ಗ್ರಾಜುಯೇಷನ್ ಡೇ ಇಷ್ಟೊಂದು ದುಬಾರಿನಾ, ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದರೂ ಆರ್ಥಿಕ ಸಂಕಷ್ಟದಿಂದಾಗಿ ಗ್ರಾಜುಯೇಷನ್ ಡೇನಲ್ಲಿ ಭಾಗವಹಿಸಲಾಗದೇ ವಿದ್ಯಾರ್ಥಿಯಾಗಿ ಹೋಗುವ ಬದಲು ಅತಿಥಿಯಂತೆ ಹೋಗಬೇಕಾಯ್ತು ಎಂದು ಯುವತಿಯೊಬ್ಬಳು ಹೇಳಿಕೊಂಡಿದ್ದು ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಗ್ರಾಜುಯೇಷನ್ ಡೇ ಇಷ್ಟೊಂದು ದುಬಾರಿ ನಾ: ಯುವತಿ ಪೋಸ್ಟ್ ಭಾರಿ ವೈರಲ್
ಶಿಕ್ಷಣ ಪಡೆದು ಒಳ್ಳೆಯ ಹುದ್ದೆಗೇರಬೇಕು ಎಂಬ ಕನಸು ಅನೇಕರಿಗಿರುತ್ತದೆ. ಆದರೆ ಆರ್ಥಿಕ ಸಂಕಷ್ಟ ಹಾಗೂ ಹಲವು ಸಮಸ್ಯೆಗಳ ಕಾರಣಕ್ಕೆ ಅನೇಕರ ಶಿಕ್ಷಣ ಅರ್ಧದಲ್ಲೇ ಕುಂಠಿತವಾಗುತ್ತದೆ. ಆದರೂ ಕೆಲವರು ಪರಿಸ್ಥಿತಿ ಹೇಗೆ ಇದ್ದರೂ ಶ್ರಮವಹಿಸಿ ಧೈರ್ಯದಿಂದ ಹಲವು ಅಡ್ಡಿ ಆತಂಕಗಳನ್ನು ದಾಟಿ ಯಶಸ್ವಿಯಾಗಿ ಗೆಲುವು ಸಾಧಿಸುತ್ತಾರೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಆರ್ಥಿಕ ಸಂಕಷ್ಟದಿಂದಾಗಿ ಕಾಲೇಜನ್ನು ಅರ್ಧಕ್ಕೆ ತೊರೆದರೂ ತಾನು ಡಿಸ್ಟಿಂಕ್ಷನ್‌ನಲ್ಲಿ ಪಾಸಾದ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಅವರ ಸ್ಟೋರಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅದಕ್ಕೆ ಕಾರಣವಾಗಿದ್ದು, ಗ್ರಾಜುಯೇಷನ್ ಡೇ ಅಥವಾ ಘಟಿಕೋತ್ಸವಕ್ಕೆ ತಗಲುವ ವೆಚ್ಚದ ಬಗ್ಗೆ ಆಕೆ ಹೇಳಿದ ಮಾತು.
ಡಿಸ್ಟಿಂಕ್ಷನ್ ಗಳಿಸಿದರು ಅತಿಥಿಯಂತೆ ಭಾಗವಹಿಸಿದೆ ಎಂದ ಯುವತಿ
ರೆಡಿಯೋ ಜಾಕಿಯಾಗಿಯೂ ಕೆಲಸ ಮಾಡುತ್ತಿರುವ ಇನ್‌ಫ್ಲುಯೆನ್ಸರ್ ರಿಷಿಕಾ ಎಂಬುವವರು ಈ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ ಗ್ರಾಜುಯೇಷನ್ ಡೇ ಅಥವಾ ಘಟಿಕೋತ್ಸವದಲ್ಲಿ ಭಾಗವಹಿಸುವುದು ಅನೇಕ ವಿದ್ಯಾರ್ಥಿಗಳ ಕನಸು. ಆದರೆ ಇದಕ್ಕೆ ಎಷ್ಟು ವೆಚ್ಚ ತಗುಲುವುದು ಎಂಬುದರ ಬಗ್ಗೆ ಗೊತ್ತಿಲ್ಲ. ಸರ್ಕಾರಿ ಕಾಲೇಜುಗಳ ಘಟಿಕೊತ್ಸವದಲ್ಲಿ ವಿದ್ಯಾರ್ಥಿಗಳಿಗೆ ಇದಕ್ಕಾಗಿ ಯಾವುದೇ ವೆಚ್ಚ ಇರುವುದಿಲ್ಲ, ಬಹುಶಃ ಖಾಸಗಿ ಕಾಲೇಜುಗಳಲ್ಲಿ ಶುಲ್ಕ ವಿಧಿಸುತ್ತಾರೋ ಮಾಹಿತಿ ಇಲ್ಲ. ಆದರೆ ರಿಶಿಕಾ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಗ್ರಾಜುಯೇಷನ್ ಡೇಗೆ ನೀಡುವಷ್ಟು ಹಣವಿಲ್ಲದ ಕಾರಣ ತಾವು ಡಿಸ್ಟಿಂಕ್ಷನ್ ಗಳಿಸಿದರು ಅತಿಥಿಯಂತೆ ಭಾಗವಹಿಸಬೇಕಾಯ್ತು ಎಂದು ಹೇಳಿದ್ದಾರೆ. ಈ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.
ಯುವತಿಯ ಪೋಸ್ಟ ಹೀಗಿದೆ
ಅವರ ಪೋಸ್ಟ್ ಹೀಗಿದೆ. 'ನಾನು ನನ್ನದೇ ಗ್ರಾಜುಯೇಷನ್ ಡೇಯಲ್ಲಿ ಅತಿಥಿಯಾಗಿ ಭಾಗವಹಿಸಿದೆ. ಏಕೆಂದರೆ ಆರ್ಥಿಕವಾಗಿ ನನಗೆ ಅದನ್ನು ಭರಿಸಲು ಸಾಧ್ಯವಿಲ್ಲ. ಒಂದು ದಿನ ವೇದಿಕೆಯ ಮೇಲೆ ನಡೆಯುವುದಕ್ಕಿಂತ ಆ ತಿಂಗಳನ್ನು ಬದುಕುವುದು ಮುಖ್ಯ ಎಂಬುದು ನನ್ನ ವಿಚಾರವಾಗಿತ್ತು. ಆದರೂ ನಾನು ಅಲ್ಲಿ ಭಾಗವಹಿಸಬೇಕು ಎಂದು ನಾನು ನಿಜವಾಗಿಯೂ ಬಯಸಿದ್ದೆ. ನಾನು ಗ್ರಾಜುಯೇಷನ್‌ಗೆ ಮೊದಲಾಗಲಿ ನಂತರವಾಗಲಿ ಯಾವತ್ತು ವಾಚನ್ನು ಧರಿಸಿರಲಿಲ್ಲ. ಈ ಹಿಂದೆ ನಾನು ನಾನು ಬ್ಯಾಚುಲರ್ ಡಿಗ್ರಿ ಶುರು ಮಾಡಿದ್ದೆ ಆದರೆ ನಾನು ಅದನ್ನು ಹಣಕಾಸಿನ ತೊಂದರೆಯಿಂದಾಗಿ ಪೂರ್ತಿ ಮಾಡಲಾಗಲಿಲ್ಲ. ಹೀಗಾಗಿ ಈಗ ಇದು ನನಗೆ ಸಿಹಿಕಹಿ ಎರಡು ಮಿಶ್ರಿತವಾದ ಸಮಯವಾಗಿತ್ತು. ಆದರೂ ನಾನು ನನ್ನ ಗ್ರಾಜುಯೇಷನ್ ಡೇಯಲ್ಲಿ ಭಾಗವಹಿಸಲೇಬೇಕು ಎಂದು ಕಠಿಣ ನಿರ್ಧಾರ ಮಾಡಿದ್ದೆ. ಏಕೆಂದರೆ ಕನಿಷ್ಠ ನೆನಪುಗಳಾದರು ನನ್ನ ಜೊತೆಗೆ ಇರುತ್ತದೆ ಅದಕ್ಕಿಂತ ಹೆಚ್ಚಾಗಿ ನನಗೆ ಪ್ರೋತ್ಸಾಹಿಸುವುದಕ್ಕೆ ನನ್ನ ಸಹದ್ಯೋಗಿಗಳು ಅಲ್ಲಿ ನನ್ನ ಜೊತೆಗಿದ್ದರು. ಅವರು ನಾನು ನನ್ನ ಜೀವನದ ಕಷ್ಟದ ದಿನಗಳಲ್ಲಿ ಜೊತೆಗೆ ಇದ್ದವರಾಗಿದ್ದರು.
ಈಗ ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ನಾನು ಮೆರಿಟ್‌ನೊಂದಿಗೆ ಪದವಿ ಪಡೆದಿದ್ದೇನೆ. ನಾನು ನನ್ನ ಸಂಶೋಧನೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ್ದು, ಕೊನೆಗೂ ನಾನು ಮಾಸ್ಟರ್ ಡಿಗ್ರಿ ಹೊಲ್ಡರ್ ಎನಿಸಿದ್ದೇನೆ. ಹಾಗೂ ಇದೆಲ್ಲವನ್ನೂ ನಾನು ಒಬ್ಬಳು ಒಂಟಿ ತಾಯಿಯಾಗಿ ಯಾವುದೇ ದೊಡ್ಡ ಬೆಂಬಲಗಳಿಲ್ಲದೇ ಮಾಡಿದ್ದೇನೆ. ಜೀವನ ನನಗೆ ಕೆಲವೊಮ್ಮೆ ನೀವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಕಲಿಸಿದೆ. ಹಾಗೂ ನೀವು ಅದರ ಮೂಲಕ ಸಾಗಿದಾಗ ನೀವು ಇನ್ನು ವಿಭಿನ್ನವಾಗಿ ಹಾಗೂ ಮತ್ತಷ್ಟು ಸ್ಟಂಗ್ ಆಗುವಿರಿ. ಹಾಗೂ ನಿಮಗೆಲ್ಲರಿಗೂ ಕೊನೆಗೆ ಉಳಿಯುವುದು ನೆನಪುಗಳು ಏಕೆಂದರೆ ಈ ಕ್ಷಣ ಓಡುತ್ತಲೇ ಇರುತ್ತದೆ. ಗತವೂ ಜೀವಿಸುತ್ತದೆ ಹಾಗೂ ಭವಿಷ್ಯದ ಬಗ್ಗೆ ನಿಮಗೆ ತಿಳಿದಿರುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
ಆದರೆ ಈಕೆಯ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ. ಅನೇಕರು ಘಟಿಕೋತ್ಸವಕ್ಕೆ ಎಷ್ಟು ಚಾರ್ಜ್ ಮಾಡ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಅದ್ಕೆ ಆಕೆ ಪ್ರತಿಕ್ರಿಯಿಸಿದ್ದು, ಸುಮಾರು 32 ಸಾವಿರ ರೂಪಾಯಿ ಚಾರ್ಜ್ ಮಾಡ್ತಾರೆ ಎಂದು ಹೇಳಿದ್ದಾರೆ. ಅದಕ್ಕೆ ಅನೇಕರು ಅಚ್ಚರಿಪಟ್ಟಿದ್ದು, ಗ್ರಾಜುಯೇಷನ್ ಡೇ ಗವನ್ ಬಾಡಿಗೆಗೆ ತೆಗೆದುಕೊಳ್ಳಲಾಗುತ್ತದೆ ಮತ್ತೇಕೆ ಇಷ್ಟೊಂದು ದುಬಾರಿ ಚಾರ್ಜ್ ಮಾಡಲಾಗುತ್ತದೆ ಅದು ಯಾವ ಕಾಲೇಜು ಎಂದು ಪ್ರಶ್ನೆ ಮಾಡಿದ್ದಾರೆ ಆದರೆ ಅದಕ್ಕೆ ಅವರು ಪ್ರತಿಕ್ರಿಯಿಸಿಲ್ಲ. ಆದರೆ ಗ್ರಾಜುಯೇಷನ್ ಡೇಗೆ ಇಷ್ಟೊಂದು ಹಣ ಕೇಳುತ್ತಾರೆ ಎಂಬ ವಿಚಾರ ತಿಳಿದು ಅನೇಕರು ಅಚ್ಚರಿಪಟ್ಟಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಇದನ್ನೂ ಓದಿ: ಡಿಜಿಟಲ್ ಅರೆಸ್ಟ್‌ಗಾಗಿಯೇ ನಕಲಿ ಬಿಪಿಒ ಸ್ಥಾಪನೆ: HSR ಲೇಔಟ್ ಪೊಲೀಸರ ದಾಳಿ: 16 ಉತ್ತರ ಭಾರತೀಯರ ಬಂಧನ
ಇದನ್ನೂ ಓದಿ: ಬೆಂಗಳೂರಿನ ರಸ್ತೆಗಳ ದುಸ್ಥಿತಿ ಬಗ್ಗೆ ಕಿರಣ್ ಮಜುಂದಾರ್ ಅಸಮಾಧಾನ: ಉದ್ಯಮಿಯ ಟ್ವಿಟ್‌ಗೆ ಎಂಬಿ ಪಾಟೀಲ್ ಆಕ್ರೋಶ
