ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾ*ಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಕೆ.ಆರ್.ನಗರದ ಸಂತ್ರಸ್ತೆಯ ಅಪಹರಣ ಆರೋಪದಿಂದ ತಮ್ಮನ್ನು ಕೈ ಬಿಡುವಂತೆ ಕೋರಿ ಆರೋಪಿಗಳಾದ ಕೆ.ಎ.ರಾಜಗೋಪಾಲ್ ಮತ್ತು ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದ 7ನೇ ಆರೋಪಿ ಕೆ.ಎ.ರಾಜಗೋಪಾಲ್ ಮತ್ತು 8ನೇ ಆರೋಪಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ಸಂಬಂಧ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರು ಸೋಮವಾರ ವಿಚಾರಣೆ ನಡೆಸಿ ಇಬ್ಬರು ಆರೋಪಿಗಳ ಅರ್ಜಿ ವಜಾಗೊಳಿಸಿ ಆದೇಶಿಸಿದರು. ಇದೇ ರೀತಿಯ ಮನವಿ ಸಂಬಂಧ ಪ್ರಕರಣದ 3ನೇ ಆರೋಪಿ ಸುಜಯ್, 4ನೇ ಆರೋಪಿ ಎಚ್.ಎನ್.ಮಧು ಮತ್ತು 5ನೇ ಆರೋಪಿ ಎಚ್ .ಡಿ.ಮನುಗೌಡ ಸಲ್ಲಿಸಿದ್ದ ಅರ್ಜಿ ಕುರಿತ ಆದೇಶವನ್ನು ಅ.18ಕ್ಕೆ ಕಾಯ್ದಿರಿಸಿದರು.

11:35 PM (IST) Oct 14
ಅಮಿತಾಬ್ ಬಚ್ಚನ್‌ಗೆ ಪಂಚೆ ಗಿಫ್ಟ್ ಕೊಟ್ಟ ರಿಷಬ್ ಶೆಟ್ಟಿ, ಜಾರಿದ್ರೆ ಇಂಟರ್‌ನ್ಯಾಶಲ್ ಎಂದ ಬಿಗ್ ಬಿ, ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ರಿಷಬ್ ಶೆಟ್ಟಿ ಈ ಉಡುಗೊರೆ ನೀಡಿದ್ದಾರೆ. ಇದಕ್ಕೆ ಬಿಗ್ ಬಿ ಉತ್ತರದ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
10:50 PM (IST) Oct 14
Actor Naveen Mayurs Brother Shreyas Dies of Heart Attack ದಿವಂಗತ ನಟ ನವೀನ್ ಮಯೂರ್ ಅವರ ಸಹೋದರ, ಪತ್ರಕರ್ತ ಶ್ರೇಯಸ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಅವರ ತಂದೆ ರೈಲು ಅಪಘಾತದಲ್ಲಿ ಸಾವು ಕಂಡಿದ್ದರು.
10:40 PM (IST) Oct 14
ಕಾಂತಾರ ಚಿತ್ರದ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದ ರಿಷಬ್ ಶೆಟ್ಟಿ ಅವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ. ಜ್ಯೋತಿಷ ಮತ್ತು ಸಂಖ್ಯಾಶಾಸ್ತ್ರದ ಸಲಹೆಯ ಮೇರೆಗೆ ತಮ್ಮ ಹೆಸರನ್ನು ಬದಲಿಸಿಕೊಂಡ ನಂತರ ಅವರ ವೃತ್ತಿಜೀವನದಲ್ಲಿ ಅದೃಷ್ಟ ಕೈಹಿಡಿಯಿತು. 'R' ಅಕ್ಷರದಿಂದ ಆರಂಭವಾದ ಹೆಸರು ಯಶಸ್ಸಿಗೆ ಕಾರಣವಾಯಿತು.
10:21 PM (IST) Oct 14
Trump Fumes at Time Magazine's Worst Photo Cover Despite Good Article ಟೈಮ್ ನಿಯತಕಾಲಿಕೆಯು ತಮ್ಮ ಕೆಟ್ಟ ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
10:20 PM (IST) Oct 14
ಬೆಂಗಳೂರು ನಿವಾಸಿಗಳಿಗೆ ಗುಡ್ ನ್ಯೂಸ್, 30*40 ನಿವೇಶನಗಳಿಗೆ ಓಸಿ ವಿನಾಯಿತಿ ನೀಡಲಾಗಿದೆ. ಈ ಕುರಿತು ನಗರಾಭಿವೃದ್ಧಿ ಇಲಾಕೆ ಅಧಿಕೃತ ಆದೇಶ ಹೊರಡಿಸಿದೆ. ಏನಿದು ನಿವೇಷನಗಳ ಒಸಿ? ಹೊಸ ಆದೇಶದಲ್ಲಿ ಏನಿದೆ?
10:07 PM (IST) Oct 14
ಜೀ ಕನ್ನಡ ವಾಹಿನಿಯು 'ಶಾರ್ಕ್ ಟ್ಯಾಂಕ್' ಮಾದರಿಯ 'ಐಡಿಯಾಬಾಜ್' ಎಂಬ ಹೊಸ ಬ್ಯುಸಿನೆಸ್ ರಿಯಾಲಿಟಿ ಷೋ ಅನ್ನು ಪ್ರಾರಂಭಿಸುತ್ತಿದೆ. ಈ ಕಾರ್ಯಕ್ರಮದಲ್ಲಿ, ಉದ್ಯಮಿಗಳು ತಮ್ಮ ವ್ಯವಹಾರ ಕಲ್ಪನೆಗಳನ್ನು ಹೂಡಿಕೆದಾರರ ಮುಂದೆ ಮಂಡಿಸಿ, ತಮ್ಮ ಕನಸುಗಳಿಗೆ ಬಂಡವಾಳವನ್ನು ಪಡೆಯಲಿದ್ದಾರೆ.
09:45 PM (IST) Oct 14
09:33 PM (IST) Oct 14
Fake Baba Dadapir Arrested for Gold Theft ಮನೆಯಲ್ಲಿನ ದುಷ್ಟ ಶಕ್ತಿಗಳನ್ನು ಓಡಿಸುವುದಾಗಿ ನಂಬಿಸಿ ವಿಶೇಷ ಪೂಜೆಯ ನೆಪದಲ್ಲಿ ಚಿನ್ನಾಭರಣಗಳನ್ನು ಕದಿಯುತ್ತಿದ್ದ ದಾದಾಪೀರ್ ಎಂಬ ನಕಲಿ ಬಾಬಾನನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
09:22 PM (IST) Oct 14
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ, ಸಾಮೂಹಿಕ ಅತ್ಯಾಚಾ*ರ ಯತ್ನವನ್ನು ವಿಫಲಗೊಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯರನ್ನು ರಕ್ಷಿಸಲಾಗಿದ್ದು, ನಾಲ್ವರು ಆರೋಪಿಗಳನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.
09:21 PM (IST) Oct 14
ಬಿಗ್ಬಾಸ್ ಶೋ ಸ್ಕ್ರಿಪ್ಟೆಡ್ ಎನ್ನುವ ಚರ್ಚೆಗಳ ನಡುವೆಯೇ, ಹಿಂದಿ ಬಿಗ್ಬಾಸ್ನಲ್ಲಿ ನಡೆದ ಲಿಪ್ಲಾಕ್ ಘಟನೆ ವಿವಾದ ಸೃಷ್ಟಿಸಿದೆ. ಟಿಆರ್ಪಿಗಾಗಿ ಅಶ್ಲೀಲತೆಯನ್ನು ಪ್ರದರ್ಶಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ಕನ್ನಡ ಬಿಗ್ಬಾಸ್ನಲ್ಲಿ ಇಂತಹ ಘಟನೆಗಳು ನಡೆದಿಲ್ಲ ಎಂಬುದು ಸದ್ಯದ ಸಮಾಧಾನ.
08:45 PM (IST) Oct 14
ಅಪ್ರಾಪ್ತೆ ಮೇಲೆ ಅತ್ಯಾ*ಚಾರ ಎಸಗಿದ ತಮಿಳುನಾಡು ಮೂಲದ ಆರೋಪಿಗೆ ಬೆಳಗಾವಿ ಪೋಕ್ಸೋ ನ್ಯಾಯಾಲಯ 30 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಮತ್ತೊಂದು ಪ್ರಕರಣದಲ್ಲಿ, ಪತ್ನಿಯನ್ನು ಕೊಲೆಗೈದ ಪತಿಗೆ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ ಮಹತ್ವದ ತೀರ್ಪು ನೀಡಿದೆ.
08:30 PM (IST) Oct 14
08:12 PM (IST) Oct 14
ಧರ್ಮಸ್ಥಳ ಮತ್ತು ಅದರ ಧರ್ಮಾಧಿಕಾರಿಗಳ ವಿರುದ್ಧ ಮಾನಹಾನಿಕರ ವೀಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ ಯೂಟ್ಯೂಬ್ ಚಾನೆಲ್‌ಗಳಿಗೆ ಬೆಂಗಳೂರಿನ ನ್ಯಾಯಾಲಯವು ಕಠಿಣ ಆದೇಶ ನೀಡಿದೆ. ಹರ್ಷೇಂದ್ರ ಕುಮಾರ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಅಡಿಯಲ್ಲಿ, ಆಕ್ಷೇಪಾರ್ಹ ವೀಡಿಯೋ 3 ದಿನದಲ್ಲಿ ಡಿಲೀಟ್ ಮಾಡಲು ಆದೇಶ.
08:04 PM (IST) Oct 14
ಮೈಸೂರಿನಲ್ಲಿ ಅಕ್ಟೋಬರ್ 17 ರಂದು ಮೆಗಾ ವಿಭಾಗೀಯ ಮಟ್ಟದ ಉದ್ಯೋಗ ಮೇಳ ನಡೆಯಲಿದ್ದು, 221 ಕಂಪನಿಗಳು 45,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡಲಿವೆ. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಈ ಮೇಳದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವೀಧರರು ಸೇರಿದಂತೆ ಯುವನಿಧಿ ಫಲಾನುಭವಿಗಳೂ ಭಾಗವಹಿಸಬಹುದು.
07:45 PM (IST) Oct 14
Single BMTC Bus Paralyzes Bengaluru ORR Traffic for Hours ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ (ORR) ಒಂದೇ ಒಂದು ಬಿಎಂಟಿಸಿ ಬಸ್ ಕೆಟ್ಟು ನಿಂತಿದ್ದರಿಂದ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ಈ ಘಟನೆಯಿಂದಾಗಿ ಟೆಕ್ ಕಾರಿಡಾರ್‌ನಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಸಿಲುಕಿಕೊಂಡಿದ್ದರು.
07:44 PM (IST) Oct 14
06:57 PM (IST) Oct 14
ಮದುವೆ ಹೆಸರಿನಲ್ಲಿ ದೊಡ್ಡ ವಂಚನೆಯ ಜಾಲವೊಂದು ಬಯಲಾಗಿದೆ. ಫಸ್ಟ್‌ನೈಟ್ ದಿನ ಕುಟುಂಬಕ್ಕೆ ಮತ್ತಿನ ಔಷಧಿ ನೀಡಿ, ಮರುದಿನ ಬೆಳಗ್ಗೆ ವಧು ಹಣ ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಾಳೆ. ಈ ಗ್ಯಾಂಗ್‌ನಿಂದ 10ಕ್ಕೂ ಹೆಚ್ಚು ಯುವಕರು ವಂಚನೆಗೊಳಗಾಗಿದ್ದಾರೆ.
06:49 PM (IST) Oct 14
lawyer's dark secret: ಡ್ರಗ್ ಮಾರುತ್ತಿದ್ದ ವೇಳೆ ಕೇರಳದಲ್ಲಿ ಮಹಿಳಾ ವಕೀಲೆ ಹಾಗೂ ಆಕೆಯ 18 ವರ್ಷದ ಟೀನೇಜ್ ಮಗ ಸಿಕ್ಕಿಬಿದ್ದಿದ್ದು, ಘಟನೆಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಪೊಲೀಸರು ಇದರ ಹಿಂದೆ ದೊಡ್ಡ ಜಾಲ ಇರುವುದನ್ನು ಪತ್ತೆ ಮಾಡಿದ್ದಾರೆ.
06:46 PM (IST) Oct 14
ಎಂಎಲ್‌ಸಿ ರಮೇಶ್ ಬಾಬು ಅವರು, ಪ್ರಿಯಾಂಕ್ ಖರ್ಗೆಯವರ ಆರ್‌ಎಸ್‌ಎಸ್ ಪತ್ರಕ್ಕೆ ವೈಯಕ್ತಿಕ ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಜಿಬಿಎ ಸಭೆಯ ವಿವಾದವನ್ನು ಅನಗತ್ಯವಾಗಿ ಬೆಳೆಸಲಾಗುತ್ತಿದೆ ಬಿಜೆಪಿ ವಿವಾದಗಳನ್ನು ಮರೆತು ಮಾತನಾಡುತ್ತಿದೆ ಎಂದರು.
06:12 PM (IST) Oct 14
MB Patil Slams Kiran Mazumdar-Shaw Over Infrastructure Criticism ಬೆಂಗಳೂರಿನ ಕಳಪೆ ಮೂಲಸೌಕರ್ಯದ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ ಅವರ ಟೀಕೆಗೆ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
05:43 PM (IST) Oct 14
ಮಾರಿಷಸ್‌ನಲ್ಲಿ ಹಾಸ್ಪಿಟಾಲಿಟಿ ಮತ್ತು ಟೂರಿಸಮ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ವಿದ್ಯಾರ್ಥಿ ನಂದನ್ ಎಸ್. ಭಟ್, ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಗ ಜಲಪಾತದಲ್ಲಿ ಕಾಲು ಜಾರಿ ಬಿದ್ದು ದುರಂತ ಸಾವಿಗೀಡಾಗಿದ್ದಾರೆ.
05:33 PM (IST) Oct 14
ಕರ್ನಾಟಕ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗಾಗಿ ಬಂಪರ್ ಉದ್ಯೋಗಾವಕಾಶವನ್ನು ಘೋಷಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ KKRTC, BDA, KSDL ಸೇರಿದಂತೆ ಐದು ಪ್ರಮುಖ ಸಂಸ್ಥೆಗಳಲ್ಲಿ 320ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ.
04:53 PM (IST) Oct 14
04:47 PM (IST) Oct 14
Bengaluru STRR Hits Roadblock as Centre Halts Bharatmala Projects Amid CAG Audit ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಗುರಿಯಿದ್ದ ಮಹತ್ವಾಕಾಂಕ್ಷೆಯ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ಯೋಜನೆಗೆ ಭಾರೀ ಹಿನ್ನಡೆಯಾಗಿದೆ.
04:08 PM (IST) Oct 14
ಮಾಧ್ಯಮ ಬಹಿಷ್ಕಾರ ಮತ್ತು ದಿವಾಳಿತನದ ಅಂಚಿಗೆ ತಲುಪಿದ್ದ ಸ್ಟಾರ್ ನಟ ತಮ್ಮ ವೃತ್ತಿಜೀವನದ ಕರಾಳ ಹಂತವನ್ನು ಎದುರಿಸಿದ್ದರು. ಆದರೆ ಮತ್ತೆ ಪುಟಿದೆದ್ದು ಅದ್ಭುತವಾಗಿ ಪುನರಾಗಮನ ಮಾಡಿ, ಸೋಲಿನಿಂದ ಗೆಲುವಿನತ್ತ ಸಾಗಿದ ಸ್ಪೂರ್ತಿದಾಯಕ ಕಥೆಯಿದು.
04:06 PM (IST) Oct 14
ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ರದ್ದುಗೊಳಿಸಿದೆ. ಈ ತೀರ್ಪಿನಿಂದಾಗಿ, ತಡೆಹಿಡಿಯಲಾಗಿದ್ದ ಅವರ ಬಡ್ತಿ ಮತ್ತು ಇತರ ಸೌಲಭ್ಯ ನೀಡಲು ಆದೇಶಿಸಿದೆ.
03:39 PM (IST) Oct 14
Firefighter death: ಪರಿವಾಳದ ಜೀವ ಉಳಿಸಲು ಹೋಗಿ ಅಗ್ನಿ ಶಾಮಕ ಸಿಬ್ಬಂದಿಯೋರ್ವ ಪ್ರಾಣ ಬಿಟ್ಟಂತಹ ಮನಕಲುಕುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಇನ್ನೋರ್ವ ವ್ಯಕ್ತಿ ಕರೆಂಟ್ ಶಾಕ್ ತಗುಲಿ ಗಾಯಗೊಂಡಿದ್ದಾರೆ
03:35 PM (IST) Oct 14
ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬ ಭಿಕ್ಷಾಟನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಬಿಎಂಆರ್‌ಸಿಎಲ್‌ನ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
02:59 PM (IST) Oct 14
ಗ್ರಾಜುಯೇಷನ್ ಡೇ ಇಷ್ಟೊಂದು ದುಬಾರಿನಾ, ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದರೂ ಆರ್ಥಿಕ ಸಂಕಷ್ಟದಿಂದಾಗಿ ಗ್ರಾಜುಯೇಷನ್ ಡೇನಲ್ಲಿ ಭಾಗವಹಿಸಲಾಗದೇ ವಿದ್ಯಾರ್ಥಿಯಾಗಿ ಹೋಗುವ ಬದಲು ಅತಿಥಿಯಂತೆ ಹೋಗಬೇಕಾಯ್ತು ಎಂದು ಯುವತಿಯೊಬ್ಬಳು ಹೇಳಿಕೊಂಡಿದ್ದು ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
02:51 PM (IST) Oct 14
02:11 PM (IST) Oct 14
ಸಚಿವ ಪ್ರಿಯಾಂಕ್ ಖರ್ಗೆ ಅವರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಬರುತ್ತಿರುವ ಬೆದರಿಕೆ ಕರೆಗಳ ಕುರಿತು ಮಾತನಾಡಿದ್ದು, ಇಂತಹ ಬೆದರಿಕೆಗಳಿಗೆ ತಾವು ಜಗ್ಗುವುದಿಲ್ಲ ಮತ್ತು ತಮ್ಮ ಸೈದ್ಧಾಂತಿಕ ಹೋರಾಟವನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
02:03 PM (IST) Oct 14
ತೆಲುಗಿನಲ್ಲಿ ಸಿನಿಮಾ ಅವಕಾಶಗಳು ಕಡಿಮೆಯಾದ ಕಾರಣ ನಟಿ ಕೃತಿ ಶೆಟ್ಟಿ ಈಗ ತಮಿಳು ಚಿತ್ರರಂಗದಲ್ಲಿ ಆಶ್ರಯ ಪಡೆದಿದ್ದಾರೆ. ಅವರ ಕೈಯಲ್ಲಿರುವ ತಮಿಳು ಚಿತ್ರಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.
01:44 PM (IST) Oct 14
ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆಗಳು ಬರ್ತಿಲ್ಲ. ಜೀವ ಬೆದರಿಕೆ ವಿಚಾರವನ್ನು ಸ್ವಯಂ ಸೃಷ್ಟಿ ಮಾಡಿಕೊಂಡಿದ್ದಾರೆ. ಫೇಕ್ ಕರೆಗಳನ್ನು ನೀವೇ ಮಾಡಿಸಿ ಕಪಟ ನಾಟಕ ಮಾಡಬೇಡಿ ಎಂದು ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದರು.
01:36 PM (IST) Oct 14
ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಮತ್ತು ಅವರ ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಲು 'PRK ಮೊಬೈಲ್ ಅಪ್ಲಿಕೇಶನ್' ಸಿದ್ಧಗೊಂಡಿದೆ. ಈ ಆ್ಯಪ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಭೇಟಿ ಮಾಡಿದರು.
01:23 PM (IST) Oct 14
ಕಾಂತಾರ ಚಾಪ್ಟರ್ 1 ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರ ಜೊತೆಗೆ ಈ ವರ್ಷ ಬಿಡುಗಡೆಯಾದ ಬೇರೆ ಯಾವ ಸಿನಿಮಾಗಳು 500 ಕೋಟಿ ಗಳಿಸಿವೆ ಎಂಬುದನ್ನು ನೋಡೋಣ.
01:21 PM (IST) Oct 14
Viral Videos: ಕೆಬಿಸಿ ಶೋನಲ್ಲಿ ಬಾಲಕರ ಅತಿರೇಕದ ವರ್ತನೆ ಚರ್ಚೆಯಾಗುತ್ತಿದ್ದಂತೆ, ಕನ್ನಡ ಕೋಟ್ಯಧಿಪತಿಯ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಧಾರ್ಮಿಕ ಪಂಡಿತರಾದ ಸಮೀರ್ ಆಚಾರ್ಯ ಸ್ಪರ್ಧಿಯಾಗಿದ್ದರು.
01:19 PM (IST) Oct 14
indians Cyber fraud on US citizens: ಸೈಬರ್ ವಂಚನೆ ಡಿಜಿಟಲ್ ಆರೆಸ್ಟ್ ಮೂಲಕ ಜನರನ್ನು ಮುಳುಗಿಸಿ ಬದುಕು ಸರ್ವನಾಶ ಮಾಡುವುದಕ್ಕೆ ಇಲ್ಲಿ ನಕಲಿ ಬಿಪಿಒವೊಂದನ್ನು ಸ್ಥಾಪಿಸಲಾಗಿದ್ದು, ಇದರ ಮೇಲೆ ದಾಳಿ ಮಾಡಿದ ಪೊಲೀಸರು 16 ಜನರನ್ನು ಬಂಧಿಸಿದ್ದಾರೆ.
12:55 PM (IST) Oct 14
ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ, ನನಗೂ ಸೀನಿಯರಿಟಿ ಇದೆ. ಸಿಎಂ, ಡಿಸಿಎಂ ಹಾಗೂ ಹೈಕಮಾಂಡ್ ನನ್ನನ್ನೂ ಕನ್ಸಿಡರ್ ಮಾಡ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಸಚಿವ ಸ್ಥಾನದ ಆಕಾಂಕ್ಷಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
12:26 PM (IST) Oct 14
ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಗಳು ಶಾಸಕರ ಅಭಿಪ್ರಾಯದ ಮೇಲೆಯೇ ಆಗುವಂಥದ್ದು, ಕೆಲವೊಮ್ಮೆ ಸಂಖ್ಯೆ ಹೆಚ್ಚು ಕಡಿಮೆ ಆಗಬಹುದು. ಪರಿಸ್ಥಿತಿ ತಿಳಿಯದೆ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
11:29 AM (IST) Oct 14
ಪ್ರಿಯಾಂಕ್ ಖರ್ಗೆಯವರು ಸರ್ಕಾರದ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಸಿಎಂನವರಿಗೆ ಪತ್ರ ಬರೆದ ಬೆನ್ನಲ್ಲೇ ಬಿಜೆಪಿ ನಾಯಕರು ಬೀದಿಗಿಳಿದು, ‘ಐ ಲವ್ ಆರ್‌ಎಸ್‌ಎಸ್’ ಪೋಸ್ಟರ್ ಅಭಿಯಾನ ಶುರು ಮಾಡಿದ್ದಾರೆ.