Viral Videos: ಕೆಬಿಸಿ ಶೋನಲ್ಲಿ ಬಾಲಕರ ಅತಿರೇಕದ ವರ್ತನೆ ಚರ್ಚೆಯಾಗುತ್ತಿದ್ದಂತೆ, ಕನ್ನಡ ಕೋಟ್ಯಧಿಪತಿಯ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಧಾರ್ಮಿಕ ಪಂಡಿತರಾದ ಸಮೀರ್ ಆಚಾರ್ಯ ಸ್ಪರ್ಧಿಯಾಗಿದ್ದರು.

ಬೆಂಗಳೂರು: ಕಳೆದ ಎರಡು ದಿನಗಳಿಂದ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೆಬಿಸಿ ಕಾರ್ಯಕ್ರಮ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಬಿಸಿ ಜೂನಿಯರ್ ಶೋದಲ್ಲಿ ಅತೀ ಉತ್ಸಾಹಿ ಬಾಲಕ ಇಶಿತ್ ಭಟ್, ಉತ್ತರ ನೀಡುವ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಅವರನ್ನೇ ಅವಮಾನಿಸುವ ರೀತಿಯಲ್ಲಿ ಮಾತನಾಡುತ್ತಾನೆ. ಈ ಅತ್ಯುತ್ಸಾಹದಲ್ಲಿ ಬಾಲಕ ತಪ್ಪಾದ ಉತ್ತರ ನೀಡಿ ಖಾಲಿ ಕೈಯಲ್ಲಿ ಹಿಂದಿರುಗಿದ್ದಾನೆ. ಮತ್ತೋರ್ವ ಬಾಲಕ ವಿರಾಟ್ ಅಯ್ಯರ್ ಸಹ ಸ್ಪರ್ಧೆಯಲ್ಲಿ ಅತಿರೇಕದಿಂದಲೇ ವರ್ತನೆ ತೋರಿದ್ದ. ಈ ಎರಡು ವಿಡಿಯೋ ಬೆನ್ನಲ್ಲೇ ಬಿಗ್‌ಬಾಸ್‌ ಶೋನ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ ಅವರ ಹಳೆ ವಿಡಿಯೋ ಮುನ್ನಲೆಗೆ ಬಂದಿದೆ.

ಸಮೀರ್ ಆಚಾರ್ಯ ಹಳೆ ವಿಡಿಯೋ ವೈರಲ್

ಕೆಬಿಸಿ ಮಾದರಿಯಲ್ಲಿಯೇ ಕನ್ನಡದಲ್ಲಿಯೂ 'ಕೋಟ್ಯಧಿಪತಿ' ಶೋ ಪ್ರಸಾರವಾಗುತ್ತಿತ್ತು. ಈ ಕಾರ್ಯಕ್ರಮವನ್ನು ನಟ ಪುನೀತ್ ರಾಜ್‌ಕುಮಾರ್ ಮತ್ತು ರಮೇಶ್ ಅರವಿಂದ್ ನಿರೂಪಣೆ ಮಾಡುತ್ತಿದ್ದರು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಸಮೀರ್ ಆಚಾರ್ಯ ಆಗಮಿಸಿದ್ದರು. ಸಮೀರ್ ಆಚಾರ್ಯ ಸ್ಪರ್ಧಿಯಾಗಿದ್ದ ಸಂದರ್ಭದಲ್ಲಿ ರಮೇಶ್ ಅರವಿಂದ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದರು. ಸಮೀರ್ ಆಚಾರ್ಯ ಓರ್ವ ಧಾರ್ಮಿಕ ಪಂಡಿತರಾಗಿದ್ದು, ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ತಪ್ಪು ಉತ್ತರ ನೀಡುತ್ತಾರೆ.

ಸಮೀರ್ ಆಚಾರ್ಯ ಎದುರಿಸಿದ ಪ್ರಶ್ನೆ ಏನು?

ರಮೇಶ್ ಅರವಿಂದ್ , ಶೂರ್ಪನಖಿ ತಾಯಿ ಹೆಸರು ಏನು ಎಂದು ಪ್ರಶ್ನೆ ಮಾಡುತ್ತಾರೆ. ಈ ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ಸಹ ನೀಡಲಾಗುತ್ತದೆ. ನಾಲ್ಕು ಆಯ್ಕೆ ಗಮನಿಸಿ, ಉತ್ತರ 'ದಿತಿ' ಎಂದು ಸಮೀರ್ ಆಚಾರ್ಯ ಉತ್ತರ ನೀಡುತ್ತಾರೆ. ಉತ್ತರ ಲಾಕ್ ಮಾಡಿದ್ಮೇಲೆ, ವೀಕ್ಷಕರು ಗ್ಯಾಲರಿಯಲ್ಲಿ ಕುಳಿತಿದ್ದ ಸಮೀರ್ ಆಚಾರ್ಯ ಪತ್ನಿ ಬಳಿ ಇದೇ ಪ್ರಶ್ನೆಯನ್ನು ರಮೇಶ್ ಅರವಿಂದ್ ಕೇಳುತ್ತಾರೆ. ಉತ್ತರ 'ಕೈಕಸಿ' ಎಂದು ಹೇಳುತ್ತಾರೆ. ಆಗ ಇಬ್ಬರ ಮಧ್ಯೆ ಪ್ರವೇಶಿಸಿದ ಸಮೀರ್ ಆಚಾರ್ಯ, ರಾಮಾಯಾಣ ಓದಿರೋದು ನಾನಾ, ನೀನಾ? ಪ್ರವಚನ ಕೊಡುವಾಗ ನಿದ್ದೆ ಮಾಡಿದ್ರೆ ಹೀಗೆ ಆಗುತ್ತೆ ಎಂದು ಪತ್ನಿಯನ್ನು ಲೇವಡಿ ಮಾಡುತ್ತಾರೆ.

ಇದನ್ನೂ ಓದಿ: ಡಿಸ್ನಿಲ್ಯಾಂಡ್‌ಲ್ಲೂ ತಾರತಮ್ಯ: ಬಿಳಿ ಮಕ್ಕಳ ಮಾತ್ರ ತಬ್ಬಿ ಕಪ್ಪು ಕಂದನ ನಿರ್ಲಕ್ಷಿಸಿದ ಕಾರ್ಟೂನ್ ಪಾತ್ರಧಾರಿ 

Scroll to load tweet…

ಸಮೀರ್ ಆಚಾರ್ಯ ಇಷ್ಟು ಹೇಳಿದಂತೆ ರಮೇಶ್ ಅರವಿಂದ್, ನಿಮ್ಮ ಪತ್ನಿ ನೀಡಿದ್ದ ಉತ್ತರ ಸರಿ. ನೀವು ಕೊಟ್ಟಿದ್ದು ತಪ್ಪು ಎಂದು ಹೇಳುತ್ತಾರೆ. ಆಗ ಸಮೀರ್ ಆಚಾರ್ಯ ಅವರ ಅತಿಯಾದ ಆತ್ಮವಿಶ್ವಾಸಕ್ಕೆ ದೊಡ್ಡದಾದ ಪೆಟ್ಟು ಬೀಳುತ್ತದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಶೀರ್ಷಿಕೆಯಡಿಯಲ್ಲಿ ವೈರಲ್ ಆಗುತ್ತಿರುತ್ತದೆ.

ಆತ್ಮವಿಶ್ವಾಸದಿಂದ ತಪ್ಪು ಉತ್ತರ ನೀಡಿದ ವಿರಾಟ್ ಅಯ್ಯರ್

ಇಶಿತ್ ಭಟ್ ಜೊತೆಯಲ್ಲಿ ಗೂಗಲ್ ಬಾಯ್‌ ಖ್ಯಾತಿಯ ವಿರಾಟ್ ಅಯ್ಯರ್ ಸಹ ಕೆಬಿಸಿ ಸ್ಪರ್ಧಿಯಾಗಿದ್ದನು. ವಿರಾಟ್ ಅಯ್ಯರ್ ಸಹ ಸ್ಪರ್ಧೆಯಲ್ಲಿ ಅತಿರೇಕದ ವರ್ತನೆಯಿಂದಲೇ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದನು. 1 ಕೋಟಿ ಮೊತ್ತದ ಪ್ರಶ್ನೆಗೂ ಅತಿಯಾದ ಆತ್ಮವಿಶ್ವಾಸದಿಂದ ತಪ್ಪು ಉತ್ತರ ನೀಡುತ್ತಾನೆ. ಇದರಿಂದ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಪೋಷಕರು ಕೋಪಗೊಳ್ಳುತ್ತಾರೆ. ತಪ್ಪು ಉತ್ತರ ನೀಡಿದ ಬಳಿಕ ವಿರಾಟ್ ಅಸಹಾಯಕನಂತೆ ಮುಖ ಮಾಡುತ್ತಾನೆ.

ಇದನ್ನೂ ಓದಿ: ಕೆಬಿಸಿ ಶೋದಲ್ಲಿ ಅಮಿತಾಭ್‌ಗೆ ಅವಮಾನಿಸಿದ ಬಾಲಕ 5ನೇ ರೌಂಡಲ್ಲೇ ಔಟ್: ಇದು ಪೋಷಕರಿಗೊಂದು ಪಾಠ ಎಂದ ನೆಟ್ಟಿಗರು

Scroll to load tweet…