Published : Dec 01, 2025, 06:46 AM ISTUpdated : Dec 01, 2025, 11:01 PM IST

Karnataka News Live: Brahmagantuಗೆ ನಟಿ ಪದ್ಮಾ ವಾಸಂತಿ ಎಂಟ್ರಿ! ವೀಕ್ಷಕರಿಂದ ಭಾರಿ ಅಸಮಾಧಾನ- ಕಾರಣ ಇಲ್ಲಿದೆ

ಸಾರಾಂಶ

ಬೆಂಗಳೂರು: ‘ಕುಮಾರಣ್ಣನಿಗೆ ಒಕ್ಕಲಿಗರ ಎರಡನೇ ಮಠ ಹೇಗಾಯ್ತು ಎಂಬುದು ಗೊತ್ತಿಲ್ಲವೇ? ಅದನ್ನು ಕಟ್ಟಿದವರು ಯಾರು? ಒಕ್ಕಲಿಗ ಮಠದ ಹಿರಿಯ ಸ್ವಾಮೀಜಿಗಳು ಇಲ್ಲದಿದ್ದರೆ ದೇವೇಗೌಡರು ಮುಖ್ಯಮಂತ್ರಿ ಆಗುತ್ತಿದ್ದರೆ? ಅಂದು ದೇವೇಗೌಡರ ಪರ ಸ್ವಾಮೀಜಿಗಳು ರಸ್ತೆಗೆ ಇಳಿಯಲಿಲ್ಲವೇ? ಸದಾನಂದಗೌಡರಿಗೆ ತೊಂದರೆ ಆದಾಗ ಸ್ವಾಮೀಜಿಗಳು ಸುಮ್ಮನೆ ಕೂತಿದ್ದರಾ?’ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಕೆಲ ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡುತ್ತಾರೆ. ಅದರಲ್ಲಿ ತಪ್ಪೇನಿದೆ? ಬೇರೆ ಸಂದರ್ಭದಲ್ಲಿ ಸ್ವಾಮೀಜಿಗಳು ಮಾತನಾಡಿದಾಗ ನಾನು ಬೇಸರ ಮಾಡಿಕೊಂಡಿದ್ದೇನಾ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

Brahmagantu serial

11:01 PM (IST) Dec 01

Brahmagantuಗೆ ನಟಿ ಪದ್ಮಾ ವಾಸಂತಿ ಎಂಟ್ರಿ! ವೀಕ್ಷಕರಿಂದ ಭಾರಿ ಅಸಮಾಧಾನ- ಕಾರಣ ಇಲ್ಲಿದೆ

ಬ್ರಹ್ಮಗಂಟು ಸೀರಿಯಲ್‌ನಲ್ಲಿ ಹೊಸ ತಿರುವು, ಚಿರು ಅಜ್ಜಿಯ ಪ್ರವೇಶದಿಂದ ದೀಪಾ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಅಜ್ಜಿ ನೀಡಿದ ಸವಾಲನ್ನು ಸ್ವೀಕರಿಸಿರುವ ದೀಪಾ, ಸೋತರೆ ಶಾಶ್ವತವಾಗಿ ಮನೆ ಬಿಟ್ಟು ಹೋಗುವುದಾಗಿ ಪಣ ತೊಟ್ಟಿದ್ದಾಳೆ. ಸೌಂದರ್ಯ ಮತ್ತು ಅಜ್ಜಿ ಸೇರಿ ದೀಪಾಳನ್ನು ಸೋಲಿಸಲು ಕುತಂತ್ರ ರೂಪಿಸಿದ್ದಾರೆ.
Read Full Story

09:53 PM (IST) Dec 01

ಸಿಂಹಾದ್ರಿಯ ಸಿಂಹ ಪಾರ್ಟ್​-2ನಲ್ಲಿ ಡಾ.ಬ್ರೋ! ಅವಮಾನ ಮಾಡಿದವರ ಮೇಲೆ ಸೇಡು ತೀರಿಸಿಕೊಂಡ ಗಗನ್

ಕೆಲಕಾಲ ಯೂಟ್ಯೂಬ್‌ನಿಂದ ದೂರವಿದ್ದ ಖ್ಯಾತ ಟ್ರಾವೆಲ್ ಬ್ಲಾಗರ್ ಡಾ. ಬ್ರೋ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಹಿಂದೆ ತನಗೆ ತಮಾಷೆ ಮಾಡಿದ್ದ ಸಿಂಹದ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಹೇಳಿ, ಸಿಂಹಗಳ ಜೊತೆ ವಾಕಿಂಗ್ ಮಾಡಿ, ಅವುಗಳ ಮರಿಗಳೊಂದಿಗೆ ಆಟವಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.
Read Full Story

09:19 PM (IST) Dec 01

ಮಹಿಳೆಯ ಅಂಗೈನಲ್ಲಿ ಬರೆದು ಭರವಸೆ ನೀಡಿದ ಸಚಿವ - ನಂಬಬಹುದಾ ಈ ಭರವಸೆ ನಾ?

Minister writes pledge on womans hand: ಸಚಿವರು ಪೇಪರ್‌ನಲ್ಲಿ ಬರೆದು ಸಹಿ ಹಾಕಿ ಭರವಸೆ ನೀಡುವುದು ಸಾಮಾನ್ಯ. ಆದರೆ ಇಲ್ಲೊಂದು ಕಡೆ ಸಚಿವರೊಬ್ಬರು ಮಹಿಳೆಯ ಕೈಯಲ್ಲಿ ಪೆನ್‌ನಿಂದ ಬರೆದು ಭರವಸೆ ನೀಡಿದ್ದು, ಈ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

Read Full Story

09:16 PM (IST) Dec 01

Bigg Bossಗೆ ಸೂರಜ್‌ ಸಿಂಗ್‌ ಎಂಟ್ರಿ ಕೊಟ್ಟಾಗ ರಿಷಾ ಗೌಡಗೆ ಏನಾಯ್ತು? ಎಲ್ಲವನ್ನೂ ಓಪನ್‌ ಆಗೇ ಹೇಳಿದ ನಟಿ

ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿ ಹೊರಬಂದಿರುವ ರಿಷಾ ಗೌಡ, ಮನೆಯೊಳಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದ ಸೂರಜ್ ಸಿಂಗ್ ಮೇಲೆ ತಮಗೆ ಕ್ರಷ್ ಇರಲಿಲ್ಲ ಎಂದು ಸ್ಪಷ್ಟಪಡಿಸಿರೋ ಅವರು ಹೇಳಿದ್ದೇನು ಕೇಳಿ.

Read Full Story

08:27 PM (IST) Dec 01

ಹಾನಿಕಾರಕ ಆಹಾರ ಮಾರಾಟ, ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್‌ ವಿರುದ್ಧ ಕೇಸ್‌ ದಾಖಲು!

ಪೊಂಗಲ್‌ನಲ್ಲಿ ಹುಳ ಸಿಕ್ಕಿತ್ತು ಅನ್ನೋ ವಿಚಾರದಲ್ಲಿ ಗ್ರಾಹಕರಿಗೆ ರಾಮೇಶ್ವರಂ ಕೆಫೆ ಮಾಲೀಕರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈಗಾಗಲೇ ಈ ಕೇಸ್‌ನಲ್ಲಿ ರಾಮೇಶ್ವರಂ ಕೆಫೆ ಕೇಸ್‌ ದಾಖಲು ಮಾಡಿದ್ದು, ಈಗ ಗ್ರಾಹಕನಿಂದ ಪ್ರತಿದೂರು ದಾಖಲಾಗಿದೆ.

 

Read Full Story

08:22 PM (IST) Dec 01

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

ಮೂಡುಬಿದಿರೆಯ ಆಳ್ವಾಸ್ ಶಾಲೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಖಗೋಳ ವಿಜ್ಞಾನ ಪ್ರಯೋಗಾಲಯವನ್ನು 'ಚಂದ್ರಮಾನವ' ಖ್ಯಾತಿಯ ಡಾ. ಮೈಲ್ಸ್ವಾಮಿ ಅನ್ನಾದುರೈ ಉದ್ಘಾಟಿಸಿದರು. ಈ ಪ್ರಯೋಗಾಲಯವು ಭಾರತದ ಭವಿಷ್ಯದ ಬಾಹ್ಯಾಕಾಶ ಸಾಧನೆಗಳಿಗೆ ದೃಢ ಹೆಜ್ಜೆಯಾಗಬಲ್ಲದು ಎಂದು ಅವರು ಆಶಯ ವ್ಯಕ್ತಪಡಿಸಿದರು.

Read Full Story

08:06 PM (IST) Dec 01

ಚಿನ್ನುಮರಿ ಹುಡುಕಲು ವೇಷ ಬದಲಿಸಿದ ಸೈಕೋ ಜಯಂತ್; ವಿಶ್ವನ ಮನೆಯಲ್ಲಿ ಸಿಕ್ಕಿಬಿದ್ದ ಜಾಹ್ನವಿ!

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಸೈಕೋ ಗಂಡ ಜಯಂತನಿಂದ ತಪ್ಪಿಸಿಕೊಂಡು ವಿಶ್ವನ ಮನೆಯಲ್ಲಿರುವ ಜಾಹ್ನವಿ ಹುಡುಕಲು ಜಯಂತ್ ವಿಫಲನಾಗುತ್ತಾನೆ. ಇದೀಗ, ವೃದ್ಧನ ವೇಷ ಧರಿಸಿ ಕಾರ್ಮಿಕನಾಗಿ ವಿಶ್ವನ ಮನೆಗೆ ಪ್ರವೇಶಿಸಿದ್ದಾನೆ. ಜಯಂತನ ಈ ಹೊಸ ನಾಟಕದಲ್ಲಿ ಜಾಹ್ನವಿ ಸಿಕ್ಕಿಬೀಳುತ್ತಾಳೆಯೇ ಎಂಬುದು ಕಥೆಯ ತಿರುವು.

Read Full Story

07:59 PM (IST) Dec 01

ಮನ್‌ ಕೀ ಬಾತ್ - ಕರ್ನಾಟಕದ ಜೇನು ಕೃಷಿಗೆ ಪ್ರಧಾನಿ ಮೋದಿ ಶ್ಲಾಘನೆ, ಪುತ್ತೂರು ಮತ್ತು ತುಮಕೂರು ಉಲ್ಲೇಖ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 'ಮನ್‌ ಕೀ ಬಾತ್' ಕಾರ್ಯಕ್ರಮದಲ್ಲಿ ಕರ್ನಾಟಕದ ಜೇನು ಕೃಷಿಯನ್ನು ಶ್ಲಾಘಿಸಿದ್ದಾರೆ. ಪುತ್ತೂರಿನ 'ಗ್ರಾಮಜನ್ಯ' ಮತ್ತು ತುಮಕೂರಿನ 'ಶಿವಗಂಗಾ ಕಾಲಂಜಿಯಾ' ಸಂಸ್ಥೆಗಳು ಸಾವಿರಾರು ರೈತರಿಗೆ ಸ್ವಾವಲಂಬನೆ ನೀಡಿವೆ.

Read Full Story

07:36 PM (IST) Dec 01

ಸುಪ್ರೀಂ ಆದೇಶ ಹಿನ್ನೆಲೆ ಮಂಗಳೂರಿನಲ್ಲಿ ಶ್ವಾನಗಳಿಗೆ ಪ್ರತ್ಯೇಕ ಆಹಾರ ಕೇಂದ್ರ ತೆರೆದ ಮೊದಲ ಕಂಪನಿ!

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ, ಮಂಗಳೂರಿನ  ಎನ್‌ಎಂಪಿಎ ಬೀದಿ ಶ್ವಾನಗಳಿಗಾಗಿ ಪ್ರತ್ಯೇಕ ಆಹಾರ ವಲಯಗಳನ್ನು ಸ್ಥಾಪಿಸಿದೆ. ಪ್ರಾಣಿಗಳ ಆರೈಕೆಗಾಗಿ ಅನಿಮಲ್‌ ಕೇರ್‌ ಟ್ರಸ್ಟ್‌ ಜೊತೆ ಒಪ್ಪಂದ ಮಾಡಿಕೊಂಡಿರುವ ಎನ್‌ಎಂಪಿಎ, ಬೀಡಾಡಿ ಗೋವುಗಳಿಗಾಗಿಯೂ ಗೋಶಾಲೆ ತೆರೆದು ಮಾದರಿಯಾಗಿದೆ.

Read Full Story

07:29 PM (IST) Dec 01

ಬಸವ ತತ್ವದವರು ತಾಲಿಬಾನಿ ಇದ್ದಂತೆ ಎಂದು ಕಾಡಸಿದ್ದೇಶ್ವರ ಸ್ವಾಮೀಜಿಗೆ 'ಕಾಡು ಪ್ರಾಣಿ' ಎಂದ ಚನ್ನಬಸವಾನಂದ ಶ್ರೀ!

ಬಸವ ತತ್ವದ ಅನುಯಾಯಿಗಳನ್ನು 'ತಾಲಿಬಾನಿಗಳು' ಎಂದು ಕರೆದ ಕನ್ಹೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಡಾ. ಚನ್ನಬಸವಾನಂದ ಸ್ವಾಮೀಜಿ, ಕನ್ಹೇರಿ ಶ್ರೀಗಳನ್ನು 'ಕಾಡು ಪ್ರಾಣಿ' ಎಂದು ಜರಿದಿದ್ದು, ಹೇಳಿಕೆ ಹಿಂಪಡೆಯದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Read Full Story

07:21 PM (IST) Dec 01

ಡಿಕೆಶಿ ಮನೆಯಲ್ಲಿ ಸಿಎಂ ಉಪಹಾರ, ಕನಕಪುರದ ಫಾರ್ಮ್ ನಲ್ಲಿ ಸಾಕಿದ ನಾಟಿ ಕೋಳಿ ಗಮ್ಮತ್ತು, ಮೆನು ರೆಡಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಗಾಗಿ ಸಿಎಂಗೆ ಇಷ್ಟವಾದ ಕನಕಪುರದ ನಾಟಿ ಕೋಳಿ ಸಾರು ಸೇರಿದಂತೆ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ.

Read Full Story

07:08 PM (IST) Dec 01

90 ದಿನಗಳಲ್ಲಿ 44 ವಿದ್ಯಾರ್ಥಿಗಳ ಟಾರ್ಗೆಟ್ - 6 ವರ್ಷದಲ್ಲಿ ವಿದೇಶದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳೆಷ್ಟು?

ವಿದೇಶದಲ್ಲಿ ಶಿಕ್ಷಣ ಮತ್ತು ಉದ್ಯೋಗ ಪಡೆಯುವುದು ಅನೇಕ ಭಾರತೀಯರ ಕನಸಾಗಿದ್ದು, ಇದಕ್ಕಾಗಿ ಕುಟುಂಬಗಳು ಅಪಾರ ತ್ಯಾಗ ಮಾಡುತ್ತವೆ. ಆದರೆ, ಇತ್ತೀಚಿನ ವರದಿಗಳ ಪ್ರಕಾರ, ವಿದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ದೊಡ್ಡ ಪ್ರಶ್ನೆಯಾಗಿದೆ.

Read Full Story

06:49 PM (IST) Dec 01

ಬೆಂಗಳೂರು ಸುರಂಗ ರಸ್ತೆಗೆ ನಾಗರೀಕರು, ತಜ್ಷರ ವ್ಯಾಪಕ ವಿರೋಧ, 42 ಸಾವಿರ ಕೋಟಿ ಪ್ರಾಜೆಕ್ಟ್‌ ದುರಂತ ಎಂದ ಜನರು!

ಬೆಂಗಳೂರು ಉಳಿಸಿ ಸಮಿತಿ ಆಯೋಜಿಸಿದ್ದ ನಾಗರಿಕರ ಸಮಾವೇಶದಲ್ಲಿ, ತಜ್ಞರು ಮತ್ತು ಕಾರ್ಯಕರ್ತರು ಬೆಂಗಳೂರು ಸುರಂಗ ರಸ್ತೆ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದರು. ಈ ಯೋಜನೆಯು ಅವೈಜ್ಞಾನಿಕ, ಆರ್ಥಿಕವಾಗಿ ಹೊರೆಯಾಗಲಿದ್ದು, ನಗರದ ಪರಿಸರಕ್ಕೆ ಮಾರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. 

Read Full Story

06:36 PM (IST) Dec 01

ಡಾ. ಬ್ರೋ ಸೇಡು - ಮೈಮೇಲೆ ಮೂತ್ರ ಮಾಡಿ ಅವಮಾನಿಸಿದ್ದ ಸಿಂಹವನ್ನು, ನಾಯಿಯಂತೆ ವಾಕಿಂಗ್ ಮಾಡಿಸಿದ ಗಗನ್!

ಯೂಟ್ಯೂಬರ್ ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್, 2 ವರ್ಷಗಳ ಹಿಂದೆ ಉಗಾಂಡಾದಲ್ಲಿ ತಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಸಿಂಹದ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಕೋಲು ಹಿಡಿದು ದೈತ್ಯ ಸಿಂಹಗಳನ್ನು ನಾಯಿಯಂತೆ ವಾಕಿಂಗ್ ಮಾಡಿಸಿ ಪ್ರತೀಕಾರ ತೀರಿಸಿಕೊಂಡ ವಿಡಿಯೋ ವೈರಲ್ ಆಗಿದೆ.

Read Full Story

05:57 PM (IST) Dec 01

ಕಡ್ಡಾಯ ಪೀರಿಯಡ್ಸ್‌ ಲೀವ್‌ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್‌ ಅಸೋಸಿಯೇಷನ್‌

ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸಿದ ಸರ್ಕಾರದ ನಿರ್ದೇಶನವನ್ನು ಬೆಂಗಳೂರು ಹೋಟೆಲ್‌ಗಳ ಸಂಘವು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಸರ್ಕಾರಕ್ಕೆ ಇಂತಹ ಆದೇಶ ಹೊರಡಿಸಲು ಅಧಿಕಾರವಿಲ್ಲ ಮತ್ತು ಇದು ತಾರತಮ್ಯದಿಂದ ಕೂಡಿದೆ ಎಂದು ಸಂಘ ವಾದಿಸಿದೆ.
Read Full Story

05:51 PM (IST) Dec 01

22 ವರ್ಷ ಚಾಲಕನಾಗಿದ್ದವನಿಗೆ ತಾವೇ ಡ್ರೈವ್ ಮಾಡಿ ಅಪರೂಪದ ಬೀಳ್ಕೊಡುಗೆ ಕೊಟ್ಟ ಧಾರವಾಡ ವಿವಿ ಕುಲಸಚಿವ!

ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ನಿಜಲಿಂಗಪ್ಪ ಮಟ್ಟಿಹಾಳ ಅವರು, 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ತಮ್ಮ ಚಾಲಕ ರುದ್ರಪ್ಪ ಅವರಿಗೆ ವಿಶೇಷ ಗೌರವ ಸಲ್ಲಿಸಿದರು. ನಿವೃತ್ತಿಯ ದಿನದಂದು,  ಸ್ವತಃ ಕಾರು ಚಲಾಯಿಸಿ ಚಾಲಕನನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಮನೆಗೆ ಬಿಟ್ಟರು .

Read Full Story

05:06 PM (IST) Dec 01

ಬಸವತತ್ವದ ಅನುಯಾಯಿಗಳು ತಾಲಿಬಾನಿಗಳು, ಮತ್ತೊಮ್ಮೆ ವಿವಾದದಾತ್ಮಕ ಹೇಳಿಕೆ ಕೊಟ್ಟ ಕನ್ನೇರಿ ಶ್ರೀ!

ಮಹಾರಾಷ್ಟ್ರದ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಚಿಕ್ಕೋಡಿಯ ರಾಯಬಾಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಸವ ತತ್ವದ ಅನುಯಾಯಿಗಳನ್ನು 'ತಾಲಿಬಾನ್‌ಗಳು' ಎಂದು ಕರೆದು ಹೊಸ ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆಗೆ ಇತರೆ ಮಠಾಧೀಶರಿಂದ ತೀವ್ರ ಆಕ್ರೋಶ ವ್ಯಕ್ತವಾಗಿವೆ.

Read Full Story

04:53 PM (IST) Dec 01

ಭಾರತವೇ ಮೆಚ್ಚಿದ ಸೀತೆಯನ್ನು ಲವ್‌ ಮಾಡುತ್ತಿದ್ದಾರಾ ಕ್ರಿಕೆಟರ್ ಶ್ರೇಯಸ್‌ ಅಯ್ಯರ್‌?‌ ಸತ್ಯ ಬಯಲು

ಕ್ರಿಕೆಟಿಗ ಶ್ರೇಯಸ್‌ ಅಯ್ಯರ್‌ ಪ್ರೀತಿ ಮಾಡುತ್ತಿದ್ದಾರಂತೆ. ಕೆಲವು ಕ್ರಿಕೆಟರ್‌ಗಳು ನಟಿಯರ ಮಧ್ಯೆ ಲವ್‌ ಸ್ಟೋರಿ ನಡೆದಿದೆ. ಶ್ರೇಯಸ್ ಅಯ್ಯರ್ ಜೊತೆ ಮೃಣಾಲ್ ಠಾಕೂರ್ ಹೆಸರು ಥಳುಕು ಹಾಕಿಕೊಂಡ ಮರುದಿನವೇ, ಅವರು ತಮ್ಮ ಬಗ್ಗೆ ಹರಡುತ್ತಿರುವ 'ವದಂತಿ'ಗಳ ಬಗ್ಗೆ ಮಾತನಾಡಿದ್ದಾರೆ.

Read Full Story

04:36 PM (IST) Dec 01

ಮಾನಸಿಕ ಖಿನ್ನತೆಯಿಂದ ಜೀವ ಕಳೆದುಕೊಂಡ ತಾಯಿ, ಇಬ್ಬರು ಪುಟ್ಟ ಮಕ್ಕಳು ಅನಾಥ!

ಗಂಡನ ಸಾವಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ 31 ವರ್ಷದ ತಾಯಿ ಸೌಭಾಗ್ಯ, ನೆಲಮಂಗಲದ ಬಳಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರಂತದಿಂದ ಅವರ ಇಬ್ಬರು ಮಕ್ಕಳು ಅನಾಥರಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

04:25 PM (IST) Dec 01

ಸೋಶಿಯಲ್ ಮೀಡಿಯಾದಿಂದ ದೂರವಿದ್ದು 10 ಸರ್ಕಾರಿ ನೌಕರಿ ಪಡೆದು ಸ್ಫೂರ್ತಿಯಾದ ಸಾಧಕ!

ಬೆಳಗಾವಿ ಜಿಲ್ಲೆಯ ಬಡ ಕುಟುಂಬದ ಯುವಕ ಧರೆಪ್ಪ ನಾಗಗೋಳ, ಕಠಿಣ ಪರಿಶ್ರಮ ಮತ್ತು ಸ್ವ-ಅಧ್ಯಯನದಿಂದ ಬರೋಬ್ಬರಿ 10 ಸರ್ಕಾರಿ ಹುದ್ದೆಗಳನ್ನು ಪಡೆದು ಇತರರಿಗೆ ಮಾದರಿಯಾಗಿದ್ದಾರೆ. ಪ್ರಸ್ತುತ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದು, ಐಎಎಸ್ ಅಧಿಕಾರಿಯಾಗುವ ಕನಸು ಕಾಣುತ್ತಿದ್ದಾರೆ.

Read Full Story

04:20 PM (IST) Dec 01

ನನ್ನ ಮೊಮ್ಮಗಳಿಗೆ 28 ಆಯ್ತು, ಅವಳು ಮದುವೆ ಆಗೋದು ಇಷ್ಟವಿಲ್ಲ - ಸಂಸದೆ ಜಯಾ ಬಚ್ಚನ್

Actress Jaya Bachchan: ನಟಿ, ಸಂಸದೆ ಜಯಾ ಬಚ್ಚನ್ ಅವರು ಮೊಮ್ಮಗಳು ನವ್ಯಾ ಮದುವೆ ಆಗೋದು ಇಷ್ಟ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ಮದುವೆ ಎನ್ನೋದು ಹಳೆಯದಾಯ್ತು ಎಂದು ಕೂಡ ಅವರು ಹೇಳಿದ್ದಾರೆ.

 

Read Full Story

03:40 PM (IST) Dec 01

ಬೆಂಗಳೂರು ಕೆಂಪೇಗೌಡ ಏರ್ಪೋಟ್ ನಲ್ಲಿ ಸರಣಿ ಅಪಘಾತ, ಸೆಕ್ಯುರಿಟಿ ಚೆಕ್ಕಿಂಗ್ ಪಾಯಿಂಟ್ ಬಳಿ ಘಟನೆ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಬ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾರುಗಳು ನಜ್ಜುಗುಜ್ಜಾಗಿದ್ದರೂ, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

Read Full Story

03:38 PM (IST) Dec 01

ರಾಜ್ಯದಲ್ಲಿ ಖಾಲಿಯಿರುವ 2.76 ಲಕ್ಷ ಹುದ್ದೆ ಭರ್ತಿ ಮಾಡಿ ಅಂದ್ರೆ, ಪ್ರತಿಭಟನಾಕಾರರ ಧ್ವನಿ ಹತ್ತಿಕ್ಕಿದ ಸರ್ಕಾರ!

ರಾಜ್ಯದಲ್ಲಿ ಖಾಲಿಯಿರುವ 2.76 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾನೂನು ಸುವ್ಯವಸ್ಥೆ ಹದಗೆಡುವ ಭೀತಿಯಿಂದ ಅನುಮತಿ ನಿರಾಕರಿಸಿದ್ದ ಪೊಲೀಸರು, ಪ್ರತಿಭಟನಾನಿರತರನ್ನು ವಶಕ್ಕೆ ಪಡೆದರು.

Read Full Story

02:47 PM (IST) Dec 01

BBK 12 - ಬೆನ್ನಿಗೆ ಚೂರಿ ಹಾಕಿದ್ಯಾರು? ಕಾವ್ಯಾ Vs ರಕ್ಷಿತಾ, ಇಬ್ಬರಲ್ಲಿ ಚೀಪ್ ಗಿಮಿಕ್ ಯಾರದ್ದು?

ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಜೋರಾಗಿದ್ದು, ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಕಾವ್ಯಾ ಶೈವ ಮತ್ತು ರಕ್ಷಿತಾ ಶೆಟ್ಟಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಒಬ್ಬರನ್ನೊಬ್ಬರು ಸ್ಟ್ರಾಟಜಿ, ಡ್ರಾಮಾ ಮತ್ತು ಚೀಪ್ ಗಿಮಿಕ್ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

Read Full Story

02:09 PM (IST) Dec 01

Samantha Marriage Photos - ಗುಟ್ಟೇ ಬಿಡದೆ ಭೈರವಿ ದೇವಸ್ಥಾನದಲ್ಲಿ ಮದುವೆಯಾದ ನಟಿ ಸಮಂತಾ!

Actress Samantha Marraige ನಟಿ ಸಮಂತಾ ಮತ್ತು ನಿರ್ದೇಶಕ ರಾಜ್ ನಿಧಿಮೋರು ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಇಂದು ಬೆಳಗ್ಗೆ ಕೊಯಮತ್ತೂರಿನಲ್ಲಿ ಮದುವೆ ನಡೆದಿದ್ದು, ಕೇವಲ ಆಪ್ತ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

 

Read Full Story

01:56 PM (IST) Dec 01

'ಪುಷ್ಪ 2' ನಂತರ ಅಲ್ಲು ಅರ್ಜುನ್‌ ರೇಂಜ್ ಚೇಂಜ್.. ಐಕಾನ್ ಸ್ಟಾರ್‌ಗಾಗಿ ಕ್ಯೂನಲ್ಲಿ ನಿಂತ ನಿರ್ದೇಶಕರು!

ಅಲ್ಲು ಅರ್ಜುನ್‌ ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರಿ ಬೇಡಿಕೆಯಲ್ಲಿರುವ ನಟ. 'ಪುಷ್ಪ' ನಂತರ ಬನ್ನಿ ರೇಂಜ್ ಬದಲಾಗಿದೆ. ಐಕಾನ್ ಸ್ಟಾರ್‌ಗಾಗಿ ಸ್ಟಾರ್ ನಿರ್ದೇಶಕರು ಕೂಡ ಕ್ಯೂ ನಿಂತಿದ್ದಾರೆ. ಬಾಲಿವುಡ್‌ನಿಂದಲೂ ಬನ್ನಿಗೆ ಬೇಡಿಕೆ ಹೆಚ್ಚುತ್ತಿದೆ.

Read Full Story

01:42 PM (IST) Dec 01

Amruthadhaare Serial - ಮಲ್ಲಿ ಮಾಡಿದ ಮಹಾಪ್ಲ್ಯಾನ್‌ಗೆ‌ ತತ್ತರಿಸಿ, ಬೀದಿಯಲ್ಲಿ ಬಿದ್ದ ಜಯದೇವ್

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ಗೆ ಈಗ ರೆಕ್ಕೆ ಕತ್ತರಿಸಿದಂತಾಗಿದೆ. ಅವನ ಬ್ಯಾಂಕ್‌ ಅಕೌಂಟ್‌ಗಳೆಲ್ಲವೂ ಈಗ ಫ್ರೀಜ್‌ ಆಗಿದೆ. ಅವನು ಮಲ್ಲಿಯನ್ನು ಹುಡುಕಿಕೊಂಡು ವಠಾರಕ್ಕೆ ಬಂದಿದ್ದಾನೆ. ಆದರೆ ಅವನಿಗೆ ಮಂಗಳಾರತಿ ಆಗಿದೆ.

Read Full Story

01:41 PM (IST) Dec 01

ಶಬರಿಮಲೆ ಅಯ್ಯಪ್ಪ ಮಾಲೆ ಧರಿಸಿದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಹಾಕಿದ ಆಡಳಿತ ಮಂಡಳಿ!

ಚಿಕ್ಕಮಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ, ಶಬರಿಮಲೆ ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿಗಳನ್ನು ಸಮವಸ್ತ್ರ ನೀತಿ ಉಲ್ಲಂಘನೆ ಕಾರಣ ನೀಡಿ ತರಗತಿಯಿಂದ ಹೊರಗಿಡಲಾಗಿದೆ. ಈ ಘಟನೆ ಬಗ್ಗೆ ಬಿಜೆಪಿ ಮತ್ತು ಬಜರಂಗದಳದ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದರು.

Read Full Story

01:37 PM (IST) Dec 01

ಬೆಂಗಳೂರು - ಹಾಡಹಗಲೇ ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಕದ್ದ ಐನಾತಿ ಕಳ್ಳರು, ಮಾಲೀಕ ಮಾಡಿದ್ದ ಮಹಾ ತಪ್ಪು!

ಬೆಂಗಳೂರಿನ ಉತ್ತರಹಳ್ಳಿಯಲ್ಲಿ, ಮನೆ ಮುಂದೆ ನಿಲ್ಲಿಸಿದ್ದ ಸ್ಕೂಟರ್‌ನಲ್ಲಿ ಮಾಲೀಕ ಕೀ ಮರೆತಿದ್ದನ್ನು ಗಮನಿಸಿದ ಕಳ್ಳನು ಕೆಲವೇ ಸೆಕೆಂಡುಗಳಲ್ಲಿ ವಾಹನವನ್ನು ಕದ್ದೊಯ್ದಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Read Full Story

01:33 PM (IST) Dec 01

Kodagu - ಇಡೀ ರಾತ್ರಿ ಕಾಫಿ ತೋಟದಲ್ಲಿ ಒಂಟಿಯಾದ 2 ವರ್ಷದ ಮಗು; ಸಾಕು ನಾಯಿಯಿಂದ ಪತ್ತೆ

Kodagu Baby Missing" ಕಾಫಿ ತೋಟದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ನಾಪತ್ತೆಯಾಗಿತ್ತು. ಇಡೀ ರಾತ್ರಿ ತೋಟದಲ್ಲಿ ಕಳೆದ ಮಗುವನ್ನು, ಮರುದಿನ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರ ಹುಡುಕಾಟದ ವೇಳೆ ಸಾಕು ನಾಯಿಯೊಂದು ಪತ್ತೆಹಚ್ಚಿ ಪೋಷಕರ ಮಡಿಲಿಗೆ ಸೇರಿಸಿದೆ.

Read Full Story

01:23 PM (IST) Dec 01

ರಾಜ್ ನಿಡಿಮೋರು ಯಾರು? ಸಮಂತಾ ಜೊತೆ ಸಂಬಂಧ ಶುರುವಾಗಿದ್ದು ಹೇಗೆ? ಅವರ ಆಸ್ತಿ ಮೌಲ್ಯ ಎಷ್ಟು?

ಸಮಂತಾ ಮತ್ತು ರಾಜ್ ನಿಡಿಮೋರು ಮದುವೆ ಬಗ್ಗೆ ಸುದ್ದಿಗಳು ವೈರಲ್ ಆಗ್ತಿವೆ. ರಾಜ್ ಪತ್ನಿಯ ಪೋಸ್ಟ್‌ನಿಂದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಈ ರಾಜ್ ನಿಡಿಮೋರು ಯಾರು? ಸಮಂತಾರನ್ನು ಎಲ್ಲಿ ಭೇಟಿಯಾದರು? ಅವರ ಆಸ್ತಿ ಮೌಲ್ಯ ಎಷ್ಟು ಗೊತ್ತಾ?

Read Full Story

01:22 PM (IST) Dec 01

ನಾನು, ಸಿದ್ದರಾಮಯ್ಯ 'ಬ್ರದರ್ಸ್‌' ಥರ ಕೆಲಸ ಮಾಡ್ತಿದೀವಿ; ನಮ್ಮಲ್ಲಿ ಯಾವುದೇ ಗುಂಪಿಲ್ಲ - ಡಿ.ಕೆ. ಶಿವಕುಮಾರ್

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಮತ್ತು ತಮ್ಮ ನಡುವೆ ಬಣ ರಾಜಕೀಯ ಇಲ್ಲ. ನಾವಿಬ್ಬರೂ 'ಬ್ರದರ್ಸ್‌' ನಂತೆ ಸೌಹಾರ್ದಯುತವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. 'ಬ್ರೇಕ್‌ಫಾಸ್ಟ್ ಮೀಟಿಂಗ್' ಕುರಿತ ಗುಂಪುಗಾರಿಕೆಯ ವರದಿಗಳನ್ನು ತಳ್ಳಿಹಾಕಿದರು.

Read Full Story

01:01 PM (IST) Dec 01

ಬೆಂಗಳೂರು ಟ್ರಾಫಿಕ್ ನಿರ್ವಹಣೆ ಯೂಸ್ ಲೆಸ್, ಸಂಚಾರಿ ಪೊಲೀಸರು ಕೇರ್ ಲೆಸ್; ಸಂಸದ ರಾಜೀವ್ ರೈ ಆಕ್ರೋಶ!

ಸಂಸತ್ ಅಧಿವೇಶನಕ್ಕೆ ತೆರಳುತ್ತಿದ್ದ ಸಂಸದ ರಾಜೀವ್ ರೈ ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಸಿಲುಕಿ ವಿಮಾನ ತಪ್ಪಿಸಿಕೊಂಡಿದ್ದಾರೆ. ಈ ಘಟನೆಯಿಂದ ಆಕ್ರೋಶಗೊಂಡ ಅವರು, ಸಂಚಾರ ಪೊಲೀಸರ ನಿರ್ಲಕ್ಷ್ಯ ಮತ್ತು ಕೆಟ್ಟ ಸಂಚಾರ ನಿರ್ವಹಣೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

01:00 PM (IST) Dec 01

ಬೆಂಗಳೂರು ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ನಿಗೂಢ ಕಾಯಿಲೆ, 200ಕ್ಕೂ ಅಧಿಕ ಮಕ್ಕಳಿಗೆ ಚಿಕಿತ್ಸೆ!

ಬೆಂಗಳೂರಿನ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ 200ಕ್ಕೂ ಹೆಚ್ಚು ನಿವಾಸಿಗಳು, ಅದರಲ್ಲೂ ಮಕ್ಕಳು ಕರುಳುಬೇನೆಯಿಂದ ಬಳಲುತ್ತಿದ್ದಾರೆ. ಕಲುಷಿತ ನೀರು ಇದಕ್ಕೆ ಕಾರಣವಿರಬಹುದೆಂಬ ಶಂಕೆಯಿದ್ದು, ಪಾಲಿಕೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Read Full Story

12:56 PM (IST) Dec 01

ಜೈಲೇ ಇಲ್ಲದ ಏಕೈಕ ದೇಶ ಯಾವುದು ಗೊತ್ತಾ? ವಿಶ್ವದ ಅತ್ಯಂತ ಸುರಕ್ಷಿತ ಸ್ಥಳವಿದು!

ಅಪರಾಧಗಳನ್ನು ನಿಯಂತ್ರಿಸಲು, ದೇಶಗಳು ಕಠಿಣ ಕಾನೂನುಗಳನ್ನು ಮಾಡುತ್ತವೆ. ಅಪರಾಧಿಗಳನ್ನು ಬಂಧಿಸಲು ಜೈಲುಗಳನ್ನು ನಿರ್ಮಿಸಲಾಗುತ್ತದೆ. ಆದರೆ ಜಗತ್ತಿನಲ್ಲಿ ಜೈಲು ಇಲ್ಲದ ದೇಶವೊಂದು ಇದೆ ಎಂಬುದು ನಿಮಗೆ ಗೊತ್ತೇ?

Read Full Story

12:30 PM (IST) Dec 01

ಪ್ರಜ್ವಲ್ ರೇವಣ್ಣ ಅತ್ಯಾ*ಚಾರ ಕೇಸಿಗೆ ರಾಜಕೀಯ ತಿರುವು ಕೊಟ್ಟ ವಕೀಲರು; ಜಾಮೀನು ನೀಡುವಂತೆ ಮನವಿ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಅವರ ಪರ ವಕೀಲರು ಪ್ರಕರಣದ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಬಲವಾಗಿ ವಾದಿಸಿದರು. ಸಂತ್ರಸ್ತೆಯ ಮೌನ, ಸಾಕ್ಷ್ಯಗಳ ಮೇಲಿನ ಸಂಶಯಗಳನ್ನು ಮುಂದಿಟ್ಟು ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಲು ಕೋರಿದ್ದಾರೆ.

Read Full Story

12:16 PM (IST) Dec 01

ಭಾನುವಾರ ರಜಾದಿನದ ಮಜಾ ತಂದ ಆಪತ್ತು; ಬಂಡಿಹಳ್ಳಿ ಕೆರೆಯಲ್ಲಿ ನಡೆಯಿತು ಘೋರ ದುರಂತ!

ವಿಜಯನಗರ ಜಿಲ್ಲೆಯ ಬಂಡಿಹಳ್ಳಿ ಗ್ರಾಮದಲ್ಲಿ, ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋಗಿದ್ದ 10 ವರ್ಷದ ಪೃಥ್ವಿ ಎಂಬ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ದುರಂತದಲ್ಲಿ ಮತ್ತೊಬ್ಬ ಬಾಲಕನನ್ನು ಸ್ಥಳೀಯ ಕುರಿಗಾಹಿಗಳು ರಕ್ಷಿಸಿದ್ದು, ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

11:45 AM (IST) Dec 01

ಚಿಕನ್ ಪಾಕ್ಸ್ ಬಂದ ವಿದ್ಯಾರ್ಥಿಗಳನ್ನು ಕೂಡಿ ಹಾಕಿದ ಬೆಂಗಳೂರಿನ ಗೋಲ್ಡ್ ಪಿಂಚ್ ನರ್ಸಿಂಗ್ ಕಾಲೇಜು, ಗಂಭೀರ ಆರೋಪ!

ಬೆಂಗಳೂರಿನ ಗೋಲ್ಡ್ ಪಿಂಚ್ ನರ್ಸಿಂಗ್ ಕಾಲೇಜಿನಲ್ಲಿ ಚಿಕನ್ ಪಾಕ್ಸ್ ಸೋಂಕು ಬಂದಿದ್ದು, ಹಲವು ವಿದ್ಯಾರ್ಥಿಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ಕಾಲೇಜು ಆಡಳಿತವು ತಮ್ಮನ್ನು ರೂಮ್‌ಗಳಲ್ಲಿ ಕೂಡಿಹಾಕಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರೆ, ಪ್ರಾಂಶುಪಾಲರು ಇದನ್ನು ನಿರಾಕರಿಸಿದ್ದಾರೆ.

Read Full Story

11:34 AM (IST) Dec 01

Amruthadhaare Serial - ಬಂಡಿಕಾಳಿ ದೇವಸ್ಥಾನದಲ್ಲಿ ಗೌತಮ್, ಭೂಮಿಕಾ, ಭಾಗ್ಯ; ನಿರ್ದೇಶಕರಿಗೆ ಅವಾರ್ಡ್‌ ಕೊಡಿ ಎಂದ ವೀಕ್ಷಕರು

Amruthadhaare Kannada Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ಪ್ರೋಮೋ ರಿಲೀಸ್‌ ಆಗಿದೆ. ಸೊಸೆ ಅಪಾಯದಲ್ಲಿದ್ರೆ ಭಾಗ್ಯಮ್ಮಳ ಮೌನ ಮರೆಯಾಗ್ಲೇ ಬೇಕು.. ಭಾಗ್ಯಮ್ಮನ ಭರವಸೆಯ ನುಡಿ ಗೌತಮ್ - ಭೂಮಿಕಾನಾ ಜೊತೆಗೂಡಿಸ್ಲೇಬೇಕು! ಏನಂತೀರಾ?

Read Full Story

11:31 AM (IST) Dec 01

ಬಾಲಕೃಷ್ಣರ 'ಅಖಂಡ 2' ಟಿಕೆಟ್ ಬೆಲೆ 2 ಲಕ್ಷ.. ಇದ್ಯಾವ ಅಭಿಮಾನವಯ್ಯಾ, ಅಷ್ಟಕ್ಕೂ ಆಗಿದ್ದೇನು?

ನಂದಮೂರಿ ಬಾಲಕೃಷ್ಣ ನಟನೆಯ ಅಖಂಡ 2 ಸಿನಿಮಾ ಡಿಸೆಂಬರ್ 5 ರಂದು ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ. ಜರ್ಮನಿಯಲ್ಲಿರುವ ಬಾಲಯ್ಯನ ಅಭಿಮಾನಿಯೊಬ್ಬರು ಈ ಚಿತ್ರದ ಟಿಕೆಟ್‌ ಅನ್ನು ಭಾರಿ ಬೆಲೆ ಕೊಟ್ಟು ಖರೀದಿಸಿದ್ದಾರೆ.

Read Full Story

More Trending News