ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆಗಳು ಬರ್ತಿಲ್ಲ. ಜೀವ ಬೆದರಿಕೆ ವಿಚಾರವನ್ನು ಸ್ವಯಂ ಸೃಷ್ಟಿ ಮಾಡಿಕೊಂಡಿದ್ದಾರೆ. ಫೇಕ್ ಕರೆಗಳನ್ನು ನೀವೇ ಮಾಡಿಸಿ ಕಪಟ ನಾಟಕ ಮಾಡಬೇಡಿ ಎಂದು ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದರು.

ದಾವಣಗೆರೆ (ಅ.14): ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆಗಳು ಬರ್ತಿಲ್ಲ. ಜೀವ ಬೆದರಿಕೆ ವಿಚಾರವನ್ನು ಸ್ವಯಂ ಸೃಷ್ಟಿ ಮಾಡಿಕೊಂಡಿದ್ದಾರೆ. ಫೇಕ್ ಕರೆಗಳನ್ನು ನೀವೇ ಮಾಡಿಸಿ ಕಪಟ ನಾಟಕ ಮಾಡಬೇಡಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದರು. ಆರ್‌‌ಎಸ್‌ಎಸ್‌ ಬಗ್ಗೆ ಮಾತನಾಡಿದ್ದಕ್ಕೆ ಬೆದರಿಕೆ ಕರೆ ಆರೋಪ ವಿಚಾರವಾಗಿ ಮಾತನಾಡಿದ ಅವರು, ಗೂಂಡಾ ಸಂಸ್ಕೃತಿ ನಿಮ್ಮದು, ಕಲಬುರಗಿ ಭಾಗದಲ್ಲಿ ಗೂಂಡಾ ರಾಜ್ಯ ಮಾಡಿದ್ದೀರಿ. ಗುಲ್ಬರ್ಗಾ ಭಾಗವನ್ನು ಗೂಂಡಾ ರಾಜ್ಯ ಮಾಡಲು ಖರ್ಗೆ ಮುಂದಾಗಿದ್ದಾರೆ. ಇದೆಲ್ಲಾ ನಡೆಯಲ್ಲ ಪ್ರಿಯಾಂಕಾ ಖರ್ಗೆ. ಈ ರೀತಿ ಕಪಟ ನಾಟಕ ಆಡಬೇಡಿ ಎಂದು ಪ್ರಿಯಾಂಕಾ ಖರ್ಗೆಗೆ ಕೌಂಟರ್ ಕೊಟ್ಟರು.

ಮಲ್ಲಿಕಾರ್ಜುನ್ ಖರ್ಗೆ ಪುತ್ರ ಅನ್ನೋ ಕಾರಣಕ್ಕೆ ಸಿಎಂ ಸಿದ್ಧು ಓವರ್ ಟೇಕ್ ಮಾಡುತ್ತಿದ್ದಾರೆ. ಸಿಎಂ ಓವರ್ ಟೇಕ್ ಮಾಡಿ ಎಲ್ಲ ಕಚೇರಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಆರ್‌ಎಸ್‌ಎಸ್ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ಪ್ರಿಯಾಂಕಾ ಖರ್ಗೆ ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಮಲ್ಲಿಕಾರ್ಜುನ ಸುಪುತ್ರ ಅನ್ನೋ ಕಾರಣಕ್ಕೆ ಸಚಿವ ಆಗಿದ್ದು. ಗುಲ್ಬರ್ಗ ಜಿಲ್ಲೆ ಬಗ್ಗೆ ಗಮನ ಹರಿಸಿ, ಮೂಲಭೂತ ಸೌಕರ್ಯ ಕುರಿತು ವಿಚಾರ ಮಾಡಿ. ಅದನ್ನು ಬಿಟ್ಟು, ದಿನನಿತ್ಯ ಸೂಪರ್ ಸಿಎಂ ರೀತಿ ವರ್ತನೆ ಮಾಡ್ಬೇಡಿ. ಸಂಕಷ್ಟ ಸಂದರ್ಭದಲ್ಲಿ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುವ ಸಂಘಟನೆ ಆರ್‌ಎಸ್‌ಎಸ್ ಎಂದರು

ಅಂತ ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡುವುದು ನಿಮಗೆ ಶೋಭೆ ತರುತ್ತದೆಯೆ? ಅಧಿಕಾರ ಇದ್ರೆ ಬ್ಯಾನ್ ಮಾಡ್ತೀನಿ ಅಂತಿರಾ? ಬಿ ಕೆ ಹರಿಪ್ರಸಾದ್ ತಾಲಿಬಾನ್ ಅಂತಾರೆ ನಾಚಿಕೆ ಬರಲ್ವಾ ಹರಿಪ್ರಸಾದ್. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಹರಿಪ್ರಸಾದ್, ಲಾಡ್ ಎಲ್ಲರೂ ಧ್ವನಿಗೂಡಿಸಿದ್ದಾರೆ. ಪಿಎಫ್ಐ, ಎಸ್ ಟಿ ಪಿಐ ಅಂತ ರಾಷ್ಟ್ರ ದ್ರೋಹ ಸಂಘಟನೆಗಳು ಸರ್ಕಾರಿ ಜಾಗ ಕಬಳಿಸಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರದಲ್ಲಿ ಶಾಲೆಯನ್ನೇ ಮಸೀದಿ ಮಾಡಿದ್ದಾರೆ ಇದು ನಿಮಗೆ ಶೋಭೆ ತರುತ್ತದೆಯೇ..? ರಾಜ್ಯದಲ್ಲಿ ಅಲ್ಪಸಂಖ್ಯಾತರು ಸಾಕಷ್ಟು ಗೂಂಡಾಗಿರಿ ಮಾಡಿದ್ದಾರೆ ಅವರು ನಿಮಗೆ ದೇಶಭಕ್ತರು.

ಕಾಂಗ್ರೆಸ್‌ನಲ್ಲಿ ಕ್ರಾಂತಿ ಆಗುತ್ತೆ

ಆರ್‌ಎಸ್‌ಎಸ್ ಯಾವಾಗಲೂ ದೇಶದ ಪರ ಜೈಘೋಷ ಹಾಕೋದು, ನಿಮ್ಮ ಸರ್ಕಾರ ನವೆಂಬರ್ 26 ವರಗೆ ಮಾತ್ರ. ನವೆಬರ್ 26 ನಂತರ ಕಾಂಗ್ರೆಸ್‌ನಲ್ಲಿ ಕ್ರಾಂತಿ ಆಗುತ್ತೆ. ಈಗಾಗಲೇ ಡಿನ್ನರ್ ಪಾರ್ಟಿ ವೇಳೆ ಕೆಲವರ ಮುಹೂರ್ತ ಫಿಕ್ಸ್ ಆಗಿದೆ. ಅದನ್ನು ಡೈವೋರ್ಟ್ ಮಾಡಲು ಸಂಘದ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ಮುಂದೆ ಸಂಘದ ಬಗ್ಗೆ ಮಾತನಾಡಿದರೆ ಸಹಿಸುವುದಿಲ್ಲ ಎಂದು ರೇಣುಕಾಚಾರ್ಯ ಎಚ್ಚರಿಕೆ ಕೊಟ್ಟರಲ್ಲದೇ ಡಿಕೆ ಶಿವಕುಮಾರ್ ಏ.. ಕರಿ ಟೋಪಿ ಎಂಎಲ್ಎ ಅಂತಾ ಅವಮಾನ ಮಾಡಿದ್ದಾರೆ. ಸಂಘ ಯಾವತ್ತೂ ಯಾರನ್ನು ಅವಮಾನ ಮಾಡುವುದಿಲ್ಲ. ಮಾತನಾಡಿದರೆ ನಾವು ಸಹಿಸೋದಿಲ್ಲ ಎಂದು ರೇಣುಕಾಚಾರ್ಯ ಆಕ್ರೋಶವನ್ನು ವ್ಯಕ್ತಪಡಿಸಿದರು.