ಡಾ. ಬಿ.ಆರ್. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕಾರದ 70ನೇ ವರ್ಷದ ಸ್ಮರಣಾರ್ಥ ಮೈಸೂರಿನಲ್ಲಿ ಬೌದ್ಧ ಮಹಾ ಸಮ್ಮೇಳನ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಈ ಸಮಾರಂಭದಲ್ಲಿ, ಸಚಿವ ಸತೀಶ್ ಜಾರಕಿಹೊಳಿ ಅವರು ಭಾರತದಲ್ಲಿ ಬೌದ್ಧ ಧರ್ಮದ ಬೆಳವಣಿಗೆಯನ್ನು ಮನುವಾದಿಗಳು ತಡೆದರು ಎಂದು ಆರೋಪಿಸಿದರು.
ಮೈಸೂರು (ಅ.15): ಡಾ ಬಿಆರ್ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕಾರ ಮಾಡಿ 70 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಬೌದ್ಧ ಮಹಾ ಸಮ್ಮೇಳನ ಗರ್ಜಿಸಿದೆ. ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ, ಬೌದ್ಧ ಚಿಂತನೆಗಳ ಪ್ರಸಾರಕ್ಕೆ ಒತ್ತು ನೀಡಿದರು.
ಸಮ್ಮೇಳನದಲ್ಲಿ ಗೃಹ ಸಚಿವ ಜಿ ಪರಮೇಶ್ವರ್, ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್‌ಸಿ ಮಹದೇವಪ್ಪ ಸೇರಿದಂತೆ ಶಾಸಕರಾದ ಎಆರ್ ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ, ನರೇಂದ್ರಸ್ವಾಮಿ, ಡಿ. ರವಿಶಂಕರ್, ದರ್ಶನ್ ಧ್ರುವನಾರಾಯಣ್ ಎಂಎಲ್‌ಸಿ ಡಾ ಡಿ ತಿಮ್ಮಯ್ಯ, ಡಾ ಯತೀಂದ್ರ ಇತರ ಪ್ರಮುಖರು ಭಾಗಿಯಾಗಿದ್ದರು.
ಇದನ್ನೂ ಓದಿ:'ಸಂವಿಧಾನ ತಿಳಿಯದ ಅಜ್ಞಾನಿಗಳು..' ಖರ್ಗೆ, ದಿನೇಶ್ ಗುಂಡೂರಾವ್ ವಿರುದ್ಧ ಸಿಟಿ ರವಿ ವಾಗ್ದಾಳಿ
ಬೌದ್ದ ಧರ್ಮ ಬೆಳೆಯಲು ಮನುವಾದಿಗಳು ಬಿಡಲಿಲ್ಲ: ಜಾರಕಿಹೊಳಿ
ಸಚಿವ ಸತೀಶ್ ಜಾರಕಿಹೊಳಿ ಸಮ್ಮೇಳನದಲ್ಲಿ ಮಾತನಾಡಿ, ಬೌದ್ಧ ಧರ್ಮ 6ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದು ವಿಶ್ವದ ಇತರ ರಾಷ್ಟ್ರಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಿತು. ಆದರೆ ಭಾರತದಲ್ ಬೌದ್ಧ ಧರ್ಮ ಬೆಳೆಯಲು ಮನುವಾದಿಗಳು ಬಿಡಲಿಲ್ಲ, ಬೌದ್ಧ ಧರ್ಮ ಬೆಳೆಯುವುದನ್ನು ತಡೆದರು ಎಂದು ಆರೋಪಿಸಿದರು.
ಬುದ್ಧ ಅಂಬೇಡ್ಕರ್ ಚಿಂತನೆ ಹೆಚ್ಚು ಪ್ರಚುರಪಡಿಸಬೇಕು:
ಬುದ್ಧ ಹಾಗೂ ಅಂಬೇಡ್ಕರ್ ಚಿಂತನೆಗಳನ್ನು ಹೆಚ್ಚು ಪ್ರಚುರಪಡಿಸಬೇಕು. ಈ ಬೌದ್ಧ ಮಹಾ ಸಮ್ಮೇಳನ ಕೇವಲ ದಲಿತರು, ಬೌದ್ಧರಿಗೆ ಸೀಮಿತವಾಗಬಾರದು; ಎಲ್ಲ ವರ್ಗದ ಜನರು ಭಾಗಿಯಾಗಿ ಸಾಮಾಜಿಕ ನ್ಯಾಯದ ಸಂದೇಶವನ್ನು ಎಲ್ಲೆಡೆಗೆ ತಲುಪಿಸಬೇಕು ಎಂದು ಕರೆ ನೀಡಿದರು.
