Published : Nov 15, 2025, 07:20 AM ISTUpdated : Nov 16, 2025, 12:13 AM IST

Karnataka New Live: ನಿಮ್ಮ ಮಗುವಿನ ಕಿವಿಗೆ ಎಣ್ಣೆ ಹಾಕಬೇಕೋ ಬೇಡವೋ? ವೈದ್ಯರ ಏನು ಹೇಳ್ತಾರೆ ಕೇಳಿ!

ಸಾರಾಂಶ

 

ಬಾಗಲಕೋಟೆ: ಜಿಲ್ಲೆಯ ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಿಡಿಗೇಡಿಗಳು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಹಾನಿಯ ಅಂಕಿ-ಅಂಶ ಬಹಿರಂಗಗೊಂಡಿದೆ. ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಬ್ಬು ತುಂಬಿಕೊಂಡು 240 ಟ್ರ್ಯಾಕ್ಟರ್‌ಗಳು ನಿಂತಿದ್ದವು. ಇವುಗಳ ಪೈಕಿ 96 ಟ್ರ್ಯಾಕ್ಟರ್ ಗಳ ಟ್ರೇಲರ್‌ನಲ್ಲಿದ್ದ ಕಬ್ಬಿಗೆ ಬೆಂಕಿ ಹಾಕಲಾಗಿದೆ. ಇದರಿಂದ 17 ಟ್ರ್ಯಾಕ್ಟರ್‌ಗಳಿಗೆ ಹಾನಿಯಾಗಿದೆ. 12 ಟ್ರ್ಯಾಕ್ಟರ್‌ಗಳ ಎಂಜಿನ್ ಭಾಗಶಃ ಹಾನಿ ಆಗಿವೆ. 1 ಟ್ರ್ಯಾಕ್ಟ‌ರ್ ಸಂಪೂರ್ಣ ಸುಟ್ಟು ಹೋಗಿದೆ. 5 ಬೈಕ್ ಸಂಪೂರ್ಣ ಭಸ್ಮ ಆಗಿವೆ. 3 ಬೈಕ್ ಭಾಗಶಃ ಜಖಂ ಆಗಿವೆ. ಡಿಆರ್‌ವ್ಯಾನ್, 3 ಕಾರ್ಖಾನೆಯ ಫೈರ್‌ಎಂಜಿನ್ ವಾಹನ ಘಟನೆಯಲ್ಲಿ ಹಾನಿಯಾಗಿದೆ. 1033 ಟನ್ ಕಟ್ಟು ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ.

12:13 AM (IST) Nov 16

ನಿಮ್ಮ ಮಗುವಿನ ಕಿವಿಗೆ ಎಣ್ಣೆ ಹಾಕಬೇಕೋ ಬೇಡವೋ? ವೈದ್ಯರ ಏನು ಹೇಳ್ತಾರೆ ಕೇಳಿ!

baby ear care tips: ಮಕ್ಕಳ ಕಿವಿಗೆ ಎಣ್ಣೆ ಹಾಕುವುದು ಹಳೆಯ ಸಂಪ್ರದಾಯವಾದರೂ, ಅದರ ಸುರಕ್ಷತೆಯ ಬಗ್ಗೆ ಅನೇಕರಿಗೆ ಗೊಂದಲವಿದೆ. ಚಿಕ್ಕ ಮಕ್ಕಳ ಕಿವಿಗೆ ಎಣ್ಣೆ ಹಾಕುವುದು ಸೂಕ್ತವೇ, ಯಾವ ವಯಸ್ಸಿನ ಮಕ್ಕಳಿಗೆ ಇದು ಅಪಾಯಕಾರಿ ಮತ್ತು ಎಣ್ಣೆ ಬಳಸುವಾಗ ಯಾವ ಮುನ್ನೆಚ್ಚರಿಕೆ ಬಗ್ಗೆ ಲೇಖನ ವಿವರಿಸುತ್ತದೆ.

Read Full Story

10:57 PM (IST) Nov 15

'ಮೂರು ಕೋಟಿಯೆಲ್ಲಾ ಖರ್ಚು ಮಾಡಿಲ್ಲ, ನನ್ನ ದುಡ್ಡನ್ನು ನಾನು ಸಂಪಾದಿಸಿದ್ದೇನೆ..' ಅರವಿಂದ್‌ ರೆಡ್ಡಿಗೆ ತಿರುಗೇಟು ಕೊಟ್ಟ ಬಿಗ್‌ಬಾಸ್‌ ಸ್ಪರ್ಧಿ

ಸ್ಯಾಂಡಲ್‌ವುಡ್ ನಟಿಯೊಬ್ಬರು ನಿರ್ಮಾಪಕ ಅರವಿಂದ್ ರೆಡ್ಡಿ ವಿರುದ್ಧ ಕಿರುಕುಳದ ಆರೋಪ ಮಾಡಿದ್ದು, ತಾವು ಲಿವ್-ಇನ್ ಸಂಬಂಧದಲ್ಲಿದ್ದಾಗ ಹಿಂಸೆ ನೀಡಿದ್ದಾರೆಂದು ದೂರಿದ್ದಾರೆ. ಐಸಿಯುನಲ್ಲಿದ್ದಾಗ ತನ್ನ ಬಟ್ಟೆ ಹರಿದು ಅರೆಬೆತ್ತಲೆ ಮಾಡಿದ್ದರು ಎಂದು ನಟಿ ಆರೋಪಿಸಿದ್ದಾರೆ.

Read Full Story

10:32 PM (IST) Nov 15

ನಂಜನಗೂಡು - ದರೋಡೆ ಮಾದರಿ ಕೊಲೆ ಯತ್ನ ಪ್ರಕರಣ, ಚಿಕಿತ್ಸೆ ಫಲಿಸದೇ ಗಂಡ ಸಾವು, ಜೈಲು ಸೇರಿದ ಹಂತಕಿ ಪತ್ನಿ!

ನಂಜನಗೂಡಿನಲ್ಲಿ ದರೋಡೆ ನಾಟಕವಾಡಿ ಗಂಡನ ಕೊಲೆಗೆ ಯತ್ನಿಸಿದ್ದ ಪ್ರಕರಣ ಹೊಸ ತಿರುವು ಪಡೆದಿದೆ. ಅಂದು ತೀವ್ರವಾಗಿ ಗಾಯಗೊಂಡಿದ್ದ ಪತಿ ರಾಜೇಂದ್ರ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಸಂಗೀತಾ ಸೇರಿದಂತೆ ನಾಲ್ವರನ್ನ ಬಂಧಿಸಲಾಗಿದೆ.

Read Full Story

10:26 PM (IST) Nov 15

'ಆಕೆಗೆ ಪೋರ್ಶೆ ಕಾರು, ಸೈಟು ಮನೆ ಎಲ್ಲಾ ಕೊಡಿಸಿದ್ದೇನೆ..' ಈಗ ಸುಮ್ಮನೆ ಆರೋಪ ಮಾಡ್ತಿದ್ದಾರೆ ಎಂದ ಅರವಿಂದ್‌ ರೆಡ್ಡಿ

ನಟಿ ಕೃಷಿ ತಾಪಂಡ ಅವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ನಿರ್ಮಾಪಕ ಅರವಿಂದ್ ವೆಂಕಟೇಶ್‌ ರೆಡ್ಡಿ ಅವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ, ತಾವು ಲಿವ್-ಇನ್ ಸಂಬಂಧದಲ್ಲಿದ್ದೆವು ಎಂದು ಅವರು ಆರೋಪಿಸಿದ್ದಾರೆ.

Read Full Story

09:21 PM (IST) Nov 15

ದಾವಣಗೆರೆಯಲ್ಲಿ ಸಾಹುಕಾರ; ಸಿಎಂ ಬದಲಾವಣೆ ಚರ್ಚೆಗೆ ತೆರೆ ಎಳೆದ ಜಾರಕಿಹೊಳಿ! ಹೇಳಿದ್ದೇನು?

ಸಚಿವ ಸತೀಶ್ ಜಾರಕಿಹೊಳಿ ದಾವಣಗೆರೆಗೆ ಭೇಟಿ ನೀಡಿ, ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಹಾರ ಚುನಾವಣಾ ಫಲಿತಾಂಶ ಕಾಂಗ್ರೆಸ್‌ಗೆ ಪಾಠವಾಗಿದ್ದು, ಕರ್ನಾಟಕದಲ್ಲಿ ಅಹಿಂದ ಸಂಘಟನೆಯನ್ನು ಬಲಪಡಿಸಲಾಗುವುದು ಎಂದು ಅವರು ಹೇಳಿದರು.
Read Full Story

09:15 PM (IST) Nov 15

ಅಂಗಡಿ ಎದುರಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ಭೀಕರ ದಾಳಿ ಮಾಡಿ ಕಣ್ಣಗುಡ್ಡೆ ಕಿತ್ತು ಸಾಯಿಸಿದ ಬೀದಿ ನಾಯಿ!

ಉಳ್ಳಾಲದ ಕುಂಪಲದಲ್ಲಿ ಬೀದಿ ನಾಯಿಯೊಂದು ನಡೆಸಿದ ಭೀಕರ ದಾಳಿಗೆ ದಯಾನಂದ (54) ಎಂಬವರು ಮೃತಪಟ್ಟಿದ್ದಾರೆ. ನಸುಕಿನಲ್ಲಿ ವ್ಯಕ್ತಿಯನ್ನು ಅಟ್ಟಾಡಿಸಿ ಕೊಂದ ನಾಯಿಯು, ಮೃತದೇಹದ ಬಳಿ ರಕ್ತ ನೆಕ್ಕುತ್ತಾ ಕುಳಿತಿತ್ತು.
Read Full Story

08:19 PM (IST) Nov 15

ಕಾರವಾರ - ಆಕಷ್ಮಿಕ ಬೆಂಕಿ, ಒಂಟಿ ಜೀವನ ಸಾಗಿಸುತ್ತಿದ್ದ 70 ವರ್ಷದ ವೃದ್ಧೆ ಸಜೀವ ದಹನ!

ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹನುಮಾಪುರ ಗ್ರಾಮದಲ್ಲಿ, ಒಂಟಿಯಾಗಿ ವಾಸಿಸುತ್ತಿದ್ದ 70 ವರ್ಷದ ಫಕ್ಕೀರವ್ವ ರಾಮಣ್ಣ ಆಲೂರು ಎಂಬ ವೃದ್ಧೆ ಮನೆಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ ಸಜೀವ ದಹನಗೊಂಡಿದ್ದಾರೆ.  ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಸಾವು

Read Full Story

07:48 PM (IST) Nov 15

ಯುವಕರ ಮಧ್ಯೆ ಕುಳಿತಿದ್ದು ಮಹಿಳೆಯಲ್ಲ, ಶವ! ಮಧ್ಯರಾತ್ರಿ ಮೃತದೇಹ ಸಾಗಿಸಿದ್ದ ಆರೋಪಿಗಳು ಅರೆಸ್ಟ್

ಕೊಡಗು-ಮೈಸೂರು ಗಡಿಯಲ್ಲಿ ಮಧ್ಯರಾತ್ರಿ ಅನುಮಾನಾಸ್ಪದ ಓಡಾಡುತ್ತಿದ್ದ ಕಾರನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆದಿದ್ದಾರೆ. ಕಾರಿನೊಳಗೆ ಇಬ್ಬರು ಯುವಕರ ನಡುವೆ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು,zಮೂವರು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಇದು ಆತ್ಮ೧ಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Read Full Story

06:37 PM (IST) Nov 15

Bigg Boss - ಕಲರ್ಸ್​ ವಾಹಿನಿ ವಿರುದ್ಧ ಗಂಭೀರ ಆರೋಪ ಮಾಡಿರೋ ಜಾಹ್ನವಿಗೆ ಸುದೀಪ್​ ಏನ್​ ಹೇಳಿದ್ರು ನೋಡಿ!

ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರನ್ನು ವಾಹಿನಿಯೇ ಉಳಿಸುತ್ತಿದೆ ಎಂದು ಜಾಹ್ನವಿ ಗಂಭೀರ ಆರೋಪ ಮಾಡಿದ್ದರು. ಈ ಆರೋಪದ ಬಗ್ಗೆ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರು ಜಾಹ್ನವಿಯನ್ನು ನೇರವಾಗಿ ಪ್ರಶ್ನಿಸಿ, ಶೋ ನಿಯಮಗಳ ಬಗ್ಗೆ ಪಾಠ ಮಾಡಿದ್ದಾರೆ.  

Read Full Story

06:31 PM (IST) Nov 15

ಬಿಹಾರ ಎನ್‌ಡಿಎ ಗೆಲುವು ಪರಿಣಾಮವಿಲ್ಲ, 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ - ಮುನಿಯಪ್ಪ ಭವಿಷ್ಯ

ಬಿಹಾರ ಚುನಾವಣೆಯಲ್ಲಿ ಬಿಜೆಪಿ ಹಣ ಕೊಟ್ಟು ಮತ ಖರೀದಿಸಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿದ್ದು, 2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
Read Full Story

06:02 PM (IST) Nov 15

ಆಯುರ್ವೇದದ ಮ್ಯಾಜಿಕ್​ ಚಹ! ಬೊಜ್ಜು ಕರಗುವ ಜೊತೆ ಹತ್ತು ಹಲವು ಉಪಯೋಗ- ಮಾಡುವುದು ತುಂಬಾ ಸುಲಭ

ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿಸಲು ವ್ಯಾಯಾಮದ ಜೊತೆಗೆ ಆಯುರ್ವೇದದಲ್ಲಿ ಪರಿಹಾರವಿದೆ. ಜೀರಿಗೆ, ಕೊತ್ತಂಬರಿ ಮತ್ತು ಸೋಂಪು ಬಳಸಿ ತಯಾರಿಸಿದ ಈ ವಿಶೇಷ ಟೀ, ಜೀರ್ಣಕ್ರಿಯೆಯನ್ನು ಸುಧಾರಿಸಿ ಕೆಲವೇ ದಿನಗಳಲ್ಲಿ ಬೊಜ್ಜನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
Read Full Story

06:02 PM (IST) Nov 15

ಚಾಮರಾಜನಗರ - ಬುದ್ಧ ಪ್ರತಿಮೆ, ಅಂಬೇಡ್ಕರ್ ಭಾವಚಿತ್ರ ವಿರೂಪ ಪ್ರಕರಣದಲ್ಲಿ ನಿರಪರಾಧಿ ಬಂಧನ? ನಾಯಕ ಸಮುದಾಯ ಪ್ರತಿಭಟನೆ

ಜ್ಯೋತಿಗೌಡನಪುರದಲ್ಲಿ ಬುದ್ಧ ಪ್ರತಿಮೆ ದ್ವಂಸ ಮತ್ತು ಅಂಬೇಡ್ಕರ್ ಭಾವಚಿತ್ರ ವಿರೂಪಗೊಳಿಸಿದ ಪ್ರಕರಣದಲ್ಲಿ ಪೊಲೀಸರು ನಿರಪರಾಧಿಯನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ನಾಯಕ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿದೆ. ನೈಜ ಆರೋಪಿಗಳನ್ನು ಬಂಧಿಸಿ, ಬಂಧಿತ ಅಮಾಯಕನನ್ನು ಬಿಡುಗಡೆ ಮಾಡುವಂತೆ ಸಮುದಾಯ ಆಗ್ರಹಿಸಿದೆ.
Read Full Story

05:55 PM (IST) Nov 15

IPL 2026 - ಮಿನಿ ಹರಾಜಿಗೂ ಮುನ್ನ 2 ಕನ್ನಡಿಗರೂ ಸೇರಿ 8 ಆಟಗಾರರಿಗೆ ಗೇಟ್‌ಪಾಸ್ ಕೊಟ್ಟ ಆರ್‌ಸಿಬಿ!

ಐಪಿಎಲ್ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹತ್ವದ ಬದಲಾವಣೆ ಮಾಡಿದೆ. ತಂಡವು ಇಬ್ಬರು ಕನ್ನಡಿಗರಾದ ಮಯಾಂಕ್ ಅಗರ್‌ವಾಲ್ ಮತ್ತು ಮನೋಜ್‌ ಭಾಂಡಗೆ ಸೇರಿದಂತೆ ಒಟ್ಟು 8 ಆಟಗಾರರನ್ನು ಕೈಬಿಟ್ಟಿದೆ.  

Read Full Story

05:32 PM (IST) Nov 15

ಕೋಲ್ಕತಾ ಟೆಸ್ಟ್‌ - ರವೀಂದ್ರ ಜಡೇಜಾ ದಾಳಿಗೆ ಹರಿಣಗಳ ಪಡೆ ಕಂಗಾಲು!

ಕೋಲ್ಕತಾದಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ನಲ್ಲಿ, ಭಾರತ 30 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು. ಎರಡನೇ ದಿನದಾಟದಂತ್ಯಕ್ಕೆ, ರವೀಂದ್ರ ಜಡೇಜಾ ಅವರ 4 ವಿಕೆಟ್‌ಗಳ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು 93 ರನ್‌ಗಳಿಗೆ 7 ವಿಕೆಟ್‌ಗೆ ಕಟ್ಟಿಹಾಕಿದೆ.

Read Full Story

05:13 PM (IST) Nov 15

Bigg Boss - ಕಿಚ್ಚನ ಕೋಪ ನೆತ್ತಿಗೆ ಏರಿಸಿದ್ರಾ ರಕ್ಷಿತಾ ಶೆಟ್ಟಿ? ಸುದೀಪ್ ಸಿಟ್ಟಿಗೆ ಪುಟ್ಟಿ ನಡುಕ!

ಬಿಗ್​ಬಾಸ್​ ಮನೆಯಲ್ಲಿ ತನ್ನದೇ ತಂಡದ ವಿರುದ್ಧ ಆಡಿದ ಆರೋಪ ರಕ್ಷಿತಾ ಶೆಟ್ಟಿ ಮೇಲಿದೆ. ಈ ವಾರದ ವೀಕೆಂಡ್​ನಲ್ಲಿ ನಿರೂಪಕ ಕಿಚ್ಚ ಸುದೀಪ್ ಈ ಬಗ್ಗೆ ಪ್ರಶ್ನಿಸಿದಾಗ, ರಕ್ಷಿತಾ ಮರುಪ್ರಶ್ನೆ ಹಾಕಿ ಸುದೀಪ್​ ಅವರ ಕೋಪಕ್ಕೆ ಗುರಿಯಾಗಿದ್ದಾರೆ. 

Read Full Story

05:06 PM (IST) Nov 15

ಮಹಿಳೆಯರು ಕಾಂಗ್ರೆಸ್‌ನಿಂದ ಫ್ರೀ ತಗೊಂಡು ಬಿಜೆಪಿಗೆ ಮತ ಹಾಕಿದ್ದಾರೆ - ರಾಜಣ್ಣ ಬೇಸರ

Bihar Poll Results Disappoint KN Rajanna: ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ಉಚಿತ ಯೋಜನೆಗಳ ಲಾಭ ಪಡೆದ ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಿಹಾರದಲ್ಲಿ ಬಿಜೆಪಿ ಮಹಿಳೆಯರಿಗೆ ಹಣ ನೀಡಿ ಮನಗೆದ್ದು ಯಶಸ್ವಿಯಾಗಿದೆ ಎಂದರು.

Read Full Story

05:03 PM (IST) Nov 15

2 ತಿಂಗಳಿಂದ ಕಾಲೇಜು ಫೀಸು ಕಟ್ಟಿಲ್ಲ ಎಂದ ಕರೀಷ್ಮಾ ಕಪೂರ್ ಪುತ್ರಿಗೆ ದೆಹಲಿ ಕೋರ್ಟ್ ಹೇಳಿದ್ದೇನು?

Sanjay Kapur property dispute: ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರ ಸಾವಿನ ನಂತರ, ಅವರ ₹30,000 ಕೋಟಿ ಆಸ್ತಿಗಾಗಿ ಹಾಲಿ ಪತ್ನಿ ಪ್ರಿಯಾ ಸಚ್‌ದೇವ್ ಮತ್ತು ಮಾಜಿ ಪತ್ನಿ ಕರೀಷ್ಮಾ ಕಪೂರ್ ಮಕ್ಕಳ ನಡುವೆ ಕಾನೂನು ಹೋರಾಟ ದೆಹಲಿ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ.

Read Full Story

04:45 PM (IST) Nov 15

ನಾನು ಯಾವ ಸ್ಕೂಲ್ ಬಂದ್ ಮಾಡೋಲ್ಲ, ಯಾರೋ ತಲೆಹರಟೆ ಮಾಡ್ತಾರೆ - ಶಿಕ್ಷಣ ಸಚಿವ ಮಧು ಬಂಗಾರಪ್ಪ ಗರಂ

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೆಪಿಎಸ್‌ಸಿ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯ ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ 'ಬಾಯಿ ಮುಚ್ಚಿಕೊಳ್ಳಿ' ಎಂದು ಸೂಚಿಸಿರುವುದರಿಂದ ಆ ಬಗ್ಗೆ ಮಾತನಾಡುವುದಿಲ್ಲ ಎಂದರು.
Read Full Story

04:41 PM (IST) Nov 15

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮತ್ತೆ ಆ ಆಕೃತಿ ಕಾಣಿಸಿಕೊಳ್ತಿದ್ಯಾ? ದೆವ್ವಕ್ಕೆ ಬೆಚ್ಚಿಬೀಳ್ತಿರೋ ಸಿಬ್ಬಂದಿ?

2020ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಳಿ ಸೀರೆಯ ದೆವ್ವ ಕಾಣಿಸಿಕೊಂಡಿದೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಪೈಲಟ್ ಮತ್ತು ಸಿಬ್ಬಂದಿ ರನ್‌ವೇ ಹಾಗೂ ಕಾರ್ಗೋ ಬಳಿ ಈ ಆಕೃತಿಯನ್ನು ನೋಡಿ ಭಯಭೀತರಾಗಿದ್ದರು. ಇದೀಗ ಈ ಘಟನೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Read Full Story

04:31 PM (IST) Nov 15

ಲವ್‌ OTP ಸಿನಿಮಾ ನೋಡಲು ಬರದ ಜನ, ಕಾರ್‌ನಲ್ಲೇ ಕಣ್ಣೀರಿಟ್ಟು ಇದು ಕೊನೆಯ ಸಿನಿಮಾ ಎಂದ ಹೀರೋ ಅನೀಶ್‌ ತೇಜೇಶ್ವರ್‌!

ನಟ ಅನೀಶ್ ತೇಜೇಶ್ವರ್ ಅವರ 'ಲವ್ ಒಟಿಪಿ' ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕರೂ ಪ್ರೇಕ್ಷಕರಿಲ್ಲ. ಇದರಿಂದ ಬೇಸರಗೊಂಡ ಅವರು, 14 ವರ್ಷಗಳ ಶ್ರಮಕ್ಕೆ ಬೆಲೆ ಸಿಗದಿದ್ದರೆ ಇದೇ ನನ್ನ ಕೊನೆಯ ಸಿನಿಮಾ ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
Read Full Story

03:33 PM (IST) Nov 15

ಅಗಲಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ತಮಿಳುನಾಡಿನಲ್ಲಿ 'ತಿಮ್ಮಕ್ಕ-ರಶ್ಮಿಕಾ' ಮಧ್ಯೆ ನಡದ ಕಥೆ ವೈರಲ್!

ಮಕ್ಕಳಿಲ್ಲದ ಕಾರಣಕ್ಕೆ ಸಸಿಗಳನ್ನೇ ಮಕ್ಕಳಂತೆ ಬೆಳೆಸಿ, 385 ಆಲದ ಮರಗಳು ಸೇರಿದಂತೆ 8,000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿ ವೃಕ್ಷಮಾತೆ ಅಂತ ಕರೆಸಿಕೊಂಡವರು ತಿಮ್ಮಕ್ಕ. ದೇಶ, ವಿದೇಶದ ಅತ್ಯುತ್ತನ ಗೌರವಗಳನ್ನ ಪಡೆದ ತಿಮ್ಮಕ್ಕ ಜಗತ್ತಿಗೆ ಆದರ್ಶಪ್ರಾಯವಾದವರು. ಇದರಲ್ಲಿ ರಶ್ಮಿಕಾ ಕಥೆ ನೋಡಿ..

Read Full Story

03:02 PM (IST) Nov 15

ರಕ್ಷಿತಾ ಆಟದ ಹಿಂದಿನ ರಹಸ್ಯ! ವೀಕೆಂಡ್‌ನಲ್ಲಿ ಬಯಲಾಗುವುದೇ ಸತ್ಯ? ಸುದೀಪ್ ಕೊಟ್ಟ ಸುಳಿವು ಏನು?

ಕ್ಯಾಪ್ಟನ್ ಮಾಳು ಆಯ್ಕೆಯ ನಾಮಿನೇಷನ್ ಪ್ರಕ್ರಿಯೆಯಲ್ಲಿ ರಕ್ಷಿತಾ ಶೆಟ್ಟಿ ತೆಗೆದುಕೊಂಡ ನಿರ್ಧಾರವು ಚರ್ಚೆಗೆ ಕಾರಣವಾಗಿದೆ. ಈ ವಾರದ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಈ ವಿಷಯವನ್ನು ಪ್ರಸ್ತಾಪಿಸುವ ನಿರೀಕ್ಷೆಯಿದ್ದು, ಜಾನ್ವಿ ಮತ್ತು ಧ್ರುವಂತ್ ಅವರ ಹೇಳಿಕೆಗಳು ಕೂಡ ಕುತೂಹಲ ಮೂಡಿಸಿವೆ. 

Read Full Story

02:35 PM (IST) Nov 15

ಕೃಷಿ ಮೇಳದಲ್ಲಿ ರಾರಾಜಿಸಿದ ದೇಸಿ ಹಸುಗಳು - ಗಮನ ಸೆಳೆದ ಹಳ್ಳಿಕಾರ್‌, ಗಿರ್, ಪುಂಗನೂರ್

Bengaluru GKVK Krishi Mela: ಬಗೆ ಬಗೆಯ ಸಸ್ಯಗಳ ತೋಟ, ಕಲರ್ ಫುಲ್ ಮೀನುಗಳು, ಕೀಟಗಳನ್ನ ಕಣ್ತುಂಬಿಕೊಳ್ತಿರೋ ಜನ, ಇತ್ತ ವಿವಿಧ ತಳಿಯ ಹಸು, ಕುರಿಗಳ ಸಾಲು, ಜಿಕೆವಿಕೆ ಕ್ಯಾಂಪಸ್ ನಲ್ಲಿ ಆರಂಭವಾಗಿರೋ 2025ನೇ ಸಾಲಿನ ಕೃಷಿಮೇಳದ ಝಲಕ್ ಇದು. ಡಿಟೇಲ್ ಸ್ಟೋರಿ ಇಲ್ಲಿದೆ

Read Full Story

02:15 PM (IST) Nov 15

BBK 12 - ಹೊರಗೆ ಬನ್ನಿ ಎಲ್ಲರೂ ಸಿಗೋಣ - ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟನ ವಿದಾಯದ ಭಾಷಣ

ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ, ಮನೆಯ ಮುಖ್ಯದ್ವಾರದ ಬಳಿ ನಿಂತು ತಮಾಷೆಯಾಗಿ ವಿದಾಯದ ಮಾತುಗಳನ್ನಾಡಿದ್ದಾರೆ. ಸಹ ಸ್ಪರ್ಧಿಗಳಾದ ಕಾವ್ಯಾ, ಸ್ಪಂದನಾ ಮತ್ತು ಧನುಷ್ ಅವರೊಂದಿಗಿನ ಈ ತಮಾಷೆಯ ಕ್ಷಣದ ವಿಡಿಯೋ ವೈರಲ್ ಆಗಿದ್ದು, ಫಿನಾಲೆ ತಲುಪುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

Read Full Story

01:51 PM (IST) Nov 15

ಸಿನಿಮಾ ಪೈರಸಿಗೆ ತೆರೆ.. ಕೊನೆಗೂ ಟಾಲಿವುಡ್‌ಗೆ ಕಂಟಕವಾಗಿದ್ದ ಐಬೊಮ್ಮ ಮಾಸ್ಟರ್‌ಮೈಂಡ್‌ ರವಿ ಬಂಧನ

ಇಷ್ಟು ದಿನ ತೆಲುಗು ಚಿತ್ರರಂಗವನ್ನು ಕಾಡುತ್ತಿದ್ದ ಐಬೊಮ್ಮದ ಅಸಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಹೊಸ ಸಿನಿಮಾಗಳನ್ನು ಪೈರಸಿ ಮಾಡಿ ಇಂಡಸ್ಟ್ರಿಗೆ ತಲೆನೋವಾಗಿದ್ದ ಐಬೊಮ್ಮ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

Read Full Story

01:33 PM (IST) Nov 15

ಬೆಡ್​ರೂಮ್​ನ ಬೀರುವಿನಲ್ಲಿ ಔಷಧ, ಆಸ್ಪತ್ರೆ ಬಿಲ್​ ಇಡ್ತೀರಾ? ನೀವು ಮಾಡ್ತಿರೋ ದೊಡ್ಡ ತಪ್ಪು ನೋಡಿ!

ವಾಸ್ತುಶಾಸ್ತ್ರದ ಪ್ರಕಾರ, ಮನೆಯ ಯಜಮಾನನ ಕೋಣೆಯಾದ ನೈರುತ್ಯ ದಿಕ್ಕಿನಲ್ಲಿರುವ ಕಪಾಟು ಅಭಿವೃದ್ಧಿಯ ಸಂಕೇತವಾಗಿದೆ. ಇದರಲ್ಲಿ ಹಣ, ಬಟ್ಟೆ ಇಟ್ಟರೆ ವೃದ್ಧಿಯಾದರೆ, ಆಸ್ಪತ್ರೆಯ ಬಿಲ್‌ಗಳು ಮತ್ತು ಔಷಧಿ ಅನಾರೋಗ್ಯ ಮತ್ತು ಆರ್ಥಿಕ ಖರ್ಚುಗಳು ಹೆಚ್ಚಾಗುತ್ತವೆ ಎಂದು ವಾಸ್ತು ತಜ್ಞರು ಎಚ್ಚರಿಸಿದ್ದಾರೆ.

Read Full Story

01:27 PM (IST) Nov 15

Love OTP ಸಿನಿಮಾ ವಿಮರ್ಶೆ - ಪ್ರೇಮವನ್ನು ಅರ್ಥ ಮಾಡಿಕೊಳ್ಳಲು ಪ್ರೇರೇಪಿಸುವ ಪ್ರೇಮಕತೆ

ಅನೀಶ್‌ ಒಂದು ಸಂಕೀರ್ಣ ಸಮಸ್ಯೆಯನ್ನು ಇಲ್ಲಿ ಬಹಳ ಲವಲವಿಕೆಯಿಂದ, ಘನತೆಯಿಂದ ನಿರ್ವಹಿಸಿದ್ದಾರೆ. ಅಷ್ಟರ ಮಟ್ಟಿಗೆ ಅವರ ಪ್ರಯತ್ನ ಮೆಚ್ಚುಗೆಗೆ ಅರ್ಹ. ಅಕ್ಷಯ್ ಎಂಬ ತರುಣ ಆಕಸ್ಮಿವಾಗಿ ಪ್ರೀತಿಯಲ್ಲಿ ಬೀಳುವಲ್ಲಿಂದ ಕತೆ ಆರಂಭವಾಗುತ್ತದೆ.

Read Full Story

12:56 PM (IST) Nov 15

ಸುನೀಲ್ ಶೆಟ್ಟಿ ಅಭಿನಯದ 'ಜೈ' ಸಿನಿಮಾ ವಿಮರ್ಶೆ - ತಮಾಷೆಯ ಹಿನ್ನೆಲೆಯಲ್ಲಿ ಊರು ಉಳಿಸುವ ಕಥನ

ಸುನೀಲ್ ಶೆಟ್ಟಿಯವರನ್ನು ಸಮರ್ಥವಾಗಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಅವರು ಕಡಿಮೆ ಸಮಯ ಕಾಣಿಸಿಕೊಂಡರೂ ಕತೆಗೊಂದು ಘನತೆ ತಂದುಕೊಟ್ಟಿದ್ದಾರೆ. ನವೀನ್ ಡಿ. ಪಡೀಲ್ ಇಲ್ಲಿ ಗಂಭೀರ ಪಾತ್ರವನ್ನು ನಿರ್ವಹಿಸಿ ಕಾಡುವಂತೆ ನಟಿಸಿದ್ದಾರೆ.

Read Full Story

12:52 PM (IST) Nov 15

ಸ್ಯಾಂಡಲ್‌ವುಡ್ ನಟಿಗೆ ಲೈಂ*ಗಿಕ ಕಿರುಕುಳ - ಎವಿಆರ್ ಗ್ರೂಪ್ ಸ್ಥಾಪಕ, ಬಳ್ಳಾರಿ ಟಸ್ಕರ್ ತಂಡದ ಮಾಲೀಕ ಅರೆಸ್ಟ್

ಸ್ಯಾಂಡಲ್‌ವುಡ್ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಎವಿಆರ್ ಗ್ರೂಪ್ ಸ್ಥಾಪಕ ಮತ್ತು ಬಳ್ಳಾರಿ ಟಸ್ಕರ್ ತಂಡದ ಮಾಲೀಕ ಅರವಿಂದ್ ವೆಂಕಟೇಶ್ ರೆಡ್ಡಿಯನ್ನು ಬಂಧಿಸಲಾಗಿದೆ.

Read Full Story

12:48 PM (IST) Nov 15

Karna - ಪ್ರೀತಿನೋ- ಜವಾಬ್ದಾರಿನೊ? ತಾತನ ಮಾತಂತೆ ಇಬ್ಬರ ನಡುವೆ ಕರ್ಣ ಮಾಡಿದ ಆಯ್ಕೆ ಏನು? ಮುಂದಿನ ನಡೆ ಏನು?

ಪ್ರೀತಿಯಾದ ನಿಧಿ ಮತ್ತು ಜವಾಬ್ದಾರಿಯಾದ ನಿತ್ಯಾ ನಡುವೆ ಕರ್ಣ ಸಿಲುಕಿದ್ದಾನೆ. ತನ್ನ ತಾತನ ಸಲಹೆಯಂತೆ, ನಿತ್ಯಾಳ ಗರ್ಭದ ಸತ್ಯವನ್ನು ನಿಧಿಯ ಬಳಿ ಹೇಳಲು ನಿರ್ಧರಿಸುತ್ತಾನೆ. ಈ ಸತ್ಯ ತಿಳಿದರೆ ನಿಧಿಯ ಮುಂದಿನ ನಿರ್ಧಾರ ಏನಾಗಿರಬಹುದು ಎಂಬುದು ಕಥೆಯ ತಿರುವು.
Read Full Story

12:37 PM (IST) Nov 15

ಸಿಂಪಲ್ ಸುನಿ ಗತವೈಭವ ವಿಮರ್ಶೆ - ಪ್ರೀತಿ ಬಣ್ಣ ಹಚ್ಕೊಂಡ್ಮೇಲೆ ಲೈಫು ಹಿಂಗೇನೆ..

ತನ್ನ ಸಿಗ್ನೇಚರ್‌ ಸ್ಟೈಲಲ್ಲೇ ಸುನಿ ಕಥೆ ಹೆಣೆದಿದ್ದಾರೆ. ಮುಂದೇನಾಗಬಹುದು ಅನ್ನುವ ಹಿಂಟ್‌ ಅನ್ನು ಆರಂಭದಲ್ಲೆ ಕೊಟ್ಟು ಪ್ರೇಕ್ಷಕನನ್ನು ಸರಣಿ ಆಘಾತಗಳ ಹೊಡೆತದಿಂದ ಪಾರು ಮಾಡುತ್ತಾರೆ. ಅಲ್ಲಲ್ಲಿ ನೋವು ನಿವಾರಕ ಗುಳಿಗೆಗಳಂಥಾ ಫನ್‌ ಇದೆ.

Read Full Story

12:09 PM (IST) Nov 15

Amruthadhaare - ಗೌತಮ್​ನೇ ಅಪ್ಪ ಎಂಬ ಸತ್ಯ ಗೊತ್ತಾಗಿ ಹೋಯ್ತು - ಆಲ್ಬಂ ನೋಡಿ ಮಿಂಚುಗೆ ಶಾಕ್​!

ಅಮೃತಧಾರೆ ಧಾರಾವಾಹಿಯಲ್ಲಿ, ಆಲ್ಬಂ ಮೂಲಕ ಗೌತಮ್ ತನ್ನ ಅಪ್ಪ ಎಂಬ ಸತ್ಯವನ್ನು ಆಕಾಶ್ ಕಂಡುಕೊಂಡಿದ್ದಾನೆ. ತಂದೆ-ಮಗನ ಭಾವನಾತ್ಮಕ ಪುನರ್ಮಿಲನದಿಂದ ಭೂಮಿಕಾ ಸಂತಸಗೊಂಡರೆ, ಗೌತಮ್ ಮತ್ತು ಆಕಾಶ್ ಒಟ್ಟಿಗೆ ಇರುವುದನ್ನು ನೋಡಿದ ಮಿಂಚುಗೆ ನೋವಾಗಿದೆ, ಇದು ಕಥೆಯಲ್ಲಿ ಹೊಸ ಸಂಘರ್ಷವನ್ನು ಸೃಷ್ಟಿಸಿದೆ.
Read Full Story

12:06 PM (IST) Nov 15

ಜೂ.ಎನ್‌ಟಿಆರ್-ಆರ್‌ಜಿವಿ ಕಾಂಬೋದಲ್ಲಿ ಮಿಸ್ ಆದ ಸಿನಿಮಾ - ಅಮಿತಾಭ್ ಕಾರಣನಾ? ಬೆಚ್ಚಿ ಬೀಳಿಸುವ ಕಥೆ ಬಹಿರಂಗ

ಯಂಗ್ ಟೈಗರ್ ಎನ್‌ಟಿಆರ್ ಮತ್ತು ಸಂಚಲನಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದರೆ ಹೇಗಿರುತ್ತೆ? ಊಹೆಗೂ ಸಿಕ್ತಿಲ್ವಾ? ಇವರ ಕಾಂಬೋದಲ್ಲಿ ಒಂದು ಸಿನಿಮಾ ಬರಬೇಕಿತ್ತು.. ಆದರೆ ಅದು ಹೇಗೆ ಮಿಸ್ ಆಯ್ತು ಗೊತ್ತಾ?

Read Full Story

11:49 AM (IST) Nov 15

ಚಿನ್ನ, ಬೆಳ್ಳಿ ಖರೀದಿಸುವ ಆಸೆ ಇದ್ಯಾ? ಬೆಲೆ ಇಳಿಕೆಯಾಗಿರೋ ಇಂದು ನಿಮ್ಮದಾಗಿಸಿಕೊಳ್ಳಿ ಬಂಗಾರ

Gold And Silver Price: ಇಂದು ಚಿನ್ನದ ಬೆಲೆಯಲ್ಲಿ ಗಮನಾರ್ಹ ಕುಸಿತ ಕಂಡುಬಂದಿದ್ದು, ಖರೀದಿದಾರರಿಗೆ ಸುವರ್ಣಾವಕಾಶ ಒದಗಿಸಿದೆ. 22 ಮತ್ತು 24 ಕ್ಯಾರಟ್ ಚಿನ್ನದ ದರಗಳು ಇಳಿಕೆಯಾಗಿದ್ದು, ಜೊತೆಗೆ ಬೆಳ್ಳಿ ಬೆಲೆಯಲ್ಲೂ ಭಾರೀ ಇಳಿಕೆಯಾಗಿದೆ.

Read Full Story

11:38 AM (IST) Nov 15

ಕೈಟ್ ಬ್ರದರ್ಸ್ ಸಿನಿಮಾ ವಿಮರ್ಶೆ - ಆಕಾಶಕ್ಕೆ ಏಣಿ ಹಚ್ಚಿದ ಹುಡುಗರು, ಮರೆಯಲಾಗದ ಪುಟಾಣಿ ಜೋಡಿ

ಮೊದಲನೆಯದು ಮಕ್ಕಳ ಮಾತು. ಪ್ರಣೀಲ್‌ ಮತ್ತು ಸಮರ್ಥ ಎಂಬ ಪುಟಾಣಿಗಳಿಬ್ಬರೂ ಅಚ್ಚ ಉತ್ತರ ಕರ್ನಾಟಕ ಭಾಷೆಯಲ್ಲಿ ಸೊಗಸಾಗಿ ಮಾತನಾಡುತ್ತಾರೆ. ಅವರ ನಟನೆ, ಡೈಲಾಗ್‌ಗಳು ಒಪ್ಪಿಸಿದಂತಿರದೇ ಬಲು ಸಹಜವಾಗಿದೆ.

Read Full Story

11:17 AM (IST) Nov 15

ಕಾಂಗ್ರೆಸ್ಸಲ್ಲಿ ನಿಗೂಢ ಮೌನ.. ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆಗೆ ತಣ್ಣೀರು? ಆಗಿದ್ದೇನು?

ಬಿಹಾರ ಚುನಾವಣೆ ಫಲಿತಾಂಶ ರಾಜ್ಯ ಕಾಂಗ್ರೆಸ್‌ ಸರ್ಕಾರದ ‘ನವೆಂಬರ್ ಕ್ರಾಂತಿ’ಗೆ ಇಂಬು ನೀಡುತ್ತದೆ ಎಂಬ ನಿರೀಕ್ಷೆ ಸಂಪೂರ್ಣ ಹುಸಿಹೋಗಿದ್ದು, ತೀವ್ರ ಬೆಳವಣಿಗೆ ಬಯಸುತ್ತಿದ್ದವರ ಉತ್ಸಾಹಕ್ಕೆ ಭಂಗ ಬಂದಿದೆ.

Read Full Story

10:53 AM (IST) Nov 15

ರಾಜ್ಯ ಬಿಜೆಪಿ ಅಧ್ಯಕ್ಷಗಾದಿ ಚರ್ಚೆ ಚುರುಕು - ಆದರೆ ಬಿ.ವೈ.ವಿಜಯೇಂದ್ರ ಬದಲಾವಣೆ ಇಲ್ಲ?

ಬಿಹಾರ ವಿಧಾನಸಭೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಂದುವರೆಯಬೇಕೇ ಅಥವಾ ಬೇಡವೇ ಎಂಬ ಪರ-ವಿರೋಧದ ಚರ್ಚೆಗೆ ಮತ್ತೆ ಚಾಲನೆ ಸಿಗುವ ನಿರೀಕ್ಷೆಯಿದೆ.

Read Full Story

10:45 AM (IST) Nov 15

ಈ ಚಿತ್ರವನ್ನು ನಿಮ್ಮ ಮಕ್ಕಳಿಗೆ ತಪ್ಪದೇ ತೋರಿಸಿ.. ಪೋಷಕರಿಗೆ ಬಾಲಯ್ಯ ವಿಶೇಷ ಮನವಿ ಮಾಡಿದ್ದೇನು?

ಬಾಲಕೃಷ್ಣ ಶೀಘ್ರದಲ್ಲೇ 'ಅಖಂಡ 2 ತಾಂಡವಂ' ಚಿತ್ರದೊಂದಿಗೆ ಬರಲಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬಾಲಯ್ಯ ಪೋಷಕರಿಗೆ ಒಂದು ಮನವಿ ಮಾಡಿದ್ದಾರೆ.

Read Full Story

10:43 AM (IST) Nov 15

Bigg Boss Kannada 12 - ರಕ್ಷಿತಾ ಶೆಟ್ಟಿ ರಿಕ್ವೆಸ್ಟ್ ಕೇಳಿ ಬಿದ್ದು ಬಿದ್ದು ನಕ್ಕ ವೀಕ್ಷಕರು; ಪುಟ್ಟಿಗೆ ಇದೆಂಥಾ ಆಸೆ?

Bigg Boss Kannada viral clips ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ಸ್ಪಂದನಾ ಸೋಮಣ್ಣ ಅವರ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ತಮ್ಮ ಧಾರಾವಾಹಿಯಲ್ಲಿ ಅಳುವ ಪಾತ್ರದ ಬಗ್ಗೆ ಸ್ಪಂದನಾ ಹೇಳಿದಾಗ, 'ಒಂಚೂರು ಅತ್ತು ತೋರಿಸಿ' ಎಂದು ರಕ್ಷಿತಾ ಕೇಳಿದ್ದು ನೆಟ್ಟಿಗರ ಗಮನ ಸೆಳೆದಿದೆ. 

Read Full Story

10:34 AM (IST) Nov 15

ಜೆಡಿಎಸ್‌ನಲ್ಲಿ ಈಗ ಹೊಸ ಉತ್ಸಾಹ - ರಾಜ್ಯದಲ್ಲೂ ಬಿಹಾರ ಮಾದರಿ ಕಮಾಲ್‌

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ನಲ್ಲೂ ಉತ್ಸಾಹ ಇಮ್ಮಡಿಯಾಗಿದೆ. ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮತ್ತಷ್ಟು ಗಟ್ಟಿಮಾಡಿಕೊಂಡು,

Read Full Story

More Trending News