- Home
- Karnataka Districts
- Mandya: ಹಾಲಿನ ವ್ಯಾನ್-ಟಾಟಾ ಏಸ್ ಭೀಕರ ಡಿಕ್ಕಿ: ಹರಕೆ ತೀರಿಸಲು ಹೊರಟಿದ್ದವರು ಆಸ್ಪತ್ರೆಗೆ! ಸಾವು-ನೋವುಗಳೆಷ್ಟು?
Mandya: ಹಾಲಿನ ವ್ಯಾನ್-ಟಾಟಾ ಏಸ್ ಭೀಕರ ಡಿಕ್ಕಿ: ಹರಕೆ ತೀರಿಸಲು ಹೊರಟಿದ್ದವರು ಆಸ್ಪತ್ರೆಗೆ! ಸಾವು-ನೋವುಗಳೆಷ್ಟು?
ದೇವಸ್ಥಾನಕ್ಕೆ ಹರಕೆ ಮಾಡಲು ಹೊರಟ್ಟಿದ್ದ ವೇಳ ಹಾಲಿನ ವ್ಯಾನ್ ಡಿಕ್ಕಿ ಸಂಭವಿಸಿ ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಮಂಗಲ ಬಳಿ ನಡೆದಿದೆ. ಘಟನೆಗೆ ಕಾರಣವೇನು? ತಿಳಿಯಿರಿ

ನಾಗಮಂಗಲ: ಹಾಲಿನ ವ್ಯಾನ್-ಟಾಟಾ ಏಸ್ ಭೀಕರ ಮುಖಾಮುಖಿ ಡಿಕ್ಕಿ
ಮಂಡ್ಯ (ಸೆ.13): ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕ್ಯಾತನಹಳ್ಳಿ ಗೇಟ್ ಬಳಿ ಹಾಲಿನ ವ್ಯಾನ್ ಹಾಗೂ ಟಾಟಾ ಏಸ್ ನಡುವೆ ಭೀಕರ ಮುಖಾಮುಖಿ ಡಿಕ್ಕಿಯಾಗಿ 10ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದಿದೆ. ಗಾಯಾಳು ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆದ ಬಗ್ಗೆ ವರದಿಯಾಗಿಲ್ಲ. ಆದರೆ ಇಬ್ಬರು ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದೆ.
ಮಂಡ್ಯ: ದೇವಸ್ಥಾನಕ್ಕೆ ಹರಕೆ ಮಾಡಲು ಹೊರಡುವಾಗ ಅಪಘಾತ
ಶ್ರವಣಬೆಳಗೋಳ-ನಾಗಮಂಗಲ ರಸ್ತೆಯ ಗಡಿ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಗಾಯಾಳುಗಳು ಚನ್ನರಾಯಪಟ್ಟಣದ ಶ್ರೀನಿವಾಸಪುರದ ನಿವಾಸಿಗಳಾಗಿದ್ದಾರೆ. ನಾಗಮಂಗಲ ಬಳಿಯ ಮುಳ್ಳುಕಟ್ಟಮ್ಮ ದೇವಸ್ಥಾನಕ್ಕೆ ಪರ(ಹರಕೆ) ಮಾಡಲು ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಗಾಯಾಳುಗಳು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಟಾ ಏಸ್‌ನಲ್ಲಿ ಹೊರಟಿದ್ದ ವೇಳೆ ಎದುರುಗಡೆಯಿಂದ ಬಂದ ಹಾಲಿನ ವ್ಯಾನ್ ಈ ವೇಳೆ ನಿಯಂತ್ರಣ ಕಳೆದುಕೊಂಡು ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯಾದ ರಭಸಕ್ಕೆ ರಸ್ತೆ ಮೇಲೆ ಚೆಲ್ಲಪಿಲ್ಲಿ ಬಿದ್ದ ಜನರು. ತಕ್ಷಣ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

