ಮಕ್ಕಳ ಪ್ರಶ್ನೆಗಳಿಗೆ ಸಮಚಿತ್ತದಿಂದ ಉತ್ತರಿಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್!
ಜೀ ಕುಟುಂಬ ಪ್ರಶಸ್ತಿ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಸಂಸದ ಯದುವೀರ್ ಒಡೆಯರ್, ವೇದಿಕೆಯ ಮೇಲೆ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. ಇದೇ ವೇಳೆ ಅವರು 'ಕರ್ಣ' ಧಾರಾವಾಹಿಯ ನಟ ಕಿರಣ್ ರಾಜ್ ಅವರಿಗೆ ಜನಪ್ರಿಯ ನಟ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದರು.

ಸಂಸದ ರಾಜವಂಶಸ್ಥ ಯದುವೀರ್ ಒಡೆಯರ್
ಸಂಸದ ರಾಜವಂಶಸ್ಥ ಯದುವೀರ್ ಒಡೆಯರ್ ಮಕ್ಕಳ ಪ್ರಶ್ನೆಗಳಿಗೆ ಸಮಚಿತ್ತದಿಂದ ಉತ್ತರಿಸಿದ್ದಾರೆ. ಜೀ ಕುಟುಂಬ ಪ್ರಶಸ್ತಿ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಯದುವೀರ್ ಒಡೆಯುರ್ ಆಗಮಿಸಿದ್ದರು. ಈ ವೇಳೆ ವೇದಿಕೆ ಮೇಲೆ ಮಕ್ಕಳ ಪ್ರಶ್ನೆಗಳಿಗೆ ಯದುವೀರ್ ಒಡೆಯರ್ ಉತ್ತರ ನೀಡಿದ್ದಾರೆ
ನೀವು ಮಹಾರಾಜರು ಅಲ್ಲವಾ?
ನಾ ನಿನ್ನ ಬಿಡಲಾರೆ ಸೀರಿಯಲ್‌ನ ಹಿತಾ, ನೀವು ಮಹಾರಾಜರು ಅಲ್ಲವಾ? ನಿಮ್ಮ ಮಗ ಏನೇ ಕೇಳಿದರೆ ತಕ್ಷಣವೇ ಕೊಡ್ತೀರಾ ಎಂದು ಕೇಳಿದ್ದಾರೆ. ತಕ್ಷಣ ಕೊಟ್ಟರೆ ಮುಂದೆ ನನಗೆ ಕಷ್ಟವಾಗುತ್ತದೆ. ಹಾಗಾಗಿ ನಾನು ಸಹ ಕೊಡಲ್ಲ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.
ಜನಪ್ರಿಯ ನಟ ಪ್ರಶಸ್ತಿ
ಈ ವರ್ಷದ ಜೀ ಕುಟುಂಬದ ಜನಪ್ರಿಯ ನಟ ಪ್ರಶಸ್ತಿ, ಕರ್ಣ ಧಾರಾವಾಹಿಯ ಕಿರಣ್ ರಾಜ್ ಪಡೆದುಕೊಂಡಿದ್ದಾರೆ. ಯದುವೀರ್ ಒಡೆಯರ್ ವಿಜೇತರ ಹೆಸರು ಘೋಷಿಸಿ ನಟ ಕಿರಣ್ ರಾಜ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಕರ್ಣ ಸೀರಿಯಲ್ ಉತ್ತಮ ಟಿಆರ್‌ಪಿ ಪಡೆಯುವ ಮೂಲಕ ನಂಬರ್ ಒನ್ ಧಾರಾವಾಹಿಯಾಗಿದೆ.
ಕಿರಣ್ ರಾಜ್ ಫೌಂಡೇಶನ್
ಇದೇ ಪ್ರೋಮೋದಲ್ಲಿ ಕಿರಣ್ ರಾಜ್, ತಮ್ಮ ಫೌಂಡೇಶನ್ ಮೂಲಕ ಸಮಾಜಸೇವೆ ಸಲ್ಲಿಸುತ್ತಿದ್ದಾರೆ. ಕಿರಣ್ ರಾಜ್ ಫೌಂಡೇಶನ್ ಮೂಲಕ ಅನಾಥ ಆಶ್ರಮವೊಂದಕ್ಕೆ ಆಹಾರ ಸಾಮಾಗ್ರಿಗಳನ್ನು ತಲುಪಿಸಲಾಗುತ್ತದೆ. ಅನಾಥ ಆಶ್ರಮದಲ್ಲಿರುವ ಜನರು ಕಿರಣ್ ರಾಜ್ ಅವರಿಗೆ ಆಶೀರ್ವದಿಸಿದ್ದಾರೆ.
ಇದನ್ನೂ ಓದಿ: ಧ್ರುವಂತ್‌ಗೆ ಮಾತೇ ಮುಳ್ಳಾಯ್ತು; ಬಿಗ್‌ಬಾಸ್‌ನ Expect The Unexpected ಅಂದ್ರೆ ಇದೇ ನೋಡಿ
ಜೀ಼ ಕುಟುಂಬ ಅವಾರ್ಡ್ಸ್-2025
ಈ ಬಾರಿಯ ಜೀ ಕುಟುಂಬ ಪ್ರಶಸ್ತಿ ಪ್ರದಾನ ಕಾರ್ಯಕ್ರಮ (ಜೀ಼ ಕುಟುಂಬ ಅವಾರ್ಡ್ಸ್-2025 ) ಇದೇ ಶನಿವಾರ ಮತ್ತು ಭಾನುವಾರ ಸಂಜೆ 6.30ಕ್ಕೆ ಪ್ರಸಾರವಾಗಲಿದೆ. ಈಗಾಗಲೇ ಕಾರ್ಯಕ್ರಮದ ಪ್ರೋಮೋಗಳನ್ನು ವಾಹಿನಿ ಬಿಡುಗಡೆ ಮಾಡುತ್ತಿದೆ.
ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ಕಂಠಿಗೆ ಶಿವಣ್ಣ ಸರ್ಪ್ರೈಸ್, ವೇದಿಕೆ ಮೇಲೆ ಬಿಗ್ ಅನೌನ್ಸ್ಮೆಂಟ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

