Amruthadhaare Kannada Tv Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೊಮ್ಮೆ ಭೂಮಿಕಾ ಹಾಗೂ ಗೌತಮ್ ಭೇಟಿಯಾಗಿದೆ. ಇದನ್ನೇ ಅವನು ಬಯಸುತ್ತಿದ್ದನು. ಈಗ ಆ ಹುಡುಗಿ ಕೂಡ ಅವನಿಗೆ ಶಾಕ್ ನೀಡುವ ಮಾತು ಆಡಿದ್ದಾಳೆ. ಹಾಗಾದರೆ ಏನದು?
ಅಮೃತಧಾರೆ ಧಾರಾವಾಹಿಯಲ್ಲಿ ಕೊನೆಗೂ ಗೌತಮ್ ದಿವಾನ್ ಹಾಗೂ ಭೂಮಿಕಾ ಭೇಟಿಯಾಗಿದೆ. ಮಲ್ಲಿ ಹಾಗೂ ಕಾವೇರಿ ಮಾಡಿದ ಪ್ಲ್ಯಾನ್‌ನಿಂದ ಭೂಮಿಕಾ ಈಗ ಗೌತಮ್ ಇರುವ ವಠಾರಕ್ಕೆ ಬರುವಂತೆ ಆಯ್ತು. ಯಾವಾಗ ಪತ್ನಿ ಜೊತೆ ಸೇರ್ತೀನೋ ಅಂತ ಗೌತಮ್ ಬಯಸುತ್ತಿದ್ದನು. ಕೊನೆಗೂ ಅವನಿಗೆ ಅದೃಷ್ಟಲಕ್ಷ್ಮೀ ಒಲಿದಿದ್ದಾಳೆ. ಅಷ್ಟೇ ಅಲ್ಲದೆ ಆ ಹುಡುಗಿ ಶಾಕ್ ಕೂಡ ನೀಡಿದ್ದಾಳೆ.
ಗೌತಮ್ ಹಾಗೂ ಭೂಮಿಕಾ ಮತ್ತೆ ಮುಖಾಮುಖಿ
ಮಲ್ಲಿ ಹಾಗೂ ಕಾವೇರಿ ಪ್ಲ್ಯಾನ್ ಮಾಡಿ ಗೌತಮ್ ಇರುವ ವಠಾರದಲ್ಲೇ ಮನೆ ಮಾಡುವ ಹಾಗೆ ಮಾಡಿದಳು. ಇದು ಭೂಮಿಗೆ ಗೊತ್ತಾಗಲೇ ಇಲ್ಲ. ಇನ್ನೊಂದು ಕಡೆ ಯಾರೇ ವಠಾರಕ್ಕೆ ಬಂದರೂ ಗೌತಮ್, ಅವರಿಗೆ ಕಾಫಿ ಮಾಡಿಕೊಡುತ್ತಿದ್ದನು. ಅದರಂತೆ ಈಗ ಭೂಮಿಕಾ ಇರುವ ಮನೆಗೆ ಬಂದಿದ್ದಾನೆ. ಗೌತಮ್ ಹಾಗೂ ಭೂಮಿಕಾ ಮುಖಾಮುಖಿ ಆಗಿದ್ದು, ಇವರಿಬ್ಬರು ಒಂದೂ ಮಾತನಾಡಿಲ್ಲ. ಗೌತಮ್ ಈ ನಡೆಯ ಬಗ್ಗೆ ಭೂಮಿ ಏನೂ ಅಂದುಕೊಂಡಿಲ್ಲ. ಐದು ವರ್ಷಗಳ ಬಳಿಕ ಭೂಮಿಕಾ, ಗೌತಮ್ ಕೊಟ್ಟ ಕಾಫಿ ಕುಡಿದಿದ್ದಾಳೆ. ಇದು ಮಲ್ಲಿಗೆ ಅಚ್ಚರಿ ತರಿಸಿದೆ. ಅಂದಹಾಗೆ ಇವರಿಬ್ಬರು ಒಂದಾಗುತ್ತಾರೆ ಎನ್ನುವ ನಿರೀಕ್ಷೆಯೂ ಹುಟ್ಟಿದೆ. ಮಲ್ಲಿ, ಕಾವೇರಿ ತಾವು ಮಾಡಿದ ಪ್ಲ್ಯಾನ್ ವರ್ಕ್ ಆಗಿದೆ ಎಂದು ಭಾವಿಸಿದ್ದಾರೆ.

ಆ ಹುಡುಗಿ ಕೈಯಲ್ಲಿ ವಿಶೇಷ ಮಚ್ಚೆ
ಇನ್ನೊಂದು ಕಡೆ ಭೂಮಿಯನ್ನು ನೋಡಿ ಗೌತಮ್ ಫುಲ್ ಖುಷಿಯಾಗಿದ್ದಾನೆ. ತಾನು ಮನೆಗೆ ಕರೆದುಕೊಂಡು ಬಂದಿರೋ, ಬಾಲಕಿ ಎಲ್ಲರಿಗೂ ಅದೃಷ್ಟ ತಂದಿದ್ದಳು. ಅವಳ ಆಗಮನದಿಂದ ಕೆಲಸ ಇಲ್ಲದವರಿಗೆ ಕೆಲಸ ಸಿಕ್ಕಿದೆ, ವಠಾರದವರ ಕೋರ್ಟ್ ಕೇಸ್ ಸರಿಹೋಗಿದೆ, ವಠಾರದಲ್ಲಿರುವ ಸಮಸ್ಯೆಗಳು ಬಗೆಹರಿದಿವೆ. ಆ ಪುಟ್ಟ ಹುಡುಗಿಯ ಮುಖ ನೋಡಿದರೆ ಅದೃಷ್ಟ ಖುಲಾಯಿಸುತ್ತದೆ, ಅವಳ ಕೈಯಲ್ಲಿ ವಿಶೇಷ ಮಚ್ಚೆ ಇದೆ ಎಂದು ಎಲ್ಲರೂ ಭಾವಿಸಿದ್ದಾರೆ.
ಗೌತಮ್ ಜೀವನದಲ್ಲಿ ದೊಡ್ಡ ಪವಾಡ
ಎಲ್ಲರೂ ಈ ಹುಡುಗಿ ಅದೃಷ್ಟ ಎಂದಾಗ ಗೌತಮ್ ನಂಬಿರಲಿಲ್ಲ, ಆದರೆ ಎಲ್ಲರೂ ಆ ಮಗುವಿನ ಬಗ್ಗೆ ಕಾಳಜಿ ತೋರಿಸುತ್ತಾರೆ, ಕೇರ್ ಮಾಡುತ್ತಾರೆ ಎಂದು ಅವನು ಖುಷಿಪಟ್ಟಿದ್ದನು. ಈಗ ಆ ಹುಡುಗಿಯನ್ನು ತಬ್ಬಿಕೊಂಡ ಗೌತಮ್, “ಐದು ವರ್ಷಗಳ ಬಳಿಕ ನನ್ನ ಜೀವನದಲ್ಲಿ ದೊಡ್ಡ ಪವಾಡ ಆಗ್ತಿದೆ, ಅದಕ್ಕೆಲ್ಲ ನೀನೆ ಕಾರಣ” ಎಂದು ಹೇಳಿದ್ದಾನೆ. ಆಮೇಲೆ ಥ್ಯಾಂಕ್ಯೂ ಅಂತ ಕೂಡ ಹೇಳಿದ್ದಾನೆ. ಆಗ ಆ ಹುಡುಗಿ ಥ್ಯಾಂಕ್ಯು ಎಂದು ಹೇಳಿದ್ದಾಳೆ.

ಆ ಹುಡುಗಿಗೆ ಮಾತು ಬಂತು!
ಇಷ್ಟುದಿನಗಳಿಂದ ಆ ಹುಡುಗಿ ಒಂದೇ ಒಂದು ಅಕ್ಷರ ಮಾತಾಡಿರಲಿಲ್ಲ. ಇವಳಿಗೆ ಮಾತು ಬರುತ್ತಿಲ್ಲ ಎಂದು ಗೌತಮ್ ಕೂಡ ನಂಬಿದ್ದನು. ಅವಳಿಗೆ ಏನೋ ಸಮಸ್ಯೆ ಇರಬೇಕು ಎಂದು ಅವನು ಅಂದುಕೊಂಡಿದ್ದನು. ಈಗ ಅವಳು ಮಾತನಾಡಿರೋದು ಗೌತಮ್‌ಗೆ ಶಾಕ್ ತಂದಿದೆ. ಯಾಕೆ ಅವಳು ಇಷ್ಟು ದಿನ ಮಾತನಾಡಲಿಲ್ಲ, ಯಾಕೆ ಸುಮ್ಮನಿದ್ದಳು? ನಾನು ಎಷ್ಟೇ ಮಾತನಾಡಿದರೂ ಅವಳು ಯಾಕೆ ಸುಮ್ಮನಿದ್ದಳು ಅಂತ ಅವನು ಗೊಂದಲಕ್ಕೀಡಾಗಿದ್ದನು. ಈಗ ಮಾತು ಬಂದಿರೋದು ವೀಕ್ಷಕರಿಗೆ ಫುಲ್ ಖುಷಿಯಾಗಿದೆ.

ಪಾತ್ರಧಾರಿಗಳು
ಗೌತಮ್ ದಿವಾನ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿಕಾ ಸದಾಶಿವ ಪಾತ್ರದಲ್ಲಿ ಛಾಯಾ ಸಿಂಗ್ ನಟಿಸುತ್ತಿದ್ದಾರೆ. ಉಳಿದಂತೆ ವನಿತಾ ವಾಸು, ಕೃಷ್ಣಮೂರ್ತಿ ಕವತ್ತಾರ್, ರಾಣವ್ ಗೌಡ, ಕರಣ್ ಕೆ ಆರ್, ಅಮೃತಾ ನಾಯ್ಕ್, ಆನಂದ್, ಅನ್ವಿತಾ ಸಾಗರ್, ಗೀತಾ ಭಾರತಿ ಭಟ್ ನಟಿಸುತ್ತಿದ್ದಾರೆ.
