್ಛೇದನ ಪಡೆದ ನಂತರ ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. 

Read Full Story

02:44 PM (IST) Oct 15

ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಹರಿದು 9 ವರ್ಷದ ಬಾಲಕಿ ದುರ್ಮರಣ; ಮುಗಿಲು ಮುಟ್ಟಿದ ಆಕ್ರಂದನ

ಬೆಂಗಳೂರಿನ HAL ರಸ್ತೆಯ ಶಿವಲಿಂಗಯ್ಯ ಕಾಲೋನಿಯಲ್ಲಿ, ಚಾಲಕನ ನಿರ್ಲಕ್ಷ್ಯದಿಂದ ವಾಟರ್ ಟ್ಯಾಂಕರ್ ಹಿಮ್ಮುಖವಾಗಿ ಚಲಿಸುವಾಗ 9 ವರ್ಷದ ಅನುಶ್ರೀ ಎಂಬ ಬಾಲಕಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯ ನಂತರ ಚಾಲಕ ಪರಾರಿಯಾಗಿದ್ದಾನೆ.

Read Full Story

02:03 PM (IST) Oct 15

ಪೇಟಾ ಅರ್ಜಿ ವಿಚಾರಣೆ - ವಿವಿಧೆಡೆ ಕಂಬಳಕ್ಕೆ ಅನುಮತಿ ಸರ್ಕಾರಕ್ಕೆ ಬಿಟ್ಟ ಹೈಕೋರ್ಟ್‌

ರಾಜ್ಯದ ಕೆಲ ಜಿಲ್ಲೆಗಳ ಅಥವಾ ನಿರ್ದಿಷ್ಟ ಭೌಗೋಳಿಕ ಪ್ರದೇಶದ ಸಾಂಪ್ರದಾಯಿಕ ಆಚರಣೆಗಳು ಇಡೀ ರಾಜ್ಯದ ಸಂಪ್ರದಾಯವಾಗಿರಲಿದೆ. ನಿರ್ದಿಷ್ಟ ಪ್ರದೇಶದಲ್ಲಷ್ಟೇ ಆ ಸಂಪ್ರದಾಯ ಆಚರಿಸಲಾಗುತ್ತದೆ.

Read Full Story

01:41 PM (IST) Oct 15

ಶ್ರೀಕಾಂತ್ ಸಿನಿಮಾದ ಸೆಟ್‌ಗೆ ಹೋಗಿ ಗಲಾಟೆ ಮಾಡಿದ ಬಾಲಯ್ಯ.. ಎಲ್ಲರ ಮುಂದೆ ನಿರ್ದೇಶಕರಿಗೆ ವಾರ್ನಿಂಗ್!

ನಂದಮೂರಿ ನಟಸಿಂಹ ಬಾಲಕೃಷ್ಣ.. ಶ್ರೀಕಾಂತ್ ನಾಯಕರಾಗಿ ನಟಿಸಿದ 'ಜಂತರ್ ಮಂತರ್' ಸಿನಿಮಾ ಸೆಟ್‌ಗೆ ಹೋಗಿದ್ದರು. ಅಲ್ಲಿ ದೊಡ್ಡ ಗಲಾಟೆ ಮಾಡಿದ್ದಾರೆ. ಆ ಚಿತ್ರದ ನಿರ್ದೇಶಕರಿಗೆ ಎಲ್ಲರ ಮುಂದೆ ವಾರ್ನಿಂಗ್ ಕೊಟ್ಟರಂತೆ.

 

Read Full Story

01:31 PM (IST) Oct 15

ಬಿಬಿಎಂಪಿಯಿಂದ ಐತಿಹಾಸಿಕ 'ಖಾತಾ' ಪರಿವರ್ತನೆ ಯೋಜನೆ - 7.5 ಲಕ್ಷ ಬಿ-ಖಾತಾ ಸೈಟ್‌ಗಳಿಗೆ ಎ-ಖಾತಾ ಭಾಗ್ಯ

ಬೆಂಗಳೂರಿನಲ್ಲಿ 7.5 ಲಕ್ಷಕ್ಕೂ ಹೆಚ್ಚು ಬಿ-ಖಾತಾ ಸೈಟ್‌ಗಳನ್ನು ಎ-ಖಾತಾ ಆಗಿ ಪರಿವರ್ತಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 'ಒಂದು-ಬಾರಿ-ಇತ್ಯರ್ಥ' ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯು ನಿಗದಿತ ಶುಲ್ಕ ಪಾವತಿಯೊಂದಿಗೆ ಅರ್ಜಿ ಸಲ್ಲಿಸಿ, ನಿವೇಶನಗಳನ್ನು ಕಾನೂನುಬದ್ಧಗೊಳಿಸಲು ಅವಕಾಶ.

Read Full Story

01:15 PM (IST) Oct 15

ಕೊಡಗು ಜಿಲ್ಲೆಯಾದ್ಯಂತ ಏಕಕಾಲಕ್ಕೆ ಸ್ವಚ್ಛತಾ ಅಭಿಯಾನ - 320ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಭಾಗಿ

ಪ್ರಕೃತಿಯ ತಾಣ ಕೊಡಗು ಜಿಲ್ಲೆಯನ್ನು ಮತ್ತಷ್ಟು ಸ್ವಚ್ಛಗೊಳಿಸಬೇಕೆಂಬ ದೃಷ್ಟಿಯಿಂದ ಇಂದು ಸ್ವಚ್ಛ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ಇಡೀ ಜಿಲ್ಲೆಯಲ್ಲಿ ಏಕಕಾಲಕ್ಕೆ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

Read Full Story

12:52 PM (IST) Oct 15

ಹಾಸ್ಯ ನಟ ಬ್ರಹ್ಮಾನಂದಂರನ್ನು ಕಡೆಗಣಿಸಿ ದೊಡ್ಡ ಹೊಡೆತ ತಿಂದ ವಿಜಯಶಾಂತಿ.. ಯಾವುದು ಆ ಸಿನಿಮಾ?

ಲೇಡಿ ಅಮಿತಾಭ್ ವಿಜಯಶಾಂತಿ 1993-95ರ ನಡುವೆ ಸತತ ಫ್ಲಾಪ್‌ಗಳನ್ನು ಕಂಡರು. ಅದು ಅವರಿಗೆ ಕೆಟ್ಟ ಸಮಯವಾಗಿತ್ತು. ಆ ಸಮಯದಲ್ಲಿ ಬ್ರಹ್ಮಾನಂದಂ ಕೂಡ ಅವರಿಗೆ ದೊಡ್ಡ ಹೊಡೆತ ನೀಡಿದ್ದು ವಿಶೇಷ.

 

Read Full Story

12:40 PM (IST) Oct 15

ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಿಂಗ್ ಮಾರ್ಕ್ಸ್ ಶೇ.33ಕ್ಕೆ ಇಳಿಕೆ; 2025-26ರಿಂದಲೇ ಹೊಸ ಮಾನದಂಡ ಜಾರಿ

ಕರ್ನಾಟಕ ಸರ್ಕಾರವು 2025-26ನೇ ಸಾಲಿನಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಉತ್ತೀರ್ಣತಾ ಅಂಕವನ್ನು ಶೇ. 35 ರಿಂದ ಶೇ. 33ಕ್ಕೆ ಇಳಿಸಲು ನಿರ್ಧರಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಘೋಷಣೆ ಮಾಡಿದ್ದು, ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣ ಹೆಚ್ಚಿಸುವುದು ಇದರ ಉದ್ದೇಶವಾಗಿದೆ.

Read Full Story

12:02 PM (IST) Oct 15

ನಟ ದರ್ಶನ್‌ಗೆ ಮತ್ತೆ ಬೆನ್ನುನೋವು ಕಾಟ - ಜೈಲಿನಿಂದ ಹೊರಬರಲು ಜಾಮೀನು ಕಸರತ್ತಿಗೆ 'ಹಳೆಯ ವರಸೆ'?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ಗೆ ಮತ್ತೆ ಬೆನ್ನುನೋವು ಮತ್ತು ಮೊಣಕೈ ನೋವು ಕಾಣಿಸಿಕೊಂಡಿದೆ. ವೈದ್ಯರು ಫಿಜಿಯೋಥೆರಪಿ ಸಲಹೆ ನೀಡಿದ್ದು, ಈ ಹಿಂದೆ ಇದೇ ರೀತಿ ಆರೋಗ್ಯದ ಕಾರಣ ನೀಡಿ ಜಾಮೀನು ಪಡೆದಿದ್ದರಿಂದ, ಇದು ಮತ್ತೊಂದು ಜಾಮೀನು ತಂತ್ರವಿರಬಹುದು ಎನ್ನಲಾಗುತ್ತಿದೆೆ.

Read Full Story

11:56 AM (IST) Oct 15

ಅಧಿಕಾರ ಹಂಚಿಕೆ ಹೇಳಿಕೆಗಳಿಂದ ಪಕ್ಷಕ್ಕೆ ತೀವ್ರ ಹಾನಿ - ಸಚಿವ ರಾಮಲಿಂಗಾರೆಡ್ಡಿ

ಮುಖ್ಯಮಂತ್ರಿ ಆಗಲು ಹೈಕಮಾಂಡ್‌ ಬೆಂಬಲ ಬೇಕು ಅಥವಾ ಶಾಸಕರ ಬೆಂಬಲ ಬೇಕೆನ್ನುವ ಹೇಳಿಕೆ ಸೇರಿ ಅಧಿಕಾರ ಹಂಚಿಕೆ ಮತ್ತಿತರ ಹೇಳಿಕೆಗಳಿಂದ ಪಕ್ಷಕ್ಕೆ ತೀವ್ರ ಹಾನಿ ಆಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Read Full Story

11:38 AM (IST) Oct 15

ಮರಳು ದಂಧೆಕೋರರಿಂದ ಎಎಸ್‌ಐ ಕಿಡ್ನಾಪ್, ಅಂಗಲಾಚಿ ಬಿಡಿಸಿಕೊಂಡ ಖಾಕಿ - ರಾಜೂಗೌಡ ಆರೋಪ

ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಕಾನೂನು ಸುವ್ಯವಸ್ಥೆ ತೀರ ಹದಗೆಟ್ಟಿದ್ದು, ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿ ಜನಸಾಮಾನ್ಯರು ಆತಂಕದಲ್ಲಿದ್ದಾರೆ ಎಂದು ಮಾಜಿ ಸಚಿವ ನರಸಿಂಹ ನಾಯಕ್‌ (ರಾಜೂಗೌಡ) ಆರೋಪಿಸಿದ್ದಾರೆ.

Read Full Story

More Trending News