ಬಳ್ಳಾರಿ: ಬಳ್ಳಾರಿಯಲ್ಲಿ ಬಿಜೆಪಿ ನಡೆಸಿದ ಬಳ್ಳಾರಿ ಚಲೋ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ವತಿಯಿಂದ ಸಮಾವೇಶ ಆಯೋಜಿಸುವ ಕುರಿತು ಪಕ್ಷದ ನಾಯಕರು ಹಾಗೂ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿದೆ. ಶೀಘ್ರದಲ್ಲೇ ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಶಾಸಕ ಬಿ. ನಾಗೇಂದ್ರ ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯ ಹಾಗೂ ಸರ್ಕಾರದ ಸಾಧನೆ ಜನರಿಗೆ ತಿಳಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗುತ್ತಿದೆ. ಸಾವಿರಾರು ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದು, ಈ ಸಾಧನೆ ಜನರ ಮುಂದಿಡುವುದು ಸಮಾವೇಶದ ಉದ್ದೇಶವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೂಚನೆ ಮೇರೆಗೆ ಬಳ್ಳಾರಿಯಲ್ಲಿ ಕಾಂಗ್ರೆಸ್ ಸಮಾವೇಶ ನಡೆಸುವ ಕುರಿತು ಚರ್ಚೆ ನಡೆಯುತ್ತಿದೆ.
ಸಮಾವೇಶಕ್ಕೆ ಮುಖ್ಯಮಂತ್ರಿ ಶಿವಕುಮಾರ ಅವರಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಾಂಗ್ರೆಸ್ ನಾಯಕರು ಭಾಗವಹಿಸುವ ಸಾಧ್ಯತೆ ಇದೆ. ಈ ಕುರಿತು ಎಲ್ಲ ನಾಯಕರೊಂದಿಗೆ ಮತ್ತಷ್ಟು ಚರ್ಚೆ ನಡೆಸಿದ ಬಳಿಕ ಸಮಾವೇಶದ ದಿನಾಂಕ ನಿಗದಿಪಡಿಸಲಾಗುವುದು. ಸಮಾವೇಶದ ಸಿದ್ಧತೆ ಕುರಿತು ಶೀಘ್ರದಲ್ಲೇ ಸಭೆ ನಡೆಸಿ ಅಂತಿಮ ರೂಪ ನೀಡಲಾಗುವುದು ಎಂದು ತಿಳಿಸಿದರು.
11:09 PM (IST) Sep 13
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇವತ್ತು ದಿಢೀರ್ ಅಂತಾ ಬಿಸಿಎಂ ಹಾಸ್ಟೆಲ್ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿಗಳ ಜೊತೆ ಮುಕ್ತವಾಗಿ ಮಾತನ್ನಾಡಿ, ನಮ್ಮ ನಾಡಿನ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಬದ್ಧ ಎಂಬ ಭರವಸೆಯನ್ನ ನೀಡಿದರು.
10:43 PM (IST) Sep 13
ಇರಾನಿನ ಪತ್ರಕರ್ತ ಬಾಸಿಮ್ ಲಾಲೆಹ್, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರನ್ನು ತರಾಟೆಗೆ ತೆಗೆದುಕೊಂಡು, ಪಾಕಿಸ್ತಾನದ ವಿಫಲ ರಾಜತಾಂತ್ರಿಕತೆಯನ್ನು ಬಯಲು ಮಾಡಿದ್ದಾರೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
10:18 PM (IST) Sep 13
ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆ ಆದರೂ ಪ್ಲೇಯಿಂಗ್-11ನಲ್ಲಿ ಅವಕಾಶ ಸಿಗಲ್ಲ. ಅವಕಾಶ ಸಿಕ್ಕರೆ ಅದನ್ನ ಎರಡು ಕೈಗಳಿಂದ ಹಾಗೆಯೇ ಬಾಚಿಕೊಳ್ಳಬೇಕು ಎಂಬ ಮಾತಿದೆ. ಆದರೆ ಈ ಸಂಜು ಸ್ಯಾಮ್ಸನ್‌ಗೆ ಅದೆಷ್ಟು ಅವಕಾಶ ನೀಡಬೇಕೋ ಗೊತ್ತಿಲ್ಲ. ಈ ಸ್ಟೋರಿ ಓದಿ.
10:06 PM (IST) Sep 13
ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ನಾಯಕರಿಗೆ ಸಸ್ಯಾಹಾರಿ ಭೋಜನ ನೀಡಿದ್ದಕ್ಕೆ ಎದ್ದಿದ್ದ ವಿವಾದಕ್ಕೆ, ಐಸ್‌ಲ್ಯಾಂಡ್‌ನ ಮಾಜಿ ಅಧ್ಯಕ್ಷರು ತೆರೆ ಎಳೆದಿದ್ದಾರೆ. ಈ ಕುರಿತು ಸಂಪೂರ್ಣ ವಿವರವನ್ನು ನೋಡಿಕೊಂಡು ಬರೋಣ ಬನ್ನಿ.
09:10 PM (IST) Sep 13
18 ದಿನಗಳ ಹಿಂದೆ ವಿಶ್ವ ದಾಖಲೆ ಬರೆದಿದ್ದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಪ್ಲೇಯಿಂಗ್-11ನಿಂದ ಅಚ್ಚರಿಯ ರೀತಿಯಲ್ಲಿ ಕೈಬಿಡಲಾಗಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ
08:20 PM (IST) Sep 13
ಟಿ. ನರಸೀಪುರದಲ್ಲಿ ಗಣೇಶೋತ್ಸವದ ವೇಳೆ ಆರಂಭವಾದ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇನ್ಸ್‌ಪೆಕ್ಟರ್ ಅಮಾನತಿಗೆ ಪಟ್ಟು ಹಿಡಿದು ಸಿಂಹ ಧರಣಿ ನಡೆಸಿದರೆ, ಇತ್ತ ಸಿಂಹ ಅವರೇ ಹಳೆಯ ದಲಿತ ದೌರ್ಜನ್ಯ ಪ್ರಕರಣವನ್ನು ಉಲ್ಲೇಖಿಸಿ ವಿವಾದಕ್ಕೆ ಹೊಸ ತಿರುವು ನೀಡಿದ್ದಾರೆ.
07:49 PM (IST) Sep 13
ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತ ಬಾರ್ ಮುಂಭಾಗವೇ ಕೂತು ಎಣ್ಣೆ ಪಾರ್ಟಿ ಮಾಡಿದ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಮರಸೂರು ಗೇಟ್ ಬಳಿ ನಡೆದಿದೆ. ಹಬ್ಬದ ನೆಪದಲ್ಲಿ ಬಾರ್ ಮುಂದೆ ಕೂತು ಮೋಜು ಮಸ್ತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ.
07:19 PM (IST) Sep 13
ಮೈದಾನದಲ್ಲಿ ಸದಾ ಎದುರಾಳಿ ಬೌಲರ್‌ಗಳಿಗೆ ಸಿಂಹಸ್ವಪ್ನವಾಗುವ ಈ ಧೈರ್ಯಶಾಲಿ ಬ್ಯಾಟರ್, ಇತ್ತೀಚೆಗೆ ಪ್ರಸಿದ್ಧ ಯೂಟ್ಯೂಬರ್ ರಾಜ್ ಶಮಾನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿ ತಮ್ಮ ವೈಯಕ್ತಿಕ ಜೀವನದ ಭಾವನಾತ್ಮಕ ಸತ್ಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
07:11 PM (IST) Sep 13
ವಿಷ್ಣುವರ್ಧನ್ ಮತ್ತು ಅಕ್ಷಯ್ ಕುಮಾರ್ ನಟಿಸಿದ 1993ರ ‘ವಿಷ್ಣು ವಿಜಯ’ ಸಿನಿಮಾ ಕಥೆ ಇಲ್ಲಿದೆ. ಅಕ್ಷಯ್ ಕುಮಾರ್ ಅವರ ಏಕೈಕ ಕನ್ನಡ ಸಿನಿಮಾ, ಮಾಫಿಯಾ ವಿರುದ್ಧದ ಪೊಲೀಸ್ ಹೋರಾಟ ಹಾಗೂ ಚಿತ್ರದ ವಿಶೇಷತೆಗಳ ಮಾಹಿತಿ ತಿಳಿಯಿರಿ.
06:07 PM (IST) Sep 13
ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ 'ವಾರಣಾಸಿ' ಸಿನಿಮಾದ ಸೆಟ್‌ನದ್ದು ಎನ್ನಲಾದ ಫೋಟೋವೊಂದು ವೈರಲ್ ಆಗಿದೆ. ಇದರಲ್ಲಿ ಡೈನೋಸಾರ್, ದೈತ್ಯ ಜೀವಿ, ದೇವಸ್ಥಾನಗಳು ಇವೆ. ಈ ಫೋಟೋ ನಿಜಾನಾ? ಸಿನಿಮಾ ಕಥೆಯೇನು? ಇಲ್ಲಿದೆ ಮಾಹಿತಿ.
05:53 PM (IST) Sep 13
ಹಾವೇರಿ ಜಿಲ್ಲೆಯಲ್ಲಿ, ವರಮಹಾಲಕ್ಷ್ಮಿ ಹಬ್ಬದಂದು ದೇವರ ಚಿನ್ನ ಕದ್ದ ಆರೋಪದ ಮೇಲೆ ನೀಲವ್ವ ಎಂಬ ಬಡ ಮಹಿಳೆಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಬಂಕಾಪುರ ಪೊಲೀಸರು ಕರೆಂಟ್ ಶಾಕ್ ನೀಡಿ ಹಿಂಸಿಸಿದ್ದಾರೆ ಎಂದು ಆರೋಪಿಸಲಾಗಿದೆ, ತೀವ್ರ ಅಸ್ವಸ್ಥಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
05:51 PM (IST) Sep 13
ಭಾರತೀಯ ಕ್ರಿಕೆಟಿಗನ ಕೋಚ್ ಒಬ್ಬರು ಯಶಸ್ಸು ಗಳಿಸಿದ ನಂತರ ತಮ್ಮ ಶಿಷ್ಯ ತನ್ನನ್ನು ಬೆಳೆಸಿದ ಗುರುವಿನಿಂದ ದೂರವಾಗಿದ್ದು, ಈ ಬಗ್ಗೆ ಸಂದರ್ಶನವೊಂದರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
05:44 PM (IST) Sep 13
‘418’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪ್ರಶಾಂತ್ ನೀಲ್ ಅರ್ಪಿಸುತ್ತಿರುವ ಈ ಕನ್ನಡ ಹಾರರ್ ಥ್ರಿಲ್ಲರ್‌ಗೆ ಕೀರ್ತನ್ ನಾಡಗೌಡ ನಿರ್ದೇಶನ ಮಾಡಿದ್ದಾರೆ. 15 ವರ್ಷಗಳಿಂದ ಮುಚ್ಚಿರುವ ರಹಸ್ಯಮಯ ಕಟ್ಟಡ ಮತ್ತು ರೂಮ್ ನಂಬರ್ 418ರ ಸುತ್ತ ಕಥೆ ಸಾಗುತ್ತದೆ.
05:41 PM (IST) Sep 13
05:35 PM (IST) Sep 13
ವಿರಾಟ್ ಕೊಹ್ಲಿ ಹಾಗೂ ಏಕನಾಥ್ ಶಿಂಧೆ ಲಂಡನ್‌ನಲ್ಲಿ ದಿಢೀರ್ ಭೇಟಿಯಾಗಿದ್ದಾರೆ. ಇಬ್ಬರು ಗಣ್ಯರ ಭೇಟಿ ಭಾರೀ ಕುತೂಹಲ ಮೂಡಿಸಿದೆ. ಇನ್ನು, ಕೊಹ್ಲಿ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನ್ನಾಡಿರುವ ಏಕನಾಥ್ ಶಿಂಧೆ.. ಕೊಹ್ಲಿಯನ್ನ ಗುಣಗಾನ ಮಾಡಿದರು.
05:14 PM (IST) Sep 13
ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಗಂಗಾವತಿ ನಗರದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಗಣೇಶ ವಿಗ್ರಹಗಳು, ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನರು ಮುಗಿಬಿದ್ದಿದ್ದು, ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ವಿಗ್ರಹ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಾಗಿದೆ.
05:06 PM (IST) Sep 13
04:56 PM (IST) Sep 13
T Narasipur: ಟಿ.ನರಸೀಪುರದ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾವು ಪಾಕಿಸ್ತಾನದಲ್ಲಿದ್ದೀವಾ ಎಂದು ಪ್ರಶ್ನಿಸಿದ ಅವರು, ಗಣೇಶ ಮೆರವಣಿಗೆಗೆ ನಿರ್ಬಂಧ ಖಂಡಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
04:52 PM (IST) Sep 13
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವದಲ್ಲಿ, ಗದ್ದುಗೆ ಮೇಲಿಟ್ಟು ಪೂಜಿಸಲಾದ ಪವಿತ್ರ ತೆಂಗಿನಕಾಯಿಯು ಹರಾಜಿನಲ್ಲಿ ದಾಖಲೆಯ 8 ಲಕ್ಷದ 1 ರೂಪಾಯಿಗೆ ಮಾರಾಟವಾಗಿದೆ. ಈ ಮೊತ್ತವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ.
04:32 PM (IST) Sep 13
ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಚಿವ ಸತೀಶ್ ಜಾರಕಿಹೊಳಿ ಮೇಲೆ ನಡೆದ ಜಾರಿ ನಿರ್ದೇಶನಾಲಯದ ದಾಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ್ದಾರೆ. ಅವರು ಏನು ಹೇಳಿದ್ದಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ. ಓದಿ..
04:17 PM (IST) Sep 13
Mysuru:ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ಅಕ್ರಮಗಳ ಕಿಂಗ್‌ಪಿನ್? ಪ್ರತಾಪ್ ಸಿಂಹ ನೇತೃತ್ವದಲ್ಲಿ ಅಮಾನತಿಗೆ ಆಗ್ರಹಿಸಿ ಬಿಜೆಪಿ ಅಹೋರಾತ್ರಿ ಧರಣಿ. ಸಂಧಾನ ವಿಫಲ, ಮುಂದೇನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ
04:00 PM (IST) Sep 13
ದುನಿಯಾ ವಿಜಯ್ ನಿರ್ದೇಶನದ ‘ಸಿಟಿ ಲೈಟ್ಸ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ವಿನಯ್ ರಾಜ್‌ಕುಮಾರ್ ಅವರ ರಗಡ್ ಲುಕ್ ಗಮನ ಸೆಳೆಯುತ್ತಿದೆ. ನಟ ಶಿವರಾಜ್‌ಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
03:52 PM (IST) Sep 13
03:49 PM (IST) Sep 13
ಇವತ್ತು ಅಫ್ಘಾನಿಸ್ತಾನದ ವಿರುದ್ಧ ಟೀಂ ಇಂಡಿಯಾ ಮೊದಲ ಟಿ20 ಪಂದ್ಯವನ್ನ ಆಡಲಿದೆ. ತಂಡವನ್ನು ಮುನ್ನಡೆಸುತ್ತಿರುವ ನಾಯಕ ಶ್ರೇಯಸ್ ಅಯ್ಯರ್‍ಗೆ ದೊಡ್ಡ ಚಾಲೆಂಜ್ ಎದುರಾಗಿದೆ. ಸಂಜು, ಅಭಿಷೇಕ್ ಹಾಗೂ ಸೂರ್ಯವಂಶಿ ಈ ಮೂವರಲ್ಲಿ ಯಾರನ್ನು ಆಡಿಸಬೇಕು ಅನ್ನೋದೇ ದೊಡ್ಡ ತಲೆನೋವು ಅವರಿಗಿದೆ. ಅಯ್ಯರ್ ಅವರೇ ಆಡಿರುವ ಮಾತುಗಳು ಇಲ್ಲಿವೆ.
03:02 PM (IST) Sep 13
ಬೆಂಗಳೂರಿನ ಪ್ರಮುಖ ರಸ್ತೆಯಲ್ಲೇ ಅಂಡರ್ ಪಾಸ್ ಕಾಮಗಾರಿ ಆರಂಭಗೊಂಡಿದೆ. ಪರಿಣಾಮ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಸದ್ಯ 2 ದಿನ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಟ್ರಾಫಿಕ್ ಸಮಸ್ಯೆ ಇಲ್ಲ. ಆದರೆ ಮಂಗಳವಾರದಿಂದ ಬೆಂಗಳೂರು ಜನರು ಹೈರಾಣಾಗಲಿದ್ದಾರೆ.
02:08 PM (IST) Sep 13
Maddur Ganeshotsav ಮದ್ದೂರಿನಲ್ಲಿ ಕಳೆದ ವರ್ಷದ ಗಣೇಶೋತ್ಸವದ ಕಲ್ಲು ತೂರಾಟ ಖಂಡಿಸಿ ಪ್ರತಿಭಟಿಸಿದ್ದ ಬಿಜೆಪಿ ಮುಖಂಡರಿಗೆ ಸರ್ಕಾರ ಒಂದು ವರ್ಷದ ಬಳಿಕ ನೋಟಿಸ್ ನೀಡಿದೆ. ಇದು ಹಿಂದೂಗಳನ್ನು ಕುಗ್ಗಿಸುವ ಪ್ರಯತ್ನವಾಗಿ ಎಂದು ಬಿಜೆಪಿ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ,
01:16 PM (IST) Sep 13
ಟಿ.ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್‌ಸ್ಪೆಕ್ಟರ್ ನೀಡಿದ ಎಚ್ಚರಿಕೆಯು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
12:25 PM (IST) Sep 13
ದೇವಸ್ಥಾನಕ್ಕೆ ಹರಕೆ ಮಾಡಲು ಹೊರಟ್ಟಿದ್ದ ವೇಳ ಹಾಲಿನ ವ್ಯಾನ್ ಡಿಕ್ಕಿ ಸಂಭವಿಸಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಮಂಗಲ ಬಳಿ ನಡೆದಿದೆ. ಘಟನೆಗೆ ಕಾರಣವೇನು? ತಿಳಿಯಿರಿ
12:02 PM (IST) Sep 13
11:41 AM (IST) Sep 13
ಬೆಂಗಳೂರಿನ ಸರ್ಕಾರಿ ಶಾಲಾ ಸಮಯವನ್ನು ಬದಲಾಯಿಸುವಂತೆ ಶಿಕ್ಷಕರು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ. ಪ್ರಸ್ತುತ 10.30 ರಿಂದ 4.30 ರವರೆಗೆ ಸರ್ಕಾರ ಶಾಲೆಗಳು ಕಾರ್ಯನಿರ್ವಹಿಸುತ್ತವೆ. ಈ ಸಮಯ ಬದಲಾವಣೆಗೆ ಶಿಕ್ಷಕರು ಮನವಿ ಮಾಡಿಕೊಂಡಿದ್ದಾರೆ.
11:33 AM (IST) Sep 13
10:50 AM (IST) Sep 13
10:28 AM (IST) Sep 13
ಪ್ರಯಾಣಿಕರನ್ನ ಸುರಕ್ಷಿತವಾಗಿ ಮನೆ ತಲುಪಿಸುತ್ತಿದ್ದ ಸಾರಿಗೆ ಬಸ್ ಚಾಲಕ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ತಾನು ಚಲಾಯಿಸುತ್ತಿದ್ದ ಬಸ್‌ನಲ್ಲಿ ಶವವಾಗಿ ಮನೆ ತಲುಪಿದ ದೃಶ್ಯ ನೋಡುವವರ ಕಣ್ಣಾಲಿಗಳು ತುಂಬಿ ಬಂದವು. ಧಾರವಾಡ ಸಾರಿಗೆ ಸಿಬ್ಬಂದಿ ಏನು ಮಾಡಿದ್ರು ನೋಡಿ
09:23 AM (IST) Sep 13
08:50 AM (IST) Sep 13
ಮಳೆಗಾಲದ ಮಧ್ಯದಲ್ಲೇ ಅಂಕೋಲಾದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ವಾಡಿಕೆಗಿಂತ ಶೇ. 42ರಷ್ಟು ಮಳೆ ಕೊರತೆಯಾಗಿದ್ದು, ಜನರು ಮಳೆಗೆ ತಂದ ಛತ್ರಿಯನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬಳಸುವಂತಾಗಿದೆ.
08:36 AM (IST) Sep 13
Agumbe Ghat: ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಆಗುಂಬೆ ಘಾಟಿ ರಸ್ತೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ₹18 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.
07:58 AM (IST) Sep 13
07:55 AM (IST) Sep 13
07:47 AM (IST) Sep 13
07:35 AM (IST) Sep 13
ರಾಮಲಿಂಗಾರೆಡ್ಡಿ ಅವರು BTM ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 3 ಮೆಟ್ರೋ ನಿಲ್ದಾಣಗಳ ಮರುನಾಮಕರಣಕ್ಕೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿದ್ದಾರೆ. ಈ ಹೆಸರುಗಳು ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಸ್ಥಳೀಯ, ಭೌಗೋಳಿಕ ಮಹತ್ವವನ್ನು ಪರಿಗಣಿಸಿ ಹೆಸರುಗಳನ್ನು ಬದಲಾಯಿಸುವಂತೆ ಸೂಚಿಸಿದ್ದಾರೆ.