MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • ಕೊನೆಗೂ ಪತಿದೇವನ ಫೋಟೋ ರಿವೀಲ್ ಮಾಡಿದ ಪದ್ಮಾವತಿ..! ಇವರೇ ನೋಡಿ ಭಾವಿ ಪತಿ

ಕೊನೆಗೂ ಪತಿದೇವನ ಫೋಟೋ ರಿವೀಲ್ ಮಾಡಿದ ಪದ್ಮಾವತಿ..! ಇವರೇ ನೋಡಿ ಭಾವಿ ಪತಿ

Deepthi Manne marriage: 'ಪದ್ಮಾವತಿ' ಧಾರಾವಾಹಿ ಖ್ಯಾತಿಯ ನಟಿ ದೀಪ್ತಿ ಮಾನೆ, ತಮ್ಮ ಭಾವಿ ಪತಿ ರೋಹನ್ ಅವರನ್ನು ಅಭಿಮಾನಿಗಳಿಗೆ ಅಧಿಕೃತವಾಗಿ ಪರಿಚಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ.

2 Min read
Author : Anusha Kb
Published : Oct 15 2025, 05:01 PM IST
Share this Photo Gallery
  • FB
  • TW
  • Linkdin
  • Whatsapp
111
ಭಾವಿ ಪತಿಯ ಪರಿಚಯಿಸಿದ ಪದ್ಮಾವತಿ
Image Credit : instagram

ಭಾವಿ ಪತಿಯ ಪರಿಚಯಿಸಿದ ಪದ್ಮಾವತಿ

ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ಪದ್ಮಾವತಿ ಧಾರಾವಾಹಿಯ ತುಳಸಿ ತಾವು ಲವ್ವಲ್ಲಿ ಇರೋದಾಗಿ ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಅವರು ತಾವು ಮದ್ವೆಯಾಗ್ತಿರುವ ಹುಡುಗ ಯಾರು ಎಂಬುದನ್ನು ರಿವೀಲ್ ಮಾಡಿರಲಿಲ್ಲ. ಆದರೆ ಈಗ ಭಾವಿ ಪತಿಯನ್ನು ತಮ್ಮ ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದು, ತಮ್ಮ ಭಾವಿ ಪತಿ ಹಾಗೂ ತಾನು ಜೊತೆಗಿರುವ ಕೆಲ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

211
ಜಗಧಾತ್ರಿಗೆ ಮಡಿಲು ತುಂಬಿದ ಝೀ ಕುಟುಂಬ
Image Credit : instagram

ಜಗಧಾತ್ರಿಗೆ ಮಡಿಲು ತುಂಬಿದ ಝೀ ಕುಟುಂಬ

ಹೌದು ಪದ್ಮಾವತಿಯ ತುಳಸಿ ಅಲಿಯಾಸ್ ದೀಪ್ತಿ ಮಾನೆ ಮದ್ವೆಯಾಗ್ತಿದ್ದಾರೆ. ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ದೀಪ್ತಿ ಮಾನೆ ಅವರಿಗೆ ಅಲ್ಲಿ ಇತ್ತೀಚೆಗೆ ನಡೆದ ಜೀ ತೆಲುಗುವಿನ ಜೀ ಕುಟುಂಬ ಅವಾರ್ಡ್‌ನಲ್ಲಿ ಬಾಗಿನ ನೀಡಿ ಮಡಿಲು ತುಂಬುವ ಮೂಲಕ ಆಕೆಯ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದರು.

Related Articles

Related image1
ವೀಕ್ಷಕರ ಎಲ್ಲಾ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಲಕ್ಷ್ಮೀ ನಿವಾಸ ಸೀರಿಯಲ್ ನಿರ್ದೇಶಕರು
Related image2
ಮದುವೆ ಮೇಕಿಂಗ್ ವಿಡಿಯೋ ರಿಲೀಸ್‌ ಮಾಡಿ Karna ಸೀರಿಯಲ್ ವೀಕ್ಷಕರ ತಲೆಗೆ ಹುಳ ಬಿಟ್ಟ ನಿರ್ದೇಶಕರು
311
ಅರಿಶಿಣ ಕುಂಕುಮ ಹಚ್ಚಿ ಶುಭ ಹಾರೈಸಿದ ಕಲಾವಿದರು
Image Credit : instagram

ಅರಿಶಿಣ ಕುಂಕುಮ ಹಚ್ಚಿ ಶುಭ ಹಾರೈಸಿದ ಕಲಾವಿದರು

ನಮ್ಮ ಜಗಧಾತ್ರಿ ಶೀಘ್ರದಲ್ಲೇ ಮದ್ವೆಯಾಗ್ತಿದ್ದಾರೆ. ನಮ್ಮ ಕುಟುಂಬದ ಹೆಣ್ಣಿಗೆ ಮದ್ವೆಯಾಗ್ತಿರುವ ಕಾರಣಕ್ಕೆ ನಾವು ಆಕೆಗೆ ಬಾಗಿನ ನೀಡಿ ಶುಭಹಾರೈಸುತ್ತಿದ್ದೇವೆ ಎಂದು ಹೇಳಿ ಜೀ ತೆಲುಗು ವಾಹಿನಿಯವರು ಆಕೆಗೆ ಮದುವೆಯ ವಿಶೇಷ ಉಡುಗೊರೆ ನೀಡಿದ್ದರು.

411
ಪತಿಯ ಪರಿಚಯಿಸಿದ ದೀಪ್ತಿ ಮಾನೆ
Image Credit : instagram

ಪತಿಯ ಪರಿಚಯಿಸಿದ ದೀಪ್ತಿ ಮಾನೆ

ಜೀ ತೆಲುಗು ಕುಟುಂಬದ ಎಲ್ಲಾ ಕಲಾವಿದರು ಅಲ್ಲಿ ಸೇರಿ ನಟಿಗೆ ಅರಿಶಿಣ ಕುಂಕುಮ ಹಚ್ಚಿ ಶುಭ ಹಾರೈಸಿದ್ದರು. ಈ ವೇಳೆ ಮಾತನಾಡಿದ ದೀಪ್ತಿ ಮಾನೆ ನನ್ನ ಬದುಕಿಗೆ ಬಂದಿದ್ದಕ್ಕೆ ಧನ್ಯವಾದ. ಇದು ನನ್ನ ಮತ್ತೊಂದು ಕುಟುಂಬ ಎಲ್ಲರನ್ನೂ ಈಗ ನಾನು ನಿನಗೆ ಪರಿಚಯಿಸುತ್ತಿದ್ದೇನೆ ಎಂದು ಪರಿಚಯ ಮಾಡಿಕೊಟ್ಟಿದ್ದರು.

511
ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ರಿವೀಲ್
Image Credit : instagram

ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ರಿವೀಲ್

ಹಾಗೆಯೇ ಇನ್ಸ್ಟಾಗ್ರಾಮ್‌ನಲ್ಲೂ ಅವರು ತಾನು ಪ್ರೀತಿಯಲ್ಲಿದ್ದೇನೆ ಎಂದು ಕೆಲ ಫೋಟೋಗಳನ್ನು ಈ ಹಿಂದೆ ರಿವೀಲ್ ಮಾಡಿದ್ದರು. ಆದರೆ ಅದರಲ್ಲಿ ಪತಿಯ ಮುಖ ತೋರಿಸಿರಲಿಲ್ಲ. ಆದರೆ ಈಗ ತಮ್ಮ ಭಾವಿ ಪತಿಯ ಜೊತೆಗಿನ ಹಲವು ಫೋಟೋಗಳನ್ನು ದೀಪ್ತಿ ಮಾನೆ ಹಂಚಿಕೊಂಡಿದ್ದು, ಜೊತೆಗೆ ಆತನ ಹೆಸರನ್ನು ರಿವೀಲ್ ಮಾಡಿದ್ದಾರೆ.

611
ರೋಹನ್ ಕೈ ಹಿಡಿಯಲಿರುವ ಪದ್ಮಾವತಿ
Image Credit : instagram

ರೋಹನ್ ಕೈ ಹಿಡಿಯಲಿರುವ ಪದ್ಮಾವತಿ

ಡಿಯರ್ ರೋಹನ್, ನಾನು ಕಾಯುತ್ತಿದ್ದ ವ್ಯಕ್ತಿ ನೀವು, ಮೇಲಿನಿಂದ ಬಂದ ಸ್ವರ್ಗೀಯ ಉಡುಗೊರೆ. ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

711
ತೆಲುಗಿನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ದೀಪ್ತಿ
Image Credit : instagram

ತೆಲುಗಿನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ದೀಪ್ತಿ

ದೀಪ್ತಿಮಾನೆ ಅವರು ತೆಲುಗಿನ ಜಗಧಾತ್ರಿ ಸೀರಿಯಲ್‌ನಲ್ಲಿ ನಟಿಸುತ್ತಿದ್ದುಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಭಾವಿ ದಂಪತಿಯ ಫೋಟೋ ನೋಡಿದ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

811
ದೀಪ್ತಿ ಮಾನೆ ಭಾವಿ ಪತಿ ರೋಹನ್
Image Credit : instagram

ದೀಪ್ತಿ ಮಾನೆ ಭಾವಿ ಪತಿ ರೋಹನ್

ದೀಪ್ತಿ ಮಾನೆಯವರು ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಪದ್ಮಾಪತಿ(Padmavathi serial)ಯಲ್ಲಿ ನಟಿಸಿದ್ದರು. ಐತಿಹಾಸಿಕ ಮತ್ತು ಪ್ರಸ್ತುತ ಕಾಲಘಟ್ಟದ ಕಥೆಯನ್ನು ಸೇರಿಸಿ ಮಾಡಿದಂತಹ ಸೀರಿಯಲ್ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಧಾರಾವಾಹಿಯಲ್ಲಿ ಪದ್ಮಾವತಿ ಮತ್ತು ತುಳಸಿ ಪಾತ್ರಕ್ಕೆ ಜೀವ ತುಂಬಿದವರು ನಟಿ ದೀಪ್ತಿ ಮಾನೆ.

911
ತುಳಸಿ ಪಾತ್ರಕ್ಕೆ ಜೀವ ತುಂಬಿದ್ದ ದೀಪ್ತಿ
Image Credit : instagram

ತುಳಸಿ ಪಾತ್ರಕ್ಕೆ ಜೀವ ತುಂಬಿದ್ದ ದೀಪ್ತಿ

ಪದ್ಮಾವತಿ ಧಾರಾವಾಹಿಯಲ್ಲಿ ತುಳಸಿ ಪಾತ್ರ ಮತ್ತು ತುಳಸಿ ಮತ್ತು ಸಾಮ್ರಾಟ್ ಜೋಡಿಯನ್ನು ಜನ ತುಂಬಾ ಇಷ್ಟಪಟ್ಟಿದ್ದರು. ಈ ಧಾರಾವಾಹಿಯಲ್ಲಿ ನಾಯಕನಾಗಿ ಸದ್ಯ ಮುದ್ದು ಸೊಸೆ ನಾಯಕನಾಗಿರುವ ತ್ರಿವಿಕ್ರಮ್ (Trivikram) ಅಭಿನಯಿಸಿದ್ದರು. 

1011
ತೆಲುಗಿನ ಹಲವು ಸೀರಿಯಲ್‌ಗಳಲ್ಲಿ ನಟಿಸಿರುವ ದೀಪ್ತಿ
Image Credit : instagram

ತೆಲುಗಿನ ಹಲವು ಸೀರಿಯಲ್‌ಗಳಲ್ಲಿ ನಟಿಸಿರುವ ದೀಪ್ತಿ

ಕನ್ನಡದಲ್ಲಿ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದ ದೀಪ್ತಿ ಮಾನೆ (Deepthi Manne), ನಂತರ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟು, ಅಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದಿದ್ದಾರೆ.

1111
ದಾವಣಗೆರೆಯ ದೀಪ್ತಿ
Image Credit : instagram

ದಾವಣಗೆರೆಯ ದೀಪ್ತಿ

ಮೂಲತಃ ದಾವಣಗೆರೆಯವರಾದ ದೀಪ್ತಿ, ಬೆಂಗಳೂರಿನ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಡಿಗ್ರಿ ಪಡೆದಿದ್ದಾರೆ. ನಟನೆಯಲ್ಲಿ ಆಸಕ್ತಿ ಬಂದಿದ್ದರಿಂದ ನಂತರ ಆಡಿಷನ್‌ ನೀಡಿದ ಅವರು ತಮಿಳಿನ ಎವನ್ ಸಿನಿಮಾದಲ್ಲಿ ಮೊದಲಿಗೆ ಕಾಣಿಸಿಕೊಂಡರು. ನಂತರ ಕನ್ನಡದ 'ನಮ್ಮೂರ ಹೈಕ್ಳು' ತೆಲುಗಿನ 'ಇಕ್ ಸೇ ಲವ್ ' ಹಾಗೂ ತಮಿಳಿನ 'ದೇವದಾಸ್ ಬ್ರದರ್ಸ್' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಂತರ ಕಿರುತೆರೆಗೆ ಕಾಲಿಟ್ಟ ದೀಪ್ತಿ ಮೊದಲಿಗೆ ಪದ್ಮಾವತಿ ಧಾರಾವಾಹಿಯಲ್ಲಿ ನಟಿಸಿದ ಬಳಿಕ ತೆಲುಗಿನಲ್ಲು ಬ್ಯುಸಿಯಾಗಿದ್ದು, ರಾಧಮ್ಮ ಕೂತುರು, ಜಗಧಾತ್ರಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಕನ್ನಡ ಧಾರಾವಾಹಿ
ನಟಿ
ಸಂಬಂಧಗಳು
ಮದುವೆ
ಜೀ ಕನ್ನಡ

Latest Videos
Recommended Stories
Recommended image1
'ನನ್ನ ಕಣ್ಣೀರು ಕೆಲವರಿಗೆ ಹಣವಾಯ್ತು..': ವೀವ್ಸ್‌, ಲೈಕ್ಸ್‌ ಕ್ರೂರತೆ ಬಗ್ಗೆ ಮೇಘನಾ ರಾಜ್ ಗಂಭೀರ ಮಾತು!
Recommended image2
ಪ್ರಭಾಸ್‌ಗೆ ಇಷ್ಟವಾದ ಡೈರೆಕ್ಟರ್ ಹಾಗೂ ಸಿನಿಮಾ ಯಾವುದು ಗೊತ್ತಾ? ರಾಜಮೌಳಿ ಅಲ್ವೇ ಅಲ್ಲ!
Recommended image3
Comedy Kiladigalu ದೇವತೆಗಳ ಅವಹೇಳನ ಕೇಸ್: 'ಕಾಮಿಡಿ ಕಿಲಾಡಿ'ತೀರ್ಪುಗಾರರಿಗೂ ಪೊಲೀಸ್ ನೋಟಿಸ್, ಕೋರ್ಟ್ ಮೆಟ್ಟಿಲೇರಿದ ಝೀ!
Related Stories
Recommended image1
ವೀಕ್ಷಕರ ಎಲ್ಲಾ ನಿರೀಕ್ಷೆಗಳನ್ನು ಸುಳ್ಳು ಮಾಡಿದ ಲಕ್ಷ್ಮೀ ನಿವಾಸ ಸೀರಿಯಲ್ ನಿರ್ದೇಶಕರು
Recommended image2
ಮದುವೆ ಮೇಕಿಂಗ್ ವಿಡಿಯೋ ರಿಲೀಸ್‌ ಮಾಡಿ Karna ಸೀರಿಯಲ್ ವೀಕ್ಷಕರ ತಲೆಗೆ ಹುಳ ಬಿಟ್ಟ ನಿರ್ದೇಶಕರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved