- Home
- Entertainment
- TV Talk
- BBK 12: ಎಂಥ ದೃಷ್ಟಿ ಹಾಕಿದ್ರಪ್ಪಾ.. ಸ್ಪಂದನಾ ಸೋಮಣ್ಣಗೆ ಸಿಕ್ಕ ಅದೃಷ್ಟ ಬೇರೆಯವರ ಪಾಲಾಯ್ತು!
BBK 12: ಎಂಥ ದೃಷ್ಟಿ ಹಾಕಿದ್ರಪ್ಪಾ.. ಸ್ಪಂದನಾ ಸೋಮಣ್ಣಗೆ ಸಿಕ್ಕ ಅದೃಷ್ಟ ಬೇರೆಯವರ ಪಾಲಾಯ್ತು!
Bigg Boss Kannada Season 12 Show: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಸ್ಪಂದನಾ ಸೋಮಣ್ಣ ಅವರು ಫೈನಲಿಸ್ಟ್ ಆಗಿದ್ದರು. ಇದನ್ನು ಆ ಮನೆಯಲ್ಲಿದ್ದ ಕೆಲವರು ವಿರೋಧಿಸಿದ್ದರು. ಈಗ ಅವರಿಗೆ ಸಿಕ್ಕ ಅದೃಷ್ಟ ಈಗ ಬೇರೆಯವರ ಪಾಲಾಗಿದೆ. ಯಾಕೆ ಹೀಗಾಯ್ತು?

ಅಕ್ಟೋಬರ್ 18, 19ರಂದು ಮೊದಲ ಫಿನಾಲೆ
ಅಕ್ಟೋಬರ್ 18, 19ರಂದು ಬಿಗ್ ಬಾಸ್ ಕನ್ನಡ ಸೀಸನ್ 12 ಶೋನ ಮೊದಲ ಫಿನಾಲೆ ನಡೆಯಲಿದೆ. ಹೀಗಿರುವಾಗ ಮಾಳು ನಿಪನಾಳ, ಸ್ಪಂದನಾ ಸೋಮಣ್ಣ ಅವರು ಫೈನಲಿಸ್ಟ್ ಆಗಿ ಜನರಿಂದ ಆಯ್ಕೆ ಆಗಿದ್ದರು. ಉಳಿದಂತೆ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಫೈನಲಿಸ್ಟ್ ಆಗಿದ್ದರು. ಈಗ ಈ ಆಟ ಬದಲಾಗಿದೆ.
ಸ್ಪಂದನಾ ಫೈನಲಿಸ್ಟ್ ಆಗಿದ್ದು ಇಷ್ಟ ಇರಲಿಲ್ಲ
ಸ್ಪಂದನಾ ಸೋಮಣ್ಣ ಅವರು ಫೈನಲಿಸ್ಟ್ ಆಗಿರೋದು ಧ್ರುವಂತ್‌ಗೆ ತಡೆದುಕೊಳ್ಳಲು ಆಗಿರಲಿಲ್ಲ. ಸಾಕಷ್ಟು ಬಾರಿ ಅವರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಅದರಂತೆ ಇದು ಜನರ ಸಿಂಪಥಿ ಎಂದು ಕೂಡ ಅವರು ಹೇಳಿದ್ದರು. ಈ ಬಗ್ಗೆ ದೊಡ್ಡ ಜಗಳವೇ ಆಗಿತ್ತು.
ರಾಶಿಕಾ ಶೆಟ್ಟಿ, ಸ್ಪಂದನಾ ಸೋಮಣ್ಣ ಟಾಸ್ಕ್
ಈಗ ಬಿಗ್ ಬಾಸ್ ಮತ್ತೊಂದು ಟಾಸ್ಕ್ ನೀಡಿದ್ದರು. ನಿಲುವಿನ ಗೆಲುವು ಎಂದು ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ರಾಶಿಕಾ ಶೆಟ್ಟಿ ಗೆದ್ದಿದ್ದರು. ಮಾಸ್ ಎವಿಕ್ಷನ್‌ನಿಂದ ತಪ್ಪಿಸಿಕೊಳ್ಳಲು ರಾಶಿಕಾ ಶೆಟ್ಟಿ ಅವರು ಮುಂದಿನ ಟಾಸ್ಕ್ ಗೆದ್ದರೆ, ಇಮ್ಯುನಿಟಿ ಸಿಗುತ್ತಿತ್ತು. ಮುಂದಿನ ಚಾಲೆಂಜರ್ ಟಾಸ್ಕ್‌ನಲ್ಲಿ ಯಾವ ಫೈನಲಿಸ್ಟ್‌ಗೆ ಫೈನಲಿಸ್ಟ್ ಆಗಲು ಯೋಗ್ಯತೆ ಇಲ್ಲ ಎಂದು ಹೇಳಬೇಕಿತ್ತು, ಹಾಗೂ ಅವರ ಜೊತೆ ಆಟ ಆಡಬೇಕಿತ್ತು. ಆಗ ರಾಶಿಕಾ, ಸ್ಪಂದನಾರನ್ನು ಆಯ್ಕೆ ಮಾಡಿದ್ದರು. ರಾಶಿಕಾ ಅವರು ಸ್ಪಂದನಾ ಹೆಸರು ತಗೊಂಡು ಆಟ ಆಡಿ ಗೆದ್ದರು.
ಟಾಸ್ಕ್ ಆಡಿ ಗೆದ್ದ ರಾಶಿಕಾ ಶೆಟ್ಟಿ
ರಾಶಿಕಾ ಶೆಟ್ಟಿ ಆಟದಿಂದ ಅವರು ಫೈನಲಿಸ್ಟ್ ಆಗಿದ್ದರು. ಮಂಜುಭಾಷಿಣಿ, ಅಶ್ವಿನಿ ಎಸ್ ಎಸ್, ಅಭಿಷೇಕ್ ಶ್ರೀಕಾಂತ್ ಅವರು ಕೂಡ ಸ್ಪಂದನಾರನ್ನು ಆಯ್ಕೆ ಮಾಡಿ ಎಂದು ಹೇಳಿದ್ದರು. ಅವರ ಮಾತು ಕೇಳಿ ರಾಶಿಕಾ ಟಾಸ್ಕ್ ಆಡಿ ಗೆದ್ದರು. ಹೀಗಾಗಿ ರಾಶಿಕಾ ಶೆಟ್ಟಿ ಈಗ ಫೈನಲಿಸ್ಟ್ ಆಗಿದ್ದಾರೆ.
ರಾಶಿಕಾಗೆ ಖುಷಿ, ಸ್ಪಂದನಾಗೆ ಬೇಸರ!
ರಾಶಿಕಾ ಶೆಟ್ಟಿ ಅವರು ಗೆದ್ದಿರೋದು ಅನೇಕರಿಗೆ ಖುಷಿ ತಂದಿದೆ. ತಾನು ಆಟ ಸೋತಿರೋದು, ಬಿಗ್ ಬಾಸ್ ಕನ್ನಡ ಸೀಸನ್ 12 ಶೋನ ಮೂರನೇ ವಾರದ ಫಿನಾಲೆಯಲ್ಲಿ ಎಲಿಮಿನೇಶನ್‌ಗೆ ನಾಮಿನೇಟ್ ಆಗಿರೋದು ಸ್ಪಂದನಾಗೆ ಬೇಸರ ತಂದಿದೆ. ಒಟ್ಟಿನಲ್ಲಿ ಈ ವಿಚಾರ ಕೆಲವರಿಗೆ ಬೇಸರ ತಂದರೆ, ಇನ್ನೂ ಕೆಲವರಿಗೆ ಖುಷಿ ತಂದಿದೆ.