Actress Jaya Bachchan: ನಟಿ, ಸಂಸದೆ ಜಯಾ ಬಚ್ಚನ್ ಅವರು ಮೊಮ್ಮಗಳು ನವ್ಯಾ ಮದುವೆ ಆಗೋದು ಇಷ್ಟ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ಮದುವೆ ಎನ್ನೋದು ಹಳೆಯದಾಯ್ತು ಎಂದು ಕೂಡ ಅವರು ಹೇಳಿದ್ದಾರೆ.
ನಟಿ, ಸಂಸದೆ ಜಯಾ ಬಚ್ಚನ್ ಅವರು ಮದುವೆಯಾಗಿ 52 ವರ್ಷ ಆಗಿದೆ. ಈಗ ಅವರು ಮೊಮ್ಮಗಳು ಮದುವೆ ಆಗೋದು ಬೇಡ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಏನು ಎಂದು ಕೂಡ ಅವರು ಹೇಳಿದ್ದಾರೆ. ಅವರು ಮದುವೆ ಬಗ್ಗೆ ಮಾತನಾಡುತ್ತ ಅವರು 'ಹಳೆಯದಾದ ಸಂಸ್ಥೆ' ಎಂದು ಹೇಳಿದ್ದಾರೆ. ನಮ್ಮ ಮೊಮ್ಮಗಳು ನವ್ಯಾ ಮದುವೆಯಾಗುವುದು ನಮಗೆ ಇಷ್ಟವಿಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ.
ಮೊಮ್ಮಗಳು ಮದುವೆ ಆಗೋದು ಬೇಡ
'ವೀ ದಿ ವುಮೆನ್' (We the Women Mumbai session) ಕಾರ್ಯಕ್ರಮದಲ್ಲಿ ಪತ್ರಕರ್ತೆ ಬರ್ಖಾ ದತ್ ಅವರ ಜೊತೆ ಮಾತನಾಡುವಾಗ, ಮದುವೆ ಬಗ್ಗೆ ಹೇಳಿದ್ದಾರೆ. ನೀವು ಆಯ್ಕೆ ಮಾಡಿದ ಹಾಗೆ ನಿಮ್ಮ ಮೊಮ್ಮಗಳು ಅಥವಾ ಇಂದಿನ ಯುವತಿಯರು ಮಾಡಲು ಪ್ರೋತ್ಸಾಹಿಸುತ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಜಯಾ ಬಚ್ಚನ್ ಅವರು "ನನ್ನ ಮೊಮ್ಮಗಳು ನವ್ಯಾ ಮದುವೆಯಾಗುವುದು ನನಗೆ ಇಷ್ಟವಿಲ್ಲ" ಎಂದಿದ್ದಾರೆ.
ಮದುವೆ ಹಳೆಯದಾಯ್ತು!
ಮದುವೆ ಎಂಬುದು ಹಳೆಯ ವ್ಯವಸ್ಥೆ ಎಂದರೆ ನಂಬುತ್ತೀರಾ ಎಂದು ಪ್ರಶ್ನೆ ಮಾಡಲಾಗಿದೆ. ಆಗ ಅವರು, "ಹೌದು, ಖಂಡಿತವಾಗಿಯೂ" ಎಂದು ಹೇಳಿದ್ದಾರೆ. ಸಾಮಾಜಿಕ ರೂಢಿ, ಸಂಪ್ರದಾಯ, ಇಂದಿನ ಮಕ್ಕಳ ಪೋಷಣೆಯ ವಿಧಾನವು ಕೂಡ ವೇಗವಾಗಿ ಬದಲಾಗಿದೆ ಎಂಬ ಬಗ್ಗೆ ಮಾತನಾಡಿದ್ದಾರೆ.
ಮಕ್ಕಳಿಗೆ ಬುದ್ಧಿ ಹೇಳೋಕಾಗಲ್ಲ
ಇಂದಿನ ಮಕ್ಕಳು ಸಿಕ್ಕಾಪಟ್ಟೆ ಸ್ಮಾರ್ಟ್. ಮಹಿಳೆಯರು ಹೇಗೆ ಮಕ್ಕಳನ್ನು ಬೆಳೆಸಬೇಕು ಎಂದು ಹೇಳಲು ನನಗೆ ವಯಸ್ಸಾಗಿದೆ. ನಾನು ಈಗ ಅಜ್ಜಿಯಾಗಿದ್ದೇನೆ. ಇನ್ನೇನು ಕೆಲವೇ ದಿನಗಳಲ್ಲಿ ನನ್ನ ಮೊಮ್ಮಗಳು ನವ್ಯಾಳಿಗೆ 28 ವರ್ಷ ಆಗುವುದು. ಇಂದಿನ ಹೆಣ್ಣು ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ಸಲಹೆ ನೀಡಲು ನನಗೆ ತುಂಬ ವಯಸ್ಸಾಗಿದೆ. ಇಂದು ಅನೇಕ ವಿಷಯಗಳು ಸಿಕ್ಕಾಪಟ್ಟೆ ಬದಲಾಗಿವೆ. ಇಂದಿನ ಪುಟ್ಟ ಪುಟ್ಟ ಮಕ್ಕಳು ಕೂಡ ಜಾಣರು. ಅವರು ನಮ್ಮನ್ನು ಕೂಡ ಮೀರಿಸುತ್ತಾರೆ" ಎಂದಿದ್ದಾರೆ.
“ಒಂದು ಸಂಬಂಧವನ್ನು ವ್ಯಾಖ್ಯಾನಿಸಲು ಕಾನೂನಿನ ಸಹಿ ಇದು ಅತ್ಯಗತ್ಯವಲ್ಲ. ದೆಹಲಿಯ ಲಡ್ಡು ತಿಂದರೂ ಕಷ್ಟ, ತಿನ್ನದೆ ಇದ್ದರೂ ಕಷ್ಟ. ಈಗ ಇರುವ ಜೀವನವನ್ನು ಆನಂದಿಸಿ" ಎಂದಿದ್ದಾರೆ.
ನಾನು, ಅಮಿತಾಭ್ ಒಂದೇ ಥರ ಇಲ್ಲ
“ಅಮಿತಾಭ್ ವ್ಯಕ್ತಿತ್ವ, ನನ್ನ ವ್ಯಕ್ತಿತ್ವಕ್ಕಿಂತ ಸಂಪೂರ್ಣವಾಗಿ ಬೇರೆ ಬೇರೆಯಾಗಿದೆ. ಇದರಿಂದಲೇ ನನಗೆ ಅಟ್ರ್ಯಾಕ್ಟ್ ಆಯ್ತು. ನಾನು ಎಲ್ಲವನ್ನು ಒಪನ್ ಆಗಿ ಮಾತಾಡ್ತೀನಿ. ಆದರೆ ಅಮಿತಾಭ್ ಮಾತ್ರ ಸಂಯಮ, ಮೌನದಿಂದ ಮಾತನಾಡುತ್ತಾರೆ. ಅಗತ್ಯವಿದ್ದಾಗ, ಸರಿಯಾದ ಟೈಮ್‌ಗೆ ಮಾತನಾಡುತ್ತಾರೆ” ಎಂದು ಹೇಳಿದ್ದಾರೆ. “ನಾವು ನಮ್ಮಂತೆ ಇರುವ ವ್ಯಕ್ತಿ ಜೊತೆ ಮದುವೆಯಾಗಿದ್ದರೆ, ಆ ರಿಲೇಶನ್‌ಶಿಪ್ ಉಳಿಯುತ್ತಿರಲಿಲ್ಲ” ಎಂದಿದ್ದಾರೆ.


